ವಾರಭವಿಷ್ಯ 05.04.2026 ರಿಂದ 11.04.2026ರ ತನಕ
ಮೇಷ : ವ್ಯಯದಲ್ಲಿ ಶನಿ, ಕುಜ, ಬುಧ ಇರುವಂತಹ ಸಮಯ, ಜನ್ಮ ರಾಶಿಯಲ್ಲಿ ರವಿ, ಶುಕ್ರರಿದ್ದಾರೆ. ನೀವು ಮಾಡುವ ಯಾವುದೇ ಕೆಲಸದಲ್ಲಿ ವ್ಯವಹಾರದಲ್ಲಿ ತಾಳ್ಮೆ ಸಂಯಮ ಅತೀ ಅಗತ್ಯವಾಗಿದೆ ಕೌಟುಂಬಿಕವಾಗಿ ಅತೀ ನಿರೀಕ್ಷೆಯನ್ನು ಇಟ್ಟುಕೊಂಡಿರುವ ನಿಮಗೆ ನಿರಾಶೆ ಆಗಲಿದೆ. ಆರೋಗ್ಯದಲ್ಲಿ ಕಾಳಜಿ ಅತೀ ಅಗತ್ಯವಿರುತ್ತದೆ, ಕಂಕಣ ಭಾಗ್ಯಕ್ಕೆ ಭಾಗ್ಯಕ್ಕೆ ಅವಸರ ಬೇಡ.
ವೃಷಭ : ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷೆಗಯಿತಲೂ ಅಧಿಕವಾಗಿ ಸಂಪಾದನೆ ಬರಲಿದೆ. ಅನಿರೀಕ್ಷಿತ ರೀತಿಯಲ್ಲಿ ವಿವಾಹ ಭಾಗ್ಯ ಒದಗಿ ಬರಲಿದೆ. ಸಮಾರಂಭಗಳಲ್ಲಿ ಭಾಗವಹಿಸುವಿರಿ, ವಿದೇಶ ಪ್ರವಾಸ ಯೋಗವಿದೆ. ಮನೆಯಿಂದ ಹೊರಗೆ ಇರುವ ಯೋಗವಿದೆ. ವಿದ್ಯಾರ್ಥಿಗಳು ಹಾಸ್ಟೆಲ್ಗಳಲ್ಲಿ ಇದ್ದು ವ್ಯಾಸಂಗ ಮಾಡುವ ಸಾಧ್ಯತೆ ಇರುತ್ತದೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಒಳ್ಳೆಯ ಕಾಲವಾಗಿದೆ.
ಮಿಥುನ : ಕುಟುಂಬ ಸುಖವಿದ್ದರೂ ವಾಸ್ತವ ಬದುಕಿನ ಅನೇಕ ವಿಚಾರಗಳು ನಿಮ್ಮ ಮೇಲೆ ಪರಿಣಾಮ ಬೀರಲಿದೆ. ಒಮ್ಮೊಮ್ಮೆ ಯಾರನ್ನೂ ನಂಬದಂತಹ ಮನೋ ಸ್ಥಿತಿ ಬರಲಿದೆ. ಆರ್ಥಿಕವಾಗಿ ಚೇತರಿಕೆ ಕಂಡುಬಂದರೂ ಎಚ್ಚರವಾಗಿರಬೇಕು, ದೇಹಾರೋಗ್ಯದ ಬಗ್ಗೆ ಎಚ್ಚರವಾಗಿರಬೇಕು. ಮೊದಲಿಗಿಂತ ಈಗ ಚೇತರಿಕೆ ಕಂಡು ಬರಲಿದೆ.
ಕರ್ಕಾಟಕ : ಜೀವನದಲ್ಲಿ ಆಶಾವಾದಿಗಳಾಗಿ ಬದುಕುವ ಸಮಯ, ಅಷ್ಟಮದಲ್ಲಿ ಇದ್ದವರು ಭಾಗ್ಯಕ್ಕೆ ಬಂದಿದ್ದಾರೆ. ಹೊಸ ಉದ್ಯೋಗ ಪ್ರಾಪ್ತಿ ಯೋಗವಿದೆ. ವ್ಯಯದ ಗುರುವಿಗೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಅಗತ್ಯವಾಗಿದೆ. ನಿಮಗೆ ಮಾತೇ ಬಂಡವಾಳವಾಗಲಿದೆ. ಅಷ್ಟಮದ ರಾಹುವಿಗೆ ನಾಗ ದೇವರ ಪ್ರಾರ್ಥನೆ ಅಗತ್ಯವಿದೆ. ಸಾಮಾಜಿಕವಾಗಿ ನಿಮ್ಮ ಪ್ರತಿಭೆಯನ್ನು ಜನರು ಗುರುತಿಸಲಿದ್ದಾರೆ.
