ವಾರಭವಿಷ್ಯ : 03.05.2026 ರಿಂದ 09.05.2026ರ ತನಕ

Picture of RB NEWS

RB NEWS

Bureau Report

ಮೇಷ : ವ್ಯಯದಲ್ಲಿ ಕುಜ ಶನಿ ಇರುವುದರಿಂದ ಮಾನಶಿಕವಾಗಿ ಮತ್ತು ಶಾರೀರಿಕವಾಗಿ ಒತ್ತಡವಿರುತ್ತದೆ. ಇದು ದಿನಾಂಕ 11 ರ ವರೆಗೆ ಮುಂದುವರಿಯಲಿದೆ. ನಿಮ್ಮ ಜನ್ಮ ರಾಶಿಯಲ್ಲಿ ರವಿ ಉಚ್ಚನಾಗಿದ್ದು ಜೊತೆಯಲ್ಲಿ ರವಿ ಇರುವುದರಿಂದ ಹಣ ಕಾಸಿನ ಸಮಸ್ಯೆ ಇರುವುದಿಲ್ಲ ಮತ್ತು ಮನಸ್ಸಿನಲ್ಲಿ ಧೈರ್ಯವಿರುತ್ತದೆ. ನಿಮ್ಮನ್ನು ನೋಡಿ ಮತ್ಸರ ಪಡುವವರಿದ್ದಾರೆ,ಎಚ್ಚರವಿರಲಿ.

ವೃಷಭ : ನಿಮ್ಮ ರಾಶಿಯ ಅಧಿಪತಿ ಶುಕ್ರ ರಾಶಿಗೆ ಬಂದಿರುವುದರಿದ ಖರ್ಚು ಇತಿಮಿತಿಯಲ್ಲಿರುತ್ತದೆ. ನೀವು ಮಾಡುತ್ತಿರುವ ಕೆಲಸದಲ್ಲಿ ಅಭಿವೃದ್ಧಿಯಾಗಲಿದೆ. ಸುಖಾಧಿಪತಿ ಪಾಟೀಲ್ ರವಿ ವ್ಯಯದಲ್ಲಿ ಇರುವುದರಿಂದ ಮನೆ ನಿವೇಶನ ವಾಹನ ಮಾರಾಟ ಮಾಡಲು ಒಳ್ಳೆಯ ಸಮಯವಾಗಿದೆ, ನಿಮ್ಮ ಮಾತಿನಲ್ಲಿ ಎಚ್ಚರವಿರಲಿ ಬರುತ್ತಿರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ.

ಮಿಥುನ :ಕರ್ಮ ಕ್ಷೇತ್ರದಲ್ಲಿ ಕುಜ ಮತ್ತು ಶನಿ ಇರುವುದು ನೀವು ಮಾಡುತ್ತಿರುವ ಉದ್ಯೋಗದಲ್ಲಿ ಒತ್ತಡವನ್ನು ನೀಡಲಿದ್ದಾರೆ. ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗುವ ಸಾಧ್ಯತೆಯೂ ಇರುತ್ತದೆ. ಪರಿಹಾರವಾಗಿ ಪ್ರತಿ ನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ಮಾರಿ ಗುಡಿಗೆ ಹೋಗುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ಕರ್ಕಾಟಕ :ಲಾಭ ಕ್ಷತ್ರದಲ್ಲಿ ಶುಕ್ರನಿರುವುದು ನಿಮಗೆ ಮನೆ ವಾಹನ ನಿವೇಶನ ಕೊಳ್ಳಲು ಅನುಕೂಲ ವಾತಾವರಣ ಉಂಟಾಗಲಿದೆ ಕರ್ಮ ಕ್ಷೇತ್ರದಲ್ಲಿ ರವಿ ಬುಧ ಜೊತೆಯಾಗಿರುವುದು ನೀವು ಪುಣ್ಯಾತ್ಮರು ಎನ್ನುವುದನ್ನು ಹೇಳುತ್ತಿದೆ. ರಾಜಕೀಯದಲ್ಲಿ ಇರುವವರು ಶ್ರೀ ರಾಮನಂತೆ ಹೆಸರು,ಗೌರವ ಪಡೆಯಲಿದ್ದಾರೆ. ಸರಕಾರಿ ಉದ್ಯೋಗ ಪಡೆಯಲಿದ್ದಾರೆ.

