ವಾರ ಭವಿಷ್ಯ ದಿನಾಂಕ 03.08.2025 ರಿಂದ 09.08.2025 ರ ವರೆಗೆ
ವಿಶೇಷ ದಿನಗಳು :
08.08.2025……ವರಮಹಾಲಕ್ಷ್ಮಿ ವೃತ
09.08.2025……ಪೂರ್ಣಿಮಾ ,ಋಗುಪಾಕರ್ಮ ,ಯಜುರುಪಾಕರ್ಮ ,ರಕ್ಷಾ ಬಂಧನ : ಆಟೀ ಹುಣ್ಣಿಮೆ
ಮೇಷ : ನೀವು ಆರ್ಥಿಕವಾಗಿ ಲಾಭ-ನಷ್ಟ ಲೆಕ್ಕಾಚಾರವನ್ನು ಯೋಚಿಸಬೇಕಾದ ಕಾಲವಾಗಿದೆ. ಜೀರ್ಣ ಶಕ್ತಿಯು ಪ್ರತಿನಿತ್ಯ ಏರು ಪೇರು ಬಂದು ದೇಹಾರೋಗ್ಯದ ಮೇಲೆ ಪರಿಣಾಮ ಬೀರಲಿದೆ. ವೃತ್ತಿ ರಂಗದ ಬದುಕಿನಲ್ಲಿ ಶ್ರೇಯಸ್ಸು, ಸುಖ,ಶಾಂತಿ ಲಭಿಸಲಿದೆ. ಧಾರ್ಮಿಕವಾಗಿ ಧರ್ಮ ಜಿಜ್ಣಾಸುಗಳ ಸಂಪರ್ಕ,ಸಚ್ಚಾರಿತ್ರ್ಯವುಳ್ಳ ಸಹೃದಯರ ಸಹಕಾರವಿರುತ್ತದೆ. ನಿಮ್ಮ ಬೌದ್ಧಿಕ ಶಕ್ತಿಯಿಂದ ವಿಶೇಷ ಗೌರವಕ್ಕೆ ಪಾತ್ರರಾಗಲಿದ್ದೀರಿ ‘ಶ್ರೀ ರಾಮ ರಕ್ಷಾ ಸ್ತೋತ್ರ ಪಾರಾಯಣ” ಮಾಡಿರಿ
ವೃಷಭ : ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಹಿಂತಿರುಗಿ ನೋಡುವ ಸಮಯವಾಗಿದೆ. ಹಂತ ಹಂತವಾಗಿ ಸಮಸ್ಯೆಗಳು ,ವಿವಾದಗಳು ತನ್ನಿಂದ ತಾನೇ ಮರೆಯಾಗುತ್ತಾ ಬರಲಿದೆ ಜೀವನದ ಗುಣ ಮಟ್ಟ ಮೇಲಕ್ಕೆ ಏರಲಿದೆ. ದೈನಂದಿನ ಚಟುವಟಿಕೆಗಳನ್ನು ಇನ್ನಷ್ಟು ಉತ್ಸಾಹದಿಂದ ಮಾಡಲಿದ್ದೀರಿ.ವೈವಾಹಿಕ ಜೀವನದ ಕಡೆಗೆ ಹೆಚ್ಚು ಗಮನ ಕೊಡುವುದು ಅಗತ್ಯವಿದೆ.”ಸೌಂದರ್ಯ ಲಹರಿ “ ಪಾರಾಯಣ ಮಾಡಿರಿ.
ಮಿಥುನ : ವ್ಯರ್ಥ ದುರಾಭಿಮಾನಕ್ಕೆ ಒಳಗಾಗಿ ಉನ್ನತಿಯನ್ನು ಕಳೆದುಕೊಂಡೀರಿ ಎಚ್ಚರವಿರಲಿ. ವ್ಯಾಪಾರದಲ್ಲಿ ನಿಮ್ಮ ಹಿಡಿತ ಗಟ್ಟಿಯಾಗಲಿದೆ.ಸಹೋದರ ವರ್ಗದವರಲ್ಲಿ ಈ ಮೊದಲು ಇದ್ದ ಭಿನ್ನಾಭಿಪ್ರಾಯಗಳು ಬಗೆ ಹರಿಯಲಿವೆ. ಈ ವಾರ ಅದೃಷ್ಟ ಕೈ ಹಿಡಿಯಲಿದೆ. ಶ್ರೀ ಲಕ್ಷ್ಮೀ ನರಸಿಂಹ ದೇವರ ಜಪವನ್ನು ಮಾಡಿರಿ. ವಿವಾಹವಾಗಲು ಕಾದು ಕುಳಿತವರಿಗೆ ಸಂತೋಷದ ಸೂಚನೆ ಸಿಗಲಿದೆ. ವಿದ್ಯಾರ್ಥಿಗಳ ಪ್ರಯತ್ನ ಸಾಕಾಗದೆ ಹೋಗಲಿದೆ.