ಸಿಂಹ : ಗುರುವಿನ ಅನುಗ್ರಹ ಉತ್ತಮವಾಗಿದೆ. ಅಷ್ಟಮದಲ್ಲಿ ಶನಿ ಕುಜ ಬುಧ ಜೊತೆಯಾಗುತ್ತಿದ್ದಾರೆ. ಆರೋಗ್ಯ ಕೈಕೊಡದ ಹಾಗೆ ನೋಡಿಕೊಳ್ಳುವುದು ಅತೀ ಅಗತ್ಯವಾಗಿದೆ. ಪತಿ – ಪತ್ನಿಯರ ನಡುವೆ ವಾದ ವಿವಾದಗಳು ಪ್ರತೀ ವಿಷಯದಲ್ಲಿಯೂ ಬರಲಿದೆ. ಪ್ರೇಮಿಗಳು ಬೇರ್ಪಡುವ ಸಾಧ್ಯತೆ ಇರುತ್ತದೆ. ಕೋರ್ಟ್ ಮೆಟ್ಟಲೇರುವ ಸಾಧ್ಯತೆ ಇರುತ್ತದೆ, ಮೃತ್ಯುಂಜಯ ಜಪ ಅಗತ್ಯವಿದೆ. ಬೆಂಕಿಯ ವಿಷಯದಲ್ಲಿ ಎಚ್ಚರವಿರಲಿ.
ಕನ್ಯಾ : ಸಪ್ತಮದಲ್ಲಿ ಇರುವ ಗ್ರಹರು ಶನಿ ಕುಜ ಆಗಿರುವುದರಿಂದ ದಾಂಪತ್ಯಕ್ಕೆ ಇದು ಮಾರಕವಾಗಿರುವುದರಿಂದ ದುರ್ಗಾ ನಮಸ್ಕಾರ ಪೂಜೆ ಅತೀ ಅಗತ್ಯವಾಗಿದೆ. ಇಬ್ಬರೂ ಆರೋಗ್ಯದ ಕಡೆಗೆ ಎಚ್ಚರವಾಗಿರಬೇಕು. 60+ ಆಗಿರುವವರು ಪಾರ್ಕಿನ್ ಸನ್ ರೋಗಕ್ಕೆ, ನರ ಎಲುಬು ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಬೀಳುವ ಸಾಧ್ಯತೆ ಇರುತ್ತದೆ.
ತುಲಾ : ಬಹಳ ಉತ್ತಮವಾದ ಸಮಯವಾಗಿದೆ, ಗುರು ಭಾಗ್ಯದಲ್ಲಿ ಇರುವ ಸಮಯವಾಗಿದೆ. ಆರನೆಯ ಭಾವದಲ್ಲಿ ಇರುವ ಶನಿ ಕುಜರು ನಿಮಗೆ ಆರೋಗ್ಯ ಸಮಸ್ಯೆಯನ್ನು ತರಲಿದ್ದಾರೆ. ಬಿ ಪಿ ಸಮಸ್ಯೆ ಇರುವವರು ತಲೆ ತಿರುಗುವ ಸಮಸ್ಯೆಗೆ ಗುರಿಯಾಗಬಹುದು ರಕ್ತದೊತ್ತಡ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ತಕ್ಷಣ ವೈದ್ಯರನ್ನು ಭೇಟಿಯಾಗಿರಿ,
ವೃಶ್ಚಿಕ : ಪಂಚಮದಲ್ಲಿ ಶನಿ ಕುಜ ಬುಧ ಇರುವುದರಿಂದ ಮಕ್ಕಳು ವೈರಿಗಳಂತೆ ದೂರವಾಗುವ ಸಮಯವಾಗಿದೆ, ಮೇ ದಿನಾಂಕ 11 ರ ವರೆಗೆ ಈ ಸ್ಥಿತಿ ಮುಂದುವರಿಯಲಿದೆ. ನರಸಿಂಹ ದೇವರ ಮಂತ್ರ ಪಾರಾಯಣ ಅಗತ್ಯವಿದೆ. ಮಕ್ಕಳನ್ನು ಗೌರವಿಸಿರಿ. ವಾದ ವಿವಾದಗಳಿಗೆ ಅವಕಾಶ ಕೊಡಬಾರದು, ಕಾಲಾಯ ತಸ್ಯೆ ನಮ : ಎಲ್ಲವನ್ನೂ ಕಾಲನಿಗೆ ಬಿಡಬೇಕು.
