ವಾರ ಭವಿಷ್ಯ ದಿನಾಂಕ 08.06.2025 ರಿಂದ 14.06.2025 ರ ವರೆಗೆ
ವಿಶೇಷ ದಿನಗಳು : 10.06.2025…ವಟ ಸಾವಿತ್ರಿ ವೃತ ,
14.06.2025….ಸಂಕಷ್ಟ ಚತುರ್ಥಿ
ಮೇಷ : ಕುಜ ಸಿಂಹ ರಾಶಿಗೆ ಅಂದರೆ ತನ್ನ ಮಿತ್ರನ ಮನೆಗೆ ಆಗಮಿಸಿದ್ದಾನೆ. ವಾಕ್ ಸ್ಥಾನದಲ್ಲಿ ರವಿ ಇದ್ದಾನೆ.ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದುವ ಸಮಯ ಬಂದಿದೆ. ನಿಮ್ಮ ಉತ್ತಮ ನಡವಳಿಕೆಯಿಂದ ನಿಮ್ಮವರು ಹತ್ತಿರವಾಗಲಿದ್ದಾರೆ.ಮನೆ ವಾಹನ ಭೂಮಿ ಖರೀಧಿ ಮಾಡುವ ಸಮಯ ಬಂದಿದೆ. ಕಣ್ಣಿನ ಸಮಸ್ಯೆ ಬರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದೆ. ಹಣ ಹೂಡಿಕೆಗೆ ಇದು ಉತ್ತಮ ಸಮಯವಲ್ಲ. ಶನಿ ವ್ಯಯದಲ್ಲಿ ಇರುವುದರಿಂದ ನೀವು ಮಾಡುತ್ತಿರುವ ಯಾವುದೇ ವ್ಯವಹಾರದಲ್ಲಿ,ಉದ್ಯೋಗದಲ್ಲಿ ಸಮಸ್ಯೆ ಬರುವ ಸಾಧ್ಯತೆ ಇರುವುದರಿಂದ ಆದಿತ್ಯ ಹೃದಯ ಮಂತ್ರ ಪಾರಾಯಣ ಮಾಡುವ ಅಗತ್ಯವಿದೆ.
ವೃಷಭ : ಬುಧ ಗುರುವಿನೊಂದಿಗೆ ಮಿಥುನ ರಾಶಿಯಲ್ಲಿ ,ಕುಜ ಕೇತುವಿನೊಂದಿಗೆ ಸಿಂಹ ರಾಶಿಯಲ್ಲಿಸಂಚಾರ ಮಾಡುತ್ತಿದ್ದಾರೆ. ನಿಮ್ಮ ಅನೇಕ ದಿನಗಳ ಆಸೆಗಳು ಈಡೇರುವ ಸಮಯ ನಿಮ್ಮ ಬಳಿಯಲ್ಲಿ ಬರಲಿದೆ.ಅನೇಕ ಮೂಲಗಳಿಂದ ಆದಾಯ ಶೇಖರಣೆ ಆಗಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ,ಅವಕಾಶಗಳು ಒದಗಿ ಬರಲಿದೆ. ನಿಮ್ಮ ಸ್ವಂತ ಆಲೋಚನೆಗಳಿಂದಲೇ ನಿಮಗೆ ಉನ್ನತ ಸ್ಥಾನ ಮಾನ ಒದಗಿ ಬರಲಿದೆ. ಉದ್ಯೋಗ ಪ್ರಾಪ್ತಿ ಯೋಗವಿದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ದ್ವಿತೀಯಾದಲ್ಲಿ ಬಂದಿರುವ ಗುರು ಮತ್ತು ಬುಧ ನಿಮ್ಮ ಅನೇಕ ಆತಂಕಗಳನ್ನು ದೂರ ಮಾಡಲಿದ್ದಾರೆ. ತಾಯಿ ,ಪತ್ನಿ ಇವರ ನಡುವೆ ಕಲಹಗಳು ಬರದಂತೆ ಎಚ್ಚರವಹಿಸಬೇಕಾಗಿದೆ.
