

ವಾರ ಭವಿಷ್ಯ ದಿನಾಂಕ 01.12.2024 ರಿಂದ 07.12.2024 ರ ವರೆಗೆ
ವಿಶೇಷ ದಿನಗಳು
01.12.2024…….ಅಮಾವಾಸ್ಯಾ ;ಕಾರ್ತಿಕ ಸ್ನಾನ ಸಮಾಪ್ತಿ 02.12.2024……ಮಕರ ರಾಶಿಗೆ ಶುಕ್ರನ ಪ್ರವೇಶ
06.12.2024……ವಕ್ರೀ ಕುಜ: ಸ್ಕಂದ ಪಂಚಮೀ
07.12.2024……ಚಂಪಾ ಷಷ್ಟೀ,ಸುಬ್ರಹ್ಮಣ್ಯ ಷಷ್ಟೀ
ಮೇಷ : ಈ ವಾರದ ಎಲ್ಲಾ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ನಡೆಯುತ್ತವೆ. ಹೊಸ ಯೋಜನೆಗಳು
ಸಧ್ಯಕ್ಕೆ ಬೇಡ. ಹಣ ಕಾಸು ವ್ಯವಹಾರಸ್ಥರು ಜಾಗ್ರತೆಯಿಂದ ವ್ಯವಹಾರ ನಡೆಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭ ಸಮಯವಾಗಿದೆ. ನರ ,ಉಷ್ಣ ಸಂಬಂಧ ಸಮಸ್ಯೆಗಳು ಬರಲಿವೆ. ಅದೇನು ಸಿಟ್ಟು?
ಮನಸ್ಸು ಎಷ್ಟು ಒಳ್ಳೆಯದಿದ್ದರೂ ಒಂದು ಸಿಟ್ಟಿನ ಮಾತು ಎಲ್ಲವನ್ನೂ ಹಾಳು ಮಾಡಲಿದೆ. ನಿಮ್ಮ ಆರೋಗ್ಯದ ಮೇಲೆಯೂ ಸಮಸ್ಯೆ ತರಲಿದೆ. ಕುಟುಂಬದಲ್ಲಿ ಮನಸ್ತಾಪ ,ಕಿರಿಕಿರಿ ಇರುತ್ತದೆ.ತಾಳ್ಮೆಯಿಂದ ವರ್ತಿಸಿರಿ. ಕೌಟುಂಬಿಕ ಜೀವನದಲ್ಲಿ ಕುಜ ,ರವಿ ಬುಧರು ಏರಿಳಿತವನ್ನು ತರಲಿದ್ದಾರೆ. ಸಂಗಾತಿಯ ವರ್ತನೆ ಬೇಸರ ತರಲಿದೆ. ದೇವಿಯ ಆರಾಧನೆಯಿಂದ ಎಲ್ಲಾ ಸಮಸ್ಯೆಗಳು ದೂರವಾಗಲಿದೆ. ಗುರುವಿನ ಅನುಗ್ರಹ ನಿಮಗಿರುತ್ತದೆ.
ವೃಷಭ :ಈ ವಾರದಲ್ಲಿ ಬಂಧುಗಳ ಸಹಾಯದಿಂದ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ.ಅನೇಕ ಸಮಯದಿಂದ ದಾಂಪತ್ಯದಲ್ಲಿ ಇದ್ದ ಶೀತಲ ಸಮರ ಕೊನೆಯಾಗುವ ಲಕ್ಷಣ ಕಂಡು ಬರಲಿದೆ. ವಾಹನ ಖರೀಧಿ ಯೋಗವಿದೆ .ಪಿತ್ರಾರ್ಜಿತ ಆಸ್ತಿಯ ಬಗ್ಗೆಕಲಹ ವಿದ್ದರೂ ನಿಮಗೆ ಪ್ರಾಪ್ತಿ ಯೋಗವಿದೆ .ರಾಜಕೀಯ ಗಣ್ಯರ ವಿಷಯದಲ್ಲಿ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಮಾನಸಿಕ ಚಂಚಲತೆ ಬರದಂತೆ ಎಚ್ಚರವಹಿಸಬೇಕು. ತಮ್ಮ ಭವಿಷ್ಯತ್ತಿನ ಬಗ್ಗೆ ಎಚ್ಚರ ವಹಿಸಿರಿ. ಗಣಪತಿ ದೇವರ ಪ್ರಾರ್ಥನೆ ಅಗತ್ಯವಿದೆ.
