







ವಾರ ಭವಿಷ್ಯ ದಿನಾಂಕ 26.01.2025 ರಿಂದ ದಿನಾಂಕ 01.02.2025 ರವರೆಗೆ
ವಿಶೇಷ ದಿನಗಳು : 28.01.2025…..ಮೀನ ರಾಶಿಗೆ ಶುಕ್ರನ ಪ್ರವೇಶ
29.01.2025……ಅಮಾವಾಸ್ಯೆ ,ಪುರಂದರ ದಾಸ ಪುಣ್ಯ ತಿಥಿ
ಮೇಷ : ಶುಕ್ರ 28ನೇ ದಿನಾಂಕದಂದು ಮೀನ ರಾಶಿಗೆ ಅಂದರೆ ನಿಮಗೆ ರಾಹುವಿನ ಜೊತೆಗೆ, ವ್ಯಯಕ್ಕೆ ಬರುತ್ತಿದ್ದಾನೆ. ಅವನು ಸಪ್ತಮಾಧಿಪತಿ ಆಗಿರುತ್ತಾನೆ. ಹೀಗಿರುವಾಗ ಸಂಗಾತಿಯೊಂದಿಗೆ, ವ್ಯವಹಾರದಲ್ಲಿ ಪಾಲುದಾರರಿದ್ದರೆ ಅವರೊಂದಿಗೆ ಹೊಂದಾಣಿಕೆಯ ಜೀವನ ಅತಿ ಅಗತ್ಯವಾಗಿರುತ್ತದೆ. ಅನ್ಯರು ಪ್ರೀತಿಯಿಂದ ಕೊಡುವ ವಸ್ತುವಿನಲ್ಲಿ ಅಸಡ್ಡೆ ಬೇಡ. ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇರುತ್ತದೆ. ದಾಂಪತ್ಯದಲ್ಲಿ ಬರಲಿರುವ ಸಣ್ಣ ಪುಟ್ಟ ವಿರಸವನ್ನು ಮುಂದುವರಿಸಬೇಡಿರಿ. ನಿಮ್ಮ ಹಿತೈಷಿಗಳ ಸಹಾನುಭೂತಿ ನಿಮಗೆ ಉತ್ಸಾಹವನ್ನು ಕೊಡಲಿದೆ. ನಿಮ್ಮ ಹಿತ ಶತ್ರುಗಳಿಂದ ಬೇಸರ ಮಾಡಿಕೊಳ್ಳುವ ಸಾಧ್ಯತೆ ಇದೆ. ಗುರು ದ್ವಿತೀಯಾದಲ್ಲಿ ಇರುವುದರಿಂದ ಎಚ್ಚರಿಕೆಯಿಂದ ಮುಂದುವರಿದಲ್ಲಿ ಸಮಸ್ಯೆ ಇರುವುದಿಲ್ಲ.
ವೃಷಭ : ನಿಮ್ಮ ಅದೃಷ್ಟಬಲ ದಿನಾಂಕ 28 ರಿಂದ ಹೆಚ್ಚಾಗಲಿದೆ. ಅನೇಕ ಬೆಲೆ ಬಾಳುವ ವಸ್ತುಗಳನ್ನು ಖರೀಧಿ ಮಾಡುವಿರಿ. ಕುಜನ ಸೂಚನೆಯಂತೆ ದಾಂಪತ್ಯದಲ್ಲಿ ನೀವಾಡುವ ಪ್ರತಿಯೊಂದು ಮಾತಿನ ಶೈಲಿ ಅತಿ ಣಮುಖವಾಗಿರುತ್ತದೆ.ನಿಮ್ಮ ಜೊತೆಗಿರುವ ಸಹಾಯಕರೊಂದಿಗೆ ಹೊಂದಾಣಿಕೆಯ ಮಾತಿರಲಿ. ಭಾವುಕರಾಗುವ ಸಂದರ್ಭಗಳು ಬರುತ್ತಿರುತ್ತದೆ. ಕೆಲವೊಂದು ನಿರಾಶೆಗಳೂ ನಿಮ್ಮನ್ನು ಕಾಡಲಿವೆ. ನೀವು ಮಾಡುವ ಪ್ರಯತ್ನಗಳು ಇತರರ ಗಮನ ಸೆಳೆಯಲಿದೆ. ಕೃಷಿಕರು ,ಬಟ್ಟೆ ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳು ಹೆಚ್ಚಿನ ಲಾಭ ಪಡೆಯಲಿದ್ದಾರೆ. ಗಣಪತಿ ದೇವರ ಅಥರ್ವ ಶೀರ್ಷ ಪಾರಾಯಣ ಅತೀ ಅಗತ್ಯವಾಗಿದೆ.
