ವಾರ ಭವಿಷ್ಯ ದಿನಾಂಕ 01.06.2025 ರಿಂದ 07.06.2025
ವಿಶೇಷ ದಿನಗಳು :06.06.2025: ಸಿಂಹ ರಾಶಿಗೆ ಕುಜನ ಪ್ರವೇಶ,ಮಿಥುನ ರಾಶಿಗೆ ಬುಧನ ಪ್ರವೇಶ; ನಿರ್ಜಲ ಸರ್ವೈಕಾದಶೀ
ಮೇಷ :ವೃತ್ತಿ ರಂಗದಲ್ಲಿ ಸಧ್ಯದಲ್ಲಿಯೇ ಮರುಚೈತನ್ಯ ಪಡೆಯುವ ಸೂಚನೆ ತೋರಿಬರಲಿದೆ ಹಾಗೂ ಮುನ್ನೆಡೆಯಿಂದ ಯಶಸ್ಸು ತೋರಿ ಬರಲಿದೆ. ಹಿತ ಶತ್ರುಗಳಿಂದ ಆಗಾಗ ಏಕಾಗ್ರತೆಗೆ ಭಂಗ ಬರಲಿದೆ. ಸಹನೆ ತಾಳ್ಮೆ ಇರಲಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಉದಾಸೀನತೆ ನಿಮಗೆ ಸಮಸ್ಯೆಯಾಗಲಿದೆ. ಸಾಂಸಾರಿಕ ಸಮಸ್ಯೆಗಳು ಒಂದೊಂದಾಗಿ ಪರಿಹಾರ ಕಾಣಲಿದೆ. ದೈನಂದಿನ ಜಪ ,ಪಾರಾಯಣ ಬಿಡಬೇಡಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ.ಬುಧ ಮತ್ತು ಗುರು ಜೊತೆಯಾಗಲಿದ್ದಾರೆ.ಕುಜ ಸಿಂಹ ರಾಶಿಗೆ ಸಂಚಾರ ಮಾಡಲಿದ್ದಾನೆ. ಸಾಡೇ ಸಾತ್ ಮುಂದುವರಿಯುತ್ತಿದೆ.
ವೃಷಭ : ದ್ವಿತೀಯಾಕ್ಕೆ ಬುಧ ಹೋಗಿ ಗುರುವಿನೊಂದಿಗೆ ಸೇರಿಕೊಳ್ಳಲಿದ್ದಾನೆ. ಕುಜ ಸಿಂಹ ರಾಶಿಗೆ ಸಂಚರಿಸಿ ಕೇತುವಿನೊಂದಿಗೆ ಸೇರಿಕೊಳ್ಳಲಿದ್ದಾನೆ. ಶುಕ್ರ ವ್ಯಯದಲ್ಲಿ ,ಶನಿ ಲಾಭ ಕ್ಷೇತ್ರದಲ್ಲಿ ಇದ್ದಾನೆ. ಬರುತ್ತಿರುವ ಆದಾಯಕ್ಕೆ ಯಾವುದೇ ಕೊರತೆಯಿರುವುದಿಲ್ಲ.ಹೊಸ ಜನರು ನಿಮ್ಮನ್ನು ಸೇರಿಕೊಳ್ಳಲಿದ್ದಾರೆ. ನಿಮ್ಮ ಖಾಸಗಿ ಬದುಕಿಗೆ ನೀವು ಗಮನ ಹರಿಸಿದರೆ ಒಳ್ಳೆಯದು. ವಿವಾಹಿತರಿಗೆ ಸಂತಾನ ಭಾಗ್ಯದ ಸೂಚನೆ ಸಿಗಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಸದುಪಯೋಗ ಪಡಿಸಿಕೊಳ್ಳಿರಿ. ಕರ್ಮ ಕ್ಷೇತ್ರದಲ್ಲಿರಾಹು ಬಂದು ನಿಮ್ಮ ಕೆಲಸಗಳಿಗೆ ,ಉದ್ಯೋಗಕ್ಕೆ ಕಿರಿ ಕಿರಿ ತರಲಿದ್ದಾನೆ. ಪರಿಹಾರಕ್ಕಾಗಿ ನಾಗ ದೇವರನ್ನು ಪ್ರಾರ್ಥಿಸಿರಿ.
