

ವಾರಭವಿಷ್ಯ (01.03.2026 ರಿಂದ 07.03.2026)
ವಿಶೇಷ ದಿನಗಳು
01.03.2026 – ಮೀನ ರಾಶಿಗೆ ಶುಕ್ರನ ಪ್ರವೇಶ
03.03.2026 – ಪೂರ್ಣಿಮಾ ಚಂದ್ರ ಗ್ರಹಣ
ಮೇಷ
ಕುಟುಂಬದಲ್ಲಿದ್ದ ಮನಸ್ತಾಪಗಳು ನಿವಾರಣೆಯಾಗುವ ಸಾಧ್ಯತೆ ಇದೆ. ವ್ಯಯ ಸ್ಥಾನದಲ್ಲಿ ಶನಿಯ ಜೊತೆಗೆ ಶುಕ್ರ ಪ್ರವೇಶಿಸಿದ್ದು, ಭಾವನಾತ್ಮಕ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ. ಹಠ, ಗರ್ವಗಳನ್ನು ಕಡಿಮೆ ಮಾಡುವುದು ಒಳಿತು. ಲಕ್ಷ್ಮೀ ನರಸಿಂಹ ದೇವರ ಶ್ಲೋಕ ಪಾರಾಯಣ ಶುಭಕರ.
ವೃಷಭ
ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳಲಿವೆ. ಲಾಭ ಕ್ಷೇತ್ರದಲ್ಲಿ ಗ್ರಹಗಳ ಚಲನೆ ಉತ್ತಮ ಫಲ ನೀಡಲಿದೆ. ದ್ವಿತೀಯದಲ್ಲಿರುವ ಗುರು ಅನುಗ್ರಹದಿಂದ ಬಟ್ಟೆ, ಚಿನ್ನ-ಬೆಳ್ಳಿ ವ್ಯಾಪಾರಿಗಳಿಗೆ ಲಾಭ. ಹೊಸ ಉದ್ಯೋಗ ನಿರೀಕ್ಷೆಯವರು ಮೆಚ್ಚಿನ ಅವಕಾಶ ಪಡೆಯುವ ಸಾಧ್ಯತೆ ಇದೆ.
ಮಿಥುನ
ಅತಿಯಾದ ಲೆಕ್ಕಾಚಾರ ಸಂಬಂಧಗಳಲ್ಲಿ ಅಂತರ ತರಬಹುದು. ಉದ್ಯೋಗದಲ್ಲಿ ಕಿರಿಕಿರಿ. ತಾಳ್ಮೆ ಅಗತ್ಯ. ಆರೋಗ್ಯದಲ್ಲಿ ಸುಧಾರಣೆ. ಭೂಮಿ ವ್ಯವಹಾರಿಗಳಿಗೆ ಅವಕಾಶ. ವಿಷ್ಣು ಸಹಸ್ರನಾಮ ಪಾರಾಯಣ ಒಳಿತು.
ಕರ್ಕಾಟಕ
ಪಂಚಗ್ರಹಗಳ ಒತ್ತಡದಿಂದ ನಿಧಾನವಾಗಿ ನಿವಾರಣೆ. ಹಣಕಾಸಿನ ನಿಯಂತ್ರಣ ಅಗತ್ಯ. ತಲೆ/ಹೊಟ್ಟೆ ಆರೋಗ್ಯ ಗಮನಿಸಿ. ಅಗ್ನಿ, ಶಸ್ತ್ರ ವಿಷಯದಲ್ಲಿ ಎಚ್ಚರ. ಮೃತ್ಯುಂಜಯ ಮಂತ್ರ ಜಪ ಶುಭಕರ.
ಸಿಂಹ
ಮಕ್ಕಳ ಶಿಕ್ಷಣಕ್ಕೆ ಗಮನ ಕೊಡಿ. ಅಹಂಕಾರ ಬಿಡಿ. ಪರಿಶ್ರಮದಿಂದ ಅಸಾಧ್ಯ ಕಾರ್ಯ ಸಾಧನೆ. ಪಿತ್ತ ಸಂಬಂಧಿ ಸಮಸ್ಯೆಗಳು ಸಾಧ್ಯ. ಸಮಯಕ್ಕೆ ಊಟ-ನಿದ್ರೆ. ನೀರು ಸೇವನೆ ಹೆಚ್ಚಿಸಿ.
