


ವಾರ ಭವಿಷ್ಯ ದಿನಾಂಕ 05.01.2025 ರಿಂದ 11.01.2025 ರ ವರೆಗೆ
ಮೇಷ : ದ್ವಿತೀಯಾದ ಗುರು ಉತ್ತಮ ದೈವ ಬಲವನ್ನು ಒದಗಿಸುತ್ತಿದ್ದು ನಿಮ್ಮ ಪ್ರತಿಯೊಂದು
ಉದ್ಯೋಗ,ವ್ಯವಹಾರ ಬಹಳ ಸುಲಭವಾಗಿ ಕೈಗೂಡಲಿದೆ .ಕುಜನಿಗೆ ಸರಿಯಾದ ಪರಿಹಾರ ಬೇಕು.ಶೀತ
ಕೆಮ್ಮು ಜ್ವರ ಅಸಿಡಿಟೀ ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಅಮ್ಮನವರಿಗೆ ಆರೋಗ್ಯದ ಸಮಸ್ಯೆ
ಇರುತ್ತದೆ. ದುರ್ಗಸ್ತೋತ್ರ ಪಾರಾಯಣದ ಅಗತ್ಯವಿದೆ. ಸಮಾಜದಲ್ಲಿ ಗೌರವ-ಸ್ಥಾನ ಮಾನ
ಪ್ರಾಪ್ತಿಯಾಗಲಿದೆ. ಸ್ವಸಾಮರ್ಥ್ಯದಿಂದ ಧನಾರ್ಜನೆಯನ್ನು ಮಾಡಲಿದ್ದೀರಿ. ಸುದೃಢ ಆರೋಗ್ಯಕ್ಕಾಗಿ
ಆಹಾರ ನಿಯಮ ಪಾಲಿಸುವುದು ಅಗತ್ಯವಾಗಿದೆ. ಜವಾಬ್ದಾರಿ ಹೆಚ್ಚಾಗಲಿದೆ. ನಿಮ್ಮವರ ಸಹಕಾರದಿಂದ ಕೈ
ಹಿಡಿದ ಕೆಲಸ ಪೂರ್ಣಗೊಳ್ಳಲಿದೆ.
ವೃಷಭ : ಇದ್ದಕ್ಕಿದ್ದ ಹಾಗೆ ಎಲ್ಲವೂ ಬದಲಾವಣೆಗೊಂಡು ಸಂತೋಷದಿಂದ ತೇಲಾಡುವಿರಿ. ದೈಹಿಕ
ಮಾನಸಿಕ ಆರೋಗ್ಯ, ಜನರಿಂದ ಮಾನ್ಯತೆ ದೊರೆಯಲಿದೆ . ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ
ಕಾಣುವಿರಿ. ಹೊಸ ವಾಹನ ಖರೀಧಿ ಮಾಡುವಿರಿ.ರವಿ ಮತ್ತು ಬುಧ ಅಷ್ಟಮದಲ್ಲಿ ಇರುವುದರಿಂದ
ರಾಜಕೀಯದಲ್ಲಿ ಇರುವವರಿಗೆ ಒಳ್ಳೆಯ ಸಮಯ,. ಆರೋಗ್ಯದ ಕಡೆಗೆ ನಿಮ್ಮ ಗಮನ ಕೊಡುವುದು
ಅಗತ್ಯವಿದೆ. ಮನೆಯೊಂದನ್ನು ಕೊಳ್ಳುವ ಯೋಚನೆ ಬರಲಿದೆ. ಬಂಧು ಮಿತ್ರರ ಸಹಕಾರ ದೊರೆಯಲಿದೆ.
ದಾಂಪತ್ಯ ಸುಖ ದೊರೆಯಲಿದೆ .ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ಮಕ್ಕಳ ಪ್ರಗತಿ
ವಿಚಾರದಲ್ಲಿಧನ ವ್ಯಯ ಸಂಭವ,.ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ.
