ವಾರಭವಿಷ್ಯ 27.07.2025 ರಿಂದ 02..8.2025ರ ವರೆಗೆ
ವಿಶೇಷ ದಿನಗಳು :
28.07.2025…ಕನ್ಯಾ ರಾಶಿಗೆ ಕುಜನ ಪ್ರವೇಶ
29.07.2025…ನಾಗ ಪಂಚಮಿ
ಮೇಷ : ಕುಜ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಸಾಡೇ ಸಾತ್ ಶನಿಯ ಪ್ರಭಾವ ನಡೆಯುತ್ತಿದೆ. ಹಿರಿಯರಿಗೆ ಗೌರವಿಸುವುದನ್ನು ಮರೆಯಬೇಡಿರಿ. ಭೂಮಿ ವ್ಯಾಪಾರ ಮಾಡುವವರಿಗೆ ಬಹಳ ಒಳ್ಳೆಯ ಕಾಲವಾಗಿದೆ. ನಿಮ್ಮ ಪ್ರಾಮಾಣೀಕತೆ ಪರೀಕ್ಷೆಗೆ ಒಳಪಡುತ್ತಿದೆ. ಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯವನ್ನು ಕೊಡುವುದು ಸರಿಯಲ್ಲ,ನೀವು ಸ್ವತಂತ್ರ ಉದ್ಯಮಿಯಾಗಿದ್ದಲ್ಲಿ ಉನ್ನತ ದರ್ಜೆಗೆ ಏರಿಸುವ ಪ್ರಯತ್ನವನ್ನು ಮಾಡಿರಿ. ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ.
ವೃಷಭ : ಶನಿ ಲಾಭ ಕ್ಷೇತ್ರದಲ್ಲಿ ದ್ವಿತೀಯಾದಲ್ಲಿ ಗುರು ಶುಕ್ರ ಇರುವ ಶುಭ ಸಮಯ,ಎಲ್ಲರಿಂದ ಗೌರವ ಆತಿಥ್ಯ ಬರುವ ಧನಾಗಮನದ ಸಮಯ ಹಲವಾರು ಬದಲಾವಣೆಗಳನ್ನು ಕಾಣುವ ಸಮಯ ಇದಾಗಿದೆ, ಹೊಸತನ್ನು ಸ್ವೀಕರಿಸಲು ತಯಾರಾಗಿರಿ, ಆಭರಣ, ಗೃಹ ಉಪಯೋಗಿ ವಸ್ತುಗಳನ್ನು ಖರೀದಿಸುವಿರಿ, ಕಲಾ ಕ್ಷೇತ್ರದಲ್ಲಿ ಇರುವವರಿಗೆ ಗೌರವಗಳು ಪ್ರಾಪ್ತಿಯಾಗಲಿವೆ. ಮೇಲಧಿಕಾರಿಗಳಿಗೆ ಗೌರವ ಕೊಡಲು ಮರೆಯದಿರಿ.
ಮಿಥುನ : ದ್ವಿತೀಯಾದಲ್ಲಿ ರವಿ ಮತ್ತು ಬುಧ, ಕರ್ಮ ಕ್ಷೇತ್ರದಲ್ಲಿ ಶನಿ ಇದ್ದಾನೆ. ಅನಿರೀಕ್ಷಿತವಾಗಿ ಧನ ಆದಾಯ ಬರುವ ಸಮಯವಾಗಿದೆ. ಗುರು ಶುಕ್ರರಿಂದ ವ್ಯವಹಾರದಲ್ಲಿ ಒಮ್ಮೆಲೇ ಏರುಪೇರುಗಳು ಆಗುವ ಸಾಧ್ಯತೆಗಳು ಇವೆ. ಮನೆಯೊಳಗಿನ ಗುಟ್ಟು ನಿಮ್ಮಲ್ಲಿಯೇ ಇರಲಿ. ಇನ್ನೊಬ್ಬರ ವ್ಯವಹಾರದಲ್ಲಿ ನಿಮ್ಮ ಹಸ್ತಕ್ಷೇಪ ಬೇಡ, ನಿಮ್ಮ ಮಾತುಗಳು ಎಲ್ಲರ ಕಿವಿಗೆ ಮಧುರವಾಗಿರಲಿ, ಸರಕಾರದ ಸೌಲಭ್ಯಗಳು ಸಿಗುವಾಗ ತಡವಾಗಲಿದೆ.
