ವಾರ ಭವಿಷ್ಯ ದಿನಾಂಕ 04.08. 2024 ರಿಂದ 09.08.2024 ರವರೆಗೆ
ವಿಶೇಷ ದಿನಗಳು :
04.08.2024……ಆಟೀ ಅಮಾವಾಸ್ಯೆ
09.08.2024…….ನಾಗರ ಪಂಚಮಿ


ಮೇಷ : ನಿಮ್ಮ ಅದೃಷ್ಟ ಸಂಖ್ಯೆಗಳು :1 ಮತ್ತು 9 ;ಅದೃಷ್ಟ ಬಣ್ಣ :ಕೇಸರಿ ಮತ್ತು ಹಳದಿ ;ಅದೃಷ್ಟ
ತರುವ ದಿಕ್ಕು ಪೂರ್ವ ಮತ್ತು ದಕ್ಷಿಣ; ಈ ವಾರ ಶುಭ ಫಲ ತರುವ ಗ್ರಹರ ಸಂಖ್ಯೆ :06 ಹಣ ಕಾಸಿನ
ವಿಷಯದಲ್ಲಿ ನೀವು ಅದೃಷ್ಟವಂತರು ;ಕುಜ ಮತ್ತು ಗುರು ದ್ವಿತೀಯಾದಲ್ಲಿ ,ಶುಕ್ರ ಮತ್ತು ಬುಧ
ಪಂಚಮದಲ್ಲಿ ;ಸುಖ ಸ್ಥಾನದಲ್ಲಿ ರವಿ , ರಾಹು ಲಾಭ ಕ್ಷೇತ್ರದಲ್ಲಿ ಇದ್ದಾನೆ ,ಪ್ರೀತಿ ಪಾತ್ರರನ್ನು
ಭೇಟಿಯಾಗುವಿರಿ .ವಿದ್ಯಾರ್ಥಿಗಳಿಗೆ ಲಕ್ಷ್ಮೀ ನಾರಾಯಣ ಯೋಗ ಕೂಡಿ ಬರಲಿದೆ .ಇಷ್ಟ ಪಟ್ಟು ಯಾವುದೇ
ವ್ಯವಹಾರ ,ಉದ್ಯೋಗ ಮಾಡುವಿರಿ .ಸಪ್ತಮಾಧಿಪತಿ ಶುಕ್ರ ಬುಧನೊಂದಿಗೆ ಇರುವುದರಿಂದ
ಸಂಗಾತಿಯೊಂದಿಗೆ ಸಂತೋಷದ ಜೀವನ ನಡೆಸುವಿರಿ .ಆರೋಗ್ಯದ ವಿಷಯದಲ್ಲಿ ಹಣ ಕಾಸಿನ
ವಿಷಯದಲ್ಲಿ ಜಾಗ್ರತೆ ಇರಲಿ.
ವೃಷಭ :ನಿಮ್ಮ ಅದೃಷ್ಟ ಸಂಖ್ಯೆ :6 ಮತ್ತು 4 ;ಅದೃಷ್ಟದ ಬಣ್ಣ :ಹಳದಿ ಮತ್ತು ಬಿಳಿ ;ಅದೃಷ್ಟ ತರುವ
ದಿಕ್ಕು ಪೂರ್ವ ಮತ್ತು ದಕ್ಷಿಣ ;ಶುಭ ಫಲ ತರುವ ಗ್ರಹರ ಸಂಖ್ಯೆ :6 ; ಜನ್ಮ ರಾಶಿಯಲ್ಲಿ ಸಪ್ತಮಾಧಿಪತಿ
ಕುಜ ಗುರುವಿನೊಂದಿಗೆ ಇದ್ದಾನೆ .ಸಂಗಾತಿಯಿಂದ ಲಾಭವನ್ನು ಸಂತೋಷವನ್ನು ಗಳಿಸುವಿರಿ .ಬಹಳ
ಸಮಯದಿಂದ ಇದ್ದ ಕೆಲವೊಂದು ಗೊಂದಲಗಳು ನಿಮ್ಮ ಮಾನಸಿಕ ತಯಾರಿಯ ಜೊತೆಗೆ ಕೊನೆಯಾಗುವ
ಲಕ್ಷಣಗಳು ಕಾಣುತ್ತಿವೆ .ಇಬ್ಬರಲ್ಲಿ ಒಬ್ಬರು ಮೌನವಾಗಿರಬೇಕು .ದ್ವಿತೀಯಾಧಿಪತಿ ಬುಧ ಶುಕ್ರನ
ಜೊತೆಗೆ ಸುಖ ಸ್ಥಾನದಲ್ಲಿ ಇರುವುದರಿಂದ ಬರ ಬೇಕಾದ ಹಣ ಬರಲಿದೆ .ಮನೆ ಆಸ್ತಿ ವಾಹನ ಖರೀಧಿಯ
ಯೋಗ ನಿಮ್ಮನ್ನು ಹುಡುಕಿಕೊಂಡು ಬರಲಿದೆ .ವಿದ್ಯಾರ್ಥಿಗಳಿಗೆ ಶುಭವಾಗಲಿದೆ .ಉದ್ಯೋಗ
,ವ್ಯವಹಾರಗಳು ನಿಧಾನಗತಿಯಲ್ಲಿ ಸಾಗಿದರೂ ಶುಭವಾಗಲಿದೆ.
