ವಾರ ಭವಿಷ್ಯ
ದಿನಾಂಕ 07.07.2024 ರಿಂದ ದಿನಾಂಕ 13.07.2024 ರವರೆಗೆ
ವಿಶೇಷ ದಿನಗಳು :
12.07.2024………..ವೃಷಭ ರಾಶಿಗೆ ಕುಜನ ಪ್ರವೇಶ
16.07.2024……….ಕರ್ಕಾಟಕ ಸಂಕ್ರಮಣ
17.07.2024………..ಸರ್ವೈಕಾದಶಿ ,ತಪ್ತ ಮುದ್ರಾಧಾರಣಂ
ಚಾತುರ್ಮಾಸ್ಯಾರಂಭ:
21.07.2024………..ಗುರು ಪೂರ್ಣಿಮಾ ,ವ್ಯಾಸಪೂಜಾ
,ಯತಿಚಾತುರ್ಮಾರಂಭ :
ಮೇಷ : ನಿಮ್ಮ ಜೀವನದಲ್ಲಿ ಶುಭೋದಯದ ಕಾಲ ಆರಂಭವಾಗಿದೆ .ಕುಜ ದ್ವಿತೀಯಾಕ್ಕೆ ಬರಲಿದ್ದಾನೆ
,ಗುರು ದ್ವಿತೀಯಾದಲ್ಲಿದ್ದಾನೆ .ಹಿರಿಯರ ಆಶೀರ್ವಾದ ,ದೈವಾನುಗ್ರಹ ಪ್ರಾಪ್ತಿಯಾಗಿದೆ .ರವಿ
ತೃತೀಯಾಕ್ಕೆ ಪ್ರವೇಶ ಮಾಡುತ್ತಾ ಸಹೋದರ ವರ್ಗದವರ ಸಹಾಯ ನಿಮಗೆ ಸಿಗಲಿದೆ
.ಬುದ್ಧಿವಂತಿಕೆಯಿಂದ ನಿಮ್ಮ ಹಲವಾರು ಸಮಸ್ಯೆಗಳನ್ನು ನೀವೇ ಪರಿಹಾರ ಮಾಡಿಕೊಳ್ಳುವಿರಿ
.ನಿಮ್ಮಲ್ಲಿರುವ ವಿಶೇಷ ಪ್ರತಿಭೆಗಳಿಗೆ ಸರಿಯಾದ ಪುರಸ್ಕಾರ ದೊರೆಯಲಿದೆ .ವಿದ್ಯಾರ್ಥಿಗಳು ಆಹಾರ
,ವ್ಯವಹಾರದ ಬಗ್ಗೆ ಎಚ್ಚರದಿಂದಿರಬೇಕು .ಓದುವ ಕಡೆಗೆ ಗಮನ ಕೊಡುವುದು ಒಳ್ಳೆಯದು .ಅವಸರದ
ತೀರ್ಮಾನ ಒಳ್ಳೆಯದಲ್ಲ. ಸ್ವಂತ ಉದ್ಯೋಗ ,ವ್ಯಾಪಾರದಲ್ಲಿ ಹೆಚ್ಚು ಆದಾಯ ನಿರೀಕ್ಷೆ ಬೇಡ .ನರಸಿಂಹ
ದೇವರ ಜಪ ಮಾಡಿರಿ .