ಮಿಥುನ : ಜನ್ಮ ರಾಶಿಯಲ್ಲಿ ಬುಧ ಗುರು ಜೊತೆಯಾಗಿ ಜೀವನದಲ್ಲಿ ನವ ಉಲ್ಲಾಸ ಮೂಡಿ ಬರಲಿದೆ.ಕುಜ ಕೇತು ಜೊತೆಯಾಗಿ ಸಿಂಹ ರಾಶಿಯಲ್ಲಿ ಇರುವುದು ,ಆರ್ಥಿಕ ಮಟ್ಟದಲ್ಲಿ ಚೇತರಿಕೆ ಕಂಡು ಬರಲಿದೆ. ಸಹೋದರ ವರ್ಗದವರ ಜೊತೆಗೆ ಹೊಂದಾಣಿಕೆಯಿಂದ ಮುನ್ನೆಡೆಯಿರಿ. ದೀರ್ಘ ಪ್ರಾಯಾಣವನ್ನು ಇಚ್ಛಿಸುವ ನೀವು ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸುವಂತೆ ರಾಹು ಸೂಚನೆ ಕೊಡುತ್ತಿದ್ದಾನೆ,.ನೂತನ ಉದ್ಯೋಗದ ಅನ್ವೇಷಣೆಯಲ್ಲಿ ಸಫಲತೆಯನ್ನು ಹೊಂದುವಿರಿ, ಮೆಕಾನಿಕ್ ಪದವೀ ದರರಿಗೆ ಒಳ್ಳೆಯ ಅವಕಾಶ. ಹಿರಿಯರ ಜೊತೆಗೆ ಹೊಂದಾಣಿಕೆಯಿಂದ ಮುನ್ನೆಡೆಯಿರಿ. ಕೋಪ ಅನಾವಶ್ಯಕವಾಗಿ ಬರಲಿದೆ.ಸಹನೆ ತಾಳ್ಮೆ ಹೊಂದಿರುವುದು ಅತೀ ಅಗತ್ಯವಾಗಿದೆ.
ಕರ್ಕಾಟಕ : ಕುಜ ಕೇತುವಿನೊಂದಿಗೆ ದ್ವಿತೀಯಾದಲ್ಲಿ ಬಂದಿರುವುದು ವಿದ್ಯಾರ್ಥಿಗಳಿಗೆ ಓದಿನ ಕಡೆಗೆ ಗಮನಕೊಡುವಂತೆ ಸೂಚಿಸಲಾಗುತ್ತಿದೆ. ಅಖಂಡ ರಾಜ ಯೋಗ ಬಂದಿದೆ. ಗುರು,ಬುಧ ವ್ಯಯದಲ್ಲಿ ಬಂದಿರುವುದು ,ನೀವು ಹಿರಿಯರಿಂದ ದೂರವಾಗುವುದನ್ನು ಸೂಚಿಸುತ್ತಿದೆ. ಎಲ್ಲಿಯೂ ವೈರತ್ವವನ್ನು ಬೆಳೆಸಿಕೊಳ್ಳದಿರಿ. ಶುಕ್ರ ಒಳ್ಳೆಯ ಉದ್ಯೋಗವನ್ನು ಒದಗಿಸಿ ಕೊಡಲಿದ್ದಾನೆ. ಅಷ್ಟಮದಲ್ಲಿರುವ ರಾಹುವಿನ ಪರಿಹಾರವಾಗಿ ದುರ್ಗಾ ಮಂತ್ರವನ್ನು ಹೇಳುತ್ತಾ ಬರಬೇಕು. ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರವಹಿಸಿರಿ. ಅಪವಾದಗಳನ್ನು ಕೇಳಬೇಕಾಗುತ್ತದೆ. ಚಿಂತೆ ತಲೆ ಏರಲಿದೆ. ಶನಿಯಿಂದ ಶುಭ ಫಲವನ್ನೇ ನಿರೀಕ್ಷೆ ಮಾಡಬಹುದು.
ಸಿಂಹ : ಗುರು ಮತ್ತು ಬುಧ ಲಾಭ ಕ್ಷೇತ್ರದಲ್ಲಿ ಇದ್ದುಕೊಂಡು ಒಳ್ಳೆಯ ಕಾಲವೆಂದೇ ಹೇಳಬೇಕಾಗಿದೆ.ಮನೆಯಲ್ಲಿ ಶುಭ ಕೆಲಸಗಳು ನಡೆಯುವ ಸಮಯವಾಗಿದೆ. ಯಾವುದೇ ವ್ಯವಹಾರದಲ್ಲಿ ಲಾಭ ಗಳಿಸುವ ಸಮಯವಾಗಿದೆ. ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಕೆಲಸಗಳಲ್ಲಿ ಯಶಸ್ಸನ್ನು ಗಳಿಸುವಿರಿ.ಹಿತ ಶತ್ರ್ರುಗಳಿಂದ ತೊಂದರೆ ಅನುಭವಿಸುವ ಕಾಲವಾಗಿದೆ. ಉದ್ಯೋಗ ಪ್ರಾಪ್ತಿ ಯೋಗವಿದೆ.ಸರಕಾರಿ ಉದ್ಯೋಗ ಸಿಗುವ ಸಮಯವಾಗಿದೆ. ಜವಾಬ್ಧಾರಿ ಹೆಚ್ಚಾಗಲಿದೆ. ಶನಿ ಅಷ್ಟಮದಲ್ಲಿ ಇರುವುದರಿಂದ ಪರಿಹಾರ ಆಗಬೇಕಿದೆ. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಾಗಿ ಎರಡೂವರೆ ವರ್ಷಗಳ ಕಾಲ ಮಾಡಬೇಕಿದೆ.ಪತಿ ಪತ್ನಿಯರ ಜೊತೆಗೆ ಹೊಂದಾಣಿಕೆಯಿಂದ ಮುನ್ನೆಡೆಯ ಬೇಕಾಗಿದೆ.
