ವಾರಭವಿಷ್ಯ ದಿನಾಂಕ 31.08.2025 80 06.09.2025
ಮೇಷ :ಮನೆ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಲಿದೆ. ಆಸ್ತಿ ಸಂಬಂಧ ಕೋರ್ಟ್ -ಕಚೇರಿ ಅಲೆದಾಟ ಇರುತ್ತದೆ ಹೊಸ ಉದ್ಯಮ ಆರಂಭಕ್ಕೆ ಇದು ಸಕಾಲವಾಗಿದೆ.ಅನಾವಶ್ಯಕ ಅಪವಾದಗಳೂ ಅವಮಾನಗಳು ಎದುರಾದರೂ ಧೈರ್ಯಗೆಡಬೇಡಿರಿ. ಮನೆಯಲ್ಲಿ ಮಂಗಳ ಕಾರ್ಯ ನಡೆಯುವ ಸಾಧ್ಯತೆ ಇರುತ್ತದೆ ಕೃಷಿಕರಿಗೆ ಹೆಚ್ಚಿನ ಅಭಿವೃದ್ಧಿಗೆ ಅವಕಾಶವಿರುತ್ತದೆ ಸಾಡೇ ಸಾತ್ ಶನಿಯ ದೋಷಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ,
ವೃಷಭ :ಆಕಸ್ಮಿಕ ಧನಲಾಭ ಬಂದರೂ ಹಳೆಯ ಸಾಲ ನಿರಾಶೆಯನ್ನು ಉಂಟು ಮಾಡಲಿದೆ. ಹೊಸ ಉದ್ಯೋಗ ಅವಕಾಶಗಳು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸಲಿದೆ. ಆತುರದ ನಿರ್ಧಾರ ಬೇಡ, ಹಿರಿಯರ ಮಾರ್ಗದರ್ಶನದಂತೆ ಮುನ್ನೆಡೆದರೆ ಅಭಿವೃದ್ಧಿ ಇರುತ್ತದೆ ಅದೃಷ್ಟ ಲಕ್ಷ್ಮಿ ನಿಮ್ಮ ಜೊತೆಯಲ್ಲಿಯೇ ಇರುತ್ತಾಳೆ. ದ್ವಿತೀಯದ ಗುರು ಉತ್ತಮ ದೈವಾನುಗ್ರಹವನ್ನು ನೀಡುತ್ತಿದ್ದಾನೆ. ಮನೆ ವಾಹನ ಭೂಮಿ ಖರೀಧಿಯ ಯೋಗವಿದೆ. ಮಕ್ಕಳ ವಿಷಯದಲ್ಲಿ ಎಚ್ಚರವಿರಲಿ, ಶನಿ ಅದೃಷ್ಟದ ಬಾಗಿಲನ್ನು ತೆರೆದಿರುತ್ತಾನೆ.
ಮಿಥುನ : ಸರಕಾರಿ ಕೆಲಸ ಕಾರ್ಯಗಳಲ್ಲಿ ಜಯವನ್ನು ಹೊಂದುವಿರಿ, ಹೊಸ ಉದ್ಯೋಗಿಗಳನ್ನು ನಿಯೋಜನೆ ಮಾಡಲಿದ್ದೀರಿ. ಕೌಟುಂಬಿಕ ವಿಚಾರಕ್ಕೆ ಹೊರಗಿಯವರ ಹಸ್ತಕ್ಷೇಪಕ್ಕೆ ಅವಕಾಶ ಕೊಡಬೇಡಿರಿ, ವ್ಯಾಪಾರ-ವ್ಯವಹಾರಗಳಲ್ಲಿ ಆದಾಯ ಹೆಚ್ಚಿದರೂ ಖರ್ಚು ಹೆಚ್ಚು ಜಾಗತಿಕ ಮಟ್ಟದಲ್ಲಿ ಹೊಸ ಹೂಡಿಕೆಗಳು ಲಾಭದಾಯಕವಾಗಿರುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ.
