ವಾರ ಭವಿಷ್ಯ
ದಿನಾಂಕ 01.09.2024 ರಿಂದ 07.09.2024 ರ ವರೆಗೆ
ವಿಶೇಷ ದಿನಗಳು:
04.09.2024……ಸಿಂಹ ರಾಶಿಗೆ ಬುಧನ ಪ್ರವೇಶ, 06.09.2024…..ಗೌರಿ ತೃತೀಯಾ
07.09.2024…..ಗಣೇಶ ಚತುರ್ಥಿ
ಮೇಷ : ನಿಮ್ಮ ರಾಶ್ಯಧಿಪತಿ ತೃತೀಯಾದಲ್ಲಿ .ಅವನು ಅಷ್ಟಮಾಧಿಪತಿಯೂ ಹೌದು .ನೀವು ಇನ್ನೂ
ಒಂದೂವರೆ ತಿಂಗಳ ಕಾಲ ಮಿತ್ರರು ,ಬಂಧುಗಳ ಜೊತೆಗೆ ತಾಳ್ಮೆಯಿಂದ ವರ್ತಿಸಬೇಕು .ಧನ ಸ್ಥಾನದಲ್ಲಿ
ಗುರು ಇರುವುದು ನಿಮಗೆ ಉತ್ತಮ ಧನಾದಾಯವನ್ನು ತೋರಿಸುತ್ತದೆ .ದ್ವಿತೀಯಾಧಿಪತಿ ಶುಕ್ರ ನೀಚನಾಗಿ
6 ರಲ್ಲಿ ಇರುವುದರಿಂದ ಅನಗತ್ಯವಾಗಿ ಖರ್ಚು ಮಾಡುವಿರಿ .ಬುಧ ಸುಖ ಸ್ಥಾನದಲ್ಲಿ ಇರುವುದರಿಂದ
ಮನೆ ,ವಾಹನ ,ಭೂಮಿ ಖರೀಧಿ ಮಾಡಲು ಸಾಲಮಾಡುವ ಸಾಧ್ಯತೆ ಇದೆ. ಪಂಚಮಾಧಿಪತಿ ರವಿಯ
ದೃಷ್ಟಿ ಶನಿಯ ಮೇಲೆ ಇರುವುದರಿಂದ ವಿದ್ಯಾರ್ಥಿಗಳು ಯಶಸ್ವಿಯಾಗುವರು. ನಿಮ್ಮ ಗಮನ ಕೆಲಸದ
,ನಿಮ್ಮ ವ್ಯವಹಾರದ ಮೇಲೆ ಇರಲಿ . ದುರ್ಗೆಯ ಅಷ್ಟೋತ್ತರ ಪಾರಾಯಣ ಮಾಡುತ್ತಾ ಬನ್ನಿರಿ.
ವೃಷಭ : ನಿಮ್ಮ ರಾಶ್ಯಾಧಿಪತಿ ಶುಕ್ರ ಕನ್ಯಾ ರಾಶಿಯಲ್ಲಿ ನೀಚನಾಗಿ ಕೇತುವಿನೊಂದಿಗೆ ಇದ್ದಾನೆ .ಇನ್ನೂ
ಒಂದು ತಿಂಗಳು ನಿಮ್ಮ ಮಾನಸಿಕ ಆರೋಗ್ಯವನ್ನು ಉತ್ತಮವಾಗಿರುವಂತೆ ನೋಡಿಕೊಳ್ಳಿರಿ .
