ವಾರಭವಿಷ್ಯ
ಅಕ್ಟೋಬರ್ 4ರಿಂದ 10, 2026
ವಿಶೇಷ ದಿನ: ಅಕ್ಟೋಬರ್ 10 — ಸರ್ವಪಿತೃ ದರ್ಶ ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ
ಮೇಷ: ಬಂಧುಗಳು ಹಾಗೂ ಆಪ್ತರೊಂದಿಗೆ ಸಣ್ಣಪುಟ್ಟ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿಕೊಂಡು ಹೋಗುವುದು ನಿಮ್ಮ ಜವಾಬ್ದಾರಿಯಾಗಿದೆ. ಅತಿಯಾದ ನಂಬಿಕೆಯಿಂದ ಯಾರೊಂದಿಗೂ ಬೆರೆಯದಿರಿ. ಮನಸ್ಸಿನ ರಹಸ್ಯಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ತಪ್ಪಿಸಿ. ಹಿತಶತ್ರುಗಳ ಬಗ್ಗೆ ಎಚ್ಚರ ವಹಿಸಿ. ಸಾಂಸಾರಿಕವಾಗಿ ಪತ್ನಿ ಹಾಗೂ ಮಕ್ಕಳೊಂದಿಗೆ ಹೊಂದಾಣಿಕೆಯಿಂದ ಮುಂದುವರಿಯಿರಿ.
ವೃಷಭ: ವ್ಯವಹಾರ ಮತ್ತು ಉದ್ಯೋಗದಲ್ಲಿ ಯಾವುದು ಒಳಿತು, ಯಾವುದು ಕೆಡುಕು ಎಂಬುದನ್ನು ಅರಿತು ಮುಂದುವರಿಯುವುದು ಒಳಿತು. ನಿಮ್ಮ ಪರಿಶ್ರಮ ಹಾಗೂ ವಿಶ್ವಾಸಕ್ಕೆ ಉತ್ತಮ ಪ್ರತಿಫಲ ದೊರೆಯಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನುಕೂಲಕರ ಸಮಯ. ಜೊತೆಗಾರರ ಆತ್ಮವಿಶ್ವಾಸಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ. ಧನಾತ್ಮಕ ಚಿಂತನೆ ಮನಸ್ಸಿಗೆ ಧೈರ್ಯ ತುಂಬಲಿದೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಚಂಚಲತೆಗೆ ಅವಕಾಶ ನೀಡದಿರಿ. ದೈವಾನುಗ್ರಹಕ್ಕಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಬಹುದು.
ಮಿಥುನ: ಆಪ್ತರು, ಗೆಳೆಯರು ಹಾಗೂ ಹಿತಚಿಂತಕರೊಂದಿಗೆ ನೀವು ಹೇಗೆ ಬೆರೆಯುತ್ತೀರಿ ಎಂಬುದು ನಿಮ್ಮ ಮನೋಭಾವದ ಮೇಲೆ ಅವಲಂಬಿತವಾಗಿರುತ್ತದೆ. ಆರ್ಥಿಕವಾಗಿ ಬಿಕ್ಕಟ್ಟು ಕಂಡುಬಂದರೂ ಧನಾಗಮನ ಉತ್ತಮವಾಗಿರಲಿದೆ. ನಿಮ್ಮ ಕಾರ್ಯವೈಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಮಕ್ಕಳ ಶಿಕ್ಷಣ ಉತ್ತಮವಾಗಿ ಸಾಗಲಿದ್ದು ಸಂತಸ ಉಂಟಾಗಲಿದೆ. ಹಿರಿಯರ ಅನಾರೋಗ್ಯ ಮನಸ್ಸಿಗೆ ಬೇಸರ ತರಬಹುದು. ಪತ್ನಿಯ ಸಹಕಾರದಿಂದ ಆರ್ಥಿಕ ಚೈತನ್ಯ ಹೆಚ್ಚಲಿದೆ.
