ವಾರ ಭವಿಷ್ಯ ದಿನಾಂಕ 08.10.2024 ರಿಂದ 14..10.2024 ರ ವರೆಗೆ
ವಿಶೇಷ ದಿನಗಳು :10.10.2024…ತುಲಾ ರಾಶಿಗೆ ಬುಧ ನ ಪ್ರವೇಶ.
11.10.2024…..ಮಹಾಷ್ಟಮಿ
12.10.2024….ವೃಶ್ಚಿಕ ರಾಶಿಗೆ ಶುಕ್ರನ ಪ್ರವೇಶ .
ಮಹಾ ನವಮಿ ,ವಿಜಯ ದಶಮಿ
ಮೇಷ :ನಿಮ್ಮ ರಾಶ್ಯಾಧಿಪತಿ ಕುಜ ಅಷ್ಟಮಾಧಿಪತಿಯಾಗಿ ತೃತೀಯಾದಲ್ಲಿ ಇದ್ದಾನೆ . ನಿಮ್ಮ ವರ್ತನೆ ,ಆಡುವ ಮಾತು ನಯವಾಗಿರಲಿ .ಒಂದು ಮಾತು ಆಡಿದರಾಯ್ತು ,ಒಂದು ಮುತ್ತು ಒಡೆದರೆ ಹೋಯ್ತು ಎಂಬುವುದು ಗಾದೆಯ ಮಾತು.ಆರೋಗ್ಯದ ಕಡೆಗೆ ಗಮನವಿರಲಿ .ವೃತ್ತಿ ರಂಗದಲ್ಲಿ ಮೇಲಧಿಕಾರಿಗಳೊಂದಿಗೆ ಹೊಂದಿಕೊಂಡು ಕೊಂಡು ಹೋಗುವುದು ಅಗತ್ಯವಿದೆ .ಸಂಗಾತಿಯೊಂದಿಗೆ ಸಹಾನುಭೂತಿಯಿಂದ ಮುಂದುವರಿಯಿರಿ .ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ .ಧಾರ್ಮಿಕ ವಿಷಯದಲ್ಲಿ ಆಸಕ್ತಿ ಇರಲಿ .ದುರ್ಗಾ ಪಾರಾಯಣ ಅಗತ್ಯವಾಗಿ ಮಾಡುತ್ತಾ ಬನ್ನಿರಿ .
ವೃಷಭ :ನಿಮ್ಮ ರಾಶ್ಯಾಧಿಪತಿ ಶುಕ್ರ 6 ನೇ ಮನೆಯಲ್ಲಿ ಇದ್ದಾನೆ .ಮನೆಯಲ್ಲಿ ಸ್ತ್ರೀಯರೊಂದಿಗೆ ಬರುವ ಮನಸ್ತಾಪ ನೆಮ್ಮದಿಯನ್ನು ಕೆಡಿಸಬಹುದು .ಆರ್ಥಿಕ ನಷ್ಟಗಳನ್ನು ಕುಜನು ತರಲಿದ್ದಾನೆ.ನಿಮ್ಮ ಕನಸಿನ ಮನೆಯ ಕನಸು ನನಸಾಗಲಿದೆ .ಸಹೋದ್ಯೋಗಿಗಳ ಸಹಕಾರ ಸಿಗಲಿದೆ .ರಾಹು ಲಾಭ ಕ್ಷೇತ್ರದಲ್ಲಿ ಇದ್ದು ಕೊಂಡು ಉತ್ತಮ ಆದಾಯವನ್ನು ಕೊಡಲಿದ್ದಾನೆ .ಮಕ್ಕಳ ವಿಷಯದಲ್ಲಿ ಭಾವುಕರಾಗುವ ಸಂದರ್ಭಗಳು ಇರುತ್ತವೆ .ಕಬ್ಬಿಣ ಕ್ಕೆ ಸಂಬಂಧಿಸಿದ ವ್ಯಾಪಾರ ಕೈಹಿಡಿಯಲಿದೆ .ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ .ಬೇರೆಯವರಲ್ಲಿ ವ್ಯರ್ಥ ವಾದ ಮಾಡುವ ಸನ್ನಿವೇಶಗಳು ಅನಿರೀಕ್ಷಿತವಾಗಿ ಬರಲಿದೆ .ನಿಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಿರಿ .
