

ವಾರಭವಿಷ್ಯ 12.07.2026 ರಿಂದ 18.07.2026ರ ತನಕ
ವಿಶೇಷ ದಿನಗಳು :16.07.2026 ಕರ್ಕಾಟಕ ಸಂಕ್ರಮಣ
ಮೇಷ :ಸಾಡೇಸಾತ್ ಶನಿಗೆ ಪರಿಹಾರ ಅಗತ್ಯವಿದೆ. ಮನೆ ಭೂಮಿ ವಿವಾದಗಳು ಕೊನೆಗೊಳ್ಳಲಿದೆ. ಮನಸ್ತಾಪಗಳು ಬರುವ ಸಾಧ್ಯತೆ ಇರುವುದರಿಂದ ಮಾತು ಕಡಿಮೆ ಮಾಡಿರಿ, ಸಾಲಕ್ಕೆ ಪ್ರಯತ್ನ ಮಾಡಲಿದ್ದೀರಿ. ಮಕ್ಕಳಿಗಾಗಿ ಖರ್ಚು ಬರಲಿದೆ. ಅವಮಾನ,ಬೇಸರ ಬರಲಿರುವುದರಿಂದ ಎಚ್ಚರವಿರಲಿ.
ವೃಷಭ :ನಿಮ್ಮ ರಾಶಿಯಿಂದ ಚತುರ್ಥದಲ್ಲಿ ಶುಕ್ರ ಕೇತು ಇರುವುದರಿಂದ ನೀವು ಮಾಡಬೇಕಾಗಿರುವ ಕೆಲಸದಲ್ಲಿ ವೈರಾಗ್ಯ ಬರಲಿದೆ. ಅನಿರೀಕ್ಷಿತ ಖರ್ಚುಗಳು ಬರಲಿವೆ. ಸಹೋದರ ವರ್ಗದವರ ಸಹಾಯ ಸಿಗಲಿದೆ. ಮನೆ ವಾಹನ, ಭೂಮಿ ಮಾರಾಟ ಮಾಡಲು ಅನುಕೂಲವಾದ ಸಮಯವಾಗಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಒಳ್ಳೆಯ ಸಮಯವಾಗಿದೆ.
ಮಿಥುನ :ದ್ವಿತೀಯಾದಲ್ಲಿ ಇರುವ ರವಿ ಮತ್ತು ಗುರು ಎಲ್ಲಾ ವಿಷಯಗಳಲ್ಲಿ ಶುಭವನ್ನೇ ತರಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಶುಭ ಫಲವನ್ನೇ ನಿರೀಕ್ಷಿಸಬಹುದು. ಹತ್ತಿರದ ದೇವಸ್ಥಾನಗಳಿಗೆ ಹೋಗಲಿದ್ದೀರಿ. ಉದ್ಯೋಗದಲ್ಲಿ ಇರುವವರಿಗೆ ಜವಾಬ್ದಾರಿ ಹೆಚ್ಚಾಗಲಿದೆ. ಎಲ್ಲಾ ರೀತಿಯಿಂದಲೂ ಗೌರವ ಸಿಗಲಿದೆ.
ಕರ್ಕಾಟಕ :ನಿಮ್ಮ ಜನ್ಮರಾಶಿಯಲ್ಲಿ ಗುರು ಮತ್ತು ರವಿ ಇರುವುದರಿಂದ ಉದ್ಯೋಗದಲ್ಲಿ ಸ್ಥಳ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಧಾರ್ಮಿಕ ಭಾವನೆ ನಿಮ್ಮಲ್ಲಿ ಮೂಡಿ ಬರಲಿದೆ. ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇರುತ್ತದೆ ಬಂಧು ವರ್ಗದವರು ನಿಮ್ಮಿಂದ ದೂರವಾಗುವ ಸಾಧ್ಯತೆ ಇರುತ್ತದೆ.