ಸಂಗಾತಿಯಿಂದ ಶುಭ ವಾಗಲಿದೆ .ಹಾಗೆಯೇ ಇನ್ನೊಬ್ಬರ ಜೊತೆ ಸೇರಿ ಮಾಡುವ ಉದ್ಯೋಗ
ಯಶಸ್ವಿಯಾಗಲಿದೆ .ನೀವು ವಯಕ್ತಿಕವಾಗಿ ಮಾಡುವ ಯಾವುದೇ ವ್ಯವಹಾರ ಲಾಭವನ್ನು ತರಲಾರದು
.ರವಿ ತನ್ನ ಸ್ವಕ್ಷೇತ್ರದಲ್ಲಿ ಸಿಂಹ ರಾಶಿಯಲ್ಲಿ ಇದ್ದಾನೆ .ಶುಭ ಫಲವನ್ನು ಕೊಡುವುದಿಲ್ಲ .ತಾಯಿಯವರ
,ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಿರಿ .ನಿಮ್ಮ ಮನಸ್ಸು ಚಾಂಚಲ್ಯತೆಯನ್ನು ಪಡೆದು ಕೊಳ್ಳಲಿದೆ
.ಲಕ್ಷ್ಮೀ ಅಷ್ಟೋತ್ತರ ಹೇಳುತ್ತಾ ಬನ್ನಿರಿ.
ಮಿಥುನ : ಗುರು ವ್ಯಯದಲ್ಲಿರುವುದರಿಂದ ದೈವಾನುಕೂಲ್ಯತೆ ಇರುವುದಿಲ್ಲ.ನಿಮ್ಮ ರಾಶಿಯಲ್ಲಿ
ಲಾಭಾಧಿಪತಿ ಕುಜ ,ಹಾಗೆಯೇ ರಾಶ್ಯಾಧಿಪತಿ ಬುಧ ದ್ವಿತೀಯಾದಲ್ಲಿ ಇರುವುದರಿಂದ ನಿಮ್ಮ ಧನಾದಾಯ
ಉತ್ತಮವಾಗಿದ್ದು ಮಾಡಬೇಕಾದ ಕೆಲಸಗಳೆಲ್ಲವೂ ಅಚ್ಚುಕಟ್ಟಾಗಿ ಸರಿಯಾದ ಸಮಯಕ್ಕೆ ಮುಗಿಯಲಿದೆ
.ನಿಮಗೆ ಬರಬೇಕಾಗಿರುವ ಹಣ ಕೈ ಸೇರಲಿದೆ .ಸುಖ ಸ್ಥಾನದಲ್ಲಿ ಶುಕ್ರ ನೀಚನಗಿ ಕೇತುವಿನೊಂದಿಗೆ
ಇರುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ .ನಿಮ್ಮ ತಾಯಿಯವರ ಆರೋಗ್ಯದ ಕಡೆಗೆ ಗಮನವಿರಲಿ
. ಪಂಚಮಾಧಿಪತಿ ಶುಕ್ರ ವ್ಯಯಾಧಿಪತಿಯಾಗಿ ಸುಖ ಸ್ಥಾನದಲ್ಲಿ ಇರುವುದರಿಂದ ವಿದ್ಯಾರ್ಥಿಗಳು
ಓಡುವುದರಿಂದ ವಿಮುಖರಾಗಲಿದ್ದಾರೆ .ಲಕ್ಷ್ಮೀ ಅಷ್ಟೋತ್ತರವನ್ನು ನಿತ್ಯವೂ ಪಾರಾಯಣ ಮಾಡಿರಿ.
ಕರ್ಕಾಟಕ : ನಿಮ್ಮ ಜನ್ಮ ರಾಶಿಯಲ್ಲಿ ಬುಧ ಇರುವುದರಿಂದ ನಿಮ್ಮ ಬಂಧು ಮಿತ್ರರ ಸಮಾಗಮನಕ್ಕೆ
ಅವಕಾಶ ಒದಗಿ ಬರಲಿದೆ .ರವಿ ದ್ವಿತೀಯಾದಲ್ಲಿ ಇದ್ದಾನೆ .ತಾವು ಮಾಡುತ್ತಿರುವ ಉದ್ಯೋಗ
ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯಲಿದ್ದೀರಿ .ಕೆಲವೊಂದು ಕೆಲಸಗಳು ನಿಧಾನಗತಿಯನ್ನು
ಪಡೆಯಲಿದೆ . ಕುಜ ವ್ಯಯದಲ್ಲಿ ಇದ್ದಾನೆ ಮಾಡುವ ಕೆಲಸ,ವ್ಯವಹಾರ ನಿಧಾನಗತಿಯನ್ನು ಹೊಂದಲಾಗುತ್ತಿದೆ. ರವಿ ದ್ವಿತೀಯಾದಲ್ಲಿ ಇದ್ದು ಉತ್ತಮ ಧನ ಲಾಭವನ್ನು ಹೊಂದಲಿದ್ದೀರಿ .ಶುಕ್ರ
ನೀಚನಾಗಿ ಕೇತುವಿನೊಂದಿಗೆ ಇದ್ದಾನೆ .ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಮೂಡಿ ಬರಲಿದೆ .