ಮಿಥುನ :ನಿಮ್ಮ ರಾಶ್ಯಾಧಿಪತಿ ಬುಧ ತುಲಾ ರಾಶಿಗೆ ಬರುತ್ತಿದ್ದಾನೆ ಶುಕ್ರನ ಜೊತೆಯಾಗಿ ಬಂದು ಲಕ್ಷ್ಮೀ ನಾರಾಯಣ ಯೋಗವನ್ನು ತರಲಿದ್ದಾನೆ .ಹೊಸ ಮನೆ ,ವಾಹನ ,ಭೂಮಿ ಖರೀಧಿಯ ಯೋಗವೂ ಕೂಡಿ ಬರಲಿದೆ .ಕೆಲವೊಮ್ಮೆ ವ್ಯರ್ಥ ಅಪವಾದಗಳನ್ನು ಕೇಳುವ ಸಾಧ್ಯತೆ ಇರುತ್ತದೆ . ಕುಜ ಜನ್ಮ ರಾಶಿಯಲ್ಲಿ ಇರುವಾಗ ಸಿಟ್ಟು ,ಆರೋಗ್ಯದ ಸಮಸ್ಯೆ ಇರುತ್ತದೆ .ಲಕ್ಷ್ಮೀ ನರಸಿಂಹನ ಮಂತ್ರ ಪಾರಾಯಣ ಮಾಡಿರಿ .ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ ಮಾಡುವ ಅನುಕೂಲತೆ ಒದಗಿ ಬರಲಿದೆ . ಇಷ್ಟ ಪಟ್ಟವರು ನಿಮ್ಮ ವರ್ತನೆಯಿಂದ ದೂರವಾಗುವ ಸಾಧ್ಯತೆ ಇದೆ .ವಿಚಲಿತರಾಗದಿರಿ . ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಾಗಿರಿ .ಉದ್ಯೋಗ ಪ್ರಾಪ್ತಿ ಯೋಗವಿದೆ .
ಕರ್ಕಾಟಕ : ದೈವಾನುಗ್ರಹ ಉತ್ತಮವಾಗಿದೆ .ಆದರೆ ಶನಿ ಅಷ್ಟಮದಲ್ಲಿ ಇರುವುದರಿಂದ “ಏನೋ ಮಾಡಲು ಹೋಗಿ ಏನೋ ಆಯ್ತು “ ಎಂಬಂತೆ ನಿಮ್ಮ ಸಿಟ್ಟಿನ ಅವಾಂತರದಲ್ಲಿ ನಷ್ಟಗಳ ಸುಳಿಗಾಳಿಗೆ ಬೀಳುವ ಸಾಧ್ಯತೆ ಇದೆ . ಹಿತ ಶತ್ರುಗಳೂ ನಿಮ್ಮ ಸುತ್ತ ಮುತ್ತಲು ಸುತ್ತುತ್ತಿದ್ದಾರೆ .ತೃತೀಯಾದಲ್ಲಿ ರವಿ ಕೇತು ಇರುವುದರಿಂದ ಸಹೋದರ ವರ್ಗದವರಲ್ಲಿ ಬೇಸರ ಬರುವ ಸಾಧ್ಯತೆ ಇದೆ .ಸಾಲ ಕೊಡಲು ಹೋಗಿ ಒದ್ದಾಡುವ ಸಾಧ್ಯತೆ ಇದೆ . ಸಂಗಾತಿಯ ಶರೀರ ನೋವಿಗೆ ತಜ್ಣ ವೈದ್ಯರನ್ನು ಕಾಣಬೇಕಾಗಿದೆ .ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .ಮೇಲಧಿಕಾರಿಗಳೊಂದಿಗೆ ಹೊಂದಿಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿರಿ .
ಸಿಂಹ : ಕುಜ ಲಾಭ ಕ್ಷೇತ್ರದಲ್ಲಿ ಇದ್ದಾನೆ .ಧನ ಲಾಭ ,ಭೂಮಿ ಲಾಭ ಬರಲಿದೆ .ಮಾತು ಹಿತ,ಮಿತವಾಗಿರಲಿ.ಸಪ್ತಮದಲ್ಲಿ ಶನಿ ಇರುವುದರಿಂದ ಪರ ಸ್ತ್ರೀ /ಪುರುಷರಲ್ಲಿ ಅನಗತ್ಯ ವಾದ ವಿವಾದ ಬೇಡ .ಮುಂದಿನ ಜೀವನದಲ್ಲಿ ಅದುವೇ ಕಷ್ಟದ ಗಂಟಾಗಿ ಬರಬಹುದು .ನಿಮ್ಮ ತಲೆ ನೋವು ಹಿಸೆಯಾಗಲಿದೆ .ಅಹಂಕಾರವೇ ಸೋಲಿಗೆ ಕಾರಣವಾದೀತು .ಪ್ರೀತಿ ಮತ್ತು ನಗು ಸದಾ ನಿಮ್ಮಲ್ಲಿ ಇರುವಂತೆ ನೋಡಿಕೊಳ್ಳಿರಿ . ಅಧಿಕ ಓಡಾಟ …ಆಯಾಸ …ಅನಾರೋಗ್ಯ ಆಗದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ .ಆದಿತ್ಯ ಹೃದಯ ಮಂತ್ರ ಪ್ರತಿ ನಿತ್ಯ ಹೇಳುವುದು ಅಗತ್ಯವಾಗಿದೆ .