ಸಿಂಹ : ರವಿ ಮತ್ತು ಬುಧ ಭಾಗ್ಯದಲ್ಲಿ ಇರುವುದು,ಭಾಗ್ಯಾಧಿಪತಿ ಕುಜ ಶನಿಯೊಂದಿಗೆ ಅಷ್ಟಮದಲ್ಲಿ ಇರುವುದು ನಿಮ್ಮ ಹಿರಿಯರಿಗೆ ಅನಾರೋಗ್ಯ ಉಂಟಾಗುವ ಸಾಧ್ಯತೆಯನ್ನು ಸೂಚಿಸುತ್ತಿದ್ದಾರೆ. ನೀವು ನಿಮ್ಮ ಸಂಗಾತಿಯೊಂದಿಗೆ ಮಾಡುತ್ತಿರುವ ಕಲಹ ಮುಂದುವರಿಯಲಿದೆ. ಕೋರ್ಟ್ ಮೆಟ್ಟಲೇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕನ್ಯಾ : ಸಪ್ತಮದಲ್ಲಿ ಕುಜ ಮತ್ತು ಶನಿ ಅಷ್ಟಮದಲ್ಲಿ ವ್ಯಾಯಾಧಿಪತಿ ರವಿಯೊಂದಿಗೆ ಬುಧನಿರುವುದು ನಿಮಗೆ ಬಿ ಪಿ ಹೃದಯ ಅನಾರೋಗ್ಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೇಡವಾದ ಯೋಚನೆಗಳಿಂದ ಹೊರಗೆ ಬನ್ನಿರಿ, ಆಹಾರವನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿರಿ. ಪಿತ್ತ ಕಾಯಿಲೆ,ಹೊಟ್ಟೆ ಉಬ್ಬರ ಸಮಸ್ಯೆ ಬರಲಿದೆ. ಸಂಗಾತಿಯೊಂದಿಗೆ ಬೇಸರ ಬರಲಿದೆ.

ತುಲಾ :ನಿಮ್ಮ ರಾಶಿಯ ಅಧಿಪತಿ ಶುಕ್ರ ಅಷ್ಟಮದಲ್ಲಿ ಇರುವುದರಿಂದ ಭಾವ ಬಲ ಇರುವುದಿಲ್ಲ. ಭಯವೊಂದು ನಿಮ್ಮನ್ನು ಆವರಿಸಲಿದೆ. ಕುಟುಂಬದಲ್ಲಿ ಮನಸ್ತಾಪ ಹಣಕಾಸಿನ ವಿಷಯದಲ್ಲಿ ಸಮಸ್ಯೆ ಇರಲಿದೆ. ಪಂಚಮದಲ್ಲಿ ರಾಹು ಇರುವುದರಿಂದ ನಾಗ ದೇವರ ಯಥಾ ಶಕ್ತಿ ಆರಾಧನೆ ಅಗತ್ಯವಿದೆ. ಜೂನ್ ನಂತರ ಗುರು ಬಲ ಕಡಿಮೆಯಾಗಲಿದೆ.

ವೃಶ್ಚಿಕ :ಪಂಚಮದಲ್ಲಿ ಕುಜ ಶನಿ ಇರುವುದರಿಂದ ದಿನಾಂಕ 11 ರ ವರೆಗೆ ಮಕ್ಕಳ ವಿಷಯದಲ್ಲಿ ಮನಸ್ಸಿಗೆ ಬೇಸರವಿರುತ್ತದೆ ಬಂಧು ವರ್ಗದವರಿಂದ ಕಿರಿ ಕಿರಿ ಇರುತ್ತದೆ. ಗುರುವಿನ ದೋಷ ಪರಿಹಾರಕ್ಕಾಗಿ ಕಡಲೆ ಬೆಲ್ಲ ಸಕ್ಕರೆ ಪ್ರತಿ ನಿತ್ಯ ಗೋವುಗಳಿಗೆ ಕೊಡುತ್ತಾ ಬರಬೇಕು ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಕಿರಿ ಕಿರಿ ಅನುಭವಿಸಲಿದ್ದಾರೆ.

