ವಾರ ಭವಿಷ್ಯ ದಿನಾಂಕ 08.12.2024 ರಿಂದ 14.12.2024 ರ ವರೆಗೆ
ವಿಶೇಷ ದಿನಗಳು : ದಿನಾಂಕ 14.12.2024…ದತ್ತಾತ್ರೇಯ ಜಯಂತೀ

ದತ್ತಾತ್ರೇಯ
ಮೇಷ : ಈ ವಾರ ಮಿಶ್ರ ಫಲ ದೊರಕುವ ಸಮಯ . 15 ರ ನಂತರ ಪರಿಸ್ಟಿತಿ ಸುಧಾರಣೆ ಗೊಳ್ಳಲಿದೆ. ಹೊಸ ವಸ್ತುಗಳ ಖರೀಧಿಯಲ್ಲಿ ಎಚ್ಚರವಿರಲಿ. ಕೆಲಸದ ಒತ್ತಡ ,ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳಲಿದೆ. ಹೆಚ್ಚುತ್ತಿರುವ ಖರ್ಚುಗಳಿಂದ ಆಯವ್ಯಯವನ್ನು ಒಮ್ಮೆ ಪರಿಶೀಲನೆಗೆ ಒಳಪಡಿಸಿದರೆ ಒಳ್ಳೆಯದು . ವಿದ್ಯಾರ್ಥಿಗಳಿಗೆ ಯಶಸ್ಸು ,ಅಧಿಕ ಶ್ರಮದಿಂದ ಉತ್ತಮ ಫಲಿತಾಂಶ ಬರಲಿದೆ. ಅನಾವಶ್ಯಕ ಕಲಹ ಬೇಡ. ವಾಹನ ಚಲಾಯಿಸುವಾಗ ಎಚ್ಚರವಿರಲಿ.ಆದಿತ್ಯ ಹೃದಯ ಮಂತ್ರ ಪಾರಾಯಣ ಅತೀ ಅಗತ್ಯವಿದೆ . ಗುರುವಿನ ಅನುಗ್ರಹ ಇರುವ ಕಾರಣ ಚಿಂತೆ ಮಾಡುವ ಅಗತ್ಯವಿಲ್ಲ.
ವೃಷಭ : ಶತ್ರುಗಳ ಆಕಸ್ಮಿಕ ದಾಳಿಯಿಂದ ಕಂಗಾಲಾಗುವ ಸಮಯವಾಗಿದೆ .ನರಸಿಂಹ ದೇವರ ಮಂತ್ರ ಪಾರಾಯಣದ ಅಗತ್ಯವಿದೆ. ಕುಟುಂಬದಲ್ಲಿ ಉತ್ತಮ ಸಹಕಾರ ಸಿಗಲಿದೆ. ಹೊಸ ವಾಹನ ಖರೀಧಿ ಮಾಡುವಿರಿ. ಮಕ್ಕಳಲ್ಲಿ ಮಧುರ ಬಾಂಧವ್ಯ ಇರುತ್ತದೆ. ಶುಕ್ರ ಹಿರಿಯರಲ್ಲಿ ಅನಾರೋಗ್ಯವನ್ನು ತರಲಿದ್ದಾನೆ. ವ್ಯವಹಾರದಲ್ಲಿ ಯಾರನ್ನೂ ಅತಿಯಾಗಿ ನಂಬಲು ಹೋಗಬೇಡಿರಿ. ಅಂತಿಮ ತೀರ್ಮಾನ ನಿಮ್ಮದೇ ಇರಬೇಕು. ಸೂಕ್ತವಲ್ಲದ ವಿಚಾರವನ್ನು ಚರ್ಚೆ ಮಾಡಲು ಹೋಗಬೇಡಿರಿ. ದೊಡ್ಡ ಹೂಡಿಕೆ ಮಾಡುವಾಗ ಎಚ್ಚರವಿರಲಿ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬಂದಿದೆ .ಮಕ್ಕಳ ಕಟು ಮಾತು ಮನಸ್ಸಿಗೆ ಬೇಸರ ತರಲಿದೆ .ಲಲಿತಾ ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ.