ಕರ್ಕಾಟಕ: ಮನೆಯಲ್ಲಿ ಹಿರಿಯರೊಂದಿಗೆ ಮೌನ ಘರ್ಷಣೆ ಉಂಟಾಗಬಹುದು. ಹಿರಿಯರ ಮೌನ ನಿಮಗೆ ಕಂಟಕವಾಗುವ ಸಾಧ್ಯತೆ ಇದೆ. ಆದರೂ ಸ್ಪಷ್ಟವಾಗಿ ಮಾತನಾಡುವುದು ಉತ್ತಮ. ಹಿತಶತ್ರುಗಳ ಬಗ್ಗೆ ಎಚ್ಚರದಿಂದಿರಿ. ಮಾನಸಿಕ ಒತ್ತಡ ಹೆಚ್ಚಾಗಬಹುದು. ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ. ವೃತ್ತಿ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ಎದುರಾಗಬಹುದು. ಆಪ್ತರೊಬ್ಬರ ಮಧ್ಯಸ್ಥಿಕೆಯಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಸಾಧ್ಯತೆ ಇದೆ.
ಸಿಂಹ: ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡದೆ ಆತ್ಮವಿಶ್ವಾಸದಿಂದ ಪ್ರಯತ್ನಿಸಿ. ಕೆಲವೇ ದಿನಗಳಲ್ಲಿ ಗುರುಬಲ ದೊರೆಯುವ ಸೂಚನೆ ಇದೆ. ನಿಮ್ಮ ಸ್ವಂತಿಕೆ ಮತ್ತು ಸಾಮರ್ಥ್ಯವನ್ನು ತೋರಿಸಲು ಪ್ರಯತ್ನಿಸಿ. ಯಾವುದೇ ವಿಷಯದಲ್ಲೂ ಅತಿಯಾದ ವಿಶ್ವಾಸ ಬೇಡ. ಪ್ರಣಯ ವಿಚಾರಗಳಲ್ಲಿ ಅಡೆತಡೆಗಳು ಎದುರಾಗಬಹುದು. ಅನಿರೀಕ್ಷಿತವಾಗಿ ಆರ್ಥಿಕ ನೆರವು ದೊರೆಯುವ ಸಾಧ್ಯತೆ ಇದೆ. ಮನೆ, ಭೂಮಿ, ವಾಹನ ಹಾಗೂ ತಂದೆ-ತಾಯಿಯ ವಿಚಾರದಲ್ಲಿ ಹೆಚ್ಚಿನ ಎಚ್ಚರ ವಹಿಸಿ.
ಕನ್ಯಾ: ಸಂಗಾತಿಯೊಂದಿಗೆ ಕಲಹಕ್ಕೆ ಅವಕಾಶ ನೀಡದಿರಿ. ಪರಸ್ತ್ರೀ ಅಥವಾ ಪರಪುರುಷ ಸಂಬಂಧದಂತಹ ವಿಚಾರಗಳು ಅಪವಾದಕ್ಕೆ ಕಾರಣವಾಗಬಹುದು. ದೈವಬಲ ಅನುಕೂಲವಾಗಿರುವ ಸಮಯ. ತಂದೆ-ತಾಯಿಯ ಸಹಕಾರ ದೊರೆಯಲಿದೆ. ಲಾಭದಾಯಕ ಬೆಳವಣಿಗೆ ನಿಮ್ಮ ಉತ್ಸಾಹವನ್ನು ಹೆಚ್ಚಿಸಲಿದೆ. ಆದರೆ ತಾಳ್ಮೆ ಕಳೆದುಕೊಳ್ಳುವ ಸಂದರ್ಭಗಳು ಎದುರಾಗಬಹುದು. ಹಣವಿದ್ದಷ್ಟೇ ಸಾಲದು, ಅದನ್ನು ಸಂತೋಷವಾಗಿ ಅನುಭವಿಸುವ ಯೋಗವೂ ಅಗತ್ಯ. ವಾತ ಹಾಗೂ ಪಿತ್ತದ ಸಮಸ್ಯೆಗಳ ಬಗ್ಗೆ ಎಚ್ಚರ ವಹಿಸಿ.