ಕರ್ಕಾಟಕ : ವ್ಯವಹಾರ ಕ್ಷೇತ್ರದಲ್ಲಿ ಅನೇಕ ಅವಕಾಶಗಳು ಗೋಚರಕ್ಕೆ ಬರಲಿದ್ದು ಪ್ರಗತಿ ಕಾಣಿಸಿಕೊಳ್ಳಲಿದೆ. ಧಾರ್ಮಿಕ ,ಸಾಮಾಜಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಗೋಸಿಪ್ಗಳೇ ನಿಮಗೆ ದೊಡ್ಡ ಸಮಸ್ಯೆಗಳಾಗಲಿವೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತೋರಿಬಂದು ಧನಾಭಿವೃದ್ಧಿ ಉಂಟಾಗಲಿದೆ. ಕ್ರೀಡಾ ಕ್ಷೇತ್ರದಲ್ಲಿ ಇರುವವರಿಗೆ ಕನಸಿನ ಗುರಿ ಮುಟ್ಟಲು ಸೂಕ್ತ ಅವಕಾಶ ದೊರೆಯಲಿವೆ. ಯಾವುದೇ ವಿಷಯದಲ್ಲಿ ಹತಾಶರಾಗುವ ಅಗತ್ಯವಿರುವುದಿಲ್ಲ. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಾಗಿ ಮಾಡಿರಿ.
ಸಿಂಹ : ಉದ್ಯೋಗದಲ್ಲಿ ಯಶಸ್ಸು ಪಡೆಯಲಿದ್ದೀರಿ. ಕೌಟುಂಬಿಕ ವಿಷಯಗಳಲ್ಲಿ ಮುಖ್ಯ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಶನಿಯ ಪ್ರತಿಕೂಲತೆ ಮುಂದುವರಿಯುತ್ತಿದೆ.ಸ್ವಲ್ಪ ಸಮಯದ ಹಿಂದೆ ನೀವು ಅನುಭವಿಸಿದ ನಷ್ಟವನ್ನು ಮತ್ತೆ ಹಿಂತಿರುಗಿ ಪಡೆಯಲು ನಿಮ್ಮ ಪ್ರಯತ್ನ ನಡೆಯುತ್ತಿದೆ. ಭವಿಷ್ಯತ್ ಕಾಲದ ಬಗ್ಗೆ ನಿಮ್ಮ ಗಮನವಿರಲಿ. ಸಂಗಾತಿ ಮತ್ತು ಮಕ್ಕಳ ಜೊತೆಗೆ ಉತ್ತಮ ಸಮಯ ಕಳೆಯಲಿದ್ದೀರಿ. ಸಮಾಜದಲ್ಲಿ ಉತ್ತಮ ಹೆಸರು ಕೀರ್ತಿಯನ್ನು ಪಡೆಯಲಿದ್ದೀರಿ.
ಕನ್ಯಾ : ಪೋಷಕರ ಜೊತೆಗೆ ಬಾಂಧವ್ಯ ಗಟ್ಟಿಯಾಗಲಿದೆ. ಆಸ್ತಿ ವ್ಯವಹಾರದಲ್ಲಿ ಪ್ರಗತಿ ಕಾಣಲಿದೆ. ಸ್ಥಿರವಾದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಲಿದೆ. ಕಾರ್ಯ ಕ್ಷೇತ್ರದ ದುಡಿಮೆಯ ಮೌಲ್ಯಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ ಆಧ್ಯಾತ್ಮದೆಡೆಗೆ ನಿಮ್ಮ ಮನಸ್ಸು ಚಿಂತಿಸಲಿದೆ. ಸಂಸಾರ ಪ್ರೀತಿಯ ಗುಟ್ಟನ್ನು ತಿಳಿಸಲಿದೆ. ಕರ್ತವ್ಯ ಪ್ರಜ್ನೆ ನಿಮ್ಮನ್ನು ಜಾಗೃತ ಗೊಳಿಸಲಿದೆ. ಸರಿಯಾದ ಮಾರ್ಗದರ್ಶನ ನಿಮಗೆ ದಾರಿದೀಪವಾಗಲಿದೆ.
