ವಾರ ಭವಿಷ್ಯ ದಿನಾಂಕ 05.05.2024 ರಿಂದ 11.05.2024 ರ ವರೆಗೆ
ವಿಶೇಷ ದಿನಗಳು :
12.05.2024 ………
ಶಂಕರ ಜಯಂತಿ .ರಾಮಾನುಜ ಜಯಂತಿ ,
ಕಾರ್ಕಳ ವೆಂಕಟರಮಣ ರಥೋತ್ಸವ
ಮೇಷ : ಗುರು ದ್ವಿತೀಯಾಕ್ಕೆ ಬಂದು ಪೂರ್ಣ ದೈವಾನುಗ್ರಹವನ್ನು ಪಡೆದಿರುವ ಸಂಭ್ರಮದಲ್ಲಿ ಇರುವಿರಿ . ಕುಟುಂಬದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯಲಿದೆ ,ಬರುವ ಆದಾಯದಲ್ಲಿ ಹೆಚ್ಚಾಗಲಿದೆ ವಿವಾಹ ಮಾಂಗಲ್ಯ ಕಾರ್ಯಕ್ರಮಗಳಿಗೆ ಅವಕಾಶಗಳು ಬರಲಿವೆ .ಉದ್ಯೋಗದಲ್ಲಿ ಎಲ್ಲರ ಸಹಕಾರ ದೊರೆಯಲಿದೆ .ವಿದ್ಯಾರ್ಥಿಗಳಿಗೆ ಅವರು ಬಯಸಿದ ಕಾಲೇಜುಗಳಲ್ಲಿ ಸೀಟ್ ದೊರೆಯಲಿದೆ .ಕುಜ ,ರಾಹು ,ಬುಧರ ಬಗ್ಗೆ ನೀವು ಪರಿಹಾರ ಮಾಡಿಕೊಳ್ಳಬೇಕು ಪ್ರತಿಯೊಂದು ವಿಷಯದಲ್ಲಿಯೂ ಎಚ್ಚರ ,ಎಚ್ಚರ ,ಗಂಟಲು ನೋವು ,ಉಷ್ಣ ಸಂಬಂಧ ಸಮಸ್ಯೆಗಳು ಬರಲಿವೆ . ವಾಹನ ಸಂಚಾರದಲ್ಲಿ ,ಗ್ಯಾಸ್ ,ಬೆಂಕಿ ,ಸಿಡಿಲು ಮಿಂಚು ,ವಿದ್ಯುತ್ ಬಗ್ಗೆ ಎಚ್ಚರ ,ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿರಿ .
ವೃಷಭ : ಗುರು ಜನ್ಮ ರಾಶಿಗೆ ಬಂದೇ ಬಿಟ್ಟ ,ಲಾಭ ಕ್ಷೇತ್ರದಲ್ಲಿ ಕುಜ ರಾಹು ಬುಧ ಇದ್ದಾರೆ ,ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ನೀವು ಮಾಡುತ್ತಿರುವ ವಯಕ್ತಿಕ /ಸರಕಾರಿ ಉದ್ಯೋಗದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವಿರಿ . ಉದ್ಯೋಗದಲ್ಲಿ ಸ್ಟಿರತೆಯನ್ನು ಕಾಣುವಿರಿ . ಮನಸ್ಸಿನಲ್ಲಿ ಇರುವ ದುಗುಡತೆ ಕಡಿಮೆ ಆಗಲಿದೆ ಮಕ್ಕಳಿಗೆ ನಿಮ್ಮ ಉತ್ತೇಜನ ದೊರೆಯಲಿದೆ .ನಿಮ್ಮ ಪತ್ನಿಯ ಪೂರ್ಣ ಆರ್ಥಿಕ ಸಹಕಾರದಲ್ಲಿ ನೀವು ಮಿಂಚಲಿದ್ದೀರಿ . ಭೂಮಿ ಖರೀಧಿ ಯೋಗವಿದೆ . ನಿಮ್ಮ ಜೀವನ ಕುಜನನ್ನು ಆಧರಿಸಿಕೊಂಡಿರುತ್ತದೆ .ಆದುದರಿಂದ ಒಂದೂವರೆ ತಿಂಗಳಿಗೊಮ್ಮೆ ಬದಲಾವಣೆಗೆ ,ಏರಿಳಿತಕ್ಕೆ ಒಳ ಪಡುತ್ತದೆ .ಕಚೇರಿ ,ಮನೆ ಬದಲಾವಣೆಯ ಯೋಗವಿದೆ.