ಮನೆಯಲ್ಲಿ ವಯಸ್ಸಾಗಿರುವ ವ್ಯಕ್ತಿಗಳ ಬಗ್ಗೆ ಎಚ್ಚರವಾಗಿರಿ . ಗುರು ಲಾಭ ಕ್ಷೇತ್ರದಲ್ಲಿ ಇರುವುದರಿಂದ
ವಿದ್ಯಾರ್ಥಿಗಳಿಗೆ ಶುಭ ಸಮಯವಾಗಿದೆ .ಶನಿಗೆ ಪರಿಹಾರ ಮಾಡಿಕೊಳ್ಳಿರಿ.
ಸಿಂಹ : ನಿಮ್ಮ ರಾಶ್ಯಾಧಿಪತಿ ರವಿ ನಿಮ್ಮ ರಾಶಿಯಲ್ಲಿಯೇ ಇರುವುದರಿಂದ ನೀವು ಮಾಡುವ ಉದ್ಯೋಗ
ವ್ಯವಹಾರದಲ್ಲಿ ಯಶಸ್ವಿಯಾಗುವಿರಿ .ಕುಜ ಲಾಭ ಕ್ಷೇತ್ರದಲ್ಲಿ ಭಾಗ್ಯಾಧಿಪತಿ ಆಗಿರುವುದರಿಂದ
ಪಿತ್ರಾರ್ಜಿತ ಆಸ್ತಿ ಹೊಂದುವ ಅವಕಾಶವಿದೆ .ಭೂಮಿಯ ವ್ಯವಹಾರ ಮಾಡುವವರಿಗೆ ಒಳ್ಳೆಯ
ಅವಕಾಶವಿದೆ .ಧನ ಸ್ಥಾನದಲ್ಲಿ ನೀಚನಾಗಿ ಶುಕ್ರ ಕೇತುವಿನೊಂದಿಗೆ ಮತ್ತು ಧನಾಧಿಪತಿ ಬುಧ ವ್ಯಯದಲ್ಲಿ
ಇರುವುದರಿಂದ ಖರ್ಚು ಅಧಿಕವಾಗಿ ಬರಲಿದೆ .ನಿಮ್ಮ ಮಾತು ಬಂಧುಗಳಿಗೆ, ಮಿತ್ರರಿಗೆ ನೋವಾಗದಿರಲಿ.
ಯಾರ ಬಗ್ಗೆಯೂ ತಕ್ಷಣ ಪ್ರತಿಕ್ರಿಯೆ ಬೇಡ .ನಿಮ್ಮ ಪೂರ್ವಾರ್ಜಿತ ಆಸ್ತಿಯ ಬಗ್ಗೆ ಇದ್ದ ತಕರಾರು
ಪರಿಹಾರವಾಗಲಿದೆ .ನಿಮಗೆ ಸಿಗಲಿದೆ .ಗುರು ಕರ್ಮ ಕ್ಷೇತ್ರದಲ್ಲಿ ಇರುವುದರಿಂದ ಉತ್ತಮವಾದ ಕೆಲಸಗಳು
ನಿಮ್ಮಿಂದ ನಡೆಯಲಿದೆ.