ಸಿಂಹ :ಬುಧ ಲಾಭ ಸ್ಥಾನದಲ್ಲಿ ಇರುವುದರಿಂದ ಎಲ್ಲಾ ಕೆಲಸಗಳು ನೀವು ಎಣಿಸಿದಂತೆ ನಡೆಯಲಿದೆ. ನೀವು ಮಾಡಬೇಕಾದ ಕೆಲಸವನ್ನು ಪ್ರೀತಿಯಿಂದ ಮಾಡಿರಿ. ನೀವಾಡುವ ಮಾತಿನಿಂದ ಮನಸ್ತಾಪ ಅಸಮಾಧಾನ ಮನಸ್ಸಿಗೆ ಅತೃಪ್ತಿ ಉಂಟಾಗಲಿದೆ, ಖರ್ಚು ನಿಭಾಯಿಸುವುದು ಕಷ್ಟವಾಗಲಿದೆ. ವೈರಾಗ್ಯದ ಭಾವನೆ ಬರಲಿದೆ. ಸಂಬಂಧಿಗಳನ್ನು ದೂರ ಮಾಡಿಕೊಳ್ಳುವಿರಿ ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದೆ.
ಕನ್ಯಾ : ಗಣಪತಿ ಮತ್ತು ಲಕ್ಷ್ಮಿ ಅಷ್ಟೋತ್ತರ ನಿತ್ಯ ಪಾರಾಯಣ ನಿಮಗೆ ಅಗತ್ಯವಿದೆ. ಕಳೆದು ಹೋದ ದಿನಗಳ ಕಹಿ ಘಟನೆಗಳನ್ನು ನೆನಪಿಸಿಕೊಂಡು ಬೇಸರ ಪಡುವಿರಿ. ನೀವು ಮಾಡುವ ಯಾವುದೇ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಮನೆಯಲ್ಲಿ ಕಿರಿಕಿರಿ ಅನುಭವಿಸುವಿರಿ. ನಿಮ್ಮ ಮಾತು ಇತರರಿಗೆ ಬೇಸರ ತರದಂತೆ ಎಚ್ಚರವಹಿಸಿರಿ.
ತುಲಾ :ಶುಕ್ರ ಕೇತುವಿನ ಜೊತೆಗೆ ಇರುವುದರಿಂದ ಮನಸ್ಸಿನ ಮೇಲೆ ವೈರಾಗ್ಯ ಭಾವನೆ ಮೂಡಲಿದೆ. ಹಣದ ವ್ಯವಹಾರ ಸಧ್ಯಕ್ಕೆ ಬೇಡ. ನಷ್ಟ ಅನುಭವಿಸುವ ಸಮಯವಾಗಿದೆ. ಹಿರಿಯರ ಬಗ್ಗೆ ಅಸಮಾಧಾನ ಮೂಡಿ ಬರಲಿದೆ. ಆದಿತ್ಯ ಹೃದಯ ಮಂತ್ರ ಪಾರಾಯಣ ಅಗತ್ಯವಿದೆ. ಸರಕಾರಿ ನೌಕರರಿಗೆ ಉತ್ತಮವಾದ ಸಮಯವಾಗಿದೆ.
ವೃಶ್ಚಿಕ :ಸಪ್ತಮದಲ್ಲಿ ಇರುವ ಕುಜ ಉತ್ತಮ ಫಲವನ್ನೇ ನೀಡಲಿದ್ದಾನೆ. ಕೇತು ಮತ್ತು ಕುಜ ನಿಮ್ಮ ಉದ್ಯೋಗದಲ್ಲಿ ಒತ್ತಡವನ್ನು ತರಲಿದ್ದಾರೆ. ಗುರು ಮತ್ತು ರವಿ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಪ್ರತಿಫಲವನ್ನು ನೀಡಲಿದ್ದಾರೆ. ಸರಕಾರಿ ನೌಕರರು ಮೇಲಾಧಿಕಾರಿಗಳಿಂದ ಕಿರಿಕಿರಿ ಅನುಭವಿಸಲಿದ್ದಾರೆ. ರಾಜಕೀಯ ವ್ಯಕ್ತಿಗಳಿಗೆ ಸಮಾಜದಲ್ಲಿ ಗೌರವ ಸಿಗಲಿದೆ.