ಮಿಥುನ : ನಿಮ್ಮ ಅದೃಷ್ಟ ಸಂಖ್ಯೆ :5 ಮತ್ತು 3 ;ಅದೃಷ್ಟ ಬಣ್ಣ :ಹಳದಿ ಮತ್ತು ಬೂದು ; ಅದೃಷ್ಟ
ತರುವ ದಿಕ್ಕು ಪೂರ್ವ ಮತ್ತು ದಕ್ಷಿಣ ;ಈ ವಾರ ಶುಭ ಫಲ ತರುವ ಗ್ರಹರ ಸಂಖ್ಯೆ :7 ;ರಾಶ್ಯಾಧಿಪತಿ ಬುಧ
,ಶುಕ್ರನೊಂದಿಗೆ ತೃತೀಯಾದಲ್ಲಿ ;ಕುಜ ಮತ್ತು ಗುರು ವ್ಯಯದಲ್ಲಿ ;ನಾವು ಮನಸ್ಸಿನಲ್ಲಿ ಏನನ್ನು
ಯೋಚನೆ ಮಾಡುತ್ತೇವೆಯೋ ಅದೇ ನಡೆಯುತ್ತದೆ . ರವಿ ದ್ವಿತೀಯಾದಲ್ಲಿ ನೀವು ಏನು ಹೇಳುತ್ತೀರೋ
ಅದು ಅದೇ ರೀತಿ ನಡೆಯುತ್ತದೆ .ಇದನ್ನು ವಾಕ್ದೋಶ ಎಂದು ಕರೆಯುತ್ತಾರೆ .ನೀವು ಮಾತಾಡುವ
ಕ್ರಮವನ್ನು ಬದಲಾಯಿಸಿ ಕೊಳ್ಳಿರಿ .ಸುಖ ಸ್ಥಾನದಲ್ಲಿ ಕೇತು .ಬುಧ ತೃತೀಯಾದಲ್ಲಿ ಇರುವುದರಿಂದ ಈ
ವಾರ ಆಸ್ತಿ ,ಮನೆ ,ಭೂಮಿ ಖರೀಧಿ ಬೇಡ .ಓದುವ ಮಕ್ಕಳಿಗೆ ,ಟಿವಿ ,ಮೊಬೈಲ್ ಇತ್ಯಾದಿ ಅನೇಕ ಅಡೆ
ತಡೆಗಳು ಬರಲಿವೆ .ಸಂಗಾತಿಯ ವಿಷಯದಲ್ಲಿ ಹೊಂದಾಣಿಕೆ ಇರಲಿ .ಪಿತ್ರಾರ್ಜಿತ ಆಸ್ತಿಯ ವಿಷಯದಲ್ಲಿ
ಕಲಹ ಬೇಡ .ಗುರು ಬಲವಿಲ್ಲ .ಗುರು ರಾಘವೇಂದ್ರ ಸ್ವಾಮಿಗಳ ಸ್ತೋತ್ರ ಪಾರಾಯಣ ಮಾಡಿರಿ .
