ವಾರಭವಿಷ್ಯ 06.09.2026 ರಿಂದ 12.09.2026 ತನಕ

Picture of RB NEWS

RB NEWS

Bureau Report

ವೃಷಭ :ಖಚಿತ ನಿರ್ಧಾರಕ್ಕೆ ಬರಲಾಗದ ಪರಿಸ್ಥಿತಿ. ಕೆಲಸದ ಒತ್ತಡ ಆರೋಗ್ಯವನ್ನು ಹಾಳು ಮಾಡಲಿದೆ. ಬೆಲೆಬಾಳುವ ವಸ್ತುಗಳನ್ನು ಖರೀಧಿ ಮಾಡುವಿರಿ. ಮನೋಕಯಾಮನೆ ಪೂರೈಕೆಯಿಂದ ಮನಸ್ಸಿಗೆ ನೆಮ್ಮದಿ ಬರಲಿದೆ. ಮಾತು ಇತಿಮಿತಿಯಲ್ಲಿ ಇರಲಿ. ಇದು ಕುಜನ ಸೂಚನೆಯಾಗಿದೆ. ಸಾಲ ಮರುಪಾವತಿ ಆಗಲಿದೆ, ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಲಿದೆ. ರಾಹು ಶನಿಯರ ಪ್ರಭಾವದಿಂದಾಗಿ ನಿಷ್ಟುರವಾಗದಂತೆ ಎಚ್ಚರವಹಿಸಿರಿ.

ಮಿಥುನ : ನಿಮ್ಮಲ್ಲಿ ಉದಾಸೀನತೆ ನಿರ್ಲಕ್ಷದ ಮನೋಸ್ಥಿತಿ ಬರಲಿದೆ. ಮಾನಸಿಕ ಪ್ರಮಾದದಿಂದ ಕೌಟುಂಬಿಕ ಅಶಾಂತಿಯು ತಲೆದೋರಲಿದೆ. ಗುರುವಿನ ಅನುಗ್ರಹ ಇರುವುದರಿಂದ ನಿಮ್ಮ ಯೋಚನೆಗಳು ನೆರವೇರಲಿವೆ. ಹಿರಿಯರ ಜೊತೆಗೆ ಬೇಸರವಾಗುವ ಸನ್ನಿವೇಶಗಳು ಬರಲಿವೆ ನೌಕರರಿಗೆ ಹಿರಿಯ ಅಧಿಕಾರಿಗಳ ಕಿರಿಕಿರಿ ಬರಲಿದೆ ಅಜಾಗ್ರತೆ ಬೇಡ. ಆತ್ಮೀಯರಿಗೆ ಸಹಾಯ ಮಾಡುವ ಸಂದರ್ಭ ಬರಲಿದೆ.

ಕರ್ಕಾಟಕ : ರಾಹು ಶನಿಯರ ಸಮಸ್ಯೆಯನ್ನು ಎದುರಿಸಲೇ ಬೇಕಾಗಿದೆ ನಿತ್ಯವೂ ಯಾವುದಾದರೊಂದು ಬೇಸರ,ಮಾನಸಿಕ ಒತ್ತಡ ನಿಮ್ಮಲ್ಲಿರುತ್ತದೆ. ಮಕ್ಕಳ ಅಸಹಕಾರ ಚಳವಳಿಯನ್ನು ಎದುರಿಸಬೇಕಾಗುತ್ತದೆ. ಅಚ್ಚರಿಯ ರೀತಿಯಲ್ಲಿ ಅಧಿಕಾರಿಗಳ ವಕ್ರ ದೃಷ್ಟಿಯಿಂದ ಪಾರಾಗಿ ಬರುವಿರಿ. ಅನಗತ್ಯ ದುಂದುವೆಚ್ಚ ಮಾಡುವಿರಿ. ಸಂಗಾತಿಗಳ ನಡುವೆ ಶೀತಲ ಯುದ್ಧ ನಡೆಯುತ್ತಲೇ ಇರುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.

ಸಿಂಹ : ನಿಮ್ಮ ಉದ್ಯೋಗ ಸ್ಥಾನದ ಉಳಿವಿಗಾಗಿ ಹೋರಾಟ ಮಾಡಬೇಕಾಗಿರುತ್ತದೆ. ಶುಭಕಾರ್ಯದ ಮಾತುಕತೆ ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಮಹಾವಿಷ್ಣುವಿನ ಪ್ರಾರ್ಥನೆ ಅಗತ್ಯವಿರುತ್ತದೆ. ನಿರೀಕ್ಷಿತ ಮೂಲಗಳಿಂದ ಧನಾಗಮನದ ಸೂಚನೆ ಇರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಬಹಳ ಎಚ್ಚರವಹಿಸಬೇಕು ರವಿ,ಕೇತು,ಬುಧ ಜನ್ಮ ರಾಶಿಯಲ್ಲಿ ಇರುವುದರಿಂದ ತುಂಬಾ ಎಚ್ಚರವಹಿಸಬೇಕು. ಅಸಮರ್ಥನೆಯ ಭಾವಣೆಯಿಂದ ಮನೋಚಂಚಲತೆ ಕಾಡಲಿದೆ.

