
ವಾರ ಭವಿಷ್ಯ
ಅಕ್ಟೋಬರ್ 18ರಿಂದ ಅಕ್ಟೋಬರ್ 24, 2026ರವರೆಗೆ
ವಿಶೇಷ ದಿನಗಳು: ಅಕ್ಟೋಬರ್ 19 – ಮಹಾ ಅಷ್ಟಮಿ; ಅಕ್ಟೋಬರ್ 20 – ಮಹಾ ನವಮಿ, ವಿಜಯದಶಮಿ, ಆಯುಧ ಪೂಜೆ ಹಾಗೂ ಶಾರದಾ ವಿಸರ್ಜನೆ.
ಮೇಷ
ಈ ವಾರ ಸಂತಸದಾಯಕ ಹಾಗೂ ಸಮಾಧಾನಕರ ವಾತಾವರಣ ನಿಮ್ಮದಾಗಲಿದೆ. ನಿಮ್ಮ ವ್ಯಕ್ತಿತ್ವ, ಮಾತುಗಾರಿಕೆ ಮತ್ತು ಕಾರ್ಯವೈಖರಿಯಿಂದ ಇತರರ ಮೆಚ್ಚುಗೆ ಗಳಿಸುವಿರಿ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಯಶಸ್ಸು ಸಾಧಿಸಲು ಸೂಕ್ತ ಸಮಯವಿದು. ಆದರೆ ಕುಟುಂಬ ಜೀವನದಲ್ಲಿ ರವಿ, ಬುಧ ಮತ್ತು ಶುಕ್ರನ ಪ್ರಭಾವದಿಂದ ಕೆಲವು ಸಮಸ್ಯೆಗಳು ಎದುರಾಗಬಹುದು. ಅಂತಹ ಸಂದರ್ಭಗಳಲ್ಲಿ ಮೌನ ಮತ್ತು ತಾಳ್ಮೆಯೇ ಉತ್ತಮ ಪರಿಹಾರವಾಗಲಿದೆ. ಕೆಲವೊಮ್ಮೆ ಉದ್ವಿಗ್ನತೆ ಕಾಡಿದರೂ ಆತುರದ ನಿರ್ಧಾರಗಳಿಗೆ ಮುಂದಾಗಬೇಡಿ. ಸಮಾಧಾನದಿಂದ ವರ್ತಿಸಿದರೆ ವಾರದ ಅಂತ್ಯದಲ್ಲಿ ನೆಮ್ಮದಿ ದೊರೆಯಲಿದೆ.
ವೃಷಭ
ವಿದ್ಯಾರ್ಥಿಗಳಿಗೆ ಆಗಾಗ ಉದಾಸೀನತೆ ಕಾಡಬಹುದು. ಧನಾಧಿಪತಿ ಬುಧನ ಚಂಚಲ ಪ್ರಭಾವದಿಂದ ಆರ್ಥಿಕ ವ್ಯವಹಾರಗಳಲ್ಲಿ ಏರಿಳಿತ ಕಂಡುಬರಲಿದೆ. ವೃತ್ತಿರಂಗದಲ್ಲಿ ಅನಗತ್ಯ ನಿಷ್ಠುರತೆ ಮತ್ತು ಕಠಿಣ ಮಾತುಗಳು ಅಸಮಾಧಾನಕ್ಕೆ ಕಾರಣವಾಗಬಹುದು. ಕುಟುಂಬದ ಆಸ್ತಿ ಹಾಗೂ ದಾಯಾದಿಗಳ ವಿಚಾರಗಳು ಕಾನೂನು ಹಂತಕ್ಕೆ ತಲುಪುವ ಸಾಧ್ಯತೆಯಿದೆ. ಆದರೂ ಆದಾಯದ ಮೂಲಗಳಿಗೆ ಕೊರತೆಯಾಗದು. ಪದೇಪದೇ ಕಾಡುವ ಅನಾರೋಗ್ಯದಿಂದ ಬೇಸರ ಉಂಟಾಗಬಹುದು. ನಿರುದ್ಯೋಗಿಗಳು ನಿರಂತರ ಪ್ರಯತ್ನ ನಡೆಸಿದರೆ ತಾತ್ಕಾಲಿಕ ಉದ್ಯೋಗಾವಕಾಶ ದೊರೆಯುವ ಸಾಧ್ಯತೆಯಿದೆ. ಖರ್ಚುಗಳ ಮೇಲೆ ನಿಯಂತ್ರಣ ಇರಲಿ.