ವೃಷಭ : ಮಿಶ್ರ ಫಲವನ್ನು ಅನುಭವಿಸುವ ಈ ವಾರ ಲಕ್ಷ್ಮೀ ನರಸಿಂಹ ದೇವರ ಜಪವನ್ನು ಮಾಡಿರಿ
.ಭೂಮಿಯನ್ನು ಕಳೆದುಕೊಳ್ಳುವ ಸೂಚನೆ ಇದೆ ,.ವ್ಯವಹಾರ ಮಾಡುವಾಗ ಎಚ್ಚರವಿರಲಿ .ಅನ್ಯ
ಮಹಿಳೆಯರ ಬಗ್ಗೆ ಎಚ್ಚರಿಕೆಯ ಹೆಜ್ಜೆ ಅಗತ್ಯವಾಗಿದೆ .ರಾಜ್ಯದಲ್ಲಿ ನಡೆಯುತ್ತಿರುವ ಅನೇಕ
ಉದಾಹರಣೆಗಳೇ ಎಲ್ಲರಿಗೂ ಉದಾಹರಣೆಯಾಗಿದೆ .ಸಮಾಜದಲ್ಲಿ ನಿಮಗೆ ನಿಮ್ಮದೇ ಆದ
ಗೌರವವಿರುತ್ತದೆ .ಜನ್ಮ ರಾಶಿಯಲ್ಲಿ ಇರುವ ಗುರು ಅದನ್ನು ಒದಗಿಸಿ ಕೊಡುತ್ತಾನೆ .”ವಚನೇಕಾ
ದರಿದ್ರತಾ “ಅಂದರೆ ಒಂದು ಒಳ್ಳೆಯ ,ನಗುಮುಖದ ಮಾತಿಗೂ ನಿಮ್ಮಲ್ಲಿ ದರಿದ್ರವೇ ಸಿಟ್ಟು ,ಅಹಂ
,ಬಿಟ್ಟು ಎಲ್ಲರ ಒಳಗಾಗಿ ,ಕುಜ ಮತ್ತು ರವಿ ನಿಮಗೆ ಸಿಟ್ಟನ್ನು ತರುವವರು ,ಅವರಿಗೆ ಪರಿಹಾರವನ್ನು
ಮಾಡಿಕೊಳ್ಳಿರಿ .
ಮಿಥುನ : ಸ್ವಂತ ಭೂಮಿಯನ್ನು ಕೂಳ್ಳುವುದಲ್ಲೇ ದಿನಾಂಕ 12 ರ ವರೆಗೆ ಅವಕಾಶವಿದೆ .ನಾಲ್ಕು ಕಾಲಿನ
ಪ್ರಾಣಿಗಳನ್ನು ಸಾಕುವತ್ತ ನಿಮ್ಮ ಮನಸ್ಸು ವಾಲುವಂತೆ ಕಾಣುತ್ತಿದೆ .ಆದರೆ ಎಚ್ಚರವಾಗಿರಿ .ಗುರು
ವ್ಯಯದಲ್ಲಿ ಇದ್ದಾನೆ .ನಿತ್ಯವೂ ನವಗ್ರಹ ಜಪ ,ವಿಶೇಷವಾಗಿ ಶನಿಯ ಜಪ ಮಾಡುವುದು ನಿಮಗೆ
ಅಗತ್ಯವಾಗಿದೆ .ನಮ: ಸೂರ್ಯಾಯ ,ಚಂದ್ರಾಯ,ಮಂಗಳಾಯ ,ಬುಧಾಯ ಚ ,ಗುರು ,ಶುಕ್ರ ,ಶನಿಭ್ಯಶ್ಚ
,ರಾಹವೇ ,ಕೇತವೇ ನಮ: !! ನವಗ್ರಹ ದೇವತಾಭ್ಯೋ ನಮ: ಓಂ ಶಮ್ ಶನೈಶ್ವರಾಯನಮ:[108 ಬಾರಿ
ಪ್ರತಿ ನಿತ್ಯ ಹೇಳುತ್ತಾ ಬರಬೇಕು .ಯಾವುದೇ ಪೂಜೆ ,ಹೋಮಗಳಿಗಿಂತ ಸ್ವತ: ಪಾರಾಯಣ ಮಾಡುವುದು
ಶ್ರೇಷ್ಟವಾಗಿದೆ ,ಇದು ನೆನಪಿರಲಿ .ಶುದ್ಧವಾದ ಎಳ್ಳೆಣ್ಣೆಯನ್ನುನೀವೇ ಅಂಗಡಿಯಿಂದ ಖರೀಧಿಸಿ
ಶಿವಾಲಯದಲ್ಲಿ ಅರ್ಪಿಸಿರಿ .
