ವಾರಭವಿಷ್ಯ: 31.05.2026 ರಿಂದ 06.06.2026ರ ತನಕ
ವಿಶೇಷ ದಿನಗಳು :02.06.2026…. ಗುರು ಕರ್ಕಾಟಕ ರಾಶಿಗೆ ಪ್ರವೇಶ
ಮೇಷ :ನಿಮ್ಮ ಹಲವು ದಿನಗಳ ಆಸೆ ಈಡೇರುವ ವಾರವಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆಗೆ ಮನ್ನಣೆ ಸಿಗಲಿದೆ. ಸಾಡೇ ಸಾತ್ಶನಿಯ ಪ್ರಭಾವ ಮುಂದುವರಿದಿರುವುದರಿಂದ ಹಣ ಕಾಸಿನ ವಿಷಯದಲ್ಲಿ ಜಾಣ್ಮಯಿಂದ ವರ್ತಿಸಿರಿ. ನೂತನ ಮನೆ, ವಾಹನ, ಕೊಳ್ಳುವ ಯೋಗ ಕೂಡಿ ಬಂದಿದೆ.
ವೃಷಭ : ದೈವಾನುಗ್ರಹದ ಕೊರತೆ ನಿಮ್ಮ ಗಮನಕ್ಕೆ ಬರಲಿದೆ. ವ್ಯವಹಾರ ಕ್ಷೇತ್ರದಲ್ಲಿ ಹೊಸ ವ್ಯವಹಾರವೊಂದು ನಷ್ಟಕ್ಕೆ ಕಾರಣವಾಗಲಿದೆ. ಉದ್ಯೋಗದಲ್ಲಿ ಉತ್ತಮ ಅವಕಾಶಗಳಿವೆ. ಅಧ್ಯಯನ ಮಾಡುವವರು ಎಚ್ಚರವಹಿಸಿರಿ. ದಾಂಪತ್ಯ ಜೀವನದಲ್ಲಿ ಕುಜ ಅಸಮಾಧಾನವನ್ನು ತರಲಿದ್ದಾನೆ.
ಮಿಥುನ : ನಿಮ್ಮ ಪರಿಶ್ರಮಕ್ಕೆ ಸೂಕ್ತವಾದ ಪ್ರತಿಫಲವನ್ನು ಗುರು ನೀಡಲಿದ್ದಾನೆ. ರಾಜಕೀಯದಲ್ಲಿರುವವರಿಗೆ ಸೂಕ್ತವಾದ ಗೌರವ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳನ್ನು ಶನಿ ನೀಡಲಿದ್ದಾನೆ. ಧಾರ್ಮಿಕ ಚಿಂತನೆಗಳಿಂದ ಮನೋ ಧೈರ್ಯ ಹೆಚ್ಚಾಗಲಿದೆ.
ಕರ್ಕಾಟಕ : ರಾಹು ಅಷ್ಟಮದಲ್ಲಿ ಇರುವುದರಿಂದ ಅನಾರೋಗ್ಯ ಭಾದೆ ಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಎಚ್ಚರವಿರಲಿ. ಹೊಸ ಪರಿಚಯಗಳು ಭವಿಷ್ಯಕ್ಕೆ ಪೂರಕ ವಾತಾವರಣ ನಿರ್ಮಿಸಲಿದೆ. ಮಹಿಳೆಯರ ಜೊತೆಗೆ ಎಚ್ಚರದಿಂದ ಇರುವುದು ಒಳ್ಳೆಯದು. ನಿಮ್ಮ ಗೌರವವನ್ನು ಉಳಿಸಿ ಕೊಳ್ಳಿರಿ.
ಸಿಂಹ : ಗುರುವಿನ ಅನುಗ್ರಹ ನಿಮಗಿರುವುದಿಲ್ಲ. ದಾಂಪತ್ಯ ಜೀವನದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಅಗತ್ಯವಿದೆ, ನ್ಯಾಯಾಲಯದ ಮೆಟ್ಟಲು ಹತ್ತುವ ಸಾಧ್ಯತೆಯೂ ಇರುತ್ತದೆ. ವೃತ್ತಿಯಲ್ಲಿ ಹಿರಿಯರ ಮಾರ್ಗ ದರ್ಶನ ನಿಮಗೆ ಅಗತ್ಯವಿದೆ. ಆರೋಗ್ಯದಲ್ಲಿ ಏರುಪೇರುಗಳಾಗುವ ಸಾಧ್ಯತೆ ಇರುತ್ತದೆ. ತಿರುಗಾಟ,ಆಹಾರ ಸೇವನೆಯ ಬಗ್ಗೆ ಎಚ್ಚರವಿರಲಿ.
ಕನ್ಯಾ : ಸಪ್ತಮದಲ್ಲಿ ಶನಿ ಅಷ್ಟಮದಲ್ಲಿ ಕುಜನಿರುವಾಗ ಮಾನಸಿಕ, ಶಾರೀರಿಕ ನೆಮ್ಮದಿ ಸಿಗಲು ಸಾಧ್ಯವೇ ಇಲ್ಲ. ಎಲ್ಲಾ ವಿಷಯಗಳಲ್ಲಿ ಸಮತೋಲನದ ಭಾವನೆಯನ್ನು ಬೆಳೆಸಿಕೊಳ್ಳಿರಿ. ಗುರುವಿನ ಅನುಗ್ರಹ ಪ್ರಾಪ್ತಿಯಾಗಿದೆ. ಶುಭಸಮಾರಂಭಗಳು ನಡೆಯಲಿವೆ.
