ವಾರ ಭವಿಷ್ಯ
ದಿನಾಂಕ 06.04.2025 ರಿಂದ 12.04.2025
ವಿಶೇಷ ದಿನಗಳು :06.04.2025………ಶ್ರೀ ರಾಮ ನವಮೀ
ಮೇಷ : ವೃತ್ತಿರಂಗದಲ್ಲಿ ಸ್ವಲ್ಪ ಅವಮಾನದ ಪ್ರಸಂಗಗಳು ನಡೆದು ಮನಸ್ಸಿಗೆ ಸ್ವಲ್ಪ ನೋವು ಉಂಟಾದೀತು. ಕಾರ್ಯರಂಗದಲ್ಲಿ ವ್ಯವಹಾರದಲ್ಲಿ ಕಿರಿ ಕಿರಿ ಇರುತ್ತದೆ. ಅತಿಯಾದ ಸ್ನೇಹ ,ಸಲುಗೆ,ಕಲುಷಿತ ಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಹಿನ್ನೆಡೆ ಉಂಟಾಗುವ ಸಾಧ್ಯತೆ ಇರುತ್ತದೆ.ಅವಿವಾಹಿತರಿಗೆ ಮೇ 14 ರ ವರೆಗೆ ಉತ್ತಮ ಅವಕಾಶ ಇರುತ್ತದೆ. ವಿದೇಶಕ್ಕೆ ಹೋಗುವ ಅವಕಾಶ ಸುಲಭವಾಗಿ ಒದಗಿ ಬರಲಿದೆ. ಸಂಗಾತಿಯ ಜೊತೆಗೆ ಹೊಂದಾಣಿಕೆಯ ಜೇವನ ಅತೀ ಅವಶ್ಯವಿರುತ್ತದೆ. ಬೆಲೆ ಬಾಳುವ ವಸ್ತುಗಳ ಖರೀಧಿ ಮಾಡಲಿದ್ದೀರಿ. ಏಪ್ರಿಲ್ 13 ರ ನಂತರ ಕೆಲವೊಂದು ಬದಲಾವಣೆಗಳನ್ನು ಕಾಣಲಿದ್ದೀರಿ. ಆದಿತ್ಯ ಹೃದಯ ಮಂತವನ್ನು ಪಾರಾಯಣ ಮಾಡುತ್ತಾ ಬನ್ನಿರಿ.
ವೃಷಭ : ಈ ಬಾರಿ ದೈವಾನುಗ್ರಹ ಉತ್ತಮವಿದ್ದು, ನಿಮ್ಮ ಎಣಿಕೆಯಂತೆ ಕೆಲಸಗಳೆಲ್ಲವೂ ನಡೆಯಲಿದೆ. ಮನೆ ನಿರ್ಮಾಣ, ಕಟ್ಟಡ ನಿರ್ಮಾಣಕ್ಕೆ ಅಡಿಪಾಯ,ತಯಾರಿ ನಡೆಯಲಿದೆ. ಸ್ಥಿರ ವಸ್ತುಗಳ ಕ್ರಯ ವಿಕ್ರಯಗಳಿಗೆ ಸಕಾಲವಿದಾಗಿದೆ. ಬಂಧು ಮಿತ್ರರ ಸಹಕಾರ ಒದಗಿ ಬರಲಿದೆ. ವಾದ ವಿವಾದಗಳು ಬರುವ ಸಾಧ್ಯತೆ ಇರುವುದರಿಂದ ರಾಜೀ ಮನೋಭಾವದಿಂದ ಅದನ್ನು ಇತ್ಯರ್ಥ ಗೊಳಿಸಿದರೆ ಒಳ್ಳೆಯದು. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಕಿರುಪ್ರವಾಸ ನಿಮಗೆ ಮಾನಾಸಿಕ ನೆಮ್ಮದಿಯನ್ನು ತರಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಪ್ರಾಪ್ತಿಯಾಗಲು ಸುವರ್ಣ ಅವಕಾಶ. ಐದಾರು ಕಡೆಗಳಿಂದ ಏಕಕಾಲದಲ್ಲಿ ಉದ್ಯೋಗದ ಕರೆಗಳು ಬರಲಿವೆ.