ಮಿಥುನ : ಗುರು ನಿಮಗೆ ಸಪ್ತಮಾಧಿಪತಿ ,ಭಾಧಕಾಧಿಪತಿಯಾಗಿ ವ್ಯಯದಲ್ಲಿ ಇರುವುದು .ಖಡ್ಡಾಯವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ ಒಂದು ವರ್ಷದ ಕಾಲ ಪ್ರತಿನಿತ್ಯವೂ ಅಗತ್ಯವಿದೆ . ವಿವಾಹದ ನಿರೀಕ್ಷೆಯಲ್ಲಿ ಇರುವವರಿಗೆ ಇದು ಅಗತ್ಯವಿದೆ . ನಿಮ್ಮ ಮಾತೃಶ್ರೀಯವರ ಬಗ್ಗೆ ನಿಮ್ಮ ಗಮನವಿರಲಿ . ಉದ್ಯೋಗದಲ್ಲಿ ,ವ್ಯಾಪಾರದಲ್ಲಿ ಅಧಿಕ ಲಾಭವನ್ನು ಪಡೆಯುವಿರಿ ,ಎಲ್ಲರ ಸಹಕಾರ ನಿಮಗೆ ದೊರೆಯಲಿದೆ ನಾಗ ದೇವರ ಸ್ಮರಣೆ ಅಗತ್ಯವಿದೆ .ಕಾನೂನು ಪ್ರಕರಣದಲ್ಲಿ ಯಶಸ್ವಿಯಾಗುವಿರಿ ಸಹೋದರ ವರ್ಗದವರ ಸಹಕಾರ ನಿಮಗೆ ಸಿಗಲಿದೆ .ಕೆಲವೊಮ್ಮೆ ಏಕಾಂಗಿತನ ಬಾಧಿಸಲಿದೆ . ಬರುವ ಆದಾಯ ಖರ್ಚಿಗೆ ಹೊಂದಾಣಿಕೆ ಆಗಲಿದೆ .
ಕರ್ಕಾಟಕ : ಗುರುವಿನ ವೃಷಭ ರಾಶಿಗೆ ಆಗಮನ ನಿಮ್ಮ ಜೀವನದ ದಾರಿಯನ್ನೇ ಬದಲಾಯಿಸಲಿದೆ ಅದೃಷ್ಟದ ಬಾಗಿಲು ತೆರೆಯಲಿದೆ . ಕುಟುಂಬದಲ್ಲಿ ಶಾಂತಿ,ನೆಮ್ಮದಿ ಮರುಕಳಿಸಲಿದೆ ,ಉದ್ಯೋಗದಲ್ಲಿ ಭಡ್ತಿ, /ಹೊಸ ಉದ್ಯೋಗ ಪ್ರಾಪ್ತಿ /ಶುಭ ಮಾಂಗಲ್ಯ ಕಾರ್ಯಕ್ರಮಗಳು ನಡೆಯಲಿವೆ .ತಂದೆಯವರೊಂದಿಗೆ ಹಿತ,ಮಿತವಾಗಿ ವ್ಯವಹರಿಸಿರಿ .ಪಿತ್ರಾರ್ಜಿತ ಆಸ್ತಿಯ ಬಗ್ಗೆ ಕಲಹ ಬೇಡ .ನಿಮ್ಮ ಆರೋಗ್ಯದ ಬಗ್ಗೆ ,ಸತಿ-ಪತಿಯರ /ಪ್ರೀತಿ –ಪ್ರೇಮದ ಬಗ್ಗೆ ಬಹಳ ಎಚ್ಚರ ವಹಿಸಬೇಕು ,ತಕ್ಷಣ ಕಲಹ ಆರಂಭವಾಗುವ ಸಾಧ್ಯತೆ ಇರುತ್ತದೆ .ಕ್ರೀಡಾ ಕೂಟದಲ್ಲಿ ಇರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ ಸಿಗಲಿದೆ .
