ವಾರಭವಿಷ್ಯ
26.10.2025 ರಿಂದ 01.11.2025ರ ತನಕ
ವಿಶೇಷ ದಿನಗಳು :
27. 10.2025….ವೃಶ್ಚಿಕ ರಾಶಿಗೆ ಕುಜನ ಪ್ರವೇಶ
ಮೇಷ : ದೈವಾನುಗ್ರಹದ ಕೊರತೆಯ ಜೊತೆಗೆ ಸಾಡೇ ಸಾತ್ ಶನಿಯ ಪ್ರಭಾವ ನಿಮ್ಮ ಮೇಲಿರುತ್ತದೆ ಅಷ್ಟಮದಲ್ಲಿ ಕುಜ ಬುಧರ ಸಮಾಗಮ ಉಂಟಾಗಿದೆ. ಆರೋಗ್ಯದ ಕಡೆಗೆ ಗಮನವಿರಲಿ, ಸಂಗಾತಿಯ ಮಾತು ತೀಕ್ಷ್ಯತೆಯಿಂದ ಕೂಡಿರುತ್ತದೆ. ನಿಮ್ಮ ಯೋಜನೆ, ಯೋಚನೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದಲ್ಲಿ ನೀವು ಯಶಸ್ವಿಯಾಗುವಿರಿ, ಸಹೋದರ ವರ್ಗದವರಲ್ಲಿ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಕಲಹ ಬರುವ ಸಾಧ್ಯತೆ ಇರುತ್ತದೆ. ಉದ್ಯೋಗಿಗಳು ಮೇಲಾಧಿಕಾರಿಗಳ ಜೊತೆಗೆ ಮೌನವಾಗಿದ್ದರೆ ಒಳ್ಳೆಯದು.
ವೃಷಭ : ಸಪ್ತಮದಲ್ಲಿ ಕುಜ ಮತ್ತು ಬುಧರಿದ್ದು ದಾಂಪತ್ಯದಲ್ಲಿ ಕಲಹ ತರುವವರಾಗಿದ್ದಾರೆ. ಲಾಭ ಕ್ಷೇತ್ರದಲ್ಲಿ ಶನಿ ಇರುವುದರಿಂದ ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ವೃತ್ತಿ ಅಥವಾ ವ್ಯವಹಾರ ಕ್ಷೇತ್ರದಲ್ಲಿ ಚೇತರಿಕೆಯ ದಿನಗಳಾಗಿವೆ, ವಿದ್ಯಾರ್ಥಿಗಳು ಪ್ರೀತಿ ಪ್ರೇಮದ ಹಿಂದೆ ಹೋಗುವ ಸಾಧ್ಯತೆ ಇರುತ್ತದೆ. ಹಿರಿಯರ ಸಲಹೆ ಪಡೆಯಿರಿ, ತಾಯಿಯವರ ಆರೋಗ್ಯದ ಬಗ್ಗೆ ಗಮನವಿರಲಿ, ಮಕ್ಕಳಿಂದಲೂ ಅಸಮಾಧಾನವಿರುತ್ತದೆ.
ಮಿಥುನ : ದೈವಾನುಗ್ರಹ ಪ್ರಸ್ತುತ ನಿಮಗಿರುತ್ತದೆ. ಬರುತ್ತಿರುವ ಆದಾಯದಲ್ಲಿ ಹೆಚ್ಚಳವಾಗಲಿದೆ. ಪತ್ನಿಯ ಕಡೆಯವರಿಂದ ಸಹಾಯ ಹಸ್ತ ನಿಮಗಿರುತ್ತದೆ.ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಉತ್ತಮ ಆರೋಗ್ಯ ನಿಮಗಿರುತ್ತದೆ. ಕುಲ ದೇವರ ಪ್ರಾರ್ಥನೆ ಅಗತ್ಯವಿರುತ್ತದೆ, ಸಹೋದರರಿಗೆ ಶುಭ ಸಮಯವಿದಾಗಿದೆ ಒತ್ತಡದ ಬದುಕಿನಲ್ಲಿ ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿರಿ. ಹಿರಿಯರ ಹಿತವಚನದ ಅಗತ್ಯ ನಿಮಗಿರುತ್ತದೆ.
