
ವಾರಭವಿಷ್ಯ ದಿನಾಂಕ 25.10.2026 ರಿಂದ 31.10.2026 ರ ವರೆಗೆ
ವಿಶೇಷ ದಿನಗಳು :31.10.2026…. ಸಿಂಹ ರಾಶಿಗೆ ಗುರುವಿನ ಪ್ರವೇಶ
ಮೇಷ: ಅತಿಯಾದ ಐಷಾರಾಮಿಯಾದ ಜೀವನ ಮಾನಸಿಕ ಒತ್ತಡಕ್ಕೆ ಕಾರಣವಾಗಲಿದೆ.;ದುಂಡು ವೆಚ್ಚ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಆಲೋಚನೆ ಮಾಡ ಬೇಕಾದೀತು. ವಿವಾಹ ಯೋಗ್ಯ ವಯಸ್ಕರ ಆಯ್ಕೆ ಕಂಕಣ ಬಲಕ್ಕೆ ನಾಂದಿ ಹಾಡಲಿದೆ. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಮಯ ವ್ಯರ್ಥವಾಗದಂತೆ ಜಾಗ್ರತೆ ವಹಿಸಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದಿಂದ ತುಸು ನೆಮ್ಮದಿ ಸಮಾಧಾನ ಸಿಗಲಿದೆ ವಿದ್ಯಾರ್ಥಿಗಳು ಯಶಸ್ವಿಯಾಗುವರು.
ವೃಷಭ :ಈ ವಾರದಲ್ಲಿ ನಿಮ್ಮ ಅದೃಷ್ಟ ಕೂಡಿ ಬರಲಿದೆ. ವೃತ್ತಿರಂಗದಲ್ಲಿ ದೈವಾನುಗ್ರಹ ಕೂಡಿ ಬರಲಿದೆ. ನೆರೆಹೊರೆಯ ಜನ ಬಂಧು -ಬಳಗದವರ ನಡುವೆ ನೀವು ಮಿಂಚಲಿದ್ದೀರಿ. ಯಾತ್ರೆಯ ಅಪೇಕ್ಷೆ ನೆರವೇರಲಿದೆ. ತಾರುಣ್ಯದ ಮಂದಿಗೆ ಉತ್ತಮ ಬಾಳ ಸಂಗಾತಿ ಒದಗಿ ಬರಲಿದ್ದಾರೆ. ವಿದ್ಯಾರ್ಥಿಗಳ ಅಭ್ಯಾಸ ಬಲಕ್ಕೆ ನಿಶ್ಚಿತ ರೂಪದಲ್ಲಿ ಉತ್ತಮ ಫಲಿತಾಂಶ ದೊರಕಲಿದೆ. ರಾಹು ಆಗಾಗ ಮನೋವಿಕಾರಕ್ಕೆ ಕಾರಣನಾಗಲಿದ್ದಾನೆ.
ಮಿಥುನ :ಆರ್ಥಿಕ ಗಳಿಕೆ ಉತ್ತಮವಿದ್ದರೂ ಉಳಿತಾಯದ ಬಗ್ಗೆ ಹಾಗೆಯೇ ಲೆಕ್ಕಾಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಬೇಕು. ಬಾಳ ಸಂಗಾತಿಯ ಹುಡುಕಾಟದ ಬಗ್ಗೆ ಆತಂಕ ಉಂಟಾದೀತು. ವಾಣಿಜ್ಯ ಉದ್ಯಮಿಗಳಿಗೆ ,ಶಿಕ್ಷಣ ಪ್ರೇಮಿಗಳಿಗೆ ಸಾಹಿತಿ ಕಲಾವಿದರಿಗೆ,ವಿದ್ಯಾರ್ಥಿಗಳಿಗೆ ಮುನ್ನೆಡೆ ಇರಲಿದೆ. ವಿಶೇಷವಾಗಿ ಮನೆಯ ಸದಸ್ಯರೊಂದಿಗಿನ ವೈಮನಸ್ಸು ಬೇಸರ ತರಲಿದೆ. ನೀವು ಮಾಡಬೇಕೆಂದಿರುವ ಶುಭ ಕಾರ್ಯಕ್ರಮಗಳಿಗೆ ತಡೆ ಬರಲಿರುವ ಸೂಚನೆ ಇರಲಿದೆ.
