ವಾರಭವಿಷ್ಯ
26.07.2026 ರಿಂದ 01.08.2026ರ ತನಕ
ವಿಶೇಷ ದಿನಗಳು :
26.07.2026 .. ವಕ್ರೀ ಶನಿ
29.07.2026 .. ಗುರು ಪೂರ್ಣಿಮಾ, ವ್ಯಾಸ ಪೂಜೆ, ಆಟೀ ಹುಣ್ಣಿಮೆ
ಮೇಷ :ಯಾವಾಗಲೂ ವಾಸ್ತವವಾಗಿಯೇ ಯೋಚಿಸುವ ನೀವು ಯೋಚನೆಯಲ್ಲಿಯೇ ಮಗ್ನರಾಗಿರುವಿರಿ. ನಿಮ್ಮ ಗುರಿ ಸಾಧನೆಗಾಗಿ ನೀವು ನಡೆಸುವ ಪ್ರಯತ್ನ ಯಶಸ್ವಿಯಾಗಲಿದೆ. ಹೊಸಬರ ಬಗ್ಗೆ ಎಚ್ಚರವಿರಲಿ. ಆಕಸ್ಮಿಕ ಧನಲಾಭದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ, 10.12.2026 ರ ವರೆಗೆ ನಿಮಗೆ ಸಾಡೇ ಸಾತ್ ಶನಿ ಇರುವುದಿಲ್ಲ.
ವೃಷಭ :ಸದ್ಯದಲ್ಲಿಯೇ ನಿಮ್ಮಲ್ಲಿರುವ ದೂರ ದೃಷ್ಟಿ ನಿಮ್ಮ ನೆರವಿಗೆ ಬರಲಿದೆ. ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಹಿರಿಯರ ಆಶೀರ್ವಾದ ಸಲಹೆ ಪಡೆಯಿರಿ ನಿರುದ್ಯೋಗಿಗಳಿಗೆ ಅವಕಾಶ ಒದಗಿ ಬರಲಿದೆ. ರಾಜಕೀಯದಲ್ಲಿ ಮುನ್ನೆಡೆ ಸಾಧಿಸುವಿರಿ, ವೈವಾಹಿಕ ಸಂಬಂಧದಲ್ಲಿ ಆಗಾಗ ಕಿರಿಕಿರಿ ಅನುಭವಿಸಲಿರುವಿರಿ.
ಮಿಥುನ: ನೀವು ನಡೆಸುವ ಯಾವುದೇ ವ್ಯವಹಾರದಲ್ಲಿ ಗಂಭೀರತೆ ಇರಲಿ. ಸಾಂಸಾರಿಕ ಸಂಬಂಧಗಳು ಹಂತ ಹಂತವಾಗಿ ಸುಗಮವಾಗಿ ಸಾಗಲಿದೆ. ನಿಮ್ಮ ಐಷಾರಾಮಿ ಜೀವನ ಮಿತಿಗಿಂತ ಹೆಚ್ಚು ಖರ್ಚು ಆಗುವಂತೆ ಮಾಡಲಿದೆ. ಧನಾಗಮನಕ್ಕೆ ಯಾವುದೇ ಕೊರತೆ ಇರಲಾರದು. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಿರಲಿ.
ಕರ್ಕಾಟಕ : ಅಷ್ಟಮದಲ್ಲಿ ಇರುವ ರಾಹು ಶನಿ ಹಲವಾರು ರೀತಿಯಲ್ಲಿ ವ್ಯರ್ಥ ಖರ್ಚುಗಳನ್ನು ಮಾಡಿಸಲಿದ್ದಾರೆ. ಅನಾರೋಗ್ಯ ಬಾಧೆ ನಿಮ್ಮನ್ನು ಕಾಡಲಿದೆ. ಕಾರ್ಯದ ಒತ್ತಡದಿಂದಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಳಲಿಕೆ ಉಂಟಾಗಲಿದೆ ವಿದ್ಯಾರ್ಥಿಗಳು ಅಭ್ಯಾಸವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಉಪಯೋಗಿಸಿಕೊಳ್ಳಿರಿ.
