ವಾರಭವಿಷ್ಯ -24.03.2024 ರಿಂದ 30.03.2024 ರವರೆಗೆ

Picture of RB NEWS

RB NEWS

Bureau Report

f

24.03.2024 ರಿಂದ 30.03.2024 ರವರೆಗೆ


ವಿಶೇಷ ದಿನಗಳು :

24.03.2024…….ಹೋಲಿಕಾ ದಹನಮ್ ಕಾಮ ದಹನಮ್
25.03.2024……ಮೇಷ ರಾಶಿಗೆ ಬುಧನ ಪ್ರವೇಶ ;ಹುಣ್ಣಿಮೆ


ಮೇಷ : ಲಾಭ ಕ್ಷೇತ್ರದಲ್ಲಿ ಕುಜ [1, 8 ]ಶುಕ್ರ [2, 7] ಶನಿ [11, 10] ಇದ್ದು ನಿಮಗೆ ಎಲ್ಲಾ ರೀತಿಯಿಂದಲೂ ಲಾಭದಾಯಕವಾದ ವಾರವಾಗಿದೆ .ಭೂಮಿಯ ವ್ಯವಹಾರ ಮಾಡುವವರಿಗೆ ಉತ್ತಮ ಆದಾಯವನ್ನು ನೀಡುವ ವಾರವಾಗಿದೆ . ಸಂಗಾತಿಯ ಸಹಕಾರವೂ ದೊರೆಯಲಿದೆ .ಶುಕ್ರ ಅನೇಕ ಮೂಲಗಳಿಂದ ಆದಾಯ ಬರುವಂತೆ ಮಾಡಲಿದ್ದಾನೆ .ವ್ಯಯದಲ್ಲಿ ರವಿ [5] ರಾಹು , ಜನ್ಮದಲ್ಲಿ ಗುರು [12, 9 ]ಬುಧ [3,6] ಇರುವುದರಿಂದ ಸಹೋದರ ವರ್ಗ ,ಬಂಧು ವರ್ಗ ಸ್ನೇಹಿತರಿಂದ ಬೇಸರ ಬರಲಿದೆ .ಮೌನವಾಗಿರಿ . ತಂದೆಯವರ ಆರೋಗ್ಯದ ಬಗ್ಗೆ ಗಮನವಿರಲಿ ,ಮಕ್ಕಳಿಂದ ಸಣ್ಣ ಪುಟ್ಟ ಖರ್ಚು ಬರಲಿದೆ .ಮೇ ಒಂದರಿಂದ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ಪರಿಹಾರವಾಗಲಿದೆ .


ವೃಷಭ : ಕರ್ಮ ಕ್ಷೇತ್ರದಲ್ಲಿ ಶುಕ್ರ [[1,6]ಕುಜ [12,7] ಶನಿ [10,9] ಇರುವುದರಿಂದ ಕೆಲಸದ ಒತ್ತಡವಿರುತ್ತದೆ ,ಉದ್ವೇಗವಿರುತ್ತದೆ ,ಕಷ್ಟ,ನಷ್ಟಗಳು ಇರುತ್ತವೆ .ಆರೋಗ್ಯದ ಕಡೆಗೆ ನಿಮ್ಮ ಗಮನ ,ಕುಟುಂಬದ ಸದಸ್ಯರ ಬಗ್ಗೆ ಗಮನ ಅಗತ್ಯವಿರುತ್ತದೆ . ಲಾಭ ಕ್ಷೇತ್ರದಲ್ಲಿ ರವಿ [4]ಮತ್ತು ರಾಹು ಇರುವುದರಿಂದ ಮನೆ,ವಾಹನ ಭೂಮಿ ಕೊಳ್ಳುವ ನಿಮ್ಮ ಕನಸು ನನಸಾಗಲಿದೆ .ವ್ಯಯದಲ್ಲಿ ಗುರು ಮತ್ತು ಬುಧ [8,11][2,5] ಬರುವ ಆದಾಯಕ್ಕೆ ಯಾವುದೇ ಕೊರತೆ ಇಲ್ಲದಿದ್ದರೂ ಸಮಾನ ರೀತಿಯಲ್ಲಿ ನಷ್ಟವಿರುತ್ತದೆ .ನಿಮ್ಮ ಮೇಲೆ ಜನರ ಕಣ್ಣ ದೃಷ್ಟಿ ಇರುತ್ತದೆ . ಪರಿಹಾರ ಅಗತ್ಯವಿರುತ್ತದೆ .


