

ವಾರಭವಿಷ್ಯ ದಿನಾಂಕ 18.01.2026 ರಿಂದ 24.01.2026 ರ ತನಕ
ವಿಶೇಷ ದಿನಗಳು :
18.01.2025…..ಅಮಾವಾಸ್ಯೆ… ಪಂಚಗ್ರಹ ಯೋಗಾರಂಭ :
ಉಡುಪಿ ಶೀರೂರು ಮಠ ಪರ್ಯಾಯ ಉತ್ಸವ :
22.01.2026……ಸೌತಡ್ಕ ಮಹಾ ಗಣಪತಿ ಮೂಡಪ್ಪ ಸೇವೆ
ಮೇಷ : ಕರ್ಮ ಕ್ಷೇತ್ರದಲ್ಲಿ ಪಂಚಗ್ರಹ ಯೋಗ ಆರಂಭವಾಗಿದೆ. ಉದ್ಯೋಗದಲ್ಲಿ ಘರ್ಷಣೆಯಾಗುವ ಸಂದರ್ಭವಿದೆ, ಮೌನವಾಗಿರುವುದೇ ದಿವ್ಯ ಮಂತ್ರವಾಗಿ ಪರಿಣಮಿಸಲಿದೆ. ಸ್ಪಷ್ಟ ನಿಲುವು ತೆಗೆದುಕೊಳ್ಳಲಾಗದೆ ಸಂಧಿಗ್ಧತೆ ಉಂಟಾಗಬಹುದು ಹೊಸ ವ್ಯವಹಾರಗಳನ್ನು ಆರಂಭಿಸುವ ಮೊದಲು ಸರಿಯಾದ ಯೋಜನೆಗಳನ್ನು ಹಾಕಿಕೊಳ್ಳಿರಿ. ಕೌಟುಂಬಿಕ ಪರಿಸ್ಥಿತಿಗಳಿಗೆ ಆಧ್ಯತೆ ನೀಡಿರಿ. ಕಿವಿ ನೋವು ಬಾಧೆ ಬರಲಿದೆ. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ.
ವೃಷಭ : ದೈವಾನುಗ್ರಹ ಉತ್ತಮವಿದೆ. ಮನಸ್ಸಿನ ಆಳದಲ್ಲಿ ಇರುವ ನೋವುಗಳು ನಿಧಾನವಾಗಿ ಮಾಯವಾಗಲಿವೆ. ಅನೇಕ ಮೂಲಗಳಿಂದ ಶನಿ ಮತ್ತು ಗುರು ಆದಾಯಗಳನ್ನು ನೀಡಲಿದ್ದಾರೆ ಸಮಯಕ್ಕೆ ತಕ್ಕಂತೆ ಪರಿವರ್ತನೆ ಮಾಡಿಕೊಳ್ಳಿರಿ. ಆತ್ಮ ವಿಶ್ವಾಸ ಮತ್ತು ತಾಳ್ಮೆ ಇವುಗಳನ್ನು ಪಂಚ ಗ್ರಹರು ನೀಡಲಿದ್ದಾರೆ. ಜವಾಬ್ದಾರಿಯ ಜೊತೆಗೆ ಅನೇಕ ಸಮಸ್ಯೆಗಳು ದೂರವಾಗಲಿವೆ. ಒಬ್ಬ ಜಾದೂಗಾರನಂತೆ ಜಾಣ್ಮಯಿಂದ ಜೀವನವನ್ನು ನಡೆಸುವಿರಿ.
ಮಿಥುನ : ನಿಮ್ಮ ಸಾಮಾಜಿಕ ಪ್ರಯತ್ನಗಳಿಗೆ ಬಲ ಸಿಗಲಿದೆ. ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿರಿ. ನೆನಪಿರಲಿ, ಹೊಗಳುವವರೆಲ್ಲಾ ಹಿತೈಷಿಗಳಲ್ಲ ಸಂಬಂಧಗಳನ್ನು ಆತ್ಮೀಯವಾಗಿ ಉಳಿಸಿಕೊಂಡರೆ ದೂರವಾದವರೂ ಹತ್ತಿರವಾಗಲಿದ್ದಾರೆ. ಅಷ್ಟಮದಲ್ಲಿ ಪಂಚ ಗ್ರಹರು ಬರುತ್ತಿರುವುದರಿಂದ ಮೃತ್ಯುಂಜಯ ಜಪ ಅಗತ್ಯವಿದೆ. ಆರೋಗ್ಯದ ಕಡೆಗೆ ಗಮನವಿರಲಿ. ಸಂಗಾತಿಯೊಂದಿಗೆ ತಾಳ್ಮೆಯೊಂದಿಗೆ ವ್ಯವಹರಿಸಿರಿ.