ಕನ್ಯಾ :ಅನಗತ್ಯ ವಿವಾದವೊಂದು ಎದುರಾಗುವ ಸಾಧ್ಯತೆ ಕಂಡು ಬರುತ್ತಿದೆ, ಉದ್ಯೋಗ ಕಳೆದು ಕೊಳ್ಳುವ ಸಾಧ್ಯತೆ ಇರುತ್ತದೆ. ನೌಕರರು ಎಚ್ಚರವಹಿಸಬೇಕು. ಅನ್ಯ ಮಹಿಳೆಯರ ಬಗ್ಗೆ ಎಚ್ಚರಿಕೆಯ ನಡೆ ಇರಲಿ. ಮಕ್ಕಳ ಶಿಕ್ಷಣಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಶುಭವಾರ್ತೆಯನ್ನು ಕೇಳಳಿದ್ದೀರಿ. ಸೇವಕರಿಂದ ಇಷ್ಟವಿರೋಧಿ ವರ್ತನೆಗಳು ಬರಲಿವೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ನಿಮ್ಮ ವಿಳಂಬತನ ನಿಮಗೆ ಗೊತ್ತಾಗಲಿದೆ.

ತುಲಾ :ಕೃಷಿಕರು ಹೋಟೆಲ್ ಉದ್ಯಮದವರು ಹೆಚ್ಚಿನ ಲಾಭ ಗಳಿಸಲಿದ್ದಾರೆ. ಸಂಗೀತ ಸಿನೆಮಾದಲ್ಲಿ ಇರುವವರು ಬೇಡಿಕೆಯಲ್ಲಿ ಇರಲಿದ್ದಾರೆ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಬರುವ ಆದಾಯದಲ್ಲಿ ಏರಿಳಿತವನ್ನು ಕಾಣುವಿರಿ. ತಾಳ್ಮೆ ಅತೀ ಅಗತ್ಯವಾಗಿದೆ. ಹೊಣೆಗಾರಿಕೆ ಹೆಚ್ಚಾಗಲಿದೆ. ವೃತ್ತಿ ರಂಗದಲ್ಲಿ ಏರಿಳಿತವನ್ನು ಕಾಣುವಿರಿ. ಉದ್ಯೋಗವನ್ನು ಬದಲಾವಣೆ ಮಾಡಿಕೊಂಡರೂ ಆಶ್ಚರ್ಯ ಪಡಬೇಕಿಲ್ಲ.

ವೃಶ್ಚಿಕ :ಗುರುವಿನ ಉಚ್ಚಸ್ವಿತಿ ನಿಮ್ಮನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋದರೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ನೌಕರರು ಕೂಡಾ ಒತ್ತಡದಲ್ಲಿಯೇ ಮುಂದುವರಿಯಬೇಕಾಗುತ್ತದೆ ಆದಷ್ಟು ಮೌನವಾಗಿದ್ದರೆ ಒಳ್ಳೆಯದು. ತಾಯಿಯವರ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಿರಬೇಕು. ಹೃದಯ ಸಂಬಂಧಿ ಸಮಸ್ಯೆಯವರು,ಅಲರ್ಜಿ ಇರುವವರು ಎಚ್ಚರವಾಗಿರಬೇಕು. ಸಾಕು ಪ್ರಾಣಿಗಳ ಬಗ್ಗೆ ಎಚ್ಚರವಾಗಿರಿ. ರಾತ್ರಿ ಪ್ರಯಾಣ ಕಡಿಮೆಯಾಗಿರಲಿ.

ಧನು :ಗುರುವಿನ ಅಷ್ಟಮ ಭಾವ ನಿಮ್ಮಲ್ಲಿ ಒತ್ತಡವನ್ನು ತರುತ್ತದೆ ಆರ್ಥಿಕ ಕಾರ್ಯ ಸಫಲತೆಗಾಗಿ ಹೆಣಗಾಡಬೇಕಾದ ಸಂದರ್ಭ ಬರಲಿದೆ. ಮನಸ್ಸಿನ ನೆಮ್ಮಡಿಗಾಗಿ ದುರ್ಗೆಯನ್ನು ಪ್ರಾರ್ಥನೆ ಮಾಡುವುದು ಒಳ್ಳೆಯದು. ಕಲಹಗಳು ಬಂದಾಗ ತಾಳ್ಮೆಯಿಂದ ಪರಿಹರಿಸಿಕೊಳ್ಳುವುದು ಒಳ್ಳೆಯದು. ಬರುವ ಆದಾಯದ ಮೂಲಗಳು ಹೆಚ್ಚಾಗಲಿವೆ. ಸಂಗಾತಿಯೊಂದಿಗೆ ಕಲಹ ಬಾರದಂತೆ ಎಚ್ಚರವಹಿಸಿರಿ.

