ವಾರಭವಿಷ್ಯ 22.03.2026ರಿಂದ 28.03.2026ರ ತನಕ
ವಿಶೇಷ ದಿನಗಳು :25.03.2026 ಮೇಷ ರಾಶಿಗೆ ಶುಕ್ರನ ಪ್ರವೇಶ
ಮೇಷ :ವ್ಯಾಪಾರ ಉದ್ಯಮಗಳಲ್ಲಿ ನಿರೀಕ್ಷಿತ ಫಲ ಸಿಗದು. ಆರ್ಥಿಕವಾಗಿ ತುಸು ಚೇತರಿಕೆ ತಂದರೂ ಕಾರ್ಯ ಬಾಧೆ ಬಾಧಿಸಲಿದೆ. ವಾಯು ಬಾಧೆಯಿಂದ ಉದರ ಸಂಬಂಧಿತ ಅನಾರೋಗ್ಯವಿರುತ್ತದೆ. ಸಾಡೇ ಸಾತ್ ಶನಿಯ ಪ್ರಭಾವ ಮುಂದುವರಿದಿದೆ.
ವೃಷಭ : ಗುರುವಿನ ಅನುಗ್ರಹದಿಂದ ಸುಖ ಭಾಗ್ಯ ಗೋಚರಕ್ಕೆ ಬರಲಿದೆ. ಆಗಾಗ ಮಾನಸಿಕ ಗೊಂದಲಕ್ಕೆ ಒಳಗಾಗಿ ಅನೇಕ ಪ್ರಕ್ರಿಯೆಗಳಲ್ಲಿ ಸಮಸ್ಯೆಗಳು ತೋರಿಬರಲಿವೆ. ನೌಕರ ವರ್ಗಕ್ಕೆ ನಿರೀಕ್ಷಿತ ಭಡ್ತಿ ಸದ್ಯದಲ್ಲಿಯೇ ಸಿಗಲಿದೆ. ಶುಕ್ರ ವ್ಯಯಕ್ಕೆ ಬಂದಿರುವುದನ್ನು ಗಮನಿಸಿರಿ.
ಮಿಥುನ : ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದ ಲಾಭದ ಅವಕಾಶಗಳು ಒದಗಿ ಬರಲಿದೆ. ಸಂಚಾರವನ್ನು ಕಡಿಮೆಗೊಳಿಸುವುದು, ಒಳ್ಳೆಯದು. ಆರ್ಥಿಕವಾಗಿ ಸಮೃದ್ದರೆನಿಸಿದವರೂ ಹಣವೇ ಸರ್ವಸ್ವವಲ್ಲ ಎಂಬುವುದನ್ನು ತಿಳಿದುಕೊಳ್ಳಿರಿ. ದೇವಿ ಖಡ್ಗ ಮಾಲಾ ಸ್ತೋತ್ರವನ್ನು ಪಾರಾಯಣವನ್ನು ಮಾಡಿರಿ.
ಕರ್ಕಾಟಕ :ನಿಮ್ಮಲ್ಲಿ ಕೆಲವೊಂದು ಬದಲಾವಣೆಗಳನ್ನು ಕಾಣುವಿರಿ. ಆರ್ಥಿಕವಾಗಿಯೂ ಚೇತರಿಕೆ ಕಂಡು ಬರಲಿದೆ. ಹಿತ ಶತ್ರುಗಳ ಬಾಧೆ ನಿಮ್ಮ ಗಮನಕ್ಕೆ ಬರಲಿದೆ. ಜಾಗ್ರತೆಯಿಂದ ಮುನ್ನೆಡೆಯಿರಿ. ಆಗಾಗ ಬರುತ್ತಿರುವ ಮಳೆ ರೈತರಿಗೆ ಖುಷಿಯನ್ನು ನೀಡಲಿದೆ.
ಸಿಂಹ : ಬಹಳ ಉತ್ತಮವಾದ ಸಮಯ. ನಿಮ್ಮ ಎಣಿಕೆಯಂತೆ ಎಲ್ಲವೂ ಮುಂದುವರಿಯಲಿದೆ, ಕಂಕಣ ಭಾಗ್ಯದ ನಿರೀಕ್ಷೆಯಲ್ಲಿ ಇರುವವರಿಗೆ ಅನಿರೀಕ್ಷಿತವಾಗಿ ಸಮಾರಂಭ ನಡೆಯಲಿದೆ. ಆರೋಗ್ಯದ ಬಗ್ಗೆ ಎಚ್ಚರವಾಗಿರುವುದು ಅಗತ್ಯವಾಗಿದೆ. ರಾಜಕೀಯ ವರ್ಗದವರಿಗೆ ಅಪವಾದ ಬರಲಿದೆ.
ಕನ್ಯಾ :ಕರ್ಮ ಕ್ಷೇತ್ರದಲ್ಲಿ ಇರುವ ಗುರು ಆದಾಯದಲ್ಲಿ ತೃಪ್ತಿಯನ್ನು ತರಲಿದ್ದಾನೆ. ವ್ಯಾಪಾರ ವ್ಯವಹಾರ ತಕ್ಕಮಟ್ಟಿಗೆ ಒಳ್ಳೆಯ ರೀತಿಯಲ್ಲಿಯೇ ನಡೆಯಲಿದೆ. ದೇಹಾಯಾಸಕ್ಕೆ ತೊಂದರೆಯಾಗದಂತೆ ಎಚ್ಚರವಹಿಸಿರಿ. ಮನೆಯ ಹಿರಿಯರು ಜ್ವರ ಬಾಧೆಯಿಂದ ಕಷ್ಟ ಪಡಲಿದ್ದಾರೆ.