ಮಿಥುನ : ಜನ್ಮ ರಾಶಿಯಲ್ಲಿ ಕುಜನಿದ್ದಾನೆ. ಸಹೋದರ ಸಮಾನರ ಜೊತೆಗೆ ಕಲಹ ಬರುವ ಸಾಧ್ಯತೆ. ಅಷ್ಟಮದಲ್ಲಿ ರವಿ ಮತ್ತು ಬುಧ ಇರುವುದರಿಂದ ಆರೋಗ್ಯದ ಕಡೆಗೆ ಬಹಳ ಗಮನಹರಿಸಬೇಕು. ಉಷ್ಣ ಸಂಬಂಧಿಸಿದ ಸಮಸ್ಯೆ ಕಾಡಲಿದೆ. ವಿದೇಶಕ್ಕೆ ಹೋಗುವ ಅವಕಾಶ ಬರಲಿದೆ. ಪತ್ನಿಯ ಸಹಕಾರ ನಿಮ್ಮ ವ್ಯವಹಾರದಲ್ಲಿ ಲಭಿಸಲಿದೆ. ಉದ್ಯೋಗದಲ್ಲಿ ಬದಲಾವಣೆ, ವರ್ಗಾವಣೆಯಾಗುವ ಸಾಧ್ಯತೆ ಇರುತ್ತದೆ. ಯಾವುದೇ ಕಾರಣಕ್ಕೂ ಇನ್ನೊಂದು ಉದ್ಯೋಗ ಸಿಗುವ ಮೊದಲು, ಮೊದಲು ಇರುವ ಉದ್ಯೋಗವನ್ನು ಬಿಡುವುದು ಬೇಡ. ಹಿರಿಯರ ಬಗ್ಗೆ ಕಾಳಜಿ ಇರಲಿ. ನಾಗ ದೇವರ ಪ್ರಾರ್ಥನೆ ಅಗತ್ಯವಿದೆ. ಮದ್ಯ ಸೇವನೆ ಮಾಡುವವರು ಎಚ್ಚರವಿರಬೇಕು.
ಕರ್ಕಾಟಕ : ದಿನಾಕ 28 ರ ನಂತರ ಹಳೆಯ ಸಮಸ್ಯೆಗಳು ಮರುಕಳಿಸಿ ದಿನಾಂಕ 29 ಮಾರ್ಚ್ ತಿಂಗಳ ವರೆಗೆ ಮುಂದುವರಿಯಲಿದೆ. ವಿರಸ ಅಥವಾ ಮಿತ್ರತ್ವ ಅದು ನಿಮ್ಮ ಹಿಡಿತದಲ್ಲಿ ಇರುತ್ತದೆ. ವಾಹನ ಚಾಲಕರು ತುಂಬಾ ಎಚ್ಚರದಿಂದ ಇರಬೇಕು. ಬೇಗ ಹೊರಡಿ, ನಿಧಾನವಾಗಿ ಹೋಗಿ; ಸಂಗಾತಿಯೊಂದಿಗೆ ಬಿಸಿ ಬಿಸಿ ಮಾತುಗಳು ಬೇಡ; ಸರ್ಕಾರಿ ಸಂಬಂಧಿ ಕೆಲಸಗಳು ಯಶಸ್ವಿಯಾಗಲಿವೆ. ದುರ್ಗೆಯ ಪಾರಾಯಣ ಅಗತ್ಯವಾಗಲಿದೆ. ವ್ಯಾಪಾರ/ವ್ಯವಹಾರ ಕ್ಷೇತ್ರದಲ್ಲಿ ಮದ್ಯವರ್ತಿಗಳಿಂದ ಮೋಸ ಹೋಗುವ ಸಾಧ್ಯತೆ ಇದೆ. ದುಡುಕಿ ನಿರ್ಧಾರ ಕೈಗೊಂಡರೆ ಇರುವ ಉದ್ಯೋಗ ಕಳೆದು ಕೊಳ್ಳುವ ಸಾಧ್ಯತೆ ಇದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವ ಅಗತ್ಯವಿದೆ.