ಕರ್ಕಾಟಕ : ವಕ್ರಿ ಶನಿಯ ದೋಷ ಕಾಡುತ್ತಿದೆ .ಆದರೆ ಗುರು ಲಾಭ ಕ್ಷೇತ್ರದಲ್ಲಿ ಇದ್ದು ಎಲ್ಲಾ
ದೋಷಗಳನ್ನು ಪರಿಹಾರ ಮಾಡುತ್ತಿದ್ದಾನೆ . ಎಷ್ಟೇ ಆತುರವಿದ್ದರೂ ನೀವು ಮಾಡುವ ವ್ಯವಹಾರದ
ಬಗ್ಗೆ ಪೂರ್ಣ ಮಾಹಿತಿ ಇಲ್ಲದೆ ಕೆಲಸ ಮಾಡಲು ಹೋಗಬೇಡಿ .ಹಣ ಕಳೆದುಕೊಳ್ಳುವ ಸೂಚನೆ ಇದೆ
.ಎಚ್ಚರವಿರಲಿ .ಉದ್ಯೋಗದಲ್ಲಿ ಮೇಲಧಿಕಾರಿಗಳ ಕಿರಿಕಿರಿ ಅನುಭವಿಸುವಿರಿ .ಆಕಾಶದಿಂದ ಉದುರಿ
ಬಂದವರಂತೆ ಅವರು ವರ್ತಿಸಲಿದ್ದಾರೆ .ಅನ್ಯ ಮಹಿಳೆಯರ ಬಗ್ಗೆ ಬಹಳ ಎಚ್ಚರವಹಿಸಿರಿ .ಈ ಸಂವತ್ಸರವೇ
ಹೀಗಿದೆ .ಜನ್ಮ ರಾಶಿಯಲ್ಲಿ ಶುಕ್ರ ಭಾಧಕಾಧಿಪತಿಯಾಗಿ ಇದ್ದು ಶನಿಯ ದೃಷ್ಟಿ ಇದ್ದಾಗ ಪ್ರೀತಿ ಪ್ರೇಮದ
ವಾಸನೆ ಹೊಡೆಯುತ್ತಿದೆ .ಒಂದು ಇಲಿ ಗೂಡಿನ ಒಳಗೆ ಬೀಳುವ ಹಾಗೆ ಆಗಬಾರದು .ದೇವಿಯ ಕನಕದಾರ
ಸ್ತೋತ್ರ ಪ್ರತಿನಿತ್ಯ ಪಾರಾಯಣ ಮಾಡಿರಿ .
ಸಿಂಹ : ವಿಶೇಷವಾದ ಯೋಗವನ್ನು ಹೊಂದಿರುವ ನೀವು ಇಂತಹ ಸಮಯದ ಸರಿಯಾದ ಉಪಯೋಗ
ಮಾಡಿಕೊಳ್ಳಿರಿ .ವೃತ್ತಿ ಜೀವನದಲ್ಲಿ ಹಲವಾರು ಬದಲಾವಣೆಗಳನ್ನು ಕಾಣುವ ಕಾಲವಾಗಿದೆ . ನಿಮ್ಮ
ತಾಯಿಯವರ ಆರೋಗ್ಯದಲ್ಲಿ ಏರಿಳಿತ ಕಾಣಲಿದ್ದೀರಿ .ನಿಮ್ಮ ಪ್ರೀತಿಯ ಮಾತುಗಳೇ ಅವರಿಗೆ
ಔಷಧವಾಗಿದೆ .ಮೈಗ್ರೇನ್ ನಿಮ್ಮನ್ನು ಕಾಣಲಿದೆ .ಮಳೆಗೆ ಒದ್ದೆಯಾಗದಂತೆ ಎಚ್ಚರವಹಿಸಿರಿ .ನಿಮ್ಮ
,ತಂಪು ವಸ್ತುಗಳ ಹೆಚ್ಚಾದ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವಾಗುವಂತೆ ಮಾಡಲಿದೆ
.ಕಪಟವಾದ ಮಾತುಗಳಿಂದ ದೂರವಿರುವುದು ಒಳ್ಳೆಯದು . ಬಂಧು ಬಳಗ ,ಸಹೋದರಿ ನಿಮ್ಮಿಂದ
ದೂರವಾಗುವ ಸಾಧ್ಯತೆ ಇದೆ .ವಿದೇಶಕ್ಕೆ ಹಾರುವ ಸಾಧ್ಯತೆ ,ಬೆಲೆಬಾಳುವ ವಸ್ತುಗಳ ಖರೀಧಿ ಸಾಧ್ಯತೆ ಇದೆ
.