ನೀವು ಮಾಡುತ್ತಿರುವ ಉದ್ಯೋಗ ,ವ್ಯವಹಾರದಲ್ಲಿ ನಿರೀಕ್ಷಿತ ಯಶಸ್ಸನ್ನು ಕಾಣುವಿರಿ. ಕ್ರಯ ವಿಕ್ರಯಗಳಲ್ಲಿ ಎಚ್ಚರದಿಂದಿರಿ. ಶುಕ್ರನ ಪ್ರಭಾವದಿಂದ ಉತ್ತಮ ವಸ್ತಾಭರಣ ಖರೀಧಿಸುವಿರಿ .
ಆರ್.ಬಿ.ನ್ಯೂಸ್
ಮಿಥುನ : ನಿಮ್ಮ ಅನಿಸಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವಾಗ ಎಚ್ಚರದಿಂದಿರಿ. ಸ್ತ್ರೀಯರು ಬಹಳ
ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ಪತಿ ಪತ್ನಿಯರ ನಡುವೆ ಹೊಂದಾಣೀಕೆಯ ಅಗತ್ಯವಿದೆ. ವ್ಯಯಾಧಿಪತಿ ಶುಕ್ರ ಸಪ್ತಮದಲ್ಲಿ ಇದ್ದಾನೆ .ಹಿರಿಯರ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ.ವೈದ್ಯರಿಗೆ
ವಕೀಲರಿಗೆ ಒಳ್ಳೆಯ ವರಮಾನದ ಸಮಯವಾಗಿದೆ. ಯಾರನ್ನೂ ಅತಿಯಾಗಿ ನಂಬುವುದು ಬೇಡ.ಪ್ರೇಮಿಗಳು ಮೋಸ ಹೋಗದಂತೆ ಎಚ್ಚರವಿರಲಿ .ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ.ಕೃಷಿಕರಿಗೆ ,ಹೋಟೆಲ್ ಉದ್ಯಮಿಗಳಿಗೆ ಉತ್ತಮ ಸಮಯವಾಗಿದೆ. ಹಿರಿಯ ಜೊತೆ ಕುಜ ವಾಗ್ಯುದ್ಧ
ಮಾಡುವಂತೆ ಮಾಡಲಿದ್ದಾನೆ. ಮಾತಿನಲ್ಲಿ ಹಿಡಿತವಿರಲಿ.ಕರ್ಕಾಟಕ : ಈ ವಾರ ನಿಮಗೆ ಜನ್ಮದ ಕುಜ ಮತ್ತು ಅಷ್ಟಮದ ಶನಿಯ ಕಾರಣದಿಂದ ಆದಾಯ ಮತ್ತು ಖರ್ಚು ಸಮಾನವಾಗಿರುತ್ತದೆ .ಆರೋಗ್ಯದಲ್ಲಿ ಕೆಲವೊಂದು ಸಮಸ್ಯೆಗಳು ಬರುವ ಸಾಧ್ಯತೆ ಇದೆ .ಲಕ್ಷ್ಮೀ ನರಸಿಂಹ ದೇವರ ಪಾರಾಯಣ ಅತೀ ಅಗತ್ಯವಾಗಿದೆ.ಕಾನೂನು ವ್ಯಾಜ್ಯಗಳಲ್ಲಿ ನಿಮ್ಮ ವಿರುದ್ಧ ತೀರ್ಪು
ಬರಬಹುದು .ಗುರು ಲಾಭ ಕ್ಷೇತ್ರದಲ್ಲಿ ಇರುವುದರಿಂದ ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ನಿಮ್ಮ ವ್ಯವಹಾರ ,ಉದ್ಯೋಗದಲ್ಲಿ ಬಡ್ತಿ ಯೋಗವಿದೆ .ದೇವರ ಆರಾಧನೆ ಅಗತ್ಯವಿದೆ .ವ್ಯಾಪಾರ ವಿಸ್ತರಣೆಗೆ ಇದು ಸರಿಯಾದ ಸಮಯವಲ್ಲ.