ಕರ್ಕಾಟಕ : ಮಾನಸಿಕ ಒತ್ತಡದಿಂದ ಬಳಲುವಂತೆ ಮಾಡಿರುವ ರಾಹು ಮತ್ತು ಶನಿ ಸುಖ ಸ್ಥಾನದಲ್ಲಿರುವ ರವಿ ಮತ್ತು ಶುಕ್ರ… ವಿಷ್ಣು ಸಹಸ್ರನಾಮ ಪಾರಾಯಣದಿಂದ ದೋಷ ಪರಿಹಾರವನ್ನು ಮಾಡಲಿದ್ದಾರೆ. ಚರ್ಮ ಅಥವಾ ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಸೂಕ್ತ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ತಂದೆಯವರ ಮಾತಿಗೆ ವಿರುದ್ಧವಾಗಿ ನಡೆದು ಕೊಳ್ಳಬೇಡಿರಿ, ನೀರಿಗೆ ಸಂಬಂಧಿಸಿದ ಸಮಸ್ಯೆ ಬರಬಹುದು.
ಸಿಂಹ : ನಿಮಗೀಗ ದೈವಾನುಗ್ರಹದ ಸಮಸ್ಯೆ ಒಂದೆಡೆಯಾದರೆ ಅಷ್ಟಮದಲ್ಲಿ ಶನಿ ಇರುವುದರಿಂದ ಬೀಳುವ ಅನಾರೋಗ್ಯದಲ್ಲಿ ಇರಬೇಕಾದ ಕಾಲವಾಗಿದೆ. ಮೃತ್ಯುಂಜಯ ಜಪ ಮಾಡಲೇಬೇಕು, ಕಾಲು ನೋವು ಬರಲಿದೆ, ಅನ್ಯ ಮಹಿಳೆಯರ ಬಗ್ಗೆ ಎಚ್ಚರವಾಗಿರಿ ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡುವುದರಿಂದ ನಷ್ಟ ಬರುವ ಸಾಧ್ಯತೆ ಇರುತ್ತದೆ. ದಾಂಪತ್ಯದಲ್ಲಿ ಸಹನೆ ಮತ್ತು ತಾಳ್ಮೆ ಸಹಕಾರ ಮಾಡಲಿದೆ.ಮನೆ ಬದಲಾಯಿಸುವ ಯೋಗವಿದೆ.
ಕನ್ಯಾ : ನಿಮ್ಮಲ್ಲಿ ಸ್ವಯಂ ಪ್ರತಿಭೆ ಇದ್ದರೂ ಅನುಭವಿಗಳ ಸಲಹೆ ಮಾರ್ಗದರ್ಶನ ಅಗತ್ಯವಿರುತ್ತದೆ. ನೀವು ನಡೆಸುತ್ತಿರುವ ಯಾವುದೇ ವ್ಯವಹಾರದಲ್ಲಿ ಅತ್ಯಧಿಕ ಲಾಭವನ್ನು ಹೊಂದುವ ಯೋಗವಿರುವ್ ಸಮಯವಾಗಿದೆ. ಶುಭ ಸಮಾರಂಭಗಳು ನಿಮ್ಮಲ್ಲಿ ನಡೆಯುವ ಸಮಯವಾಗಿದೆ. ವಿವಾಹವಾಗಲು ಸರದಿಯಲ್ಲಿ ಇರುವವರಿಗೆ ಕಾಲ ಕೂಡಿ ಬಂದಿದೆ. ನೀವುನಡೆಸುವ ಉತ್ತಮ ಕೆಲಸಗಳಿಗೆ ಸದಾ ಮನ್ನಣೆ ಸಿಗಲಿದೆ.
