
ವಾರಭವಿಷ್ಯ
16.08.2026ರಿಂದ 22.08.2026ರವರೆಗೆ
ವಿಶೇಷ ದಿನಗಳು:
17.08.2026 – ಸಿಂಹ ಸಂಕ್ರಮಣ, ನಾಗರ ಪಂಚಮಿ
22.08.2026 – ಸಿಂಹ ರಾಶಿಗೆ ಬುಧನ ಪ್ರವೇಶ
ಮೇಷ
ಕುಟುಂಬದಲ್ಲಿ ನಿಮ್ಮ ಮಾತಿಗೆ ಮನ್ನಣೆ ಹೆಚ್ಚಾಗಲಿದೆ. ಗೃಹ ಕಲಹಗಳು ಸ್ತಿಮಿತಕ್ಕೆ ಬರಲಿವೆ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಪತ್ನಿಯ ಅನಾರೋಗ್ಯ ಮನಸ್ಸಿಗೆ ಕಿರಿಕಿರಿ ಉಂಟುಮಾಡಬಹುದು. ದೈವಾನುಗ್ರಹದ ಕೊರತೆ ಕಂಡುಬಂದರೂ ರಾಹು–ಶನಿಯ ಪ್ರಭಾವದಿಂದ ಹಲವು ಮೂಲಗಳಿಂದ ಧನಲಾಭವಾಗುವ ಸಾಧ್ಯತೆ ಇದೆ. ಸೂರ್ಯಗ್ರಹಣದ ಶುಭಫಲವನ್ನು ಅನುಭವಿಸುವ ಯೋಗವಿದೆ.
ವೃಷಭ
ಕುಜನು ನಿಮ್ಮನ್ನು ಸದಾ ಎಚ್ಚರಿಕೆಯಿಂದ ಇರುವಂತೆ ಮಾಡುತ್ತಾನೆ. ಹೊಸ ಯೋಜನೆಗಳನ್ನು ಆರಂಭಿಸಲು ಇದು ಸಕಾಲ. ಸಣ್ಣಪುಟ್ಟ ಕಲಹಗಳ ನಡುವೆಯೂ ಶುಭ ಕಾರ್ಯಗಳು ನೆರವೇರಲಿವೆ. ನಿಮ್ಮ ಧೈರ್ಯವೇ ಯಶಸ್ಸಿನ ಮೂಲವಾಗಲಿದೆ. ಸಂತಾನದ ನಿರೀಕ್ಷೆಯಲ್ಲಿರುವವರಿಗೆ ಶುಭ ಫಲ ದೊರೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ನಿಮ್ಮ ಕೌಶಲ್ಯಕ್ಕೆ ಮೆಚ್ಚುಗೆ ದೊರೆಯಲಿದೆ. ಹಿರಿಯರ ವಿಯೋಗದ ಸೂಚನೆಯೂ ಕಂಡುಬರುತ್ತದೆ.
ಮಿಥುನ
ಕುಜನು ಜನ್ಮರಾಶಿಯಲ್ಲಿ ಇರುವುದರಿಂದ ಗಾಯಗಳಾಗುವ ಸಾಧ್ಯತೆ ಇದೆ; ಎಚ್ಚರಿಕೆ ಅಗತ್ಯ. ಹೊಸ ಅವಕಾಶಗಳು ನಿಧಾನವಾಗಿ ತೆರೆದುಕೊಳ್ಳಲಿವೆ. ದೇವತಾ ಆರಾಧನೆಯಿಂದ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ದೇವಿಯ ಆರಾಧನೆ ಉತ್ತಮ ಫಲ ನೀಡಲಿದೆ. ನಾಗರ ಪಂಚಮಿಯನ್ನು ಶ್ರದ್ಧೆಯಿಂದ ಆಚರಿಸುವುದು ಶುಭ. ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ.
ಕರ್ಕಾಟಕ
ಗುರು, ರವಿ, ಬುಧ ಜನ್ಮರಾಶಿಯಲ್ಲಿ ಇದ್ದರೂ ರಾಹು–ಶನಿಯ ಪ್ರಭಾವದಿಂದ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಜ್ವರ, ಕಫ ಮುಂತಾದ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ಮೂತ್ರ ಸಂಬಂಧಿತ ತೊಂದರೆಗಳಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ. ಕೆಲವರಿಗೆ ಮಾನಸಿಕ ಒತ್ತಡ ಹೆಚ್ಚಾಗಬಹುದು. ಡಿಸೆಂಬರ್ವರೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ನಾಗದೇವರ ಆರಾಧನೆ ಮಾಡುವುದು ಶುಭ. ಕೆಲಸದ ಒತ್ತಡವೂ ಹೆಚ್ಚಾಗಲಿದೆ.