ಮಿಥುನ : ಅನೇಕ ಸಲ ನೀವು ನಿರ್ಧಾರ ತೆಗೆದುಕೊಳ್ಳುವ ಕಾಲದಲ್ಲಿ ಕೆಲಸಗಳು ಮುಗಿದಿರುತ್ತವೆ. ಕುಜ ನೀಚನಾಗಿ ದ್ವಿತೀಯಾದಲ್ಲಿ ಬಂದಿರುವುದು,ನಿಮ್ಮ ಮಾತಿನಲ್ಲಿ ಹಿಡಿತವನ್ನು ಸಾಧಿಸಲು ಸೂಚನೆಯಾಗಿರುತ್ತದೆ. ಅನಾರೋಗ್ಯದ ತೊಂದರೆ ಕಡಿಮೆಯಾಗಲಿದೆ. ಅಮ್ಮನವರ ಅನಾರೋಗ್ಯ ಪರಿಸ್ಥಿತಿ ಮುಂದುವರಿಯಲಿದೆ. ನಿಮ್ಮ ಹಿರಿಯ,ಕಿರಿಯರೊಡನೆ ಅಭಿಪ್ರಾಯ ಭೇಧ ಕಂಡುಬರಲಿದೆ. ಆತ್ಮೀಯರೊಡನೆ ತಾತ್ವಿಕ ಕಲಹ, ಮಕ್ಕಳಿಗೆ ಆರೋಗ್ಯ ಹಾನಿ ಬರುವ ಸಾಧ್ಯತೆ ಇದೆ. ದೇವಿ ಸ್ವರೂಪಿ ನಿಮ್ಮ ಮಗಳಲ್ಲಿ ಲಲಿತಾ ಸಹಸ್ರನಾಮ ಪಾರಾಯಣ ನಿತ್ಯವೂ ಮಾಡುವಂತೆ ತಿಳಿಸಿ. ನೀವು ಮಾಡುತ್ತಿರುವ ಯಾವುದೇ ವ್ಯವಹಾರದಲ್ಲಿ ಶತ್ರುಕಾಟ ಇರುತ್ತದೆ.
ಕರ್ಕಾಟಕ : ಅಷ್ಟಮದ ಶನಿಯ ಕಾಟದಿಂದ ಬಿಡುಗಡೆಯಾಗಿದ್ದೀರಿ. ನೀಚ ಕುಜ ನಿಮ್ಮ ಜನ್ಮ ರಾಶಿಗೆ ಬಂದಿದ್ದಾನೆ. ಮನೆಯಲ್ಲಿ ಮಾತು ಮಾತಿಗೆ ಸಂಗಾತಿಯ ಕಿರಿಕಿರಿ ಇರುತ್ತದೆ. ದುರ್ಗೆಯ ಆರಾಧನೆಯೊಂದೇ ಇದಕ್ಕೆ ಪರಿಹಾರವಾಗಿರುತ್ತದೆ. ಪಿತ್ತ ಉಷ್ಣ ಪೀಡೆ ನಿಮ್ಮನ್ನು ಕಾಡಲಿದೆ. ಮೇ 14 ಕ್ಕೆ ಗುರು ವ್ಯಯಕ್ಕೆ ಬರಲಿದ್ದಾನೆ. ಹಿರಿಯರ ಅನಾರೋಗ್ಯವನ್ನು ನೋಡುವ ಸಮಯವಾಗಿದೆ. ರಾಜಕೀಯ ನೇತಾರರಿಗೆ ಒಳ್ಳೆಯ ಸಮಯವಾಗಿದೆ. ಮಾತಿನಲ್ಲಿ ಹಿಡಿತವಿರಲಿ. ತನ್ನವರೇ ಶತ್ರುಗಳಾದಾಗ ಹಿತವರು ಯಾರು? ಸ್ವತಂತ್ರ ವೃತ್ತಿಯವರಿಗೆ ಕ್ಷೇತ್ರ ವಿಸ್ತರಣೆಗೆ ಅವಕಾಶವಿದೆ. ವಿವಾದಗಳಿಂದ ದೂರ್ವಿದ್ದಷ್ಟೂ ಕ್ಷೇಮ.ತಾಳ್ಮೆಯನ್ನು ಬೆಳೆಸಿಕೊಳ್ಳಿರಿ. ದೂರ್ ಪ್ರಯಾಣದ ಯೋಗವಿದೆ.