ತುಲಾ: ವೈಯಕ್ತಿಕ ವಿಚಾರಗಳಲ್ಲಿ ಅನಗತ್ಯ ಗೊಂದಲ ಬೇಡ. ಸಮಾಧಾನದಿಂದ ವ್ಯವಹರಿಸಿದರೆ ಅನುಕೂಲವಾಗಲಿದೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿಯ ಸೂಚನೆಗಳಿವೆ. ಸಾಮಾಜಿಕವಾಗಿ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಿ. ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿ ಬರಬಹುದು. ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ.
ವೃಶ್ಚಿಕ: ಗುರುಬಲದ ಪ್ರಭಾವ ಉತ್ತಮ ರಕ್ಷಣೆ ನೀಡಲಿದೆ. ಕುಜನ ಪ್ರಭಾವದಿಂದ ಆರೋಗ್ಯದಲ್ಲಿ ಏರಿಳಿತ ಕಂಡುಬರಬಹುದು. ಮನೆಯ ಮಹಿಳೆಯರಿಗೆ ಜ್ವರ, ಕಫದಂತಹ ಆರೋಗ್ಯ ಸಮಸ್ಯೆಗಳು ಕಾಡಬಹುದು. ಧೈರ್ಯದಿಂದ ಮುನ್ನಡೆಯಿರಿ. ರಾಜಕೀಯ ಕ್ಷೇತ್ರದಲ್ಲಿರುವವರು ತಮ್ಮ ವಾಕ್ಚಾತುರ್ಯವನ್ನು ಪ್ರದರ್ಶಿಸಲಿದ್ದಾರೆ. ಮಕ್ಕಳು ಹಠ ಸಾಧಿಸಬಹುದು. ತಾಯಿಯವರ ಅನಾರೋಗ್ಯ ಮನಸ್ಸಿಗೆ ಬೇಸರ ತರಬಹುದು. ಆರ್ಥಿಕ ಪರಿಸ್ಥಿತಿ ಕ್ರಮೇಣ ಸುಧಾರಿಸಲಿದೆ. ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ವಹಿಸಿ.
ಧನು: ಈ ಸಮಯದಲ್ಲಿ ಉದ್ವೇಗ ಹೆಚ್ಚಾಗುವ ಸಾಧ್ಯತೆ ಇದೆ. ಶನಿ, ಕುಜ ಹಾಗೂ ಗುರುಗಳ ಪ್ರಭಾವ ಇದಕ್ಕೆ ಕಾರಣವಾಗಬಹುದು. ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲು ಆತುರಪಡಬೇಡಿ. ಯಾರೊಂದಿಗೂ ನಿಷ್ಠುರವಾಗಿ ವರ್ತಿಸದಿರಿ. ಧೈರ್ಯದಿಂದ ಮುನ್ನಡೆಯಿರಿ. ಸಂಗಾತಿಯೊಂದಿಗೆ ಸಣ್ಣಪುಟ್ಟ ವಿಚಾರಗಳಿಗೆ ಪಿರಿಪಿರಿ ಮಾಡುವುದನ್ನು ತಪ್ಪಿಸಿ. ಮಕ್ಕಳ ಬಗ್ಗೆ ಅತಿಯಾದ ಚಿಂತೆ ಬೇಡ. ಗೃಹ ಬದಲಾವಣೆಯ ಸಾಧ್ಯತೆ ಇದೆ. ಬೀಳುವ ಅಥವಾ ಗಾಯಗೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ವಾಹನ ಚಾಲನೆ ಮಾಡುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಿ ಮತ್ತು ಹೆಲ್ಮೆಟ್ ಧರಿಸಿ.