ಸಿಂಹ : ಗುರು ಕರ್ಮ ಕ್ಷೇತ್ರಕ್ಕೆ ಬಂದನು . ಕರ್ಮಾಧಿಪತಿ ಶುಕ್ರ ಲಾಭ ಕ್ಷೇತ್ರದಲ್ಲಿ ಇದ್ದಾನೆ . ನಿಮ್ಮ ಸಂಬಳ ಹೆಚ್ಚಾಗುವ ಸಾಧ್ಯತೆ ,ಜೊತೆಗೆ ಮೇಲಧಿಕಾರಿಗಳ ಒತ್ತಡ ,ಸತತ ದುಡಿಮೆಯಿಂದ ವಿಶ್ರಾಂತಿ ಪಡೆಯಲು ನಿರ್ಧರಿಸುವಿರಿ .ನಿಮ್ಮ ಪ್ರತಿಭೆ ಹೊರ ಪ್ರಪಂಚಕ್ಕೆ ತಿಳಿಯಲಿದೆ .ವ್ಯಾಪಾರಿಗಳು ಹಣ ತೊಡಗಿಸುವ ಮೊದಲು ಯೋಚನೆ ಮಾಡ ತಕ್ಕದ್ದು.ಕೋಪ ಬಿಟ್ಟು ಸಮಾಧಾನದಿಂದ ಎಲ್ಲರಲ್ಲಿ ವ್ಯವರಿಸಿದಲ್ಲಿ ನಿಮಗೆ ಯಾವುದೇ ಸಮಸ್ಯೆ ಇರುವುದಿಲ್ಲ.ದಾಂಪತ್ಯ ಜೀವನದಲ್ಲಿ ಪರಸ್ಪರ ನಂಬಿಕೆ ಮುಖ್ಯ .ಇದನ್ನು ಮರೆಯದಿರಿ . ವಿದ್ಯಾರ್ಥಿಗಳು ಯಶಸ್ವಿಯಾಗುವರು . ಹಣಕಾಸಿನ ಸಮಸ್ಯೆ ಇರುವುದಿಲ್ಲ .
ಕನ್ಯಾ : ಗುರುವಿನ ಬದಲಾವಣೆಯೇನೋ ಆಯ್ತು . ಆದರೆ ಸಪ್ತಮದಲ್ಲಿ ಕುಜ ರಾಹು ಬುಧ , ಅಷ್ಟಮದಲ್ಲಿ ಶುಕ್ರ ಮತ್ತು ರವಿ ಇರುವಾಗ ಬದಲಾವಣೆಯ ಲಾಭ ಕಂಡುಬರುವುದಿಲ್ಲ ,ಸತಿ ಪತಿಯರ ನಡುವೆ ….ಒಂದೋ ನೀನಿರಬೇಕು ಅಥವಾ ನಾನಿರಬೇಕು ಎಂಬ ಮಾತುಗಳು ಬರಲಿವೆ .ಇದಕ್ಕೆ ಪರಿಹಾರವೆಂದರೆ ಕೊಲ್ಲೂರಿನ ಮೂಕಾಂಬಿಕೆಗೆ ಬಾಗಿನ ಆರ್ಪಣೆ ,ಅಹಂಕಾರದ ತ್ಯಾಗ ಇದು ಅತೀ ಮುಖ್ಯವಾಗಲಿದೆ . ನಿಮ್ಮ ಸಹೋದರಿಗೂ ಇದೇ ರೀತಿಯ ಸಮಸ್ಯೆ ಕಾಡಲಿದೆ . ವಿದ್ಯಾರ್ಥಿಗಳು ಕಲಿಯುವುದನ್ನು ಬಿಟ್ಟು ಪ್ರೀತಿ ಪ್ರೇಮದ ಬಗ್ಗೆ ಮನಸ್ಸನ್ನು ಕೊಡಲಿದ್ದೀರಿ ನೆರೆಹೊರೆಯವರ ಭೂವಿವಾದದ ಬಗ್ಗೆ ಶಾಶ್ವತ ಪರಿಹಾರ ದೊರೆಯುವಂತೆ ಮಾಡಿರಿ .