ಕರ್ಕಾಟಕ : ಪ್ರತ್ಯುಪಕಾರ ನಿರೀಕ್ಷಿಸದೆ ಸಹಾಯ ಮಾಡಿದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಆಪ್ತರ ಜೊತೆಗೆ ಜಾಗ್ರತೆಯಿಂದ ಹೊಸ ವ್ಯವಹಾರವನ್ನು ಆರಂಭಿಸ ಬಹುದಾಗಿದೆ. ಮಾನಿಸಿಕ ಒತ್ತಡದಿಂದ ನೀವು ಹೊರಗೆ ಬನ್ನಿರಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ಕೊಟ್ಟಿರುವ ಹಣ ವಾಪಸ್ ಬರಲು • ನ್ಯಾಯಾ ನ್ಯಾಯಾಲಯ ಮೆಟ್ಟಲೇರಬೇಕಾಗುತ್ತದೆ. ಸಪ್ತಮದಲ್ಲಿ ಪಂಚಗ್ರಹರು ಬಂದಿದ್ದಾರೆ. ಸಂಗಾತಿಯೊಂದಿಗೆ ಶೀತಲ ಯುದ್ಧವಾಗುವ ಸಾಧ್ಯತೆ ಇರುತ್ತದೆ.
ಸಿಂಹ : ಆಸ್ತಿ ಸಮಸ್ಯೆಗಳು ಸೌಹಾರ್ಧಯುತವಾಗಿ ಬಗೆಹರಿಯಲಿವೆ, ಹೊಸತನ್ನು ಕಲಿಯುವುದರಲ್ಲಿ ಪ್ರಯತ್ನಪಡಿರಿ. ಆರ್ಥಿಕ ಸಹಾಯಕ್ಕಾಗಿ ಅನ್ಯರಿಂದ ಯಾಚನೆ ಬರಲಿದೆ. ಸ್ವಂತ ಕಾರ್ಯಗಳನ್ನು ಮಾಡಲು ಸಮಯ ಮೀಸಲಿಡಿರಿ, ಸಭ್ಯತೆಯನ್ನು ಮೀರಬೇಡಿರಿ, ಬರುತ್ತಿರುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿರಿ, ಒಬ್ಬರು ನಿಮ್ಮ ಜೊತೆಗೆ ಮೌನವಾಗಿದ್ದಾರೆ ಎಂದರೆ ಅವರು ನಿಮಗೆ ಹೆದರಿದ್ದಾರೆ ಎಂದು ಅರ್ಥವಲ್ಲ.ಸರಿಯಾದ ಸಮಯಕ್ಕೆ ಕಾಯುತ್ತಿದ್ದಾರೆ ಎಂದು ಅರ್ಥ. ನಿಮಗೆ ತಿಳಿದಿರಲಿ.
ಕನ್ಯಾ : ಹೊಸ ಸಮಸ್ಯೆಗಳ ಪರಿಚಯವನ್ನು ಪಂಚಗ್ರಹರು ಜೊತೆಗೆ ಶನಿ, ಕೇತು ಮಾಡಿ ಕೊಡಲಿದ್ದಾರೆ. ನಿಮ್ಮ ಸಾಮರ್ಥ್ಯದ ಅನಾವರ್ಣವಾಗುವ ಸಂದರ್ಭ ಒದಗಿ ಬಂದಿದೆ.ಬದುಕಿನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯ ಬರಲಿದೆ. ಸಮಸ್ಯೆಗಳ ಬಗ್ಗೆ ಚಿಂತೆ ಮಾಡುತ್ತಾ ಕುಳಿತುಕೊಳ್ಳುವುದು ಸರಿಯಲ್ಲ. ನಿಮ್ಮ ಕೈಯಿಂದ ಹಣ ಕಿತ್ತುಕೊಂಡವ ಅವನಾಗಿಯೇ ಜೈಲು ಸೇರಿದ. ಆರೋಗ್ಯದಲ್ಲಿ ನರ ಎಲುಬಿಯ ಸಮಸ್ಯೆ ಕಾಣಲಿದೆ. ನಿಮ್ಮನ್ನು ಇಷ್ಟ ಪಡುವವರಿಗೆ ಸಮಯ ಮೀಸಲಿಡಿರಿ.
