ದಿನಾಂಕ 19.04.2026 ರಿಂದ 25.04.2026ರ ವರೆಗೆ
ವಿಶೇಷ ದಿನಗಳು :19.04.2026… ವೃಷಭ ರಾಶಿಗೆ ಶುಕ್ರನ ಪ್ರವೇಶ
ಮೇಷ :ವ್ಯಯದಲ್ಲಿರುವ ಕುಜ ಮತ್ತು ಶನಿ ಅತಿಯಾದ ಸಿಟ್ಟನ್ನು ತರುವುದರಿಂದ ನಿಮ್ಮ ಹೆಸರಿಗೆ ಕಳಂಕ ಬರಲಿದೆ. ಶುಕ್ರ ನಿಮ್ಮ ಆದಾಯವನ್ನು ಹೆಚ್ಚಿಸಲಿದ್ದಾನೆ. ಪತ್ನಿಯವರ ಕಡೆಯಿಂದ ಆರ್ಥಿಕ ಆದಾಯ ಹೆಚ್ಚಾಗಲಿದೆ. ಮಗುವಿನ ಆರೋಗ್ಯದ ಕಡೆಗೆ ಗಮನವಿರಲಿ.
ವೃಷಭ :ನಿಮ್ಮ ಆರ್ಥಿಕ ಲೆಕ್ಕಾಚಾರ ಅಡಿಮೇಲು ಆಗುವ ಸೂಚನೆಯನ್ನು ರವಿ, ಬುಧ ನೀಡುತ್ತಿದ್ದಾರೆ. ಆಭರಣ ಖರೀಧಿ ಮಾಡಲೇ ಬೇಕಾಗುತ್ತದೆ. ವಿದೇಶ ಯಾತ್ರೆಯ ಸೂಚನೆ ಸಿಗಲಿದೆ. ಬಂಧುಗಳ ಜೊತೆಗೆ ಒಡನಾಟವಿರಲಿ.
ಮಿಥುನ :ಸಹೋದರ ವರ್ಗದವರ ಸಹಾಯ ಸಿಗಲಿದೆ. ಮಕ್ಕಳ ಸಲಹೆ ಆಲಿಸಲೇ ಬೇಕಾಗಿದೆ. ನೂತನ ವಾಹನ ಭೂಮಿ ಖರೀಧಿ ಮಾಡುವ ಯೋಚನೆ ಮಾಡಲಿದ್ದೀರಿ ಉದ್ಯೋಗ ಕ್ಷೇತ್ರದಲ್ಲಿ ಸಫಲತೆಯನ್ನು ಕಾಣಲಿದ್ದೀರಿ. ಗರ್ಭಿಣಿ ಮಹಿಳೆಯರು ಎಚ್ಚರವಾಗಿರಿ.
ಕರ್ಕಾಟಕ : ವ್ಯಯದಲ್ಲಿರುವ ಗುರು,ಅಷ್ಟಮದಲ್ಲಿರುವ ರಾಹು ಅನೇಕ ರೀತಿಯಲ್ಲಿ ನಷ್ಟಗಳನ್ನು ಸೂಚಿಸುತ್ತಿದ್ದಾರೆ. ಮನೆ ಬದಲಾವಣೆ ಮಾಡುವ ಸೂಚನೆ ಇರುತ್ತದೆ. ಅಲರ್ಜಿ ಬರಲಿದೆ. ಮಾನಸಿಕ ಒತ್ತಡ ಇರಲಿದೆ. ಹಿರಿಯರಲ್ಲಿ ಕಲಹ ಮಾಡಲಿದ್ದೀರಿ.
ಸಿಂಹ :ನಿಮಗೆ ನೀವೇ ಶತ್ರು ಎಣಿಸಿಕೊಳ್ಳಲಿದ್ದೀರಿ. ಹಳೆಯ ತಪ್ಪುಗಳಿಂದ ಪಾಠ ಕಲಿತರೆ ಯಶಸ್ಸು ಸಿಗಲಿದೆ. ನಿಮ್ಮ ಹಠಮಾರಿತನ ಧೋರಣೆಯೇ ನಿಮಗೆ ಮುಳುವಾಗಲಿದೆ. ರಾಹು ಕುಜ ಶನಿ ನಿಮ್ಮ ಸಂಸಾರವನ್ನೂ ಸಸಾರ ಮಾಡಲಿದ್ದಾರೆ. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ.
ಕನ್ಯಾ : ಹೃದಯ,ಉಸಿರಾಟದ ಸಮಸ್ಯೆ ಬರುವ ಸಾಧ್ಯತೆಯನ್ನು ರವಿ ಬುಧ ತಿಳಿಸಲಿದ್ದಾರೆ. ದಾಂಪತ್ಯವನ್ನು ನಿಮ್ಮ ಹಿಡಿತದಲ್ಲಿ ಇರಿಸಿಕೊಳ್ಳಿರಿ. ಸಂಗಾತಿಯ ಆರೋಗ್ಯ ವ್ಯತ್ಯಾಸ,ಪತನ ಭಯವಿರುತ್ತದೆ. ಮೃತ್ಯುಂಜಯ ಜಪ ಪಾರಾಯಣ ಮಾಡಿರಿ.