ಕನ್ಯಾ : ಆದಿತ್ಯ ಹೃದಯ ಮಂತ್ರ ಪಾರಾಯಣ ನಿತ್ಯವೂ ಬೇಕು .ರವಿ ವ್ಯಯದಲ್ಲಿ ಇದ್ದಾನೆ .ನಿಮ್ಮ
ರಾಶ್ಯಾಧಿಪತಿ ಬುಧನು ಏಕಾದಶದಲ್ಲಿ ಇದ್ದು ಒಳ್ಳೆಯ ಸಮಯವಾಗಿದೆ .ಕರ್ಮ ಕ್ಷೇತ್ರದಲ್ಲಿ ಕುಜನಿದ್ದು
ಕರ್ಮಾಧಿಪತಿ ಬುಧ ಲಾಭ ಕ್ಸೇತ್ರದಲ್ಲಿ ಇದ್ದಾನೆ .ನೀವು ಮಾಡುವ ಯಾವುದೇ ಉದ್ಯೋಗ ವ್ಯವಹಾರ
ಅತ್ಯುತ್ತಮ ಲಾಭವನ್ನು ತರಲಿದೆ .ಮಿತ್ರರ ಸಹಾಯ ಪಡೆಯುವಿರಿ .ಕುಟುಂಬದಲ್ಲಿ ನೆಮ್ಮದಿಯ
ವಾತಾವರಣ , ಶುಭ ಕಾರ್ಯಕ್ರಮಗಳು ನಡೆಯಲಿವೆ .ರವಿ ವ್ಯಯದಲ್ಲಿ ರಾಜಕಾರಣಿಗಳು
ಎಚ್ಚರವಾಗಿರಬೇಕು .ವಿದೇಶಕ್ಕೆ ಹಾರುವ ಯೋಗವಿದೆ .ಶನಿಗೆ ರವಿಯ ದೃಷ್ಟಿ ಇರುವುದು ,ಆರೋಗ್ಯದ
ಕಡೆಗೆ ಎಚ್ಚರವಾಗಿರಿ.
ತುಲಾ :ನಿಮ್ಮ ರಾಶ್ಯಾಧಿಪತಿ ಶುಕ್ರ ನೀಚನಾಗಿ, ಕೇತುವಿನೊಂದಿಗೆ ಇರುವುದು ಅದೂ
ಅಷ್ಟಮಾಧಿಪತಿಯಾಗಿ ಇರುವುದು ನಿಮ್ಮ ದೈಹಿಕ ಮಾನಸಿಕ ಸ್ಟಿತಿಯನ್ನು ನಿಮ್ಮ ಪ್ರಾಯಕ್ಕೆ
ಅನುಸಾರವಾಗಿ ವ್ಯತ್ಯಾಸ ಮಾಡುತ್ತಾನೆ ,ಇತರ ಮಹಿಳೆಯರ ಬಗ್ಗೆ ವ್ಯವಹರಿಸುವಾಗ ಬಹಳ ಎಚ್ಚರ
ವಹಿಸಬೇಕು . ಕಾರಣವಿಲ್ಲದೆ ಬೇಸರ ಪಡುವಿರಿ ,ಮಧುಮೇಹ ಇರುವವರು ಸುಸ್ತು ಅನುಭವಿಸುವರು
.ಮಹಾಲಕ್ಷ್ಮೀ ಅಷ್ಟೋತ್ತರ ಪಾರಾಯಣ ಮಾಡಿರಿ .ಧನಾಧಿಪತಿ ಕುಜ ಭಾಗ್ಯದಲ್ಲಿ ಇರುವುದರಿಂದ
ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ.ವಿದೇಶಕ್ಕೆ ಹೋಗಲು ಆಸಕ್ತಿ ಇದ್ದಲ್ಲಿ ಪ್ರಯತ್ನ
ಮುಂದುವರಿಸಿರಿ .ಗುರು ಅಷ್ಟಮದಲ್ಲಿ ಇರುವುದರಿಂದ ಆರೋಗ್ಯದ ಬಗ್ಗೆ ಮೃತ್ಯುಂಜಯ ಜಪವನ್ನು
ಸ್ವತ: ಮಾಡುವುದು ಅತೀ ಅವಶ್ಯವಾಗಿದೆ.