ಸಿಂಹ : ಶುಕ್ರನ ಮೀನರಾಶಿಗೆ ಸಂಚಾರ ದಿನಾಂಕ 28 ರಂದು ನಡೆಯಲಿದೆ. ಭೂಮಿಯ ವ್ಯವಹಾರ ಮಾಡುವವರಿಗೆ ಉತ್ತಮ ಸಮಯ. ಮನೆ ವಾಹನ ಭೂಮಿ ಖರೀಧಿ ಮಾಡಿಕೊಳ್ಳುವಿರಿ. ಉದ್ಯೋಗ ವ್ಯವಹಾರದಲ್ಲಿ ಎಚ್ಚರದಿಂದ ಮುನ್ನೆಡಿಯಿರಿ. ಅವಿವಾಹಿತರಿಗೆ ವಿವಾಹವಾಗಲು ಅಡೆ ತಡೆಗಳು ಕಾಡಲಿವೆ. ಅಹಂಕಾರವೇ ಸೋಲಿಗೆ ಕಾರಣವಾದೀತು. ಆದ್ಯಾತ್ಮ ಕ್ಷೇತ್ರದಲ್ಲಿ ನಿಮಗೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ರಾಹು ಅಷ್ಟಮದಲ್ಲಿ ಇರುವುದರಿಂದ ನಾಗ ದೇವರ ಆರಾಧನೆ ನಿಮ್ಮ ಹಲವಾರು ಮಾನಸಿಕ ಗೊಂದಲ ನಿವಾರಣೆಗೆ ಪ್ರಥಮ ಚಿಕಿತ್ಸೆಯಾಗಲಿದೆ. ಮೇಲಧಿಕಾರಿಗಳ ಕಿರುಕುಳ ಮೇ 14 ರ ವರೆಗೆ ಮುಂದುವರಿಯಲಿದೆ. ಕೆಲವೊಂದು ಬೆಲೆಬಾಳುವ ವಸ್ತುಗಳು ಕಳೆದು ಹೋಗದಂತೆ ಗಮನವಿರಲಿ. ಷುಗರ್ ಸಮಸ್ಯೆ ಇರುವವರು ಜಾಗ್ರತೆಯಿಂದ ಇರುವುದು ಅವಶ್ಯವಾಗಿದೆ.
ಕನ್ಯಾ : ರವಿ ಬುಧ ಪಂಚಮದಲ್ಲಿ ಇರುವುದರಿಂದ ಮಕ್ಕಳ ಅಭಿವೃದ್ಧಿಯ ಬಗ್ಗೆ ಮನಸ್ಸಿಗೆ ಸಂತೋಷವಾಗಲಿದೆ. ಬೇರೆಯವರ ಕೆಲಸವೇ ಪ್ರಧಾನವಾಗಿ ನಿಮ್ಮ ಕೆಲಸ ಉಳಿದು ಹೋಗಲಿದೆ. ಗುರುವಿನ ಅನುಗ್ರಹ ಪೂರ್ಣವಾಗಿ ಇರುವುದರಿಂದ ಉಳಿದ ಕೆಲಸಗಳು ಒಳ್ಳೆಯ ರೀತಿಯಲ್ಲಿ ನಡೆಯಲಿವೆ. ಬರುವ ಆದಾಯದಲ್ಲಿ ಯಾವುದೇ ಕೊರತೆ ಇರುವುದಿಲ್ಲ. ಸಹೋದರ ವರ್ಗದವರಲ್ಲಿ ಕಲಹ ಬರದಂತೆ ಎಚ್ಚರವಹಿಸಿರಿ. ಹೊಸ ವಾಹನ ಖರೀಧಿಯ ಬಗ್ಗೆ ಚಿಂತನೆ ನಡೆಸುವ ಕಾಲ.ಸಂಗಾತಿಯ ಕಡೆಗೆ ಒಲವು ಇರಲಿ. ಹಣ ಹೂಡಿಕೆ ಮಾಡುವಾಗ ಅಂಚೆ ಕಚೇರಿ /ರಾಷ್ಟ್ರೀಕೃತ ಬೇಂಕ್ ನಿಮ್ಮ ಆಯ್ಕೆ ಆಗಲಿ. ಬಡ್ಡಿಯ ಆಸೆಗೆ ಪೂರ್ತಿ ಹಣ ಕಳೆದುಕೊಳ್ಳುವ ಗ್ರಹಚಾರಕ್ಕೆ ಒಳಗಾಗದಿರಿ.