ಸಿಂಹ
ಯಾರ ಸಲಹೆಯನ್ನೂ ಕೇಳಲು ತಾಳ್ಮೆ ಕಡಿಮೆಯಾಗಬಹುದು. ಸಂಗಾತಿಯೊಂದಿಗೆ ಹಠ ಹಾಗೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಈ ಪರಿಸ್ಥಿತಿ ಡಿಸೆಂಬರ್ವರೆಗೆ ಮುಂದುವರಿಯುವ ಸಾಧ್ಯತೆ ಇದೆ. ದೈವಾನುಗ್ರಹದ ಕೊರತೆಯ ಅನುಭವವಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಶತ್ರುಗಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ದೇಹ ಮತ್ತು ಮನಸ್ಸಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿದ್ಯಾರ್ಥಿಗಳು ಪ್ರೀತಿ–ಪ್ರೇಮದ ವಿಚಾರಗಳಲ್ಲಿ ಹೆಚ್ಚು ಮಗ್ನರಾಗುವ ಸಾಧ್ಯತೆ ಇದೆ.
ಕನ್ಯಾ
ದೈವಾನುಗ್ರಹ ಉತ್ತಮವಾಗಿರುವ ಸಮಯ. ಹಣಕಾಸಿನ ಯೋಜನೆಗಳು ಫಲಪ್ರದವಾಗಲಿವೆ. ಉದ್ಯೋಗದಲ್ಲಿ ಕೆಲವೊಂದು ಕಿರಿಕಿರಿಗಳನ್ನು ಎದುರಿಸಬೇಕಾಗಬಹುದು. ನಾಗದೇವರನ್ನು ಪ್ರಾರ್ಥಿಸುವುದು ಶುಭ. ವಿದ್ಯಾರ್ಥಿಗಳಿಗೆ ಧೈರ್ಯ ಮತ್ತು ಪರಿಶ್ರಮ ಅತ್ಯಗತ್ಯ. ಆನ್ಲೈನ್ ಹಣ ಹೂಡಿಕೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಿ. ವಿದೇಶ ಪ್ರಯಾಣದ ಯೋಗವಿದೆ. ಆರೋಗ್ಯ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ.
ತುಲಾ
ಶುಕ್ರನು ವ್ಯಯಸ್ಥಾನದಲ್ಲಿರುವುದರಿಂದ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಆರೋಗ್ಯದ ವಿಚಾರದಲ್ಲಿ ಹಾಗೂ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಉತ್ತಮ. ಮನಸ್ಸಿಗೆ ನೆಮ್ಮದಿ ಕಡಿಮೆಯಾಗಬಹುದು. ಹೊಸ ಉದ್ಯೋಗದ ಪ್ರಾಪ್ತಿ ಯೋಗವಿದೆ. ಎಲ್ಲ ವಿಷಯಗಳಲ್ಲೂ ಸಮತೋಲನ ಕಾಯ್ದುಕೊಳ್ಳಿ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಸೂರ್ಯಗ್ರಹಣದ ಸಂದರ್ಭದಲ್ಲಿ ಆದಿತ್ಯ ಹೃದಯ ಸ್ತೋತ್ರ ಪಾರಾಯಣ ಮಾಡುವುದು ಶುಭ.
ವೃಶ್ಚಿಕ
ಕುಜನು ಅಷ್ಟಮ ಸ್ಥಾನದಲ್ಲಿದ್ದು ಸೆಪ್ಟೆಂಬರ್ 18ರವರೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ದೇವಿ ಅಷ್ಟೋತ್ತರ ಪಾರಾಯಣ ಮಾಡುವುದು ಶುಭ. ವೃತ್ತಿಯಲ್ಲಿ ಹಿರಿಯರ ಮಾರ್ಗದರ್ಶನ ದೊರೆಯಲಿದೆ. ಉದ್ಯೋಗ ಕ್ಷೇತ್ರದಲ್ಲಿ ದೊರೆಯುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ರಾಹು–ಶನಿಯ ಪ್ರಭಾವದಿಂದ ಆರೋಗ್ಯದ ಮೇಲೆ ಒತ್ತಡ ಉಂಟಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರಿ.
