ವಾರಭವಿಷ್ಯ ದಿನಾಂಕ 24-08-2025 ರಿಂದ 30-08-2025
ವಿಶೇಷ ದಿನಗಳು
27.08.2025…….ಗಣೇಶ ಚತುರ್ಥೀ
30.08.2025…….ಸಿಂಹ ರಾಶಿಗೆ ಬುಧನ ಪ್ರವೇಶ
ಮೇಷ : ನೀವು ಯೋಚನೆ ಮಾಡಿರುವ ಕೆಲಸ ಕಾರ್ಯಗಳು ಬಹಳ ಒಳ್ಳೆಯ ರೀತಿಯಲ್ಲಿ ನಡೆಯಲಿವೆ, ಸಾಂಸಾರಿಕವಾಗಿ ನೆಮ್ಮದಿಯ ವಾರವಾಗಿದೆ. ಸಮಾಧಾನ ತಾಳ್ಮೆ ಸಹನೆ ವಿಶೇಷವಾಗಿ ನಿಮ್ಮಲ್ಲಿರುತ್ತವೆ. ಮನೆಯಲ್ಲಿ ಶುಭ ಮಂಗಳ ಕೆಲಸಗಳು ನಡೆಯಲಿವೆ. ಅದಕ್ಕಾಗಿ ಓಡಾಟ ಇರುತ್ತದೆ. ಸಾಡೇ ಸಾತ್ ಶನಿಯ ಪ್ರಭಾವ ಇರುವುದರಿಂದ ಹಣದ ತೊಡಗಿಸುವಿಕೆಯಲ್ಲಿ ಎಚ್ಚರವಿರಲಿ, ವಿದ್ಯಾರ್ಥಿಗಳಿಗೆ ಮರೆವು ಸಮಸ್ಯೆ ಕಾಡಲಿದೆ.
ವೃಷಭ : ಉತ್ತಮವಾದ ದೈವಾನುಗ್ರಹ ಇರುವ ವಾರವಾಗಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ ಬಿಪಿ ಷುಗರ್ ಇರುವವರು ಎಚ್ಚರವಹಿಸಿರಿ, ವ್ಯಾಪಾರ, ವ್ಯವಹಾರದಲ್ಲಿ ಧಾರಾಳವಾಗಿ ಹಣತೊಡಗಿಸುವಿರಿ, ಅಧಿಕ ಲಾಭ ಗಳಿಸುವಿರಿ, ನೀವು ಮಾಡುತ್ತಿರುವ ವ್ಯವಹಾರದಲ್ಲಿ ಅನ್ಯ ವ್ಯಕ್ತಿಯ ಮೇಲೆ ಜವಾಬ್ದಾರಿಯನ್ನು ಕೊಟ್ಟು ನೀವು ಆರಾಮವಾಗಿರಲು ಹೋಗಬೇಡಿರಿ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ.
ಮಿಥುನ : ಆದಾಯ-ಖರ್ಚು ಸಮಾನವಾಗಿರುತ್ತದೆ. ನೌಕರರಿಗೆ ಭಡ್ತಿಯ ಯೋಗವಿರುತ್ತದೆ. ಹೊಸ ಹೊಸ ಅವಕಾಶಗಳು ನಿಮ್ಮೆದುರು ಬರಲಿದೆ. ಸಾಂಸಾರಿಕವಾಗಿ ಹಲವು ಬೇಡಿಕೆಗಳನ್ನು ಈಡೇರಿಸುವ ಜವಾಬ್ದಾರಿ ನಿಮಗೆ ಸವಾಲಾಗಿ ಪರಿಣಮಿಸಲಿದೆ, ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡ ಬೇಕಾಗುತ್ತದೆ, ಆದ್ಯಾತ್ಮದಲ್ಲಿ ಶಾಂತಿ ಸಿಗಲಿದೆ, ಭೂಮಿಮನೆ, ವಾಹನ ಖರೀಧಿ ಮಾಡುವ ಕನಸು ನನಸಾಗಲಿದೆ.
