ವಾರಭವಿಷ್ಯ 22.09.2024 ನಿಂದ 28.09.2024 ವರೆಗೆ -ಕೆ. ಸುಬ್ರಹ್ಮಣ್ಯ ಆಚಾರ್ಯ

Picture of RB NEWS

RB NEWS

Bureau Report

ಮೇಷ : ಉತ್ತಮ ದೈವಾನುಗ್ರಹವಿರುವ ಸಮಯವಾಗಿದೆ .ಬರುವ ಆದಾಯದಲ್ಲಿಯೂ ಯಾವುದೇ ಕೊರತೆ ಇರುವುದಿಲ್ಲ.ಸಹೋದರ ವರ್ಗದವರಲ್ಲಿ ಕಲಹ ಬರದಂತೆ ಎಚ್ಚರವಹಿಸಿರಿ ಹೊಸ ಹೊಸ ಅವಕಾಶಗಳು ಒದಗಿ ಬರಲಿದೆ ಬಂಧು ಬಾಂಧವರು ಸೇರುವ, ಶುಭ ಸಮಾರಂಭಗಳು ನಡೆಯುವ ಸಮಯವಾಗಿದೆ .ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ವಿಶ್ವಾಸವಿರಲಿ ಜಿಗುಟು ವರ್ತನೆಯಿಂದ ಹೊರಗೆ ಬನ್ನಿರಿ ವೈದ್ಯಕೀಯ ವೃತ್ತಿಯವರಿಗೆ ಜನಾಪವಾದದ ಭೀತಿ ಬರಲಿದೆ .ವಾಯು ಪೀಡೆ ನಿಮ್ಮನ್ನು ಕಾಡಲಿದೆ ವ್ಯರ್ಥ ಖರ್ಚು ನಿಮ್ಮನ್ನು ಕಾಡಲಿದೆ .ಸತಿ- ಪತಿ ಹೊಂದಾಣಿಕೆಯಿಂದ ಮುನ್ನಡೆಯಿರಿ. ಅವಿಭಜಿತ ಕುಟುಂಬದಲ್ಲಿ ಪರಸ್ಪರ ಕಲಹ ಉಂಟಾಗಲಿದೆ .ಋಣಾತ್ಮಕ ಚಿಂತನೆ ನಿಮ್ಮನ್ನು ಕಾಡಲಿದೆ. ವಿಷ್ಣು ಸಹಸ್ರನಾಮ ಪಾರಾಯಣ ಇನ್ನು ಒಂಬತ್ತು ವರ್ಷಗಳ ಕಾಲ [ಬರುತ್ತಿರುವ ಏಳೂವರೆ ಶನಿ ದೋಷ } ಮಾಡುವುದು ಅತೀ ಅಗತ್ಯವಿದೆ.

ವೃಷಭ : ಪ್ರಸ್ತುತ ನಡೆಯುತ್ತಿರುವ ನವಗ್ರಹರ ಚಲನೆಯನ್ನು ಗಮನಿಸಿದಾಗ ಸಂಸಾರವೆನ್ನುವುದು ಸಸಾರವಾಗುವಂತೆ ಭಾಸವಾಗಲಿದೆ ಮಕ್ಕಳ ವಿಷಯದಲ್ಲಿ ಗೊಂದಲ ಬರಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯಲಿದೆ .ಆರ್ಥಿಕ ಒತ್ತಡಗಳು ನಿಮಗೆ ನಿಭಾಯಿಸಿಕೊಳ್ಳುವ ಮಟ್ಟಿನಲ್ಲಿ ಸಾಗುತ್ತಿರುತ್ತವೆ. ಶುಕ್ರ ಆರೋಗ್ಯ ಸಮಸ್ಯೆಗಳನ್ನು ತಂದರೆ ನಿಮ್ಮ ಮಾತಿನ ಚಾಕಚಕ್ಯತೆಯನ್ನು ಬೆಳಕಿಗೆ ತರುವವನು ಕುಜನಾಗಿದ್ದಾನೆ ನೀವು ಆಶಾವಾದಿಗಳಾಗಬೇಕು ಯಶಸ್ಸು ಕಟ್ಟಿಟ್ಟ ಬುಟ್ಟಿಯಾಗಿದೆ . ಆದಾಯಕ್ಕೆ ಯಾವುದೇ ಕೊರತೆ ಇಲ್ಲದಿದ್ದರೂ ಖರ್ಚಿನ ಪ್ರಮಾಣವೂ ಹೆಚ್ಚಾಗಲಿದೆ ರಾಜಕೀಯ ವ್ಯಕ್ತಿಗಳಿಗೆ ಪರಿವರ್ತನೆಯ ಕಾಲವಿದು .ನಿಮ್ಮ ಜೊತೆಗಾರರಲ್ಲಿ ಬಿರುಕು ಬರುವ ಸಾಧ್ಯತೆ ಇದೆ.