ಕನ್ಯಾ : ಕರ್ಮ ಕ್ಷೇತ್ರಕ್ಕೆ ಗುರುವಿನ ಪ್ರವೇಶವಾಗಿದೆ.ಜೊತೆಗೆ ಬುಧನಿದ್ದಾನೆ. ಒಳ್ಳೆಯ ಉದ್ಯೋಗ , ವ್ಯವಹಾರ ಮಾಡುವ ಸಮಯವಾಗಿದೆ. ಉತ್ತಮ ಸಂಪಾದನೆ ಮಾಡುವ ಸಮಯವಾಗಿದೆ. ಶುಕ್ರ ಅಷ್ಟಮದಲ್ಲಿ ಇರುವುದು ನಿಮ್ಮ ಪಾಲಿಗೆ ಅದೃಷ್ಟವೇ ಒಲಿದು ಬಂದಂತಾಗಿದೆ. ವಿದೇಶಕ್ಕೆ ಹೋಗುವ ಸಮಯ ಒದಗಿ ಬರಲಿದೆ. ವಿದ್ಯಾರ್ಥಿಗಳಿಗೆ ಶುಭ ಸಮಯ. ವ್ಯವಹಾರದಲ್ಲಿ ಇರುವವರಿಗೆ ನಾಳೆಯ ಚಿಂತೆ ಕಾಡಲಿದೆ. ಶುಕ್ರ ಜೂನ್ 29ಕ್ಕೆ ವೃಷಭ ರಾಶಿಗೆ ಬಂದಾಗ ಅತಿ ಶುಭ ಸಮಯವನ್ನು ಕೊಡಲಿದ್ದಾನೆ. ಆದಾಯಕ್ಕೆ ಈಗಲೂ ಯಾವುದೇ ಕೊರತೆ ಇರುವುದಿಲ್ಲ. ನೀವು ಹಾಕಿ ಕೊಂಡ ಯೋಜನೆಗಳಿಗೆ ಕುಟುಂಬದ ಸಹಾಯವು ಸಿಗಲಿದೆ ತಂದೆಯ ನಡುವಿನ ವೈಮನಸ್ಸು ದೂರವಾಗಿ ಸಂಬಂಧ ಸುಧಾರಿಸಲಿದೆ.
ತುಲಾ : ಕುಜ ಮತ್ತು ಕೇತು ಲಾಭ ಕ್ಷೇತ್ರಕ್ಕೆ ಬಂದಿದ್ದಾರೆ. ಗುರು ಮತ್ತು ಬುಧ ಭಾಗ್ಯದಲ್ಲಿ ಇದ್ದಾರೆ. ಸಪ್ತಮದಲ್ಲಿ ಶುಕ್ರನಿದ್ದಾನೆ. ಎಲ್ಲವೂ ನಿಮ್ಮ ಮನಸ್ಸಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ನಡೆದುಕೊಂಡು ಹೋಗಲಿದೆ.ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ ಭಯ ಆತಂಕ ಪಡುವ ಅಗತ್ಯವೇ ಇರುವುದಿಲ್ಲ. ಆದಿತ್ಯ ಹೃದಯ ಮಂತ್ರ ಪಾರಾಯಣ ಅಗತ್ಯವಾಗಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಹೊಸ ಹೊಸ ವ್ಯವಹಾರಗಳನ್ನು ಮಾಡುತ್ತಾ ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳಿಗೆ ಉತ್ತಮವಾದ ಸಮಯವಾಗಿದೆ.