ಕರ್ಕಾಟಕ : ನಿಮ್ಮ ಅದೃಷ್ಟ ಸಂಖ್ಯೆ 2 ಮತ್ತು 7 ;ಅದೃಷ್ಟ ಬಣ್ಣ :ಬಿಳಿ ಮತ್ತು ನೀಲಿ ; ಅದೃಷ್ಟ ತರುವ
ದಿಕ್ಕು : ಪಶ್ಚಿಮ ಮತ್ತು ದಕ್ಷಿಣ ;ಈ ವಾರ ಶುಭ ಫಲ ಕೊಡುವ ಗ್ರಹರ ಸಂಖ್ಯೆ: 5 ನಿಮ್ಮ
ರಾಶಿಯಲ್ಲಿಯೇ ದ್ವಿತೀಯಾಧಿಪತಿ ರವಿ ಇದ್ದಾನೆ .ದ್ವಿತೀಯಾದಲ್ಲಿ ಬುಧ ಮತ್ತು ಶುಕ್ರ ಇದ್ದಾರೆ .ಈ
ವಾರ ಹಣ ಕಾಸಿನ ವಿಷಯದಲ್ಲಿ ತುಂಬಾ ಅದೃಷ್ಟವಂತರು .ಶನಿ ಅಷ್ಟಮದಲ್ಲಿ ಇರುವುದರಿಂದ
ಅನಿರೀಕ್ಷಿತವಾಗಿ ಖರ್ಚು ಕೂಡಾ ಬರುತ್ತದೆ .ಕುಟುಂಬಕ್ಕೆ ನಿಮ್ಮ ಆತ್ಮೀಯರ ಆಗಮನವಾಗಲಿದೆ
.ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ .ಆದರೆ ವಾಹನ ಚಾಲನೆಯಲ್ಲಿ ಬಹಳ ಎಚ್ಚರ ವಹಿಸಿರಿ
.ನೀರಿನ ಪ್ರವಾಹಕ್ಕೆ ತಾವೇ ಹೋಗಿ ಬೀಳುವ ಹುಚ್ಚು ಸಾಹಸ ಮಾಡಬೇಡಿರಿ .ಉದ್ಯೋಗಿಗಳಿಗೆ
ಮೇಲಧಿಕಾರಿಗಳ ಮೆಚ್ಚುಗೆಯ ಮಾತುಗಳು ಬರಲಿವೆ . ನೀವು ಹೇಳ ಬೇಕಾದ ಮಂತ್ರ : ಓಂ ಶಮ್
ಶನೈಶ್ಚರಾಯ ನಮ: [ಪ್ರತಿನಿತ್ಯ 108 ಬಾರಿ ]
ಸಿಂಹ :ನಿಮ್ಮ ಅದೃಷ್ಟ ಸಂಖ್ಯೆ 1 ಮತ್ತು 9 ;ಅದೃಷ್ಟದ ಬಣ್ಣ;:ಕೆಂಪು ಮತ್ತು ಹಳದಿ ; ಅದೃಷ್ಟ ತರುವ
ದಿಕ್ಕು : ಉತ್ತರ ಮತ್ತು ದಕ್ಷಿಣ ಈ ವಾರ ಶುಭ ಫಲ ಕೊಡುವ ಗ್ರಹರ ಸಂಖ್ಯೆ :7 ; “ನೀವು ಆದಿತ್ಯ
ಹೃದಯ “ ಮಂತ್ರವನ್ನು ನಿತ್ಯವೂ ಪಾರಾಯಣ ಮಾಡಿರಿ ; ರಾಶ್ಯಾಧಿಪತಿ ರವಿ ವ್ಯಯದಲ್ಲಿ
ಇರುವುದರಿಂದ ಆರೋಗ್ಯದ ಬಗ್ಗೆ ,ಹಣ ಕಾಸಿನ ಬಗ್ಗೆ ಎಚ್ಚರ ವಹಿಸಿರಿ .ಶುಕ್ರ ಮತ್ತು ಬುಧ ಜನ್ಮ
ರಾಶಿಯಲ್ಲಿ ಇರುವುದರಿಂದ ನಿಮ್ಮ ಪರಿಶ್ರಮ ಉತ್ತಮ ಫಲ ನೀಡಲಿದೆ .ಶುಕ್ರ ಕರ್ಮಾಧಿಪತಿ ಆಗಿರುತ್ತಾನೆ
.ಲಕ್ಷ್ಮೀ ನಾರಾಯಣ ಯೋಗ ನಿಮ್ಮ ಹಣ ಕಾಸಿನ ಪರಿಸ್ತಿತಿಯಲ್ಲಿ ಸುಧಾರಣಯನ್ನು ತರಲಿದೆ .ನೀವಾಡುವ
ಮಾತಿನಿಂದಲೇ ಇತರರನ್ನು ವಶೀಕರಣ ಮಾಡುವಿರಿ .ಆದರೆ ಎಚ್ಚರವಿರಲಿ .ಸಂಗಾತಿಯ ಆರೋಗ್ಯದ ಬಗ್ಗೆ
ನಿಮ್ಮ ಕಾಳಜಿ ಬಹಳ ಅಗತ್ಯವಿದೆ.