ತುಲಾ : ಗುರು ಭಾಗ್ಯದಲ್ಲಿ ಇರುವುದರಿಂದ ಶುಭ ಕಾರ್ಯಕ್ರಮಗಳು ನಡೆಯಲಿವೆ. ಶುಕ್ರ ಮಹಿಳೆಯರಿಗೆ ಹಾರ್ಮೋನ್ಸ್ ಸಮಸ್ಯೆಯನ್ನು ತೋರಿಸಲಿದ್ದಾನೆ. ಕಂಕಣ ಬಲ ಕೂಡಿ ಬಂದಿದೆ. ನಿಮ್ಮ ಮನಸ್ಸಿಗೆ ಸರಿಹೊಂದುವ ಸಂಗಾತಿ ಒದಗಿ ಬರಲಿದ್ದಾರೆ. ಮಕ್ಕಳೊಂದಿಗೆ ಕಿರಿಕಿರಿ ಬರಲಿದೆ.
ವೃಶ್ಚಿಕ : ಎಷ್ಟೋ ಸಮಯದಿಂದ ಕಷ್ಟದಲ್ಲಿಯೇ ಕಾಲ ಕಳೆಯುತ್ತಿರುವ ನಿಮಗೆ ರವಿ ಬುಧ ನೆಮ್ಮದಿಯನ್ನು ನೀಡಲಿದ್ದಾರೆ. ಹೊಸ ವ್ಯವಹಾರಕ್ಕೆ ಕೈ ಹಾಕಲು ಇದು ಸಕಾಲವಲ್ಲ. ಆರೋಗ್ಯದ ಸಮಸ್ಯೆ ಕಂಡು ಬಂದರೆ ಉದಾಸೀನತೆ ಬೇಡ. ಸಂಗಾತಿಯೊಂದಿಗೆ ಹೊಂದಾಣಿಕೆ ಇರಲಿ.
ಧನು : ವಿದ್ಯಾರ್ಥಿಗಳು ವಾಹನ ಸಂಚಾರದಲ್ಲಿ ಜಾಗ್ರತೆವಹಿಸಬೇಕು. ಬೀಳುವ ಸಾಧ್ಯತೆಯನ್ನು ಕುಜ ಶನಿ ತಿಳಿಸುತ್ತಿದ್ದಾರೆ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಉತ್ತಮವಾದ ದೈವಾನುಗ್ರಹ ಇರಲಿದೆ. ತಾಯಿಯವರ ಆರೋಗ್ಯದ ಚಿಂತೆ ಕಾಡಲಿದೆ.
ಮಕರ : ನಿಮ್ಮ ಕ್ರಮ ಬದ್ಧವಾದ ಆಲೋಚನೆಗಳೇ ನಿಮ್ಮ ಆದಾಯವನ್ನು ಹೆಚ್ಚಿಸಲಿದೆ. ಮಾತಿನಲ್ಲಿ ಹೊಂದಾಣಿಕೆ ಇರಲಿ. ರಾಜಕೀಯ ನೇತಾರರಿಗೆ ಒಳ್ಳೆಯ ಸಮಯವಾಗಿದೆ. ಹೊಸ ಭೂಮಿ ವಾಹನ ಖರೀಧಿ ಮಾಡುವಿರಿ. ತಾಯಿಯವರ ಆಶೀರ್ವಾದ ದೊರೆಯಲಿದೆ.
ಕುಂಭ : ಕಾಲಚಕ್ರ ಉರುಳಿದಂತೆ ನಿಮ್ಮ ಆದಾಯ ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಿರಿ. ದೇವಾಲಯ ನಿರ್ಮಾಣ ನಿಮ ಉಸ್ತುವಾರಿಯಲ್ಲಿ ನಡೆಯುವ ಯೋಗವಿದೆ. ದಾಂಪತ್ಯ ಜೀವನದಲ್ಲಿ ಎಚ್ಚರವಿರಲಿ. ರಾಹು ಕುಜ ಶನಿ ನಿಮ್ಮಲ್ಲಿ ಉಗ್ರತೆಯನ್ನು ಹೆಚ್ಚಿಸಲಿದ್ದಾರೆ.
ಮೀನಾ : ಜನ್ಮ ರಾಶಿಯಲ್ಲಿ ಇರುವ ಕುಜ ಶನಿ ಕೆಲವೊಮ್ಮೆ ನಿಮ್ಮ ವರ್ತನೆ ನಿಷ್ಟುರವಾಗುವಂತೆ ಮಾಡಲಿದ್ದಾರೆ. ವ್ಯಾವಹಾರಿಕ ಕ್ಷೇತ್ರದಲ್ಲಿ ಲೆಕ್ಕಾಚಾರಗಳು ಸರಿಯಾಗಿರಲಿ, ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಸನ್ಮಾನಗಳು ದೊರಕಲಿವೆ. ಆರ್ಥಿಕ ನಷ್ಟಗಳು ಬರಲಿವೆ.
ಕಂಪ್ಯೂಟರ್ ಜಾತಕ, ವಾಸ್ತು ವಿವಾಹಹೊಂದಾಣಿಕೆ ಶುಭ ಮುಹೂರ್ತ ಕವಡೆ ಪ್ರಶ್ನೆ ಸಲಹೆಗಳಿಗೆ ಸಂಪರ್ಕಿಸಿ….




