ಮಿಥುನ
ಕುಟುಂಬದ ಬೇಡಿಕೆಗಳಿಗೆ ಸ್ಪಂದಿಸುವ ಸಂದರ್ಭದಲ್ಲಿ ಕೈಯಲ್ಲಿರುವ ಹಣ ಖಾಲಿಯಾಗಬಹುದು. ಆದರೆ ಈ ವಾರದ ತ್ಯಾಗ ಮುಂದಿನ ದಿನಗಳಲ್ಲಿ ಒಳಿತಿಗೆ ಕಾರಣವಾಗಲಿದೆ. ಅವಿವಾಹಿತರಿಗೆ ಬಂಧುಗಳ ಮೂಲಕ ಹೊಸ ವಿವಾಹ ಸಂಬಂಧ ಕುದುರುವ ಸಾಧ್ಯತೆಯಿದೆ. ಶ್ರಮದ ಕೆಲಸಗಳಲ್ಲಿ ಹೆಚ್ಚಿನ ಓಡಾಟ ಮತ್ತು ಪರದಾಟ ಎದುರಾಗಬಹುದು. ಅನಿರೀಕ್ಷಿತ ಖರ್ಚುಗಳು ಒಂದರ ಹಿಂದೆ ಒಂದರಂತೆ ಬರಬಹುದಾದ್ದರಿಂದ ಹಣಕಾಸಿನ ಯೋಜನೆ ಅಗತ್ಯ. ಆಹಾರ ಸೇವನೆಯಲ್ಲಿ ಎಚ್ಚರಿಕೆ ವಹಿಸಿ; ಅಲರ್ಜಿ ಅಥವಾ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಆದಾಯ ಗಳಿಸಲು ಹೊಸ ಮಾರ್ಗಗಳು ಗೋಚರಿಸಲಿದ್ದು, ಸೂಕ್ತ ಅವಕಾಶಗಳನ್ನು ಬಳಸಿಕೊಂಡರೆ ಆರ್ಥಿಕ ಸ್ಥಿತಿ ಸುಧಾರಿಸಬಹುದು.
ಕರ್ಕಾಟಕ
ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಅಥವಾ ಉನ್ನತ ಸ್ಥಾನಮಾನ ದೊರೆಯುವ ಸಾಧ್ಯತೆಯಿದೆ. ನಾಗದೇವರ ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು ಮನಸ್ಸಿಗೆ ನೆಮ್ಮದಿ ನೀಡಬಹುದು. ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗದಂತೆ ಎಚ್ಚರ ವಹಿಸಿ. ಎಲ್ಲವೂ ನಿಮ್ಮ ಇಚ್ಛೆಯಂತೆಯೇ ನಡೆಯಬೇಕೆಂಬ ಹಠವನ್ನು ಬಿಡುವುದು ಉತ್ತಮ. ಬಹುಕಾಲದಿಂದ ಆಶಿಸುತ್ತಿದ್ದ ಧಾರ್ಮಿಕ ಕಾರ್ಯಗಳು ನೆರವೇರುವ ಸಾಧ್ಯತೆಯಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಬಹುದು. ನವದಂಪತಿಗಳಿಗೆ ಶುಭಸುದ್ದಿ ಸಿಗುವ ಯೋಗವಿದೆ. ಮನೆ, ವಾಹನ ಅಥವಾ ಭೂಮಿ ಖರೀದಿಸುವ ವಿಚಾರದಲ್ಲಿಯೂ ಪ್ರಗತಿ ಕಂಡುಬರಬಹುದು. ಹೂಡಿಕೆ ಮಾಡುವ ಮುನ್ನ ಆರ್ಥಿಕ ಸಾಮರ್ಥ್ಯವನ್ನು ಪರಿಶೀಲಿಸಿ.