ಮಿಥುನ : ಗುರು-ಹಿರಿಯರ ಸರ್ವ ವಿಧದ ಸುಖ ಪ್ರಾಪ್ತಿ , ಧೈರ್ಯ –ಪರಿಶ್ರಮದಿಂದ ಕೂಡಿದ ಕಾರ್ಯ
ವೈಖರಿ,ದಾನ ಧರ್ಮಗಳಲ್ಲಿ ಆಸಕ್ತಿ,ಮೂಡಲಿದೆ .ಗುರುಬಲ ಪ್ರಾಪ್ತಿಗಾಗಿ ನಿತ್ಯವೂ ವಿಷ್ಣು ಸಹಸ್ರನಾಮ
ಪಾರಾಯಣ ಮಾಡಿರಿ. ಸಂಸಾರದಲ್ಲಿ ಸೊನ್ನೆಗೆ ಬಹಳ ಮಹತ್ವವಿದೆ.ಅದು ಸೆಗೆದರೆ ಸಸಾರ ವಾಗುತ್ತದೆ.
ಸಂದರ್ಭಕ್ಕೆ ತಕ್ಕಂತೆ ವಿವೇಕದ ನಡೆನುಡಿ ಅಗತ್ಯವಾಗಿದೆ .ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ
ಉದ್ಯೋಗ ಪ್ರಾಪ್ತಿ ಯೋಗವಿದೆ .ಕೃಷಿಕರಿಗೆ,ಬಟ್ಟೆ ವ್ಯಾಪಾರಿಗಳಿಗೆ ಚಿತ್ರ ನಿರ್ಮಾಪಕರಿಗೆ ಹೋಟೆಲ್
ಮಾಲಕರಿಗೆ ಒಳ್ಳೆಯ ವಾರವಾಗಿದೆ. ಮಕ್ಕಳಿಂದ ಸುಖ ನೆಮ್ಮದಿ ಪಡೆಯಲಿದ್ದೀರಿ ತಾಯಿಯವರ
ಆರೋಗ್ಯದ ಕಡೆಗೆ ಗಮನವಿರಲಿ. ವೈರಾಗ್ಯ ಭಾವನೆಯಿಂದ ಹೊರಗೆ ಬನ್ನಿರಿ.
ಕರ್ಕಾಟಕ : ಗುರು ಲಾಭ ಕ್ಷೇತ್ರದಲ್ಲಿ ಇರುವುದರಿಂದ ಲೋಕಪ್ರಿಯತೆ ,ದೇವತಾ ಭಕ್ತಿ,ಶ್ರದ್ಧೆ
ವೃದ್ಧಿ,ನಿರೀಕ್ಷೆಗೂ ಮೀರಿದ ಧನ ಸಂಪತ್ತಿನ ಅಭಿವೃದ್ಧಿ ಬರಲಿದೆ.ಅಷ್ಟಮದಲ್ಲಿ ಶನಿ ಶುಕ್ರರು
ಇದ್ದಾರೆಚಂದ್ರ ಕೂಡಾ ಕೆಲವೊಮ್ಮೆ ಬರಲಿದ್ದಾನೆ. ಅನಾವಶ್ಯಕ ಸಂಚಾರದಿಂದ ಆರೋಗ್ಯ ಸಮಸ್ಯೆ
ಬರಲಿದೆ.ಒಣ ಕೆಮ್ಮೀನ ಬಾಧೆ ಬರಲಿದೆ.ಮೂತ್ರ ಕೋಶದ ಕಲ್ಲು ಪಿತ್ತ ಕೋಶದ ಕಲ್ಲು,ಮಹಿಳೆಯರಿಗೆ
ಫೈಬ್ರಾಯಿಡ್ ಇತ್ಯಾದಿ ಸಮಸ್ಯೆ ಬಂದು ಸರ್ಜೆರಿ ಮಾಡಬೇಕಾದೀತು. ಮೃತ್ಯುಂಜಯ ಜಪ ನಿತ್ಯವೂ 108
ಬಾರಿ ಮಾಡಲು ಮರೆಯದಿರಿ. ತಂಪು ವಸ್ತುಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು..