ಸಿಂಹ : ದಿನಾಂಕ 06.04.2025 ರವರೆಗೆ ಕುಜ ವ್ಯಯದಲ್ಲಿ ಇರುತ್ತಾನೆ. ಅಷ್ಟಮದಲ್ಲಿ ಪಂಚ ಗ್ರಹರು ಇರುತ್ತಾರೆ. ಎಪ್ರಿಲ್ 13 ರಂದು ರವಿ ಮೇಷ ರಾಶಿಗೆ ಬರುತ್ತಾನೆ. ಒಂದು ವಿಶಿಷ್ಟ ಅನುಭವದ ವಾರ. ನಿಮ್ಮ ಆತ್ಮ ವಿಶ್ವಾಸ ಹಾಗೂ ಕಠಿಣ ಪರಿಶ್ರಮ ,ಸ್ವಚ್ಛವಾದ ಮನಸ್ಸು ನಿಮ್ಮನ್ನು ಮುಂದಕ್ಕೆ ಕರೆದೊಯ್ಯಲು ಸಹಾಯಕವಾಗಲಿದೆ.ಅಹಂ ನಿಂದ ಹೊರಗೆ ಬನ್ನಿರಿ. ಪ್ರತಿಯೊಂದಕ್ಕೂ ನಮಗೆ ನವಗ್ರಹರ ,ದೈವ ,ದೇವರ, ಗುರು ಹಿರಿಯರ ಅನುಗ್ರಹ ಬೇಕು. ಎಲ್ಲರೂ ನಿಮ್ಮನ್ನು ಕೈ ಬಿಟ್ಟಾಗ ನಿಮ್ಮ ಪರಿಸ್ಥಿತಿಯನ್ನುಒಮ್ಮೆ ನೆನಪಿಸಿ ಕೊಳ್ಳಿರಿ. ನಿಮ್ಮ ಮೂಲ ಜಾತಕವನ್ನು ಪರಿಶೀಲಿಸುವುದು ಅತ್ಯಂತ ಅಗತ್ಯವಾಗಿದೆ. ಅನಾರೋಗ್ಯವಿದ್ದರೆ ವೈದ್ಯರನ್ನು ಭೇಟಿಯಾಗುವುದು ಅಗತ್ಯವಿದೆ. ನಾಗ ದೇವರ ಪ್ರಾರ್ಥನೆ ಅಗತ್ಯವಿದೆ. ವಾದ –ವಿವಾದಗಳಿಂದ ದೂರವಿರಬೇಕು.
ಕನ್ಯಾ : ನಿಮ್ಮ ಪ್ರಾಮಾಣಿಕತೆ, ಆತ್ಮವಿಶ್ವಾಸ ,ನಿಮ್ಮನ್ನು ಸಫಲತೆಯ ಕಡೆಗೆ ಒಯ್ಯಲಿದೆ. ದೈವಾನುಗ್ರಹ ಇರುವ ಸಮಯ. ಸಪ್ತಮದಲ್ಲಿ ಇರುವ ಪಂಚ ಗ್ರಹರು ನಿಮ್ಮ ಉದ್ಯೋಗದಲ್ಲಿ,ಇತರ ಯಾವುದೇ ವ್ಯವಹಾರದಲ್ಲಿ ಹಲವು ರೀತಿಯ ವೈರುಧ್ಯಗಳನ್ನುಗೋಚರಕ್ಕೆ ತರಲಿವೆ. ನಮ್ಮ ಪಂಚೇಂದ್ರಿಯಗಳು ನಮ್ಮ ಮನಸ್ಸನ್ನು ಚಂಚಲತೆಗೆ ತರಲಿದೆ. ನಾವು ನಮ್ಮಲ್ಲಿ ದೃಢತ್ವವನ್ನು ಬೆಳೆಸಿಕೊಂಡು ಹೋಗಬೇಕು. ಅನಾವಶ್ಯಕ ಖರ್ಚು ವೆಚ್ಚಗಳು,ಕುಟುಂಬದಲ್ಲಿ ವೈಮನಸ್ಸು ಬರುವ ಸೂಚನೆಯನ್ನು ರವಿ ತಿಳಿಸುತ್ತಿದ್ದಾನೆ. ವಿದ್ಯಾರ್ಥಿಗಳು ವಿದೇಶಕ್ಕೆ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಪ್ರೀತಿ ಪ್ರೇಮದಲ್ಲಿ ವೈಫಲ್ಯತೆ ಬರುವ ಸಾಧ್ಯತೆ ಇರುತ್ತದೆ. ಧೈರ್ಯವಾಗಿರಿ.