ತುಲಾ : ಗುರುವಿನ ಅನುಗ್ರಹವಿರುವುದರಿಂದ ಎಲ್ಲವೂ ಸುಖಕರವಾಗಿ ನಡೆಯಲಿದೆ. ಹೊಸ ವಾಹನ ಖರೀಧಿ ಭೂಮಿ ಖರೀದಿ ಮಾಡಲಿದ್ದೀರಿ. ವೈದ್ಯಕೀಯ ವೃತ್ತಿಯವರಿಗೆ ಉತ್ತಮ ಲಾಭ ಒದಗಿ ಬರಲಿದೆ. ನೂತನ ದಂಪತಿಗಳಿಗೆ ಸಂತಾನ ಲಾಭದ ಸೂಚನೆ ಇರುತ್ತದೆ.
ವೃಶ್ಚಿಕ: ಅನಾವಶ್ಯಕವಾಗಿ ನೆರೆಕರೆಯವರ ಜೊತೆಗೆ ಕಿರಿ ಕಿರಿ ಬರಲಿದೆ. ಅನಾರೋಗ್ಯದ ನಿಮಿತ್ತವಾಗಿ ವೈದ್ಯರನ್ನು ಕಾಣಲಿದ್ದೀರಿ. ಆರ್ಥಿಕವಾಗಿ ಧಾರಾಳಿಗಳಾದ ನಿಮಗೆ ಖರ್ಚು ಅಧಿಕವಾಗಿರುತ್ತದೆ. ವೃಥಾ ಆರೋಪ ಬರುತ್ತಲೇ ಇರುತ್ತದೆ. ಮಕ್ಕಳ ಸಿಟ್ಟು ಕಡಿಮೆಯಾಗುತ್ತಾ ಹೋಗಲಿದೆ.
ಧನು: ತಲೆ ತಿರುಗುವ ಸಮಸ್ಯೆ 60+ಆದವರಿಗೆ ಬರಲಿದೆ. ವೈದ್ಯರನ್ನು ಕಾಣುವುದು ಅಗತ್ಯವಾಗಿದೆ. ರವಿ ಮತ್ತು ಶನಿಯ ಪ್ರಭಾವವಾಗಿರುತ್ತದೆ. ಹಿರಿಯರೊಡನೆ ಬಂಧುಗಳ ಜೊತೆಗೆ ಎಚ್ಚರವಾಗಿರಿ, ಪಾಲುಗಾರಿಕೆ ವ್ಯಾಪಾರದಲ್ಲಿ ಮೋಸ ಹೋಗದಂತೆ ಎಚ್ಚರವಹಿಸಿರಿ.
ಮಕರ : ಕೌಟುಂಬಿಕವಾಗಿ ಶುಕ್ರ ಸುಖ ಭಾಗ್ಯವನ್ನು ಕರುಣಿಸಲಿದ್ದಾನೆ. ಆರ್ಥಿಕವಾಗಿಯೂ ಬಲವರ್ಧನೆಯಾಗಲಿದೆ. ವೃತ್ತಿರಂಗದಲ್ಲಿ ಮನದೆಣಿಕೆಯಂತೆ ಎಲ್ಲವೂ ನಡೆಯಲಿದೆ. ಗುರುವಿನ ಅನುಗ್ರಹಕ್ಕಾಗಿ ವಿಷ್ಣು ದೇವರ ಪ್ರಾರ್ಥನೆಯನ್ನು ಮಾಡಿರಿ.
ಕುಂಭ : ಶೈಕ್ಷಣಿಕ ವೃತ್ತಿಯವರಿಗೆ ಸ್ವಾಭಿಮಾನದ ಪ್ರಶ್ನೆಯಾಗಲಿದೆ. ನಿರಂತರ ಆರ್ಥಿಕ ಸಮಸ್ಯೆಗಳು ಸಾಡೇ ಸಾತ್ ಶನಿಯ ಪ್ರಭಾವದಿಂದ ಬರುತ್ತಲೇ ಇರುತ್ತದೆ. ಆಗಾಗ ಅನಾರೋಗ್ಯದ ಸಮಸ್ಯೆ ಬರಲಿದೆ. ಮಹಿಳೆಯರಿಗೆ ಮಾನಸಿಕ ಅಸ್ಥಿರತೆ ಉಂಟಾಗಲಿದೆ.
ಮೀನಾ :ಉದ್ಯೋಗಿಗಳಿಗೆ ವೃತ್ತಿ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇರುತ್ತದೆ. ಸಾಡೇ ಸಾತ್ ಶನಿಯ ದೋಷಕ್ಕೆ ಪರಿಹಾರ ಅಗತ್ಯವಿರುತ್ತದೆ. ಸಾಲ ತೀರಿದ ನೆಮ್ಮದಿ,ಹೊಸ ವಾಹನ ಕೊಳ್ಳುವ ಉತ್ಸುಕತೆ ಮನದಲ್ಲಿ ಮಾಡಿ ಬರಲಿದೆ.




