ತುಲಾ : ದೈವಾನುಗ್ರಹ ಉತ್ತಮವಿದ್ದರೂ ಪಂಚಗ್ರಹರು ಸುಖ ಸ್ಥಾನಕ್ಕೆ ಬಂದಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಲಿದೆ. ಮನೆಯಲ್ಲಿ ಕೋಲಾಹಲ ಬಂದರೂ ಆಶ್ಚರ್ಯವಿಲ್ಲ. ಕೆಲಸದಲ್ಲಿ ಫಲ ಸಿಗಳು ಕಠಿಣವಾದ ಪರಿಶ್ರಮ ಬೇಕು. ಪ್ರತಿಕೂಲ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿ, ನೀವು ಸಾಧಿಸಬಯಸುವ ಗುರಿ ಹತ್ತಿರದಲ್ಲಿದೆ. ಹಣದ ಬಿಕ್ಕಟ್ಟುಗಳು ನಿವಾರಣೆಯಾಗಲಿವೆ. ಅತಿಯಾದ ಪ್ರಯಾಣಗಳು ಬೇಡ, ಒಂದು ಸಾರಿ ನೀವು ಬಿದ್ದಿರುವುದು ನೆನಪಿರಲಿ.
ವೃಶ್ಚಿಕ : ತೃತೀಯಾದಲ್ಲಿ ಪಂಚಗ್ರಹರ ಕೂಡುವಿಕೆ ಅದೃಷ್ಟವನ್ನೇ ಸೂಚಿಸುತ್ತಿದೆ. ಮಕ್ಕಳ ಒರಟುತನ ಸಹಜವಾಗಿ ಇರುತ್ತದೆ. ಮೌನವಾಗಿ ಇರುವುದೇ ಇದಕ್ಕೆ ಪರಿಹಾರವಾಗಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ದಾರಿ ಕಷ್ಟವಾಗಿದೆ. ಗುರುವಿನ ಅನುಗ್ರಹ ಜೂನ್ ಎರಡರ ನಂತರವೇ ಬರಲಿದೆ, ತಾಳ್ಮೆ ಇರಲಿ, ಸಣ್ಣ ಪುಟ ವ್ಯಾಪಾರಗಳು ಹೆಚ್ಚಿನ ಲಾಭ ತಂದು ಕೊಡಲಿದೆ. ನೀವು ಮಾಡಬೇಕಾದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿರಿ.
ಧನು : ಹೊಸ ಅವಕಾಶಗಳು ಜೀವನದಲ್ಲಿ ತೆರೆದುಕೊಳ್ಳಲಿವೆ ಪಂಚಗ್ರಹರು ದ್ವಿತೀಯಾದಲ್ಲಿ ಬಂದಾಗ ಹಣದ ವ್ಯವಹಾರ ಬಹಳ ಜಾಗ್ರತೆಯಿಂದ ಮಾಡಬೇಕು. ಉದ್ಯೋಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಮಕ್ಕಳಿಂದ ಆರ್ಥಿಕ ಸಹಾಯ ಸಿಗಲಿದೆ, ಬಂಧು ಮಿತ್ರರ ಜೊತೆಗೆ ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯವಾಗಿದೆ. ವಿದ್ಯಾರ್ಥಿಗಳಿಗೆ ಪ್ರತಿಕೂಲ ವಾತಾವರಣ ಇರಲಿದೆ. ತಾಯಿಯವರ ಅನಾರೋಗ್ಯ ಸ್ಥಿತಿ ಮುಂದುವರಿಯಲಿದೆ. ಇಮ್ಮ ಬಿಪಿ ಷುಗರ್ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಿರಿ.
