


ವಾರಭವಿಷ್ಯ
ದಿನಾಂಕ 11.01.2026 ರಿಂದ 17.01.2026ರ ತನಕ

ವಿಶೇಷ ದಿನಗಳು
12.01.2026…ಮಕರ ರಾಶಿಗೆ ಶುಕ್ರನ ಪ್ರವೇಶ
14.01.2026….ಮಕರ ಸಂಕ್ರಾಂತಿ
15.01.2026….ಮಕರ ರಾಶಿಗೆ ಕುಜನ ಪ್ರವೇಶ
17.01.2026…..ಮಕರ ರಾಶಿಗೆ ಬುಧನ ಪ್ರವೇಶ
ಮೇಷ : ಕರ್ಮ ಕ್ಷೇತ್ರದಲ್ಲಿ ನಾಲ್ಕು ಶತ್ರು ಗ್ರಹರ ಪ್ರವೇಶವಾಗಿದೆ .ಬಹಳ ಎಚ್ಚರದಿಂದ ಕಾರ್ಯ ನಿರ್ವಹಿಸಬೇಕಾದ ಸಮಯವಾಗಿದೆ. ಸಾಡೇ ಸಾತ್ ಶನಿಯ ಪ್ರಭಾವವಿರುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗಿರುವುದಿಲ್ಲ. ಸಂಬಂಧದೊಳಗೆ ವಿವಾಹ ಸಮಾರಂಭವಿರಲಿದೆ, ಆರೋಗ್ಯದ ಬಗ್ಗೆ ಬಹಳ ಎಚ್ಚರವಿರಬೇಕು, ಸಜ್ಜನರ ಸಹವಾಸದಿಂದ ನಿಮ್ಮ ಮನೋಸ್ಥಿತಿ ಬದಲಾಗಲಿದೆ. ಮನೆಯಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ನಡೆಯಲಿವೆ.
ವೃಷಭ :ಈ ವಾರದಲ್ಲಿ ಅನೇಕ ಬದಲಾವಣೆಗಳನ್ನು ಕಾಣಲಿದ್ದೀರಿ. ಬೇರೆಯವರಿಗೆ ಆರ್ಥಿಕ ಸಹಾಯ ಮಾಡಲಿದ್ದೀರಿ, ಹಿರಿಯರ ಅನಾರೋಗ್ಯ ಸ್ಥಿತಿಯನ್ನು ನೋಡಲಿದ್ದೀರಿ,ಪಿತ್ರಾರ್ಜಿತ ಆಸ್ತಿಯ ಬಗ್ಗೆ ಶೀತಲ ಯುದ್ದ ನಡೆಯುತ್ತಿರುತ್ತದೆ. ಉತ್ತಮವಾದ ಆದಾಯವಿರುತ್ತದೆ. ರಾಜಕೀಯ ವ್ಯಕ್ತಿಗಳ ಸಹಾಯವನ್ನು ಸದುಪಯೋಗ ಮಾಡಿಕೊಂಡರೆ ಆರ್ಥಿಕ ಲಾಭವಿದೆ. ಮಕ್ಕಳ ಆರೋಗ್ಯದ ಕಡೆಗೆ ನಿಮ್ಮ ಗಮನವಿರಲಿ.
ಮಿಥುನ : ಅಷ್ಟಮದಲ್ಲಿ ಬಂದಿರುವ ನಾಲ್ಕು ಗ್ರಹರು ನಿಮ್ಮ ಆರೋಗ್ಯವನ್ನು ಬಹಳ ಎಚ್ಚರದಿಂದ ನೋಡಿಕೊಳ್ಳುವಂತೆ ತಿಳಿಸುತ್ತಿದ್ದಾರೆ. ಸಹೋದರ ವರ್ಗದವರ ಜೊತೆಗೆ ಕಲಹ ಬಾರದಂತೆ ಎಚ್ಚರವಾಗಿರಿ ವಾದ ವಿವಾದಗಳಲ್ಲಿ ಜಯ ಗಳಿಸಲಿದ್ದೀರಿ. ಸ್ವಯಂಕೃತ ಅಪರಾಧಗಳಿಂದ ಧನ ನಷ್ಟ ಉಂಟಾಗಲಿದೆ. ದಾಂಪತ್ಯ ವಿಷಯವಾಗಿ ಎಚ್ಚರಿಕೆಯ ನಿರ್ಣಯಗಳು ಅಗತ್ಯವಿದೆ. ಚಿನ್ನಾಭರಣ ಖರೀಧಿ ಮಾಡಲಿದ್ದೀರಿ, ದೇವೀ ಸಪ್ತ ಶತೀ ಪಾರಾಯಣ ಅಗತ್ಯವಿದೆ.