ಸಿಂಹ
ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಯಿದ್ದು, ಪ್ರಯತ್ನಗಳಿಗೆ ತಕ್ಕ ಫಲ ಪಡೆಯಲು ಅಡೆತಡೆಗಳನ್ನು ದಾಟಬೇಕಾಗಬಹುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನಿರೀಕ್ಷಿತ ಬೆಳವಣಿಗೆಗಳು ಕಂಡುಬರಲಿವೆ. ಆದರೆ ಅವಕಾಶಗಳ ಜೊತೆಗೆ ಗೊಂದಲಗಳೂ ಎದುರಾಗಬಹುದು. ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆಯಿದೆ. ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡುವುದನ್ನು ರೂಢಿಸಿಕೊಳ್ಳಿ. ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆ ಇದೆ. ಆಸ್ತಿ-ಪಾಸ್ತಿಗೆ ಸಂಬಂಧಿಸಿದ ಕುಟುಂಬದ ವಿವಾದಗಳನ್ನು ಮಾತುಕತೆ ಮತ್ತು ರಾಜಿ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ. ನಿಮ್ಮ ಮಾತು ಮತ್ತು ನಿರ್ಧಾರಗಳಲ್ಲಿ ಸಂಯಮ ಇರಲಿ.
ಕನ್ಯಾ
ಆತುರದ ಹೆಜ್ಜೆಗಳು ಕಾರ್ಯಸಿದ್ಧಿಗೆ ಅಡ್ಡಿಯಾಗಬಹುದು. ಆದ್ದರಿಂದ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಾಧಕ-ಬಾಧಕಗಳನ್ನು ಪರಿಶೀಲಿಸಿ. ಆಕಸ್ಮಿಕ ಆದಾಯ ವೃದ್ಧಿಯಿಂದ ಹೊಸ ಕಾರ್ಯಗಳಿಗೆ ಅವಕಾಶ ದೊರೆಯಬಹುದು. ವಿದ್ಯಾರ್ಥಿಗಳಿಗೆ ಕೆಲವು ಅಡಚಣೆಗಳು ಎದುರಾದರೂ ಪ್ರಯತ್ನ ಮುಂದುವರಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಶನಿ ಸಂಬಂಧಿತ ಪರಿಹಾರ ಕ್ರಮಗಳತ್ತ ಒಲವು ಮೂಡಬಹುದು. ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ವಿಚಾರಗಳಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ರಾಜಕೀಯ ಕ್ಷೇತ್ರದಲ್ಲಿರುವವರು ವಿವಾದಗಳಿಂದ ದೂರವಿರುವುದು ಒಳಿತು. ಆನ್ಲೈನ್ ಪರಿಚಯಗಳು, ಆಮಿಷಗಳು ಮತ್ತು ಹನಿಟ್ರ್ಯಾಪ್ನಂತಹ ವಂಚನೆಗಳ ಬಗ್ಗೆ ಜಾಗರೂಕರಾಗಿರಿ. ಕುಟುಂಬದ ನೆಮ್ಮದಿಗೆ ಆದ್ಯತೆ ನೀಡಿ.