ಕನ್ಯಾ : ಮಿಶ್ರ ಫಲವನ್ನು ಅನುಭವಿಸುವಿರಿ .ನಿಮ್ಮಲ್ಲಿ ಎಷ್ಟೇ ಸೌಲಭ್ಯಗಳಿರಲಿ ಬರುವ ಅಪವಾದದಿಂದ
ದೂರವಾಗಲು ನಿಮ್ಮಿಂದ ಸಾಧ್ಯವಾಗಲಿಲ್ಲ. ಗುರು ಭಾಗ್ಯದಲ್ಲಿ ಬಂದರೂ ಕುಜ ಜುಲೈ 12 ರ ವರೆಗೆ
ಅಷ್ಟಮದಲ್ಲಿ ಇದ್ದು ಕೊಂಡು ಸಹೋದರನ ಜೊತೆಗೆ ಶೀತಲ ಯುದ್ಧ ಎದುರಿಸಲೇ ಬೇಕಾಗಿದೆ . ಮಹಾ
ಭಾರತದಲ್ಲಿ ಬರುವ ಒಂದು ಮಾತಿದೆ “ನೀರಿನೊಳಗಿರ್ದು ಬೆವರಿದನುರಗಪತಾಕಮ್ “ದುರ್ಯೋಧನ
ನೀರಿನೊಳಗೆ ಇದ್ದರೂ ಬೆವರಿದ ,ಎಂಬ ಮಾತಿದೆ .ನರಸಿಂಹ ದೇವರ ಮಂತ್ರದ ಪಾರಾಯಣದ ಅಗತ್ಯವಿದೆ
.ನಿಮಗೆ ಮಂತ್ರವನ್ನು ತಿಳಿಸಲಾಗುವುದು .
ತುಲಾ :ಗುರು ಅಷ್ಟಮದಲ್ಲಿ ಇರುವುದನ್ನು ನೀವು ಗಮನಿಸಲೇ ಬೇಕು ,.ರವಿ ಭಾಗ್ಯದಲ್ಲಿ ಇದ್ದು
ಹಿರಿಯರೊಂದಿಗೆ ಕಲಹ ಮಾಡುವ ಸಾಧ್ಯತೆ ಇದೆ .ಕುಜ ಸಪ್ತಮದಲ್ಲಿ ಜುಲೈ 12 ರ ವರೆಗೆ ಇದ್ದಾನೆ
,ನಂತರ ಅಷ್ಟಮಕ್ಕೆ ಬರುತ್ತಾನೆ .ಸತಿ ಪತಿಯರು ಕಾಯಾ –ವಾಚಾ –ಮನಸಾ ಒಗ್ಗಟ್ಟಿನಿಂದ ಬಾಳಬೇಕಾದ
ಅಗತ್ಯವಿದೆ .ಸಿಟ್ಟು ,ಉದ್ವೇಗ ನಿಮ್ಮ ಬಳಿ ಸುಳಿಯದಂತೆ ಒಪ್ಪಂದವನ್ನು ಮಾಡಿಕೊಂಡು
ಮುಂದುವರಿಯಿರಿ .ಯಾವುದೇ ಮುಂದಾಲೋಚನೆ ಇಲ್ಲದೆ ಮನಸ್ಸಿಗೆ ಬಂದಂತೆ ಮಾತಾಡುವುದನ್ನು
ನಿಲ್ಲಿಸಿರಿ .ನಾನೇ ಸರಿ ಎಂಬ ಮೊಂಡು ವಾದದಿಂದ ದೂರವಿರುವುದು ಒಳ್ಳೆಯದು . ಮೃತ್ಯುಂಜಯ
ಮಂತ್ರವನ್ನು ನಿತ್ಯವೂ ಹೇಳಿರಿ .
ವೃಶ್ಚಿಕ : ಗುರು ಸಪ್ತಮದಲ್ಲಿ ಇರುವುದರಿಂದ ನಿಮ್ಮ ಕೆಲಸಗಳೆಲ್ಲವೂ ಸುಲಲಿತವಾಗಿ ನಡೆಯುತ್ತಾ
ಹೋಗಲಿದೆ .ರಾಜಕೀಯದಲ್ಲಿರುವರಿಗೆ ಉನ್ನತ ಸ್ಥಾನ ಮಾನ ಲಭಿಸುವ ಸಮಯ .ಭೂ ವ್ಯವಹಾರ
ಮಾಡುವವರಿಗೆ ಅನುಕೂಲಕರ ಸಮಯವಾಗಿದೆ ,. ಮಕ್ಕಳ ವಿಷಯವಾಗಿ ಪತ್ನಿಯಲ್ಲಿ ಬೇಸರ ಬರುವ
ಸಾಧ್ಯತೆ ಇದೆ .ಬರುವ ಆದಾಯದಲ್ಲಿ ಅಭಿವೃದ್ಧಿಯನ್ನು ಕಾಣುವಿರಿ .ನಿಮ್ಮಲ್ಲಿ ಶುಭ ಸಮಾರಂಭಗಳು
ನಡೆಯುವ ಕಾಲವಾಗಿದೆ .ಸಮಾಜ ನಿಮ್ಮನ್ನು ಗುರುತಿಸಲಿದೆ . ನಿಮ್ಮ ಆರೋಗ್ಯದ ಕಡೆಗೆ ಗಮನ
ಹರಿಸುವುದು ಒಳ್ಳೆಯದು .ಖಾರ ಪದಾರ್ಥ ಸೇವನೆ ಬೇಡ ಮೂಲವ್ಯಾಧಿ ಸಮಸ್ಯೆ ಇರುವವರು
ಎಚ್ಚರವಹಿಸಿರಿ .