ಸಿಂಹ : ಕರ್ಮ ಕ್ಷೇತ್ರದಲ್ಲಿ ಗುರು ಇರುವುದು ,ಕರ್ಮಾಧಿಪತಿ ಶುಕ್ರ ಶನಿಯೊಂದಿಗೆ ಸಪ್ತಮದಲ್ಲಿ
ಇರುವುದು ,ಕೆಲವೊಂದು ಅಪವಾದಗಳನ್ನು ಅನಾವಶ್ಯಕವಾಗಿ ಪಡೆಯಲಿದ್ದೀರಿ. ಕುಜ ವ್ಯಯದಲ್ಲಿ ಇದ್ದಾನೆ. ಸಂಗಾತಿಯೊಂದಿಗೆ ಸತ್ತ ಪುಟ್ಟ ವಿಷಯಗಳಿಗೂ ಕೋಪ ಮಾಡುವುದು ನಡೆಯುತ್ತಾ ಇರುತ್ತದೆ.
ಲಲಿತಾ ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ. ತಾಳ್ಮೆ ಅತೀ ಅಗತ್ಯವಾಗಿದೆ. ಉದ್ಯೋಗ
ಮಾಡುವಲ್ಲಿಯಾಗಲೀ ,ಯಾವುದೇ ವ್ಯವಹಾರ ಮಾಡುವಲ್ಲಿ ತನ್ನ ಪಾಲುದಾರನೊಂದಿಗೆ
ಹೊಂದಾಣಿಕೆಯೊಂದಿಗೆ ಹೋಗುವುದು ಅನಿವಾರ್ಯವಾಗಿದೆ.
ಕನ್ಯಾ : ಗುರು ಭಾಗ್ಯ ಕ್ಷೇತ್ರದಲ್ಲಿ ಸಂಚಾರ ಮಾಡುವ ಸಮಯವಾಗಿದೆ. ಭೂಮಿ ಖರೀಧಿ ಮಾಡುವ
ಸಮಯ ಒದಗಿ ಬಂದಿದೆ. ಆರೋಗ್ಯದ ಕಡೆಗೆ ಗಮನ ಹರಿಸಿರಿ ನಿಮ್ಮ ದ್ವಿತೀಯಾಧಿಪತಿ , ಭಾಗ್ಯಾಧಿಪತಿ
ಶುಕ್ರ 6ನೆಯ ಮನೆಯಲ್ಲಿ ,ಶನಿಯೊಂದಿಗೆ ಇರುವುದು ಹಿರಿಯರೊಂದಿಗೆ ಮಾತಿನ ಮೂಲಕ ಕೆಲವೊಂದು
ಅನಾಹುತಗಳಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ತಾಳ್ಮೆಯಿಂದ ವರ್ತಿಸಬೇಕು.ವಿದ್ಯಾರ್ಥಿಗಳು
ಪ್ರೀತಿ ಪ್ರೇಮದ ಕಡೆಗೆ ಬಲಿಯಾಗದಂತೆ ಎಚ್ಚರವಹಿಸಬೇಕು. ಸಂಗಾತಿಯೊಂದಿಗೆ ಹೊಂದಾಣಿಕೆ ಇರಲಿ. ಸಭೆ
ಸಮಾರಂಭಗಳಲ್ಲಿ ಭಾಗವಹಿಸುವಿರಿ. ಸನ್ಮಾನ ಗೌರವ ನಡೆಯಲಿದೆ. ನಿಮ್ಮ ವಾಕ್ಚಾತುರ್ಯತೆ ನಿಮ್ಮ
ಗೌರವವನ್ನು ಹೆಚ್ಚಿಸಲಿದೆ.
ತುಲಾ :ಗುರು ಇರುವನು ಅಷ್ಟಮದಲ್ಲಿ,ಶುಕ್ರನಾ ಮನೆಯಲ್ಲಿ,ತನ್ನ ವೈರಿಯ ಮನೆಯಲ್ಲಿ,ಅದೇ ಶುಕ್ರ
ಇರುವನು ಶನಿಯ ಜೊತೆಗೆ ಪಂಚಮದಲ್ಲಿ. ಕಲಹ ಬೇಸರ ಎಲ್ಲರ ಮನೆಯಲ್ಲಿ ಇರುವ ವಿಷಯವಾಗಿದೆ.