ವೃಶ್ಚಿಕ : ನಿಮ್ಮ ರಾಶ್ಯಾಧಿಪತಿ ಕುಜ ಅಷ್ಟಮದಲ್ಲಿ ಇದ್ದು ಏನಾದರೂ ಜಗಳ ,ಸಮಸ್ಯೆ ಬರುವ ಸಾಧ್ಯತೆ
ಇದೆ. ಸಿಟ್ಟಿನ ಹಿಡಿತ ಬಹಳ ಮುಖ್ಯ .ಜ್ವರ ಬರುವ ಸಾಧ್ಯತೆ ಇದೆ .ಗುರು ಸಪ್ತಮದಲ್ಲಿ ಇರುವುದರಿಂದ
ಶುಭ ಮಂಗಳ ಕೆಲಸಗಳು ನಡೆಯುವ ಸಮಯ , ತಡೆ ಬರುವ ಸಾಧ್ಯತೆ ಇದೆ .ಉದ್ಯೋಗದಲ್ಲಿ ಕಬ್ಬಿಣ್ಣದ ಕೆಲಸ ಮಾಡುವವರು ಬಹಳ ಎಚ್ಚರ ವಹಿಸಬೇಕು ಶುಕ್ರ ನೀಚನಾದರೂ ಲಾಭಕ್ಷೇತ್ರದಲ್ಲಿ ಇದ್ದಾನೆ .ಬುಧ
ತಿಳಿಸುವಂತೆ ಹಿರಿಯರ ಸಲಹೆ ಪಡೆಯಿರಿ .ರಾಜಕೀಯದಲ್ಲಿ ಇರುವವರಿಗೆ ಉತ್ತಮ ಸಮಯವೆಂದೇ
ಹೇಳಬೇಕು .ರವಿ ಕನ್ಯಾ ರಾಶಿಗೆ ಬಂದಾಗ ಉನ್ನತ ಸ್ಥಾನ ಮಾನ ಲಭಿಸಲಿದೆ .ಶನಿ ನೀವು ಮಾಡುವ
ಪ್ರತಿಯೊಂದು ವಿಷಯವನ್ನು ಗಮನಿಸುತ್ತಿದ್ದಾನೆ ,ಎಚ್ಚರವಾಗಿರಿ.
ಧನು : ಗುರು ಆರನೆಯ ಮನೆಯಲ್ಲಿ ದೈವಾನುಗ್ರಹದ ಕೊರತೆ ಇದೆ ಎಂದು ಹೇಳಬಹುದು
.ಆರೋಗ್ಯವನ್ನು ಸರಿಯಾಗಿ ನಿಯಂತ್ರಿಕೊಳ್ಳಿರಿ ಎಂಬ ಸೂಚನೆಯನ್ನು ನೀಡುತ್ತಿದ್ದಾನೆ . ಇಲ್ಲಿ
ಸಪ್ತಮದಲ್ಲಿ ಕುಜ ನಿದ್ದು ಸಪ್ತಮಾಧಿಪತಿ ಬುಧ ಅಷ್ಟಮದಲ್ಲಿ ಇದ್ದಾನೆ .ಪತಿ ಪತ್ನಿಯರ ಜೊತೆಗೆ
ಹೊಂದಾಣಿಕೆ ಇರಲಿ .ಕರ್ಮ ಕ್ಷೇತ್ರದಲ್ಲಿ ನೀಚ ಶುಕ್ರನಿರುವುದರಿಂದ ನಿಮ್ಮ ಯಾವುದೇ ಉದ್ಯ್ಜೋಗ
ವ್ಯವಹಾರದಲ್ಲಿ ಗಮನಕೊಡಲು ನಿಮಗೆ ಸಾಧ್ಯವಾಗುವುದಿಲ್ಲ. .ಭಾಗ್ಯದಲ್ಲಿ ರವಿ ಇರುವುದರಿಂದ
ತಂದೆಯವರ . ಹಿರಿಯರ ಸಹಕಾರ ಸಿಗಲಿದೆ .ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇರುವುದಿಲ್ಲ .ನಿಮ್ಮ
ಜೊತೆಗಾರನಿದ್ದಾರೆ ಅವನೊಂದಿಗೆ ಏಕ ಮನಸ್ಸು ಇರುವಂತೆ ನೋಡಿ ಕೊಳ್ಳಿರಿ. ಯಾರನ್ನೂ ಅತಿಯಾಗಿ
ನಾಂಬ ಬೇಡಿರಿ.