ಮಿಥುನ : ದೈವಾನುಗ್ರಹದ ಕೊರತೆ ಉಂಟಾಗಲಿದೆ .ಜನ್ಮ ರಾಶಿಯಲ್ಲಿ ಕುಜನಿದ್ದಾನೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ ಅಮ್ಮನವರ ಬಗ್ಗೆ ಗಮನವಿರಲಿ ದೇವಿಯ ಅನುಗ್ರಹ ನಿಮಗಿದೆ .ಹಿತ ಶತ್ರುಗಳು ನಿಮ್ಮ ಜೊತೆಯಲ್ಲಿ ಇದ್ದುಕೊಂಡೆ ತಮ್ಮ ಕಾರ್ಯ ಸಾಧನೆಯನ್ನು ಮಾಡುತ್ತಾರೆ.ವೈವಾಹಿಕ ಸಂಬಂಧಗಳು ನಿಂತು ಹೋಗುವ ಸಾಧ್ಯತೆ ಇದೆ ..ನೂತನ ವೃತ್ತಿ ಲಾಭಕ್ಕೂ ವಿಳಂಬವಾಗಲಿದೆ .ನಿರುದ್ಯೋಗಿಗಳಿಗೆ ನೂತನ ಉದ್ಯೋಗ ಪ್ರಾಪ್ತಿ ಯೋಗವಿದೆ “ಪಾಲಿಗೆ ಬಂದದ್ದು ಪಂಚಾಮೃತ “ ಇದು ನಿಮ್ಮ ಮನಸ್ಸಿನಲ್ಲಿರಬೇಕು ನಿಮ್ಮ ಸಂಗಾತಿಯ ಸಿಟ್ಟು ನಿಮ್ಮ ಮನಸ್ಸನ್ನು ಹಾಳು ಮಾಡಲಿದೆ ವಿಷ್ಣುಸಹಸ್ರನಾಮ ಪಾರಾಯಣ ನಿಮಗೆ ಅಗತ್ಯವಾಗಿದೆ.

ಕರ್ಕಾಟಕ : ಅಷ್ಟಮದ ಶನಿಯ ಪ್ರಭಾವ ನಿಮ್ಮ ಮೇಲೆ ಮುಂದುವರಿಯುತ್ತಿದೆ ಅದಕ್ಕಿರುವ ಒಂದೇ ಪರಿಹಾರ ವಿಷ್ಣು ಸಹಸ್ರನಾಮ ಪಾರಾಯಣ ಆಗಿರುತ್ತದೆ .ಮನೆ ವಾಹನ ಭೂಮಿ ಖರೀಧಿ ಯೋಗ ಕೂಡಿ ಬಂದಿದೆ. ದೇವಿಯ ಪ್ರಾರ್ಥನೆಯನ್ನು ಮಾಡಿಕೊಂಡು ಮುಂದುವರಿಯುವುದು ಬಹು ದಿನಗಳ ಬಳಿಕ ನ್ಯಾಯಾಲಯದ ಕೆಲವು ಪ್ರಕರಣಗಳು ಇತ್ಯರ್ಥಗೊಳ್ಳುವ ಹಂತಕ್ಕೆ ಬರಲಿವೆ. ಸರಕಾರಿ ಕೆಲಸ ಕಾರ್ಯಗಳು ಅತೀ ಸುಲಭವಾಗಿ ನಡೆಯಲಿವೆ ರಾಜಕೀಯದಲ್ಲಿ ಇರುವವರಿಗೆ ಉನ್ನತ ಸ್ಥಾನ ಮಾನಗಳು ಲಭಿಸಲಿವೆ ಎಷ್ಟೇ ವ್ಯರ್ಥ ಖರ್ಚು ವೆಚ್ಚಗಳಿದ್ದರೂ ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ. ನಿಮ್ಮ ವೃತ್ತಿರಂಗದಲ್ಲಿ ಅಂತ: ಕಲಹ,ಹಿತ ಶತ್ರು ಭಾಧೆ, ಅನುಭವಕ್ಕೆ ಬರಲಿದೆ ತಾಳ್ಮೆ ಇರಲಿ.