ತುಲಾ : ಗುರು ಅಷ್ಟಮಕ್ಕೆ ಬಂದ .ಅಷ್ಟಮಾಧಿಪತಿ ಶುಕ್ರ ಸಪ್ತಮದಲ್ಲಿ ರವಿಯೊಂದಿಗೆ . ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಕಂಡು ಬರುವ ಸಾಧ್ಯತೆ .ಒಂದು ವರ್ಷಗಳ ಕಾಲ ಸಹೋದರರ ಜೊತೆಗೆ ಹೊಂದಾಣಿಕೆಯಿಂದ ಇರುತ್ತ, ಮೃತ್ಯುಂಜಯ ಮಂತ್ರವನ್ನು ದಿನಕ್ಕೆ 108 ಬಾರಿ ಹೇಳುತ್ತಾ ಬರಬೇಕು .ನಿಮ್ಮ ಪ್ರಾಯಕ್ಕೆ ಸರಿಯಾಗಿ ,ಎಚ್ಚರವಾಗಿರಬೇಕು ,ಪತನ ಭಯ ವಿದೆ ,ವಯಸ್ಕರು ಪರಸ್ತ್ರೀ ಯರ ಬಗ್ಗೆ ಜಾಗ್ರತೆಯಾಗಿ ಇರಬೇಕು , ನಿಮ್ಮ ಸುತ್ತಲೂ ಕಾಮೆರಾ ಇಡಲಾಗಿದೆ ಎಂಬ ಭಾವನೆ ನಿಮ್ಮ ಮನಸ್ಸಿನಲ್ಲಿ ಇರಬೇಕು . ಹನೀಟ್ರಾಪ್ ಬಲೆಗೆ ಬೀಳ ಬಹುದು . ದುರ್ಗಾ ಲಲಿತಾ ಸಹಸ್ರನಾಮ ಪಾರಾಯಣ ನಿತ್ಯವೂ ಮಾಡುವುದು ಅಗತ್ಯವಿದೆ .
ವೃಶ್ಚಿಕ : ಬಹಳ ಅದೃಷ್ಟದ ಕಾಲವಿದಾಗಿದೆ . ಸಪ್ತಮದಲ್ಲಿ ಗುರುವಿನ ಪ್ರವೇಶವಾಗಿದೆ .6 ರಲ್ಲಿ ರವಿ ಮತ್ತು ಶುಕ್ರರಿದ್ದಾರೆ ಲಾಭ ಕ್ಷೇತ್ರದಲ್ಲಿ ಕೇತು ಇದ್ದಾನೆ ಬರುವ ಆದಾಯಕ್ಕೆ ಕೊರತೆಯಿರುವುದಿಲ್ಲ .ರಾಜಕೀಯದಲ್ಲಿ ಇರುವವರಿಗೆ ಉನ್ನತ ಸ್ಥಾನ ಮಾನ ದೊರೆಯಲಿದೆ .ಎಲ್ಲರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರಲಿವೆ .ದಾಂಪತ್ಯದಲ್ಲಿ ಹೊಂದಾಣಿಕೆ ಕೂಡಿ ಬರಲಿದೆ .ಸಾಮಾಜಿಕ ಸಮಾರಂಭಗಳಲ್ಲಿ ಮುಂದಾಳತ್ವ ವಹಿಸುವಿರಿ . ಪ್ರಭಾವಿ ಜನರ ಸ್ನೇಹ ಲಭಿಸ;ಲಿವೆ. ಚಿನ್ನ ಬೆಳ್ಳಿ ಖರೀದಿಸುವ ಸಮಯವಾಗಿದೆ .ಸಾಕು ಪ್ರಾಣಿಗಳಿಂದ ತೊಂದರೆಯಾಗುವ ಸಾಧ್ಯತೆ .ಎಚ್ಚರಿಕೆ ಇರಲಿ .4 ರಲ್ಲಿ ಇರುವ ಶನಿಗಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ . ವಾಹನ ಚಲಾಯಿಸುವಾಗ ,ಹಣದ ವ್ಯವಹಾರ ಮಾಡುವಾಗ ಎಚ್ಚರವಿರಲಿ .
