ವಾರಭವಿಷ್ಯ
ದಿನಾಂಕ 23.11.2025 ರಿಂದ 29.11.2025ರ ತನಕ
ವಿಶೇಷ ದಿನಗಳು :
25.11.2025 ಸ್ಕಂದ ಪಂಚಮೀ
26.11.2025 ವೃಶ್ಚಿಕ ರಾಶಿಗೆ ಶುಕ್ರನ ಪ್ರವೇಶ ಚಂಪಾ ಷಷ್ಟಿ, ಸುಬ್ರಹ್ಮಣ್ಯ ಷಷ್ಟಿ, ಕುಡುಪು ಷಷ್ಟಿ ಉತ್ಸವ
ಮೇಷ : ನಿಮ್ಮ ಜೀವನದಲ್ಲಿ ಕೆಲವೊಂದು ಒಳ್ಳೆಯ ಬದಲಾವಣೆಗಳು ಆಗುತ್ತಿರುವುದನ್ನು ಗಮನಿಸಿರಿ, ವಿರೋಧಿಗಳನ್ನು ಎದುರಿಸುವಾ ಎದುರಿಸುವಾಗ ನಿಮ್ಮ ನಿಲುವು ದೃಢವಾಗಿರಲಿ ಸಾಡೇ ಸಾತ್ ಶನಿಗೆ ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ, ರಾಜಕೀಯದಲ್ಲಿರುವವರು ಮಹಿಳಾ ಸ್ಪರ್ಧಿಯನ್ನು ಎದುರಿಸ ಬೇಕಾಗುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಅಪವಾದ ಭಯ ಉಂಟಾಗಲಿದೆ.
ವೃಷಭ : ದೈವಾನುಗ್ರಹದ ಕೊರತೆ ಇರುವ ಈ ಕಾಲದಲ್ಲಿ ನಿಮ್ಮ ಯಾವುದೇ ವ್ಯವಹಾರ ಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಉತ್ತಮವಾಗಿರ ಬೇಕಾಗುತ್ತದೆ. ಸಾಂಸಾರಿಕ ವಿಷಯಗಳಲ್ಲಿ ಹಂತ ಹಂತವಾಗಿ ಸುಧಾರಣೆಗೊಳ್ಳುತ್ತಾ ಬರುತ್ತಿದೆ, ನಿಮ್ಮ ಮಿತಿಗಿಂತ ಹೆಚ್ಚು ಖರ್ಚು ಮಾಡುವುದು ಬೇಡ, ಪ್ರೇಮಿಗಳ ನಡುವೆ ಬಿರುಕು ವಿರಸ ಬರುವ ಸಾಧ್ಯತೆ ಇರುತ್ತದೆ. ಬರುವ ಆದಾಯದಲ್ಲಿ ಯಾವುದೇ ಕೊರತೆ ಇರಲಾರದು, ಅನುಭವಿಗಳ ಸಲಹೆ ಪಡೆದು ವ್ಯವಹಾರವನ್ನು ವಿಸ್ತರಿಸಬಹುದು.
ಮಿಥುನ : ಚಿಂತೆಯನ್ನು ಬಿಡಿ ದೈವಾನುಗ್ರಹ ಉತ್ತಮವಿದೆ, ಬರುತ್ತಿರುವ ಆದಾಯದಲ್ಲಿ ಹೆಚ್ಚಳವಾಗಲಿದೆ. ಸಹೋದರ ವರ್ಗದವರ ಸಹಾಯ ಸದಾ ನಿಮಗೆ ಸಿಗಲಿದೆ. ಉದ್ಯೋಗದಲ್ಲಿ ವೇತನ ಹೆಚ್ಚಳವಾಗಲಿದೆ. ನಿಮ್ಮ ಸಲಹೆ ಸೂಚನೆಗಳಿಗೆ ಬೆಲೆ ಸಿಗಲಿದೆ. ಸಣ್ಣ ಪುಟ್ಟ ಕಲಹಗಳನ್ನು ನೀವು ಗಮನಕ್ಕೆ ತೆಗೆದುಕೊಳ್ಳದಿರುವುದೇ ಒಳ್ಳೆಯದು ಧಾರ್ಮಿಕ ವಿಷಯಗಳಲ್ಲಿ ಭಾಗವಹಿಸುವ ಅವಕಾಶ ನಿಮಗೆ ಸಿಗಲಿದೆ. ಸಾಲ ತೆಗೆಯುವ ವಿಚಾರ ಸಧ್ಯಕ್ಕೆ ಬೇಡ.