ಮನಸ್ಸೇ ಎಲ್ಲದಕ್ಕೂ ಕಾರಣವಾಗಿದೆ. ಯಾರಿಗೂ ತೃಪ್ತಿ ಎನ್ನುವುದು ವಿರಳವಾಗಿದೆ. ಮೃತ್ಯುಂಜಯ
ಜಪ “ತ್ರ್ಯಂಬಕಮ್ …… “ಪ್ರತಿನಿತ್ಯವೂ ಮೇ 14 ರ ವರೆಗೆ ಹೇಳಬೇಕಾಗಿರುವುದು ಅತೀ ಅಗತ್ಯವಾಗಿದೆ.
ಕುಜ ನೀಚನಾಗಿ ಸಪ್ತಮಾಧಿಪತಿ ಕರ್ಮ ಕ್ಷೇತ್ರದಲ್ಲಿ ಇರುವುದರಿಂದ ಅನ್ಯ ವ್ಯಕ್ತಿಗಳ ಬಗ್ಗೆ
ಎಚ್ಚರವಾಗಿರಬೇಕಾಗಿದೆ. ದೈವಾನುಗ್ರಹದ ಕೊರತೆ ಇರುವುದರಿಂದ ಆಸ್ತಿ, ವಾಹನಾದಿ ವಿಷಯಗಳಲ್ಲಿ
ಎಚ್ಚರವಿರಬೇಕು. ಎಚ್ಚರಿಕೆಯ ನಡೆ ಅಗತ್ಯವಾಗಿದೆ.
ವೃಶ್ಚಿಕ : ಸಪ್ತಮದಲ್ಲಿ ಗುರು ಇರುವುದರಿಂದ ,ಸಪ್ತಮಾಧಿಪತಿ ಶುಕ್ರ ವ್ಯಯಾಧಿಪತಿಯಾಗಿ ಶನಿಯೊಂದಿಗೆ
ಇರುವುದು ಶುಭ ,ಅಶುಭ ಫಲವನ್ನು ನೀಡುತ್ತಿದ್ದಾರೆ. ಸಂಗಾತಿಯೊಂದಿಗೆ ಕೇವಲ ಮೂರು
ಶಬ್ದಗಳೊಂದಿಗೆ “ sorry,please ,excuse me ,[ಓಕೆ] ಹೇಳುತ್ತಾ ಶಾಂತ ರೀತಿಯಲ್ಲಿ ಇರುವುದು
ಉತ್ತಮ .ಬೇರೆ ಮಹಿಳೆ /ಪುರುಷರೊಂದಿಗೆ ಬಹಳ ಎಚ್ಚರಿಕೆಯಿಂದ ಕಾಯಾ ವಾಚಾ ಮನಸಾ “ ಇರುವುದು
ಅತೀ ಅಗತ್ಯವಾಗಿದೆ. ದುರ್ಗಾ ಕವಚ ಪಾರಾಯಣ ಅಗತ್ಯವಾಗಿದೆ. ಹಿರಿಯರ ಆರೋಗ್ಯದ ಬಗ್ಗೆ
ಎಚ್ಚರವಹಿಸುವಂತೆ ಶನಿ ಶುಕ್ರರು ಸೂಚನೆ ಕೊಡುತ್ತಿದ್ದಾರೆ.[ಜನವರಿ 28 ರ ವರೆಗೆ ]ಪಾರದರ್ಶಕತೆಗೆ
ಆದ್ಯತೆ ನೀಡಿರಿ.
