ವಾರ ಭವಿಷ್ಯ
ದಿನಾಂಕ 02.06.2024 ರಿಂದ ದಿನಾಂಕ 08.06.2024 ರವರೆಗೆ
ಮೇಷ :ನಿಮ್ಮ ರಾಶ್ಯಾಧಿಪತಿಯೂ ಅಷ್ಟಮಾಧಿಪತಿಯೂ ಆಗಿರುವ ಕುಜನು ಜನ್ಮ ರಾಶಿಯಲ್ಲಿ
ಇರುವುದರಿಂದ ಆರೋಗ್ಯದ ಕಡೆಗೆ ಗಮನ ಹರಿಸಿರಿ. ಆಹಾರದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಬೇಕು
.ದ್ವಿತೀಯಾದಲ್ಲಿ ಶುಕ್ರ,ಗುರು,ರವಿ ಬುಧ ವಾರ ಭವಿಷ್ಯ ದಿನಾಂಕ 02.06.2024 ರಿಂದ
08.06.2024 ರ ವರೆಗೆ ಇರುವುದು ಸರ್ವ ರೀತಿಯಿಂದಲೂ ದೈವಾನುಗ್ರಹವಿರುವುದನ್ನು ಸೂಚಿಸುತ್ತಿದೆ .
ಬರ ಬೇಕಾಗಿರುವ ಹಣ ಸರಿಯಾದ ವೇಳೆಯಲ್ಲಿ ಬರಲಿದೆ .ವ್ಯರ್ಥ ಖರ್ಚುಗಳು ಬರದಂತೆ ಎಚ್ಚರ
ವಹಿಸಬೇಕು .ಸಾಲಕ್ಕೆ ಅರ್ಜಿ ಹಾಕಿರುವವರಿಗೆ ಬಹಳ ಸುಲಭದಲ್ಲಿ ಒದಗಿ ಬರಲಿದೆ .ನಿಮ್ಮ ಪ್ರಯತ್ನಕ್ಕೆ
ಸರಿಯಾಗಿ ಶನಿ ಫಲ ಒದಗಿಸಿ ಕೊಡಲಿದ್ದಾನೆ .ಕಣ್ಣಿನ ಬಗ್ಗೆ ಎಚ್ಚರವಿರಲಿ .ವಿದ್ಯಾರ್ಥಿಗಳು
ಯಶಸ್ವಿಯಾಗುವರು .ರಾಜಕೀಯ ವ್ಯಕ್ತಿಗಳು ಉತ್ತಮ ಸ್ಥಾನ ಮಾನ ಹೊಂದಲಿದ್ದಾರೆ.
ವೃಷಭ : ನಿಮ್ಮ ರಾಶ್ಯಾಧಿಪತಿ ಶುಕ್ರ 6 ನೇ ಮನೆಯವನಾಗಿ ಜನ್ಮ ರಾಶಿಯಲ್ಲಿ ಇದ್ದಾನೆ . ಸ್ವಂತ
ಉದ್ಯೋಗ ಮಾಡುವವರಿಗೆ ಒಳ್ಳೆಯ ಫಲ ಒದಗಿ ಬರಲಿದೆ .ನಿಮ್ಮ ಮನಸ್ಸಿನಲ್ಲಿ ಇರುವ ಆಸೆ
ಆಕಾಂಕ್ಷೆಗಳು ಈಡೇರಲಿದೆ .ಸುಖಸ್ಥಾನದ ಅಧಿಪತಿ ರವಿ ಜನ್ಮ ರಾಶಿಯಲ್ಲಿ ಇರುವುದರಿಂದ ವಾಹನ ಮನೆ
ಜಾಗ ಖರೀಧಿ ಮಾಡುವ ನಿಮ್ಮ ಕನಸು ನನಸಾಗಲಿದೆ .ರವಿಯ ಜೊತೆಗೆ ಗುರು ಬುಧ ನಿರುವುದು ನಿಮಗೆ
ಶುಭ ಫಲ ಕೊಡಲೆಂದೇ ಇದ್ದಾರೆ .ನೀವು ಮಾಡುವ ಉದ್ಯೋಗ ಸರಕಾರಿ ಆಗಿರಲಿ ,ಪ್ರೈವೇಟ್ ಆಗಿರಲಿ
ನೀವು ಶುಭ ಫಲವನ್ನೇ ಪಡೆಯುವಿರಿ .ನಿಮ್ಮ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವ ಯೋಗವಿದೆ
.ವಿದ್ಯಾರ್ಥಿಗಳು ಯಶಸ್ವಿಯಾಗುವರು .ರಾಜಕೀಯದಲ್ಲಿ ಇರುವವರು ಚಂದ್ರನಂತೆ ಮಿಂಚಲಿದ್ದಾರೆ.
