ವಾರ ಭವಿಷ್ಯ ದಿನಾಂಕ 25.08.2024 ರಿಂದ 31.08.2024 ರ ವರೆಗೆ
ವಿಶೇಷ ದಿನಗಳು : 26.08.2024:…..ಮಿಥುನ ರಾಶಿಗೆ ಕುಜನ ಪ್ರವೇಶ ;ಶ್ರೀ ಕೃಷ್ಣ ಜಯಂತಿ ;ಜನ್ಮಾಷ್ಟಮಿ [ಚಂದ್ರೋದಯ ಘಂಟೆ 12.09]
ಮೇಷ :ನಿಮ್ಮ ರಾಶ್ಯಾಧಿಪತಿ ಕುಜ ತೃತೀಯಾದಲ್ಲಿ ಇದ್ದು ಅವನು ಅಷ್ಟಮಾಧಿಪತಿಯೂ ಆಗಿರುತ್ತಾನೆ .ಬುಧ ಸುಖ ಸ್ಥಾನದಲ್ಲಿ ಇದ್ದಾನೆ ಸಹೋದರನ ಸಹಕಾರದೊಂದಿಗೆ ಮನೆ, ವಾಹನ ,ಸ್ತಾಲ ಖರೀಧಿಯ ಆಸೆ ಈಡೇರುವ ಸಮಯ .ಗುರು ದ್ವಿತೀಯಾದಲ್ಲಿ ಭಾಗ್ಯಾಧಿಪತಿಯಾಗಿ ಇರುವುದು ,ನಿಮ್ಮ ಅದೃಷ್ಟವನ್ನು ಹೆಚ್ಚುವಂತೆ ಮಾಡಿದ್ದಾನೆ .ನೀವು ಅನೇಕ ಧಾರ್ಮಿಕ ದೈವಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ .ಪಂಚಮದಲ್ಲಿರವಿ ಇದ್ದಾನೆ .ವಿದ್ಯಾರ್ಥಿಗಳು ಯಶಸ್ವಿಯಾಗುವರು .ಬುಧ ತಾಯಿಯವರ ಆರೋಗ್ಯದ ಕಡೆಗೆ ಗಮನ ಕೊಡುವಂತೆ ತಿಳಿಸುತ್ತಿದ್ದಾನೆ. ತಮ್ಮ ಯಾವುದೇ ವ್ಯವಹಾರದಲ್ಲಿ ,ತಾವು ಮಾಡುವ ಉದ್ಯೋಗದಲ್ಲಿ ಯಶಸ್ವಿಯಾಗುವಿರಿ .ರಾಜಕೀಯದಲ್ಲಿ ಇರುವವರಿಗೆ ವಾದ ವಿವಾದ ಇರುತ್ತದೆ . ಮೌನವಾಗಿರಿ .
ವೃಷಭ : ದ್ವಿತೀಯಾದಲ್ಲಿ ಕುಜ ಸಪ್ತಮಾಧಿಪತಿ –ವ್ಯಯಾಧಿಪತಿಯಾಗಿ ಇರುವುದು ಜನ್ಮ ರಾಶಿಯಲ್ಲಿ ಅಷ್ಟಮಾಧಿಪತಿಯಾದ ,ಲಾಭಾಧಿಪತಿಯಾದ ಗುರು ಇರುವುದು ನಿಮ್ಮಲ್ಲಿ ಆತಂಕ ಭಯ ,ಕೋಪ ಇದ್ದು ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ದಾಂಪತ್ಯದಲ್ಲಿ ನೆಮ್ಮದಿಯ ಕೊರತೆ ಇರುವುದನ್ನುಸೂಚಿಸುತ್ತಿದೆ .ಇದುವೇ ದೈಹಿಕ ಅನಾರೋಗ್ಯಕ್ಕೆ ಕಾರಣವಾಗಲಿದೆ . ರಾಘವೇಂದ್ರ ಸಾಮಿಗಳ ಆರಾಧನೆಯಲ್ಲಿ ಭಾಗವಹಿಸಿರಿ. ಪಂಚಮದಲ್ಲಿ ಶುಕ್ರ ಮತ್ತು ಕೇತು ಇರುವುದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಡಿಮೆ ಆಗುವಂತೆ ಮಾಡಲಿದ್ದಾರೆ .ದೇವಿಯ ಅಷ್ಟೋತ್ತರ ಪಾರಾಯಣ ಅಗತ್ಯವಾಗಿದೆ .ಉದ್ಯೋಗ ,ವ್ಯವಹಾರದಲ್ಲಿ ,ಬರುವ ಆದಾಯದಲ್ಲಿ ಎಚ್ಚರವಹಿಸಿಕೊಂಡು ಮುನ್ನೆಡೆಯಿರಿ .ಸುಖ ಸ್ಥಾನದಲ್ಲಿ ಇರುವ ರವಿಗೆ ಶನಿಯ ದೃಷ್ಟಿ ಇರುವುದು ಒತ್ತಡಕ್ಕೆ ಕಾರಣವಾಗಲಿದೆ .