ಧನು : ಗುರು ಆರನೆಯ ಮನೆಯಲ್ಲಿ ,ಕುಜ ಎಂಟನೆಯ ಮನೆಯಲ್ಲಿ,,ರಾಹು ನಾಲ್ಕನೆಯ ಮನೆಯಲ್ಲಿ
ದೈಹಿಕವಾಗಿ ,ಮಾನಸಿಕವಾಗಿ ,ಆರೋಗ್ಯದ ಕಡೆಗೆ ಗಮನಹರಿಸುವುದು ಅಗತ್ಯವಾಗಿದೆ. ನಿಮ್ಮ
ತಾಯಿಯವರ ಅನಾರೋಗ್ಯದ ಬಗ್ಗೆ ಚಿಂತೆ ಮಾಡುವ ಸಮಯ. ಕುಟುಂಬದ ಜವಾಬ್ದಾರಿಯನ್ನು
ಹೊರುವ ಸಮಯವಾಗಿದೆ. ನಾಗ ದೇವರ ಆರಾಧನೆ , ,ದುರ್ಗಾ ಸಪ್ತಶತೀ ಪಾರಾಯಣ ಮಾಡಬೇಕಾದ
ಅವಶ್ಯಕತೆ ಇದೆ ರಾತ್ರಿ ಸಂಚಾರ ಬೇಡ, ನಾಲ್ಕು ಕಾಲಿನ ನಾಯಿ ಬೆಕ್ಕು ಇತ್ಯಾದಿ ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಿರಿ. ಉದ್ಯೋಗದಲ್ಲಿ ಸಹನೆ ,ತಾಳ್ಮೆ ನಿಮ್ಮಲ್ಲಿ ಇರಲಿ. ಹಣಕಾಸಿನ ವಿಷಯದಲ್ಲಿ ದಾಕ್ಷಿಣ್ಯ
ಪ್ರವೃತ್ತಿ ಬೇಡ.
ಮಕರ : ಗುರು ಪಂಚಮದಲ್ಲಿ ಇದ್ದು ದೇವರ ಅನುಗ್ರಹ ನಿಮಗೆ ಸಿಗಲಿದೆ. ಸಾಡೇ ಸಾತ್ ಶನಿಯ ಪ್ರಭಾವ
ಕೊನೆಯ ಹಂತಕ್ಕೆ ಬರಲಿದೆ. ಕರ್ಮಾಧಿಪತಿ ಶುಕ್ರ ಜೊತೆಯಲ್ಲಿ ಇರುವುದರಿಂದ ಉದ್ಯೋಗದ
ಅನ್ವೇಷಣೆಯಲ್ಲಿ ಇರುವ ಮಂದಿಗೆ ಒಳ್ಳೆಯ ಉದ್ಯೋಗ ಪ್ರಾಪ್ತಿಯಾಗಲಿದೆ. ಮಕ್ಕಳೂ ಉದ್ಯೋಗದ
ನಿರೀಕ್ಷೆಯಲ್ಲಿ ಇದ್ದರೆ ಅವರಿಗೂ ಶುಭ ಸುದ್ಧಿ ಸಿಗಲಿದೆ. ಸಂತಾನ ಪ್ರಾಪ್ತಿ ಯೋಗ ,ಶುಭ ಮಂಗಳ
ಕೆಲಸಗಳು ನಡೆಯುವ ಸಮಯವಾಗಿದೆ .ಮಾತಿನಲ್ಲಿ,ಆರ್ಥಿಕ ವಿಷಯದಲ್ಲಿ ಎಚ್ಚರವಿರಲಿ. ವಿಷ್ಣು
ಸಹಸ್ರನಾಮ ಪಾರಾಯಣ ಅಗತ್ಯವಾಗಿದೆ. ಬಂಧು ಮಿತ್ರರ ಜೊತೆಗೆ ,ನೆರೆಕರೆಯ ವ್ಯಕ್ತಿಗಳ ಜೊತೆಗೆ
ಕಲಹಕ್ಕೆ ದಾರಿ ಮಾಡಿಕೊಡಬೇಡಿರಿ.