ಸಿಂಹ : ವಿವಾಹಕ್ಕೆ ಅನುಕೂಲಕರ ಸಮಯವಲ್ಲ ಅಧಿಕಾರಿ ವರ್ಗದವರಿಗೆ ಉದ್ಯೋಗದಲ್ಲಿ ಕಿರಿಕಿರಿ ಇದ್ದರೂ ಭಡ್ತಿಯೋಗವಿದೆ ಹಣವನ್ನುತೊಡಗಿಸುವಾಗ ಆ ಸಂಸ್ಥೆಯ ಪೂರ್ವಾಪರ ಚರಿತ್ರೆ ತಿಳಿದಿರಬೇಕು ನವ ದಂಪತಿಗಳಿಗೆ ಸಂತಾನ ಲಾಭ ಕೂಡಿ ಬರಲಿದೆ ನೀವು ಮಾಡ ಬೇಕೆಂದಿರುವ ಕೆಲಸಕ್ಕೆ ಕಾನೂನು ತೊಡಕು ಬರಲಿದೆ . ವ್ಯಯಹಾರಗಳು ಉತ್ತಮವಿದ್ದರೂ ಕೆಲವೊಮ್ಮೆ ಅದು ನಿಂತು ಹೋಗುವ ಭಯ ಉಂಟಾಗಲಿದೆ. ಕುಜ ಲಾಭ ಕ್ಷೇತ್ರದಲ್ಲಿ ಇರುವುದರಿಂದ ಭೂ ವ್ಯವಹಾರದಲ್ಲಿ ಇರುವವರಿಗೆ ಒಳ್ಳೆಯ ಕಾಲವಾಗಿದೆ. ವಿದ್ಯಾರ್ಥಿಗಳು ಪ್ರಯತ್ನಿಸಿದಲ್ಲಿ ಉನ್ನತ ವಿದ್ಯಾಭ್ಯಾಸದ ಕನಸು ನನಸಾಗಲಿದೆ ಮಾತಿನಿಂದಲೇ ವ್ಯರ್ಥ ಕಲಹಗಳು ಬರದಂತೆ ಎಚ್ಚರವಹಿಸಿರಿ.

ಕನ್ಯಾ : ಉತ್ತಮ ದೈವಾನುಗ್ರಹವಿರುವುದರಿಂದ ನೀವು ಮಾಡಬೇಕೆಂದಿರುವ ಕೆಲಸಗಳು ಯಶಸ್ವಿಯಾಗಿ ನೆರವೇರಲಿವೆ .ಜನ್ಮರಾಶಿಯಲ್ಲಿ ರವಿ,ಕೇತು, ಬುಧ ಇರುವುದರಿಂದ ರಾಹುವಿನ ದೃಷ್ಟಿ ಇರುವುದರಿಂದ ಪ್ರೀತಿ ಮತ್ತು ನಂಬಿಕೆಗೆ ದ್ರೋಹವಾಗುವಂತಹ ಸಂದರ್ಭಗಳು ಎದುರಾಗಲಿವೆ. ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ ಮತ್ತು ಕಠಿಣ ಪರಿಶ್ರಮ .ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆ ಇರುತ್ತದೆ ಆಹಾರದ ಬಗ್ಗೆ ಎಚ್ಚರ ಬೇಕು ಹಿರಿಯರೊಡನೆ ಅನಾವಶ್ಯಕವಾದ ವಿವಾದಗಳು ಬೇಡ ಧರ್ಮ ಕಾರ್ಯಗಳನ್ನು ಮಾಡುವಿರಿ .ಶುಭ ಕೆಲಸಗಳು ವಿವಾಹ ಆಗುವವರಿಗೆ ಶುಭ ಸಮಯವಾಗಿದೆ . ನಾಗ ದೇವರ ‌ ‌ಪಾರ್ಥನ ಅಗತ್ಯವಾಗಿದೆ .

