ವಾರಭವಿಷ್ಯ ದಿನಾಂಕ 14.12.2025 ರಿಂದ 20.12.2025ರ ತನಕ
ವಿಶೇಷ ದಿನಗಳು :
15.12.2025…..ಧನು ಸಂಕ್ರಮಣ
19.12.2025…..ಎಳ್ಳಾಮಾವಾಸ್ಸೆ
20.12.2025……ಅಮಾವಾಸ್ಸೆ
ಮೇಷ : ರವಿಯ ಬದಲಾವಣೆ, ನಿಮ್ಮ ಉದ್ಯೋಗದಲ್ಲಿ ಜವಾಬ್ದಾರಿಯನ್ನು ಹೆಚ್ಚಿಸಲಿದೆ. ಮರುಚೈತನ್ಯ ಪಡೆಯಲಿದ್ದೀರಿ. ಶನಿ, ಗುರುವಿನ ದೋಷ ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ಹಿತ ಶತ್ರುಗಳಿಂದ ನಿಮ್ಮ ಏಕಾಗ್ರತೆಗೆ ಭಂಗ ಬರಲಿದೆ, ಸಹನೆ ತಾಳ್ಮೆ ಇರಲಿ, ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸಾಂಸಾರಿಕ ಸಮಸ್ಯೆಗಳು ಒಂದೊಂದಾಗಿ ಪರಿಹಾರ ಕಾಣಲಿದೆ. ಹಿರಿಯರಿಗೆ ಗೌರವ ತೋರಿಸಲು ಮರೆಯದಿರಿ.
ವೃಷಭ : ಅಷ್ಟಮದಲ್ಲಿ ರವಿ ಕುಜರು ಜೊತೆಯಾಗಿ ಬಂದುದರಿಂದ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಾಗಿರಿ, ಮದ್ಯ ಸೇವನೆ ಆರಂಭ ಮಾಡಿದಿರಿ. ನಿಲ್ಲಿಸಿ, ಸಂಗಾತಿಯ ಜೊತೆಗೆ ಆದಷ್ಟು ಮೌನವಾಗಿರಿ. ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆ ತಪ್ಪುವ ಸಾಧ್ಯತೆ ಇದೆ. “ಓಂ ನಮ: ಶಿವಾಯ ” ಸಾಧ್ಯವಿದ್ದಷ್ಟೂ ಬಾರಿ ಹೇಳಿರಿ. ಊರಿಗೆ ಉಪಕಾರಿ, ಮನೆಗೆ ಮಾರಿ ಎಂದು ಮನೆಯವರು ಹೇಳಲಿದ್ದಾರೆ. ಮಕ್ಕಳ ಬಗ್ಗೆ ಗಮನವಿರಲಿ.
ಮಿಥುನ : ಗುರು ಜನ್ಮ ರಾಶಿಯಲ್ಲಿ ಇದ್ದಾನೆ. ಸಪ್ತಮದಲ್ಲಿ ರವಿ, ಕುಜ ಇದ್ದಾರೆ. ಅವರು ಪರಸ್ಪರ ಮಿತ್ರರು ಆದರೂ ಭಾಧಕ ಸ್ಥಾನದಲ್ಲಿ ಇರುವುದರಿಂದ ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರವಾಗಿರುವುದು ಅಗತ್ಯವಿದೆ. ಸಹೋದರ ವರ್ಗದವರ ಜೊತೆಗೆ ಹೊಂದಿಕೊಂಡು ಹೋಗುವುದು ಅಗತ್ಯವಿದೆ. ವ್ಯಾಯಾಮ ಮಾಡುವುದು ಅಗತ್ಯವಿದೆ. ಮನಸ್ಸಿನ ಒತ್ತಡವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿರಿ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ.