ಮಿಥುನ : ನಿಮ್ಮ ರಾಶ್ಯಾಧಿಪತಿ ಮತ್ತು ಸುಖಾಧಿಪತಿ ಬುಧ ವ್ಯಯದಲ್ಲಿ ,ಸಪ್ತಮಾಧಿಪತಿ ,ಕರ್ಮಾಧಿಪತಿ
ಗುರು ವ್ಯಯದಲ್ಲಿ ,ತೃತೀಯಾಧಿಪತಿ ರವಿ ವ್ಯಯದಲ್ಲಿ ,ಪಂಚಮಾಧಿಪತಿ ಶುಕ್ರ ,ವ್ಯಯಾಧಿಪತಿಯಾಗಿ
ವ್ಯಯದಲ್ಲಿ ಇರುವುದು ದರಿದ್ರ ಯೋಗ ಎನಿಸುತ್ತದೆ . ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ
ಬರಬೇಕು . ಮನೆ ಬದಲಾವಣೆಯ ಸಾಧ್ಯತೆ ಇದೆ .ಸಂಸಾರದಲ್ಲಿ ಹೊಂದಾಣಿಕೆಯ ಬದುಕು ಅಗತ್ಯವಿದೆ .
ತಾಯಿ ,ಹೆಂಡತಿ ಸಹೋದರ ಇವರ ಬಗ್ಗೆ ನಿಮ್ಮ ಗಮನವಿರಲಿ .ವೈರಾಗ್ಯ ಬರದಂತೆ ಎಚ್ಚರ ವಹಿಸಿರಿ .
ವಿದೇಶ ಪ್ರಯಾಣ ಯೋಗವಿದೆ .ಕೆಲಸಗಳೆಲ್ಲಾ ನಿಧಾನ ಗತಿಯಲ್ಲಿ ಸಾಗಲಿದೆ .ಸರಕಾರಿ ಕೆಲಸಗಳು ಈ ವಾರ
ಆಗುವುದು ಕಷ್ಟ .ರಾಜಕೀಯ ವ್ಯಕ್ತಿಗಳಿಗೆ ಶುಭ ಫಲ ನಿರೀಕ್ಷೆ ಮಾಡುವ ಹಾಗಿಲ್ಲ .
ಕರ್ಕಾಟಕ : ದ್ವಿತೀಯಾಧಿಪತಿ ರವಿ ಲಾಭ ಕ್ಷೇತ್ರದಲ್ಲಿ ಶುಕ್ರ ಗುರು ಬುಧ ಇವರ ಜೊತೆಗೆ ಇದ್ದಾನೆ ನೀವು
ನಡೆಸುವ ಯಾವುದೇ ವ್ಯವಹಾರಗಳು ಯಶಸ್ವಿಯಾಗಿ ನಡೆಯಲಿವೆ. ಕುಟುಂಬದಲ್ಲಿ ದೂರವಾದವರು
ಹತ್ತಿರವಾಗಲಿದ್ದಾರೆ .ಮನೆ, ವಾಹನ ,ಜಾಗ ಖರೀಧಿ ಯೋಗವನ್ನು ಶುಕ್ರ ಕರುಣಿಸಲಿದ್ದಾನೆ .ಧಾರ್ಮಿಕ
,ಮಂಗಳ ಕೆಲಸಗಳು ನಡೆಯಲಿವೆ .ಉದ್ಯೋಗದಲ್ಲಿ ಇರುವವರಿಗೆ ಭಡ್ತಿ ಯೋಗವಿದೆ .ಪ್ರಶಂಸೆ
,ಸಾರ್ವಜನಿಕ ಸನ್ಮಾನ ನಿಮಗೆ ನಡೆಯಲಿದೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ
ಅಂಕಗಳೊಂದಿಗೆ ಯಶಸ್ವಿಯಾಗುವರು ಪಿತ್ರಾರ್ಜಿತ ಆಸ್ತಿಯ ಬಗ್ಗೆ ಕಲಹ ಬರುವ ಸೂಚನೆ ಇದೆ . ಮಾತು