ಕರ್ಕಾಟಕ : ವ್ಯಯದಲ್ಲಿ ಗುರು ಮತ್ತು ಶುಕ್ರ ಜನ್ಮರಾಶಿಯಲ್ಲಿ ರವಿ ಮತ್ತು ಬುಧ ಅಷ್ಟಮದಲ್ಲಿ ರಾಹು ಇದ್ದಾರೆ. ನಾಗ ದೇವರ ಸೇವೆ ಅತೀ ಅಗತ್ಯವಾಗಿದೆ. ಉದ್ಯೋಗ ಪ್ರಾಪ್ತಿ ಯೋಗವಿದೆ. ಹೊಸಬರ ಗೆಳೆತನ ನಿಮಗೆ ಲಾಭವನ್ನು ತರುವಂತಿರಲಿ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ, ರಾತ್ರಿ ಸಂಚಾರ ಆದಷ್ಟು ಕಡಿಮೆಯಾಗಲಿ, ಪ್ರಾಣಿಗಳ ಒಡನಾಟ ಅತಿಯಾಗಿ ಮಾಡುವುದು ಬೇಡ. ನಿದ್ದೆಯ ಕೊರತೆ ಕಾಡಲಿದೆ.
ಸಿಂಹ: ಬೇರೆ ಯಾರೋ ಮಾಡಿದ ತಪ್ಪು ನಿಮ್ಮ ಮೇಲೆ ಬಂದಾಗ, ಒಮ್ಮೆಗೆ ಒಪ್ಪಿಕೊಳ್ಳುವ ಪ್ರಸಂಗ ಎದುರಾಗಲಿದೆ. ಇದು ಅಷ್ಟಮದ ಶನಿಯ ಪ್ರಭಾವವಾಗಿದೆ ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವಾಗ ತಾಳ್ಮೆ ಇರಲಿ. ಕೃಷಿಕರಿಗೆ ಸಮಯವರಿತು ಕೆಲಸ ಮಾಡಿದಾಗ ಹೆಚ್ಚು ನಷ್ಟ ಆಗಲಾರದು, ಮಂಗಳ ಕಾರ್ಯಗಳು ಕೆಲವೊಂದು ಅಡೆ ತಡೆಗಳ ನಡುವೆ ಸುಖಾಂತ್ಯವಾಗಲಿದೆ. ಸಂಗಾತಿಯೊಂದಿಗೆ ಬೇಸರ ಬರಲಿದೆ. ಇನ್ನೂ ಒಂದೂವರೆ ತಿಂಗಳು ಇದು ಮುಂದುವರಿಯಲಿದೆ.
ಕನ್ಯಾ :ಹೊಸ ಉದ್ಯೋಗದ ಅನ್ವೇಷಣೆಯಲ್ಲಿ ಸಫಲತೆಯನ್ನು ಕಾಣುವಿರಿ, ಆಸ್ತಿ ಖರೀಧಿ ಮಾಡುವ ಮಾತುಕತೆಗಳು ನಡೆಯಲಿವೆ. ನಿಮ್ಮವರಿಂದಲೇ ನಿಮಗೆ ಅವರ ವರ್ತನೆಗಳಿಂದ ಬೇಸರ ಬರಲಿದೆ. ಕುಜ ಮತ್ತು ಶನಿ ಬೇಸರ ತರುವವರಾಗಿದ್ದಾರೆ. ಮಹಿಳೆಯರಿಂದಲೇ ಬೇಸರ ಬರುವುದು, ತುಂಬಾ ಎಚ್ಚರವಾಗಿರಬೇಕು. ಆರೋಗ್ಯದ ಬಗ್ಗೆ ಎಚ್ಚರವಾಗಿರಬೇಕು. ಕೆಳೆದು ಹೋದ ಸ್ಥಾನ -ಮಾನಗಳು ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಮರಳಿ ಪಡೆಯುವಿರಿ,
ತುಲಾ : ಭಾಗ್ಯದಲ್ಲಿ ಗುರು ಶುಕ್ರ ಕರ್ಮ ಕ್ಷೇತ್ರದಲ್ಲಿ ರವಿ ಮತ್ತು ಬುಧ ಇರುವುದು ನಿಮಗೆ ತುಂಬಾ ಅನುಕೂಲವನ್ನು ತಂದು ಕೊಡಲಿದೆ. ವಿವಾಹ ಆಗಲು ನಿರೀಕ್ಷೆಯಲ್ಲಿ ಇರುವವರಿಗೆ ಬಹಳ ಒಳ್ಳೆಯ ಸಮಯ ರಾಜಕಾರಣಿಗಳಿಗೆ ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಭಡ್ತಿ ಸಿಗುವ ವರ್ಗಾವಣೆ ಆಗುವ ಸಮಯವಾಗಿದೆ. ಪ್ರಮುಖ ನಿರ್ಧಾರಗಳನ್ನು ೩ ತೆಗೆದುಕೊಳ್ಳುವಾಗ ತೆಗೆದುಕೊಳ್ಳುವಾ ಎಚ್ಚರಿಕೆಯ ಹೆಜ್ಜೆಯನ್ನು ಇಡುವುದು ಅಗತ್ಯವಾಗಿದೆ. ನಿಮ್ಮ ಪ್ರಾಮಾಣಿಕತೆ ಹಲವರಿಗೆ ಮೆಚ್ಚುಗೆ ಆಗಲಿದೆ.