ತುಲಾ
ಉದ್ಯೋಗಸ್ಥ ಮಹಿಳೆಯರಿಗೆ ಉತ್ತಮ ಅವಕಾಶಗಳು ಒದಗಿಬರಬಹುದು. ಅವಿವಾಹಿತರು ವಿವಾಹ ಸಂಬಂಧಿತ ಶುಭಕಾರ್ಯಗಳ ಸಿದ್ಧತೆಯಲ್ಲಿ ತೊಡಗುವ ಸಾಧ್ಯತೆಯಿದೆ. ನ್ಯಾಯಾಲಯ ಮತ್ತು ಕಚೇರಿ ಸಂಬಂಧಿತ ಕೆಲಸಗಳಿಗೆ ಹಣ ಖರ್ಚಾದರೂ ಅನುಕೂಲಕರ ಫಲಿತಾಂಶದ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಬಹುದು. ರಾಜಕೀಯ ಕ್ಷೇತ್ರದಲ್ಲಿರುವವರು ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅನುಕೂಲಕರ ಸಮಯವನ್ನು ಬಳಸಿಕೊಳ್ಳಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ಅಗತ್ಯ ತಪಾಸಣೆ ಮಾಡಿಸಿಕೊಳ್ಳಿ. ಮಕ್ಕಳ ವಿದ್ಯಾಭ್ಯಾಸ, ಸ್ನೇಹವಲಯ ಮತ್ತು ಚಟುವಟಿಕೆಗಳ ಬಗ್ಗೆ ಗಮನ ಹರಿಸಿ. ಕುಟುಂಬದವರೊಂದಿಗೆ ಮುಕ್ತವಾಗಿ ಮಾತನಾಡುವುದು ಉತ್ತಮ.
ವೃಶ್ಚಿಕ
ವೃತ್ತಿರಂಗದಲ್ಲಿ ಕೆಲವು ಸವಾಲುಗಳು ಎದುರಾಗಬಹುದು. ಅಪವಾದ ಅಥವಾ ಅನಗತ್ಯ ಆರೋಪಗಳ ಭೀತಿ ಕಾಡುವ ಸಾಧ್ಯತೆಯಿರುವುದರಿಂದ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಿ. ನಿಮ್ಮ ಸುತ್ತಮುತ್ತ ಸಣ್ಣಪುಟ್ಟ ಗೊಂದಲಗಳು ಸೃಷ್ಟಿಯಾಗಬಹುದು. ರಾಜಕೀಯ ಕ್ಷೇತ್ರದಲ್ಲಿರುವವರು ಮುಂದಿನ ದಿನಗಳಲ್ಲಿ ವಿಶೇಷ ಎಚ್ಚರಿಕೆ ವಹಿಸುವುದು ಉತ್ತಮ. ಮಕ್ಕಳ ವಿಚಾರದಲ್ಲಿ ಹೆತ್ತವರಿಗೆ ಚಿಂತೆ ಉಂಟಾಗಬಹುದು. ಆದಾಯ ಹೆಚ್ಚಿಸುವ ಪ್ರಯತ್ನದ ಜೊತೆಗೆ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ವೃತ್ತಿಯಲ್ಲಿ ಬದಲಾವಣೆ ಅಥವಾ ಹೊಸ ಜವಾಬ್ದಾರಿಗಳು ಎದುರಾಗಬಹುದು. ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ನಿರ್ಲಕ್ಷಿಸಬೇಡಿ. ಚರ್ಮದ ಅಲರ್ಜಿ ಸೇರಿದಂತೆ ಯಾವುದೇ ತೊಂದರೆ ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯಿರಿ. ಸಾಕಷ್ಟು ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.