ಮಕರ: ಸಾಡೇ ಸಾತ್ ಶನಿಯ ಪ್ರಭಾವ ನೀವಾಡುವ ಪ್ರತಿಯೊಂದು ಮಾತಿನಲ್ಲಿ ಕಂಡುಬರಲಿದೆ.
ಕುಟುಂಬದಲ್ಲಿ ಏನಾದರೂ ಬೇಸರ ಬರಲಿದೆ. ಕೊಟ್ಟಿರುವ ಹಣ ಹಿಂದಕ್ಕೆ ಬರುವುದಿಲ್ಲ. ನಿಮ್ಮ
ಮನೆಯಲ್ಲಿರುವ ದೈವ,ದೇವರ ಕಡೆಗೆ ಪ್ರಾರ್ಥನೆ ಮಾಡಿರಿ . ಬೆನ್ನು ನೋವಿನ ಸಮಸ್ಯೆ ,ಕೆಲವೊಂದು
ಅನಿರೀಕ್ಷಿತ ಅಪವಾದಗಳೂ ನಿಮ್ಮ ಮೇಲೆ ಬರಲಿದೆ .ಹೃದಯದ ಸಮಸ್ಯೆ ಇದ್ದಲ್ಲಿ ವೈದ್ಯರನ್ನು
ಭೇಟಿಯಾಗುವುದು ಒಳ್ಳೆಯದು ನಿಮ್ಮ ಪ್ರಾಯ 60+ಆಗಿದ್ದಲ್ಲಿ ಮೇಲೆ ಹತ್ತುವ ಕೆಲಸ ಮಾಡಬೇಡಿರಿ.
ಆದಿತ್ಯ ಹೃದಯ ಮಂತ್ರ ಪಾರಾಯಣ ಮಾಡಿರಿ . ಹೆಚ್ಚು ಒತ್ತಡವನ್ನು ಮನಸ್ಸಿಗೆ ತಂದುಕೊಳ್ಳಬೇಡಿರಿ.