ತುಲಾ : ಗುರುವಿನ ಅನುಗ್ರಹದಲ್ಲಿ ಕೊರತೆಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಬಗ್ಗೆ ಎಚ್ಚರದಿಂದಿರಲು ಶುಕ್ರ ಸೂಚನೆ ನೀಡುತ್ತಿದ್ದಾನೆ. ಹಣ ಕಾಸಿನ ವಿಚಾರದಲ್ಲಿ ಎಚ್ಚರವಿರಲಿ. ಆರೋಗ್ಯದಲ್ಲಿ ಎಚ್ಚರವಿರಲಿ. ಪಂಚಮದ ರಾಹು ಮಕ್ಕಳಲ್ಲಿ ಬೇಸರ ಬರುವಂತೆ ಮಾಡಲಿದ್ದಾನೆ.
ವೃಶ್ಚಿಕ : ಎಷ್ಟೋ ವರ್ಷಗಳ ಕಷ್ಟಗಳಿಂದ ಹೊರ ಬಂದ ಅನುಭವ ನಿಮಗೆ ಬರಲಿದೆ. ಪಂಚಮದ ಶನಿಗೆ ಸುಖ ಭಾವದಲ್ಲಿರುವ ರಾಹುವಿಗೆ ಯಥಾ ಶಕ್ತಿ ಪರಿಹಾರ ಅಗತ್ಯವಿದೆ, ರಾಜಕೀಯ ಗಣ್ಯರಿಗೆ ಹೊಸ ಪದವಿ ಪ್ರಾಪ್ತಿಯಾಗಲಿದೆ. ಧೈರ್ಯ ಮತ್ತು ಶ್ರಮವೇ ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ.
ಧನು : ಗುರುವಿನ ಅನುಗ್ರಹದ ಕೊರತೆ ನಿಮ್ಮ ಗಮನಕ್ಕೆ ಬರಲಿದೆ. ಮಾನಸಿಕವಾಗಿ ಶಾರೀರಿಕವಾಗಿ ಬಳಲುವ ಸಾಧ್ಯತೆ ಇರುತ್ತದೆ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು, ಮೃತ್ಯುಂಜಯ ಜಪ ಮಾಡಿರಿ. ನಿಮ್ಮ ದೇಹಕ್ಕೆ, ಮನಸ್ಸಿಗೆ ವಿಶ್ರಾಂತಿ ಅಗತ್ಯವಿದೆ.
ಮಕರ : ಗುರುವಿನ ಅನುಗ್ರಹ ಪ್ರಾಪ್ತಿಯಾಗಿದೆ. ದಾಂಪತ್ಯದಲ್ಲಿ ಎಚ್ಚರ ಇರಲಿ. ಕೆಲಸದ ಒತ್ತಡಗಳು ಅತಿಯಾಗಿದ್ದರೂ ಚುರುಕುತನದಿಂದ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವಿರಿ, ಕುಟುಂಬದಲ್ಲಿ ಸಂತೋಷದ ಕ್ಷಣಗಳು ಮೂಡಿ ಬರಲಿವೆ. ಮಕ್ಕಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಸಾಧಿಸಲಿದ್ದಾರೆ. ಉದರ ಸಂಬಂಧಿ ಸಮಸ್ಯೆ ಕಾಡಲಿದೆ.
ಕುಂಭ : ದೈವಾನುಗ್ರಹದ ಕೊರತೆ ಆರಂಭವಾಗಿದೆ. ಸಾಡೇ ಸಾತ್ ಶನಿಯ ಒತ್ತಡ ಮುಂದುವರಿಯಲಿದೆ. ಹೊಸ ಅವಕಾಶಗಳು ನಿಧಾನಗತಿಯನ್ನು ಪಡೆಯಲಿವೆ. ದೇವತಾ ಆರಾಧನೆಯಿಂದ ಯಶಸ್ಸನ್ನು ಗಳಿಸುವಿರಿ, ರಾಜಕೀಯದಲ್ಲಿ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇರುತ್ತದೆ.
ಮೀನಾ : ಕುಟುಂಬದಲ್ಲಿ ನಿಮ್ಮ ಮಾತಿಗೆ ಮನ್ನಣೆ ಹೆಚ್ಚಾಗಲಿದೆ. ಗುರುವಿನ ಅನುಗ್ರಹ ಪ್ರಾಪ್ತಿಯಾಗಿರುವುದರಿಂದ ಮನೆಯಲ್ಲಿ ಕಲಹದ ವಾತಾವರಣ ಸ್ತಿಮಿತಕ್ಕೆ ಬರಲಿದೆ. ವಿಷ್ಣು ಲಕ್ಷ್ಮಿ ದೇವರ ಆರಾಧನೆಯಿಂದ ಉತ್ತಮ ಯಶಸ್ಸು ಪ್ರಾಪ್ತಿಯಾಗಲಿದೆ. ಇಮ್ಮ ಕಾರ್ಯ ಪ್ರವೃತ್ತಿಯಲ್ಲಿ ಅಭಿವೃದ್ಧಿ ಕಂಡು ಬರಲಿದೆ.



