ವೃಶ್ಚಿಕ : ಕುಜ ಕರ್ಮಕ್ಷೇತ್ರಕ್ಕೆ ಬಂದಿರುವುದು ,ಜೀವನದಲ್ಲಿ ಹೊಸ ಆಶಾಕಿರಣವೊಂದು ಬಂದಂತಾಗಿದೆ. ಅನೇಕ ಕಿರಿಕಿರಿಗಳ ಮಧ್ಯೆ ಉದ್ಯೋಗವೊಂದು ಪ್ರಾಪ್ತಿಯಾಗಲಿದೆ. ಹೊಸ ವ್ಯವಹಾರಕ್ಕೆ ಕೈಹಾಕುವ ಯೋಜನೆ ನಿಮ್ಮಲ್ಲಿದೆ. ದಿನಾಂಕ 15 ರ ಒಳಗೆ ಆರಂಭಿಸಿ ,ನಂತರ ಗುರು ಮೌಢ್ಯ ಆರಂಭವಾಗಲಿದೆ. ರಾಹುವಿಗೆ,ಶನಿಗೆ .ಗುರುವಿಗೆ ಪರಿಹಾರ ಅತಿ ಅಗತ್ಯವಾಗಿದೆ. ನವಗ್ರಹ ಜಪವನ್ನು ತಪ್ಪದೆ ಹೇಳುತ್ತಾ ಬನ್ನಿರಿ. ಅಕ್ಕಿ ದಾನ ಮಾಡುವುದು ಉತ್ತಮ ಪರಿಹಾರವಾಗಿದೆ. ಜಾಮೀನಿನ ಬಗ್ಗೆ ಕಲಹವಿದ್ದಲ್ಲಿ ಈಗ ಪರಿಹಾರ ಬೇಡ. ದುರ್ಗಾ ಸಪ್ತ ಶತೀ ಪಾರಾಯಣ ಅಗತ್ಯವಾಗಿದೆ .
ಧನು : ಗುರು ಮತ್ತು ಬುಧ ಸಪ್ತಮದಲ್ಲಿ ಇದ್ದಾರೆ. ಗುರು ಸುಖಾಧಿಪತಿಯೂ ಹೌದು. ಶನಿ ಸುಖ ಸ್ಥಾನದಲ್ಲಿ ಇದ್ದಾನೆ. ಕೆಲವೊಂದು ಕಲಹಗಳ ನಡುವೆ ,ವಿವಾಹ ಸಮಾರಂಭಗಳು ನಡೆಯಲಿವೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ .ದುಡ್ಡು ಕೊಡಲು ಹೋಗಬೇಡಿ. ಹೊಸ ವ್ಯವಹಾರ ಮಾಡುವಾಗ ಎಚ್ಚರವಿರಬೇಕು. ಪ್ರಾಮಾಣಿಕತನ ಅಗತ್ಯವಿದೆ. ಅಪರಿಚಿತ ಮಹಿಳೆಯರ ಬಗ್ಗೆ ಎಚ್ಚರವಿರಬೇಕು. ತಿಳುವಳಿಕೆ ಮತ್ತು ತಾಳ್ಮೆಯಿಂದ ನಿರ್ಧಾರಗಳನ್ನು ಕೈಗೊಂಡರೆ ಜೀವನವು ಸುಗಮವಾಗಲಿದೆ.ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ಗೊಂದಲ ಬರಬಹುದು. ಉಪಕಾರ ಮಾಡಿದವರನ್ನು ಮರೆಯದಿರಿ.ಖರ್ಚಿಗೆ ಕಡಿವಾಣವಿರಲಿ.
ಮಕರ : ಈ ವಾರ ಉತ್ತಮವಾಗಿದೆ.3ನೆಯ ಶನಿ ಸಂಪಾದನೆಯನ್ನು ಹೆಚ್ಚಿಸುವವನು. ರಾಹು ದ್ವಿತೀಯಾದಲ್ಲಿ ಖರ್ಚುಗಳನ್ನು ಹೆಚ್ಚಿಸುವವನಾಗಿದ್ದಾನೆ. ದುರ್ಗಾ ಅಷ್ಟೋತ್ತರವನ್ನು ಹೇಳುತ್ತಾ ಬರಬೇಕು. ಶುಕ್ರ ಸುಖ ಸ್ಥಾನದಲ್ಲಿ ಇದ್ದುಕೊಂಡು ಮನೆ,ಭೂಮಿ ,ವಾಹನವನ್ನು ಖರೀದಿಸುವ ಸಕಾಲವಾಗಿದೆ. ರವಿ ಪಂಚಮದಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಅನುಕೂಲವಾಗಲಿದೆ..ಸರಕಾರಿ ಕೆಲಸದ ವಿಷಯದಲ್ಲಿ ಒತ್ತಡ ಇರುತ್ತದೆ. ಯಾವುದೇ ವ್ಯವಹಾರದಲ್ಲಿ ನಿಧಾನವೇ ಪ್ರಧಾನ ಎನ್ನುವ ವಿಷಯ ನೆನಪಿರಬೇಕು. ಹಿತ ಶತ್ರುಗಳೂ ಜೊತೆಯಲ್ಲಿಯೇ ಇರುತ್ತಾರೆ .