ಹಿಡಿತದಲ್ಲಿ ಇರಲಿ .ಶನಿ ದೋಷ ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ
ಸಿಂಹ : ಕರ್ಮ ಕ್ಷೇತ್ರದಲ್ಲಿ ಗುರು ,ಬುಧ,ಶುಕ್ರ, ರವಿ ,ಇದ್ದಾರೆ .ದಿಗ್ಬಲವನ್ನು ರವಿ ಸೂಚಿಸುತ್ತಿದ್ದಾನೆ
.ನಿಮ್ಮ ಯಾವುದೇ ವ್ಯವಹಾರ ಉದ್ಯೋಗವನ್ನು ಯಶಸ್ವಿಯಾಗುವಂತೆ ಗುರು ,ಶುಕ್ರರು ನೆರವೇರಿಸಿ
ಕೊಡಲಿದ್ದಾರೆ .ಜೀವನದಲ್ಲಿ ಹಲವಾರು ಬದಲಾವಣೆಗಳನ್ನು ಕಾಣುವ ಸಮಯವಾಗಿದೆ .ಗೌರವ ಭಡ್ತಿ
ಪ್ರಾಪ್ತಿಯಾಗುವ ಕಾಲವಾಗಿದೆ ಅನೇಕ ರೀತಿಯಿಂದ ಹಣದ ಹರಿವು ಬರಲಿದೆ ಮಾತಿನಲ್ಲಿ ಹಿಡಿತವಿರಲಿ
.ಸತ್ಯವಿರಲಿ .ಇನ್ನೊಬ್ಬರ ಪಾಲುಗಾರಿಕೆಯಲ್ಲಿ ಕೆಲಸ ಮಾಡುವುದು ಉತ್ತಮವಾಗಿದೆ .ನಾಗ ದೇವರ
ಪ್ರಾರ್ಥನೆ ಮಾಡಿರಿ .ಭಾಗ್ಯದಲ್ಲಿ ಕುಜನಿದ್ದಾನೆ .ತಂದೆಯವರ ಜೊತೆಗೆ ಕಲಹವಾಗುವ ಸಾಧ್ಯತೆ ಇದೆ
.ಪ್ರೀತಿ ಪ್ರೇಮಕ್ಕೆ ಬಲಿಯಾಗುವ ಸಾಧ್ಯತೆ ಇದೆ .
ಕನ್ಯಾ :ರಾಶ್ಯಾಧಿಪತಿ ಬುಧ ಭಾಗ್ಯದಲ್ಲಿ ,ಗುರು ಶುಕ್ರ ರವಿಯೊಂದಿಗೆ .ವಿಶೇಷ ಯೋಗ ಒಳಿದು ಬಂದಿದೆ .
ಕುಜ ಅಷ್ಟಮದಲ್ಲಿ ಸಪ್ತಮದಲ್ಲಿ ರಾಹು ದಾಂಪತ್ಯದ ವಿಷಯದಲ್ಲಿ ಮಾತ್ರ ಬಹಳ ಎಚ್ಚರವಿರಲಿ
.ಪರಸ್ಫರ ನಂಬಿಕೆಯೇ ಜೀವನದಲ್ಲಿ ಮುಖ್ಯ . ನೀವು ಮಾಡಬೇಕೆಂದಿರುವ ಕೆಲಸವನ್ನು ಪ್ರಾಮಾಣಿಕವಾಗಿ
ಮಾಡಿ ಮುಗಿಸುವಿರಿ .ನಿಮ್ಮ ಆರೋಗ್ಯದ ಕಡೆಗೆ ಗಮನವಿರಲಿ .ಸಹೋದರನ ಅನಾರೋಗ್ಯ ನಿಮ್ಮನ್ನು
ಚಿಂತೆಗೀಡು ಮಾಡಲಿದೆ .ಕಂಕಣ ಬಲ ಕೂಡಿಬಂದಿದೆ .ಜಾತಕ ಹೊಂದಾಣಿಕೆ ಮುಖ್ಯ .ಒಬ್ಬರನ್ನು ಪ್ರೀತಿ
ಮಾಡಿಕೊಂಡಿರುತ್ತೀರಿ . ಹಿರಿಯರ ಸಲಹೆ ಸಹಕಾರ ನಿಮಗೆ ಅಗತ್ಯವಿದೆ . ಸಪ್ತಮದ ರಾಹು ಇಲ್ಲ ಸಲ್ಲದ
ಮಾತುಗಳನ್ನು ಕೇಳುವಂತೆ ಮಾಡಲಿದೆ .