ಕನ್ಯಾ : ನಿಮ್ಮ ಅದೃಷ್ಟ ಸಂಖ್ಯೆ :5 ಮತ್ತು 4 ಅದೃಷ್ಟದ ಬಣ್ಣ :ಕೆಂಪು ಮತ್ತು ನೀಲಿ ;ಅದೃಷ್ಟ ತರುವ
ದಿಕ್ಕು : ಪೂರ್ವ ಮತ್ತು ದಕ್ಷಿಣ ಈ ವಾರ ಶುಭ ಫಲ ಕೊಡುವ ಗ್ರಹರ ಸಂಖ್ಯೆ 8 : ನೀವು ಈ ವಾರ ಹೇಳ
ಬೇಕಾದ ಮಂತ್ರ “ನಾಗದೇವರ ಮೂಲ ಮಂತ್ರವಾಗಿದೆ “ವ್ಯಯದಲ್ಲಿ ಬುಧ ಮತ್ತು ಶುಕ್ರ ಇದ್ದಾರೆ
.ರಾಶ್ಯಾಧಿಪತಿಯೇ ವ್ಯಯದಲ್ಲಿ ಬಂದಾಗ ನಿಮ್ಮ ವೈಯಕ್ತಿಕ ಕೆಲಸಗಳು ಯಶಸ್ವಿಯಾಗುವುದಿಲ್ಲ
,ಆರೋಗ್ಯದ ಬಗ್ಗೆ ಎಚ್ಚರವಿರಬೇಕು .ಭಾಗ್ಯದಲ್ಲಿ ಕುಜ ಮತ್ತು ಗುರು ಇರುವುದರಿಂದ ಶುಭ ಕೆಲಸಗಳು
ನಡೆಯಲಿವೆ .ವಿದೇಶ ಪ್ರಯಾಣ ಯೋಗವಿದೆ .ಕರ್ಮಾಧಿಪತಿ ಬುಧ ವ್ಯಯದಲ್ಲಿ ಇರುವುದರಿಂದ
ಮಾಡುತ್ತಿರುವ ಉದ್ಯೋಗದಲ್ಲಿ ಬದಲಾವಣೆಯ ಸೂಚನೆ ಇದೆ.
ತುಲಾ : ನಿಮ್ಮ ಅದೃಷ್ಟ ಸಂಖ್ಯೆ :6 ಮತ್ತು 2 ;ಅದೃಷ್ಟ ಬಣ್ಣ:ಬಿಳಿ ಮತ್ತು ಕಪ್ಪು ;
ಅದೃಷ್ಟ ತರುವ ದಿಕ್ಕು :ಉತ್ತರ ಮತ್ತು ಪೂರ್ವ ; ಈ ವಾರ ಶುಭ ಫಲ ಕೊಡುವ ಗ್ರಹ ರ ಸಂಖ್ಯೆ : 6
ನೀವು ಈ ವಾರ ಹೇಳ ಬೇಕಾದ ಮಂತ್ರ “ತ್ರ್ಯಂಬಕಮ್ …….”
[ಪ್ರತಿನಿತ್ಯ 108 ಬಾರಿ ಹೇಳುತ್ತಾ ಬರಬೇಕು .ಶುಕ್ರ ಮತ್ತು ಬುಧ ಲಾಭ ಕ್ಷೇತ್ರದಲ್ಲಿ ಇರುವುದರಿಂದ
ಕೃಷಿಕರು ಸಹಿತವಾಗಿ ಉತ್ತಮ ಹಣ ಸಂಪಾದನೆಯನ್ನು ಮಾಡಲಿದ್ದಾರೆ .ಲಕ್ಷ್ಮೀ ನಾರಾಯಣ ಯೋಗ
ನಿಮ್ಮನ್ನು ಹುಡುಕಿ ಕೊಂಡು ಬಂದಿದೆ . ಅಷ್ಟಮದಲ್ಲಿ ಸಪ್ತಮಾಧಿಪತಿ ಕುಜ ,ಗುರುವಿನೊಂದಿಗೆ ಇದ್ದಾನೆ
.ದೈವಾನುಗ್ರಹದ ಕೊರತೆ ಇದೆ .ಪಂಚಮದ ಶನಿ ವಿದ್ಯಾರ್ಥಿಗಳಿಗೆ ಅನುಕೂಲವನ್ನು ತರಲಿದೆ . ನೀವು
ಮಾಡುವ ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ .ಪತನ ಭಯ ವಿದೆ .ವಾಹನ ಚಾಲಕರು
ಎಚ್ಚರ ವಹಿಸಬೇಕು .