ಧನು : ಶನಿಯ ವಕ್ರಿ ಸ್ಥಿತಿ ನಿಮಗೆ ಆರ್ಥಿಕವಾಗಿ ಸಮಸ್ಯೆಯನ್ನು ತರಬಹುದು .ಯಾರಿಗೂ ಸಾಲ ಕೊಡಲು
ಹೋಗಬೇಡಿರಿ .ಸಹೋದರನೊಂದಿಗೆ ಕಲಹ ಬೇಡ .ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರವಿರಲಿ .
ಸಂತಾನದ ನಿರೀಕ್ಷೆಯಲ್ಲಿ ಇರುವವರು ಬಹಳ ಎಚ್ಚರ ವಹಿಸುವುದು ಒಳ್ಳೆಯದು.ನಾಗದೇವರ ಪ್ರಾರ್ಥನೆ
ಅಗತ್ಯವಿದೆ . ಉದ್ಯೋಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ .ಗುರುವಿನ ಅನುಗ್ರಹದ ಕೊರತೆಯೇ
ಇದಕ್ಕೆ ಕಾರಣವಾಗಿದೆ .ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಾಗಿದೆ .ಮಧು ಮೇಹ ಸಮಸ್ಯೆ
ಇರುವವರು ಬಹಳ ಎಚ್ಚರ ವಹಿಸಿರಿ .ಪ್ರೀತಿ ಪ್ರೇಮದಿಂದ ವಿದ್ಯಾರ್ಥಿಗಳು ದೂರವಿರುವುದು ಒಳ್ಳೆಯದು .
ಮಕರ : ದೈವಾನುಗ್ರಹ ಉತ್ತಮವಾಗಿದೆ .ಬರುವ ಆದಾಯದಲ್ಲಿ ಗಣನೀಯವಾಗಿ ಏರಿಕೆಯಾಗಲಿದೆ
.ಸಾಡೇ ಸಾತ್ ಶನಿಯ ಕಾಟ ಮುಂದುವರಿದಿದೆ .29.03.2025 ರ ವರೆಗೆ ಇರುತ್ತದೆ .ವಿಷ್ಣು ಸಹಸ್ರನಾಮ
ಪಾರಾಯಣ ನಿತ್ಯವೂ ಮಾಡುತ್ತಾ ಬನ್ನಿರಿ .ಶಿವಾಲಯದಲ್ಲಿ ಶುದ್ಧವಾದ ಎಳ್ಳೆಣ್ಣೆಯನ್ನು
ಅಂಗಡಿಯಿಂದ ಖರೀಧಿಸಿ ದೇವರಿಗೆ ಬತ್ತಿ ಸಹಿತ ಒಪ್ಪಿಸಿರಿ ,[ದೀಪದ ಎಣ್ಣೆ ಪಾಮೋಯಿಲ್ ಆಗಿರುತ್ತದೆ ]
ಯಾವುದೇ ಪೂಜೆ ಹೋಮಗಳಿಗಿಂತ ನೀವೇ ಸ್ವತ: ಪಾರಾಯಣ ಮಾಡಿಕೊಂಡು ಬರುವುದು
ಉತ್ತಮವಾಗಿದೆ .ಕುಜ ಭಾಧಕಾಧಿಪತಿಯಾಗಿರುವುದರಿಂದ ನಾಗ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾ ಬನ್ನಿರಿ .