ಕನ್ಯಾ : ಭಾಗ್ಯದಲ್ಲಿ ಗುರು ಇರುವುದರಿಂದ ಹೆಚ್ಚಿನ ಸಮಸ್ಯೆಗಳು ನಿಮ್ಮಿಂದ ದೂರವಾಗಲಿದೆ .ನಿಮ್ಮ ಜನ್ಮ ರಾಶಿಯಲ್ಲಿ ರವಿ ಮತ್ತು ಕೇತು ಇದ್ದು ಸಪ್ತಮದಲ್ಲಿ ರಾಹು ಇರುವುದರಿಂದ ಹೆಂಡತಿ ಮಕ್ಕಳ ಸಂತೋಷ ನಿಮ್ಮನ್ನೇ ಅವಲಂಬಿಸಿದೆ .ಉದ್ಯೋಗದಲ್ಲಿ ಉತ್ತಮ ಬದಲಾವಣೆಯನ್ನು ನಿರೀಕ್ಷಿಸಬಹುದು .ಧಾರ್ಮಿಕ ಕ್ಷೇತ್ರದಲ್ಲಿ ನಿಮ್ಮ ಭಕ್ತಿ ಕಡಿಮೆ ಆದಂತೆ ನಿಮಗೆ ಅನಿಸಬಹುದು .ಬರುವ ಆದಾಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ.ಖರ್ಚು ವೆಚ್ಚಗಳನ್ನು ರವಿ ತರಲಿದ್ದಾನೆ ,ಯಾರಲ್ಲಿಯೂ ಹೇಳಿಕೊಳ್ಳಲಾಗದ ಭಯ ನಿಮ್ಮಲ್ಲಿರುತ್ತದೆ .ಯಾರೋ ಮಾಡಿದ ತಪ್ಪಿಗೆ ನೀವು ಹೊಣೆಗಾರರಾಗಬೇಕಾಗುತ್ತದೆ .
ತುಲಾ : ದೈವಾನುಗ್ರಹವಿಲ್ಲ.ಜನ್ಮ ರಾಶಿಯಲ್ಲಿ ಶುಕ್ರನಿದ್ದಾನೆ .ಬುಧ ಕೂಡಾ ನಿಮ್ಮ ರಾಶಿಗೆ ಬರುತ್ತಿದ್ದಾನೆ ಲಕ್ಷ್ಮೀ ನಾರಾಯಣ ಯೋಗವಿದೆ .ಸಂಗಾತಿಯೊಂದಿಗೆ , ಮಿತ್ರರ ಜೊತೆಗೆ ಮಾತು ಮತ್ತು ಕೃತಿಯಲ್ಲಿ ಕಾಯಾ ವಾಚಾ ಮನಸಾ ಒಂದೇ ರೀತಿಯಾಗಿ ಇರಲಿ .ಹಳೆಯ ರೋಗದ ಲಕ್ಷಣ ಮತ್ತೆ ಗೋಚರಕ್ಕೆ ಬರಲಿದೆ .ಪರಸ್ತ್ರೀಯರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿರಿ .ಚಂಡಿಕಾ ಹೋಮದಲ್ಲಿ ಭಾಗವಹಿಸುವ ಅವಕಾಶವಿದ್ದಲ್ಲಿ ತಪ್ಪಿಸಿಕೊಳ್ಳದಿರಿ .ಹೊಸ ವ್ಯವಹಾರದಲ್ಲಿ ಹಣ ಹೂಡಿಕೆ ಮೇ,2025 ,16 ರ ವರೆಗೆ ಬೇಡ .ಪ್ರಯಾಣ ಮಾಡುವಾಗ ಆಹಾರದ ವಿಷಯದಲ್ಲಿ ಎಚ್ಚರವಿರಲಿ .