ವೃಶ್ಚಿಕ : ನಿಮ್ಮ ಅದೃಷ್ಟ ಸಂಖ್ಯೆ :3 ಮತ್ತು 9 ; ಅದೃಷ್ಟ ಬಣ್ಣ :ಕೆಂಪು ಮತ್ತು ಹಳದಿ ;ಅದೃಷ್ಟ
ತರುವ ದಿಕ್ಕು : ಪಶ್ಚಿಮ ಮತ್ತು ದಕ್ಷಿಣ ;ಈ ವಾರ ಶುಭ ಫಲ ಕೊಡುವ ಗ್ರಹರ ಸಂಖ್ಯೆ :8 ನೀವು ಈ
ವಾರ ಹೇಳ ಬೇಕಾದ ಮಂತ್ರ : ಓಂ ಶಂ ಶನೈಶ್ಚರಾಯ ನಮ : [ಪ್ರತಿನಿತ್ಯ 108 ಬಾರಿ ]ನಿಮ್ಮ
ರಾಶ್ಯಾಧಿಪತಿ ಕುಜ ಗುರುವಿನೊಂದಿಗೆ ಸಪ್ತಮದಲ್ಲಿ ಇರುವಾಗ ಶುಭ ಫಲವನ್ನು ನೀಡಲಿದ್ದಾನೆ
.ಮನೆಯಲ್ಲಿ ,ಶುಭ ,ಮಂಗಳ ಕೆಲಸಗಳು ನಡೆಯಲಿವೆ . ಕರ್ಮ ಕ್ಷೇತ್ರದಲ್ಲಿ ಶುಕ್ರ ಮತ್ತು ಬುಧ ಲಕ್ಷ್ಮೀ
ನಾರಾಯಣ ಯೋಗವನ್ನು ನೀವು ಅನುಭವಿಸಲಿದ್ದೀರಿ .ನೀವು ಮಾಡುತ್ತಿರುವ ಯಾವುದೇ ವ್ಯವಹಾರ
,ಉದ್ಯೋಗದಲ್ಲಿ ,ರಾಜಕೀಯದಲ್ಲಿ ಯಶಸ್ಸನ್ನು ಕಾಣುವಿರಿ .ವಿದ್ಯಾರ್ಥಿಗಳು ಟಿವಿ,ಮೊಬೈಲ್ನಿಂದ
ಆದಷ್ಟು ಅಂತರವನ್ನು ಕಾಯ್ದು ಕೊಳ್ಳುವಂತೆ ಪಂಚಮದ ರಾಹು ತಿಳಿಸುತ್ತಿದ್ದಾನೆ.