ಕರ್ಕಾಟಕ : ಸಾಂಸಾರಿಕವಾಗಿ ಹಿರಿಯರ ಸೂಕ್ತ ಸಲಹೆಗಳನ್ನು ಆಶೀರ್ವಾದವಾಗಿ ಸ್ವೀಕರಿಸಿರಿ. ರಾಹುವಿನ ಅಷ್ಟಮ ಸ್ಥಿತಿ ಹಂತ ಹಂತವಾಗಿ ನಿಮಗೆ ಅನುಭವಕ್ಕೆ ಬರಲಿದೆ. ಆರ್ಥಿಕ ಸ್ಥಿತಿ ಉತ್ತಮ ಸ್ಥಿತಿಗೆ ಬಂದರೂ ಆಕಸ್ಮಿಕ ಖರ್ಚು ವೆಚ್ಚಗಳು ಅಧಿಕ ರೂಪದಲ್ಲಿ ಬರಲಿದೆ.ವಿವಾಹ ಸಂಬಂಧ ಅನಿರೀಕ್ಷಿತವಾಗಿ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಇಂದಿನ ಕೆಲಸವನ್ನು ಇಂದೇ ಮುಗಿಸಿರಿ. ಸ್ತ್ರ ೨ ಸಂಘದ ಸಾಲ ಹೊರೆಯಾಗಿ ಕಾಡಲಿದೆ. ಮಾನಸಿಕ ಅಸ್ಥಿರತೆ ಹಾಗೂ ಋಣಾತ್ಮಕ ಚಿಂತನೆಗಳು ಮಹಿಳೆಯರನ್ನು ಕಾಡಲಿದೆ.
ಸಿಂಹ : ವಿದ್ಯಾರ್ಥಿಗಳಿಗೆ ಒಳ್ಳೆಯ ವಾರವಾಗಿದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ ನಿಮ್ಮ ಉದ್ಯಮದಲ್ಲಿ ನಿಮ್ಮ ಜೊತೆಗೆ ಇರುವ ಸಹೋದ್ಯೋಗಿಗಳನ್ನು ಪ್ರೀತಿಸಿರಿ. ಅವರ ಪೂರ್ಣ ಸಹಕಾರ ನಿಮಗೆ ಒದಗಿ ಬರಲಿದೆ. ಶನಿ ಸೂಚಿಸುವಂತೆ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ಎಚ್ಚರವಿರಲಿ, ಚಂಚಲ ಪ್ರವೃತ್ತಿಯಿಂದ ಹೊರಗೆ ಬನ್ನಿರಿ. ಅನೇಕ ಅವಕಾಶಗಳನ್ನು ಗುರು ನಿಮಗೆ ಒದಗಿಸಲಿದ್ದಾನೆ. ಬಂದ ಹಣವನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳುವುದು ನಿಮ್ಮ ವಿವೇಚನೆಗೆ ಬಿಟ್ಟದ್ದಾಗಿರುತ್ತದೆ.
ಕನ್ಯಾ : ಸಾಂಸಾರಿಕವಾಗಿ ಶನಿ ನೆಮ್ಮದಿಯನ್ನು ಕೆಡಿಸುತ್ತಾ ನಿಮ್ಮ ತಾಳ್ಮೆಯನ್ನು ಪರೀಕ್ಷೆಗೆ ಒಳಪಡಿಸಲಿದ್ದಾನೆ. ಅನ್ಯ ಜಾತಿಯ ಸಂಗಾತಿಯ ಸಂಪರ್ಕವಾಗುವ ಸಾಧ್ಯತೆ ಇರುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸ ಇದ್ದಲ್ಲಿ ನಿಮ್ಮ ಮನೋಕಾಮನೆಗಳು ಈಡೇರಲಿವೆ.ಸರಕಾರಿ ನೌಕರರಿಗೆ ಪದೋನ್ನತಿಯ ಅವಕಾಶ ಇರಲಿದೆ. ಅಲರ್ಜಿಯ ಸಮಸ್ಯೆ ಕಾಡಲಿದೆ. ವಿದ್ಯಾರ್ಥಿಗಳಿಗೆ ಮನೋಬಲವನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ. ಕೌನ್ಸೆಲ್ಲಿಂಗ್ ಅಗತ್ಯವಿರುತ್ತದೆ.