ವೃಶ್ಚಿಕ : ಅಷ್ಟಮದಲ್ಲಿ ಗುರು ಮತ್ತು ಶುಕ್ರ, ಸುಖ ಸ್ಥಾನದಲ್ಲಿ ರಾಹು, ಪಂಚಮದಲ್ಲಿ ಶನಿ,ಭಾಗ್ಯದಲ್ಲಿ ಭಾಧಕ ಕ್ಷೇತ್ರದಲ್ಲಿ ರವಿ ಬುಧ ಹೀಗೆ ಎಲ್ಲರೂ ಪ್ರತಿಕೂಲರಾಗಿ ಇರುವಾಗ ನಿಮ್ಮ ಮಾತುಗಳು ವಿವಾದಕ್ಕೆ ಆಸ್ಪದವಾಗದಿರಲಿ. ನಿಮ್ಮ ಕಾಲಬುಡಕ್ಕೆ ಬಂದಿರುವ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳದಿರಿ. ಮಾತು ಕಡಿಮೆ ಮಾಡಿರಿ. ಹಠ ಸ್ವಭಾವವನ್ನು ಆದಷ್ಟು ಕಡಿಮೆ ಮಾಡಿರಿ, ಆರೋಗ್ಯದ ಕಡೆಗೆ ಗಮನವಿರಲಿ.
ಧನು : ನಿಮ್ಮ ಜನ್ಮ ರಾಶಿಯಲ್ಲಿ ಮಾಂದಿ, ಸುಖ ಸ್ಥಾನದಲ್ಲಿ ಶನಿ, ಅಷ್ಟಮದಲ್ಲಿ ರವಿ ಮತ್ತು ಬುಧ ಇರುವ ಈ ಸಮಯದಲ್ಲಿ ಗುರುವಿನ ಅನುಗ್ರಹ ಇರುವುದರಿಂದ ಮಿಶ್ರ ಫಲವನ್ನು ಅನುಭವಿಸಲಿದ್ದೀರಿ. ಆರೋಗ್ಯದ ಕಡೆಗೆ ನಿಮ್ಮ ಗಮನ ಅತೀ ಅಗತ್ಯವಾಗಿದೆ. ವಾಹನ ಚಾಲನೆಯಲ್ಲಿ ಎಚ್ಚರವಾಗಿರಬೇಕು, ನೀವಾಡುವ ಒಂದೊಂದು ಮಾತು ಎಲ್ಲರ ಮನಸ್ಸನ್ನು ಗೆಲ್ಲಬೇಕು, ತಾಯಿಯವರ ಬಗ್ಗೆ ವಿಶೇಷ ಕಾಳಜಿ ಅಗತ್ಯವಿದೆ, ಬರುವ ಹಣಕ್ಕೆ ಯಾವುದೇ ಕೊರತೆ ಇರುವುದಿಲ್ಲ, ಆದರೆ ಯಾರಿಗೂ ಕೊಡುವ ಹಾಗಿಲ್ಲ.