ಮಿಥುನ : ನಿಮ್ಮ ರಾಶ್ಯಾಧಿಪತಿ ಬುಧ ದ್ವಿತೀಯಾದಲ್ಲಿ ಇದ್ದು ಶುಭ ಸಮಯ ಆರಂಭವಾಗಿದೆ .ಅವನು ಸುಖಾಧಿಪತಿಯೂ ಹೌದು . ನಿಮ್ಮ ಹಲವಾರು ಕನಸುಗಳು ನನಸಾಗುವ ಸಮಯ .ವಕೀಲ, ಅದ್ಯಾಪಕ ವೃತ್ತಿಯವರಿಗೆ ,ಶುಭ ಸಮಯವಾಗಿದೆ .ವಿದ್ಯಾರ್ಥಿಗಳಿಗೆ ಶುಭ ಸಮಯವಾಗಿದೆ.ತೃತೀಯಾದಲ್ಲಿ ರವಿ ಸ್ವಕ್ಷೇತ್ರದಲ್ಲಿ ಇದ್ದು ನಿಮ್ಮ ಶುಭೋದಯದ ಸಮಯ .ನೀವು ನಡೆಸುವ ಯಾವುದೇ ವ್ಯವಹಾರದಲ್ಲಿ ಸಹೋದರ ವರ್ಗದವರ ಸಹಾಯ ಸಿಗಲಿದೆ .ಗುರು ವ್ಯಯದಲ್ಲಿ ಇದ್ದರೂ ಉಳಿದ ಗ್ರಹರ ಅನುಗ್ರಹ ನಿಮ್ಮ ಮೇಲೆ ಬರಲಿದೆ .ಕರ್ಮಾಧಿಪತಿ ಗುರು ವ್ಯಯದಲ್ಲಿ ಇರುವುದರಿಂದ ನೀವು ಮಾಡುವ ಕೆಲವೊಂದು ಕೆಲಸಗಳಲ್ಲಿ ವಿಘ್ನಗಳನ್ನುಕಾಣುವಿರಿ . ಗುರುವಿಗೆ ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ಇದು 2025,ಮೇ 15 ರ ವರೆಗೂ ಮುಂದುವರಿಯಬೇಕು.ಶನಿ ನಿಮಗೆ ಅನುಕೂಲವನ್ನು ಮಾಡಲಿದ್ದಾನೆ .ಆರೋಗ್ಯದ ಕಡೆಗೆ ಗಮನ ಅಗತ್ಯವಾಗಿದೆ . ಶುಕ್ರ ಪಂಚಮಾಧಿಪತಿ –ವ್ಯಯಾಧಿಪತಿಯಾಗಿ ಸುಖ ಸ್ಥಾನದಲ್ಲಿ ಕೇತುವಿನೊಂದಿಗೆ ಇರುವಾಗ ಒಂದು ರೀತಿಯ ಒಂಟಿತನ ಕಾಡಲಿದೆ .