ವೃಶ್ಚಿಕ : ಗುರು ವಕ್ರಿಯಾಗಿದ್ದಾನೆ .ದೈವಾನುಗ್ರಹದ ಕೊರತೆಯಲ್ಲಿದ್ದೀರಿ .ಕುಜ ಅಷ್ಟಮದಲ್ಲಿ ಇದ್ದಾನೆ .ಅತಿಯಾದ ಆತ್ಮ ವಿಶ್ವಾಸ ನಿಮಗೆ ತೊಂದರೆಯಾಗಲಿದೆ .ಮನಸ್ಸಿಗೆ ಸದಾ ಬೇಸರವಿರುತ್ತದೆ .ಕಂಟಕದ ಶನಿ ಒಂದು ಕಡೆಯಲ್ಲಿ ತನ್ನ ಇರುವಿಕೆಯನ್ನು ತೋರಿಸುತ್ತಿರುತ್ತಾನೆ .ದೇವೀ ಸಪ್ತಶತೀ ಪಾರಾಯಣ 12 ಬಾರಿ ತಿಳಿದವರಲ್ಲಿ ಮಾಡಿಸಿದರೆ ಒಳ್ಳೆಯದು. ದಿನಾಂಕ 20 ರ ವರೆಗೆ ಎಚ್ಚರವಿರಬೇಕು .ಮಕ್ಕಳ ವಿಷಯದಲ್ಲಿ ಏನೋ ಬೇಸರವಿರುತ್ತದೆ .ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಯೋಗವಿದೆ .ಬರುತ್ತಿರುವ ಆದಾಯಕ್ಕೆ ಕೊರತೆ ಇರುವುದಿಲ್ಲ. ಪಿತ್ತ ಮತ್ತು ರಕ್ತ ಸಂಬಂಧಿ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ . ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ .
ಧನು : ದಿನಾಕ 20 ರ ವರೆಗೆ ಮತ್ತೆ ಒಂದೂವರೆ ತಿಂಗಳು ಬಹಳ ಎಚ್ಚರವಾಗಿರಬೇಕಾದ ಸಮಯವಾಗಿದೆ .ಕಾರಣವೇನೆಂದರೆ ಕುಜ ಈಗ ಸಪ್ತಮದಲ್ಲಿ ನಂತರ ಅಷ್ಟಮಕ್ಕೆ ಹೋಗುವುದು ,ಗುರು 6 ರಲ್ಲಿ ಇರುವುದು .ಈಗ ವಕ್ರಿಯಾಗಿ ಇರುವುದರಿಂದ ಪರವಾಗಿಲ್ಲ. ಲಲಿತಾ ಸಹಸ್ರನಾಮ ಪಾರಾಯಣ ನಿತ್ಯವೂ ಮಾಡಿಕೊಂಡು ಮುಂದುವರಿಯಿರಿ .ಇನ್ನೊಬ್ಬರನ್ನು ತಿದ್ದಲು ಹೋಗುವುದಕ್ಕಿಂತ ತನ್ನನ್ನು ತಾನು ತಿದ್ದಿಕೊಳ್ಳುವುದು ಒಳ್ಳೆಯದು . ನೀವು ಮಾಡುವ ಯಾವುದೇ ಕೆಲಸ ಕಾನೂನಿಗೆ ವಿರುದ್ಧವಾಗಿರದೆ ನ್ಯಾಯ ಸಮ್ಮತವಾಗಿರಲಿ .ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರವಿರಲಿ .
ಮಕರ : ಸಾಡೇಸಾತ್ ಶನಿಯ ಕಾಟವಿರುತ್ತದೆ .ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಾಗಿದೆ . ದೈವಾನುಗ್ರಹ ಉತ್ತಮವಾಗಿದೆ . ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ ಕುಜ ಭೂಮಿಯ ವಿಷಯದಲ್ಲಿ ಕಲಹವನ್ನು ತರಿಸುವ ಸಾಧ್ಯತೆ ಇದೆ ,ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಹಣವನ್ನು ತೊಡಗಿಸುವಾಗ ಎಚ್ಚರವಿರಲಿ .ಷೇರ್ ಉತ್ತಮ ಲಾಭ ತರಲಿದೆ . ಅದರ ಅನುಭವ ನಿಮಗಿದ್ದರೆ ಮಾತ್ರಾ ಮುಂದುವರಿಯಿರಿ . ದುರ್ಗೆಯ ಜಪ ಮಾಡಿರಿ ,ಹಿರಿಯರಿಗೆ ಈಸಿಜಿ ಎಕೋ ಮಾಡಿಸಿರಿ . ಉದ್ಯೋಗ ಪ್ರಾಪ್ತಿಯೋಗವಿದೆ .ಸಿಕ್ಕಿದ ಉದ್ಯೋಗಕ್ಕೆ ಸೇರಿಕೊಳ್ಳಿರಿ .ಭೂಮಿಯ ಮಾರಾಟಗಾರರು ದಾಖಲೆ ಪತ್ರವನ್ನು ಗಮನಿಸಿಕೊಳ್ಳಿರಿ .