ಮಕರ : ಅಷ್ಟಮದಲ್ಲಿದ್ದ ಕುಜ ಭಾಗ್ಯ ಸ್ಥಾನಕ್ಕೆ ಹೋಗಿ ನಿಮಗಿದ್ದ ದೊಡ್ಡ ತೊಂದರೆಯನ್ನು ದೂರಮಾಡಿದ್ದಾನೆ. ಕೇತು ಅಷ್ಟಮದಲ್ಲಿ ಇರುತ್ತಾನೆ. 6ನೆಯ ಮನೆಯಲ್ಲಿ ಗುರು ಶುಕ್ರ ಇರುತ್ತಾರೆ. ಸಹೋದರ ವರ್ಗದವರು ನಿಮ್ಮಲ್ಲಿ ಬೇಸರ ಮಾಡಿಕೊಳ್ಳುವ ಸಾಧ್ಯತೆ ಇದೆ. ಉದ್ಯಮ ಕ್ಷೇತ್ರದಲ್ಲಿ ಇದ್ದ ಅನೇಕ ಸಮಸ್ಯೆಗಳು ದೂರವಾಗಲಿದೆ. ಆರ್ಥಿಕ ಈ ಪರಿಸ್ಥಿತಿ ಪರಿಸ್ಥಿತಿ ಉತ್ತಮವಾಗಲಿದೆ. ಉತ್ತಮ ನಿಮ್ಮವರೇ ನಿಮ್ಮ ಅಭಿವೃದ್ಧಿಗೆ ಅಡ್ಡ ಗೋಡೆಯಾಗಲಿದ್ದಾರೆ.
ಕುಂಭ : ಜನ್ಮ ರಾಶಿಯಲ್ಲಿ ರಾಹು ದ್ವಿತೀಯಾದಲ್ಲಿ ಶನಿ ಸಪ್ತಮದಲ್ಲಿ ಕೇತು, ಅಷ್ಟಮದಲ್ಲಿ ಕುಜ ಇವರು ಪ್ರಸ್ತುತ ನಿಮಗೆ ಪ್ರತಿಕೂಲ ಸ್ಥಿತಿಯನ್ನು ಕೊಡುವವರು, ಈಗಾಗಲೇ ನಿಶ್ಚಯ ಮಾಡಿರುವ ಯೋಜನೆಗಳಲ್ಲಿ ಅನುಕೂಲಕರ ಬದಲಾವಣೆಗಳನ್ನು ಅಗತ್ಯವಿದ್ದರೆ ಮಾಡಿಕೊಳ್ಳುವುದು ಅಗತ್ಯವಿದೆ. ಹಣದ ವ್ಯವಹಾರದಲ್ಲಿ ಆರೋಗ್ಯದಲ್ಲಿ, ದಾಂಪತ್ಯದಲ್ಲಿ ಎಚ್ಚರವಾಗಿರಬೇಕು. ತುಂಬಾ ಒತ್ತಡವಿರುವ ಸಮಯದಲ್ಲಿ ಯಾವುದೇ ವಿಚಾರ ವಿನಿಮಯ ಮಾಡಲು ಹೋಗಬೇಡಿರಿ,
ಮೀನ ಜನ್ಮ ರಾಶಿಯಲ್ಲಿ ಶನಿ, ವ್ಯಯದಲ್ಲಿ ರಾಹು ಸಪ್ತಮದಲ್ಲಿ ಕುಜ ಇವರು ನಿಮಗೆ ಪ್ರಸ್ತುತ ಪ್ರತಿಕೂಲ ಪರಿಸ್ಥಿತಿಯಲ್ಲಿ ಇರುವವರು, ದಾಂಪತ್ಯದಲ್ಲಿ ಇನ್ನೂ ಒಂದೂವರೆ ತಿಂಗಳು ಎಚ್ಚರವಾಗಿರಬೇಕು ವಾಹನ ಸಂಚಾರದಲ್ಲಿ ಎಚ್ಚರವಾಗಿರಬೇಕು, ಹಣದ ವ್ಯವಹಾರದಲ್ಲಿ ಎಚ್ಚರವಾಗಿರಬೇಕು. ಕೃಷಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಅಧಿಕ ಲಾಭ ಗಳಿಸುವಿರಿ, ಮಕ್ಕಳ ವಿವಾಹದ ವಿಚಾರದಲ್ಲಿ ಚಿಂತೆಯೊಂದು ಕಾಡಲಿದೆ.

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ತಯಾರಿಸಿ ಕೊಡಲಾಗುವುದು.ಜಾತಕ ವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು, ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು.





