ಧನು : ಚತುರ್ಥದಲ್ಲಿ ಶನಿ ಕುಜ ಬುಧರು ಪರಸ್ಪರ ವೈರಿಗಾಗಿ ಸೇರುವಾಗ ಆರೋಗ್ಯದ ಬಗ್ಗೆ ನರ ಸಂಬಂಧಿ ಸಮಸ್ಯೆ ಕಾದಲಿದೆ. ತಲೆ ಸುತ್ತುವ ಸಮಸ್ಯೆ ಬರಬಹುದು, ಧ್ಯಾನ, ಪ್ರಾಣಾಯಾಮ ಮುದ್ರೆ ಇವುಗಳು ಆಗತ್ಯವಾಗಿದೆ. 60+ ಆಯದವರು ವಾಹನ ಚಲಾಯಿಸುವಾಗ ಎಚ್ಚರವಾಗಿರಬೇಕು. ಗುರುವಿನ ಅನುಗ್ರಹ ಇರುವುದರಿಂದ ಹೆಚ್ಚಿನ ಸಮಸ್ಯೆ ಆಗಲಾರದು.
ಮಕರ : ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಸುಪ್ತ ಬಯಕೆಗಳು ಹಂತ ಹಂತವಾಗಿ ಈಡೇರಲಿವೆ. ಸಾರ್ವಜನಿಕವಾಗಿ ನಾಗರಿಕ ಸೌಲಭ್ಯಗಳು ನಿಮಗೆ ಒದಗಿ ಬರಲಿವೆ, ಸಹೋದರ ವರ್ಗದವರ ಜೊತೆಗೆ ಭೂಮಿ ಸಂಬಂಧವಾಗಿ ಕಲಹ ಬರಲಿದೆ. ಏರುತ್ತಿರುವ ಜೀವನ ವೆಚ್ಚ ಆತಂಕಕ್ಕೆ ಕಾರಣವಾಗಲಿದೆ. ರಾಜಕೀಯ ವರ್ಗದವರಿಗೆ ಒಳ್ಳೆಯ ಸಮಯವಾಗಿದೆ.
ಕುಂಭ : ವಕೀಲ ವೃತ್ತಿಯವರಿಗೆ ಭಾಗೋದಯದ ಕಾಲವಾಗಿದೆ. ಕುಟುಂಬದೊಳಗೆ ವಾದ ವಿವಾದಗಳು ಬಾರದಂತೆ ನೋಡಿಕೊಳ್ಳಿರಿ, ದೃಢ ಸಂಕಲ್ಪದಲ್ಲಿ ಮುಂಡುವರಿದಲ್ಲಿ ಜೀವನದಲ್ಲಿ ಯಶಸ್ಸನ್ನು ಕಾಣುವಿರಿ, ನೀವಾಡುವ ಕಠಿಣ ಮಾತುಗಳೇ ನಿಮಗೆ ಸಮಸ್ಯೆಯಾಗಲಿದೆ. ಆನೆ ಹೋದದ್ದೇ ದಾರಿ ಎಂಬ ವಾದದಿಂದ ಹೊರಗೆ ಬನ್ನಿರಿ, ದಾಂಪತ್ಯದಲ್ಲಿ ಕಿರಿಕಿರಿ ಹೆಚ್ಚಾಗಲಿದೆ.
ಮೀನಾ : ಜನ್ಮ ರಾಶಿಯಲ್ಲಿ ಕುಜ ಶನಿ ಬುಧ ಜೊತೆಯಾಗಿರುವುದನ್ನು ಗಮನಿಸಿರಿ. ಒಂದೇ ವಿಷಯದ ಬಗ್ಗೆ ಹೆಚ್ಚು ಯೋಚಿಸಿದಾಗ ತಲೆ ಭಾರವಾಗಲಿದೆ. Vertigo ಸಮಸ್ಯೆ ಕಾದಲಿದೆ. ವೈದ್ಯರ ಬಳಿಗೆ ಹೋಗುವ ಸಾಧ್ಯತೆ ಇರುತ್ತದೆ ಎರಡೂ ಕಿವಿಗಳಿಂದ ಬಿಸಿ ಗಾಳಿ ಹೋಗಲು ಆರಂಭವಾಗಲಿದೆ. ಶನಿ ಕುಜ ಇದಕ್ಕೆ ಕಾರಣವಾಗಲಿದ್ದಾರೆ.






