ಕುಂಭ : ಜನ್ಮರಾಶಿಯಲ್ಲಿ ಭಾಧಕಾಧಿಪತಿ ಶುಕ್ರ ಶನಿಯೊಂದಿಗೆ ಇರುವುದು ಶುಭ ಅಶುಭ ಫಲವನ್ನು
ನೀಡುತ್ತಿದ್ದಾನೆ.ಗುರು ಚತುರ್ಥದಲ್ಲಿ ಇದ್ದರೂ ಅವನಿರುವುದು ಶುಕ್ರನ ಮನೆಯಲ್ಲಿ. ನಿಮ್ಮ ಬಗ್ಗೆ
,ನಿಮ್ಮ ಪೋಷಕರ ಬಗ್ಗೆ ಜಾಗ್ರತೆಯಿಂದ ವರ್ತಿಸುವುದು ಅತೀ ಅಗತ್ಯವಾಗಿದೆ. ಬರುವ 28 ತಾರೀಕಿನ ವರೆಗೆ
ಎಚ್ಚರವಾಗಿರಿ . ಮಾತಿನಲ್ಲಿ ಎಚ್ಚರವಾಗಿರಿ. ಸಿಟ್ಟು ಬರಲೇ ಬಾರದು “ನಾನು “ ಎಂಬ ಅಹಂಕಾರ
ಆದಷ್ಟು ದೂರವಿರಲಿ.ರವಿ ಮತ್ತು ಬುಧ ಲಾಭ ಕ್ಷೇತ್ರದಲ್ಲಿ ಇರುವುದರಿಂದ ರಾಜಕೀಯದಲ್ಲಿ
ಇರುವವರಿಗೆ ಶುಭ ಸುದ್ಧಿ ಬರಲಿದೆ . ರವಿ ಮತ್ತು ಬುಧ ಇರುವುದು ಗುರುವಿನ ಮನೆಯಲ್ಲಿ, ನ್ಯಾಯಾಂಗ
ನಿಂದನೆಯ ಸಾಧ್ಯತೆ ಇರುತ್ತದೆ.ವ್ಯವಹಾರ ಯಾವಾಗಲು ಪಾರದರ್ಶಕತೆಯಲ್ಲಿ ಇರಲಿ.
ಮೀನ : ಗುರು ತೃತೀಯಾದಲ್ಲಿ, ಜನ್ಮ ರಾಶಿಯಲ್ಲಿ ರಾಹು ವ್ಯಯದಲ್ಲಿ ಶುಕ್ರ ಶನಿ ,ಪಂಚಮದಲ್ಲಿ ಶನಿ ,
ಸಪ್ತಮದಲ್ಲಿ ಕೇತು ಇರುವುದರಿಂದ ಜೀವನದಲ್ಲಿ ಏಕಾಂಗಿತನ ನಿಮ್ಮನ್ನು ಕಾಡಲಿದೆ. ಭಯವೊಂದು
ನಿಮ್ಮನ್ನು ಆವರಿಸಲಿದೆ. ಮನೆಯಲ್ಲಿ ಇರುವುದೇ ಮೂರು ನಾಲ್ಕು ಮಂದಿ .ಅವರಲ್ಲಿಯೇ ಕಲಹಗಳು.
ಒಟ್ಟಿಗೆ ಕುಳಿತು ಊಟ ಮಾಡುವ ತಾಳ್ಮೆಯೂ ಇಲ್ಲ.ದೇವರ ಮೇಲೆಯೇ ನಂಬಿಕೆ ಕ ಳೆದುಕೊಳ್ಳುವ ಕಾಲ
. ಮಗಳು ಹೆಂಡತಿ ಎಲ್ಲರೂ ತಾಳ್ಮೆ ಕಳೆದುಕೊಂಡವರೇ ಆಗಿರುತ್ತಾರೆ .ಶುಕ್ರ ಮತ್ತು ಶನಿ ವ್ಯಯದಲ್ಲಿ
ಇದ್ದು ನಿಮ್ಮ ಆರೋಗ್ಯದ ಕಡೆಗೆ ಜನವರಿ 28 ರ ವರೆಗೆ ನೀವು ಮಾಡುವ ಯಾವುದೇ ವ್ಯವಹಾರ
,ಉದ್ಯೋಗದಲ್ಲಿ ಎಚ್ಚರವಾಗಿರಬೇಕು. 60+ ಆದವರಿಗೆ ಸಾಮಾನ್ಯ ನಿಶ್ಯಕ್ತಿ ,ಎಲುಬು ನರ ನೋವಿನ
ಭಾಧೆ ಬರಲಿದೆ .ಯೋಗ ಪ್ರಾಣಾಯಾಮ ಅತೀ ಅಗತ್ಯ. ಮೃತ್ಯುಂಜಯ ಜಪ ಅಗತ್ಯವಾಗಿದೆ .






