ಸಿಂಹ : ಜನ ಮನ್ನಣೆ ಗಳಿಸುವ ವಾರ. ನೀವು ಪ್ರಯತ್ನಿಸುವ ಯಾವುದೇ ವ್ಯವಹಾರ, ಉದ್ಯೋಗದಲ್ಲಿ ಯಶಸ್ಸನ್ನು ಪಡೆಯುವಿರಿ. ಕುಜನಿಗಾಗಿ ದುರ್ಗಾ ಪ್ರಾರ್ಥನೆ ಮಾಡುವುದು ಅತೀ ಅಗತ್ಯವಾಗಿದೆ. ಸಂತಾನ ಭಾಗ್ಯದ ಯೋಗವಿದೆ. ವಿದ್ಯಾರ್ಥಿಗಳು ಓದುವುದರಲ್ಲಿ ಯಶಸ್ವಿಯಾಗುವರು. ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ನಡೆಸಿರಿ.ಇದು ಕುಜನ ಸೂಚನೆಯಾಗಿದೆ.ನಿಮ್ಮ ಉನ್ನತಿಯನ್ನು ಸಹಿಸಿಕೊಳ್ಳದ ಹಿತ ಶತ್ರುಗಳು ನಿಮ್ಮ ಜೊತೆಯಲ್ಲಿಯೇ ಇದ್ದಾರೆ.ಶಾಂತ ರೀತಿಯಿಂದ ಇರಲು ಪ್ರಯತ್ನಿಸಿರಿ. ಚಂಚಲ
ಸ್ವಭಾವದ ನಿಮ್ಮ ಅನೇಕ ಕೆಲಸಗಳು ಅರ್ಧದಲ್ಲಿಯೇ ನಿಲ್ಲುವ ಸಾಧ್ಯತೆ ಇದೆ. ಶನಿಯ ಕಾರಣದಿಂದ ದಾಂಪತ್ಯದಲ್ಲಿ ವಿರಸ ಬರದಂತೆ ,ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ಕನ್ಯಾ : ಭಾಗ್ಯದಲ್ಲಿ ಗುರು ಇರುವುದರಿಂದ ಹೆಚ್ಚಿನ ಸಮಸ್ಯೆಗಳಿಂದ ಹೊರ ಬರುವಂತಹ ಸಮಯವಾಗಿದೆ. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲಕರ ಸಮಯ. ವಿದ್ಯಾರ್ಥಿಗಳು ಉತ್ತಮ ಯಶಸ್ಸನ್ನುಹೊಂದುವರು. ಸಾಧು ಸಂತರಿಗೆ ಗೌರವಿಸುವ ಅವಕಾಶವಿದೆ. ನಿಮ್ಮ ವ್ಯವಹಾರ ಉದ್ಯೋಗದಲ್ಲಿ ಪ್ರಗತಿ ಸಾಧಿಸುವಿರಿ.ಅನೇಕ ಗ್ರಹರು ಶುಭ ಫಲವನ್ನೇ ಸೂಚನೆ ಮಾಡುತ್ತಿರುವುದರಿಂದ
ನೀವು ಅದೃಷ್ಟವಂತರೆಂದೇ ಭಾವಿಸಲಾಗಿದೆ.ರಾಹು ಮತ್ತು ಕೇತು ಮಾತ್ರಾ ಸಂಸಾರದಲ್ಲಿ ಹುಳಿ
ಹಿಂಡುವವರಾಗಿದ್ದಾರೆ. ಆಲಂಕಾರಿಕ ವಸ್ತುಗಳು ಮನೆಯನ್ನು ಅಲಂಕಾರ ಮಾಡಲಿವೆ. ಭೂಮಿಯ ವ್ಯವಹಾರ ಮಾಡುವವರಿಗೆ ಸದವಕಾಶ ಕೂಡಿ ಬಂದಿದೆ.