ಮಿಥುನ : ಅವಾಸ್ತವಿಕ ಗುರಿಯನ್ನು ಇಟ್ಟುಕೊಂಡು ಖಿನ್ನತೆಗೆ ಗುರಿಯಾಗಬೇಡಿರಿ. ನಿಮ್ಮ ದೇಹ ಕೆಲವೊಮ್ಮೆ ವಿಶ್ರಾಂತಿಯನ್ನು ಬಯಸಲಿದೆ. ರವಿ ಜನ್ಮ ರಾಶಿಗೆ ಬಂದು ನಿಮ್ಮ ಆರ್ಥಿಕ ಮಟ್ಟ ಸುಧಾರಿಸಲಿದೆ. ಆದರೆ ಎಲ್ಲದಕ್ಕೂಹಣವೇ ಮುಖ್ಯವಲ್ಲ. ಕೌಟುಂಬಿಕವಾಗಿ ಸಣ್ಣ ಸಣ್ಣ ವಿಷಯ ಬಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ. ವಿದ್ಯಾರ್ಥಿಗಳು ಪ್ರಯತ್ನ ಪಟ್ಟರೆ ಉತ್ತಮ ಫಲವನ್ನು ಪಡೆಯಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಗೆ ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಮನೆಯನ್ನು ಬದಲಾಯಿಸುವ ಸಾಧ್ಯತೆ ಇದೆ. ತಾಯಿಯವರ ಆರೋಗ್ಯದ ಬಗ್ಗೆ ಗಮನವಿರಲಿ. ವ್ಯರ್ಥ ಖರ್ಚು ಬರುವ ಸೂಚನೆ ಇರುತ್ತದೆ.
ಕರ್ಕಾಟಕ : ಕುಜ ಚಂದ್ರ ಜೊತೆಯಾಗಿ ಶಶಿ ಮಂಗಳ ಯೋಗ ಕೂಡಿ ಬರಲಿದೆ. ನಂತರ ಕುಜ ಸಿಂಹ ರಾಶಿಗೆ ಸಂಚಾರ ಮಾಡಲಿದ್ದಾನೆ. ವೃತ್ತಿರಂಗದಲ್ಲಿ ಅಧಿಕಾರಿಗಳ ಸಹಕಾರದಿಂದ ನಿಮ್ಮ ಇಚ್ಚೆಯಂತೆ ಸ್ಥಾನ ಪ್ರಾಪ್ತಿಯಾಗಲಿದೆ. ಸಾಂಸಾರಿಕವಾಗಿ ನಿಮ್ಮ ಮನಸ್ಸಿನಲ್ಲಿ ಉಳಿಯುವಂತಹ ಘಟನೆಗಳು ನಡೆದುಹೋಗಲಿದೆ. ಚಲನ ಚಿತ್ರದಲ್ಲಿ ಉದ್ಯೋಗ ಮಾಡುವವರಿಗೆ ಒಳ್ಳೆಯ ಸಮಯ. ಯೋಜನಾ ಬದ್ಧವಾದ ಜೀವನ ಶೈಲಿ ನಿಮಗೆ ಅಗತ್ಯವಾಗಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಅಷ್ಟಮದಲ್ಲಿ ರಾಹು ಇರುವುದು ಮಾನಸಿಕ ಒತ್ತಡಕ್ಕೆ ಕಾರಣವಾಗಿರುವುದರಿಂದ ನಾಗ ದೇವರ ಪ್ರಾರ್ಥನೆ ಅಗತ್ಯವಿದೆ.