ತುಲಾ : ಉತ್ತಮ ದೈವಾನುಗ್ರಹ ಒದಗಿ ಬರಲಿದೆ. ನಿಮ್ಮ ಯಶಸ್ಸಿಗೆ ಬೇಕಾದ ಉತ್ತಮ ವಾತಾವರಣ ಮೂಡಿಬರಲಿದೆ. ಸಂಚಾರದಲ್ಲಿ ವೇಗದ ನಿಯಂತ್ರಣ ಚಾಲನೆಯಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಅವಕಾಶಗಳು ಮೂಡಿ ಬರಲಿದೆ. ನೌಕರ ವರ್ಗದವರಿಗೆ ವರ್ಗಾವಣೆಯ ಸಾಧ್ಯತೆ ಇರುತ್ತದೆ. ದೇಹಾರೋಗ್ಯದಲ್ಲಿ ಎಚ್ಚರವಿರಲಿ, ಅವಿವಾಹಿತರಿಗೆ ಒಳ್ಳೆಯ ಸಂಬಂಧ ಕೂಡಿಬರಲಿದೆ. ದಾಂಪತ್ಯದಲ್ಲಿ ಅನ್ನೋನ್ಯತೆ ಉತ್ತಮ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಅಗತ್ಯವಿದೆ.
ವೃಶ್ಚಿಕ : ಪತಿ ಪತ್ನಿ ಒಂದೇ ನಾಣ್ಯದ ಎರಡು ಮುಖಗಳು, ಅನ್ನೋನ್ಯತೆ, ತಾಳ್ಮೆಯನ್ನು ಹೊಂದಿರುವುದು ಅಗತ್ಯವಿದೆ, ಒಮ್ಮೆ ತಡೆಯಲ್ಪಟ್ಟ ವಿವಾಹ ಸಂಬಂಧಗಳು ಮತ್ತೆ ಪುನರ್ ಚಾಲನೆಗೆ ಒಳಪಡಲಿವೆ, ಹಿತ ಶತ್ರುಗಳು ನಿಮ್ಮ ಬೆನ್ನ ಹಿಂದೆಯೇ ಇರುತ್ತಾರೆ. ನಿಮ್ಮಲ್ಲಿ ಪರಿಶ್ರಮವಿರಲಿ, ಪ್ರಾಮಾಣಿಕತೆ ಇರಲಿ, ಸ್ವಯಂ ಕೃತ ಅಪರಾಧಗಳ ಬಗ್ಗೆ ಎಚ್ಚರವಿರಲಿ, ಕುಲ ದೇವರ ಆರಾಧನೆ ಅಗತ್ಯವಿದೆ. ಪುಣ್ಯ ಕ್ಷೇತ್ರ ದರ್ಶನ ಮಾಡಿರಿ, ದೇಹಾಯಾಸವಾಗದಂತೆ ಎಚ್ಚರವಿರಲಿ.
ಧನು : ಮನೆಗೆ ಬರುವ ಅತಿಥಿಗಳು ಉಡುಗೊರೆಯ ಸಹಿತ ಬರಲಿದ್ದಾರೆ. ಅವರಲ್ಲಿ ಕೆಲವೊಂದು ಸಲಹೆಗಳು ನಿಮಗಾಗಿ ಇರುತ್ತವೆ, ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಪಡುವ ಅಗತ್ಯವಿದೆ. ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಮಾಡುವಿರಿ, ವಾತಮಯವಾದ ನಿಮ್ಮ ಶರೀರ ವಿಶ್ರಾಂತಿಯನ್ನು ಬಯಸುತ್ತಿದೆ. ಕಲೆ ಸಂಗೀತ ಚಿತ್ರೋದ್ಯಮಕ್ಕೆ ಪ್ರಗತಿದಾಯಕ ಅಭಿವೃದ್ಧಿ ಕಂಡು ಬರಲಿದೆ. ಮನೆಯಲ್ಲಿ ಸ್ವಲ್ಪ ಮಟ್ಟಿನ ಕಲಹವನ್ನು ಶನಿ ತರಲಿದ್ದಾನೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಅಗತ್ಯವಿದೆ. ಗುರುವಿನ ಉತ್ತಮ ಅನುಗ್ರಹ ಇರುವುದರಿಂದ ನಿಮ್ಮ ವ್ಯವಹಾರ ಉತ್ತಮವಾಗಿ ನಡೆಯಲಿದೆ.