ಧನು : ನಿಮ್ಮ ರಾಶಿಯ ಅಧಿಪತಿ ಗುರು ಸಪ್ತಮದಲ್ಲಿ ಇರುವುದರಿಂದ ಗುರುವಿನ ಅನುಗ್ರಹವಿರುತ್ತದೆ ಹಣ ಕಾಸಿನ ವಿಷಯದಲ್ಲಿ ಕುಟುಂಬದಲ್ಲಿ ವಾದ ವಿವಾದ ಇರುತ್ತದೆ. ನಿಮ್ಮ ಮಾತು ಹಿಡಿತದಲ್ಲಿ ಇರಬೇಕು. ಶನಿ ಕುಜ ಜೊತೆಯಲ್ಲಿ ಇರುವುದರಿದ ಕೆಟ್ಟ ಮಾತುಗಳು ಬರುವ ಸಾಧ್ಯತೆ ಇರುತ್ತದೆ. ಪಂಚಮದಲ್ಲಿ ರವಿ ಬುಧ ಇರುವುದರಿಂದ ಮಕ್ಕಳಲ್ಲಿ ಕಲಹ ಬರದಂತೆ ವ್ಯವಹಾರವಿರಲಿ.

ಮಕರ :ಸುಖಾಧಿಪತಿ ಕುಜ ಶನಿಯೊಂದಿಗೆ ತೃತೀಯಾದಲ್ಲಿ ಇರುವುದರಿಂದ ನಿಮ್ಮ ಮನಸ್ಸಿನಲ್ಲಿ ಕೆಲವೊಂದು ಬೇಸರಗಳು ಕೊರೆಯುತ್ತಾ ಇರುತ್ತದೆ. ಉದ್ವೇಗ ನಿಮ್ಮಲ್ಲಿರುತ್ತದೆ. ಶುಕ್ರ ಪಂಚಮದಲ್ಲಿ ಇರುವುದರಿಂದ ಸಂತಾನ ಲಾಭದ ನಿರೀಕ್ಷೆಯಲ್ಲಿ ಇರುವವರಿಗೆ ಕನ್ಯಾ ಮಣಿ ಬರಲಿದ್ದಾಳೆ. ಜೂನ್ ಆರಂಭದಿಂದ ಶುಭ ಕಾಲ ಆರಂಭವಾಗಲಿದೆ.

ಕುಂಭ : ದ್ವಿತೀಯಾದಲ್ಲಿ ಕರ್ಮಾಧಿಪತಿ ಕುಜ ಶನಿಯೊಂದಿಗೆ ಇರುವುದರಿಂದ ಕುಟುಂಬದ ಜವಾಬ್ದಾರಿ ಹೆಚ್ಚಾಗಲಿದೆ. ಮಾತಿನಿಂದ ನಿಷ್ಟುರ ಹೆಚ್ಚಾಗಲಿದೆ. ಮುಂದಿನ 11 ರವರೆಗೆ ಎಚ್ಚರವಾಗಿರಿ, ಶುಕ್ರ ಸುಖ ಭಾವದಲ್ಲಿ ಇರುವುದರಿಂದ ಹೊಸ ವಾಹನ ನಿವೇಶನ ಖರೀಧಿ ಮಾಡುವ ಯೋಗವಿದೆ. ನಾಗ ದೇವರ ಯಥಾ ಶಕ್ತಿ ಆರಾಧನೆ ನಡೆಯಲಿ.

ಮೀನಾ : ಜನ್ಮ ರಾಶಿಯಲ್ಲಿ ಕುಜ ಶನಿ ಜೊತೆಯಲ್ಲಿ ಇರುವುದರಿಂದ ನಿಮ್ಮ ಉದ್ಯೋಗದಲ್ಲಿ ಉತ್ತಮ ಪರಿಶ್ರಮ ಆಗತ್ಯವಿದೆ. ಹೊಟ್ಟೆ ಉಬ್ಬರದ ಸಮಸ್ಯೆ ಕಾಡ ಲಿದೆ. ಯೋಗ ಪ್ರಾಣಾಯಮದ ಅಗತ್ಯವಿದೆ. ಮುಂದಿನ ಜೂನ್ ಆರಂಭದಿಂದ ಉತ್ತಮ ದೈವಾನುಗ್ರಹ ಆರಂಭವಾಗಲಿದೆ.ಉದ್ಯೋಗ, ಭಡ್ತಿ, ಉತ್ತಮ ಸಂಬಳ ಪ್ರಾಪ್ತಿ ಯೋಗವಿದೆ.

ಕಂಪ್ಯೂಟರ್ ಜಾತಕ,ವಾಸ್ತು ವಿವಾಹ ಹೊಂದಾಣಿಕೆ,ಶುಭ ಮುಹೂರ್ತ,ಕವಡೆ ಪ್ರಶ್ನೆ ಸಲಹೆಗಳಿಗೆ ಸಂಪರ್ಕಿಸಿರಿ…

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top