ತುಲಾ : ಶುಕ್ರ ಜನ್ಮ ರಾಶಿಯಲ್ಲಿ ಇರುವುದರಿಂದ ಅವನು ಅಷ್ಟಮಾಧಿಪತಿ ಆಗಿರುವುದರಿಂದ ಗುರು ಅಷ್ಟಮದಲ್ಲಿ ಇರುವುದರಿಂದ ದೈವಾನುಗ್ರಹದ ಕೊರತೆ ಇರುವುದರಿಂದ ದೇಹಾರೋಗ್ಯದ ಬಗ್ಗೆ ಎಚ್ಚರವಿರಲಿ. ನಿತ್ಯವೂ ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಿದೆ ಪತಿ-ಪತ್ನಿಯ ನಡುವೆ “ನಾನು” ಅಹಂ * ಇರಬಾರದು ಕುಜ ಭಾಗ್ಯದಲ್ಲಿ ಇರುವಾಗ ಭಾಗ್ಯಾಧಿಪತಿ ಬುಧ ವ್ಯಯದಲ್ಲಿ ಇರುವಾಗ ಹಿರಿಯರನ್ನು ಕಡೆಗಣಿಸುವುದು ಸರಿಯಲ್ಲ ಹೆಂಡತಿಯ ಕಡೆಯ ಪಿತ್ರಾರ್ಜಿತ ಆಸ್ತಿ ಬರುವ ಸಾಧ್ಯತೆ ಇದೆ ನೀವು ತೆಗೆದು ಕೊಳ್ಳಲು ತಯಾರಿರುವುದಿಲ್ಲ. ಲಕ್ಷ್ಮೀ ಅಷ್ಟೋತ್ತರ ಪಾರಾಯಣ ಮಾಡಿರಿ.

ವೃಶ್ಚಿಕ : ಉತ್ತಮ ದೈವಾನುಗ್ರಹ ಇರುವುದರಿಂದ ಹಲವಾರು ಸಮಸ್ಯೆಗಳು ತಾವಾಗಿಯೇ ಪರಿಹಾರವಾಗಲಿದೆ ಮುಖ್ಯವಾಗಿ ಶುಕ್ರನಿಗೆ ಶನಿಗೆ, ಕುಜನಿಗೆ ಪರಿಹಾರ ಅಗತ್ಯವಾಗಿದೆ ಪಂಚಮದಲ್ಲಿ ಇರುವ ರಾಹುವಿಗೂ ಪ್ರಾರ್ಥನೆ ಅಗತ್ಯವಿದೆ ಅಕ್ಟೋಬರ್ 20 ರವರೆಗೆ ಎಚ್ಚರವಿರಬೇಕು ಸಿಟ್ಟು ಉದ್ವೇಗದಿಂದ ದೂರವಿರಬೇಕು .ಬಿಪಿ ಷುಗರ್ ಬಗ್ಗೆ ಎಚ್ಚರವಿರಲಿ ನೀರು ತುಂಬಾ ಕುಡಿಯುವುದು ಅಗತ್ಯವಾಗಿದೆ ರಾಜಕೀಯ ವ್ಯಕ್ತಿಗಳಿಗೆ ರಾಜ ಯೋಗವಿರುವ ಸಮಯವಾಗಿದೆ .ಮಾತಿನಲ್ಲಿ ಹಿಡಿತವಿರಲಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಅಗತ್ಯವಿದೆ. ಹಿತ ಶತ್ರುಗಳಿಂದ ದೂರವಿರುವುದು ಒಳ್ಳೆಯದು .ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ.