ತುಲಾ : ಅಷ್ಟಮದಲ್ಲಿ ಗುರು ಇರುವುದರಿಂದ, ಪಂಚಮದಲ್ಲಿ ಶನಿ ಇರುವುದರಿಂದ ಆರೋಗ್ಯದ ಕಡೆಗೆ ನಿಮ್ಮ ಗಮನ ಅಗತ್ಯವಿದೆ. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ. ನಿಮ್ಮ ಉದ್ಯೋಗದಲ್ಲಿ/ವ್ಯವಹಾರದಲ್ಲಿ ಪ್ರಾಮಾಣಿಕ ಪ್ರಯತ್ನ ವಿರಲಿ. ಅಡ್ಡ ದಾರಿ ಬೇಡ. ಕೃಷಿಕರು ಬಟ್ಟೆ ವ್ಯಾಪಾರಿಗಳು, ಹೋಟೆಲ್ ವ್ಯವಹಾರದವರು 28 ನೇ ದಿನಾಂಕದ ನಂತರ ಎಚ್ಚರವಿರಬೇಕು. ಇನ್ನೂ ಕೆಲವೇ ಸಮಯದಲ್ಲಿ ಹಲವಾರು ಬದಲಾವಣೆಗಳು ಶುಭವಾಗಲಿದೆ. ತಾಳ್ಮೆ ಇರಲಿ. ಮಕ್ಕಳಿಗೆ ಬೈಯುವ ಕೆಲಸ ಬೇಡ. ವಿಷ್ಣು ಸಹಸ್ರ ನಾಮ ಪಾರಾಯಣ ಮನೆಯವರೆಲ್ಲರೂ ಸಂಧ್ಯಾ ಕಾಲದಲ್ಲಿ ಮಾಡಿರಿ.
ವೃಶ್ಚಿಕ : ಅಷ್ಟಮದಲ್ಲಿ ಕುಜನಿದ್ದಾನೆ. ಸುಖ ಸ್ಥಾನದಲ್ಲಿ ಶನಿ ಇದ್ದಾನೆ. ಪಂಚಮದಲ್ಲಿ ಶುಕ್ರ ಮತ್ತು ರಾಹು ಇದ್ದಾನೆ. ಅಗ್ನಿಯ ಬದಿಯಲ್ಲಿ ಕೆಲಸ ಮಾಡುವವರು, ಕಬ್ಬಿಣದ ಕೆಲಸದವರು ಎಚ್ಚರದಿಂದ ಇರಬೇಕು. ನೀವು ತಾಳ್ಮೆಯ ಮೂರ್ತಿಯಾಗಬೇಕು. ನಿಮ್ಮಸ್ಥಾನ ಮಾನಕ್ಕೆ ತಕ್ಕುದಾದ ಗೌರವ ಸಿಗದೆ ಹೋದಾಗ ನಿರಾಸೆ ಆಗಲಿದೆ. ಗಲಾಟೆ,ಪೋಲೀಸು ಕೋರ್ಟ್ ಬೇಡ. ಮನೆಯ ಒಳಗೆ ಬರುವಾಗ ಹೊರಗಿನ ಒತ್ತಡವನ್ನು ತರುವುದೇ ಬೇಡ. ತಾಯಿಯವರ/ತಂದೆಯವರ ಬಳಿ ಕುಳಿತು ವಿಷ್ಣು ಸಹಸ್ರನಾಮ ಪಾರಾಯಣ ಭೀಷ್ಮಾಚಾರ್ಯರು ಧರ್ಮರಾಯನಿಗೆ ಶರ ಮಂಚದಲ್ಲಿ ಮಲಗಿ ಉತ್ತರಾಯಣದಲ್ಲಿ ಹೇಳಿದ 108 ಶ್ಲೋಕಗಳು ಇವುಗಳನ್ನು ನಿತ್ಯವೂ ಹೇಳಿರಿ.