ತುಲಾ : ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದ ಬಲದಿಂದ ಮಾತ್ರಾ ನಿಮ್ಮ ಯಾವುದೇ ವ್ಯವಹಾರ, ಉದ್ಯೋಗ ನಿಮ್ಮ ಅನಿಸಿಕೆಯಂತೆ ನಡೆಯಲಿದೆ . ಅಷ್ಟಮದ ಗುರು ,ಪಂಚಮದ ಶನಿ , ನಿಮ್ಮ ಯಶಸ್ಸಿಗೆ
ಅಡ್ಡಗಾಲು ಹಾಕುವವರು. ಅವರಿಗೆ ಪರಿಹಾರ ಆಗಬೇಕು. ವಿದ್ಯಾರ್ಥಿಗಳು ಮುನ್ನೆಡೆಯನ್ನು ಸಾಧಿಸುವರು.
ಗಣಪತಿ ಅಥರ್ವಶೀರ್ಷ ಪಾರಾಯಣ ಮಾಡಿರಿ.ಮಕ್ಕಳ ವಿಚಾರದಲ್ಲಿ ಮೃಧು ದೋರಣೆ ಅಗತ್ಯವಿದೆ. ಕುಜ ನೀಚನಾಗಿ ಕರ್ಮ ಕ್ಷೇತ್ರದಲ್ಲಿ ಇರುವುದರಿಂದ ಉದ್ಯೋಗದಲ್ಲಿ ಕಿರಿಕಿರಿ ಇರುತ್ತದೆ. ಅಡುಗೆ ಕೆಲಸ,vವೆಲ್ಡಿಂಗ್ ಕೆಲಸ ಮಾಡುವವರು ಎಚ್ಚರ ವಹಿಸಬೇಕು. ದುರ್ಜನರ ಸಹವಾಸದಿಂದ ದೂರವಿರುವುದು
ಒಳ್ಳೆಯದು. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ. ಬೆಳ್ಳಿ,ಬಂಗಾರ ವ್ಯಾಪಾರಿಗಳಿಗೆ ಒಳ್ಳೆಯ ಸಮಯವಾಗಿದೆ.
ವೃಶ್ಚಿಕ : ಈ ವಾರ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಒದಗಿ ಬರಲಿದೆ. ಭಾಧಕ ಕ್ಷೇತ್ರದಲ್ಲಿ ನೀಚ ಕುಜ [ದಿನಾಂಕ 6 ರಿಂದ ವಕ್ರಿ ಯಾಗಿ ] ಇರಲಾಗಿ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಿರಬೇಕು. ಶನಿ ಸುಖ ಸ್ಥಾನದಲ್ಲಿ ಇರುವುದರಿಂದ ಅಮ್ಮನವರ ಬಗ್ಗೆಯೂ ಎಚ್ಚರವಿರಬೇಕು.ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆಯೂ ಎಚ್ಚರವಿರಬೇಕು. ನಿಮ್ಮವರೇ ನಿಮ್ಮ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತಾರೆ. ಧನಾದಾಯದಲ್ಲಿಯೂ ಕೊರತೆ ಇರುತ್ತದೆ.ದಾಂಪತ್ಯ ಜೀವನದ ಸುಖ ನಿಮ್ಮ ವರ್ತನೆಯನ್ನು ಅವಲಂಭಿಸಿದೆ. ಕಾರಣವಿಲ್ಲದೆ ಕೋಪಿಸಿಕೊಳ್ಳುವಿರಿ. ವಾಹನ ಓಡಿಸುವಾಗ ವೇಗದ ಮಿತಿ ಹಿಡಿತದಲ್ಲಿರಲಿ. ದುರ್ಗೆಯ ನಿತ್ಯ ಪಾರಾಯಣ ಮಾತ್ರಾ ಇದನ್ನು ತಡೆಯ
ಬಹುದು.