ಸಿಂಹ : ಎಲ್ಲಾ ಅನುಕೂಲತೆಗಳು ಜೀವನದಲ್ಲಿ ಇದ್ದಾಗಲೂ ಮನಸ್ಸಿಗೆ ನೆಮ್ಮದಿ ಇಲ್ಲದಾಗ ಎಲ್ಲವೂ ಶೂನ್ಯವೆನಿಸುತ್ತದೆ . ನಿಮ್ಮ ಜನ್ಮ ರಾಶಿಯಲ್ಲಿ ಕುಜ ಮತ್ತು ಕೇತು ಜೊತೆಯಾಗಿರುವುದು ,ರಾಹು ಸಪ್ತಮದಲ್ಲಿ ಇರುವುದು ಶನಿ ಅಷ್ಟಮದಲ್ಲಿ ಇರುವುದು ಎಲ್ಲಾ ಅಸಮಾಧಾನಗಳಿಗೆ ಕಾರಣವಾಗಿರುತ್ತದೆ. ಗುರು ಲಾಭದಲ್ಲಿದ್ದು ಅನೇಕ ಮೂಲಗಳಿಂದ ಆದಾಯವಿರುತ್ತದೆ.ಎಲ್ಲವೂ ನಿಮ್ಮ ಇಚ್ಚೆಯಂತೆ ನಡೆಯಲಿದೆ. ಪತಿ ಪತ್ನಿಯರ ನಡುವಿನ ಅಸಮಾಧಾನ ನಿಮ್ಮ ತಲೆ ತಿನ್ನುತ್ತಿರುತ್ತದೆ ನಿಮ್ಮ ಛಲ ಅಚಲವಾಗಿರುತ್ತದೆ. ನಿಮ್ಮ ತಾಕತ್ತು ವಿಶೇಷವಾದದ್ದು. ಮನಸ್ಸು ಚಂಚಲವಾಗಿದೆ. ನಿಮ್ಮ ಭಾವನೆಗಳ ಮೇಲೆ ನಿಯಂತ್ರಣವಿರಲಿ. ಯಾವುದೇ ವಿಷಯಗಳಲ್ಲಿ ಬದಲಾವಣೆ ಬಯಸುವಿರಾದರೆ ಇದು ಸರಿಯಾದ ಸಮಯ.
ಕನ್ಯಾ : ಕರ್ಮ ಕ್ಷೇತ್ರದಲ್ಲಿ ಬುಧ ಮತ್ತು ಗುರು ಇದ್ದಾರೆ. ಉದ್ಯೋಗ ಇಲ್ಲದವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ. ಉದ್ಯೋಗದಲ್ಲಿ ಇರುವವರಿಗೆ ಭಡ್ತಿ ಯ ಯೋಗ ಪ್ರಸ್ತುತ ನಡೆಯುತ್ತಿದೆ .ಶನಿ ಸಪ್ತಮದಲ್ಲಿ ,ಶುಕ್ರ ಅಷ್ಟಮದಲ್ಲಿ ಇರುವುದು ವಿವಾಹಿತರಿಗೆ ಮತ್ತು ವಿವಾಹದ ತಯಾರಿಯಲ್ಲಿ ಇರುವವರಿಗೆ ಮನಸ್ಸನ್ನು ಚಂಚಲತೆಗೆ ಒಯ್ಯುವ ಸಮಯವಾಗಿದೆ. ಮಾಡದ ತಪ್ಪಿಗೆ ಅಪವಾದ ಕೇಳುವ ಸಮಯ. ಹಿರಿಯರ ಅನಾರೋಗ್ಯದ ಬಗ್ಗೆ ನಿಮ್ಮ ಗಮನ ಅಗತ್ಯವಿದೆ. ಎಚ್ಚರಿಕೆ ಮತ್ತು ಜವಾಬ್ದಾರಿ ಒಟ್ಟೊಟ್ಟಿಗೆ ಸಾಗಬೇಕಿದೆ. ಅನಾವಶ್ಯಕ ಋಣಾತ್ಮಕ ಚಿಂತನೆಗಳಿಂದ ದೂರವಿರಿ. ನಿಮಗೆ ನೀವೇ ಕಣ್ಗಾವಲು. ನೀವು ಮಾಡುತ್ತಿರುವ ಯಾವುದೇ ವ್ಯವಹಾರಗಳಲ್ಲಿ ಹೆಚ್ಚಿನ ನೈಪುಣ್ಯತೆಗಳನ್ನು ಬೆಳೆಸಿಕೊಳ್ಳುವ ಸಂದರ್ಭಗಳನ್ನು ಬಳಸಿಕೊಳ್ಳಿರಿ.