ಕರ್ಕಾಟಕ :ವ್ಯಯದ ಗುರು ಅಷ್ಟಮದ ರಾಹು ಪ್ರತಿಕೂಲ ಸ್ಥಿತಿಯಲ್ಲಿ ಇದ್ದು ಪರಿಹಾರದ ನಿರೀಕ್ಷೆಯಲ್ಲಿ ಇದ್ದಾರೆ.ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ವಾತಾವರಣವಿರುತ್ತದೆ. ಕಲೆ ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ಸ್ಥಾನ -ಮಾನ ಗೌರವ ಹೆಚ್ಚಾಗಲಿದೆ, ಹೊಸ ಮಿತ್ರರುಗಳಿಂದ ಸಹಾಯ ಸಹಕಾರ ದೊರೆಯುತ್ತದೆ. ನಿಮ್ಮ ಕಾರ್ಯ ವೈಖರಿ, ವಿವೇಚನಾ ಶಕ್ತಿಯಿಂದ ಕ್ಲಿಷ್ಟ ಕಾರ್ಯಗಳು ಸಫಲವಾಗುತ್ತವೆ. ಆಹಾರ ಸೇವನೆಯಲ್ಲಿ ಜಾಗ್ರತೆಯಲ್ಲಿರುವಂತೆ ಚಂದ್ರ ತಿಳಿಸುತ್ತಿದ್ದಾನೆ.
ಸಿಂಹ : ಆರ್ಥಿಕ ನಷ್ಟಗಳು ಕಡಿಮೆಯಾಗಲಿವೆ.ಸೂಕ್ತ ಯೋಜನೆ ರೂಪಿಸಿ ಮುಂದುವರಿದರೆ ಕಾರ್ಯ ಸಿದ್ದಿ ಯೋಗ ನಿಮಗೆ ಪ್ರಾಪ್ತಿಯಾಗಲಿದೆ. ಧ್ಯಾನ ಪ್ರಾಣಾಯಾಮದಿಂದ ಮನಸ್ಸಿನ ಗೊಂದಲ ನಿವಾರಣೆ ಆಗಲಿದೆ, ದೀರ್ಘ ಕಾಲದ ಗೆಳೆತನವು ಮುಂಗೋಪದಿಂದಾಗಿ ಮುರಿದು ಬೀಳಲಿದೆ. ಕೌಟುಂಬಿಕವಾಗಿ ಮನಸ್ತಾಪಗಳು ಬರುವಂತೆ ರಾಹು ಮಾಡಲಿದ್ದಾನೆ. ಉತ್ತಮ ದೈವಾನುಗ್ರಹ ಇರುವ ಸಮಯವಾಗಿದೆ. ಕುಜ ಚಂದ್ರ ರಾಹು ಶನಿ ಪರಿಹಾರದ ನಿರೀಕ್ಷೆಯಲ್ಲಿದಾರೆ.
ಕನ್ಯಾ : ವ್ಯಯದಲ್ಲಿ ರವಿ ಬುಧ ಕೇತು ಇದ್ದಾರೆ. ಆದಾಯದ ದಾರಿಯಲ್ಲಿಯೇ ವ್ಯರ್ಥ ಖರ್ಚುಗಳು ಕಾಯುತ್ತಿವೆ. ಒಂದು ಕಾಲದಲ್ಲಿ ರಾಜನಂತೆ ಮೆರೆಯುತ್ತಿದ್ದ ನೀವು ಇಂದು ಪಾತಾಳಕ್ಕೆ ಇಳಿದ ಅನುಭವನ್ನು ಶನಿ ತೋರಿಸಲಿದ್ದಾನೆ. ಪ್ರೀತಿಪಾತ್ರರ ಜೊತೆಗೆ ವಿರಸಗಳು ಬರಲಿವೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳು ಅಪವಾದಗಳನ್ನು ಹಾಕಲಿದ್ದಾರೆ. ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದು ಮಾಡಲು ಹೋಗಬೇಡಿರಿ, ವಿದ್ಯಾರ್ಥಿಗಳು ಎಚ್ಚರವಾಗಿರಿ.