ತುಲಾ :ನಿಮ್ಮ ರಾಶ್ಯಾಧಿಪತಿ ಶುಕ್ರ ಶುಕ್ರ ಅಷ್ಟಮದಲ್ಲಿ ಇದ್ದಾನೆ ಷುಗರ್ ಬಿಪಿ ಇರುವವರು ಎಚ್ಚರಿಕೆ
ವಹಿಸಿರಿ .ರವಿ ನಿಮ್ಮ ರಾಶಿಗೆ ಭಾಧಕಾಧಿಪತಿಯಾಗಿ ಅಷ್ಟಮದಲ್ಲಿ ಇರುವುದು ಇವರ ಜೊತೆಗೆ ಗುರು
ಮತ್ತು ಬುಧನಿರುವುದು ನೀವು ಎಲ್ಲಾ ರೀತಿಯಿಂದಲೂ ಯೋಚಿಸಬೇಕಾಗಿರುವುದು ಅಗತ್ಯವಾಗಿದೆ . ಲಾಭ
ನಷ್ಟಗಳ ಸಮಪಾಲು ಇಲ್ಲಿದೆ . ಗುರುವಿನ ಅನುಗ್ರಹವಿಲ್ಲದ ನಿಮಗೆ ಶನಿ ಪಂಚಮದಲ್ಲಿ ಇರುವುದು
ಕಷ್ಟದ ಕಾಲವಾಗಿದೆ .ಒಟ್ಟು ಒತ್ತಡದ ಜೀವನ ನಡೆಸುವಿರಿ . ವಿದ್ಯಾರ್ಥಿಗಳು ಶ್ರಮ ಪಾಡಬೇಕಾಗಿದೆ .
ಸಂಗಾತಿಯ ಆರೋಗ್ಯದ ಕಡೆಗೆ ಗಮನವಿರಲಿ ಸಪ್ತಮದಲ್ಲಿ ಕುಜನಿದ್ದಾನೆ .
ವೃಶ್ಚಿಕ :ನಿಮ್ಮ ರಾಶ್ಯಾಧಿಪತಿ ಕುಜ 6 ನೇ ಮನೆಯಲ್ಲಿ ,ಸಪ್ತಮದಲ್ಲಿ ಗುರು ,ಶುಕ್ರ ,ರವಿ , ಬುಧ
ಚತುರ್ಗ್ರಹ ಯೋಗ ಕೂಡಿ ಬಂದಿದೆ , ಸುಖ ಸ್ಥಾನದ ಶನಿ ,ಪಂಚಮದ ರಾಹು ಇವರಿಗೆ ಪರಿಹಾರ
ಅಗತ್ಯವಿದೆ ವಿವಾಹದ ತಯಾರಿಯಲ್ಲಿ ಇರುವವರಿಗೆ ಕಾಲ ಕೂಡಿ ಬಂದಿದೆ . ರಾಜಕೀಯದಲ್ಲಿ
ಇರುವವರಿಗೆ ಜಯ ನಿಶ್ಚಿತವಾಗಿಯೂ ಒದಗಿ ಬರಲಿದೆ . ಆರೋಗ್ಯದ ಕಡೆಗೆ ಗಮನವಿರಲಿ . ಅನ್ಯ
ಮಹಿಳೆಯರ ಬಗ್ಗೆ ಎಚ್ಚರವಿರಲಿ . ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉದ್ಯೋಗ ಪ್ರಾಪ್ತಿ
ಯೋಗವಿದೆ ..ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಆಸೆ ಈಡೇರಲಿದೆ . ಸಂಗಾತಿಯ ಸಹಕಾರ ಸಿಗಲಿದೆ
.ನಿಮ್ಮಲ್ಲಿ ಆತ್ಮ ವಿಶ್ವಾಸ ಮೂಡಿ ಬರಲಿದೆ .ಗೌರವ ಮಾನ ,ಸನ್ಮಾನ ಎಲ್ಲ ಕಡೆಯಿಂದಲೂ ಬರಲಿದೆ .
ಯಾರಿಗೂ ಸಾಲಕ್ಕೆ ಸಹಿ ಹಾಕಲು ಹೋಗಬೇಡಿರಿ . ಯಾರನ್ನೂ ಅತಿಯಾಗಿ ನಂಬ ಬೇಡಿರಿ .