ಮಕರ: ನಿಮ್ಮ ಪ್ರಯತ್ನ, ಬಲ ಹಾಗೂ ಹಿತಚಿಂತಕರ ಬೆಂಬಲದಿಂದ ಯಶಸ್ಸು ಸಾಧಿಸುವಿರಿ. ಮನೆಯಲ್ಲಿ ಸಂಗಾತಿಯೊಂದಿಗೆ ಘರ್ಷಣೆಗೆ ಅವಕಾಶ ನೀಡದಿರಿ. ಗುರುಬಲ ಅನುಕೂಲಕರವಾಗಿರಲಿದೆ. ಉತ್ತಮ ಸಂಪಾದನೆ ದೊರೆಯಲಿದೆ. ಮಾತಿನ ಶೈಲಿ ನಯವಾಗಿರಲಿ. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ. ಗಂಟುನೋವಿನ ಸಮಸ್ಯೆ ಕಾಡಬಹುದು. ತಂದೆ-ತಾಯಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ವಿದ್ಯಾರ್ಥಿಗಳು ಹೆಚ್ಚು ಪರಿಶ್ರಮ ಪಡಬೇಕಾಗಿದೆ. ಪ್ರೀತಿ-ಪ್ರೇಮದ ವಿಚಾರದಲ್ಲಿ ಸದ್ಯಕ್ಕೆ ಎಚ್ಚರಿಕೆ ಅಗತ್ಯ.
ಕುಂಭ: ಹಿತಶತ್ರುಗಳು ಹಾಗೂ ಗೆಳೆಯರೊಂದಿಗೆ ಸಂಬಂಧವನ್ನು ಉತ್ತಮವಾಗಿರಿಸಿಕೊಳ್ಳುವುದು ಅಗತ್ಯ. ಹಲವು ಗ್ರಹಗಳ ಪ್ರಭಾವದಿಂದ ನಿಮ್ಮ ಯೋಜನೆಗಳಲ್ಲಿ ಏರಿಳಿತ ಉಂಟಾಗಬಹುದು. ಮಾತನಾಡುವಾಗ ವಿನಯವನ್ನು ಮರೆಯದಿರಿ. ರಾಜಕೀಯ ಕ್ಷೇತ್ರದಲ್ಲಿ ಸದ್ಯಕ್ಕೆ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳಿತು. ಇಲ್ಲವಾದರೆ ನಷ್ಟ ಹಾಗೂ ನಿಷ್ಠುರತೆಗೆ ಕಾರಣವಾಗಬಹುದು. ಹೋಟೆಲ್ ಉದ್ಯಮ, ಸಿನಿಮಾ, ನೃತ್ಯ ಹಾಗೂ ಸಂಗೀತ ಕ್ಷೇತ್ರದ ಚಟುವಟಿಕೆಗಳು ಲಾಭ ತರುವ ಸಾಧ್ಯತೆ ಇದೆ.
ಮೀನಾ: ಅತಿಯಾದ ಕಾರ್ಯದ ಒತ್ತಡದಿಂದ ಬಳಲಿಕೆ ಕಂಡುಬರಬಹುದು. ದೇಹಕ್ಕೆ ವಿಶ್ರಾಂತಿ ಅಗತ್ಯವಿದ್ದರೂ ಅನಿವಾರ್ಯವಾಗಿ ಕೆಲಸದ ಒತ್ತಡ ಎದುರಾಗಬಹುದು. ಶನಿ, ರಾಹು ಹಾಗೂ ಕುಜನ ಪ್ರಭಾವದಿಂದ ಮಾನಸಿಕ ಒತ್ತಡ ಹೆಚ್ಚಾಗಬಹುದು. ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಬೇಸರವಾಗಬಹುದು. ನಿಮ್ಮ ಕಾರ್ಯವೈಖರಿ ಪ್ರಶಂಸೆಗೆ ಪಾತ್ರವಾಗಲಿದೆ. ಕೋಪದಿಂದ ಕೆಲಸ ಹಾಳು ಮಾಡಿಕೊಳ್ಳದಿರಿ. ನೀವು ಬಯಸಿದ ಕಾರ್ಯ ಕೈಗೂಡುವ ಸಾಧ್ಯತೆ ಇದೆ. ಧನಾಗಮನ ಉತ್ತಮವಾಗಿರಲಿದೆ. ಸಾಡೇಸಾತಿ ಶನಿಯ ಪ್ರಭಾವದ ಬಗ್ಗೆ ಎಚ್ಚರದಿಂದಿರಿ.







