ತುಲಾ : ಗುರು ಮೇ 14 ರ ವರೆಗೆ ಅಷ್ಟಮದಲ್ಲಿ ಇರುವಾಗ ಉಷ್ಣ ವಾಯು ಪ್ರಕೋಪ ತೋರಿ ಬರಲಿದೆ. ಮಕ್ಕಳೊಂದಿಗೆ ವಿರಸ ಸಲ್ಲದು. ಆದರೆ ಆರನೆಯ ಮನೆಯಲ್ಲಿ ಪಂಚ ಗ್ರಹರು ಬಂದಿರುವುದು ಅನೇಕ ರೀತಿಯಲ್ಲಿ ಧನಾಗಮವಾಗಲಿದೆ. ನೀವು ಮಾಡಲಿರುವ ಯಾವುದೇ ಉದ್ಯೋಗ ವ್ಯವಹಾರದಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆಯ ಮಾತನ್ನು ಕೇಳಲಿರುವಿರಿ. ವಿದ್ಯಾರ್ಥಿಗಳಿಗೆ ಉತ್ತಮವಾದ ಸಮಯ. ಗೃಹ, ವಾಹನ ಕೊಳ್ಳುವ ಸಮಯ. ಭೂಮಿಯ ಬಗ್ಗೆ ವಾದ ವಿವಾದಗಳು ಕಂಡು ಬರುತ್ತಿದೆ. ಯಾವುದೇ ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನುಇಡುವುದು ಅಗತ್ಯವಿದೆ. ಒಳ್ಳೆಯ ಮನಸ್ಸಿದ್ದರೆ ಒಳ್ಳೆಯ ಫಲ ಸಿಗಲಿದೆ.
ವೃಶ್ಚಿಕ : ಗುರುವಿನ ಅನುಗ್ರಹ ಉತ್ತಮವಾಗಿ ದೊರೆಯಲಿದೆ. ಹೆಚ್ಚಿನ ಗ್ರಹರು ನಿಮಗೆ ಅನುಕೂಲವನ್ನು ಕೊಡಲಿದ್ದಾರೆ. ಮೇ 14 ರ ವರೆಗೆ ಉತ್ತಮವಾದ ಸಮಯವೆಂದು ಹೇಳಬಹುದು. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ.ತಮ್ಮ ಇಚ್ಚೆಯಂತೆ ಯೋಜನೆಗಳು ಸಫಲವಾಗಿ ಸಾಂಸಾರಿಕವಾಗಿ ಸುಖ ಸುಧಾರಿಸಲಿದೆ. ಮಕ್ಕಳ ಬಗ್ಗೆ ಅವರ ನಡವಳಿಕೆಯ ಬಗ್ಗೆ ನಿಮಗೆ ಸಮಾಧಾನವಿರುವುದಿಲ್ಲ. ಪಂಚಮದಲ್ಲಿರುವ ಗ್ರಹರೇ ಇದಕ್ಕೆ ಕಾರಣ. ಶನಿ ,ರವಿ ಶುಕ್ರ ,ಬುಧ ,ರಾಹು ಇವರಲ್ಲಿ ರವಿ ಎಪ್ರಿಲ್ 13 ರಂದು ಮೇಷ ರಾಶಿಗೆ ಬರಲಿದ್ದು ನಂತರ ಸುಧಾರಣೆಯಾಗಬಹುದು. ಮಕ್ಕಳು ಹೇಳಿದ ಹಾಗೆ ನಡೆದುಕೊಳ್ಳುವುದೇ ಇದಕ್ಕೆ ಸುಲಭವಾದ ಪರಿಹಾರವಾಗಿದೆ. ಅಮೇರಿಕ ದೇಶದಲ್ಲಿ ಪ್ರಾಯಕ್ಕೆ ಬಂದ ಮಕ್ಕಳನ್ನು ಅವರ ಇಷ್ಟದಂತೆ ಇರಲು ಬಿಡುತ್ತಾರೆ.