ಧನು :ನಿಮ್ಮ ರಾಶ್ಯಾಧಿಪತಿ ಗುರು ಸುಖಾಧಿಪತಿಯಾಗಿ 6 ನೇ ಮನೆಯಲ್ಲಿ ಇದ್ದಾನೆ .ಸುಖ ಸ್ಥಾನದಲ್ಲಿ
ರಾಹು ಇದ್ದಾನೆ . ಸುಖವೆನ್ನುವುದು ಮರೀಚಿಕೆಯಾಗಲಿದೆ .6 ನೇ ಮನೆಯಲ್ಲಿ ಈ ಗುರುವಿನ ಜೊತೆಗೆ
ಶುಕ್ರ ರವಿ ಬುಧ ಇದ್ದಾರೆ .ಸಾಲ ಮಾಡುವ ಯೋಗವಿದೆ .ಆರೋಗ್ಯದಲ್ಲಿ ಏರುಪೇರು ಆಗಲಿದೆ .ಶನಿ
ತೃತೀಯಾದಲ್ಲಿ ಇರುವುದು ಶುಭದಾಯಕವಾಗಿದೆ .ಮನೆ ಭೂಮಿ ಖರೀಧಿ ಮಾಡುವ ಸಾಧ್ಯತೆ ಇದೆ .ಆದರೆ
ನೀವು ತೆಗೆದುಕೊಳ್ಳುವ ತೀರ್ಮಾನ ಸರಿಯಾಗಿರಲಿ ದೇವರ ಅನುಗ್ರಹಕ್ಕಾಗಿ ಕುಲದೇವರ ದರ್ಶನ ಮಾಡಿರಿ
.ನಾಗ ದೇವರ ಪ್ರಾರ್ಥನೆ ಅಗತ್ಯವಿದೆ .ಸಂತಾನದ ನಿರೀಕ್ಷೆಯಲ್ಲಿ ಇರುವವರು /ಗರ್ಭಿಣಿಯರು ವೈದ್ಯಕೀಯ
ಸಲಹೆಯನ್ನು ಸರಿಯಾಗಿ ಪಾಲಿಸಿರಿ .
ಮಕರ :ರಾಶ್ಯಾಧಿಪತಿ ಶನಿ ದ್ವಿತೀಯಾದಲ್ಲಿ ಇದ್ದಾನೆ .ಸಾಲದ ಭಾಧೆ ನಿವಾರಣೆಯಾಗಲಿದೆ .ಆದರೆ ಸಾಡೇ
ಸಾತ್ ಶನಿಯ ದೋಷ ಮುಂದುವರಿಯುತ್ತಿದೆ .ಕುಜ ಸುಖ ಸ್ಥಾನದಲ್ಲಿ ಇದ್ದಾನೆ . ಕುಜನ ಮನೆಯಲ್ಲಿ
ಕುಜನಿದ್ದಾನೆ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಮಾತುಕತೆ ಆಗಬಹುದು ,ಆರೋಗ್ಯದ ಕಡೆಗೆ ಗಮನವಿರಲಿ
.ವಾಹನ ಚಾಲಕರು ಎಚ್ಚರದಿಂದಿರಿ .ಸಿಡಿಲು ಮಿಂಚು ಬಗ್ಗೆ ಗಮನವಿರಲಿ .ನಿಮ್ಮ ತಾಯಿಯವರ ಬಗ್ಗೆ
ಎಚ್ಚರವಿರಲಿ .ದೈವಾನುಗ್ರಹ ಉತ್ತಮವಿದೆ . ಪಂಚಮದಲ್ಲಿ ಶುಕ್ರ ಗುರು ರವಿ ಬುಧ ,ಮಕ್ಕಳ
ವಿದ್ಯಾಭ್ಯಾಸ ಉತ್ತಮವಾಗಿ ನಡೆಯಲಿದೆ .ಶುಭ ಕೆಲಸಗಳನ್ನು ನಡೆಸಲು ಅನುಕೂಲವಾದ ಸಮಯವಾಗಿದೆ
.ಮಕ್ಕಳು ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ . ಶುಭ ಮಂಗಳ ಕೆಲಸಗಳನ್ನು ನಡೆಸಲು ಅನುಕೂಲವಾದ
ಸಮಯ .