ತುಲಾ : ಭಾಗ್ಯದಲ್ಲಿ ಗುರು ಇರುವುದು ನಿಮ್ಮ ಜೀವನದಲ್ಲಿ ಅನೇಕ ರೀತಿಯ ಅದೃಷ್ಟವನ್ನು ನೀಡಲಿದೆ. ಲಾಭ ಕ್ಷೇತ್ರದಲ್ಲಿ ಕುಜ ಮತ್ತು ಕೇತು ಇರುವುದು ಮತ್ತಷ್ಟು ಅನುಕೂಲತೆಗಳು ಸೇರಿಕೊಳ್ಳಲಿದೆ. ವೃತ್ತಿರಂಗದಲ್ಲಿ ಹೊಸತನವನ್ನು ರೂಢಿಸಿಕೊಳ್ಳಿರಿ. ಕಾರ್ಯ ಸಾಧನೆಗೆ ಸಕಾಲವಾಗಿದೆ. ಈ ವರೆಗೆ ಇದ್ದ ಸಾಂಸಾರಿಕ ತಾಪತ್ರಯಗಳು ಆಶ್ಚರ್ಯಕರ ರೀತಿಯಲ್ಲಿ ಮಾಯವಾಗಲಿದೆ. ಭೂಮಿಯ ವ್ಯಾಪಾರ ಕೈಹಿಡಿಯಲಿದೆ. ನೀವು ಮಾಡುವ ಯಾವುದೇ ವ್ಯವಹಾರಗಳು ಲಾಭದಾಯಕವಾಗಲಿದೆ.ಯಾರ ಜೊತೆಗೆ ವ್ಯಾಪಾರ ಮಾಡುತ್ತಿದ್ದೀರಿ ಎನ್ನುವುದು ಕೂಡಾ ಮುಖ್ಯವಾಗಲಿದೆ. ಕಳಂಕಿತರ ಜೊತೆಗೆ ಮುಂದುವರಿಯಬೇಡಿರಿ.
ವೃಶ್ಚಿಕ :ಬುಧ ಮತ್ತು ಗುರು ಅಷ್ಟಮದಲ್ಲಿ ಇದ್ದಾರೆ, ರಾಹು ಸುಖ ಸ್ಥಾನದಲ್ಲಿ ,ಪಂಚಮದಲ್ಲಿ ಶನಿ , ಶುಕ್ರ 6 ನೆಯ ಮನೆಯಲ್ಲಿ, ಇರುವುದು ಜೀವನದಲ್ಲಿ ನಿಮ್ಮ ತಾಳ್ಮೆಯ ಪರೀಕ್ಷೆಯ ಕಾಲ ಎನ್ನ ಬೇಕಾಗುತ್ತದೆ. ಕರ್ಮ ಕ್ಷೇತ್ರಕ್ಕೆ ಕುಜ ಮತ್ತು ಕೇತು ಬಂದು ನೀವು ಮಾಡುತ್ತಿರುವ ಯಾವುದೇ ವೃತ್ತಿಯಲ್ಲಿ ಹಿತ ಶತ್ರುಗಳನ್ನು ಎದುರಿಸಬೇಕಾಗುವ ಕಾಲವಾಗಿದೆ. ಆಧ್ಯಾತ್ಮಿಕ ಚಿಂತನೆಯ ಕಡೆಗೆ ನಿಮ್ಮ ಮನಸ್ಸನ್ನು ಒಯ್ಯಬೇಕಾಗಿರುವುದು ಅಗತ್ಯವಾಗಿದೆ. ಆರೋಗ್ಯದ ಕಡೆಗೆ ನಿಮ್ಮ ಗಮನವಿರಲಿ. ಜೀವನದಲ್ಲಿ ಸಮತೋಲನವಿರಲಿ. ನಿಮ್ಮ ಕುಟುಂಬ ಮತ್ತು ನಿಮ್ಮ ನಡುವಿನ ಬಾಂಧವ್ಯವನ್ನು ಗಟ್ಟಿ ಗೊಳಿಸಿರಿ. ಎಲ್ಲರನ್ನು ಗೌರವಿಸುವುದು ಅಗತ್ಯವಾಗಿದೆ.