ಧನು : ಶಿವ /ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಾಗಿದೆ. ಭದ್ರಕಾಳಿ ಪಾರಾಯಣವನ್ನು ಸೇರಿಸಿಕೊಳ್ಳಿರಿ. ಮನೆಗೆ ಬಂದ ಅತಿಥಿಗಳಿಂದ ಉಡುಗೊರೆ ಹಾಗೂ ಉತ್ತಮ ಸಲಹೆಗಳನ್ನು ಪಡೆಯುವಿರಿ. ವಿದ್ಯಾಭ್ಯಾಸದಲ್ಲಿ ಅತಿ ಹೆಚ್ಚಿನ ಪರಿಶ್ರಮದ ಅಗತ್ಯವಿದೆ.ಪ್ರರಿಶ್ರಮಕ್ಕೆ ತಕ್ಕಂತೆ ಫಲವನ್ನು ಪಡೆಯುವಿರಿ. ಧಾರ್ಮಿಕ ಕ್ಷೇತ್ರಗಳಲ್ಲಿ ಬಿಡುವಿಲ್ಲದ ಕೆಲಸವಿರುತ್ತದೆ. ವಾತ ಪಿತ್ತ ಕಫ ಕಾಡುವ ಸಮಯ.ಸುಖ ಸ್ಥಾನದಲ್ಲಿ ಪಂಚ ಗ್ರಹರು ಸಂಚಾರ ಮಾಡುತ್ತಿದ್ದಾರೆ. ಕಲೆ ,ಸಂಗೀತ ಚಿತ್ರೋಧ್ಯಮಕ್ಕೆ ಪ್ರಗತಿದಾಯಕ ಫಲ ಒದಗಿ ಬರಲಿದೆ. ಮನೆಯಲ್ಲಿ ಕಲಹ ಬರದಂತೆ ಜಾಗ್ರತೆ ವಹಿಸಿರಿ. ಯೋಗ್ಯ ವಯಸ್ಕರಿಗೆ ವಿವಾಹದ ಯೋಗ ಕೂಡಿ ಬರಲಿದೆ.ಮೇ 14 ರ ನಂತರವೇ ಮುಂದುವರಿಸಿರಿ.
ಮಕರ : ಬಹಳ ಉತ್ತಮವಾದ ಗುರುಬಲ ಇರುವ ,ಗ್ರಹರ ಅನೇಕರ ಅನುಕೂಲ ಸ್ಥಿತಿ ಇರುವ ಸಮಯ. ಅನೇಕ ವಿಧದಿಂದ ಧನಾಗಮನ ಆಗುವ ಸಮಯ. ಆದರೆ ಖರ್ಚು ಮಿತಿಮೀರದಂತೆ ನೋಡಿಕೊಳ್ಳಬೇಕಾದ ಜವಾಬ್ಧಾರಿಯೂ ನಿಮ್ಮಲ್ಲಿ ಇರುತ್ತದೆ. ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಿರಿ. ಸಪ್ತಮದಲ್ಲಿ ನೀಚ ಕುಜನಿದ್ದಾನೆ. ಸಂಗಾತಿಯೊಂದಿಗೆ ಅನುಮಾನ ಸಲ್ಲದು. ದೇವಿ ಕ್ಷೇತ್ರಕ್ಕೆ ಬಾಗಿನವನ್ನು ಅರ್ಪಿಸಿರಿ. ಅಧಿಕಾರಿ ವರ್ಗದವರಿಗೆ ಕೊಡಬೇಕಾದ ಗೌರವ ಕೊಡಲೇ ಬೇಕು.ಕಲಹ ,ಮನಸ್ತಾಪವನ್ನಂತೂ ಮಾಡಲೇ ಬಾರದು.ಯೋಗ್ಯ ವಯಸ್ಕರಿಗೆ ವಿವಾಹ ಯೋಗ ಕೂಡಿ ಬರಲಿದೆ. ಕೋರ್ಟ್ ವ್ಯವಹಾರಗಳಲ್ಲಿ ಯಶಸ್ಸು ಗಳಿಸುವಿರಿ.