ಕರ್ಕಾಟಕ : ದ್ವಿತೀಯಾದಲ್ಲಿ ಇರುವ ರವಿ ಬರಬೇಕಾಗಿರುವ ಹಣವನ್ನು ಶೀಘ್ರವಾಗಿ ಬರುವಂತೆ ಮಾಡಲಿದ್ದಾನೆ .ಶುಕ್ರ ಬಾಧಕಾಧಿಪತಿಯಾಗಿ ತೃತೀಯಾದಲ್ಲಿ ಕೇತುವಿನೊಂದಿಗೆ ಇರುವುದು ,ಶುಕ್ರ ಲಾಭಾಧಿಪತಿಯಾಗಿರುವುದು ನೀವು ಮಾಡುವ ಯಾವುದೇ ಉದ್ಯೋಗ ವ್ಯವಹಾರ, ಕೃಷಿಯಲ್ಲಿ ಅತ್ಯಧಿಕ ಲಾಭವನ್ನು ಹೊಂದುವಿರಿ . ಗಣಪತಿಯ ಅಥರ್ವ ಶೀರ್ಷ ಪಾರಾಯಣ ಮಾಡಿಕೊಳ್ಳುವುದು ಅಗತ್ಯವಾಗಿದೆ. ಸರಕಾರಿ ಕೆಲಸಗಳನ್ನು ಮಾಡುವವರು ತಮ್ಮ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ .ಬರುವ ಮುಂದಿನ ತಿಂಗಳ ಸಂಬಳದಲ್ಲಿ ಹೆಚ್ಚುವರಿಯಾಗಲಿದೆ . ಉನ್ನತ ಆದ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಗುರು ಅನುಗ್ರಹ ಮಾಡಲಿದ್ದಾನೆ. ಶನಿಗೆ ಪರಿಹಾರವಾಗಿ 29.03.2025 ರ ವರೆಗೆ ತಮ್ಮ ಯಥಾ ಶಕ್ತಿ ವಿಷ್ಣು ಸಹಸ್ರ ನಾಮ ಪಾರಾಯಣ ಮಾಡುತ್ತಾ ಬರಬೇಕು. ಉಳಿದ ಗ್ರಹಾರ ಅನುಗ್ರಹ ನಿಮಗಿದೆ .
ಸಿಂಹ :ನಿಮ್ಮ ರಾಶ್ಯಾಧಿಪತಿ ರವಿ ನಿಮ್ಮ ರಾಶಿಯಲ್ಲಿಯೇ ಇರುವುದು ,ನಿಮ ಶುಭ ಲಕ್ಷಣವಾಗಿದ್ದು ,ನಿಮ್ಮ ಹಲವಾರು ಯೋಚನೆ ,ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ . ರವಿಯ ದೃಷ್ಟಿ ಶನಿಯ ಮೇಲೆ ಇರುವುದು ನಿಮ್ಮ ಸಂಗಾತಿ /ಪಾರ್ಟ್ನರ್ ಜೊತೆಗೆ ಹೊಂದಾಣಿಕೆಯಿಂದ ಹೋಗುವುದು ಕಷ್ಟಕರವಾಗಲಿದೆ .ಮೌನವಾಗಿರಿ .ಅಹಂ “ ನಿಂದ ಹೊರಗೆ ಬನ್ನಿರಿ.ಕೆಲಸದ ಒತ್ತಡ ಇರುತ್ತದೆ .”ಸಂಸಾರ “–ಇದರಲ್ಲಿರುವ ಸೊನ್ನೆ ಹೋದರೆ “ಸಸಾರ “ವಾಗುತ್ತದೆ . ನಾವು ಕೆಲವೊಮ್ಮೆ ವೈರಾಗ್ಯವನ್ನು ಹೊಂದುತ್ತೇವೆ. ತಲೆನೋವು ನಿಮ್ಮನ್ನು ಕಾಡಲಿದೆ .ಕುಜ ಲಾಭದಲ್ಲಿ ಇರುವುದರಿಂದ ಭೂ ವ್ಯವಹಾರ ಮಾಡುವವರು ಅಧಿಕ ಸಂಪಾದನೆ ಮಾಡಲಿದ್ದಾರೆ . ಕಡಿಮೆ ಮಾತಾಡಿದಷ್ಟೂ ಒಳ್ಳೆಯದು .