ಮಕರ : ಬಹಳ ಎಚ್ಚರದಿಂದ ಕುಲ ದೇವರ ಆರಾಧನೆಯೊಂದಿಗೆ ಮುಂದುವರಿಯ ಬೇಕಿದೆ, ಪ್ರತಿಯೊಂದು ಮಾತಿನಲ್ಲಿ ಎಚ್ಚರ ಬೇಕಿದೆ. ಮುಖ್ಯವಾಗಿ ಸಿಟ್ಟು ನಿಮ್ಮ ಮೂಗಿನ ತುದಿಯಲ್ಲಿ ಬಂದು ನಿಂತಿರುತ್ತದೆ. ಆದಾಯ ಎಷ್ಟಿದ್ದರೂ ಖರ್ಚು ಕೂಡಾ ಇರುತ್ತದೆ. ಮನೆ ಅಥವಾ ಕೌಟುಂಬಿಕವಾಗಿ ಜವಾಬ್ದಾರಿ ಹೆಚ್ಚಾಗಲಿದೆ. ನಿಮ್ಮ ಮಾತೇ ನಡೆಯಬೇಕು ಎಂಬ ಹಟದಿಂದ ಹೊರಗೆ ಬನ್ನಿರಿ, ಇತರನ್ನೂ ಗೌರವಿಸಿರಿ. ನಿಮಗೂ ಗೌರವ ಸಿಗಲಿದೆ. ವಿಷ್ಣು ದೇವರ ಯಥಾ ಶಕ್ತಿ ಪ್ರಾರ್ಥನೆ ಅಗತ್ಯವಿದೆ.
ಕುಂಭ : ಸಾಮಾಜಿಕವಾಗಿ ಹೆಚ್ಚುವರಿ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ. ಪಂಚಗ್ರಹರು ವ್ಯಯ ಭಾವದಲ್ಲಿ ಇರುವುದು ನಷ್ಟವಾಗಲಿರುವುದನ್ನು ಸೂಚನೆ ಕೊಡುತ್ತಿದ್ದಾರೆ. ಅನಿರೀಕ್ಷಿತವಾದ ಸಮಸ್ಯೆಗಳು ಕಾಣಬಹುದು. ಆಗ ನಿಮ್ಮ ತಾಳ್ಮೆಯೇ ನಿಮ್ಮನ್ನು ರಕ್ಷಿಸಲಿದೆ. ಹಣ ಕಾಸಿನ ವಿಚಾರದಲ್ಲಿ ಬಹಳ ಎಚ್ಚರ ಅಗತ್ಯವಿದೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ. ವ್ಯರ್ಥ ಪ್ರಯಾಣದಲ್ಲಿ ಪಾಲ್ಗೊಳ್ಳದಿರಿ, ಕೈಲಾದಷ್ಟೂ ಇತರರಿಗೆ ಸಹಾಯ ಮಾಡುವುದನ್ನು ರೂಢಿಸಿಕೊಳ್ಳಿರಿ.
ಮೀನ : ಪಂಚಗ್ರಹರು ಲಾಭ ಕ್ಷೇತ್ರದಲ್ಲಿ ಒಟ್ಟಾಗಿ ಬಂದಿರುವುದು ನಿಮ್ಮ ಪುಣ್ಯವೇ ಸರಿ. ಮನಸ್ಸಿನ ನೋವುಗಳು ದೂರವಾಗಲಿದೆ. ನೀವು ಮಾಡಬೇಕಾದ ಕೆಲಸಗಳನ್ನು ಪೂರ್ಣಗೊಳಿಸಿರಿ.ಕೆಲವರನ್ನು ಮೆಚ್ಚಿಸಲು ಹೋಗಿ ತನ್ನವರನ್ನೆ ದೂರ ಮಾಡಿಕೊಳ್ಳಬೇಡಿರಿ.ವೃತ್ತಿ ಕ್ಷೇತ್ರದಲ್ಲಿ ನಿಮಗೆ ಸಂಬಳ ಏರಿಕೆಯಾಗಲಿದೆ. ಭಡ್ತಿ ಸಿಗಲಿದೆ, ಸಾಡೇ ಸಾತ್ ಶನಿ ಎಚ್ಚರಿಸುತ್ತಿದ್ದಾನೆ. ಅನ್ಯರ ವಿಚಾರದಲ್ಲಿ ಮೂಗು ತೂರಿಸಲು ಹೋಗಬೇಡಿರಿ,ಯಥಾ ಶಕ್ತಿ ವಿಷ್ಣು ದೇವರ ಸೇವೆ ಮಾಡುತ್ತಾ ಬನ್ನಿರಿ.

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯಗಳನ್ನು ತಿಳಿಸಲಾಗುವುದು. ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು, ವಾಸ್ತು ಸಲಹೆ /ವಿವಾಹ ಹೊಂದಾಣಿಕೆ ಮಾಡಿ ತಿಳಿಸಲಾಗುವುದು.






