ಕರ್ಕಾಟಕ : ಭವಿಷ್ಯದ ಬಗ್ಗೆ ಜಾಗ್ರತೆ ವಹಿಸುವಂತೆ ನವಗ್ರಹರು ಸೂಚನೆ ಕೊಡುತ್ತಿದ್ದಾರೆ. ಪೂರ್ವ ತಯಾರಿ ಇಲ್ಲದೆ ಯಾವುದೇ ಕೆಲಸವನ್ನು ಮಾಡಬೇಡಿರಿ, ಗೆಳೆಯರ ಜೊತೆಯಲ್ಲಿ ನಿಮ್ಮ ವಿಶ್ವಾಸದ ದುರುಪಯೋಗ ಆಗದಂತೆ ಕಾಳಜಿ ವಹಿಸಿರಿ, ಗುರುವಿನ ಅನುಗ್ರಹ ನಿಮಗಿರುವುದರಿಂದ ಸಕಾಲದ ಸ್ಪೂರ್ತಿಯಿಂದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಬ್ಯಾಂಕಿಂಗ್, ವೃತ್ತಿಯವರಿಗೆ ಜವಾಬ್ದಾರಿ ಹೆಚ್ಚಾಗಲಿದ್ದು ಆದಾಯ ಹೆಚ್ಚಾಗಲಿದೆ.
ಸಿಂಹ : ನಿಮ್ಮ ವ್ಯವಹಾರದಲ್ಲಿ ಆಶಾಭಂಗ ಯೋಗವಿದ್ದರೂ ಕಾರ್ಯ ಸಿದ್ಧಿಯಿಂದ ಮನಸ್ಸಿಗೆ ನೆಮ್ಮದಿ ಬರಲಿದೆ. ಮಕ್ಕಳ ವೈವಾಹಿಕ ಸಂಬಂಧಗಳ ಬಗ್ಗೆ ಮಾತುಕತೆ ನಡೆಯಲಿದೆ. ನೀವು ಬಯಸಿದ್ದೆಲ್ಲಾ ಸಿಗಲಾರದು. ಗುರು ವ್ಯಯದಲ್ಲಿ ಇದ್ದಾನೆ. ಮನೆಯಲ್ಲಿ ಬಿಸಿ ಬಿಸಿ ವಿಚಾರ ವಿನಿಮಯ ನಡೆಯಲಿದೆ. ಹಾಗೆಂದು ಕೊರಗುತ್ತಾ ಕುಳಿತುಕೊಳ್ಳಬೇಡಿ. ಸರಕಾರಿ ಕೆಲಸ ಕಾರ್ಯಗಳು ಕಾರ್ಯ ರೂಪಕ್ಕೆ ಬರಲಿವೆ.
ಕನ್ಯಾ : ಯಾವಾಗಲೂ ಪ್ರಾಮಾಣಿಕವಾಗಿಯೇ ಯೋಚಿಸುವ ನೀವು ಯೋಚನೆಯಲ್ಲಿಯೇ ಮಗ್ನರಾಗಿರುತ್ತೀರಿ, ಗುರಿ ಸಾಧನೆಗಾಗಿ ನಡೆಸುವ ಪ್ರಯತ್ನದಿಂದ ವಿಮುಖರಾಗದೇ
ಮುಂದುವರಿಯಿರಿ, ನಿಮ್ಮ ಪರಿಶ್ರಮಕ್ಕೆ ಸರಿಯಾದ ಪ್ರತಿಫಲ ದೊರೆಯಲಿದೆ. ನಯವಂಚಕರ ಬಗ್ಗೆ ಎಚ್ಚರವಿರಿ, ಜಗಳಕ್ಕೆ ಬರುವವರಿಗೆ ನಿಮ್ಮ ಉತ್ತರ “ಮೌನ ‘ ಆಗಿರಲಿ. ಆಕಸ್ಮಿಕ ಧನ ಆಗಮನ ಉಂಟಾಗಲಿದೆ. ಇದರಿಂದ ಮನಸ್ಸಿಗೆ ನೆಮ್ಮದಿ ಉಂಟಾಗಲಿದೆ.