ಧನು : ನಿಮ್ಮ ಅದೃಷ್ಟ ಸಂಖ್ಯೆ :3 ಮತ್ತು 8 ;ನಿಮ್ಮ ಅದೃಷ್ಟ ಬಣ್ಣ :ಹಳದಿ ಮತ್ತು ಬೂದು ;ಅದೃಷ್ಟ
ತರುವ ದಿಕ್ಕು :ವಾಯವ್ಯ ,ಈಶಾನ್ಯ :; ಈ ವಾರ ಶುಭ ಫಲ ಕೊಡುವ ಗ್ರಹ ರ ಸಂಖ್ಯೆ :7 ಈ ವಾರ ನೀವು
ಹೇಳ ಬೇಕಾದ ಮಂತ್ರ :ವಿಷ್ಣು ಸಹಸ್ರನಾಮ ಪಾರಾಯಣ : ತುಳಸೀ ಗಿಡವನ್ನು ದಾನ ಕೊಡಿರಿ .ನಿಮ್ಮ
ರಾಶ್ಯಾಧಿಪತಿ ,ಸುಖಾಧಿಪತಿ ಗುರು ,ಕುಜನೊಂದಿಗೆ 6 ರಲ್ಲಿ ಇದ್ದಾನೆ ಆರೋಗ್ಯದ ಬಗ್ಗೆ ಎಚ್ಚರವಿರಲಿ
.ಬರುವ ದುಡ್ಡಿಗೆ ಕೊರತೆ ಇರುವುದಿಲ್ಲ,ಹಾಗೆಯೇ ಹೋಗುವ ದುಡ್ಡಿಗೆ
ಲೆಕ್ಕವಿರುವುದಿಲ್ಲ..ಅಷ್ಟಮದಲ್ಲಿ ಭಾಗ್ಯಾಧಿಪತಿ ರವಿ ಇದ್ದಾನೆ .ಹಿರಿಯರ ಆರೋಗ್ಯದ ಬಗ್ಗೆ
ಎಚ್ಚರವಿರಲಿ .ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರವಾಗಿದೆ .ಆದಿತ್ಯ ಹೃದಯ ಮಂತ್ರ ಪಾರಾಯಣ
ಅಗತ್ಯವಾಗಿದೆ .
ಮಕರ : ನಿಮ್ಮ ಅದೃಷ್ಟ ಸಂಖ್ಯೆ 4 ಮತ್ತು 6 ಆಗಿರುತ್ತದೆ .ನಿಮ್ಮ ಅದೃಷ್ಟ ಬಣ್ಣ ನೀಲಿ ಮತ್ತು ಬಿಳಿ;
ಅದೃಷ್ಟ ತರುವ ದಿಕ್ಕು :ಪೂರ್ವ ಮತ್ತು ಉತ್ತರ ;ನೀವು ಹೇಳಬೇಕಾದ ಮಂತ್ರ : ಓಂ ಶಂ
ಶನೈಶ್ಚರಾಯನಮ: ,ಶನಿ ದೇವರಿಗೆ ತುಪ್ಪದ ದೀಪ ಹಚ್ಚಿರಿ .ಸಾಡೇ ಸಾತ್ ಶನಿಯ ಪ್ರಭಾವ
ಮುಂದುವರಿಯುತ್ತಿದೆ .ಕುಜ ಮತ್ತು ಗುರು ಪಂಚಮದಲ್ಲಿ ಇದ್ದು ವಿದ್ಯಾರ್ಥಿಗಳು ದೇವರ
ಅನುಗ್ರಹವಿರುವುದರಿಂದ ಯಶಸ್ವಿಯಾಗುವರು. ಶುಕ್ರ ಮತ್ತು ಬುಧ ಅಷ್ಟಮದಲ್ಲಿ ಇದ್ದು ಆರೋಗ್ಯದ
ಬಗ್ಗೆ ಎಚ್ಚರವಿರಲಿ .ಈಗಾಗಲೇ ಸಮಸ್ಯೆ ಇರುವವರು ವೈದ್ಯರನ್ನು ಸಂಪರ್ಕಿಸಿರಿ. ನಿಮ್ಮ ತಪ್ಪನ್ನು
ಹುಡುಕಿ ಮೇಲ ಧಿಕಾರಿಗಳು ತಿಳಿಸುವರು .ವಿಷ್ಣು ಸಹಸ್ರ ನಾಮ ಮಂತ್ರ ನಿಮಗೆ ಅದ್ಭುತವಾಗಿ ಪರಿಣಾಮ
ಭೀರಲಿದೆ.