ಕುಂಭ : “ಮಾತು ಆಡಿದರೆ ಆಯ್ತು,ಮುತ್ತು ಒಡೆದರೆ ಹೋಯಿತು “ ದ್ವಿತೀಯಾದಲ್ಲಿ ಪಂಚಗ್ರಹರು ಅದರಲ್ಲಿಯೂ ಶನಿ ,ರವಿ ರಾಹು ಇರುವುದರಿಂದ ಮಾತಿನಲ್ಲಿ,ಹಣದ ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿರುವುದು ಅತೀ ಅಗತ್ಯವಾಗಿದೆ. ಧನಾಗಮನದಲ್ಲಿ ಯಾವುದೇ ತೊಂದರೆ ಇರುವುದಿಲ್ಲ.ಆದರೆ ಖರ್ಚಿಗೂ ಕಡಿಮೆ ಇರುವುದಿಲ್ಲ. ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರವಹಿಸಿರಿ. ನಿಮ್ಮನ್ನು ಎತ್ತರದ ಸ್ಥಾನದಲ್ಲಿ ಕುಳ್ಳಿರಿಸಿ ಹೊಗಳಿ ಹಣವನ್ನು ಕೀಳುವವರು ಇದ್ದಾರೆ. ಸಂಗಾತಿಯೊಂದಿಗೆ ,ಮಕ್ಕಳೊಂದಿಗೆ ಕಲಹ ಬರದಂತೆ ಎಚ್ಚರವಹಿಸಿರಿ. ಕೋರ್ಟ್ ಕಚೇರಿ ಕೇಸ್ ಗಳು ಇದ್ದಲ್ಲಿ ನೀವು ಹಾಜರಾಗಬೇಕಾಗುವ ಸಂದರ್ಭಗಳು ಬರಲಿವೆ.
ಮೀನ : ಜನ್ಮ ರಾಶಿಯಲ್ಲಿ ಪಂಚ ಗ್ರಹರು ಇದ್ದಾರೆ.ಅವರಲ್ಲಿ ಶನಿ ರವಿ ಶುಕ್ರ ರಾಹು ಬುಧ ಇರುವುದರಿಂದ ನಿಮ್ಮ ವ್ಯವಹಾರದಲ್ಲಿಉತ್ತಮ ಧನಾಗಮನ ಇದ್ದರೂ ನಿಮ್ಮ ಜೊತೆಗೆ ಇರುವ ಸಹಾಯಕರಿಂದಲೇ ಸಮಸ್ಯೆ ಬರಲಿದೆ.ಮೇಲಧಿಕಾರಿಗಳ ಕಿರಿಕಿರಿ ಸದಾ ಇರುತ್ತದೆ.ತಂದೆ ಮಕ್ಕಳೊಂದಿಗೆ ಮನಸ್ತಾಪ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರಗತಿ ಕಂಡುಬರಲಿದೆ.ಗೃಹ ಉಪಕರಣಗಳ ವ್ಯವಹಾರದಲ್ಲಿ ಉತ್ತಮ ಲಾಭ ಕಂಡುಬರಲಿದೆ. ನೀವು ಮಾಡುವ ಯಾವುದೇ ಕೆಲಸಗಳಲ್ಲಿ ಸ್ವಚ್ಛತೆ ,ನ್ಯಾಯ ,ಇರಲಿ.ಇನ್ನೊಬ್ಬರು ಬೊಟ್ಟು ಮಾಡದಂತೆ ಎಚ್ಚರವಹಿಸಿರಿ.ತಲೆನೋವು ಕಾಡಲಿದೆ.ನಿರುದ್ಯೋಗಿಗಳು ಉಪಾಯವಿಲ್ಲದೆ ಸಿಕ್ಕಿದ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಬರಲಿದೆ.
.———————————————————————————–
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು.ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು. ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು.


