ತುಲಾ : ಅನೇಕ ರೀತಿಯ ಉದ್ಯೋಗದ ಅವಕಾಶಗಳು ನಿಮ್ಮೆದುರು ಬರಲಿವೆ, ಪುತ್ರೋತ್ಸವದ ಬಾಗ್ಯ ನಿಮಗೆ ಒಲಿದು ಬರಲಿದೆ. ಶನಿಯು ಬೆಂಗಾವಲಾಗಿ ನಿಲ್ಲುವನು. ನಿಮ್ಮ ಮಾತಿನಲ್ಲಿ ಗಡಸುತನ ಕಡಿಮೆಯಾಗಲಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗಲಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ಸಿಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಒಲಿದು ಬರಲಿದೆ. ಮಕ್ಕಳ ಕಡೆಗೆ ನಿಮ್ಮ ಗಮನ ಅಗತ್ಯವಿದೆ.
ವೃಶ್ಚಿಕ : ಹೆಚ್ಚಿನ ಗ್ರಹರು ಪ್ರತಿಕೂಲ ಸ್ಥಿತಿ ಯಲ್ಲಿ ಇರುವುದರಿಂದ ನಿಮ್ಮ ದಿನದ ಆರಂಭ ಶ್ರೀ ವಿಷ್ಣು ಸಹಸ್ರನಾಮದಿಂದ ಆರಂಭವಾಗಲಿ. ಕೆಲವರಿಗೆ ನಿಮ್ಮನ್ನು ಕಂಡಾಗ ಅಸೂಯೆ ಉಕ್ಕಿ ಹರಿಯುವ ಸಮಯವಾಗಿದೆ. ಆರ್ಥಿಕವಾಗಿ ಖರ್ಚಿನ ಮೇಲೆ ನಿಯಂತ್ರಣವಿರಲಿ, ಕಾರ್ಯ ಒತ್ತಡ ಅಧಿಕವಾಗಿ ದೈಹಿಕವಾಗಿ ಮಾನಸಿಕವಾಗಿ ಬಳಲುವಿರಿ, ಖಾಸಗಿ ಹಿತಾಸಕ್ತಿಗಾಗಿ ಮಿತ್ರ ಸಮೂಹದಿಂದ ದೂರವಿರುವುದು ಒಳ್ಳೆಯದು, ವಿದ್ಯಾರ್ಥಿಗಳು ಅಧಿಕ ಪರಿಶ್ರಮ ಪಡಬೇಕಾಗಿದೆ.
ಧನು : ಗುರು ಶನಿಯ ಕಾರಣದಿಂದ ಸಾಂಸಾರಿಕವಾಗಿ ಕಲಹ ಭಿನ್ನಾಭಿಪ್ರಾಯಗಳಿಗೆ ಬಲಿಯಾಗದಿರಿ, ಧನ ವಿನಿಯೋಗದಲ್ಲಿ ಎಚ್ಚರಿಕೆ ಇರಲಿ, ಸುಖ ಸ್ಥಾನದ ಶನಿ ಜೀರ್ಣ ಕ್ರಿಯೆ,ಮಾನಸಿಕ, ಮಾಸಿಕ ಸಮಸ್ಯೆಗಳು [ಮಹಿಳೆಯರಿಗೆ ] ಬಾಧೆ ಕೊಡಲಿವೆ. ಅವಿವಾಹಿತರಿಗೆ ವಿವಾಹ ಯೋಗಕ್ಕಾಗಿ ಡಿಸೆಂಬರ್ 05 ರ ವರೆಗೆ ಕಾಯಬೇಕಾಗಿದೆ. ಸಂಸಾರದ ಒಳಗೆ ಸಂಬಂಧಗಳನ್ನು ಬಹಳ ಎಚ್ಚರಿಕೆಯಿಂದ ಕಾಯ್ದುಕೊಳ್ಳಿರಿ.