ಕುಂಭ : ಸಾಡೇ ಸಾತ್ ಶನಿಯ ದೋಷ ನಿವಾರಣೆಗಾಗಿ ನಿತ್ಯವೂ ಶಿವ /ವಿಷ್ಣು ಸಹಸ್ರನಾಮ ಪಾರಾಯಣ
ಮಾಡುತ್ತಾ ಬನ್ನಿರಿ .ಶುದ್ಧವಾದ ಎಳ್ಳೆಣ್ಣೆಯನ್ನು ದೇವರಿಗೆ ಅರ್ಪಿಸಬಹುದು ಅಥವಾ ಮನೆಯಲ್ಲಿ
ದೇವರಿಗೆ ಉಪಯೋಗಿಸಬಹುದು .ಗುರು ನಿಮಗೆ ಅನುಕೂಲಕರ ಸ್ಥಾನದಲ್ಲಿ ಇದ್ದಾನೆ .ಮನೆ ಕಟ್ಟುವ
ನಿಮ್ಮ ಕನಸು ನನಸಾಗಲಿದೆ .ಜೀವನದಲ್ಲಿ ಬೆಳವಣಿಗೆಯ ಕಾಲ ನಿಮ್ಮದಾಗಿದೆ .ಆರೋಗ್ಯದ ಸಮಸ್ಯೆ
ಇದ್ದಲ್ಲಿ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು .ಜ್ವರ ಭಾಧೆ ಕಾಡುವ ಸಾಧ್ಯತೆಯನ್ನು ಗ್ರಹರು
ತಿಳಿಸುತ್ತಿದ್ದಾರೆ .ಮಳೆಗೆ ಒದ್ದೆಯಾಗುವುದನ್ನು ಕಡಿಮೆ ಮಾಡಿಕೊಳ್ಳಿರಿ . ಕೆಲವೊಂದು ವ್ಯವಹಾರಗಳು
ನಿಮ್ಮ ತಪ್ಪಾದ ಲೆಕ್ಕಾಚಾರದಿಂದ ಸಮಸ್ಯೆಯನ್ನು ತರಲಿದೆ .ಗಣಪತಿ ದೇವರನ್ನು ಪ್ರಾರ್ಥನೆ ಮಾಡಿರಿ .
ಮೀನ : “ಏನಿದ್ದರೇನು ,ಮನಸ್ಸಿಗೆ ನೆಮ್ಮದಿಯೊಂದು ಇಲ್ಲದೊಡೆ ,” ಜನ್ಮ ರಾಶಿಯಲ್ಲಿ ,ರಾಹು
,ದ್ವಿತೀಯಾದಲ್ಲಿ ಕುಜ ,ಸಾಡೇ ಸಾತ್ ಶನಿ [ವಕ್ರಿ]ತೃತೀಯಾದಲ್ಲಿ ಗುರು ,ಸುಖ ಸ್ಥಾನದಲ್ಲಿ ರವಿ
,ಪಂಚಮದಲ್ಲಿ ಶುಕ್ರ ,ಬುಧ ,ಸಪ್ತಮದಲ್ಲಿ ಕೇತು ,ಅಂದರೆ ಎಲ್ಲರೂ ಪ್ರತಿಕೂಲ ಸ್ಟಿತಿಯಲ್ಲಿ ಇರುವಾಗ
ಒಂದೇ ಪರಿಹಾರವೆಂದರೆ ನೀವು ಮಾಡುವ ಯಾವುದೇ ಕೆಲಸವನ್ನು ಎಚ್ಚರದಿಂದ ಮಾಡುವುದು .ನವಗ್ರಹ
ಸ್ತೋತ್ರ ಪಾರಾಯಣ ಮಾಡುವುದು .”ನಮ : ಸೂರ್ಯಾಯ , ಚಂದ್ರಾಯ,ಮಂಗಳಾಯ ,ಬುಧಾಯ ಚ
!ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮ : ನವಗ್ರಹ ದೇವತಾಭ್ಯೋ ನಮ : ಓಂ ಶಂ
ಶನೈಶ್ಚರಾಯನಮ: ಪ್ರತಿನಿತ್ಯ 108 ಬಾರಿ ಹೇಳುತ್ತಾ ಬರಬೇಕು .ಕುಳ ದೇವರ ದರ್ಶನ ಮಾಡಿಕೊಂಡು
ಬನ್ನಿರಿ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿ ಕೊಡಲಾಗುವುದು .ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು .ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು
.