ಧನು
ಈ ವಾರ ಕೌಟುಂಬಿಕ ಹಾಗೂ ದೈಹಿಕ ಕ್ಷೇಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ತಾಳ್ಮೆಯನ್ನು ಪರೀಕ್ಷಿಸುವ ಸಂದರ್ಭಗಳು ಎದುರಾಗಬಹುದು. ಕಾರ್ಯಕ್ಷೇತ್ರದಲ್ಲಿ ವಿರೋಧಿಗಳೂ ನಿಮ್ಮ ಕಾರ್ಯವೈಖರಿಯನ್ನು ಗಮನಿಸುವ ಸಾಧ್ಯತೆಯಿದೆ. ವಾಹನ ಚಾಲಕರು ಎಚ್ಚರಿಕೆಯಿಂದ ಸಂಚರಿಸಬೇಕು. ಉದ್ಯೋಗ ಮತ್ತು ವೃತ್ತಿಯಲ್ಲಿ ಪ್ರಗತಿಯ ಸೂಚನೆಗಳು ಗೋಚರಿಸಲಿವೆ. ಆದರೆ ವಾಹನ ಖರೀದಿ ಅಥವಾ ದೊಡ್ಡ ಮೊತ್ತದ ಹೂಡಿಕೆ ಮಾಡುವ ವಿಚಾರದಲ್ಲಿ ಆತುರ ಬೇಡ. ವ್ಯಾಪಾರಿಗಳು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಮುನ್ನಡೆಯಲಿದ್ದಾರೆ. ಅವಿವಾಹಿತರು ಅಕ್ಟೋಬರ್ 31ರವರೆಗೆ ಸಂಬಂಧಗಳ ವಿಚಾರದಲ್ಲಿ ತಾಳ್ಮೆಯಿಂದ ನಿರ್ಧಾರ ಕೈಗೊಳ್ಳುವುದು ಉತ್ತಮ. ಪ್ರವಾಸದಲ್ಲಿ ಅನಗತ್ಯ ಪ್ರಯಾಸ ಎದುರಾಗಬಹುದು. ಕ್ರೀಡಾಪಟುಗಳಿಗೆ ಸಾಧನೆ ತೋರಲು ಅವಕಾಶಗಳು ದೊರೆಯಬಹುದು.
ಮಕರ
ವ್ಯಾಪಾರ ಮತ್ತು ವಹಿವಾಟುಗಳಲ್ಲಿ ಉತ್ತಮ ಆದಾಯ ಗಳಿಸುವ ಸಾಧ್ಯತೆಯಿದೆ. ಭೂಮಿ ಖರೀದಿಗೆ ಹಣ ವ್ಯಯಿಸುವ ಸಂದರ್ಭ ಎದುರಾಗಬಹುದು. ಆದರೆ ನಿಮ್ಮ ಸುತ್ತಲಿರುವ ಹಿತಶತ್ರುಗಳು ಅನುಮಾನ ಮತ್ತು ಗೊಂದಲಗಳನ್ನು ಸೃಷ್ಟಿಸಬಹುದು. ಯಾವುದೇ ವಿಚಾರಕ್ಕೂ ತಕ್ಷಣ ಪ್ರತಿಕ್ರಿಯಿಸದೆ ತಾಳ್ಮೆಯಿಂದ ಮುಂದುವರಿಯಿರಿ. ಸ್ನೇಹಿತರ ಆಗಮನದಿಂದ ಮನಸ್ಸಿಗೆ ಸಂತೋಷ ದೊರೆಯಲಿದೆ. ಮಾತನಾಡುವಾಗ ಮಿತಭಾಷಿಯಾಗಿರುವುದು ಉತ್ತಮ. ಆದಾಯ ಹೆಚ್ಚಿದರೂ ಖರ್ಚುಗಳೂ ಹೆಚ್ಚಾಗುವ ಸಾಧ್ಯತೆಯಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸೂಚನೆಗಳಿವೆ. ಅವಿವಾಹಿತರಿಗೆ ವಿವಾಹ ಯೋಗ ಒದಗಿಬರಲು ಹೆಚ್ಚಿನ ಪ್ರಯತ್ನ ಮತ್ತು ಸೂಕ್ತ ಹೊಂದಾಣಿಕೆ ಅಗತ್ಯವಾಗಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಮುನ್ನೆಚ್ಚರಿಕೆ ಇರಲಿ.