ಮಕರ : ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಮೂಲ ಧನಕ್ಕೆ ತೊಂದರೆ ಆಗದಂತೆ ಎಚ್ಚರವಹಿಸುವುದು ಅಗತ್ಯವಿದೆ. ಎಲ್ಲಿಯೂ ದುಡುಕು ನಿರ್ಧಾರಗಳು ಬೇಡ, ದೇವರ ಅನುಗ್ರಹದ ಕೊರತೆ ಇರುತ್ತದೆ. ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಿರಿ. ಆಯ ವ್ಯಯ ಸಮನಾಗಿರಲಿದೆ. ನೌಕರ ವರ್ಗದವರಿಗೆ ಮೇಲಾಧಿಕಾರಿಗಳೊಂದಿಗೆ ಕಲಹ ಮನಸ್ತಾಪ ಬರದಂತೆ ಎಚ್ಚರವಹಿಸಿರಿ. ಯೋಗ್ಯ ವಯಸ್ಕರಿಗೆ ವಿವಾಹ ಯೋಗ ಕೂಡಿ ಬರಲಿದೆ. ಕೋರ್ಟ್ ಕಛೇರಿಗಳಲ್ಲಿ ಜಯ ನಿಮ್ಮದಾಗಲಿದೆ.
ಕುಂಭ : ವಿದ್ಯಾರ್ಥಿಗಳು ಯಶಸ್ಸನ್ನು ಕಾಣುವ ವಾರವಾಗಿದೆ. ನಿಮ್ಮ ವ್ಯವಹಾರ, ಉದ್ಯೋಗದಲ್ಲಿ ನೀವು ತಾಳ್ಮೆಯಿಂದ ವ್ಯವಹಾರ ಮಾಡಿದಲ್ಲಿ ಯಶಸ್ಸು ನಿಮ್ಮದಾಗಲಿದೆ. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಾಗ ಒಂದು ನಿಮಿಷ ಯೋಚಿಸಿ ತೀರ್ಮಾನ ಕೈಗೊಳ್ಳಿರಿ. ವಿದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ವಯಕ್ತಿಕ ಕಚೇರಿಯ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಮನಸ್ಸಿಗೆ ಸಂತೋಷ ಉಂಟಾಗಲಿದೆ. ದೇವತಾ ಕಾರ್ಯಗಳಿಗೆ ಇದು ಸಕಾಲವಾಗಲಿದೆ.
ಮೀನ : ವೃತ್ತಿರಂಗದಲ್ಲಿ ಸಾಡೇ ಸಾತ್ ಶನಿಯ ಪ್ರಭಾವ ಹೆಜ್ಜೆ ಹೆಜ್ಜೆಗೂ ಕಂಡುಬರಲಿದೆ. ವಿಷ್ಣು ಸಹಸ್ರನಾಮ ಪಾರಾಯಣ ದಿನವೂ ಮಾಡುತ್ತಾ ಬನ್ನಿರಿ, ಆಗ | ಆತ್ಮ ಆತ್ಮ ವಿಶ್ವಾಸ ನಿಮ್ಮಲ್ಲಿ ಉತ್ತಮವಾಗಲಿದೆ. ತಂದೆ ಮಕ್ಕಳೊಂದಿಗೆ ಸಣ್ಣ ಮಟ್ಟಿನ ಕಿರಿಕಿರಿ ಬರಲಿದೆ ವಿದ್ಯಾರ್ಥಿಗಳಿಗೆ ಪೋಷಕರ ಪ್ರೋತ್ಸಾಹ ಅಗತ್ಯವಿದೆ. ಅಕ್ರಮ ವ್ಯವಹಾರ ಮಾಡುವ ಸಾಧ್ಯತೆ ನಿಮ್ಮಲ್ಲಿ ಇರುತ್ತದೆ. ನಿಮ್ಮ ಅಭಿಮಾನಕ್ಕೆ ಕೊರತೆ ಬರುವ ಸಾಧ್ಯತೆ ಇರುತ್ತದೆ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು ವಾಸ್ತು ಸಲಹೆ/ವಿವಾಹ ಹೊಂದಾಣಿಕೆ ತಿಳಿಸಲಾಗುವುದು.







