ಕರ್ಕಾಟಕ :ಶನಿಯ ಭಾಗ್ಯ ಸ್ತಾನದಿಂದಾಗಿ ಹಿರಿಯರ ಜೊತೆಗೆ ಬೇಸರ ಬರುವ ಸಾಧ್ಯತೆ ಇರುತ್ತದೆ. ಆರ್ಥಿಕ ಸ್ಟಿತಿ ಉನ್ನತಿಯನ್ನು ಕಂಡರೂ ಆಗಾಗ ಒದ್ದಾಟ ಇದ್ದೇ ಇರುತ್ತದೆ. ಖರ್ಚು ವೆಚ್ಚಗಳು ಅಧಿಕ ರೂಪದಲ್ಲಿ ತೋರಿ ಬರಲಿದೆ. ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಹುಡುಕಿಕೊಂಡು ಬರುವ ಸಾಧ್ಯತೆಯು ಅಚ್ಚರಿ ತರಲಿದೆ. ಸದುಪಯೋಗ ನಿಮ್ಮದಾಗಲಿದೆ. ಹಿಡಿದ ಕೆಲಸ ನಾಳೆಗೆ ಎನ್ನದೆ ಕಾರ್ಯ ಪ್ರವೃತ್ತರಾಗಿ ಮುಂದುವರಿಯಿರಿ.. ಮಾನಸಿಕ ಚಂಚಲತೆ ಹಾಗೂ ಋಣಾತ್ಮಕ ಚಿಂತನೆಗಳು ಮಹಿಳೆಯರಿಗೆ ಕಾಡಲಿದೆ.
ಸಿಂಹ :ನಿಮ್ಮ ರಾಶಿಗೆ ಗುರುವಿನ ಪ್ರವೇಶ ಈ ವಾರ ನಡೆಯಲಿದೆ ಎಲ್ಲಾ ವಿಚಾರಗಳಲ್ಲಿ ಹಲವು ದಾರಿಗಳನ್ನು ತೆರೆದು ಅವಕಾಶ ಸಿಕ್ಕಿದರೂ ನಿಮ್ಮಲ್ಲಿರುವ ಅಹಂಕಾರ ,ಆರ್ಥಿಕ ಸ್ಟಿತಿಯಲ್ಲಿ ಒಡ್ಡಾಟವನ್ನು ತರಲಿದೆ. ಹಾಗೆಯೇ ಮಾನಸಿಕ ಭ್ರಮೆಯ ಚಂಚಲ ಪ್ರವೃತ್ತಿ ಗೋಚರಕ್ಕೆ ಬರಲಿದೆ. ಡಿಸೆಂಬರ್ ತಿಂಗಳ ವರೆಗೆ ಬಹಳ ಎಚ್ಚರದಿಂದ ಇರುವುದು ಅತೀ ಅಗತ್ಯವಿದೆ. ದೂರದ ಸಂಚಾರದಲ್ಲಿ ಕಾರ್ಯಯನುಕೂಲ ತೋರಿಬಂದು ಸಂತೃಪ್ತಿ ಮೂಡಲಿದೆ. ಹೋಟೆಲ್ ಉದ್ಯಮದಲ್ಲಿ ಇರುವವರು ಯಶಸ್ವಿಯಾಗುವರು.
ಕನ್ಯಾ :ವ್ಯಯದಲ್ಲಿ ಬರುವ ಗುರು ,ಸಪ್ತಮದಲ್ಲಿರುವ ಶನಿ ,ನೀಚ ರವಿ ಇವರಿಂದಾಗಿ ಸಾಂಸಾರಿಕ ನೆಮ್ಮದಿ ಕಡಿಮೆಯೆನಿಸಲಿದೆ.. ಆತ್ಮ ವಿಶ್ವಾಸ ನಿಮ್ಮಲ್ಲಿರಲಿ. ನಿಮ್ಮ ಮನೋ ಕಾಮನೆಗಳು ನಿಧಾನಗತಿಯಲ್ಲಿ ಪೂರೈಕೆಯಾಗಲಿದೆ. ಸರಕಾರಿ ಕಚೇರಿಯಲ್ಲಿ ಇರುವವರು ಲಂಚಕ್ಕಾಗಿ ಕೈ ನೀಡಿ ತೊಂದರೆಗೆ ಸಿಲುಕುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳು ವಿಷ್ಣು ಸಹಸ್ರನಾಮ ಪಾರಾಯಣ ಮಾಡುವ ಅಗತ್ಯವಿರುತ್ತದೆ. ಪ್ರೀತಿ ಪ್ರೇಮದಲ್ಲಿ ಬಿದ್ದಿರುವವರು ಸ್ಟ್ರಿಂಗ್ ಆಪರೇಷನ್ ಗೆ ಒಳಗಾಗುವ ಸಾಧ್ಯತೆ ಇರುತ್ತದೆ.