ಕುಂಭ : ನಿಮ್ಮ ಅದೃಷ್ಟ ಸಂಖ್ಯೆ :3 ಮತ್ತು 2 ನಿಮ್ಮ ಅದೃಷ್ಟ ಬಣ್ಣ ಹಸಿರು ಮತ್ತು ಕಪ್ಪು ; ನಿಮಗೆ
ಅದೃಷ್ಟ ತರುವ ದಿಕ್ಕು : ಪಶ್ಚಿಮ ಮತ್ತು ದಕ್ಷಿಣ ನೀವು ಹೇಳ ಬೇಕಾದ ಮಂತ್ರ “ಓಂ ತ್ರ್ಯಂಬಕಮ್
……..[108 ಬಾರಿ ಪ್ರತಿ ನಿತ್ಯ ]ಉತ್ತಮ ಫಲ ಕೊಡುವ ಗ್ರಹರು 6 .ಶನಿ ಜನ್ಮ ರಾಶಿಯಲ್ಲಿಯೇ ಇದ್ದಾನೆ
ಧನ ಸ್ಟಾನಾಧಿಪತಿ ಗುರು ಸುಖ ಸ್ಥಾನದಲ್ಲಿ ಕುಜನೊಂದಿಗೆ ಇದ್ದಾನೆ .ಆಸ್ತಿ ,ಮನೆ ,ಭೂಮಿ ಕೊಳ್ಳುವ
ಯೋಗ ,ನೀವು ಮಾಡುವ ಯಾವುದೇ ಉದ್ಯೋಗ ವ್ಯವಹಾರದಲ್ಲಿ ಶುಭ ಫಲವನ್ನು ಪಡೆಯುವಿರಿ
.ಸಂಬಂಧಿಕರ ಮಿತ್ರರ ಆಗಮನ ಆಗಲಿದೆ .ಸಪ್ತಮದಲ್ಲಿ ಶುಕ್ರ ಮತ್ತು ಬುಧ ಇದ್ದಾರೆ .ದೇವಾಲಯಗಳಿಗೆ
ಭೇಟಿ ಕೊಡುವಿರಿ . ರಾಹು ದ್ವಿತೀಯಾದಲ್ಲಿ ಇದ್ದು ಖರ್ಚು ಅನಿರೀಕ್ಷಿತವಾಗಿ ಬರಲಿದೆ . ಬೆಲೆ ಬಾಳುವ
ವಸ್ತುಗಳು ಮನೆಗೆ ಬರಲಿವ.
ಮೀನ :ನಿಮ್ಮ ಅದೃಷ್ಟ ಸಂಖ್ಯೆ : 3 ಮತ್ತು 2 ಆಗಿರುತ್ತದೆ ನಿಮ್ಮ ಅದೃಷ್ಟ ಬಣ್ಣ ಬಿಳಿ ಮತ್ತು ಹಳದಿ
;ನಿಮಗೆ ಅದೃಷ್ಟ ತರುವ ದಿಕ್ಕು : ಪಶ್ಚಿಮ ಮತ್ತು ಉತ್ತರ ;ನಿಮಗೆ ಶುಭ ಫಲ ಕೊಡುವ ಗ್ರಹರ ಸಂಖ್ಯೆ
7 ;ನೀವು ಹೇಳಬೇಕಾದ ಮಂತ್ರ :ಗಣಪತಿ ಅಥರ್ವ ಶೀರ್ಷ ಪಾರಾಯಣ ;ಗುರು ಮತ್ತು ಕುಜ
ತೃತೀಯಾದಲ್ಲಿ ಇದ್ದಾರೆ ,ರಾಹು ಜನ್ಮ ರಾಶಿಯಲ್ಲಿ ಇದ್ದಾನೆ ನಕಾರಾತ್ಮಕ ಯೋಚನೆಗಳಿಂದ ಹೊರ
ಬನ್ನಿರಿ .ಮನಸ್ಸಿಗೆ ಬೇಸರವನ್ನು ಮಾಡಿಕೊಳ್ಳಬೇಡಿರಿ . ಸಾಡೇ ಸಾತ್ ಶನಿಯ ಪ್ರಭಾವದಲ್ಲಿ ನೀವಿರುವಿರಿ
.ಶುದ್ಧವಾದ ಎಳ್ಳೆಣ್ಣೆಯಲ್ಲಿ ನಿತ್ಯವೂ ಮುಖ ನೋಡಿ ಒಂದು ನಾಣ್ಯವನ್ನು ಅದರಲ್ಲಿ ಹಾಕಿ “ಓಂ ಶಂ
ಶನೈಶ್ಚರಾಯ ನಮ :: ಮಂತ್ರವನ್ನು 48 ದಿನಗಳ ಕಾಲ ಹೇಳಿ ಶಿವ ಕ್ಷೇತ್ರದಲ್ಲಿ ಅರ್ಪಿಸಿರಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿ ಕೊಡಲಾಗುವುದು .ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ತಿಳಿಸಲಾಗುವುದು .ವಿವಾಹ ಹೊಂದಾಣಿಕೆ /ವಾಸ್ತು ಸಲಹೆಯನ್ನು ತಿಳಿಸಲಾಗುವುದು.





