ಧನು : ಗುರು ಮತ್ತು ಬುಧ ಸಪ್ತಮದಲ್ಲಿ ಇದ್ದಾರೆ. ಸುಖ ಸ್ಥಾನದಲ್ಲಿ ಶನಿ ಇರುವುದರಿಂದ ಪರಸ್ಪರ ವೈರಿಗಳು ಸಪ್ತಮದಲ್ಲಿ ಸೇರಿರುವುದು ನಿಮ್ಮ ಗಮನದಲ್ಲಿ ಇರಲಿ.ಪತಿ ಪತ್ನಿಯರ ಜೊತೆಗೆ ಅನ್ಯೋನ್ಯತೆ ಅಗತ್ಯವಾಗಿದೆ. ಯುದ್ಧ ಮಾಡುವ ಸನ್ನಿವೇಶಗಳು ಕೆಲವೊಮ್ಮೆ ಇರುತ್ತವೆ. ಕುಜ ಮತ್ತು ಕೇತು ಭಾಗ್ಯದಲ್ಲಿ ಬಂದು ಹಿರಿಯರೊಂದಿಗೆ ಕಲಹ ಬಾರದಂತೆ ನೋಡಿಕೊಳ್ಳಬೇಕಾಗಿದೆ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ನಿಮ್ಮ ಭಾವನೆಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಗೊಳಿಸುವ ಅವಕಾಶಗಳು ನಿಮಗೆ ಒದಗಿ ಬರಲಿವೆ.ಎಚ್ಚರವಹಿಸಿಕೊಳ್ಳಬೇಕೆಂದು ಶನಿ ಸೂಚನೆ ಕೊಡುತ್ತಿರುತ್ತಾನೆ .
ಮಕರ : ದೈವಾನುಗ್ರಹದ ಕೊರತೆ ಇರುತ್ತದೆ. ಹಿರಿಯರೊಂದಿಗೆ ಪರಸ್ಪರ ಹೊಂದಾಣಿಕೆಯೊಂದಿಗೆ ಸಾಗಬೇಕಾಗಿರುವುದು ಅನಿವಾರ್ಯವಾಗಿದೆ. ವೃತ್ತಿರಂಗದಲ್ಲಿ ಆಗಾಗ ಎಡವಿದ ಅನುಭವ ಆಗಲಿದೆಯಾದರೂ ಸಮಯ ಪ್ರಜ್ನೆಯಿಂದ ಪಾರಾಗಲಿದ್ದೀರಿ. ವಾರಾಂತ್ಯದಲ್ಲಿ ಹೊಸ ಯೋಜನೆಗಳು ಕಾರ್ಯಗತವಾಗಲಿದೆ. ಲಾಭದಾಯಕ ಆದಾಯದ ಮಾರ್ಗಸೂಚಿ ನಿಮ್ಮ ಮುಂದಿರುತ್ತದೆ. ನಿಮ್ಮಲ್ಲಿದ್ದ ಕಾಲು ನೋವು ಗಂಟು ನೋವು ಕಡಿಮೆಯಾಗಿದೆ. ಅಷ್ಟಮದಲ್ಲಿ ಕುಜ ಕೇತು ಬಂದಿರುವುದು ನೀವು ವೈದ್ಯರ ಬಳಿ ಹೋಗಬೇಕಾದ ಸನ್ನಿವೇಶ ಬರ ಬಹುದು ಎನ್ನುವುದನ್ನು ಸೂಚಿಸುತ್ತಿದೆ. ದುರ್ಗಾ ಆರಾಧನೆ ಅಗತ್ಯವಾಗಿದೆ .