ಧನು : ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ. ಗುರುವಿನ ಅನುಗ್ರಹ ಇರುವುದಿಲ್ಲ.ರಾಹು ಸುಖ ಸ್ಥಾನದಲ್ಲಿ ಇದ್ದಾನೆ.ಪಾಪಗ್ರಹರು ಸುಖ ಸ್ಥಾನದಲ್ಲಿ ಬಂದಾಗ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಮನೆಯೇ ಜೈಲಿನಂತೆ ಕಾಣಲಿದೆ. ಅಮ್ಮನವರ ಅನಾರೋಗ್ಯ ಮನಸ್ಸಿಗೆ ಬೇಸರ ತರಲಿದೆ.ಸಪ್ತಮದ ಕುಜ ಸಂಗಾತಿಯೊಂದಿಗೆ ಬೇಸರ ಬರುವಂತೆ ಮಾಡಲಿದೆ. ನಿಮ್ಮ ಅನುಭವ,ಮ ಹಿರಿತನ ,ಬುದ್ಧಿವಂತಿಕೆ ಸಮಾಜದಲ್ಲಿ ಗೌರವವನ್ನು ಕೊಡಲಿದೆ. ನಿಮ್ಮ ಅನುಭವದ ಮಾತು ಎಲ್ಲರಿಗೂ ಬೇಕಾಗಿರುತ್ತದೆ. ಒಳ್ಳೆಯ ಸಮಯಕ್ಕೆ ತಾಳ್ಮೆಯಿಂದ ಕಾಯೋಣ. ನಾಗದೇವರನ್ನು ನಿತ್ಯವೂ ಪ್ರಾರ್ಥಿಸುತ್ತಾ ಬನ್ನಿರಿ. ಸಹೋದರರೇ ಶತ್ರುಗಳಾಗುವ ಸಾಧ್ಯತೆ ಇದೆ. ಮಕ್ಕಳೇ ಬೇಸರ ತರುವ ಸಾಧ್ಯತೆ ಇದೆ.
ಮಕರ : ಅಷ್ಟಮಾಧಿಪತಿ ರವಿ ಬುಧನೊಂದಿಗೆ ಜನ್ಮ ರಾಶಿಯಲ್ಲಿ ಇರುವುದು ಹಲವಾರು ವಿಷಯಗಳನ್ನು ಚಿಂತನ ಮಂಥನ ಮಾಡುವಂತೆ ಮಾಡಿದೆ. ಶುಭಾಶುಭ ಫಲಗಳನ್ನು ಸೂಚನೆ ಮಾಡುತ್ತಿದೆ. ದ್ವಿತೀಯಾದಲ್ಲಿ ಶನಿ ಸಾಡೇಸಾತ್ ಶನಿಯ ಪ್ರಭಾವನ್ನುಕೊನೆಯ ಕಾಲಘಟ್ಟದಲ್ಲಿ ಕೊಡುತ್ತಿದೆ. ಹಿರಿಯರೊಂದಿಗೆ ಬೇಸರ ಕಲಹ ಬರದಂತೆ ನೋಡಿಕೊಳ್ಳಿರಿ. ನಿಮ್ಮ ಆರೋಗ್ಯ ಸಮಸ್ಯೆಗಳು ಏನಾದರೂ ಕಂಡು ಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿರಿ. ಮದ್ಯ ಸೇವನೆ ಮಾಡುವವರಾಗಿದ್ದರೆ ತಕ್ಷಣ ನಿಲ್ಲಿಸಿರಿ. ಇನ್ನೊಬ್ಬರಿಗೆ ಸಲಹೆ ಕೊಡಲು ಹೋಗಬೇಡಿರಿ. ಅವರಿಗೆ ಅದರ ಅಗತ್ಯವಿರುವುದಿಲ್ಲ. ನೀವು ರಾಜಕೀಯದಲ್ಲಿ ಇದ್ದರೆ ಸ್ವಲ್ಪ ಸಮಯ ಮೌನಾಚರಣೆ ಮಾಡಿಕೊಂಡು ಹೋಗುವುದು ಒಳ್ಳೆಯದು.