ತುಲಾ : ಹಣ ಕಾಸು ಲಾಭ ಗಳಿಸುವ ಯೋಗ ಇದೆ . ನಿಮ್ಮ ಜ್ನಾನ ಹಾಗೂ ಬೌದ್ಧಿಕ ಸಾಮರ್ಥ್ಯ ವೃದ್ಧಿ ಆಗಲಿದೆ. ಸಹೋದ್ಯೋಗಿಗಳ ಜೊತೆಗೆ ಉತ್ತಮ ಬಾಂಧವ್ಯ ಇರಲಿದೆ. ಯಾವುದೇ ವಿವಾದಕ್ಕೆ ಸಿಲುಕದಿರಿ. ಆರ್ಥಿಕವಾಗಿ ಹೂಡಿಕೆ ಮಾಡುವಲ್ಲಿ ಬಹಳ ಎಚ್ಚರವಹಿಸಿರಿ. ಅಭಿಪ್ರಾಯ ವ್ಯತ್ಯಾಸದಿಂದ ಗೆಳೆಯರು ದೂರವಾದಾರು. ನಾಲ್ಕು ಗೂಡೆಯ ಮಧ್ಯೆ ಕುಳಿತುಕೊಳ್ಳುವುದಕ್ಕಿಂತ ಹೊರ ಜಗತ್ತಿಗೆ ಬನ್ನಿರಿ. ಇದು ನಿಮಗೆ ಸಾಧ್ಯವಾಗಲಿದೆ.ಸಪ್ತ ಶತೀ ಪಾರಾಯಣ ಮಾಡುತ್ತಾ ಬನ್ನಿರಿ.
ವೃಶ್ಚಿಕ : ಉದ್ಯೋಗ ಸ್ಥಳದಲ್ಲಿ ನಿಮಗೆ ಅನುಕೂಲವಾದ ವಾತಾವರಣ ಒದಗಿ ಬರಲಿದೆ. ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ರವಿ ಬುಧ ಭಾಗ್ಯದಲ್ಲಿ ಇದ್ದಾರೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ಧಿ ಸಿಗಲಿದೆ. ನಿಮ್ಮಲ್ಲಿ ಪ್ರಾಮಾಣಿಕತೆ ,ಇರುವುದರಿಂದ ಒಳ್ಳೆಯ ಪ್ರತಿಫಲ ಸಿಗಲಿದೆ. ನಿಮ್ಮ ಕೆಲಸಗಳು ಬಾಳಿಗೆ ಭದ್ರತೆ ಒದಗಿಸಲಿದೆ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಹಲವು ಬಾರಿ ಯೋಚಿಸುವ ಒಳ್ಳೆಯ ಕ್ರಮವನ್ನು ಪಾಲಿಸಿಕೊಂಡು ಬನ್ನಿರಿ. ಗುರು ಚರಿತ್ರೆ ಓದಿರಿ.
ಧನು : ಈ ವಾರದಲ್ಲಿ ಅದೃಷ್ಟ ನಿಮ್ಮ ಪಾಲಿಗಿದೆ.ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಪ್ರಗತಿಯನ್ನು ಕಾಣುವಿರಿ. ಶನಿಯ ಕಾರಣದಿಂದ ಶರೀರದಲ್ಲಿ, ಮನಸ್ಸಿನಲ್ಲಿ ನೋವು ಇರುತ್ತದೆ. ಶಿಕ್ಷಕ ವೃತ್ತಿಯವರು ಬಾಳಿಗೊಂದು ನೆಲೆಯನ್ನು ಕಂಡುಕೊಳ್ಳಲಿದ್ದಾರೆ. ತಾತ್ಕಾಲಿಕ ಉದ್ಯೋಗದಲ್ಲಿ ಇರುವವರಿಗೆ ಖಾಯಂ ಆಗುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳಿಗೆ ಅತೀ ಉತ್ತಮವಾದ ಸಮಯವಾಗಿದೆ. ಸಿಟ್ಟು ಕಾಡಿಮೆ ಕೊಳ್ಳಬೇಕು. ಬೀಳುವ ಸಾಧ್ಯತೆ ಇರುವುದರಿಂದ ವಾಹನ ಸಂಚಾರದಲ್ಲಿ ಎಚ್ಚರವಿರಬೇಕು.