ಕುಂಭ : ಸಪ್ತಮಕ್ಕೆ ಕುಜ ಮತ್ತು ಕೇತು ಬಂದಿದ್ದಾರೆ. ಜನ್ಮದಲ್ಲಿ ರಾಹು ಇದ್ದಾನೆ. ದ್ವಿತೀಯಾದಲ್ಲಿ ಶನಿ ಇದ್ದಾನೆ. ನಿಮ್ಮ ತಾಳ್ಮೆ ಸಹನೆಯ ಪರೀಕ್ಷೆಯ ಕಾಲ. ಪತಿ ಪತ್ನಿಯರ ನಡುವೆ ವಾಕ್ ಸಮರ ಬರುವ ಕಾಲವಾಗಿದೆ. ಕೆಲವೊಂದು ನಿಮ್ಮ ವ್ಯವಹಾರದ ವಿಷಯಗಳಲ್ಲಿ ಬದಲಾವಣೆಗೆ ಸಿದ್ಧರಾಗಬೇಕಾಗುತ್ತದೆ. ವಿವಾದಗಳು ಒಮ್ಮಿಂದೊಮ್ಮೆಲೆ ನಿಮ್ಮ ಮೇಲೆ ಬರಲಿದೆ. ಕೋಲು ಕೊಟ್ಟು ಪೆಟ್ಟು ತಿಂದಾಗುತ್ತದೆ. ಬೇರೆಯವರಿಂದ ಉತ್ಸಾಹದ ಪ್ರತಿಕ್ರಿಯೆ ಸಿಗಲಾರದು. ವಿದ್ಯಾರ್ಥಿಗಳು ಪ್ರೀತಿ ಪ್ರೇಮಕ್ಕೆ ಬಲಿಯಾಗಬೇಡಿರಿ. ಕೌಟುಂಬಿಕ ವಿಚಾರದಲ್ಲಿ ಆಗಾಗ ಅಶಾಂತಿ ತೋರಿಬರಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಬರಲಿವೆ.
ಮೀನ : ನೀವೀಗ ಮಾನಸಿಕ ಹಾಗೂ ದೈಹಿಕ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ.ನಿಮ್ಮ ಜೀವನವು ನಿಧಾನವಾಗಿ ಪ್ರಗತಿಯ ಕಡೆಗೆ ಸಾಗುತ್ತದೆ. ನಿಮ್ಮ ರಾಶ್ಯಾಧಿಪತಿ ಗುರು ತನ್ನ ವೈರಿ ಬುಧನೊಂದಿಗೆ ಚತುರ್ಥದಲ್ಲಿ ಇದ್ದಾನೆ .ತನ್ನವರೇ ತನಗೆ ವೈರಿಗಳಾದರೆ ಏನು ಮಾಡುವುದು. ಕುಜ ಕೇತು 6 ನೆಯ ಮನೆಯಲ್ಲಿ ಇದ್ದಾರೆ. ಬರುವ ಆದಾಯದಲ್ಲಿ ಹೆಚ್ಚಳವಾಗಲಿದೆ ವ್ಯಯದ ರಾಹುವಿಗೆ ನಾಗ ದೇವರ ಪ್ರಾರ್ಥನೆ ಅಗತ್ಯವಿದೆ.ಭವಿಷ್ಯದ ನಿಮ್ಮ ಉತ್ತಮ ಚಿಂತನೆ ನಿಮ್ಮ ಮೇಲೆ ನಾನಾ ರೀತಿಯಲ್ಲಿ ಪರಿಣಾಮ ಬೀರಲಿದೆ. ಆಸ್ತಿ ಖರೀಧಿ ಧನ ಹೂಡಿಕೆಗೆ ಉತ್ತಮ ಸಮಯವಾಗಿದೆ. ಮಂಗಳ ಕಾರ್ಯಗಳಿಗೆ ಆಗಾಗ ಅಡೆ ತಡೆ ತೋರಿಬಂದರೂ ಬುಧ ಗುರು ಸಫಲತೆಯನ್ನು ಕೊಡಲಿದ್ದಾರೆ.ವಿಷ್ಣುವಿನ ಆರಾಧನೆ ಮುಂದುವರಿಸಿರಿ.

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ತಯಾರಿಸಿ ಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು .ವಿವಾಹ ಹೊಂದಾಣಿಕೆ /ವಾಸ್ತು ಸಲಹೆ ತಿಳಿಸಲಾಗುವುದು.


