ಮಿಥುನ : ದಕ್ಷಿಣಾ ಮೂರ್ತಿ ದೇವರ ಪ್ರಾರ್ಥನೆ ನಿಮಗೆ ಅಗತ್ಯವಿದೆ. ನಿಮ್ಮ ಎಲ್ಲಾ ಅಡೆತಡೆಗಳ ನಿವಾರಣೆ ಆಗಲಿದೆ. ಗುರು ವ್ಯಯದಲ್ಲಿ ಇದ್ದಾನೆ. ಮಕ್ಕಳ ಒಳ್ಳೆಯ ಪ್ರಗತಿಯಿಂದ ಸಂತೋಷ ಹೊಂದುವಿರಿ. ಆರ್ಥಿಕ ತಡೆತಡೆ ,ವಿನಾ ಕಾರಣ ಚರ್ಚೆ, ಪ್ರಯಾಣದಲ್ಲಿ ಅನಾನುಕೂಲತೆ ಬರಲಿದೆ. ಉಶ್ಣಾಧಿಕ್ಯದಿಂದ ಅನಾರೋಗ್ಯ ಬರಲಿರುವುದರಿಂದ ಬಿಸಿಗೆ ಹೋಗುವುದನ್ನು ಕಡಿಮೆಗೊಳಿಸಿರಿ. ಭವಿಷ್ಯದ ಬಗ್ಗೆ ಹೆಚ್ಕು ಯೋಚನೆ ಮಾಡುವಿರಿ.ಶುಭಕಾರ್ಯಗಳ ಚಿಂತನೆ ನಡೆಸುವಿರಿ.ಸ್ತ್ರೀ ಮೂಲಕ ಹಣ ಸಂಗ್ರಹ ಆಗಲಿದೆ. ಅನ್ಯಾಯದಿಂದ ಹಣ ಸಂಗ್ರಹವಾದಾಗ ಅಪನಿಂದನೆಗೆ ಗುರಿ ಆಗಬೇಕಾಗಬಹುದು. ಶುಕ್ರ ಅಷ್ಟಮದಲ್ಲಿ ಇರುವುದರಿಂದ ಗರ್ಭಿಣಿಯರು ವೈದ್ಯರು ತಿಳಿಸಿರುವಂತೆ ಔಷಧೋಪಚಾರ ಮುಂದುವರಿಸಿರಿ.
ಕರ್ಕಾಟಕ : ಕುಟುಂಬದಲ್ಲಿ ಸೌಹಾರ್ಧಯುತ ವಾತಾವರಣ ಇರಲಿದೆ ಶುಭ ಸುದ್ಧಿಯನ್ನು ಕೇಳುವಿರಿ. ಕೌಟುಂಬಿಕವಾಗಿ ಔದ್ಯೋಗಿಕವಾಗಿ ಉತ್ತಮ ಸ್ಥಾನ ಮಾನ ಗಳಿಸುವಿರಿ. ದುಷ್ಟರ ಸಹವಾಸದಿಂದ ದೂರ ಇದ್ದಷ್ಟು ಕ್ಷೇಮವಲ್ಲವೇ ? ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಅಷ್ಟಮದ ಶನಿಯ ಕಾರಣದಿಂದ ಅಪಘಾತದ ಸೂಚನೆ ಇದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಸಾಲ ಮಾಡುವುದು ,ಕೊಡುವುದು ನಿಮಗೆ ಶೂಲವಾಗಿ ಪರಿಣಾಮವಾಗಲಿದೆ.ವಿಷ್ಣು ಮೂರ್ತಿ ದೇವರ ಯಥಾ ಶಕ್ತಿ ಆರಾಧನೆ ಅಗತ್ಯವಾಗಿದೆ. ನರ, ಎಲುಬು, ಗಂಟು ನೋವು ಬಾಧೆ ಕೊಡಲಿದೆ. ಬೆಂಕಿಯ ಬದಿಯಲ್ಲಿ ಕೆಲಸ ಮಾಡುವವರು ಎಚ್ಚರವಹಿಸಿರಿ.