ತುಲಾ : ಕ್ರಿಯಾ ಶೀಲ ವಿದ್ಯಾರ್ಥಿಗಳಿಗೆ ಸದಾ ಯಶಸ್ಸು ಸಿಗಲಿದೆ. ಮಾತಿನಲ್ಲಿ ನೇರ ದಿಟ್ಟ ಸತ್ಯ ಸದಾ ನೆಲೆಸಿರಲಿ, ಉದ್ಯೋಗಿಗಳಿಗೆ ಭಡ್ತಿ ಯೋಗವಿದೆ. ವರ ಾವಣೆ ಯೋಗವಿದೆ, ಜೀವನ ಪ್ರಯಾಣದಲ್ಲಿ ಕೆಲವೊಮ್ಮೆ ವಿಘ್ನಗಳು ಸ್ವಾಭಾವಿಕವಾಗಿ ಬರುತ್ತಿರುತ್ತವೆ.ಧೈರ್ಯದಿಂದ ಮುನ್ನೆಡೆಯಿರಿ, ಮಕ್ಕಳ ಜೊತೆಗೆ ಹೊಂದಾಣಿಕೆಯಿಂದ ಮುನ್ನಡೆಯಿರಿ. ನಾಗ ದೇವರ ಪ್ರಾರ್ಥನೆ ಅಗತ್ಯವಿದೆ.
ವೃಶ್ಚಿಕ : ಗುರು ಭಾಗ್ಯದಲ್ಲಿ ಬಂದಿರುವ 47 ದಿನಗಳು ನಿಮ್ಮ ಜೀವನದಲ್ಲಿ ಬಂದಿರುವ ಸದಾ ನೆನಪಿನಲ್ಲಿ ಉಳಿಯುವ ದಿನಗಳಾಗಿವೆ. ನಿಶ್ಚಿತವಾದ ಗುರಿಯನ್ನು ಮುಟ್ಟುವ ದಿನವಾಗಿದೆ. ನಿಮ್ಮಲ್ಲಿ ನಿಮಗೆ ವಿಶ್ವಾಸವಿರಲಿ. ಹಿರಿಯರು ಕೂಡಿತ್ತಾ ಹಣವನ್ನು ದುರುಪಯೋಗ ಮಾಡುವುದು ಒಳ್ಳೆಯದಲ್ಲ, ಮಾತು ಮತ್ತು ವರ್ತನೆಗಳಲ್ಲಿ ಸಕಾರಾತ್ಮಕ ಬದಲಾವಣೆಗಳು ಜೀವನವನ್ನು ಬದಲಾಯಿಸಲಿವೆ. ಕೌಟುಂಬಿಕ ವ್ಯವಹಾರಗಳಲ್ಲಿ ತಾಳ್ಮೆಯಿರಲಿ.
ಧನು : ವೃತ್ತಿ ಅಥವಾ ವ್ಯವಹಾರ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ಹಾಕಿಕೊಳ್ಳುವುದರಿಂದ ಅಭಿವೃದ್ಧಿಯನ್ನು ಕಾಣುವಿರಿ. ಪ್ರಸ್ತುತ ಗುರು ಅಷ್ಟಮದಲ್ಲಿ ಶನಿ ಸುಖ ಸ್ಥಾನದಲ್ಲಿ ಇರುವುದರಿಂದ ಮೃತ್ಯುಂಜಯ ಜಪ ಪಾರಾಯಣ ಮಾಡುವುದು ಅಗತ್ಯವಿದೆ, ಕುಜ ಮತ್ತು ಬುಧ ವ್ಯಯದಲ್ಲಿ ಇರುವುದರಿಂದ ಮಕ್ಕಳ ವಿಷಯದಲ್ಲಿ ಎಚ್ಚರವಿರಲಿ,ದೇವರ ಪ್ರಾರ್ಥನೆಯನ್ನು ಮರೆಯದಿರಿ, ಆರ್ಥಿಕ ಲೆಕ್ಕಾಚಾರ ಸರಿಯಾಗಿಲ್ಲವಾದರೆ ಸಾಲದ ಹೊರೆ ಹೆಚ್ಚಾಗಲಿದೆ.