ಕರ್ಕಾಟಕ : ವ್ಯಯದ ಗುರುವಿನ ಭಾಗ್ಯದ ಶನಿಯ ದೋಷ ಪರಿಹಾರಕ್ಕಾಗಿ ಉಮಾಮಹೇಶ್ವರ ದೇವರ ಸೇವೆಯನ್ನು ಯಥಾ ಶಕ್ತಿಯಾಗಿ ಮಾಡಿಕೊಂಡು ಬನ್ನಿರಿ. ಹತ್ತಿರದ ನಾಗ ದೇವರಿಗೆ ನಿಮ್ಮ ಭಕ್ತಿಯ ಪ್ರಾರ್ಥನೆ ಇರಲಿ. ಸಾಂಸಾರಿಕವಾಗಿ ಮನಸ್ಸಿನಲ್ಲಿ ಉಳಿಯುವ ಘಟನೆ ನಡೆಯಲಿವೆ. ತಲೆನೋವು ನಿತ್ಯವೂ ಕಾಡಲಿದೆ. ರಾಜಕೀಯ ವ್ಯಕ್ತಿಗಳಿಗೆ ಒಳ್ಳೆಯ ಸಮಯವಾಗಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮ ಪಡುವುದು ಅನಿವಾರ್ಯವಾಗಲಿದೆ.
ಸಿಂಹ : ಮಕ್ಕಳ ಆರೋಗ್ಯದ ಕಡೆಗೆ ಗಮನವಿರಲಿ, ನಿಮ್ಮಲ್ಲಿರುವ ಹಟ ಸ್ವಭಾವದ ಪ್ರಮಾಣದಲ್ಲಿ ಇಳಿತವಾಗಲಿದೆ. ನಿಮ್ಮ ಭಾವನೆಗಳ ಮೇಲೆ ಪೂರ್ತಿ ನಿಯಂತ್ರಣ ಸಾಧಿಸಿರಿ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಹಿರಿಯರ ಸಲಹೆಗಳಿಗೆ ಮಾನ್ಯತೆ ಕೊಡುವುದನ್ನು ಕಲಿಯಿರಿ. ವಾಹನ ಚಾಲನೆಯಲ್ಲಿ ಜಾಗ್ರತೆ ವಹಿಸಿರಿ. ಸಂಗಾತಿಯ ಸಹಕಾರ ನಿಮಗೆ ಅಗತ್ಯವಿರುತ್ತದೆ. ಉಸಿರಾಟದ ವ್ಯಾಯಾಮ ನಿಮಗೆ ಅಗತ್ಯವಿದೆ.
ಕನ್ಯಾ : ಸುಖ ಸ್ಥಾನದಲ್ಲಿ ರವಿ ಕುಜ ಇರುವುದರಿಂದ ಪಿತ್ತ ಉಷ್ಣ ಸಮಸ್ಯೆಗಳು ಕಾಡಲಿವೆ. ತಾಯಿಯ ಬಗ್ಗೆ ವಾಸವಿರುವ ಮನೆಯ ಬಗ್ಗೆ ವಾಹನದ ಬಗ್ಗೆ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರವಿರಲಿ. ಎಚ್ಚರಿಕೆ ಮತ್ತು ಜವಾಬ್ದಾರಿ ಒಟ್ಟೋಟ್ಟಿಗೆ ಮುಂದುವರಿಸಬೇಕಾದೀತು. ನಿಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಿರಿ. ಧನಾಗಮನ ಉತ್ತಮವಿದ್ದರೂ, ಖರ್ಚು ವೆಚ್ಚಗಳಿಗೆ ನಿಯಂತ್ರಣವಿರಲಿ, ಸಪ್ತಮದ ಶನಿಗೆ ದೇವೀ ಪಾರಾಯಣ ಅಗತ್ಯವಿದೆ. ಉತ್ತಮವಾದ ಉದ್ಯೋಗ ಪ್ರಾಪ್ತಿ ಯೋಗವಿದೆ.
ತುಲಾ : ನಿಮ್ಮ ಭಾಗ್ಯದಯದ ಕಾಲವನ್ನು ಗುರು ತಿಳಿಸುತ್ತಿದ್ದಾನೆ. ಹಲವು ಮೂಲಗಳಿಂದ ಆದಾಯ ನಿಮ್ಮ ಕಡೆಗೆ ಬರಲಿವೆ. ನಿಮ್ಮ ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡಲು ಬರಲಿದ್ದಾರೆ. ನಿಮ್ಮ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಯೊಂದು ನಿಮಗೆ ಕಾಡಲಿದೆ. ಬಹು ನಿರೀಕ್ಷಿತ ಬಯಕೆಯ ಈಡೇರಿಕೆ ಮನಸ್ಸಿಗೆ ನೆಮ್ಮದಿಯನ್ನು ತರಲಿದೆ. ಪೂರ್ವಜರ ಆಸ್ತಿಯ ವಿಚಾರವೊಂದು ನಿಮ್ಮ ಮನಸ್ಸನ್ನು ಚಂಚಲ ಗೊಳಿಸಲಿದೆ. ಸಂಗಾತಿಯ ಕಡೆಯಿಂದ ಭೂಮಿ ಪ್ರಾಪ್ತಿ ಯೋಗವಿದೆ.