ಸಿಂಹ : ವ್ಯಯದಲ್ಲಿ ಕುಜ ,ಸಪ್ತಮದಲ್ಲಿ ಶನಿ, ಇರುವುದರಿಂದ ಕೌಟುಂಬಿಕವಾಗಿ ಹೊಸ ಮನೆಗಾಗಿ ಕಿರಿಕಿರಿ ಇರುತ್ತದೆ. ಎಲ್ಲದಕ್ಕೂ ಸಮಯ ಕೂಡಿ ಬರಬೇಕು. ಮನೆಗಾಗಿ ಹೊಸ ವಸ್ತುಗಳು,ಬೆಲೆಬಾಳುವ ವಸ್ತುಗಳು ಬರಲಿವೆ. ಹೊಟ್ಟೆ ಹಾಗೂ ಜೀರ್ಣ ಕ್ರಿಯೆಗೆ ಸಂಬಂಧ ಪಟ್ಟಂತೆ ಸಮಸ್ಯೆ ಕಂಡು ಬರಲಿದೆ. ಸಂಗಾತಿಯ ಸಹಕಾರ ಮಾನಸಿಕ ತೃಪ್ತಿ ಸಿಗಲಿದೆ. ಅಶುಭ ಸುದ್ಧಿ ಬರುವ ಸಾಧ್ಯತೆ ಇರುವುದರಿಂದ ಕುಲದೇವರ ಪೂಜೆಯನ್ನು ತಪ್ಪದೆ ಮಾಡಿಕೊಂಡು ಬನ್ನಿರಿ. ನಿಮ್ಮ ವೃತ್ತಿರಂಗದಲ್ಲಿ ಗಣ್ಯರೊಬ್ಬರ ಸಲಹೆ, ಸಹಕಾರ ಸಿಗಲಿದೆ. ರಾಹು ಅಷ್ಟಮದಲ್ಲಿ ಇರುವುದರಿಂದ ಒಂದಲ್ಲ ಒಂದು ಮಂಡೆಬಿಸಿ ಇರುತ್ತದೆ. ನಾಗದೇವರ ಆರಾಧನೆ ಅಗತ್ಯವಿದೆ. ಮೈಗ್ರೈನ್ ಸಮಸ್ಯೆ ಬರುವ ಸಾಧ್ಯತೆ ಇದೆ .
ಕನ್ಯಾ : ಗುರು ಭಾಗ್ಯದಲ್ಲಿ ಇರುವ ಶುಭ ಕಾಲ. ಶುಭ ಸಮಾರಂಭಗಳು ನಡೆಯುವ ಕಾಲ ನೀವು ಮಾಡುವ ಯಾವುದೇ ವ್ಯವಹಾರದಲ್ಲಿ ಉದ್ಯೋಗದಲ್ಲಿ ಯಶಸ್ಸನ್ನು ಕಾಣುವಿರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂದರ್ಭ ನಿಮಗೆ ಒದಗಿ ಬರಲಿದೆ. ದಾಂಪತ್ಯ ಜೀವನದಲ್ಲಿ ರಾಹು ಕಿರಿಕಿರಿ ತಂದರೂ ಗುರುವಿನ ಅನುಗ್ರಹದಿಂದ ಎಲ್ಲವೂ ಪರಿಹಾರವಾಗಲಿದೆ. ಶತ್ರುಗಳಿಂದಲೂ ಗೌರವವನ್ನು ಪಡೆಯುವ ಕಾಲವಾಗಿದೆ. ದತ್ತಾತ್ರೇಯ ಆರಾಧನೆ ನಿಮಗೆ ಅಗತ್ಯವಾಗಿದೆ. ನೀವು ಮಾಡಿಕೊಳ್ಳುವ ವ್ಯಾಪಾರ ಒಪ್ಪಂದಗಳು ನಿಮ್ಮ ಪ್ರತಿಷ್ಟೆಯನ್ನು ಹೆಚ್ಚಿಸಲಿವೆ. ಹೆಣ್ಣು ಮಗುವಿನ ಜನನ ಸಾಕ್ಷಾತ್ ಲಕ್ಷ್ಮಿಯ ಆಗಮನದಂತೆ ಸಂತೋಷವಾಗಲಿದೆ.