ಮಿಥುನ : ಗುರು ಮತ್ತು ಬುಧ ಲಾಭ ಕ್ಷೇತ್ರದಲ್ಲಿ ಇದ್ದು ಅತ್ಯಂತ ಶುಭದಾಯಕವಾದ ವಾರವೆಂದು ಪರಿಗಣಿಸಲಾಗಿದೆ .ರವಿ ಮತ್ತು ರಾಹು ಕರ್ಮ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದು ನೀವು ಮಾಡುತ್ತಿರುವ ಯಾವುದೇ ಉದ್ಯೋಗ ವ್ಯವಹಾರಗಳು ಅಭಿವೃದ್ಧಿಯ ದಾರಿಯಲ್ಲಿ ನಡೆಯಲಿದೆ. .ರಾಜಕೀಯ ಬೆಂಬಲ ದೊರೆಯಲಿದೆ. ನಾಗ ದೇವರ ಸ್ಮರಣೆ ಅಗತ್ಯವಿದೆ. ಕುಜ ಶುಕ್ರ ಶನಿ ಇವರು ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು ,ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ . ಹಣದ ಮುಗ್ಗಟ್ಟು ಬರದಂತೆ ಎಚ್ಚರವಹಿಸಬೇಕು. ನೀವು ಮಾಡುವ ಕೆಲಸದಲ್ಲಿ ಘರ್ಷ ಣೆಗೆ ಅವಕಾಶ ಬರದಂತೆ ತನ್ನವರ ಸಹಕಾರ ಪಡೆದು ಕೊಂಡು ಮುಂದುವರಿಯಬೇಕು.


ಕರ್ಕಾಟಕ : ರವಿ ಮತ್ತು ರಾಹು ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶಗಳು ಲಭಿಸಲಿದ್ದು ಧನಾದಾಯಗಳೂ ಹರಿದು ಬರಲಿದೆ. ರಾಹು ರವಿಯ ಜೊತೆಗೆ ಇರುವುದರಿಂದ ಕೆಲವೊಮ್ಮೆ ಅಡೆ ತಡೆಗಳು ಬರುತ್ತವೆ . ಗುರು ಬುಧ ಮೇಷ ರಾಶಿಯಲ್ಲಿದ್ದು ಉದ್ಯೋಗದ ಅನ್ವೇಷಣೆಯಲ್ಲಿ ಇರುವವರಿಗೆ ಸದವಕಾಶ ಕೂಡಿ ಬರಲಿದೆ .ಭ ಡ್ತಿಯ ಅವಕಾಶ ಕೂಡಿ ಬರಲಿದೆ ಅಷ್ಟಮದಲ್ಲಿ ಇರುವ ಕುಜ ಶುಕ್ರ ಶನಿ ಇವರಿಗೆ ನರಸಿಂಹನ ಮಂತ್ರ ಪಾರಾಯಣ ಅಗತ್ಯ. .ದಾಂಪತ್ಯದಲ್ಲಿ ಕಿರಿಕಿರಿ ಬರದಂತೆ ಬಹಳ ಎಚ್ಚರ ವಹಿಸಬೇಕು. ಇನ್ನೂ ಒಂದೂವರೆ ತಿಂಗಳ ಕಾಲ ಪ್ರೀತಿ ಪ್ರೇಮದಲ್ಲಿ ಇರುವ ಜೋಡಿಗಳಿಗೆ ಸಮಸ್ಯೆಯ ಕಾಲವಾಗಿದೆ .