ವೃಶ್ಚಿಕ : ಈ ವಾರವು ಕೆಲವೊಂದು ಮಹತ್ವದ ಬದಲಾವಣೆಯನ್ನು ಕಾಣುವ ವಾರವಾಗಿದೆ.ನಿಮ್ಮ ಮಾತು ಹಿತಮಿತವಾಗಿರಲಿ. ರವಿ ಕುಜ ಅವರು ಮಿತ್ರರಾದರೂ ಉಗ್ರವಾಗಿರುತ್ತಾರೆ. ಹೊಸ ಉದ್ಯೋಗ ಪ್ರಾಪ್ತಿ ಯೋಗವಿದೆ. ನಿಮಗೆ ಜವಾಬ್ದಾರಿ, ಸ್ಥಾನ ಮಾನ ಹೆಚ್ಚಾಗಲಿದೆ. ಬರಬೇಕಾದ ಹಣ ಕೈ ಸೇರಲಿದೆ. ವಿದ್ಯಾರ್ಥಿಗಳಿಗೆ ಶುಭವಾರವಾಗಿದೆ. ರಾಜಕೀಯ ಗಣ್ಯರಿಗೆ ಉತ್ತಮ ಗೌರವ ಪ್ರಾಪ್ತಿಯಾಗಲಿದೆ. ದೊಡ್ಡ ಮೊತ್ತವೊಂದು ಕೈ ಸೇರಲಿದೆ. ತೀರ್ಥ ಯಾತ್ರೆ ಮಾಡುವಿರಿ. ಮಾಡುತ್ತಿರುವ ವ್ಯವಹಾರ, ಉದ್ಯೋಗದಲ್ಲಿ ಪ್ರಾಮಾಣಿಕತೆ ಮೆರೆಯಲಿ.
ಧನು : ತುಂಬಾ ಒತ್ತಡದಿಂದ ಇರುವ ವಾರವಾಗಿದೆ. ಜನ್ಮ ರಾಶಿಯಲ್ಲಿ ಇರುವ ರವಿ ಕುಜ, ಸುಖ ಸ್ಥಾನದಲ್ಲಿ ಇರುವ ಶನಿ, ವ್ಯಯದಲ್ಲಿ ಇರುವ ಬುಧ ಶುಕ್ರ ಮಾನಸಿಕ ಚಾಂಚಲ್ಯತೆಯನ್ನು ತರುತ್ತಾರೆ. ನಿಮ್ಮ ಜವಾಬ್ದಾರಿಯನ್ನು ಪೂರೈಸಲು ಪರಿಶ್ರಮ ಪಡಬೇಕಾಗುತ್ತದೆ. ಕುಟುಂಬದ ಯಜಮಾನ ಸ್ಥಾನದ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ಯಾರ ಯಾವ ಸಲಹೆಯೂ ನಿಮಗೆ ಹಿಡಿಸುವುದಿಲ್ಲ. ಆನೆ ಹೋದದ್ದೇ ದಾರಿ ಎಂಬಂತೆ ಇರಲಿದೆ. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ.
