ವಾರಭವಿಷ್ಯ
08 ಮಾರ್ಚ್ 2026 ರಿಂದ 14 ಮಾರ್ಚ್ 2026ರ ತನಕ
ಮೇಷ
ಈ ವಾರ ಆದಾಯದ ಕೊರತೆ ಸ್ವಲ್ಪ ಕಾಡುವ ಸಾಧ್ಯತೆ ಇದೆ. ಸಂಬಂಧಿಕರೊಂದಿಗೆ ದೂರವಾಗುವ ಸಂದರ್ಭಗಳು ಉಂಟಾಗಬಹುದು. ಹಿರಿಯರ ಆರೋಗ್ಯದ ಬಗ್ಗೆ ಚಿಂತೆಯು ಕಾಣಿಸಬಹುದು. ಅವಿವಾಹಿತರಿಗೆ ವಿವಾಹ ಯೋಗ ಕಾಣಿಸಿಕೊಳ್ಳುತ್ತದೆ. ಹಿತ ಶತ್ರುಗಳಿಂದ ಕೆಲವೊಮ್ಮೆ ಪ್ರತಿಕೂಲ ಪರಿಣಾಮ ಎದುರಾಗಬಹುದು.
ವೃಷಭ
ಇತರರ ವಿಷಯಗಳಲ್ಲಿ ಮಧ್ಯಸ್ಥಿಕೆ ವಹಿಸುವುದನ್ನು ತಪ್ಪಿಸುವುದು ಉತ್ತಮ. ಹಿತ ಶತ್ರುಗಳು ಹೊಸ ವಿವಾದಗಳಲ್ಲಿ ಸಿಲುಕಿಸುವ ಸಾಧ್ಯತೆ ಇದೆ. ಕೆಲಸಗಳಲ್ಲಿ ಉತ್ಸಾಹ ಕಡಿಮೆ ಕಾಣಿಸಬಹುದು. ಆದರೆ ಕುಟುಂಬದವರ ಉತ್ತಮ ಸಹಕಾರದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮಿಥುನ
ಸಣ್ಣಪುಟ್ಟ ತೊಂದರೆಗಳು ಕಂಡುಬಂದರೂ ದಂಪತಿಗಳಿಗೆ ಪುತ್ರ ಸಂತಾನದ ಭಾಗ್ಯ ಸಾಧ್ಯತೆ ಇದೆ. ಕುಟುಂಬದವರು ನಿಮ್ಮ ಮೇಲೆ ಸಂತೋಷದಿಂದಿರುತ್ತಾರೆ. ಆದಾಯದಲ್ಲಿ ಕೊರತೆ ಕಾಣಿಸದು. ನಿಮ್ಮ ಪರಿಶ್ರಮದಿಂದ ಕೆಲಸಗಳು ಸುಖಕರವಾಗಿ ನೆರವೇರುತ್ತವೆ.
ಕರ್ಕಾಟಕ
ಪ್ರತಿಯೊಂದು ವಿಚಾರದಲ್ಲೂ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅಗತ್ಯ. ಹಿರಿಯರೊಂದಿಗೆ ಅನಾವಶ್ಯಕ ಕಲಹ ಮಾಡಬಾರದು. ಆದಾಯಕ್ಕೆ ತಕ್ಕಂತೆ ಖರ್ಚುಗಳನ್ನು ನಿಯಂತ್ರಿಸಿಕೊಳ್ಳಬೇಕು. ಕೆಲವೊಮ್ಮೆ ಅಪವಾದಗಳು ಎದುರಾಗುವ ಸಾಧ್ಯತೆ ಇದೆ.
ಸಿಂಹ
ಕೆಟ್ಟವರಲ್ಲಿ ಸ್ನೇಹ ಹಾಗೂ ಒಳ್ಳೆಯವರಲ್ಲಿ ವಿರೋಧ ಉಂಟಾಗುವ ಸಾಧ್ಯತೆ ಇದೆ. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದೆ ಮುಂದುವರಿಯುವ ಆತ್ಮವಿಶ್ವಾಸ ನಿಮ್ಮನ್ನು ಮುನ್ನಡೆಸಲಿದೆ. ಮನಸ್ಸಿನ ಮೇಲೆ ಹಿಡಿತ ಇರುವುದು ಅಗತ್ಯ.
ಕನ್ಯಾ
ಹಿರಿಯರೊಂದಿಗೆ ಅನಾವಶ್ಯಕ ವಾದವಿವಾದಗಳನ್ನು ತಪ್ಪಿಸಿ. ಉತ್ತಮ ಉದ್ಯೋಗ ಪ್ರಾಪ್ತಿ ಯೋಗವಿದೆ. ವಿವಾಹ ವಿಚಾರದಲ್ಲಿ ಜೂನ್ 2 ರವರೆಗೆ ಕಾಯುವುದು ಉತ್ತಮ. ಮನೆಯ ಹೊರಗೆ ಸಂತೋಷದಿಂದಿದ್ದರೂ ಮನೆಯೊಳಗೆ ಬಂದಾಗ ಚಿಂತೆ ಹೆಚ್ಚಾಗುವ ಸಾಧ್ಯತೆ ಇದೆ.