ಸಿಂಹ: ಗುರು ಮತ್ತು ಮತ್ತು ಬುಧ ಮೇಷ ರಾಶಿಯಲ್ಲಿ ಸಂಚಾರ ಮಾಡುವುದು ಶುಭದಾಯಕವಾಗಿದ್ದು ಜಾಗ್ರತೆಯಿಂದ ಮುನ್ನೆಡೆದಲ್ಲಿ ಸಮಸ್ಯೆಗಳು ಏನೂ ಬಂದರೂ ಸಹಿಸಿಕೊಂಡು ಹೋಗಬಹುದು . ಸಪ್ತಮದಲ್ಲಿ ಕುಜ ಶುಕ್ರ ಶನಿ ಕುಟುಂಬದಲ್ಲಿ ಹೊಂದಾಣಿಕೆಯ ಕೊರತೆಯನ್ನು ತರಬಹುದು ರವಿ ಮತ್ತು ರಾಹು ಅಷ್ಟಮದಲ್ಲಿ ಬಂದು ಆರೋಗ್ಯದ ಸಮಸ್ಯೆಯನ್ನು ತರಬಹುದು.ವೈದ್ಯರ ಸಲಹೆ ಪಡೆಯ ಬೇಕಾಗಿ ಬರಬಹುದು . ತಂದೆಯವರ ಬಗ್ಗೆ ಗಮನ ಕೊಡಬೇಕಾಗಿ ಬರಬಹುದು . ಉಸಿರಾಟದ ಸಮಸ್ಯೆ ಬಂದರೆ ,ಎದೆನೋವು ಬಂದರೆ ತಕ್ಷಣ ವೈದ್ಯರ ಸಲಹೆ ಅಗತ್ಯವಿದೆ .


ಕನ್ಯಾ : ಮನೆ ಮಂದಿಯೆಲ್ಲಾ ಕುಳಿತು ದಿನದಲ್ಲಿ ಒಂದು ಗಂಟೆ ಮೃತ್ಯುಂಜಯ ಜಪ ಮಾಡಲು ಸಲಹೆ ನೀಡಲಾಗುತ್ತಿದೆ . ವಾಹನ ಚಲಾವಣೆ ,ಬೆಂಕಿಯ ಬಳಿ ಕೆಲಸ ಮಾಡುವವರು, ಚೂಪಾದ ಆಯುಧಗಳ ಬಗ್ಗೆಎಚ್ಚರದಿಂದ ಇರಬೇಕೆಂದು ಒಂಬತ್ತೂ ಗ್ರಹರೂ ಸೂಚನೆ ಕೊಡುತ್ತಿದ್ದಾರೆ . ಜನ್ಮದಲ್ಲಿ ಕೇತು ,6 ನೇ ಮನೆಯಲ್ಲಿ 8 ನೇ ಮನೆಯ ಕುಜ ಅವನ ಜೊತೆಗೆ ಶುಕ್ರ ಶನಿ ,ಸಪ್ತಮದಲ್ಲಿ ರವಿ ಮತ್ತು ರಾಹು , ಅಷ್ಟಮದಲ್ಲಿ ಗುರು ಮತ್ತು ಬುಧ ಇವರಲ್ಲಿ ಒಬ್ಬರೂ ಒಳ್ಳೆಯ ಮನೆಯಲ್ಲಿ ಸಂಚಾರ ಮಾಡುತ್ತಿಲ್ಲ. ದೇವರ,ದೈವಗಳ ಕೆಲಸ ಮಾಡುತ್ತಿರುವವರು ,ಧಾರ್ಮಿಕ ಹಿನ್ನೆಲೆ ಇರುವವರಿಗೆ ತೊಂದರೆ ಇರುವುದಿಲ್ಲ .