ಮಕರ :ಶುಭ ಕಾರ್ಯಗಳು ಹಲವಾರು ಒತ್ತಡಗಳ ನಡುವೆ ನಡೆಯಲಿವೆ. ಆತ್ಮೀಯರಿಂದ ವಿಶ್ವಾಸ ದ್ರೋಹದ ಪ್ರಸಂಗ ಎದುರಾಗಲಿದೆ. ಆಸ್ಪತ್ರೆ ದರ್ಶನ ಮಾಡಲಿರುವಿರಿ. ನಿಮ್ಮ ಕಾಲಿನ ಗಂಟು ನೋವು ಅನೇಕ ಸಮಸ್ಯೆಗಳನ್ನು ತರಲಿದೆ. ವೃತ್ತಿ ರಂಗದಲ್ಲಿ ಯಶಸ್ವಿಯಾಗುವಿರಿ . ನಿಮಗೆ ಬರಬೇಕಾಗಿರುವ ಮೊತ್ತ ಸರಿಯಾದ ಸಮಯಕ್ಕೆ ಬರಲಿದೆ. ಅಷ್ಟಮದಲ್ಲಿ ರವಿ,ಕೇತು ಬುಧ ಇರುವುದರಿಂದ ನಿಮ್ಮ ಮತ್ತು ನಿಮ್ಮವರ ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಕೆಲವೊಂದು ಅಪವಾದಗಳು ಬರಲಿವೆ.

ಕುಂಭ :ನವಗ್ರಹರು ನಿಮ್ಮ ನೈತಿಕ ಬಲವನ್ನು ಪರೀಕ್ಷೆ ಮಾಡುತ್ತಿದ್ದಾರೆ. ದೇವರ ಪೂಜೆ ಪ್ರಾರ್ಥನೆಯೊಂದೇ ನಿಮಗೆ ಮಾನಸಿಕ ಧೈರ್ಯವನ್ನು ತಂದು ಕೊಡಲಿದೆ. ಸಂಗಾತಿಯೊಂದಿಗೆ ಹೊಂದಾಣಿಕೆಯೊಂದಿಗೆ ಮುಂದುವರಿಯರಿ. ಮಾನಸಿಕ ಒತ್ತಡ ನಿಮ್ಮಲ್ಲಿರುತ್ತದೆ. ನಿಮ್ಮ ಮಾತು ಬಿರುಸಾಗಿರುತ್ತದೆ. ತಾಳ್ಮೆಯನ್ನು ಬೆಳೆಸಿಕೊಳ್ಳಿರಿ. ನಿಮ್ಮ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾದೀತು. ನಾಗ ದೇವರ ಪ್ರಾರ್ಥನೆ ಅಗತ್ಯವಿರುತ್ತದೆ.

ಮೀನಾ : ಶನಿ ರಾಹುವಿನ ಜೊತೆಯಲ್ಲಿ ಇರುವ ಸಮಯ. ಗೊಂದಲ ಇದ್ದರೂ ಗುರುವಿನ ಅನುಗ್ರಹ ಇರುವುದರಿಂದ ಮಾನಸಿಕ ನೆಮ್ಮದಿ ಇರುತ್ತದೆ ನಿಮ್ಮ ಆರೋಗ್ಯದ ಕಡೆಗೆ ಗಮನ ಇರಬೇಕು. ಬಿಪಿ ಷುಗರ್ ಇರುವವರು,ಮೂಲವ್ಯಾಧಿ ಸಮಸ್ಯೆ ಇರುವವರು ವೈದ್ಯರ ಭೇಟಿ ಮಾಡಿದರೆ ಒಳ್ಳೆಯದು ಭಾವನಾತ್ಮಕ ವಿಚಾರದಿಂದ ಹಳೆಯ ಸ್ನೇಹವೊಂದು ಮುರಿದು ಹೋಗಲಿರುವ ಸಾಧ್ಯತೆ ಇರುತ್ತದೆ ವೃತ್ತಿರಂಗದಲ್ಲಿ ಒಳ್ಳೆಯ ಅವಕಾಶ ಒದಗಿ ಬರಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top