ಮಕರ : ನಿಮ್ಮ ಉದಾಸೀನತೆಯ ವಿಳಂಬ ನೀತಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೀತು, ಷೇರು ಹಣದ ವ್ಯವಹಾರ ಬಗ್ಗೆ ಎಚ್ಚರಿಕೆ ಇರಲಿ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಬಾರದೇ ನಿರಾಶೆ ಉಂಟಾಗಲಿದೆ. ಗೃಹಿಣಿಗೆ ಅನಾವಶ್ಯಕ ಉದ್ವೇಗ ಕೋಪ ತಾಪಗಳು ಹೆಚ್ಚಾಗಲಿವೆ. ಹಾಗೆಯೇ ಆರೋಗ್ಯದ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ. ಸ್ತ್ರೀ ಮೂಲಕ ಅಪವಾದ ಬರುವ ಸೂಚನೆ ಇರುತ್ತದೆ
ಕುಂಭ : ವೃತ್ತಿರಂಗದಲ್ಲಿ ವ್ಯವಹಾರದಲ್ಲಿ ನಿಮ್ಮ ಯೋಚನೆಗಳೆಲ್ಲವೂ ನಿಮ್ಮ ನಿಯಂತ್ರಣವನ್ನು ಕಳೆದುಕೊಳ್ಳಲಿವೆ ಅತೀ ಅಗತ್ಯವಾದ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲು ನೀವು ತಯಾರಾಗಬೇಕಿದೆ. ಸಂಬಂಧಿಕರೊಂದಿಗೆ ಅತಿಯಾದ ವಿಶ್ವಾಸ ದುರುಪಯೋಗಕ್ಕೆ ಕಾರಣವಾದೀತು.ನೀವು ಮಾಡುತ್ತಿರುವ ವ್ಯವಹಾರಗಳಲ್ಲಿ ಆರ್ಥಿಕವಾಗಿ ಯಾವುದೇ ತೊಂದರೆಗಳು ಆಗಲಾರದು, ಸಾಡೇ ಸಾತ್ ಶನಿಗೆ ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡಿರಿ.
ಮೀನ : ಕೆಲವೊಂದು ಅದ್ಭುತ ಚಿಂತನೆಗಳು ನಿಮ್ಮ ಯೋಚನೆಗೆ ಬರಲಿವೆ. ಸಾಡೇ ಸಾತ್ ಶನಿಯ ಪ್ರಭಾವ ಇರುವುದರಿಂದ ಹೆಚ್ಚಿನ ಹಣ ಹೂಡಿಕೆಗೆ ಅವಕಾಶವಿರುವುದಿಲ್ಲ. ನಿಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿರಲಿ..ಮೇಲಧಿಕಾರಿಗಳಿಂದ ಪ್ರಶಂಸೆಯ ಮಾತುಗಳು ಬರಲಿವೆ, ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸೂಕ್ತಸ್ತಾನ ಮಾನ ನಿಮ್ಮದಾಗಲಿದೆ. ಮನೆಯಲ್ಲಿ ಶುಭ ಮಂಗಳ ಕಾರ್ಯದಿಂದ ಸಂಭ್ರಮಿಸುವಿರಿ ಭವಿಷ್ಯಕ್ಕೆ ಒಳ್ಳೆಯ ಯೋಜನೆಯನ್ನು ರೂಪಿಸಲು ಇದು ಸಕಾಲವೆನ್ನಬಹುದು.






