ಮಕರ : ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯಲು ಹಿರಿಯರ ಆಶೀರ್ವಾದವೂ ಮುಖ್ಯವಾಗಿದೆ. ಗುರುವಿನ ಅನುಗ್ರಹ ನಿಮಗಿರುವ ಈ ಸಮಯ ಪ್ರೀತಿ ಪಾತ್ರರ ವಿವಾಹ ನಡೆಯುವ ಸಮಯವಾಗಿದೆ. ಸರಕಾರಿ ಕೆಲಸಗಳಲ್ಲಿ ಅಡೆ ತಡೆ ಉಂಟಾಗುವ ಸಾಧ್ಯತೆ ಇರುತ್ತದೆ. ಬಂಧು ಬಳಗದವರ ಜೊತೆಗೆ ರಾಹು ವಿರಸವನ್ನು ತರುವ ಸಾಧ್ಯತೆ ಇರುತ್ತದೆ. ನಕಾರಾತ್ಮಕ ಚಿಂತೆಗಳಿಂದ ಹೊರಗೆ ಬನ್ನಿರಿ.
ಕುಂಭ : ಕಳೆದು ಹೋದ ಸಮಯಕ್ಕೆ ಚಿಂತಿಸಿ ಪ್ರಯೋಜನವಿರುವುದಿಲ್ಲ. ಮಾನಸಿಕ ದೃಢತೆಗೆ ಆಧ್ಯಾತ್ಮದ ಕಡೆಗೆ ಮೊರೆ ಹೋಗುವುದು ಒಳ್ಳೆಯದು. ವಾಹನ ಮತ್ತು ಭೂಮಿ ಖರೀದಿಯ ಯೋಗವಿದೆ. ವೃತ್ತಿಪರ ಉದ್ಯೋಗ ಕ್ಷೇತ್ರದಲ್ಲಿ ವರ್ಗಾವಣೆಯ ಸಾಧ್ಯತೆ ಇರುತ್ತದೆ, ಹೊಸ ಸಾಲದ ಪ್ರಯತ್ನ ಬೇಡ, ದೈವಾನುಗ್ರಹದ ಕೊರತೆ ಇರುತ್ತದೆ. ಜೊತೆಗೆ ಸಾಡೇ ಸಾತ್ ಶನಿಯ ಪ್ರಭಾವ ನಿಮ್ಮ ಮೇಲಿರುತ್ತದೆ. ನಿಮ್ಮ ಜವಾಬ್ದಾರಿಯನ್ನು ಅರಿತು ಮುಂದೆ ಸಾಗಿರಿ. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ.
ಮೀನ : ಅನಾವಶ್ಯಕ ವಿಳಂಬದಿಂದ ಕಾರ್ಯ ಕೆಡಬಹುದು, ದಾಂಪತ್ಯ ವಿಷಯದ ಕಿರಿಕಿರಿಗಳಿಗೆ ತಾಳ್ಮೆಯೇ ಮದ್ದು ಆಗಿರುತ್ತದೆ. ಸಾಡೇ ಸಾತ್ ಶನಿಗೆ ನಿತ್ಯವೂ ತಮ್ಮ ಶಕ್ತಾನುಸಾರವಾಗಿ ಪರಿಹಾರ ಮಾಡಿಕೊಳ್ಳುವುದು ಅಗತ್ಯವಿರುತ್ತದೆ. ಗುರುವಿನ ಅನುಗ್ರಹ ನಿಮಗಿರುವುದರಿಂದ ನಿಮ್ಮ ವ್ಯವಹಾರಗಳು ಎಲ್ಲವೂ ಯಶಸ್ವಿಯಾಗಲಿವೆ. ನಿಮ್ಮ ಕಾರ್ಯ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವ ಅವಶ್ಯಕತೆ ಇದೆ.ಕೃಷಿ ಮತ್ತು ಹೈನುಗಾರಿಕೆಯಿಂದ ಲಾಭವಿದೆ. ಜೇನು ಕೃಷಿ ತರಬೇತಿ ಪಡೆದು ಮಾಡಲು ಆರಂಭಿಸಿ.