ಧನು : ಗುರು ಮತ್ತು ರವಿ ಅಷ್ಟಮದಲ್ಲಿ ಮಧ್ಯಮ ಫಲವನ್ನು ನೀಡಲಿದ್ದಾನೆ. ಆರೋಗ್ಯದ ಕಡೆಗೆ ಗಮನ ಅಗತ್ಯವಿದೆ. ವಾಹನ ಚಾಲಕರು ಎಚ್ಚರವಹಿಸಬೇಕು. ಕುಟುಂಬದಲ್ಲಿ ಮನಸ್ತಾಪ, ಗೌರವಕ್ಕೆ ಕೊರತೆ ಇರಲಿದೆ. ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರವಿರಬೇಕು ವೃತ್ತಿ ಕ್ಷೇತ್ರದಲ್ಲಿ ಒತ್ತಡ ಬರಲಿದೆ. ತಾಯಿಯವರ ಆರೋಗ್ಯದ ಬಗ್ಗೆ ನಿಮ್ಮ ಗಮನವಿರಲಿ. ಸಂಗಾತಿಯೊಂದಿಗೆ ಸಣ್ಣ ಮಟ್ಟದಲ್ಲಿ ಬೇಸರ ಬರಲಿದೆ.
ಮಕರ : ವಿದೇಶಕ್ಕೆ ಹೋಗುವ, ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಉತ್ತಮ ಅವಕಾಶ ದೊರೆಯಲಿದೆ. ಈ ವರೆಗೆ ಮಾಡಿರುವ ಸಾಲದ ಸಮಸ್ಯೆ ಪರಿಹಾರವಾಗಲಿದೆ. ಉದ್ಯೋಗದ ಸಮಸ್ಯೆ ಇರುವುದಿಲ್ಲ. ಕೇತು ಕೆಲವೊಂದು ಸಮಸ್ಯೆಗಳನ್ನು ತರಲಿದ್ದಾನೆ. ದೈವಾನುಗ್ರಹ ಉತ್ತಮವಾಗಿರುವುದರಿಂದ ಉತ್ತಮ ದಾಂಪತ್ಯ ಜೀವನ ನಡೆಸುವಿರಿ.
ಕುಂಭ :ಸಾಡೇ ಸಾತ್ ಶನಿಯ ಪ್ರಭಾವದಿಂದ ಹಣ ಕಾಸಿನ ವಿಷಯದಲ್ಲಿ ಎಚ್ಚರವಿರಲಿ. ನಿಮ್ಮ ಆರೋಗ್ಯದ ಬಗ್ಗೆ ಬಹಳ ಎಚ್ಚರವಾಗಿರಿ, ಮಧ್ಯೆ ಸೇವನೆ ಮಾಡುವವರು ನಿಲ್ಲಿಸುವುದು ಒಳ್ಳೆಯದು ಹೆಚ್ಚು ಹಣ ತೊಡಗಿಸುವುದು ಸದ್ಯಕ್ಕೆ ಬೇಡ. ಸರಿಯಾದ ವೇಳೆಗೆ ಆಹಾರ ಸೇವನೆ ಅಗತ್ಯವಿದೆ. ಜೀರ್ಣಕ್ರಿಯೆ ಹದ ಗೆಡಲಿದೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಬರಲಿದೆ.
ಮೀನಾ :ನಿಮಗೆ ಬಹಳ ಉತ್ತಮವಾದ ಸಮಯವಾಗಿದೆ. ಮಿತ್ರ ರಿಂದ ಅನುಕೂಲವನ್ನು ಹೊಂದುವಿರಿ. ಕೆಲವೊಂದು ಮಿತ್ರರು ತಾವಾಗಿಯೇ ದೂರವಾಗಲಿದ್ದಾರೆ. ವಾಹನ, ಮನೆ ಭೂಮಿ ಖರೀಧಿಗೆ ಉತ್ತಮ ಸಮಯವಾಗಿದೆ. ಶುಭ ಸಮಾರಂಭಗಳಲ್ಲಿ ಭಾಗವಿಹಿಸುವಿರಿ. ವಿದೇಶ ಪ್ರಯಾಣಕ್ಕೆ ಉತ್ತಮ ಸಮಯವಾಗಿದೆ. ಬಂಧು ವರ್ಗದವರ ಜೊತೆಗೆ ಭಿನ್ನಾಭಿಪ್ರಾಯ ಬಾರದಂತೆ ಎಚ್ಚರವಹಿಸಿರಿ.

.



