ಧನು : ದೈವಾನುಗ್ರಹದ ಕೊರತೆ ಇದೆ .ರಾಶ್ಯಾಧಿಪತಿ ಗುರು ಸುಖಾಧಿಪತಿಯಾಗಿ 6 ನೇ ಮನೆಯಲ್ಲಿ ಇರುವುದು ಶತ್ರುಗಳ ಇರುವಿಕೆಯ ಸೂಚನೆ ಹಾಗೆಯೇ ಆರೋಗ್ಯದ ಸಮಸ್ಯೆ ಬರುವ ಸೂಚನೆಯನ್ನು ತಿಳಿಸುತ್ತಿದೆ ಹಾಗೆಯೇ ಸುಖ ಸ್ಥಾನದಲ್ಲಿ ರಾಹು ಇರುವುದು ದೈಹಿಕ ಸುಖದ ಕೊರತೆಯನ್ನು ಸೂಚಿಸುತ್ತಿದೆ .ಸಪ್ತಮದಲ್ಲಿ ಕುಜ ಇರುವುದರಿಂದ ದಾಂಪತ್ಯದಲ್ಲಿ ಕಿರಿಕಿರಿ ಇರುವ ಸೂಚನೆ ಇದೆ .ಆಕಸ್ಮಿಕ ಧನ ಹಾನಿ, ವೃಥಾ ಅಪವಾದ ಬರುವ ಸೂಚನೆ ಇದೆ. ನಿಮ್ಮ ಹಿತ ಚಿಂತಕರ ಸಲಹೆ ಕೇಳುವುದು ಒಳ್ಳೆಯದು ವಿವಾಹದ ನಿರೀಕ್ಷೆಯಲ್ಲಿ ಇರುವವರು ಮೇ 16,2025 ರ ವರೆಗೆ ಕಾಯುವುದು ಒಳ್ಳೆಯದು ಹಿರಿಯರ ಆರೋಗ್ಯದ ಕಡೆಗೆ ಗಮನ ಇರಲಿ ಈಶ್ವರ ದೇವರ ಸಹಸ್ರನಾಮ ಪಾರಾಯಣ ಮಾಡುವುದು ಒಳ್ಳೆಯದು.

ಮಕರ : ಆತ್ಮ ವಿಶ್ವಾಸ, ನಿಮ್ಮ ಪ್ರಯತ್ನ ಬಲದಿಂದ ಎಲ್ಲಾ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಬಹುದು ಗುರುವಿನ ಅನುಗ್ರಹ ಇರುವ ನಿಮಗೆ ಶುಭ ಫಲವೇ ಪ್ರಾಪ್ತಿಯಾಗಲಿದೆ ವೃತ್ತಿರಂಗದಲ್ಲಿ ಅಧಿಕಾರಕ್ಕೆ ಕೊರತೆ ಕಾಣಬಹುದು ದೇಹದ ಪಾರ್ಶ್ವ ಭಾಗದಲ್ಲಿ ಉದರದಲ್ಲಿ ಕೆಲವೊಂದು ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ .ಜಾಗ್ರತೆ ವಹಿಸ ಬೇಕು ಜೀವನದಲ್ಲಿ ಧನ ಆದಾಯವೂ ವಿಶೇಷವಾಗಿ ವೃದ್ಧಿಯಾಗುತ್ತಲೇ ಹೋಗುತ್ತದೆ ಸಾಡೇ ಸಾತ್ ಶನಿಯ ಸಮಸ್ಯೆ ಇರುವುದರಿಂದ ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲೇ ಬೇಕು ಹಿಡಿದ ಕೆಲಸ ಮುಗಿಸುತ್ತೀರಿ .ರಾಹು ಮತ್ತು ಕುಜ ನಿಮಗೆ ಸಂಪತ್ತನ್ನು ಒದಗಿಸುವವರಾಗಿದ್ದಾರೆ .ರವಿ,ಕೇತು ಬುಧ ನಿಮಗೆ ಹಿರಿಯರಲ್ಲಿ ಕಲಹವನ್ನು ತರುವವನು ಆಗಿರುವುದರಿಂದ ಎಚ್ಚರವಹಿಸಿರಿ, ಅವರ ಆರೋಗ್ಯದ ಕಡೆಗೆ ಗಮನ ಹರಿಸಿರಿ.