ಧನು : ಈ ವಾರ ನೀವು ಶುಕ್ರ ಮತ್ತು ಕುಜನ ಬಗ್ಗೆ ಎಚ್ಚರದಿಂದಿರಬೇಕು. ದುಡುಕು ಬುದ್ಧಿಯಿಂದ ,ನಿಮ್ಮ ಸಿಟ್ಟಿನಿಂದ ಕಾರ್ಯ ಭಂಗವಾಗಲಿದೆ. ದೈವಾನುಕೂಲತೆಯ ಕೊರತೆ ಇರುತ್ತದೆ. ಕುಟುಂಬದಲ್ಲಿ
ಅಸಮಾಧಾನ ಕಂಡುಬರಲಿದೆ. ಯಾರ ಜೊತೆಯಲ್ಲಿಯೂ ವಾದ-ವಿವಾದ ಮಾಡದಿರುವುದೇ ಒಳ್ಳೆಯದು.
ನಾಗ ಮತ್ತು ದುರ್ಗೆಯ ಆರಾಧನೆಯಿಂದ ಹಲವು ದೋಷಗಳು ಪರಿಹಾರವಾಗಲಿದೆ. [ಜಯತ್ವಮ್ ] ನೀವು ಉದ್ಯೋಗ ಮಾಡುವಲ್ಲಿ ಮೇಲಧಿಕಾರಿಗಳಿಂದ ಒತ್ತಡ ನಿರ್ಮಾಣವಾಗಲಿದೆ. ಯಾವುದೇ ಕಾರಣದಿಂದ ನಿಮ್ಮ ಕೆಲಸವನ್ನು ಬೇರೆಯವರಿಗೆ ವಹಿಸದಿರಿ. ಸಣ್ಣ ಪುಟ್ಟ ಅಪವಾದಗಳು ಬಂದರೂ ಹೆಚ್ಚು ಗೊಂದಲ
ಮಾಡಿಕೊಳ್ಳಬೇಡಿರಿ.ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ.
ಮಕರ : ಸಾಡೇ ಸಾತ್ ಶನಿಯ ಪ್ರಭಾವ ಮುಂದುವರಿಯುತ್ತಿದೆ. ಸಪ್ತಮದಲ್ಲಿ ನೀಚ ಕುಜನಿದ್ದಾನೆ. ನಿಮ್ಮ ಸಂಗಾತಿ, ಪಾಲುಗಾರನೊಂದಿಗೆ ಎಚ್ಚರಿಕೆಯಿಂದ ವರ್ತಿಸಿರಿ. ದೈವಾನುಕೂಲತೆ ಇದೆ. ಜನರಿಂದ ಮೋಸ ಹೋಗುವ ಸಾಧ್ಯತೆ ಇದೆ. ಅಪವಾದಗಳೂ ಬರಲಿವೆ. ಸುದರ್ಶನ ಮಹಾ ಮಂತ್ರವನ್ನುನಿತ್ಯವೂ ಪಾರಾಯಣ
ಮಾಡಿರಿ. ಅಪರಿಚಿತರೊಡನೆ ಯಾವುದೇ ವ್ಯವಹಾರ ಮಾಡುವುದು ಬೇಡ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಅಗತ್ಯವಿಲ್ಲದ ವಸ್ತುಗಳನ್ನು ಖರೀಧಿಸಿ ಹಣ ಕಳೆದುಕೊಳ್ಳುವಿರಿ . ಸ್ನೇಹಿತರೂ
ವಿರೋಧಿಗಳಾಗುವ ಸಾಧ್ಯತೆ ಇದೆ. ಅಗತ್ಯವಿಲ್ಲದ ಕಡೆ ಮೂಗು ತೂರಿಸಲು ಹೋಗದಿರಿ .ಸಾಲ ಕೊಡುವ, ತೆಗೆದುಕೊಳ್ಳುವ ,ವ್ಯವಹಾರ ಬೇಡ.