ಧನು : ಗುರು 6 ನೇ ಮನೆಗೆ ಅಂದರೆ ರೋಗದ ಮನೆ ಶತ್ರುವಿನ ಮನೆಗೆ ಬಂದ .ಮನೆಯವರೇ ಶತ್ರುಗಳಂತೆ ವರ್ತಿಸಲಿದ್ದಾರೆ ಸುಖ ಸ್ಥಾನದಲ್ಲಿ ಕುಜ ,ರಾಹು ,ಬುಧ ಇದ್ದು ,ಪಂಚಮದಲ್ಲಿ ಶುಕ್ರ ಮತ್ತು ರವಿ ಇದ್ದು ಒಟ್ಟಾರೆಯಾಗಿ ನೀವು ತಾಳ್ಮೆ ಸಮಾಧಾನದಿಂದ ಎಲ್ಲರೊಂದಿಗೆಯೂ ಇರಬೇಕಾಗಿದೆ . ಯಾವುದು ನಮ್ಮ ಹಿಡಿತಲ್ಲಿ ಇಲ್ಲವೋ ಅದರ ವಿಷಯಕ್ಕೆ ನಾವು ಹೋಗಬಾರದು ವಿಷ್ಣು ಸಹಸ್ರ ನಾಮ ಪಾರಾಯಣ ಒಂದು ವರ್ಷಗಳ ಕಾಲ ಮಾಡಬೇಕಿದೆ. ಪತ್ನಿಯ ಆರೋಗ್ಯದ ಬಗ್ಗೆ ನಿಮ್ಮ ಗಮನ ಅಗತ್ಯವಿದೆ . ತಾಯಿಯವರ ಆರೋಗ್ಯದ ಬಗ್ಗೆಯೂ ಗಮನಬೇಕು .ನಿಮಗೆ ಬಿಪಿ ಷುಗರ್ ಸಮಸ್ಯೆ ಇದ್ದರೆ ತಿಂಗಳಿಗೊಮ್ಮೆ ಪರಿಶೀಲನೆ ಅಗತ್ಯವಿದೆ .
ಮಕರ : ನಿಮ್ಮ ಅದೃಷ್ಟದ ಸಮಯ ಬಂದೇ ಬಿಟ್ಟಿದೆ .ರಾಜಕೀಯದಲ್ಲಿ ಇರುವವರು ಉನ್ನತ ಸ್ಥಾನಕ್ಕೆ ಏರಲಿದ್ದಾರೆ . ಹಣದ ಆದಾಯದ ಹರಿವು ನಿಮ್ಮ ಮನೆಗೆ ಲಕ್ಷ್ಮಿಯಂತೆ ಬರಲಿದ್ದಾಳೆ .ಮಕ್ಕಳ ವಿಷಯವಾಗಿ ಸಂತೋಷ ಪಡಲಿದ್ದೀರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೀರಿ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ .ನಿಮ್ಮ ನಂಬಿಕಸ್ತ ಮಿತ್ರರ ಜೊತೆಗೆ ವ್ಯಾಪಾರ ಆರಂಭಿಸುವಿರಿ .ಸಾಡೇ ಸಾತ್ ಶನಿಯ ಪ್ರಭಾವದಿಂದಾಗಿ ನಿಮ್ಮ ನೇರವಾದ ಮಾತುಗಳಿಂದಾಗಿ ಬಂಧುವರ್ಗದವರಲ್ಲಿ ಕಿರಿಕಿರಿ ಉಂಟಾಗಲಿದೆ . ಉದ್ಯೋಗಸ್ತರಲ್ಲಿ ಭಡ್ತಿ ಯ ಭಾಗ್ಯ ,ವರ್ಗಾವಣೆಯ ಭಾಗ್ಯ ಒದಗಿ ಬರಲಿದೆ .