ಕುಂಭ : ಜನ್ಮ ರಾಶಿಯಲ್ಲಿ ಶನಿ,ಅಷ್ಟಮದಲ್ಲಿ ರವಿ, ಕೇತು,ಬುಧ ಇರುವ ಈ ಸಮಯದಲ್ಲಿ ಆರೋಗ್ಯ ದೃಷ್ಟಿಯಿಂದ ಪತಿ-ಪತ್ನಿ ಎಚ್ಚರದಿಂದ ಇರುವುದು ಉತ್ತಮ ದ್ವಿತೀಯಾದಲ್ಲಿ ರಾಹು ಪಂಚಮದಲ್ಲಿ ಕುಜ ಇರುವಾಗ ನಾಗ ದೇವರ ಸೇವೆಯಿಂದ ಮಕ್ಕಳ ಹಟ ಕಡಿಮೆಯಾಗಿ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆಯನ್ನು ತೋರಿಸಲಿದ್ದಾರೆ .ಶುಕ್ರ ಭಾಗ್ಯದಲ್ಲಿ ಇರುವುದರಿಂದ ನಿಮ್ಮನ್ನು ಎದುರು ಹಾಕಿಕೊಳ್ಳಲು ಯಾರು ಕೂಡಾ ಇಷ್ಟ ಪಡುವುದಿಲ್ಲ. ದೇವತಾ ಅನುಗ್ರಹ ಪ್ರಸ್ತುತ ನಿಮಗೆ ಇರುವುದರಿಂದ ಸರ್ವ ವಿಧದ ಅಭಿವೃದ್ಧಿ ನಿಮ್ಮ ಮುನ್ನೆಡೆಗೆ ಪೂರಕವಾಗಲಿದೆ .ಅವಿವಾಹಿತರಿಗೆ ನೆಂಟಸ್ತಿಕೆ ಹುಡುಕಿಕೊಂಡು ಬರಲಿದೆ .ಮಾತು ಮತ್ತು ಹಣದ ಬಗ್ಗೆ ಹಿಡಿತ ನಿಮ್ಮಲ್ಲಿರಲಿ.

ಮೀನ : ಗುರು ತೃತೀಯಾದಲ್ಲಿ ಇರುವುದರಿಂದ ದೈವಾನುಗ್ರಹ ಕಡಿಮೆ ಇದೆ ರಾಹು ಜನ್ಮ ರಾಶಿಯಲ್ಲಿ ಇದ್ದು ಕುಜ ಸುಖ ಸ್ಥಾನದಲ್ಲಿ ಇರುವುದರಿಂದ ನಿಮ್ಮ ಮತ್ತು ನಿಮ್ಮ ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರವಾಗಿರಿ .ಸಪ್ತಮದಲ್ಲಿ ರವಿ ಕೇತು ಬುಧ ಇರುವುದರಿಂದ ಸತಿ ಪತಿಯರ ನಡುವೆ ಭಿನ್ನಾಭಿಪ್ರಾಯ ಬರದಂತೆ ಎಚ್ಚರವಹಿಸಿರಿ .ಜೊತೆಗೆ ಶುಕ್ರ ಅಷ್ಟಮದಲ್ಲಿ ಇರುವುದರಿಂದ ಬಿಪಿ ಷುಗ‌ರ್ ಇರುವವರು ಎಚ್ಚರ ವಹಿಸಬೇಕು ಹಿರಿಯರ ಪಿತ್ರಾರ್ಜಿತ ಆಸ್ತಿ ಒದಗಿ ಬರುವ ಸಾಧ್ಯತೆ ಇದೆ .ನೌಕರ ವರ್ಗದವರಿಗೆ ಮುಂಬಡ್ತಿಯ ಭಾಗ್ಯ ತಪ್ಪಿ ಹೋಗುವ ಸಾಧ್ಯತೆ ಇದೆ . ಆದಾಯದಲ್ಲಿ ಕುಬೇರನ ಕಣಜವೇ ನಿಮ್ಮದೆನಿಸಲಿದೆ .ಗಣಪತಿ ದೇವರ ಅಥರ್ವ ಶೀರ್ಷ ಪಾರಾಯಣ ಮಾಡುವ ಅಗತ್ಯವಿದೆ .

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top