ತುಲಾ : ಗುರು ಭಾಗ್ಯದಲ್ಲಿ ಇದ್ದು ಎಲ್ಲ ದೋಷಗಳ ನಿವಾರಣೆಯನ್ನು ಮಾಡಲಿದ್ದಾನೆ. ಕುಜ ವ್ಯಯದಲ್ಲಿ ಇದ್ದುಕೊಂಡು ದಾಂಪತ್ಯದಲ್ಲಿ ಸಣ್ಣ ಮಟ್ಟಿನ ವಿರಸವನ್ನು ತರಲಿದ್ದಾನೆ. ಹೊಸ ಉದ್ಯೋಗ ಪ್ರಾಪ್ತಿ ಯೋಗವಿದೆ, ಸುಖ ಸ್ಥಾನದಲ್ಲಿ ಮಾಂದಿ ಇರುವಾಗ ಮನಸ್ಸಿಗೆ ನೆಮ್ಮದಿ ಎಲ್ಲಿಂದ ಬರಬೇಕು, ಆದಾಯಕ್ಕೆ ಸರಿಯಾಗಿರುವ ಖರ್ಚು ಮಾಡುವ ಜಾಣ್ಮ ನಿಮ್ಮಲ್ಲಿರಲಿ. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿ ಬರಲಿದೆ. ಉದ್ಯಮ ಕ್ಷೇತ್ರವನ್ನು ಒಳ್ಳೆಯ ರೀತಿಯಲ್ಲಿ ವಿಸ್ತರಿಸಲು ಅವಕಾಶ ಸಿಗಲಿದೆ.
ವೃಶ್ಚಿಕ : ಅನಿರೀಕ್ಷಿತ ಬದಲಾವಣೆಗಳನ್ನು ಎದುರಿಸಲು ಸಿದ್ಧರಾಗಿರಿ. ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಹೊಸ ಪ್ರಯೋಗವನ್ನುಮಾಡುತ್ತಾ ಉತ್ತಮ ಲಾಭವನ್ನು ಗಳಿಸುವಿರಿ, ಆಹಾರದ ಸೇವನೆಯಲ್ಲಿ ಇತಿಮಿತಿ ಇರಲಿ ನಿಮ್ಮ ಆರೋಗ್ಯದ ಗುಟ್ಟು ನಿಮಗೆ ಮಾತ್ರಾ ತಿಳಿದಿರುತ್ತದೆ. ಹಿರಿಯರ ಕಿವಿಮಾತು ನಿಮಗೆ ಅಗತ್ಯವಿರುತ್ತದೆ. ಹಿತೈಷಿಗಳ ಆಗಮನವಾಗಲಿದೆ. ಧರ್ಮ ಕಾರ್ಯಗಳಲ್ಲಿ ನೀವು ಎಷ್ಟೇ ಪ್ರಯತ್ನಿಸಿದರೂ ನಿಮ್ಮವರೇ ಅದಕ್ಕೆ ಅಡ್ಡಗಾಲು ಹಾಕಲಿದ್ದಾರೆ.
ಧನು : ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯವೃದ್ಧಿ ಮಾನಸಿಕ ನೆಮ್ಮದಿ ಸಿಗಲಿದೆ. ಮಕ್ಕಳ ವಿಷಯದಲ್ಲಿ ಅತಿಯಾದ ಹಿಡಿತ ಒಳ್ಳೆಯದಲ್ಲ ಆಪ್ತ ಸ್ನೇಹಿತರ ಮೇಲಿನ ನಂಬಿಕೆ ಕಳೆದುಕೊಳ್ಳುವ ಪ್ರಸಂಗ ಬರಬಹುದು. ಕ್ರೀಡಾ ಕ್ಷೇತ್ರದಲ್ಲಿ ಇರುವವರು ಹೆಚ್ಚಿನ ಪ್ರಗತಿಯನ್ನು ಹೊಂದಲಿದ್ದಾರೆ ಚಿಂತಿಸಿದ ಕಾರ್ಯಗಳು ದೈವ ಬಲದಿಂದ ಸಫಲವಾಗಲಿದೆ. ಸುಖ ಸ್ಥಾನದ ಶನಿ ನಿಮ್ಮ ಯಾವುದೇ ದೈನಂದಿನ ವ್ಯವಹಾರಗಳಲ್ಲಿ ಎಚ್ಚರದಿಂದ ಇರುವಂತೆ ಎಚ್ಚರಿಸುತ್ತಿರುತ್ತಾನೆ.