ಕುಂಭ
ಹೆಚ್ಚಿನ ಕೆಲಸಕಾರ್ಯಗಳಲ್ಲಿ ಉನ್ನತ ಅಧಿಕಾರಿಗಳಿಂದ ಅಡೆತಡೆಗಳು ಎದುರಾಗಬಹುದು. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಗಮನ ಹರಿಸಬೇಕಾಗುತ್ತದೆ. ಧಾರ್ಮಿಕ ನಂಬಿಕೆ, ಕುಟುಂಬದ ಆಸ್ತಿ ಮತ್ತು ಸಹೋದರರ ನಡುವಿನ ಸಂಬಂಧಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಮೂಡಬಹುದು. ಮಹಿಳೆಯರೊಂದಿಗೆ ವ್ಯವಹರಿಸುವಾಗ ಪರಸ್ಪರ ಗೌರವ ಮತ್ತು ಸಂಯಮ ಕಾಪಾಡಿಕೊಳ್ಳಿ. ಈ ಎಲ್ಲದರ ನಡುವೆಯೂ ಗುರುಹಿರಿಯರ ಸೇವೆ ಮತ್ತು ಆಶೀರ್ವಾದಗಳು ಮನಸ್ಸಿಗೆ ಸಮಾಧಾನ ನೀಡಲಿವೆ. ಕೊಟ್ಟ ಸಾಲವನ್ನು ಮರಳಿ ಪಡೆಯಲು ಓಡಾಟ ಹೆಚ್ಚಾಗಬಹುದು. ವಾರಾಂತ್ಯದಲ್ಲಿ ಧಾರ್ಮಿಕ ಹಾಗೂ ಪುಣ್ಯ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಬಹುದು. ಅವಿವಾಹಿತರು ವಿವಾಹ ಸಂಬಂಧಿತ ಪ್ರಯತ್ನಗಳನ್ನು ಮುಂದುವರಿಸಬೇಕು. ತಾಳ್ಮೆ ಮತ್ತು ವಿವೇಕದಿಂದ ಸಮಸ್ಯೆಗಳನ್ನು ಎದುರಿಸಿ.
ಮೀನ
ಕುಟುಂಬದಲ್ಲಿ ಹಿಂದೆ ಕಾಣಿಸಿಕೊಂಡಿದ್ದ ಭಿನ್ನಾಭಿಪ್ರಾಯಗಳು ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಯಿದೆ. ಅಕ್ಟೋಬರ್ 31ರ ನಂತರ ಕೆಲವು ವಿಚಾರಗಳು ತೀವ್ರಗೊಳ್ಳಬಹುದು ಎಂಬ ಆತಂಕವಿದ್ದರೂ, ಈಗಿನಿಂದಲೇ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಯುವಕರಿಗೆ ಮನಸಿಗೆ ಒಪ್ಪುವ ಜೀವನ ಸಂಗಾತಿ ದೊರೆಯುವ ಸಾಧ್ಯತೆಯಿದೆ. ಸಕಾರಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸವು ಸಂಕಷ್ಟಗಳನ್ನು ಎದುರಿಸಲು ನೆರವಾಗಲಿವೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ನಡೆಸಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಕೆಲಸದ ಒತ್ತಡ ಮತ್ತು ಕಾರ್ಯತಂತ್ರಗಳ ಗೊಂದಲದಿಂದ ದೈಹಿಕ ಆಯಾಸ ಉಂಟಾಗಬಹುದು. ವೈವಾಹಿಕ ಜೀವನದಲ್ಲಿ ಸಂಗಾತಿಯ ಭಾವನೆಗಳಿಗೆ ಗೌರವ ನೀಡಿ. ಪರಸ್ಪರ ಹೊಂದಾಣಿಕೆಯೇ ನೆಮ್ಮದಿಯ ಬದುಕಿಗೆ ಆಧಾರವಾಗಲಿದೆ.
ಜ್ಯೋತಿಷ್ಯ ಸೇವೆಗಳು
ನಿಮ್ಮ ವೈಯಕ್ತಿಕ ವಿವರಗಳ ಆಧಾರದ ಮೇಲೆ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಸಿದ್ಧಪಡಿಸಲಾಗುವುದು. ಕವಡೆ ಪ್ರಶ್ನೆ, ವಾಸ್ತು ಸಲಹೆ, ಶುಭಕಾರ್ಯಗಳಿಗೆ ಮುಹೂರ್ತ ಚಿಂತನೆ ಹಾಗೂ ವಿವಾಹ ಹೊಂದಾಣಿಕೆ ಪರಿಶೀಲನೆ ಮಾಡಲಾಗುವುದು.




