Top
ಕುಂಭ: ರಾಶ್ಯಾಧಿಪತಿ ಶನಿ ನಿಮ್ಮ ರಾಶಿಯಲ್ಲಿಯೇ ಇದ್ದಾನೆ . ತೃತೀಯಾಧಿಪತಿ ತೃತೀಯಾದಲ್ಲಿ
ಕುಜನಿದ್ದು ನೀವು ನಡೆಸುವ ಎಲ್ಲಾ ಕೆಲಸಗಳು ಶುಭವಾಗಲಿದೆ .ನೀವು ಸ್ವಂತ ಉದ್ಯೋಗ
ಮಾಡುತ್ತಿದ್ದಲ್ಲಿ ಯಶಸ್ವಿಯಾಗುವಿರಿ .ಸುಖ ಸ್ಥಾನದಲ್ಲಿ ಗುರು ,ಶುಕ್ರ ,ರವಿ,ಬುಧ ನಿರುವುದು ಮಹಾ
ಯೋಗವಾಗಿದೆ .ಮನೆ ಭೂಮಿ ವಾಹನ ಖರೀಧಿ ಮಾಡುವ ಸಮಯವಾಗಿದೆ .ನಿಮ್ಮ ಆಸೆ ಈಡೇರಲಿದೆ
.ಅಮ್ಮನವರ ಬಗ್ಗೆ ಮೃಧು ಧೋರಣೆ ನಿಮ್ಮಲ್ಲಿರಲಿ . ಅನ್ನಪೂರ್ಣೇಶ್ವರಿ ಅಮ್ಮನವರ ದರ್ಶನ ಮಾಡಿರಿ
.ವಿದ್ಯಾರ್ಥಿಗಳಿಗೆ ಶುಭವಾಗಲಿದೆ .ಆದರೆ ಸಾಡೇ ಸಾತ್ ಶನಿಯ ಪ್ರಭಾವ ಇರುವ ಕಾರಣ ಜಡತ್ವ ಇವರಲ್ಲಿ
ಇರುತ್ತದೆ . ಮೊಬೈಲ್ ಕಣ್ಣು ನೋವನ್ನು ತರಲಿದೆ . ವಿಷ್ಣು ಸಹಸ್ರ ನಾಮ ಪಾರಾಯಣ ಮಾಡಲು
ಮರೆಯದಿರಿ .
ಮೀನ : ನಿಮ್ಮ ರಾಶ್ಯಾಧಿಪತಿ ಕರ್ಮಾಧಿಪತಿ ಗುರು ತೃತೀಯಾದಲ್ಲಿ ಇರುವುದು ದೇವರ ಅನುಗ್ರಹಕ್ಕೆ
ಕೊರತೆಯಾಗಿದೆ .ಜೊತೆಗೆ ಶುಕ್ರ ರವಿ ಬುಧ ಕೂಡಾ ಗುರುವಿನ ಜೊತೆಗೆ ಇರುವುದು ನಿತ್ಯ ವಿಷ್ಣು
ಸಹಸ್ರನಾಮ ಪಾರಾಯಣ ಮಾಡುವುದು ಅನಿವಾರ್ಯವಾಗಿದೆ .ಸಾಡೇ ಸಾತ್ ಶನಿಯ ಪ್ರಭಾವ
,ದ್ವಿತೀಯಾದ ಕುಜನ ಪ್ರಭಾವ ನಿಮ್ಮ ಮೇಲೆ ಬರಲಿದೆ .ಕೇತು ಭಾಧಕ ಸ್ಥಾನದಲ್ಲಿ ಇದ್ದಾನೆ
ಸಂಗಾತಿಯೊಂದಿಗೆ ,ಬಂಧುಗಳ ಜೊತೆಗೆ ಹೊಂದಿ ಕೊಂಡು ಹೋಗುವುದು ,ಅವರಿಗೆ ಒತ್ತಡವನ್ನು ಉಂಟು
ಮಾಡದಿರುವುದು ,ಹಾಗೆಯೇ ನೀವು ಒತ್ತಡವನ್ನು ತಂದು ಕೊಳ್ಳದಿರುವುದು ಬಹಳ ಮುಖ್ಯವಾಗಿದೆ .ಹಣ
ಕಳೆದುಕೊಳ್ಳುವ ಸಾಧ್ಯತೆ ಇದೆ .

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು . ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು . ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ತಿಳಿಸಲಾಗುವುದು . ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು.






