ಮಕರ :ತಾಳ್ಮೆಯಿಂದ ನಿಮ್ಮ ವ್ಯವಹಾರಗಳನ್ನು ಪೂರೈಸಿದರೆ ನಿಮ್ಮ ಗುರಿಯನ್ನು ಮುಟ್ಟಲಿದ್ದೀರಿ. ಮಾನಸಿಕ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯವಿರುತ್ತದೆ. ನಿಮ್ಮವರಿಂದಲೇ ಮನೆಯ ವಾತಾವರಣ ಹಾಳಾಗಲಿದೆ. ನೆರೆಹೊರೆಯವರೊಂದಿಗೆ ವೃಥಾ ಮಾತು, ಮಾನಸಿಕ ಒತ್ತಡಕ್ಕೆ ಕಾರಣವಾಗಲಿದೆ. ದೂರಪ್ರಯಾಣ ಈಗ ಬೇಡ. ಜನ್ಮದಲ್ಲಿ ಮಾಂದಿ ಬಂದಿರುವುದು ಶುಕ್ರನಿಗೆ ದೃಷ್ಟಿಯನ್ನು ಕೊಡುವುದು ದಾಂಪತ್ಯ ಜೀವನದಲ್ಲಿ ವಿರಸಕ್ಕೆ ಕಾರಣವಾಗಲಿದೆ.
ಕುಂಭ : ಸಾಮಾಜಿಕವಾಗಿ ಉತ್ತಮ ಕಾರ್ಯಗಳನ್ನು ಮಾಡುವುದರಿಂದ ಯಶಸ್ಸು ಕೀರ್ತಿ ಜೊತೆಗೆ ಧನ ಲಾಭವೂ ಉಂಟಾಗಲಿದೆ ವ್ಯಾಪಾರ, ವ್ಯವಹಾರ, ಉದ್ಯೋಗ ಕ್ಷೇತ್ರದಲ್ಲಿ ಕೆಲವೊಮ್ಮೆ ನಷ್ಟವನ್ನು ಅನುಭವಿಸಲಿದ್ದೀರಿ. ಆಪ್ತರ ಮಾತು ಈ ಸಮಯದಲ್ಲಿ ನಷ್ಟವಾಗಿ ಪರಿಣಮಿಸಲಿದೆ. ಕೌಟುಂಬಿಕ ಸಮಸ್ಯೆಗಳು ಬಾರದಂತೆ ಎಚ್ಚರವಹಿಸಿರಿ, ಪರಿಶ್ರಮವಿದ್ದಾಗ ಅದೃಷ್ಟವೂ ಜೊತೆಯಾಗಿ ಕಾರ್ಯ ಸಿದ್ದಿಉಂಟಾಗಲಿದೆ. ರಾಹು ಮತ್ತು ಶನಿ, ಕುಜ ಪರಿಹಾರವನ್ನು ನಿರೀಕ್ಷೆ ಮಾಡುತ್ತಿದ್ದಾರೆ.
ಮೀನ : ಬಹು ದಿನಗಳಿಂದ ಅಪೇಕ್ಷೆ ಪಡುತ್ತಿರುವ ವಸ್ತು ನಿಮಗೆ ಸಿಗಲಿದೆ. ಸ್ವಂತ ಉದ್ಯಮ ಆರಂಭಿಸುವ ಕನಸು ಕಾಣುತ್ತಿದ್ದೀರಿ. ಅದು ನನಸಾಗಲಿದೆ. ಯಾವುದೇ ಮುನ್ನೋಟವಿಲ್ಲದೆ ಪೂರ್ತಿ ಚಿತ್ರಣವನ್ನು ಗ್ರಹಿಸದೆ ಕಾರ್ಯಕ್ಕೆ ಇಳಿಯಬೇಡಿರಿ. ಕಲಾ ಕ್ಷೇತ್ರದಲ್ಲಿ ಇರುವವರು ಶ್ರಮಕ್ಕೆ ತಕ್ಕಂತೆ ಪ್ರತಿಫಲವನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ಚುರುಕಾದಷ್ಟೂ ಒಳ್ಳೆಯದು. ಪತ್ನಿಗೆ ಅನಾರೋಗ್ಯ ಕಾಡುವ ಸಾಧ್ಯತೆಯನ್ನು ಶನಿ ಮತ್ತು ಕುಜ ತಿಳಿಸುತ್ತಿದ್ದಾರೆ.

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ತಯಾರಿಸಿ ಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು, ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ಮಾಡಿ ಕೊಡಲಾಗುವುದು.



































