



📅 ವಾರಭವಿಷ್ಯ
15.02.2026 ರಿಂದ 21.02.2026ರ ತನಕ
🔱 ವಿಶೇಷ ದಿನ:
15.02.2026 – ಮಹಾ ಶಿವರಾತ್ರಿ
ಈ ಪವಿತ್ರ ದಿನದಲ್ಲಿ ಶಿವನ ಆರಾಧನೆ, ಉಪವಾಸ ಮತ್ತು ಜಪ-ಧ್ಯಾನ ಮಾಡುವುದರಿಂದ ಮಹತ್ತರ ಫಲಗಳು ದೊರೆಯಲಿವೆ.
♈ ಮೇಷ
ಹೊಸ ವ್ಯವಹಾರಗಳನ್ನು ಆರಂಭಿಸುವಾಗ ಅನುಭವಿಗಳ ಮಾರ್ಗದರ್ಶನ ಅಗತ್ಯ. ತಾಳ್ಮೆ ಮತ್ತು ಸಂಯಮ ಮುಖ್ಯ. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ಆರ್ಥಿಕ ಪ್ರಗತಿ ಮನಸ್ಸಿಗೆ ನೆಮ್ಮದಿ ತರಲಿದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಉತ್ತಮ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ಸಹೋದರಿಯಿಂದ ಕಿರಿಕಿರಿ ಸಂಭವ.
♉ ವೃಷಭ
ಹೊಸ ಮನೆ ಅಥವಾ ವಾಹನ ಖರೀದಿಯ ಯೋಗ. ಸಮಾಜದಲ್ಲಿ ಗೌರವ ಹೆಚ್ಚಲಿದೆ. ಆದಾಯ ಕ್ರಮೇಣ ವೃದ್ಧಿಯಾಗುತ್ತದೆ. ಉದ್ಯೋಗದಲ್ಲಿ ಬದಲಾವಣೆಗಳು. ಕರ್ಮ ಕ್ಷೇತ್ರದಲ್ಲಿ ನಾಲ್ಕು ಗ್ರಹಗಳ ಸಂಚಾರದಿಂದ ಗೊಂದಲ. ಜವಾಬ್ದಾರಿ ಹೆಚ್ಚಾಗುತ್ತದೆ. ನಾಗ ದೇವರ ಪ್ರಾರ್ಥನೆ ಮತ್ತು ಶಿವನಾಮ ಸ್ಮರಣೆ ಮಾಡುವುದು ಒಳಿತು.
♊ ಮಿಥುನ
ಉದ್ಯೋಗದಲ್ಲಿ ಪದೋನ್ನತಿ ಸಾಧ್ಯತೆ. ಆರ್ಥಿಕ ಲಾಭವಿದ್ದರೂ ಖರ್ಚಿನಲ್ಲಿ ನಿಯಂತ್ರಣ ಇರಲಿ. ನಿಮ್ಮ ಮಾತುಗಳು ಪ್ರೇರಣೆಯಾಗುವಂತಿರಲಿ. ಹೊಸ ಉದ್ಯೋಗ ಲಭ್ಯ. ಆರೋಗ್ಯ ಸುಧಾರಣೆ. 23ರಂದು ಕುಜ ಕುಂಭ ರಾಶಿಗೆ ಪ್ರವೇಶಿಸಿದ ನಂತರ ಸಮಸ್ಯೆಗಳಿಗೆ ಪರಿಹಾರ.