ತುಲಾ : ಗುರುವಿನ ಅನುಗ್ರಹದ ಕೊರತೆ ನಿಮ್ಮಲ್ಲಿ ಅನುಭವಕ್ಕೆ ಬರಲಿದೆ. ಮೇ 14, 2025 ರ ವರೆಗೆ ಕಾಯಲೇ ಬೇಕಾಗಿದೆ. ಈವಾರದ ಕೊನೆಯಲ್ಲಿ ರವಿ ಧನು ರಾಶಿಗೆ ಹೋದಾಗ ಉತ್ತಮ ಫಲವನ್ನು ನೀಡಲಿದ್ದಾನೆ. ನೀವು ಉದ್ಯೋಗ ಮಾಡುವಲ್ಲಿ ಎಚ್ಚರವಾಗಿರಿ. ಸಂಗಾತಿಯ ಸಿಟ್ಟು ನಿಮಗೆ ಬೇಸರವನ್ನು ತರಲಿದೆ. ಪಾಲುದಾರಣ ಮೇಲೆ ಒಂದು ಸೂಕ್ಷ್ಮ ದೃಷ್ಟಿ ಇರಲಿ. ಸಹೋದರನಲ್ಲಿ ಮುನಿಸು ಬರುವ ಸಾಧ್ಯತೆ. ಹೆಂಗಸರ ಮಾತನ್ನು ಕೇಳಿ ಕಲಹಕ್ಕೆ ಹೋಗುವ ಮೊದಲು ಕಣ್ಣಾರೆ ನೋಡಿ ವಿಮರ್ಶಿಸಿ ಮುನ್ನೆಡೆಯಿರಿ. ಕುಜ ನೀಚನಾಗಿರುವುದನ್ನು ಗಮನಿಸಿ. ದುರ್ಗೆಯ ಆರಾಧನೆ ಅತೀ ಅಗತ್ಯವಾಗಿದೆ. ನೀವು ಆರೋಗ್ಯದ ಕಡೆಗೆ ,ವಾಹನ ಚಲಾವಣೆಯ ಸಂದರ್ಭ, ಆರ್ಥಿಕ ಹೊಂದಾಣಿಕೆಯ ಬಗ್ಗೆ ಎಚ್ಚರಿಕೆ ಇರಲಿ.
ವೃಶ್ಚಿಕ : ಗುರುವಿನ ತನ್ನ ವೈರಿಯಾದ ಶುಕ್ರನ ಮನೆಯಲ್ಲಿ ಇದ್ದಾನೆ. ಸಂಖ್ಯಾ ದೃಷ್ಟಿಯಿಂದ ಶುಭವೆಂದು ಹೇಳಲಾಗಿದೆ.ಕರ್ಮಾಧಿಪತಿ ರವಿ ಜನ್ಮ ರಾಶಿಯಲ್ಲಿ ಮಿತ್ರ ಬುಧನೊಂದಿಗೆ ಇರುವುದರಿಂದ ಉದ್ಯೋಗದಲ್ಲಿ ಬಡ್ತಿ ,ಉದ್ಯೋಗ ವ್ಯವಹಾರದಲ್ಲಿ ಅಧಿಕ ಲಾಭದ ಜೊತೆಗೆ ರಾಜಕೀಯ ವ್ಯಕ್ತಿಗಳಿಗೆ ಶುಭ ಸಮಯವಾಗಿದೆ, ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಹಿಸುವಂತೆ ಕುಜ ತಿಳಿಸುತ್ತಿದ್ದಾನೆ. ಶನಿ ಮನಸ್ಸಿಗೆ ,ದೇಹಕ್ಕೆ ನೋವನ್ನು ನೀಡುತ್ತಾ ಬರುತ್ತಾನೆ. ವಿಷ್ಣು ಸಹಸ್ರನಾಮ ದಿನಕ್ಕೆಒಮ್ಮೆ ಹೇಳುವುದು ಕಡ್ಡಾಯ. ಅದೊಂದು ನಮಗೆ ನಾವೇ ಹಾಕಿಕೊಳ್ಳುವ ರಕ್ಷಾ ಕವಚವಾಗಿದೆ. ಆಹಾರ ಸೇವನಾ ಕ್ರಮದಲ್ಲಿ ಎಚ್ಚರಿಕೆ ಇರಲಿ. ಹೊಸ ಯೋಜನೆ ಕೈಗೆತ್ತಿಕೊಳ್ಳುವ ಕಾಲ ಇದಲ್ಲ. ಪಂಚಮದ ರಾಹುವಿಗೆ ನಾಗ ದೇವರನ್ನು ಯಥಾ ಶಕ್ತಿ ಪ್ರಾರ್ಥಿಸುತ್ತಾ ಬನ್ನಿರಿ.