ತುಲಾ : ಸಪ್ತಮದಲ್ಲಿ ಪ್ರಸ್ತುತ ಗುರು ಮತ್ತು ಬುಧ ಸಂಚಾರ ಮಾಡುತ್ತಿದ್ದಾರೆ . ನೀವು ಈಗದಿಂದಲೇ ಮೃತ್ಯುಂಜಯ ಜಪವನ್ನು ಮಾಡಲು ಆರಂಭಿಸಬೇಕು . ಯಾಕೆಂದರೆ ನಿಮಗೆ ಮೇ ಒಂದರಿಂದ ಗುರು ಅಷ್ಟಮಕ್ಕೆ ಬರುತ್ತಿದ್ದಾನೆ . ವ್ಯಯದಲ್ಲಿ ಕೇತು ನಷ್ಟವನ್ನು ಸೂಚಿಸುತ್ತಿದ್ದಾನೆ. ಆದರೆ ರವಿ ಮತ್ತು ರಾಹು 6 ನೆ ಮನೆಯಲ್ಲಿದ್ದು ಆದಾಯವನ್ನು ಸೂಚಿಸುತ್ತಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ .ಪ್ರತಿಯೊಬ್ಬರ ಸಹಕಾರ ನಿಮಗೆ ಸಿಗಲಿದೆ . ಪಂಚಮದಲ್ಲಿ ಕುಜ ಶುಕ್ರ ಶನಿ ಇರುವುದು ನಿಮ್ಮ ಮಕ್ಕಳ ಬಗ್ಗೆ ಕಲಹ ಬರದಂತೆ ಎಚ್ಚರವಹಿಸುವುದು ಒಳ್ಳೆಯದು .ಸಂತಾನದ ಸಮಸ್ಯೆ ಇರುವವರು ವೈದ್ಯರನ್ನು ಭೇಟಿಯಾಗಿರಿ . ವಿದ್ಯಾರ್ಥಿಗಳು ಓದುವ ಕಡೆಗೆ ಹೆಚ್ಚಿನ ಗಮನ ಕೊಡಿರಿ .


ವೃಶ್ಚಿಕ :ಶೀಘ್ರದಲ್ಲಿ ಉತ್ತಮ ಭವಿಷ್ಯವನ್ನು ಕಾಣಲಿರುವ ನೀವು ಸ್ವಲ್ಪ ಸಮಯ ಮೇ ಒಂದರ ವರೆಗೆ ತಾಳ್ಮೆಯಿಂದ ಇರಬೇಕಾಗಿದೆ . ವಿಷ್ಣು ಸಹಸ್ರನಾಮದೊಂದಿಗೆ ದಿನದ ಆರಂಭವನ್ನು ಮಾಡಬೇಕಾಗಿದೆ . ಸುಖ ಸ್ಥಾನದಲ್ಲಿಇರುವ ಕುಜ,ಬುಧ,ಶನಿ — ಜಗಳವನ್ನು ಮಾಡಲು ಕಾಯುತ್ತಿರುವ ಹೆಂಡತಿ ,ಸಹೋದರ ,ಬಂಧುಗಳು,ಮಿತ್ರರು ,ಹಿರಿಯರು ಇವರ ಎದುರಿಗೆ ನಾವು ತಪ್ಪು ಮಾಡದಿದ್ದರೂ ಕ್ಷಮೆ ಕೇಳಬೇಕಾಗಿದೆ . ಮಕ್ಕಳೂ ತಮ್ಮ ಜಗಳದ ಕೊಡುಗೆಯನ್ನು ಕೊಡಲು ಕಾಯುತ್ತಿದ್ದಾರೆ ,ಸಂತಾನದ ನಿರೀಕ್ಷೆಯಲ್ಲಿ ಇರುವವರು ವೈದ್ಯರ ಸಲಹೆ ಕೇಳಲು ಮರೆಯ ಬೇಡಿರಿ . ಒತ್ತಡದ ಬದುಕಿನಿಂದಾಗಿ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಭೀರಲಿದೆ.


ಧನು : ಪಂಚಮದಲ್ಲಿ ಬುಧ ಮತ್ತು ಗುರು ಇದ್ದು ಉತ್ತಮ ದೈವ ಬಲವನ್ನು ನೀಡುತ್ತಿದ್ದಾರೆ . ರವಿ ಬುಧ ಸುಖ ಸ್ಥಾನದಲ್ಲಿ ಇರುವುದರಿಂದ ನಿಮ್ಮ ತಾಯಿಯವರ ಆರೋಗ್ಯದ ಬಗ್ಗೆ ದಿನಕ್ಕೊಮ್ಮೆಯಾದರೂ ವಿಚಾರಿಸುವುದು ಅಗತ್ಯವಿದೆ ,.ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆಯೂ ಗಮನ ಅಗತ್ಯ. ಉದ್ಯೋಗದ ಅನ್ವೇಷಣೆಯಲ್ಲಿ ತೊಡಗಿರುವವರು ಈಶ್ವರ ದೇವರ ಪ್ರಾರ್ಥನೆಯೊಂದಿಗೆ ಮುನ್ನೆಡಿಯಿರಿ. ರಾತ್ರಿ ಸಂಚಾರ ಕಡಿಮೆಗೊಳಿಸಿರಿ . ವಾಹನ ಸಂಚಾರದಲ್ಲಿ ಜಾಗ್ರತೆ ವಹಿಸಿರಿ .ಮನಸ್ಸಿಗೆ ಒತ್ತಡ ಬರದಂತೆ ಎಚ್ಚರ ವಹಿಸಿರಿ .ಮನೆಕಟ್ಟುವ ,ವಾಹನ ತೆಗೆದುಕೊಳ್ಳುವ ,ಭೂಮಿ ಖರೀಧಿ ಮಾಡುವ ನಿಮ್ಮ ಕನಸು ಕನಸಾಗಿಯೇ ಉಳಿಯಲಿದೆ .ಅದು ಸಫಲವಾಗಲು ನಾಗ ದೇವರನ್ನು ಪ್ರಾರ್ಥನೆ ಮಾಡಿರಿ .

ಮಕರ: ಮೇ ಒಂದರ ವರೆಗೆ ಕಾಯುವುದು ಅನಿವಾರ್ಯವಾಗಿದೆ . ಪ್ರಸ್ತುತ ದ್ವಿತೀಯಾದಲ್ಲಿ ಕುಜ ,ಶುಕ್ರ ಶನಿ ಇರುವಾಗ ಮೌನಾಚರಣೆಗೆ ಮಹತ್ವವಿದೆ .ಎಲ್ಲಿಯೂ ಅಗತ್ಯವಿಲ್ಲದೆ ಮೂಗು ತೂರಿಸಲು ಹೋಗಬೇಡಿರಿ . ಒಂದು ಸಣ್ಣ ಕಿಡಿ ಮಹಾ ಜ್ವಾಲೆಯಾದೀತು ಎಚ್ಚರವಿರಲಿ . ಪಿತ್ರಾರ್ಜಿತ ಆಸ್ತಿಯ ಬಗ್ಗೆ ಕಲಹ ಪ್ರಸ್ತುತ ಬೇಡ . ವಕೀಲರಿಗೆ ದುಡ್ಡು ತಿನ್ನಿಸುವ ಕೆಲಸವಾದೀತು ಎಚ್ಚರವಿರಲಿ . ನಿಮ್ಮ ಮಾತಿನಲ್ಲಿರುವ ನಿಷ್ಟುರತೆ ಕುಟುಂಬದ ವಾತಾವರಣವನ್ನು ಹಾಳು ಮಾಡೀತು ಎಚ್ಚರವಿರಲಿ . ಸಹೋದರ ವರ್ಗದವರಿಗೆ ಆರೋಗ್ಯದ ಸಮಸ್ಯೆ ಬರುವ ಸಾಧ್ಯತೆ .ನಿಮ್ಮ ಸಹಾಯ ಬೇಕಾದೀತು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .


ಕುಂಭ :ನಿಮಗೆ ಉತ್ತಮವಾದ ನಿತ್ಯಾಹ್ನಿಕ ಪಾರಾಯಣದ ಅವಶ್ಯಕತೆ ಇದೆ .ಯಾಕೆಂದರೆ ಯಾವುದೇ ನವಗ್ರಹರ ಸಹಕಾರ ಇಲ್ಲದಿರುವ ಹೊತ್ತಿಗೆ ಶುಕ್ರನ[ಬಾಧಕಾಧಿಪತಿಯ] ಅಂದರೆ ದೇವಿಯ ಪ್ರಾರ್ಥನೆ ಪಾರಾಯಣ ನಿಮಗೆ ಅಗತ್ಯವಿದೆ . [ಸರ್ವ ಭಾಧಾ ……..]ಶುದ್ಧಾಹಾರ ಪದ್ಧತಿಯ ಅಗತ್ಯವಿದೆ .ಮದ್ಯ ಸೇವನೆ ಬಿಡ ಬೇಕಾಗುತ್ತದೆ .ರವಿ ರಾಹು ದ್ವಿತೀಯಾದಲ್ಲಿ ಇದ್ದು ಸಂಗಾತಿಯೊಂದಿಗೆ ಕಲಹ ಬರದಂತೆ ಎಚ್ಚರವಹಿಸಬೇಕಾಗಿದೆ . ಸಹೋದರನೊಂದಿಗೆ ಹೊಂದಾಣಿಕೆಯ ಕೊರತೆ ಕಂಡು ಬರಲಿದೆ . ನಿತ್ಯ ಸ್ನಾನ ಮಾಡುವಾಗ ನೀರಿಗೆ ಸ್ವಲ್ಪಕಲ್ಲು ಉಪ್ಪು, ಅರಶಿನ ಹುಡಿ ಸೇರಿಸಿ ಸ್ನಾನ ಮಾಡುವುದರಿಂದ ನಿಮ್ಮ ಮೇಲಿರುವ ಕಣ್ಣ ದೃಷ್ಟಿ ದೂರವಾಗಲಿದೆ .


ಮೀನ : ದ್ವಿತೀಯಾದಲ್ಲಿ ಗುರು ಮತ್ತು ಬುಧ ಇರುವುದರಿಂದ ಮೇ ಒಂದರ ವರೆಗೆ ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ನಿಮ್ಮ ಮಾತಿಗೆ ಮಾನ್ಯತೆ ಇರುತ್ತದೆ ಸಮಾಜದಲ್ಲಿ ಗೌರವ ಮಾನ ಸನ್ಮಾನ ಸಿಗಲಿದೆ . ವ್ಯಯದಲ್ಲಿ ಇರುವ ಕುಜ,ಶುಕ್ರ,ಶನಿ ,ಜನ್ಮ ರಾಶಿಯಲ್ಲಿ ಇರುವ ರವಿ ಮತ್ತು ರಾಹು ಸಪ್ತಮದಲ್ಲಿ ಇರುವ ಕೇತು ಎಲ್ಲರೂ ನಿಮಗೆ ನೆಗೆಟಿವ್ ಯೋಚನೆಯನ್ನು ಮೂಡಿಸುವವರು ಆಗಿರುತ್ತಾರೆ,ವೈರಾಗ್ಯ ಭಾವನೆಯನ್ನು ಮೂಡಿಸುತ್ತಾರೆ “ನನಗೇನೂ ಬೇಡ ,ನನಗೆ ಯಾರೂ ಇಲ್ಲ “ ನಿಮ್ಮ ದುರ್ಗಾ ಸಪ್ತ ಶತೀ ಪಾರಾಯಣ ಮುಂದುವರಿಸಿರಿ . ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಿದೆ .ಸಾಲ ಮಾಡುವುದು ,ಕೊಡುವುದು ,ಜಾಮೀನು ನಿಲ್ಲುವುದು ಬೇಡವೇ ಬೇಡ .


ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನುಮಾಡಿ ಕೊಡಲಾಗುವುದು .ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು . ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಾಸ್ತು ಸಲಹೆ/ವಿವಾಹ ಹೊಂದಾಣಿಕೆಯನ್ನು ಮಾಡಿ ತಿಳಿಸಲಾಗುವುದು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top