ಕನ್ಯಾ : ಕರ್ಮಾಧಿಪತಿಯೂ ,ನಿಮ್ಮ ರಾಶ್ಯಾಧಿಪತಿಯೂ ಆಗಿರುವ ಬುಧ ಲಾಭ ಕ್ಷೇತ್ರದಲ್ಲಿ ಇರುವುದು ನಿಮಗೆ ಅದೃಷ್ಟವನ್ನು ಸೂಚಿಸುತ್ತಿದೆ .ನೀವು ಮಾಡುವ ಯಾವುದೇ ಉದ್ಯೋಗ ,ವ್ಯವಹಾರದಲ್ಲಿ ,ಯೋಜನೆಗಳಲ್ಲಿ ಯಶಸ್ವಿಯಾಗುವಿರಿ .ವಿದೇಶ ಪ್ರಯಾಣ ಯೋಗವಿದೆ .ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ .ಸಾಲ ತೆಗೆದುಕೊಳ್ಳಲು ,ಯಾರಿಗಾದರೂ ಕೊಡಲು ಇದು ಸರಿಯಾದ ಸಮಯವಲ್ಲ. ಋಣಾತ್ಮಕ ಚಿಂತನೆಗಳಿಂದ ಹೊರಗೆ ಬನ್ನಿರಿ .”ಯತ್ ಭಾವಮ್ ತದ್ಭವತಿ “ ಮನಸ್ಸಿನಲ್ಲಿ ಇರುವಂತದ್ದು ನಡೆಯುತ್ತದೆ .ರವಿ ವ್ಯಯದಲ್ಲಿ ಇರುವುದರಿಂದ ಆದಿತ್ಯ ಹೃದಯ ಮಂತ್ರವನ್ನು ಪಾರಾಯಣ ಮಾಡುವುದು ಅತೀ ಅಗತ್ಯವಾಗಿದೆ ,ಬರುವ ಸಂಕ್ರಾಂತಿಯ ವರೆಗೆ ಅಗತ್ಯವಿದೆ .
ತುಲಾ : ನಿಮ್ಮ ರಾಶ್ಯಾಧಿಪತಿ ಶುಕ್ರ ಅಷ್ಟಮಾಧಿಪತಿಯಾಗಿ ವ್ಯಯದಲ್ಲಿ ಕೇತುವಿನೊಂದಿಗೆ ಇದ್ದಾನೆ .ದುರ್ಗಾ ಪಾರಾಯಣ ಮಾಡುವುದು /ಮಾಡಿಸುವುದು ಅಗತ್ಯವಾಗಿದೆ .ಆರೋಗ್ಯದ ಕಡೆಗೆ ಗಮನ ಅತೀ ಅಗತ್ಯ .ಗುರು ಅಷ್ಟಮದಲ್ಲಿ ಇರುವುದು ಕೂಡಾ ಆರೋಗ್ಯದ ಸಮಸ್ಯೆಗೆ ಕಾರಣವಾಗಿದೆ ,.ಷುಗರ್ ಸಮಸ್ಯೆ ಇರುವವರು ಎಚ್ಚರವಾಗಿರಿ. ಹೊಸತಾದ ಉದ್ಯಮ ಆರಂಭ ಬೇಡ .ಹಣ ತೊಡಗಿಸುವ ಸಾಹಸ ಬೇಡ .ಉದ್ಯೋಗ ವ್ಯವಹಾರದಲ್ಲಿ ಒಂದು ತಿಂಗಳ ಕಾಲ ಇದ್ದುದರಲ್ಲಿಯೇ ಮುಂದುವರಿಸುವುದು ಒಳ್ಳೆಯದು .ವಿದ್ಯಾರ್ಥಿಗಳಿಗೆ ಶುಭೋದಯದ ಕಾಲ .ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ.ನೀವು ಕೆಲಸ ಮಾಡುವ ಸ್ಥಳದಲ್ಲಿ ಗಡಿಬಿಡಿ ಮಾಡಿಕೊಳ್ಳಬೇಡಿರಿ . ಅಪರಿಚಿತ ಮಹಿಳೆಯರ ಜೊತೆಗೆ ಸಲುಗೆಯ ಮಾತು ಬೇಡ .ಪ್ರೀತಿ ಪ್ರೇಮಕ್ಕೆ ಬಲಿಯಾಗಬೇಡಿರಿ .