ತುಲಾ
ನಿರಂತರ ಖರ್ಚುಗಳಿದ್ದರೂ ಸತ್ಕಾರ್ಯಗಳಿಗಾಗಿ ಮಾಡುವ ವೆಚ್ಚ ನಿಮಗೆ ಸಮಾಧಾನ ತರುತ್ತದೆ. ಅನಾವಶ್ಯಕ ವಾದವಿವಾದಗಳು ಸಂಭವಿಸಬಹುದು. ಸಮಾಜದಿಂದ ಗೌರವ ಸಿಗುವ ಜೊತೆಗೆ ಕೆಲವೊಮ್ಮೆ ಅವಮಾನವೂ ಎದುರಾಗಬಹುದು.
ವೃಶ್ಚಿಕ
ಮನೋಕಾಮನೆಗಳು ಶೀಘ್ರದಲ್ಲೇ ಈಡೇರುವ ಸಾಧ್ಯತೆ ಇದೆ. ಧಾರ್ಮಿಕ ಚಿಂತನೆಗೆ ಮನಸ್ಸನ್ನು ತಿರುಗಿಸಿಕೊಳ್ಳುವುದು ಒಳಿತು. ಸತ್ಸಂಗ, ದೇವರ ಪಾರಾಯಣ ಹಾಗೂ ಭಜನೆಗಳಿಂದ ಮನಶಾಂತಿ ದೊರೆಯುತ್ತದೆ. ಕುಟುಂಬದಲ್ಲಿ ದೂರಾವಸ್ಥೆಗಳು ಉಂಟಾಗುವ ಸಾಧ್ಯತೆ ಇದೆ.
ಧನು
ಪಿತೃ ಸಂಬಂಧಿಗಳೊಂದಿಗೆ ಪಾಲುದಾರಿಕೆ ಕಾರ್ಯಗಳಿಗೆ ಅನುಕೂಲವಾಗಬಹುದು. ಇತರರ ಖಾಸಗಿ ವಿಚಾರಗಳಲ್ಲಿ ಅನಗತ್ಯವಾಗಿ ತಲೆಹಾಕಬಾರದು. ಕೋಪ ಹೆಚ್ಚಾಗುವ ಸಾಧ್ಯತೆ ಇದೆ. ಹಣದ ವ್ಯರ್ಥ ಖರ್ಚನ್ನು ನಿಯಂತ್ರಿಸಿಕೊಳ್ಳಬೇಕು.
ಮಕರ
ಜೂನ್ 2 ರವರೆಗೆ ದೈವಾನುಗ್ರಹ ಕಡಿಮೆ ಇರುವ ಸಾಧ್ಯತೆ ಇದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಒಳಿತು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಮಾತಿನಲ್ಲಿ ನಿಯಂತ್ರಣ ಇರಲಿ. ಮನಸ್ಸಿಗೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
ಕುಂಭ
ಶನಿ ಮತ್ತು ಶುಕ್ರನ ಮಿಶ್ರ ಫಲದಿಂದ ಆದಾಯದಲ್ಲಿ ಏರಿಳಿತ ಕಂಡುಬರಬಹುದು. ಆದರೆ ಗುರುನ ಅನುಗ್ರಹದಿಂದ ಕಷ್ಟಗಳನ್ನು ಧೈರ್ಯದಿಂದ ಎದುರಿಸುತ್ತೀರಿ. ದಾನ ಧರ್ಮ ಮಾಡುವಾಗ ತಮ್ಮ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಡಬೇಕು.
ಮೀನ
ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ನಿಧಾನವಾಗಿದ್ದರೂ ಕ್ರಮೇಣ ಸುಧಾರಣೆ ಕಾಣಬಹುದು. ಮನಸ್ಸಿನಲ್ಲಿ ಚಿಂತೆ ಹೆಚ್ಚಾಗುವ ಸಾಧ್ಯತೆ ಇದೆ. ಅನಾವಶ್ಯಕ ವಾದವಿವಾದಗಳಿಂದ ದೂರವಿರುವುದು ಒಳಿತು. ಬಂಧುಗಳೇ ಕೆಲವೊಮ್ಮೆ ಹಿತ ಶತ್ರುಗಳಾಗಬಹುದು.
📞
ಜಾತಕ • ವಾಸ್ತು • ವಿವಾಹ ಹೊಂದಾಣಿಕೆ • ಶುಭ ಮುಹೂರ್ತ ಸಲಹೆಗಾಗಿ ಸಂಪರ್ಕಿಸಿರಿ.




