ಕುಂಭ : ಸಾಡೇ ಸಾತ್ ಶನಿ ನಿಮ್ಮ ರಾಶಿಯಲ್ಲಿಯೇ ಇದ್ದು ನಿಮಗೆ ವಿಪರೀತ ಒತ್ತಡಗಳು ,ಕೆಲಸಗಳ
ಜವಾಬ್ದಾರಿ ಬರಲಿದೆ .ವಿಶ್ರಾಂತಿ ಇಲ್ಲದ ಯಾಂತ್ರಿಕ ಜೀವನ ನಿಮ್ಮದಾಗಲಿದೆ .ನೀವು ಮಾಡುವ
ಕೆಲಸಗಳೆಲ್ಲವೂ ಆಮೆಗತಿಯಲ್ಲಿ ಸಾಗಲಿದೆ .ನಿಮಗೆ ಶುಕ್ರ ನೀಚನಾಗಿ ಅಷ್ಟಮದಲ್ಲಿ ಇರುವುದು ಅನ್ಯ
ಮಹಿಳೆಯರ ಜೊತೆ ಹೆಚ್ಚು ಸಲುಗೆ ಬೇಡ .ನಿಮ್ಮ ನೌಕರರ ಮೇಲೆ ಬೇಸರಗೊಳ್ಳುವಿರಿ .ಕೆಲಸ ಬಿಟ್ಟು
ಹೋಗುವ ಸಾಧ್ಯತೆ ಇದೆ .ಸಂಸಾರದಲ್ಲಿ ಸಮಸ್ಯೆ …..ಅದರಿಂದಾಗಿ ಮಾನಸಿಕ ಒತ್ತಡ….ಆ ಸಿಟ್ಟು ಮಕ್ಕಳ
ಮೇಲೆಯೂ ಪ್ರಭಾವ ಭೀರಲಿದೆ. ನ್ಯಾಯಾಲಯದ ಮೆಟ್ಟಲು ಹತ್ತುವ ಸಾಧತೆ ಇದೆ .ಮೌನವಾಗಿರುವುದೇ
ಉತ್ತಮ .ದುರ್ಗಾ ಸಪ್ತಶತೀ ಪಾರಾಯಣ ,ದೀಪ ನಮಸ್ಕಾರ ಮಾಡಿಸಿರಿ.
ಮೀನ : ಸಾಡೇ ಸಾತ್ ಶನಿ ನಿಮ್ಮ ರಾಶಿಯಿಂದ ವ್ಯಯದಲ್ಲಿ ಇದ್ದಾನೆ .ಆರನೇ ಮನೆಯ ಅಧಿಪತಿ ರವಿ
ಇದ್ದು ಶನಿಯ ದೃಷ್ಟಿ ಇರುವುದರಿಂದ ಪತನ ಭಯ ಕಾಲಿಗೆ ತಾಗುವುದು ಇರುತ್ತದೆ .ಪ್ರತಿ ನಿತ್ಯ “ಓಂ ಶಂ
ಶನೈಶ್ಚರಾಯ ನಮ:” 108 ಬಾರಿ ಪ್ರತಿನಿತ್ಯ ಹೇಳುತ್ತಾ ಬರುವುದು .,ಭೂಮಿ ವಾಹನ ಸೈಟ್ ಖರೀಧಿ
ಮಾಡಲು ಸಕಾಲವಾಗಿದೆ . ಸರಕಾರಿ ಉದ್ಯೋಗದಲ್ಲಿ ಇರುವವರ ಸಂಬಳ ಹೆಚ್ಕಾಗಲಿದೆ.ಅಶ್ವತ್ಥ ಕಟ್ಟೆಗೆ
ಸುತ್ತು ಬನ್ನಿರಿ .ಅಲ್ಲಿ ಎರಡು ಮಣ್ಣಿನ ಹಣತೆ ಇಟ್ಟು ಕೈ ಮುಗಿಯುತ್ತಾ ಬನ್ನಿರಿ ,”ಮೂಲತೋ ಬ್ರಹ್ಮರೂಪಾಯ , ಮಧ್ಯತೋ ವಿಷ್ಣು ರೂಪಿಣಿ ,ಅಗ್ರತ: ಶಿವ ರೂಪಾಯ ವೃಕ್ಷ ರಾಜಾಯ ತೇ ನಮ ;ಇದು
ನೀವು ಮರಕ್ಕೆ ಸುತ್ತು ಬರುವಾಗ ಹೇಳ ಬೇಕಾದ ಮಂತ್ರ.

ನಿಮ್ಮ ಪೂರ್ಣ ಮಾಹಿತಿಯುಳ್ಳ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುತ್ತದೆ .
ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು .ನೀವು ನಡೆಸುವ
ಶುಭಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು .ವಿವಾಹ ಹೊಂದಾಣಿಕೆ /ವಾಸ್ತು ಸಲಹೆ
ನೀಡಲಾಗುವುದು .


