ಕುಂಭ :ಈ ವಾರದ ಎಲ್ಲಾ ವ್ಯವಹಾರಗಳು,ಉದ್ಯೋಗಗಳು ಉತ್ತಮ ಫಲ ನೀಡಲಿವೆ. ಸಾಡೇ ಸಾತ್
ಶನಿಯ ಪ್ರಭಾವ ನಿಮಗಿರುತ್ತದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಯೋಗ ಕೂಡಿ ಬಂದಿದೆ. ಉದ್ಯೋಗದಲ್ಲಿ ಬಡ್ತಿ ,ಆರ್ಥಿಕ ಪ್ರಗತಿ ಕಂಡು ಬರಲಿದೆ . ನ್ಯಾಯಾಲಯದಲ್ಲಿರುವ ವ್ಯಾಜ್ಯದ ತೀರ್ಪು
ನಿಮ್ಮ ಪರವಾಗಿರುತ್ತದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಿಮ್ಮ ಯಜಮಾನಿಕೆಯಲ್ಲಿ ನಡೆಯಲಿದೆ.
ಪಾಲುಗಾರಿಕೆ ವ್ಯವಹಾರ ಬೇಡ. ನೂತನ ವಾಹನ ಕೊಳ್ಳುವ ಸಾಧ್ಯತೆ ಇರುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬಂದಿದೆ. ರಾಜಕೀಯದಲ್ಲಿ ನಿಮ್ಮ ಪ್ರಭಾವ ಬದಲಾವಣೆ ಆಗುವ ಸಾಧ್ಯತೆ ಇದೆ. ಶಿವ
ಸ್ಮರಣೆ ಅಗತ್ಯವಿದೆ.
ಮೀನ : ಸಾಡೇ ಸಾತ್ ಶನಿಯ ಪ್ರಭಾವ ನಿಮ್ಮ ಮೇಲೆ ಉಂಟಾಗುತ್ತಿದೆ. ರಾಹು ನಿಮ್ಮ ಜನ್ಮ ರಾಶಿಯಲ್ಲಿ, ಶನಿ ವ್ಯಯದಲ್ಲಿ, ಕುಜ ಪಂಚಮದಲ್ಲಿ ,ಕೇತು ಸಪ್ತಮದಲ್ಲಿ ಗುರು ತೃತೀಯಾದಲ್ಲಿ ಇದ್ದಾರೆ. ದುರ್ಗಾ
ಸಪ್ತಶತಿಯ ಪಾರಾಯಣದ ಮೂಲಕ ಮುಂದುವರಿದಲ್ಲಿ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಪಡೆಯಲಿದ್ದೀರಿ. ಶಾರೀರಿಕ ತೊಂದರೆ ಬಂದಾಗ ಸಮಯಕ್ಕೆ ಸರಿಯಾಗಿ ವೈದ್ಯರನ್ನು ಭೇಟಿಯಾಗಿರಿ. ವಿವಾಹ ಆಗುವವರು ಮೇ 14 ರ ನಂತರವೇ ಮುಂದುವರಿಯುವುದು ಒಳ್ಳೆಯದು ಪಿತ್ರಾರ್ಜಿತ ಆಸ್ತಿ ಕೈ ತಪ್ಪದಂತೆ ಎಚ್ಚರವಹಿಸಿರಿ. ಮಾತೃ ಶ್ರೀಯವರ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಪ್ರೇಮಿಗಳು ನೋವನ್ನು ಅನುಭವಿಸುವ ಕಾಲವಾಗಿದೆ ನೃತ್ಯ ಪಟುಗಳಿಗೆ ಸಂಗೀತ ಪ್ರೇಮಿಗಳಿಗೆ ಸಂತೋಷದ ಸಮಯವಾಗಿದೆ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು.






