ಸಿಂಹ : ಜೀವನದಲ್ಲಿ ಇಂದಿನಿಂದ ಕೆಲವೊಂದು ಬದಲಾವಣೆಗಳನ್ನು ಕಾಣಲಿದ್ದೀರಿ. ಪ್ರೇಮಿಗಳು ಕಿರಿ ಕಿರಿಯನ್ನು ಅನುಭವಿಸಲಿದ್ದೀರಿ. ಹಿರಿಯರ ಅನಾರೋಗ್ಯ ನಿಮ್ಮ ಮನಸ್ಸಿಗೆ ಬೇಸರವನ್ನು ತರಲಿದೆ. ದೈವಾನುಗ್ರಹ ಪ್ರಾಪ್ತಿಗಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ ಆರ್ಥಿಕವಾಗಿ ಸಮಸ್ಯೆಯನ್ನು ಎದುರಿಸಬೇಕಾಗತ್ತದೆ ಯಾರ ಮೇಲೆಯೂ ಸಿಟ್ಟನ್ನು ಮಾಡದಿರಿ.
ಕನ್ಯಾ : ಜೀವನದಲ್ಲಿ ಹಲವಾರು ಉತ್ತಮ ಬದಲಾವಣೆಗಳು ನಡೆಯಲಿವೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಸಂಬಂಧಿಕರೊಂದಿಗೆ ಅತಿಯಾದ ವಿಶ್ವಾಸ ದುರುಪಯೋಗ್ಯಕ್ಕೆ ಕಾರಣವಾದೀತು. ಸಾಂಸಾರಿಕವಾಗಿ ಸುಖ ದಾಂಪತ್ಯ ಜೀವನ ನಡೆಸುವಿರಿ, ವಿದ್ಯಾರ್ಥಿಗಳು ಅಧಿಕ ಶ್ರಮವಾಹಿಸಬೇಕಾಗಿದೆ.
ತುಲಾ : ನೀವು ಮಾಡುತ್ತಿರುವ ಉದ್ಯೋಗ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಹೊಂದಲಿರುವಿರಿ, ಅವಿವಾಹಿತರಿಗೆ ಕೆಲವೊಂದು ಸಮಸ್ಯೆಗಳ ಜೊತೆಗೆ ಕಂಕಣ ಬಲ ಕೂಡಿ ಬರಲಿದೆ. ಆರೋಗ್ಯದ ಕಡೆಗೆ ಗಮನವಿರಲಿ ಮಕ್ಕಳ ಜೊತೆಗೆ ಹೊಂದಾಣಿಕೆಯ ಜೀವನ ನಡೆಸಿರಿ, ಹಿರಿಯರಿಂದ ದೂರವಾಗುವ ಸಾಧ್ಯತೆ ಇರುತ್ತದೆ. ಬಿ ಪಿ ಇರುವವರು ಎಚ್ಚರವಹಿಸಿರಿ.