ಕುಂಭ : ಶನಿ ನಿಮ್ಮ ಜನ್ಮ ರಾಶಿಯಲ್ಲಿ ಇದ್ದಾನೆ .ಕೆಲವೊಂದು ಉತ್ತಮ ಅವಕಾಶಗಳು ನಿಮ್ಮ ಉದಾಸೀನತೆಯಿಂದ ಕಳೆದು ಹೋಗುವ ಸಾಧ್ಯತೆ ಇದೆ .ಗುರು ವಕ್ರಿಯಾಗಿರುವುದರಿಂದ ದೈವಾನುಗ್ರಹದ ಕೊರತೆ ಇದೆ .ನಿಮ್ಮ ಆರೋಗ್ಯದ ತಪಾಸಣೆ ಅಗತ್ಯವಿದೆ ಎಂದು ಅನಿಸಿದರೆ ಒಮ್ಮೆ ಮಾಡಿಸುವುದು ಒಳ್ಳೆಯದು .ನೀವು ಮದ್ಯ ಸೇವನೆ ಮಾಡುವವರಾಗಿದ್ದರೆ ಅದರಿಂದ ದೂರವಿರುವುದು ಒಳ್ಳೆಯದು .ನಿಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕಲು ಹೋಗಬೇಡಿರಿ . ಕಲಹಗಳ ಆಗಮನ ಅಥವಾ ನಿರ್ಗಮನ ಅದು ನಿಮ್ಮನ್ನೇ ಅವಲಂಭಿಸಿದೆ .ಒಳ್ಳೆಯ ಮಾತಿನಿಂದ ಎಲ್ಲಾ ಪ್ರಾಣಿಗಳೂ ಸಂತೋಷ ಪಡುತ್ತದೆ .ಒಂದು ಮಾತಿಗೂ ದರಿದ್ರವೇ ?
ಮೀನ : ವಕ್ರಿ ಗುರುವಿನಿಂದಾಗಿ ಗುರು ಬಲ ಪ್ರಾಪ್ತಿಯಾಗಿದೆ .ಸುಖ ಸ್ಥಾನದ ಕುಜ ಗುರುವಿನ ಅನುಗ್ರಹದಿಂದ ಶುಭ ಫಲವನ್ನೇ ನೀಡಲಿದ್ದಾನೆ .ಹೊಸ ವಾಹನ ,ಭೂಮಿ ಬರಲಿದೆ .ಹೊಸ ಅವಕಾಶಗಳು ಬರಲಿವೆ .ವರ್ಗಾವಣೆಯ ಸಾಧ್ಯತೆ ಇದೆ .ಭೂಮಿ ಮಾರಾಟದ ನಿರ್ಧಾರ ಅಂತಿಮ ಹಂತಕ್ಕೆ ಬರಲಿದೆ .ಜೀವನದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲು ಸೂಕ್ತ ಸಮಯ .ಆರ್ಥಿಕ ಒತ್ತಡ ಹೆಚ್ಚಾಗಬಹುದು .ಆಪ್ತರ ಜೊತೆಗಿನ ವಿರಸವನ್ನು ಸಮಾಧಾನದಿಂದ ಪರಿಹರಿಸಿಕೊಳ್ಳಿರಿ .ನೀವು ಮಾಡುವ ಕೆಲಸ ,ಆಡುವ ಮಾತಿನಲ್ಲಿ ಸಮಾಧಾನವಿರಲಿ .ಕಾರ್ಯ ನಿರ್ವಹಣೆಯ ಬಗ್ಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುತ್ತೀರಿ .ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ ಕವಡೆಮೂಲಕ ಪ್ರಸ್ತುತ ವಿಷಯ ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು .ವಾಸ್ತು ಸಲಹೆ/ವಿವಾಹ ಹೊಂದಾಣಿಕೆ ಮಾಡಿಕೊಡಲಾಗುವುದು.





