ಮಕರ : ಕಾನೂನು ಹೋರಾಟದಲ್ಲಿ ನಿಮಗೆ ಜಯ ಸಿಗಲಿದೆ. ಮಕ್ಕಳ ಜೊತೆಗೆ ಅನ್ಯೋನ್ಯತೆ ಇರುತ್ತದೆ. ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಮನಸ್ಸಿನ ಒಳಗಿರುವ ಸುಪ್ತ ಬಯಕೆಗಳು ಈಡೇರುವ ಕಾಲ ಬಂದಿದೆ.ಸಾರ್ವಜನಿಕವಾಗಿ ಹಲವಾರು ಸೌಲಭ್ಯಗಳನ್ನು ಪಡೆಯುವಿರಿ. ವೃತ್ತಿ ರಂಗದಲ್ಲಿ ನಿರ್ಭಯ ವಾತಾವರಣ ನಿಮ್ಮ ಉತ್ಸಾಹವನ್ನು ಹೆಚ್ಚಿಸಲಿದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಬರುವ ಧನಲಾಭ ನಿಮ್ಮ ತಾಳ ಭಾಗ ಭದ್ರವಾಗುವಂತೆ ಮಾಡಲಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸ ಉತ್ತಮವಾಗಿ ಸಾಗಲಿದೆ.
ಕುಂಭ : ಸಂಗಾತಿ ಜೊತೆಗೆ ರಾಹು ,ಕುಜರು ಸಂಬಂಧವನ್ನು ಹಾಳು ಮಾಡಲು ಪ್ರಯತ್ನ ಮಾಡುತ್ತಿರುತ್ತಾರೆ. ರಾಹು ಶನಿ ನಿಮ್ಮನ್ನು ಪರೀಕ್ಷೆ ಮಾಡುತ್ತಿರುತ್ತಾರೆ. ಶನಿ ಕುಜರು ನಿಮ್ಮ ಮನಸ್ಸನ್ನು ಚಂಚಲ ಮಾಡುತ್ತಿರುತ್ತಾರೆ. ಕೌಟುಂಬಿಕ ಜೀವನದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾಗಲಿದೆ. ಸಂಸ್ಥೆಗಳಲ್ಲಿ ಉನ್ನತ ಜಾಗದಲ್ಲಿ ಇರುವವರು ಸಹವರ್ತಿಗಳ ಜೊತೆಗೆ ಬಹಳ ಅನ್ಯೋನ್ಯತೆಯಿಂದ ಇರಬೇಕಾಗುತ್ತದೆ.ನೌಕರರ ಕೊರತೆ ಕಂಡುಬರಲಿದೆ. ಮಹಿಳಾ ನೌಕರರ ಜೊತೆಗೆ ಜಾಗ್ರತೆಯಿಂದ ವರ್ತಿಸಿರಿ.
ಮೀನ : ಸಹೋದರ ಸಂಬಂಧಿಗಳ ಜೊತೆಗೆ ಬಾಂಧವ್ಯತೆ ಉತ್ತಮವಾಗಲಿದೆ. ವೃತ್ತಿಪ ಕಾರಣಗಳಿಗಾಗಿ ಪ್ರಯಾಣಗಳನ್ನು ಮಾಡ ಬೇಕಾಗುತ್ತದೆ. ನಿಮ್ಮ ಹಿತಶತ್ರುಗಳು ನಿಮ್ಮ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುತ್ತಾರೆ. ಸ್ಥಿರವಾದ ಆರೋಗ್ಯ ಹಾಗೂ ದೃಢತೆ ಕಾಯ್ದುಕೊಳ್ಳುವುದು ಸವಾಲಾಗಿ ಪರಿಣಮಿಸಲಿದೆ. ವೈವಾಹಿಕ ಜೀವನದಲ್ಲಿ ನೆಮ್ಮದಿಗಾಗಿ ಕುಜ ಹರ ಸಾಹಸ ಪಡಿಸಲಿದ್ದಾನೆ. ಸಿಟ್ಟು ಬಾರಲೇ ಬಾರದು. ತಾಳ್ಮೆ ಬೇಕು ಎಲ್ಲವೂ ಸರಿಯಾಗಲಿದೆ.

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ತಯಾರಿಸಿ ಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು.ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು.



