ವೃಶ್ಚಿಕ : ನಿಮ್ಮ ಅದೃಷ್ಟದ ಸಮಯ ಇದಾಗಿದೆ ,ಗುರು ಸಪ್ತಮದಲ್ಲಿ ಇದ್ದಾನೆ ,ಶುಕ್ರ ಮತ್ತು ಕೇತು ಲಾಭ ಕ್ಸೇತ್ರದಲ್ಲಿ ಇದ್ದಾನೆ .ಪತ್ನಿಯಿಂದ ಆರ್ಥಿಕ ಸಹಾಯ ಹೊಂದುವ ಸಮಯ .ನಿಮ್ಮಸಂಗಾತಿಯ ಸಹಾಯ ಪ್ರತಿ ವಿಷಯದಲ್ಲಿಯೂ ಒದಗಿ ಜೀವನದಲ್ಲಿ ನೆಮ್ಮದಿಯನ್ನು ಹೊಂದುವಿರಿ .ವಿದ್ಯಾರ್ಥಿಗಳು ಉತ್ತಮ ಅಭಿವೃದ್ಧಿಯನ್ನು ಹೊಂದುವಿರಿ .ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಹೊಸ ಉದ್ಯೋಗ ಪ್ರಾಪ್ತಿಯಾಗಲಿದೆ .ಸ್ವಂತ ಉದ್ಯೋಗದಲ್ಲಿ ಇರುವವರಿಗೆ ಬರುವ ಲಾಭದಲ್ಲಿ ಏರಿಳಿತ ಇರುತ್ತದೆ .ಸರ್ಕಾರಿ ಉದ್ಯೋಗಿಗಳಿಗೆ ,ರಾಜಕೀಯ ಗಣ್ಯರಿಗೆ ಎಲ್ಲವೂ ನಿಮ್ಮ ಯೋಚನೆಯಂತೆ ನಡೆಯುವ ಸಮಯವಾಗಿದೆ .ನಿಮ್ಮ ವ್ಯವಹಾರಗಳು ಬೆಣ್ಣೆಯಿಂದ ಕೂದಲು ತೆಗೆದ ಹಾಗೆ ಬಹಳ ಆಶ್ಚರ್ಯಕರವಾದ ರೀತಿಯಲ್ಲಿ ನಡೆಯಲಿದೆ .
ಧನು: ಸುಖ ಸ್ಟಾನಾಧಿಪತಿ ಗುರು ಷಷ್ಟದಲ್ಲಿ ಇದ್ದು ದೈವಾನುಗ್ರಹದ ಕೊರತೆ ಇರುತ್ತದೆ .ವಿಷ್ಣು ಸಹಸ್ರನಾಮ ಪಾರಾಯಣ ಬರುವ 2025 ರ ಮೇ 15 ರ ವರೆಗೆ ಹೇಳುವುದು ಉತ್ತಮ ಪರಿಹಾರವಾಗಿದೆ .ಎಷ್ಟು ದುಡಿದರೂ ಇಷ್ಟೇ “ಎಂಬ ವೈರಾಗ್ಯ ಭಾವನೆ ರಾಹು ಸುಖ ಸ್ಥಾನದಲ್ಲಿದ್ದುಕೊಂಡು ತರಲಿದ್ದಾನೆ .ನಿದ್ದೆಯ ಕೊರತೆ ಕಾಡಲಿದೆ .ಸಪ್ತಮದಲ್ಲಿ ಕುಜ ಪಂಚಮಾಧಿಪತಿ ,ವ್ಯಯಾಧಿಪತಿಯಾಗಿ ಬಂದಿರುವುದು ಪತಿ-ಪತ್ನಿಯರು ಹೊಂದಾಣಿಕೆಯಿಂದ ಮುಂದುವರಿಯುವುದು ಉತ್ತಮ ಎಂಬ ಸಂದೇಶವನ್ನು ನೀಡುತ್ತಿದ್ದಾನೆ .ಮಾಡುತ್ತಿರುವ ಉದ್ಯೋಗ,ವ್ಯವಹಾರ ಈಗ ಇರುವ ಸ್ಥಿತಿಯಲ್ಲಿಯೇ ಮುಂದುವರಿಯಲಿ .ಒಂದು ತಿಂಗಳ ನಂತರ ಬದಲಾವಣೆ ಮಾಡುವುದಾದರೆ ಯೋಚಿಸಿರಿ.ಭಾಗ್ಯದಲ್ಲಿ ರವಿ ಇರುವುದರಿಂದ ಹಿರಿಯರ ಬಗ್ಗೆ ಗೌರವ ಇರಲಿ .ನಿಮಗೆ ಬರಬೇಕಾದ ಹಣ ಸರಿಯಾದ ಸಮಯಕ್ಕೆ ಒದಗಿ ಬರಲಿದೆ .