ಕುಂಭ : ಈ ವಾರ ದೈವಾನುಗ್ರಹ ಉತ್ತಮವಾಗಿದೆ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ರಾಹು ಮತ್ತು ಶನಿ ನಿಮಗೆ ಜೀವನ ಪಾಠವನ್ನು ಮಾಡುವವರಾಗಿದ್ದಾರೆ . ಮೂಗಿನ ತುದಿಯಲ್ಲಿ ಕಟ್ಟಿರುವ ಸಿಟ್ಟಿಗೆ ಕಡಿವಾಣವಿರಲಿ. ಹಣದ ಮೇಲೆ ಹಿಡಿತವಿರಲಿ. ಸಂಗಾತಿಯ ಜೊತೆಗೆ ಹೊಂದಾಣಿಕೆ ಇರಲಿ .ಸಪ್ತಮದಲ್ಲಿ ಕುಜ ಮತ್ತು ಕೇತು ,ಸುಖ ಸ್ಥಾನದಲ್ಲಿ ಇರುವ ರವಿ ನಿಮ್ಮ ತಾಯಿಯವರ ಬಗ್ಗೆ ಗಮನ ಕೊಡುವಂತೆ ತಿಳಿಸುತ್ತಿದ್ದಾರೆ. ಮನೆಯ ,ನಿಮ್ಮ ಮನಸ್ಸಿನ ನೆಮ್ಮದಿ ನಿಮ್ಮ ಕೈಯಲ್ಲಿ ಇರುತ್ತದೆ. ನಿಮ್ಮಆರೋಗ್ಯದ ಕಡೆಗೆ ಗಮನ ಅತೀ ಅಗತ್ಯವಾಗಿದೆ. ನೀರು ಕುಡಿಯಿರಿ ಹೊಟ್ಟೆಯ ಭಾಗದಲ್ಲಿ ನೋವು ಬರುವ ಸಾಧ್ಯತೆ ಇರುತ್ತದೆ.
ಮೀನ : ಗುರು ಮತ್ತು ಬುಧ ಸುಖ ಸ್ಥಾನದಲ್ಲಿ ಬಂದು ಶ್ರೀ ಗಣಪತಿ ದೇವರ ಅನುಗ್ರಹದಿಂದ ನಿಮಗೆ ಹೊಸ ಉದ್ಯೋಗವೊಂದು ಪ್ರಾಪ್ತಿಯಾಗಲಿದೆ ಹೊಸ ಮನೆಗೆ ಕಾಲಿಡುವ ಸಾಧ್ಯತೆ ಇದೆ. ಶನಿ ಜನ್ಮ ರಾಶಿಯಲ್ಲಿ ಇರುವುದರಿಂದ ಜಾಗ್ರತೆಯಿಂದ, ತಾಳ್ಮೆಯಿಂದ ಇರುವಂತೆ ತಿಳಿಸಲಾಗುತ್ತಿದೆ. ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಉತ್ಪತ್ತಿಗಳ ಮೂಲಗಳ ಹೆಚ್ಚಳವಾಗಲಿದೆ. ವ್ಯಯದ ರಾಹು ಆರೋಗ್ಯದಲ್ಲಿ ವ್ಯತ್ಯಾಸವಾಗುವಂತೆ,ನಿಮ್ಮ ಮೇಲೆ ಅಪವಾದ ಬರುವಂತೆ ಮಾಡಲಿದ್ದು, ಎಚ್ಚರವಾಗಿರಬೇಕು ಜವಾಬ್ದಾರಿ ಹೆಚ್ಚಾದಾಗ ನಿದ್ದೆಗೆ ತೊಂದರೆ ಆಗಲಿದೆ.

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ, ಕವಡೆ ಮೂಲಕ ವಿವರಣೆಯನ್ನು ನೀಡಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಾಸ್ತು ಸಲಹೆ, ವಿವಾಹ ಹೊಂದಾಣಿಕೆ ತಿಳಿಸಲಾಗುವುದು.



