♋ ಕರ್ಕಾಟಕ
ಅಷ್ಟಮ ಭಾಗ್ಯದಲ್ಲಿ ರವಿ, ಬುಧ, ಶುಕ್ರ, ರಾಹು ಹಾಗೂ ವ್ಯಯದಲ್ಲಿ ಗುರು ಇರುವುದರಿಂದ ಜೂನ್ 2ರವರೆಗೆ ಮೃತ್ಯುಂಜಯ ಮಂತ್ರ ಜಪ ಅಗತ್ಯ. ಪ್ರತಿಯೊಂದು ನಿರ್ಧಾರ ಯೋಚಿಸಿ ತೆಗೆದುಕೊಳ್ಳಿ. ಬೆಂಕಿ, ವಿದ್ಯುತ್, ಕಬ್ಬಿಣ ವಿಷಯದಲ್ಲಿ ಎಚ್ಚರ. ಅನಾರೋಗ್ಯ ಕಂಡುಬಂದರೆ ಪರಿಣತ ವೈದ್ಯರನ್ನು ಸಂಪರ್ಕಿಸಿ.
♌ ಸಿಂಹ
ಗುರು ಲಾಭ ಕ್ಷೇತ್ರದಲ್ಲಿ ಇರುವುದರಿಂದ ಅದೃಷ್ಟದ ಕಾಲ. ಅನಿರೀಕ್ಷಿತ ಧನ ಲಾಭ. ಕ್ರಿಯಾಶೀಲತೆಯಿಂದ ಯಶಸ್ಸು. ಅಷ್ಟಮ ಮತ್ತು ಭಾಗ್ಯದಲ್ಲಿ ಗ್ರಹ ಸಂಚಾರದಿಂದ ಲಲಿತಾ ಸಹಸ್ರನಾಮ ಪಾರಾಯಣ, ಕಲಶ ಪೂಜೆ ಮಾಡುವುದು ಉತ್ತಮ. ದುರ್ಗಾ ಕ್ಷೇತ್ರದಲ್ಲಿ ಬಾಗಿನ ಅರ್ಪಣೆ ಒಳಿತು. ಬೆನ್ನು, ಕಾಲು ನೋವು ಸಂಭವ.
♍ ಕನ್ಯಾ
ಹೊಸ ಉದ್ಯೋಗ ನಿರೀಕ್ಷೆ ಫಲಕಾರಿ. ಮಾಡದ ತಪ್ಪನ್ನು ಒಪ್ಪಿಕೊಳ್ಳುವ ಸಂದರ್ಭ. ಆರನೆಯ ಭಾವದಲ್ಲಿ ನಾಲ್ಕು ಗ್ರಹ, ಸಪ್ತಮದಲ್ಲಿ ಶನಿ — ಗೊಂದಲದ ಸ್ಥಿತಿ. ವೈದ್ಯರಿಗೂ ತಿಳಿಯದ ಆರೋಗ್ಯ ತೊಂದರೆ ಸಾಧ್ಯ. ಆದಾಯ ಸ್ಥಿರ. ಉಚಿತ ಸಲಹೆಗಾರರು ಹೆಚ್ಚಾಗುತ್ತಾರೆ. ಜೂನ್ 2 ನಂತರ ಸ್ವಲ್ಪ ಸುಧಾರಣೆ.
♎ ತುಲಾ
ಉತ್ತಮ ದೈವಾನುಗ್ರಹ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಉದ್ಯೋಗ ನಿರೀಕ್ಷೆಯವರಿಗೆ ಶುಭ ಸುದ್ದಿ. ವಿವಾಹ ಯೋಗ. ಮಕ್ಕಳೊಂದಿಗೆ ವರ್ತನೆ ಮೃದುವಾಗಿರಲಿ. 60+ ನಂತರ ಮಕ್ಕಳ ಮಾತಿಗೆ ಮಾನ್ಯತೆ ಕೊಡುವುದು ಉತ್ತಮ. ಕಣ್ಣಿನ ಸಮಸ್ಯೆ ಸಾಧ್ಯ.