ಮಕರ : ಸಾಡೇ ಸಾತ್ ಶನಿ ದ್ವಿತೀಯಾದಲ್ಲಿ ಇರುವುದು ಗೊತ್ತಿರುವ ವಿಷಯವೇ ಆಗಿರುತ್ತದೆ .ಅಷ್ಟಮದಲ್ಲಿ ರವಿ ಬಂದಿದ್ದಾನೆ. ಮದ್ಯ ಸೇವನೆ ಆರೋಗ್ಯಕ್ಕೆ ಮಾರಕ .ಮೇಲಧಿಕಾರಿಗಳಿಂದ ವಿನಾ ಕಾರಣ ಕಿರಿ ಕಿರಿ ಇರುತ್ತದೆ. ಮುಂದಿನ ಸಂಕ್ರಾಂತಿಯ ನಂತರ ಅವರಿಂದಲೇ ಹೊಗಳಿಕೆಯ ಸರದಿ ಬರಲಿದೆ .ನವಗ್ರಹರ ಚಲನೆಯ ಕ್ರಮವೇ ಹೀಗಿರುತ್ತದೆ.ಹೃದಯ ಸಮಸ್ಯೆ ಈಗಾಗಲೇ ಇರುವವರು ತಪಾಸಣೆ ಮಾಡಿಸಿ ಕೊಳ್ಳಿರಿ . ವಿದೇಶ ಪ್ರಯಾಣ ಯೋಗವಿದೆ .ಎಷ್ಟೇ ಹಣ ಬಂದರೂ ಜೊತೆ ಜೊತೆಗೆ ನಷ್ಟವೂ ಇರುತ್ತದೆ .ವಾಹನ ಚಾಲಕರೆ ಎಚ್ಚರದಿಂದಿರಿ. ಕರ್ಮಣ್ಯೇವ ಅಧಿಕಾರಸ್ತೇ ಮಾ ಫಲೇಶು ಕದಾಚನ” ನೀನು ಮಾಡ ಬೇಕಾದ ಕರ್ತವ್ಯವನ್ನು ಮಾಡುತ್ತಾ ಮುಂದುವರಿ, ಪ್ರತಿಫಲಾಪೇಕ್ಷೆ ಬೇಡ .ಇದು ಶ್ರೀ ಕೃಷ್ಣ ಅರ್ಜುನನಿಗೆ ಹೇಳುವ ಮಾತಾಗಿದೆ .