ತುಲಾ :ಯಶಸ್ಸಿಗೆ ಗುರುವಿನ ಅನುಗ್ರಹ ಪ್ರಾಪ್ತಿ ಆಗಲಿದೆ. ಜನ್ಮ ರಾಶಿಯಲ್ಲಿ ಇರುವ ನೀಚ ರವಿ ,ಶುಕ್ರ ಬುಧ ಅನ್ಯಾಯದ ದಾರಿಯಲ್ಲಿ ಸಂಪಾದನೆ ಮಾಡುವ ಚಿಂತನೆಯನ್ನು ತರುವ ಸಾಧ್ಯತೆ ಇರುತ್ತದೆ. ವಾಹನ ಸಂಚಾರದಲ್ಲಿ ವೇಗ ಹಿಡಿತದಲ್ಲಿರಲಿ. ರಾಜಕೀಯ ಗಣ್ಯರು ಬಹಳ ಎಚ್ಚರದಿಂದ ವ್ಯವಹಾರ ಮಾಡಬೇಕಿದೆ. ಕಾದು ನೋಡುವ ಪ್ರವೃತ್ತಿ ಒಳ್ಳೆಯದು. ದುಡುಕುವುದು ಬೇಡ. ನೌಕರರಿಗೆ ವರ್ಗಾವಣೆ ಆಗುವ ಸಾಧ್ಯತೆ ಇರುತ್ತದೆ. ದೇಹಾರೋಗ್ಯವನ್ನು ಎಚ್ಚರದಿಂದ ನೋಡಿಕೊಳ್ಳಿರಿ.
ವೃಶ್ಚಿಕ :ಗುರುವಿನ ಬದಲಾವಣೆ ,ವ್ಯಯದಲ್ಲಿ ಬಂದಿರುವ ರವಿ,ಬುಧ ,ಶುಕ್ರ ,ಪಂಚಮದಲ್ಲಿರುವ ಶನಿ ,ಸುಖ ಭಾವದಲ್ಲಿರುವ ರಾಹು ಪ್ರತಿಕೂಲರಾಗಿದ್ದಾರೆ. ಬಾಳಾ ಸಂಗಾತಿಯ ಮಾತನ್ನು ಮೀರದಿರುವುದೇ ಒಳ್ಳೆಯದು. ಯಾವುದೇ ವ್ಯವಹಾರಗಳು ನಿಮ್ಮ ಎಣಿಸಿರುವ ರೀತಿಯಲ್ಲಿ ನಡೆಯುವುದು ಕಷ್ಟವಾಗಿದೆ. ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಕಿರಿಕಿರಿ ಅತಿಯಾಗಲಿದೆ. ವಿದೇಶ ಯಾತ್ರೆ ಯೋಗವಿದೆ. ಸ್ವಯಂ ಕೃತ ಅಪರಾಧಗಳ ಬಗ್ಗೆ ಎಚ್ಚರವಿರಲಿ. ಅನ್ಯ ಮಹಿಳೆಯರ ಬಗ್ಗೆ ಬಹಳ ಎಚ್ಚರವಾಗಿರಬೇಕು.
ಧನು :ದೈವಾನುಗ್ರಹ ಕೂಡಿ ಬರುವ ಸಮಯ ಬಂದಿದೆ. ಜನವರಿ ತಿಂಗಳವರೆಗೆ ಹಲವಾರು ರೀತಿಯಲ್ಲಿ ಆದಾಯದಲ್ಲಿ ಹೆಚ್ಚುವರಿಯಾಗಲಿದೆ. ನಿಮ್ಮ ವೈರಿಗಳು ಮಿತ್ರರಾಗಿ ನಿಮ್ಮ ಬಳಿ ಬರಲಿದ್ದಾರೆ. ಬೆಲೆ ಬಾಳುವ ವಸ್ತುಗಳ ಖರೀಧಿ ಮಾಡುವಿರಿ. ಧಾರ್ಮಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಿರಿ. ಸುಖ ಭಾವದ ಶನಿ ಎಲ್ಲಾ ರೀತಿಯಿಂದಲೂ ಎಚ್ಚರದಿಂದ ಇರುವಂತೆ ಸೂಚನೆ ನೀಡುತ್ತಿದ್ದಾನೆ. ಅನಗತ್ಯ ಖರ್ಚುಗಳು ಬೇಡ. ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಮುಂದುವರಿಯಿರಿ .
ಮಕರ :ಗುರು ಕೇತು ಅಷ್ಟಮದಲ್ಲಿ ಬರುತ್ತಿದ್ದಾರೆ. ರವಿ ನೀಚನಾಗಿ ಕರ್ಮ ಕ್ಷೇತ್ರದಲ್ಲಿ ಬುಧ ಶುಕ್ರರೊಂದಿಗೆ ಇರುವುದು ನೌಕರ ವರ್ಗದವರಿಗೆ ,ರಾಜಕೀಯ ಮುತ್ಸದ್ದಿಗಳಿಗೆ ಶುಭವಲ್ಲ. ನಿಮ್ಮ ಸಹೋದರ ವರ್ಗದವರಿಗೆ ಆರೋಗ್ಯದ ಸಮಸ್ಯೆ ಕಾಡಲಿದೆ. ನಿಮ್ಮನ್ನು ಇದು ಚಿಂತೆಗೀಡು ಮಾಡಲಿದೆ. ಪ್ರಾಮಾಣೀಕತೆ ನಿಮ್ಮ ಬದುಕಿನಲ್ಲಿರಲಿ. ಹೃದಯ ಸಂಬಂಧಿ ಸಮಸ್ಯೆ ಇರುವವರು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.
ಕುಂಭ :ದೈವಾನುಗ್ರಹ ಪ್ರಾಪ್ತಿಯಾಗುವ ಸಮಯವಾಗಿದೆ. ರಾಜಕೀಯ ಭವಿಷ್ಯ ಉತ್ತಮವಾಗಲಿದೆ. ಮಹಿಳೆಯರ ಜೊತೆಗೆ ಕಲಹ ಬರುವ ಸೂಚನೆ ಇರುತ್ತದೆ. ವ್ಯರ್ಥ ಖರ್ಚುಗಳು ಸದಾ ಬರುತ್ತಲೇ ಇರುತ್ತದೆ. ವಿದ್ಯಾರ್ಥಿಗಳಿಗೆ ಅಧಿಕ ಪರಿಶ್ರಮದ ಅವಶ್ಯಕತೆ ಇರುತ್ತದೆ. ಸಿಟ್ಟು ನಿಮ್ಮ ಮುಂದೆ ಬಾರದಿರಲಿ. ನಿಮ್ಮ ಹಿರಿಯರೊಬ್ಬರ ಅನಾರೋಗ್ಯ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಆರೋಗ್ಯ ಭಾಗ್ಯವನ್ನು ವೃದ್ಧಿಸಿಕೊಳ್ಳುವುದು ನಿಮ್ಮ ಕೈಯಲ್ಲಿರುತ್ತದೆ. ವಿಶೇಷವಾಗಿ ನಿಮ್ಮ ಬಾಳ ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯವಿದೆ.
ಮೀನಾ :ಗುರು ಕೇತು ಸಿಂಹ ರಾಶಿಯಲ್ಲಿರುವುದು ದೈವಾನುಗ್ರಹದ ಕೊರತೆಯನ್ನು ತೋರಿಸುತ್ತಿದೆ. ನಿಮ್ಮ ಆರೋಗ್ಯದ ಏರು ಪೇರು ಆಗುವ ಸಾಧ್ಯತೆ ಇರುತ್ತದೆ. ಎಲ್ಲರಲ್ಲಿಯೂ ಸಿಟ್ಟು ಮಾಡಿಕೊಳ್ಳುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಧನಾಗಮನ ಕುಂಠಿತಗೊಳ್ಳಲಿದೆ. ವಿವಾಹದ ನಿರೀಕ್ಷೆಯಲ್ಲಿ ಇರುವವರು ಜನವರಿ ತಿಂಗಳ ನಂತರ ಮಾಡಿಕೊಂಡರೆ ಒಳ್ಳೆಯದು. ನಿಮ್ಮ ಹಲವಾರು ಕನಸುಗಳು ನೆರವೇರದೆ ಇರುವ ಸಾಧ್ಯತೆ ಇರುತ್ತದೆ.






