ಧನು : ಜನ್ಮ ರಾಶಿಯ ಅಧಿಪತಿ ಗುರು ತನ್ನ ವೈರಿ ಶುಕ್ರನ ಮನೆಯಲ್ಲಿ. ಭಾಗ್ಯಾಧಿಪತಿ ರವಿ, ಬುಧನ ಜೊತೆಗೆ ವ್ಯಯದಲ್ಲಿ. 12-5-8 ಕುಜನಿದ್ದಾನೆ.ಸುಖ ಸ್ಥಾನದಲ್ಲಿ ರಾಹು ಇದ್ದಾನೆ. ಯಾವ ಗ್ರಹರೂ ಅನುಕೂಲವಾಗಿಲ್ಲದ ಸಮಯದಲ್ಲಿ ಲಕ್ಷ್ಮೀ ನರಸಿಂಹ ದೇವರ ಜಪ ಮಾಡುತ್ತಾ ಬರಬೇಕು. ಆರೋಗ್ಯದ ಬಗ್ಗೆ ಎಚ್ಚರವಿರುವುದು ,ಮಾತ್ರವಲ್ಲದೆ ಮೃತ್ಯುಂಜಯ ಜಪ ನಿತ್ಯವೂ ಕಡ್ಡಾಯವಾಗಿ 108 ಬಾರಿ ಹೇಳಬೇಕು. ನ್ಯಾಯವಲ್ಲದ ದಾರಿಯಲ್ಲಿ ನಡೆಯಬೇಡಿರಿ. ವ್ಯರ್ಥ ಖರ್ಚು ಬರುವ ಸಮಯವಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ .ಇರುವ ಉದ್ಯೋಗದಿಂದ ಬದಲಾಯಿಸುವ, ಬಿಟ್ಟು ಬರುವ ಸಾಧ್ಯತೆ ಇದೆ .ವಿದೇಶ ಯಾತ್ರೆಯ ಸಾಧ್ಯತೆ ಇರುತ್ತದೆ .
ಮಕರ : ಸಾಡೇ ಸಾತ್ ಶನಿಯ ಪ್ರಭಾವ ಇರುವುದರಿಂದ ಯಾರನ್ನೂ ನಂಬ ಬೇಡಿರಿ. ಶುಕ್ರ ಜನ್ಮ ರಾಶಿಯಲ್ಲಿ,ಕುಜ ಸಪ್ತಮದಲ್ಲಿ ಇರುವುದು ಸುಖ ದಾಂಪತ್ಯಕ್ಕೆ ಒಳ್ಳೆಯ ಸೂಚನೆಯಲ್ಲ. ಪ್ರೀತಿ-ಪ್ರೇಮದ ಸುಳಿಯಲ್ಲಿ ಮುಳುಗಿದವರಿಗೆ ಗಂಡಾತರದ ಸ್ಥಿತಿ. ನೀಚ ವ್ಯಕ್ತಿಗಳ ಸಹವಾಸ ಮಾಡಲು ಹೋಗಬೇಡಿರಿ. ಉದ್ಯೋಗದಲ್ಲಿ ಬದಲಾವಣೆಯ ಸುಳಿವು ಇದೆ . ನೀವಾಡುವ ಪ್ರತಿಯೊಂದು ಮಾತು ಬೆಲೆ ಬಾಳುವಂತಿರಲಿ. ದೈವಾನುಗ್ರಹವಿದೆ. ಲಕ್ಷ್ಮೀ ನಾರಾಯಣ ದೇವರ ಪ್ರಾರ್ಥನೆ ಅಗತ್ಯವಿದೆ. ನೀವು ಮಾಡುವ ಯಾವುದೇ ವ್ಯವಹಾರದಲ್ಲಿ ಹಲವು ತಂತ್ರಗಳನ್ನು ಅಳವಡಿಸಿಕೊಳ್ಳುವಿರಿ. ಕಾರ್ಯ ಕ್ಷೇತ್ರ ವಿಸ್ತರಣೆಯ ಯೋಜನೆ ನಿಮ್ಮಲ್ಲಿ ಇರಲಿದೆ.