ಕುಂಭ : ಗುರು ಸುಖ ಸ್ಥಾನಕ್ಕೆಬರುವುದರ ಜೊತೆಗೆ ಹಲವಾರು ಸಮಸ್ಯೆಗಳಿಂದ ಹೊರ ಬರುವ ಸುಸಂದರ್ಭ ನಿಮ್ಮದಾಗಲಿದೆ . ತೃತೀಯಾದಲ್ಲಿ ಶುಕ್ರ ರವಿ ನಿಮ್ಮ ಆದಾಯದ ಮಟ್ಟವನ್ನು ಪುನರಪಿ ಮರಳಿ ಹಿಂದಿನ ದಿನಗಳಂತೆ ಉನ್ನತ ಮಟ್ಟಕ್ಕೆ ತರಲಿದ್ದಾರೆ .ದ್ವಿತೀಯಾದ ಕುಜ ರಾಹು ಬುಧ ಮತ್ತು ಜನ್ಮ ರಾಶಿಯಲ್ಲಿರುವ ಶನಿ ಜೀವನದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುವಂತೆ ಮಾಡಲಿದ್ದಾರೆ .ಅದೇನು ಗರ್ವ ,ಸಿಟ್ಟು ,ಅಹಂಕಾರ . ಮಾತಿನಲ್ಲಿ ಮಧುರತೆ ಇರಲಿ ಎಲ್ಲಾ ಪ್ರಾಣಿಗಳು ಮಾನವರು ಒಳ್ಳೆಯ ಮಾತಿನಿಂದ ಖುಷಿಪಡುತ್ತಾರೆ ,ಹಾಗಿರುವಾಗ ಒಂದು ಮಾತಿಗೂ ದರಿದ್ರವೇ ಪಾಲುಗಾರಿಕೆಯ ವ್ಯಾಪಾರ ಸಧ್ಯಕ್ಕೆ ಬೇಡ ..ನಿಮ್ಮ ಮನಸ್ಸು ನಿಮ್ಮ ಜೊತೆ ಇರುವುದಿಲ್ಲ .
ಮೀನ :ನಿಮ್ಮ ಕಳೆದುಹೋದ ಸಂತೋಷದ ದಿನಗಳು ಮರಳಿ ಬರಲು ಸ್ವಲ್ಪ ಕಾಲ ಬೇಕು . ನಿಮ್ಮ ದಾಂಪತ್ಯದಲ್ಲಿ ಬಿರುಕು ಬರದಂತೆ ನೀವು ಎಚ್ಚರವಾಗಿರಬೇಕು . ಮೊಬೈಲ್ನಲ್ಲಿ ಅನಗತ್ಯ ನಂಬರ್ {ಮಹಿಳೆಯರ /ಪುರುಷರ }ಬೇಡ .ಸಿಕ್ಕಿ ಬಿದ್ದು ಮನೆಯಲ್ಲಿ ರಾದ್ದಾಂತವಾದೀತು .ಸಾಡೇ ಸಾತ್ ಶನಿಯ ಪ್ರಭಾವವನ್ನು ತಗ್ಗಿಸಲು 29.3.2025 ರವರೆಗೆ ನಿತ್ಯವೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.ಮನೆಯಲ್ಲಿ ಕಲಹ ಪ್ರತಿನಿತ್ಯವೂ ಬರದಂತೆ ಬ್ರಿಟಿಷರು ನಮಗೆ ಬಿಟ್ಟು ಹೋದ …sorry excuse me, thankyou ಈ ಪದಗಳನ್ನು ಬಳಸುತ್ತಾ ಹೋಗಿ . ಮನೆಯೇ ವನವಾಸ ಎಂಬಂತಾದೀತು .ತಾಳ್ಮೆ ಸಹನೆ ಇರಲಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು ,ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುತ್ತದೆ . ವಿವಾಹ ಹೊಂದಾಣಿಕೆ/ವಾಸ್ತು ಸಲಹೆ ತಿಳಿಸಲಾಗುವುದು .






