♏ ವೃಶ್ಚಿಕ
ಗ್ರಹಗಳ ಪ್ರತಿಕೂಲ ಸ್ಥಿತಿ ಮನಸ್ಸಿಗೆ ಅಶಾಂತಿ ತರಬಹುದು. ಕುಟುಂಬದಿಂದ ಕಿರಿಕಿರಿ. ಮೃತ್ಯುಂಜಯ ಜಪ, ವಿಷ್ಣು ಸಹಸ್ರನಾಮ ಅಗತ್ಯ. ಜೂನ್ 2 ನಂತರ ಬದಲಾವಣೆ. ಹೃದಯ ಸಂಬಂಧಿತ ಅಲರ್ಜಿಯವರು ಎಚ್ಚರ. ರಾತ್ರಿ ಸಂಚಾರ ಕಡಿಮೆ ಮಾಡಿರಿ. ಸಾಕುಪ್ರಾಣಿಗಳಿಂದ ಜಾಗ್ರತೆ.
♐ ಧನು
ಕುಟುಂಬ ಸೌಹಾರ್ದತೆ ಇದ್ದರೆ ಏಳಿಗೆ. ಆದಾಯದಲ್ಲಿ ಕೊರತೆ ಇಲ್ಲ. ಶನಿಗೆ ವಿಷ್ಣು ಸಹಸ್ರನಾಮ ಪಾರಾಯಣ ಒಳಿತು. ಅಲಸ್ಯ ಹೆಚ್ಚಾಗಬಹುದು. ಸಂಗಾತಿಯೊಂದಿಗೆ ವೈಮನಸ್ಸು ತಪ್ಪಿಸಿರಿ. ಭೂ ವ್ಯವಹಾರದಲ್ಲಿ ಎಚ್ಚರ. ತಾಯಿಯ ಆರೋಗ್ಯದ ಕಡೆ ಗಮನ.
♑ ಮಕರ
ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ಕಲಹ ಸಾಧ್ಯತೆ. ಕೋರ್ಟ್ ಮೆಟ್ಟಲು ಸಾಧ್ಯ. ವ್ಯಾಪಾರದಲ್ಲಿ ಶನಿಯ ಅನುಗ್ರಹದಿಂದ ಅಭಿವೃದ್ಧಿ. ಹಿರಿಯರ ಸಲಹೆ ಪಡೆದು ಮುಂದುವರಿದರೆ ಯಶಸ್ಸು. ನಿರುದ್ಯೋಗಿಗಳಿಗೆ ಉದ್ಯೋಗ ಯೋಗ. ದೈವಾನುಗ್ರಹಕ್ಕಾಗಿ ದಕ್ಷಿಣೇಶ್ವರ ದೇವರ ಪ್ರಾರ್ಥನೆ ಮಾಡಿರಿ.
♒ ಕುಂಭ
ಸಾಂಸಾರಿಕ ಚಿಂತೆಗಳು. ಶುಭಕಾರ್ಯಗಳಲ್ಲಿ ಓಡಾಟ. ಜನ್ಮ ರಾಶಿಯಲ್ಲಿ ರವಿ, ಬುಧ, ಶುಕ್ರ, ರಾಹು ಸಂಚಾರದಿಂದ ಮಾನಸಿಕ ಒತ್ತಡ. ನಾಗ ದೇವರ ಆರಾಧನೆ ಒಳಿತು. ಹಣ, ಷೇರು, ಚಿನ್ನಾಭರಣ ವ್ಯವಹಾರಗಳಿಗೆ ಇದು ಸೂಕ್ತ ಸಮಯವಲ್ಲ.
♓ ಮೀನ
ಗ್ರಹ ಸಂಚಾರ ಪ್ರಕಾರ ನಿರ್ಧಾರಗಳಲ್ಲಿ ವಿಶೇಷ ಜಾಗ್ರತೆ ಅಗತ್ಯ. ಕಹಿ ಅನುಭವಗಳ ಸಾಧ್ಯತೆ. ವ್ಯಯದಲ್ಲಿ ಪಂಚಗ್ರಹ ಸಂಚಾರದಿಂದ ಎಚ್ಚರಿಕೆ ಸೂಚನೆ. ಗಣಪತಿ ದೇವರ ಆರಾಧನೆ ಮಾಡುವುದು ಶ್ರೇಯಸ್ಕರ.







