ಧನು
ಉದ್ಯೋಗ ಪ್ರಾಪ್ತಿಯ ಯೋಗವಿದೆ. ಕೃಷಿಕರು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ನೃತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಹೊಸ ವ್ಯಕ್ತಿಗಳ ಪರಿಚಯವು ಭವಿಷ್ಯಕ್ಕೆ ಪೂರಕ ವಾತಾವರಣ ನಿರ್ಮಿಸಲಿದೆ. ಆತ್ಮವಿಶ್ವಾಸದಿಂದ ಮುಂದುವರಿಯಿರಿ. ದೈವಾನುಗ್ರಹದಲ್ಲಿ ಸ್ವಲ್ಪ ಕೊರತೆ ಕಂಡುಬಂದರೂ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಕುಜನು ಸಪ್ತಮದಲ್ಲಿರುವುದರಿಂದ ಸಂಗಾತಿ ಹಾಗೂ ಮಕ್ಕಳೊಂದಿಗೆ ಸಣ್ಣಪುಟ್ಟ ಕಿರಿಕಿರಿಗಳು ಉಂಟಾಗಬಹುದು.
ಮಕರ
ಉತ್ತಮ ದೈವಾನುಗ್ರಹವಿರುವುದರಿಂದ ನಿಮ್ಮ ಪರಿಶ್ರಮಕ್ಕೆ ಸೂಕ್ತ ಗೌರವ ದೊರೆಯಲಿದೆ. ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಸಹೋದರನ ಸಹಾಯ ಪಡೆಯುವುದು ಕಷ್ಟಕರವಾಗಬಹುದು. ಮತ್ತೊಮ್ಮೆ ಸಾಡೇಸಾತಿ ಶನಿಯ ಪ್ರಭಾವ ಕಂಡುಬರುವ ಸಾಧ್ಯತೆ ಇದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಶುಭ.
ಕುಂಭ
ರಾಹು–ಶನಿ ಜನ್ಮರಾಶಿಯಲ್ಲಿ ಇರುವುದರಿಂದ ಮನಸ್ಸಿನ ಮೇಲೆ ಒತ್ತಡ ಹೆಚ್ಚಾಗಬಹುದು. ಶತ್ರುಭಾವದಲ್ಲಿ ಗುರು, ರವಿ, ಬುಧ ಇರುವುದರಿಂದ ವಿವಿಧ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಮಕ್ಕಳ ಮಾತುಗಳು ಬೇಸರ ತರಬಹುದು. ಡಿಸೆಂಬರ್ವರೆಗೆ ಸಂಗಾತಿಯ ಮಾತುಗಳಿಂದಲೂ ಮನಸ್ಸಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ತಂದೆ–ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು. ವ್ಯರ್ಥ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ನಾಗರ ಪಂಚಮಿಯನ್ನು ಶ್ರದ್ಧೆಯಿಂದ ಆಚರಿಸುವುದು ಶುಭ.
ಮೀನಾ
ಉತ್ತಮ ದಾಂಪತ್ಯ ಜೀವನ ನಡೆಸುವ ಯೋಗವಿದೆ. ಶುಕ್ರನು ನೀಚಸ್ಥಿತಿಯಲ್ಲಿ ಸಪ್ತಮದಲ್ಲಿರುವುದರಿಂದ ಅಪವಾದಗಳು ಎದುರಾಗುವ ಸಾಧ್ಯತೆ ಇದೆ. ದೈವಾನುಗ್ರಹ ಉತ್ತಮವಾಗಿರುವುದರಿಂದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ದೊರೆಯಲಿದೆ. ಕುಜನು ರಕ್ತದೊತ್ತಡದಲ್ಲಿ ಏರಿಳಿತ ಉಂಟುಮಾಡುವ ಸಾಧ್ಯತೆ ಇರುವುದರಿಂದ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಮಹಿಳೆಯರಿಗೆ ಗರ್ಭಕೋಶ ಹಾಗೂ ಮೂತ್ರ ಸಂಬಂಧಿತ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ. ಸೆಪ್ಟೆಂಬರ್ 18ರವರೆಗೆ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ.
ಜ್ಯೋತಿಷ್ಯ ಸೇವೆಗಳು
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು.
ಜಾತಕ ಹೊಂದಾಣಿಕೆ, ಕವಡೆ ಪ್ರಶ್ನೆ, ಶುಭ ಮುಹೂರ್ತ, ವಾಸ್ತು ಸಲಹೆ ಸೇರಿದಂತೆ ವಿವಿಧ ಜ್ಯೋತಿಷ್ಯ ಸೇವೆಗಳಿಗಾಗಿ ಸಂಪರ್ಕಿಸಿರಿ.







