ಕುಂಭ : ಜನ್ಮ ರಾಶಿಯಲ್ಲಿ ಶನಿ …ಸಪ್ತಮದಲ್ಲಿ ರವಿ . ಸಂಸಾರದಲ್ಲಿ ಹೊಂದಾಣಿಕೆಯ ಅವಶ್ಯಕತೆಯನ್ನು ತಿಳಿಸುವ ಎರಡು ತಿಂಗಳುಗಳು .ಶನಿ ಕೇತು ಗ್ರಹರು ಸಂಸಾರವನ್ನು ಒಡೆಯುವ ಗ್ರಹರು. ಇದಕ್ಕೆ ಪರಿಹಾರ ..ಮೌನ ಮೌನವಾಗಿರುವುದು . ಬೆನ್ನು ನೋವು,ಬಿಪಿ ,ಹೃದಯ ಸಂಬಂಧಿ ಸಮಸ್ಯೆಗಳ ಲಕ್ಷಣಗಳು ಬಂದರೆ ತಕ್ಷಣ ವೈದ್ಯರ ಭೇಟಿ ಮಾಡುವುದೇ ಆಗಿದೆ . ಸ್ವಂತ ಉದ್ಯೋಗ ಮಾಡುವವರಿಗೆ ತಾಳ್ಮೆಯಿಂದ ಇದ್ದಲ್ಲಿ ಸಮಸ್ಯೆ ಇರುವುದಿಲ್ಲ .ಅಗತ್ಯವೆನಿಸಿದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳಬೇಕು .ಸರಕಾರಿ ಕೆಲಸ ಮಾಡುವವರು ಮೇಲಧಿಕಾರಿಗಳ ಅವಕೃಪೆಗೆ ಒಳಗಾಗಬೇಕಾಗುತ್ತದೆ .ಸಾಡೇ ಸಾತ್ ಶನಿಗೆ ಪರಿಹಾರವಾಗಿ ಇನ್ನೂ ಹಲವು ವರ್ಷಗಳ ಕಾಲ ಅಶ್ವತ್ಥ ವೃಕ್ಷ ಪ್ರದಕ್ಷಿಣೆ ಮಾಡಿದರೆ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ಒಳ್ಳೆಯದು .
ಮೀನ :ಜನ್ಮ ರಾಶಿಯಲ್ಲಿ ರಾಹು ;ರಾಶ್ಯಾಧಿಪತಿ ಗುರು ತೃತೀಯಾದಲ್ಲಿ .ದೈವಾನುಗ್ರಹದ ಕೊರತೆಯಿರುವುದರಿಂದ ನೀವು ಯಾವುದೇ ವ್ಯವಹಾರ ಉದ್ಯೋಗ ಮಾಡುತ್ತಿದ್ದರೂ ಪೂರ್ಣ ಸಂತೋಷ ಇರುವುದಿಲ್ಲ .ಹಣ ಒಂದು ಕೈಗೆ ಬಂದು ಇನ್ನೊಂದು ಕೈಯಿಂದ ಹೊರಗೆ ಹೋಗುತ್ತದೆ . 60+ ಆಗಿರುವವರು ತಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದಿರಬೇಕು . ಸಾವಿಲ್ಲದ ಮನೆಯಿಲ್ಲ ,ಒತ್ತಡವಿಲ್ಲದ ಉದ್ಯೋಗವಿಲ್ಲ .ನೋವೇ ಇಲ್ಲದ ಮನಸ್ಸಿಲ್ಲ..ಸಾಲಕ್ಕೆ ಅರ್ಜಿ ಹಾಕಿದವರಿಗೆ ಶುಭ ಸುದ್ಧಿ ದೊರೆಯಲಿದೆ .ಸಾಡೇ ಸಾತ್ ಶನಿಯ ದೋಷ ಇರುವುದರಿಂದ ಸಾಲಕ್ಕೆ ಜಾಮೀನು ಸಹಿ ಹಾಕಲು ಹೋಗಬೇಡಿರಿ .ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲಗೊಳ್ಳಲಿದೆ .ಶನಿಗೆ ಪರಿಹಾರವಾಗಿ “ಓಂ ಶಂ ಶನೈಶ್ಚರಾಯನಮ: “ ಪ್ರತಿನಿತ್ಯ 108 ಬಾರಿ ಹೇಳಬೇಕು .

ನಿಮ್ಮ ಕಂಪ್ಯೂಟರ್ ಜಾತಕವನ್ನು ಪೂರ್ಣ ಪ್ರಮಾಣದಲ್ಲಿ ಮಾಡಿ ಕೊಡಲಾಗುವುದು . ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು .ವಾಸ್ತು ಸಲಹೆ/ವಿವಾಹ ಹೊಂದಾಣಿಕೆ ತಿಳಿಸಲಾಗುವುದು.


