ಮಕರ : ಈ ವಾರ ಆರೋಗ್ಯ ಮತ್ತು ಕುಟುಂಬದೊಳಗಿನ ಸೌಹಾರ್ಧತೆ ಬಗ್ಗೆ ಪ್ರತಿಕೂಲ ವಾತಾವರಣವಿರುತ್ತದೆ. ನಿಮ್ಮ ಆಹಾರ ಪದ್ಧತಿಯನ್ನು ಸರಿಪಡಿಸಿಕೊಳ್ಳಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ ಪಡೆಯಲು ಹೆಚ್ಚಿನ ಪ್ರಯತ್ನ ಅಗತ್ಯವಿದೆ. ವೃತ್ತಿರಂಗದಲ್ಲಿ ಆಗಾಗ ಎಡವಿದ ಅನುಭವ ಆದರೂ ಸರಿಮಾಡಿಕೊಳ್ಳುವಿರಿ. ಸಹೋದರ ವರ್ಗದವರ ಸಹಾಯ ಸಿಗಲಿದೆ. ಮನೆ ಬದಲಾವಣೆಯ ಯೋಗವಿದೆ. ಹಿರಿಯರೊಬ್ಬರು ನಿಮ್ಮಿಂದ ವಿದಾಯ ಹೇಳುವ ಸಾಧ್ಯತೆ ಇದೆ.
ಕುಂಭ : ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಸಮಾಧಾನ ಕಂಡು ಬರಲಿದೆ. ನಿಮ್ಮ ವೃತ್ತಿರಂಗದಲ್ಲಿ ಕೆಲವೊಂದು ಬದಲಾವಣೆಗೆ ಸಿದ್ಧರಾಗಿರಬೇಕು. ರವಿ ಕುಜ, ಧನು ರಾಶಿಯಲ್ಲಿ ಇರುವುದರಿಂದ ನಿಮ್ಮ ಆದಾಯದಲ್ಲಿ ಗಮನಾರ್ಹ ರೀತಿಯಲ್ಲಿ ಏರಿಕೆಯಾಗಲಿದೆ. ಧಾರ್ಮಿಕವಾಗಿ ನೀವು ನಿಮ್ಮನ್ನು ತೊಡಗಿಸಿ ಕೊಳ್ಳಲಿದ್ದೀರಿ. ದೈವಾನುಗ್ರಹ ಉತ್ತಮವಾಗಿ ಒದಗಿ ಬರಲಿದೆ. ವಿವಾದಗಳಿಗೆ ಸಿಲುಕದಂತೆ ಎಚ್ಚರವಹಿಸಬೇಕು, ರಾಜಕೀಯ ವ್ಯಕ್ತಿಗಳು ಉನ್ನತ ಸ್ಥಾನ ಮಾನವನ್ನು ಪಡೆಯಲಿದ್ದಾರೆ.
ಮೀನ : ರವಿ ಮತ್ತು ಕುಜ ಕರ್ಮ ಕ್ಷೇತ್ರದಲ್ಲಿ ಇದ್ದು ಜನ್ಮದಲ್ಲಿ ಶನಿ ಇರುವುದರಿಂದ ಬಹಳ ಎಚ್ಚರದಿಂದ ತಾಳ್ಮೆಯಿಂದ ಇರಬೇಕಾಗಿರುವುದು ಅವಶ್ಯವಾಗಿದೆ. ಮೇಲಾಧಿಕಾರಿಗಳಿಂದ ಕಿರಿ ಕಿರಿ ಬರಲಿದೆ, ಉನ್ನತ ಸ್ಥಾನ ಮಾನ, ಜೊತೆಗೆ ವರ್ಗಾವಣೆ ಆಗುವ ಸಾಧ್ಯತೆ ಇರುತ್ತದೆ. ರಾಜಕೀಯ ವ್ಯಕ್ತಿಗಳು ಮಾತಾಡುವಾಗ ಎಚ್ಚರವಹಿಸಬೇಕು. ಆಸ್ತಿ ಖರೀಧಿ, ಧನ ಹೂಡಿಕೆಗೆ ಸಾಧ್ಯತೆ ಇರುತ್ತದೆ, ಸಾಡೇ ಸಾತ್ ಶನಿಗೆ ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ. ಮಂಗಳ ಕಾರ್ಯಗಳಿಗೆ ಅಡೆ ತಡೆ ಬರಲಿದೆ. ಎಚ್ಚರವಿರಲಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು. ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು, ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ನಿಶ್ಚಯಿಸಿ ತಿಳಿಸಲಾಗುವುದು. ವಾಸ್ತು ಸಲಹೆ /ವಿವಾಹ ಹೊಂದಾಣಿಕೆ ತಿಳಿಸಲಾಗುವುದು.




