ವೃಶ್ಚಿಕ : ನಿಮ್ಮ ವ್ಯವಹಾರದಲ್ಲಿ ಉದ್ಯೋಗದಲ್ಲಿ ಬಹಳ ಎಚ್ಚರವಹಿಸಬೇಕಾದ ಅಗತ್ಯವಿದೆ, ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಿರಲಿ, ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಪದವಿ ಪ್ರಾಪ್ತಿ ಯೋಗವಿದೆ, ನೀವಾಡುವ ಮಾತಿನಲ್ಲಿ ಎಚ್ಚರವಿರಲಿ ನಿಮ್ಮ ತಾಯಿಯವರ ಆರೋಗ್ಯದ ಬಗ್ಗೆ ಗಮನವಿರಲಿ, ಹೃದಯ ಸಂಬಂಧಿ ಸಮಸ್ಯೆ ಈಗಾಗಲೇ ಇರುವವರು ಎಚ್ಚರದಿಂದಿರಿ,
ಧನು : ವೃತ್ತಿರಂಗದಲ್ಲಿ ಅನೇಕ ಮೂಲಗಳಿಂದ ಲಾಭಾಂಶ ದೊರೆಯಲಿದೆ. ದೈವಾನುಗ್ರಹ ಪ್ರಾಪ್ತಿಗಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ಸಂಗಾತಿಯ ಸಹಕಾರ ದೊರೆಯಲಿದೆ. ನಿಮ್ಮ ಆರೋಗ್ಯದ ಕಡೆಗೆ ಗಮನವಿರಲಿ. ಮನೆ ರಿಪೇರಿ ಮಾಡುವ ಸಾಧ್ಯತೆ ಇರುತ್ತದೆ ನೀವು ಬಯಸಿದ್ದು ಕೆಲವೊಮ್ಮೆ ಸಿಗಲಾರದು.. ಹಳೆಯ ಕಾಯಿಲೆ ಮರುಕಳಿಸುವ ಸಾಧ್ಯತೆ ಇರುತ್ತದೆ.
ಮಕರ : ಸಾಡೇ ಸಾತ್ ಶನಿ ತಾತ್ಕಾಲಿಕವಾಗಿ ಮತ್ತೊಮ್ಮೆ ಬಂದಿದೆ. ನಿಮ್ಮ ಉದಾಸೀನತೆಯ ವಿಳಂಬ ನೀತಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾದೀತು, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಬಾರದೇ ನಿರಾಸೆ ಉಂಟಾಗಲಿದೆ ಸಂಗಾತಿಗೆ ಉದ್ವೇಗ ಮನಸ್ಸಿಗೆ ಅಶಾಂತಿ ಉಂಟಾಗಲಿದೆ.
ಕುಂಭ : ಶನಿಯ ವಕ್ರಗತಿ ಇಮ್ಮ ಆರ್ಥಿಕ ಸ್ಥಿತಿಯಲ್ಲಿ ಏರಿಳಿತವನ್ನು ತರಲಿದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಹೆಚ್ಚಿಯ ವಿಶ್ವಾಸವಿರಲಿ ಅನ್ಯ ಮಹಿಳೆಯರ ಬಗ್ಗೆ ಅಪವಾದವನ್ನು ಕೇಳುವ ಸಾಧ್ಯತೆ ಇರುತ್ತದೆ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಸೂಕ್ತ ಸ್ಥಾನ ಮಾನ ಪ್ರಾಪ್ತಿಯಾಗಲಿದೆ ಕಂಕಣ ಭಾಗ್ಯಕ್ಕಾಗಿ ಡಿಸೆಂಬರ್ ತಿಂಗಳವರೆಗೆ ಕಾಯುವುದು ಒಳ್ಳೆಯದು.
ಮೀನಾ : ಸಾಡೇ ಸಾತ್ ಶನಿಯ ಪ್ರಭಾವದಿಂದಾಗಿ ನಿಮ್ಮ ಭವಿಷ್ಯದ ಬಗ್ಗೆ ಜಾಗ್ರತೆ ವಹಿಸಬೇಕಾಗುತ್ತದೆ ಯಾವುದೇ ಕೆಲಸ ಮಾಡುವ ಮುನ್ನ ದುಡುಕದೆ ಪೂರ್ವ ತಯಾರಿ ಮಾಡಿಕೊಳ್ಳಬೇಕಾದ ಅಗತ್ಯವಿದೆ.. ವಿಶ್ವಾಸದ ದುರುಪಯೋಗ ಆಗದಂತೆ ಕಾಳಜಿ ವಹಿಸಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ
ಸಮಯವಾಗಿದೆ.






