ಕುಂಭ : ಸಾಡೇ ಸಾತ್ ಶನಿ ಜನ್ಮ ರಾಶಿಯಲ್ಲಿ ಇದ್ದಾನೆ. ಲಾಲ್ ಕಿತಾಬ್ ಪರಿಹಾರವಾಗಿ ಸುಳ್ಳು ಮಾತನಾಡಬೇಡಿರಿ,ಬೀದಿ ನಾಯಿಗಳಿಗೆ ಆಹಾರ ಕೊಡಿರಿ. ತಮ್ತ್ರೋಕ್ತ ಪರಿಹಾರವಾಗಿ ಪ್ರತೀ ಶನಿವಾರ ,ಬುಧವಾರ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ವೈದಿಕ ಪರಿಹಾರವಾಗಿ ಶ್ರೀ ಸತ್ಯನಾರಾಯಣ ಪೂಜೆ ಮಾಡಿಸಿರಿ. ಸಹೋದರನ ಜೊತೆಗೆ ಭೂಮಿಯ ವಿಷಯವಾಗಿ ಕಲಹವಾಗುವ ಸೂಚನೆ ಇರುತ್ತದೆ. ನೀವು ಮುಖ್ಯವಾಗಿ “ಅಹಂ “ನಿಂದ ಹೊರಗೆ ಬರಬೇಕು. ನಮ್ಮ ಅಂತ್ಯ ಯಾವಾಗ ,ಹೇಗೆ ,ಎಲ್ಲಿ ಎಂದು ಯಾರಿಗೂ ಗೊತ್ತಿಲ್ಲ. ಪರೋಪಕಾರಾಯ ಪುಣ್ಯಾಯ ,ಪಾಪಾಯ ಪರಪೀಡನಮ್ “ಸಾದ್ಯವಿದ್ದಷ್ಟೂ ಪರೋಪಕಾರ ಮಾಡಿರಿ ಅದುವೇ ಪುಣ್ಯ.ಇನ್ನೊಬ್ಬರಿಗೆ ತೊಂದರೆ ಕೊಡುವುದೇ ಪಾಪ .ಕೋಟಿ ಕೋಟಿ ಗ್ರಂಥಗಳಲ್ಲಿ ಇದನ್ನೇ ಹೇಳಿದ್ದಾರೆ.
ಮೀನ : ಗುರುವಿನ ಅನುಗ್ರಹದ ವ್ಯತ್ಯಾಸದಿಂದ ಆಯವ್ಯಯದಲ್ಲಿ ಏರುಪೇರು ಇರುತ್ತದೆ. ಅಧಿಕ ಶ್ರಮ.ಕಡಿಮೆ ಫಲ.ಯಾವುದೇ ಪ್ರಮುಖ ದಾಖಲೆಗಳಿಗೆ ಸಹಿ ಮಾಡದಿರುವುದೇ ಒಳ್ಳೆಯದು .ಯಾಕೆಂದರೆ ನೀವು ಪ್ರಸ್ತುತ ಸಾಡೇಸಾತ್ ಶನಿಯ ಪ್ರಭಾವಲಯದಲ್ಲಿ ಸುತ್ತುತ್ತಾ ಇದ್ದೀರಿ. ಸಂಗಾತಿಯೊಂದಿಗೆ ವಾದ-ವಿವಾದ ಬೇಡ ಎಂದು ರಾಹು-ಕೇತು ತಿಳಿಸುತ್ತಾ ಇದ್ದಾರೆ. ಮಾತಿನಲ್ಲಿ ಹಿಡಿತವಿರಲಿ. ಹೊಸ ಆದಾಯದ ಮೂಲವನ್ನು ಕಂಡುಕೊಳ್ಳುವಿರಿ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ಒದಗಿ ಬರಲಿದೆ. ಕುಟುಂಬದ ಕಡೆಗೆ ನಿಮ್ಮ ವಿಶೇಷ ಕಾಳಜಿ ಇರಲಿ. ಶಿವನಿಗೆ ಬಿಲ್ವ ಪತ್ರೆಯನ್ನುಅರ್ಪಿಸುತ್ತಾ ಬನ್ನಿರಿ. ತುಂಬೆ ಹೂವನ್ನು ಸೇರಿಸಿರಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಶುಭ ಮುಹೂರ್ತವನ್ನು ತಿಳಿಸಲಾಗುವುದು. ವಿವಾಹ ಹೊಂದಾಣಿಕೆ/ವಾಸ್ತು ಸಲಹೆ ತಿಳಿಸಲಾಗುವುದು.


