ಕನ್ಯಾ
ಮನಸ್ಸಿನ ಚಂಚಲತೆಗೆ ಧ್ಯಾನ ಪರಿಹಾರ. ಮಕ್ಕಳಿಂದ ಶುಭ ಸುದ್ದಿ. ಆದಾಯದಲ್ಲಿ ಬದಲಾವಣೆ. ದಾಂಪತ್ಯದಲ್ಲಿ ಅಸಮಾಧಾನ ಸಾಧ್ಯ. ಪದ್ಮಾವತಿ ವೆಂಕಟ್ರಮಣ ದರ್ಶನ ಶುಭಕರ.
ತುಲಾ
ಉತ್ತಮ ಅವಕಾಶಗಳು ಲಭಿಸಬಹುದು. ಪ್ರಾಮಾಣಿಕತೆ ಯಶಸ್ಸಿಗೆ ದಾರಿ. ಆಪ್ತರಿಂದ ಬೇಸರ. ದಾಂಪತ್ಯ ವಿಷಯದಲ್ಲಿ ಮನಸ್ತಾಪ ಸಾಧ್ಯ.
ವೃಶ್ಚಿಕ
ಮೌನಾಚರಣೆ ಒಳಿತು. ನಿಮ್ಮವರಿಂದ ದೂರಾವಕಾಶ ಸಾಧ್ಯ. ವಾಹನ ಚಾಲನೆ ವೇಳೆ ಎಚ್ಚರ. ಬೆಂಕಿ, ವಿದ್ಯುತ್, ವಿಷಜಂತುಗಳಿಂದ ಜಾಗ್ರತೆ. ನರಸಿಂಹ ದೇವರ ಶ್ಲೋಕ ಜಪ ಅಗತ್ಯ.
ಧನು
ಸುಖ ಸ್ಥಾನದಲ್ಲಿ ಗ್ರಹಗಳ ಸಂಯೋಗ ಎಚ್ಚರಿಕೆ ಸೂಚನೆ. ವಿಷ್ಣು ಸಹಸ್ರನಾಮ ಜಪ ಒಳಿತು. ವಾಹನ ಚಾಲಕರು ಮದ್ಯಪಾನದಿಂದ ದೂರಿರಿ. ಮೊಬೈಲ್ ಬಳಕೆ ತಪ್ಪಿಸಿ.
ಮಕರ
ದೈವಾನುಗ್ರಹ ಕಡಿಮೆಯಿದ್ದರೂ ಆದಾಯ ಹೆಚ್ಚಳ. ಉದ್ಯೋಗ/ವ್ಯವಹಾರದಲ್ಲಿ ಅದೃಷ್ಟ. ಅನಗತ್ಯ ಚಿಂತೆಯಿಂದ ದೂರಿರಿ. ಆಂಜನೇಯ ಪ್ರಾರ್ಥನೆ ಬುಧವಾರ, ಶನಿವಾರ ಮಾಡಿ.
ಕುಂಭ
ವಿದ್ಯಾರ್ಥಿಗಳಿಗೆ ಹೊಸ ಅವಕಾಶ. ಉದ್ಯೋಗ ಸಮಸ್ಯೆ ನಿವಾರಣೆ. ದಾಂಪತ್ಯ ಹೊಂದಾಣಿಕೆಯಲ್ಲಿ ವ್ಯತ್ಯಾಸ. ದುರ್ಗಾ ಪರಮೇಶ್ವರಿ ಸೇವೆ ಶುಭಕರ. ಆರೋಗ್ಯದ ಕಡೆ ಗಮನ.
ಮೀನ
ಹೊಸ ವ್ಯವಹಾರ ಆರಂಭಕ್ಕೆ ಹೆಚ್ಚಿನ ಯೋಚನೆ ಅಗತ್ಯ. ಸಹೋದರರೊಂದಿಗೆ ಮನಸ್ತಾಪ. ಮಕ್ಕಳಿಗೆ ಮಾರ್ಗದರ್ಶನ ಅಗತ್ಯ. ವೃತ್ತಿಯಲ್ಲಿ ಬದಲಾವಣೆ ಸಾಧ್ಯ. ಜೂನ್ 2 ನಂತರ ಮಹತ್ತರ ಪರಿವರ್ತನೆ.






