ಕುಂಭ : ದ್ವಿತೀಯಾದಲ್ಲಿ ರಾಹುವಿನ ಜೊತೆಗೆ ಶುಕ್ರ ಸೇರುತ್ತಿದ್ದಾನೆ. ಹಣದಲ್ಲಿ, ಮಾತಿನಲ್ಲಿ,ಕುಟುಂಬ ವರ್ಗದವರಲ್ಲಿ ಎಚ್ಚರವಿರಲಿ. ಕುಜ ಪಂಚಮದಲ್ಲಿ ಇರುವುದರಿಂದ ಭೂಮಿ ಸಂಬಂಧವಾಗಿ ಸಹೋದರ ವರ್ಗದವರಲ್ಲಿ ಕಲಹ ಬರದಂತೆ ಎಚ್ಚರವಹಿಸಿರಿ. ಚಿಂತೆಯನ್ನುಬಿಟ್ಟು ಚಿಂತನೆಯನ್ನು ಮಾಡಿರಿ. ಆರ್ಥಿಕ ಸ್ಥಿತಿ ಉತ್ತಮವಿದ್ದರೂ ಖರ್ಚು ಅಧಿಕವಾಗಲಿದೆ. ಹಣ ತೊಡಗಿಸಲು ಈ ಸಮಯ ಸರಿಯಾಗಿಲ್ಲ. ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ. ಪತ್ನಿಯ ಜೊತೆ /ಸಂಗಾತಿಯ ಜೊತೆಗೆ ಬಹಳ ನಾಯ ವಿನಯದೊಂದಿಗೆ ಹೋಗುವಂತೆ ರವಿ ತಿಳಿಸುತ್ತಿದ್ದಾನೆ. ಅಗತ್ಯವಿಲ್ಲದೆ ಊರಿನ ಉಸಾಬರಿಯನ್ನು ತಲೆಗೆ ಯಾಕೆ ಹಾಕಿಕೊಳ್ಳುತ್ತೀರಿ.
ಮೀನ : ಕುಜ ಸುಖ ಸ್ಥಾನದಲ್ಲಿ ಇದ್ದಾನೆ. ಪರಿಶ್ರಮವಿದ್ದರೆ ಉತ್ತಮ ಫಲ ಪಡೆಯುತ್ತೀರಿ. ಸರಕಾರಿ ಉದ್ಯೋಗ /ವ್ಯವಹಾರ ,ಗುತ್ತಿಗೆ ಕೆಲಸಗಳು ಅಧಿಕ ಲಾಭವನ್ನು ಕೊಡಲಿದೆ. ನಿಮ್ಮ ಆರೋಗ್ಯದ ಬಗ್ಗೆ ಈಗಲೇ ಎಚ್ಚರದಿಂದ ಇರಬೇಕು.ಎಲ್ಲದಕ್ಕೂ ರಾಮ ಬಾಣ “ವಿಷ್ಣು ಸಹಸ್ರನಾಮ ಪಾರಾಯಣ “ .ಗಂಟು ನೋವು ,ಷುಗರ್ ಬಿಪಿ ನಿಮ್ಮ ಪ್ರಾಯಕ್ಕೆ ತಕ್ಕಂತೆ ಬರುವ ಸೂಚನೆ ಇದೆ. ವಾಹನದಲ್ಲಿ ಪ್ರಯಾಣಿಸುವಾಗ ಮೊಬೈಲ್ ಆಫ್ ಮಾಡಿರಿ. ಬೇಗನೆ ಹೊರಡಿರಿ,ನಿಧಾನವಾಗಿ ವಾಹನ ಚಲಾಯಿಸಿರಿ.ಇದು ರಾಹು,ಶನಿ, ಶುಕ್ರ ,ಕುಜ ಇವರು ಹೇಳುವ ಮಾತು. ಅಪವಾದಗಳು ಬಂದರೆ ಕುಗ್ಗಬೇಡಿರಿ. ನಿಮ್ಮವರೇ ನಿಮಗೆ ಹಿತ ಶತ್ರುಗಳಾದಾಗ ಬೇಸರವಾಗುವುದು ಸಹಜ.ತಾಳ್ಮೆ ಇರಲಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮಿಹೂರ್ತವನ್ನು ತಿಳಿಸಲಾಗುವುದು. ವಾಸ್ತು ಸಲಹೆ/ವಿವಾಹ ಹೊಂದಾಣಿಕೆ ತಿಳಿಸಲಾಗುವುದು.





