ಕರ್ಕಾಟಕ : ಸಪ್ತಮದಲ್ಲಿ ನಾಲ್ಕು ಗ್ರಹರು ಬಂದಿರುವುದರಿಂದ ದಾಂಪತ್ಯದಲ್ಲಿ ಕಲಹ ನಿಶ್ಚಿತವಾಗಿದೆ. ವಿದ್ಯಾರ್ಥಿಗಳು ಪ್ರೀತಿ ಪ್ರೇಮದಲ್ಲಿ ಬೀಳುವ ಸಾಧ್ಯತೆ ಇರುತ್ತದೆ. ವಾಹನ ಖರೀಧಿಯ ಯೋಗವಿದೆ.ಪಾಲುದಾರಿಕೆ ವ್ಯಾಪಾರ ಒಂದು ತಿಂಗಳ ಮಟ್ಟಿಗೆ ಬೇಡ, ಕೆಲವೊಂದು ವಿಚಾರಗಳಲ್ಲಿ ನಿಮ್ಮ ನಿಲುವುಗಳೊಂದಿಗೆ ರಾಜಿ ಮಾಡಿಕೊಳ್ಳಬೇಡಿರಿ. ದೈವಾನುಗ್ರಹದ ಕೊರತೆ ಇರುವುದರಿದ ಸದಾ ಎಚ್ಚರವಾಗಿರಬೇಕು. ಅಷ್ಟಮದ ರಾಹುವಿಗೆ ನಾಗ ದೇವರ ಪ್ರಾರ್ಥನೆ ಅಗತ್ಯವಿದೆ
ಸಿಂಹ : ಶುಭ ಯೋಗ ಕೂಡಿ ಬಂದಿದೆ. ಆರನೆಯ ಮನೆಯಲ್ಲಿ ಕುಜ ಶುಕ್ರ ರವಿ ಬುಧ ಸಂಚಾರ ಮಾಡುತ್ತಿದ್ದಾರೆ.ಲಾಭ ಕ್ಷೇತ್ರದ ಗುರು ನಿಮ್ಮ ಕೆಲಸಗಳಲ್ಲಿ ಯಶಸ್ಸನ್ನು ತರಲಿದ್ದಾರೆ. ಬಹು ದಿನಗಳ ಪರಿಶ್ರಮಕ್ಕೆ ಇದೀಗ ಫಲ ಸಿಗುವ ಸಮಯವಾಗಿದೆ.ಸಣ್ಣ ವಿಷಯಗಳಿಗೂ ವಾಗ್ವಾದಕ್ಕೆ ಇಳಿದರೆ ಸಾಂಸಾರಿಕ ವಿರಸ ಬರಲಿದೆ. ನೆರೆಹೊರೆಯವರ ಜೊತೆಗೆ ವಿನಾ ಕಾರಣ ಕಲಹ ಬಾರದಂತೆ ತಾಳ್ಮೆ ವಹಿಸಿರಿ, ವಿವಾಹಾಸಕ್ತರಿಗೆ ಸೂಕ್ತ ಸಮಯವಿದು.
ಕನ್ಯಾ : ವೃತ್ತಿಕ್ಷೇತ್ರದಲ್ಲಿ ಕಠಿಣ ಪರಿಶ್ರಮ ಅಗತ್ಯವಿದೆ ಪಂಚಮದಲ್ಲಿ ನಾಲ್ಕು ಗ್ರಹರು ಸೇರಿರುವುದು ಮಕ್ಕಳ ವಿಷಯದಲ್ಲಿ ಅಸಮಾಧಾನಕ್ಕೆ ಕಾರಣವಾಗಲಿದೆ. ಹಿರಿಯರ ವಚನಪಾಲನೆಯಿಂದ ಹಳಿ ತಪ್ಪಿದ ಸಂಸಾರ ಸರಿದಾರಿಗೆ ಬರಲಿದೆ. ಮನಸ್ಸು ಕೆಡಿಸುವ ಚಿಂತನೆಗಳಿಂದ ದೂರವಿರಿ, ಹೂಡಿಕೆಗಳಿಂದ ಲಾಭ ಗಳಿಸಲಿದ್ದೀರಿ. ಆರೋಗ್ಯದ ಕಡೆಗೆ ವಿಶೇಷ ಗಮನವಿರಲಿ. ಅಹಂ ‘ ಅತಿಯಾದರೆ ತೊಂದರೆಯೇ ಹೆಚ್ಚಾಗಲಿದೆ. ಅನ್ಯ ಮಹಿಳೆಯರ ವಿಷಯದಲ್ಲಿ ಎಚ್ಚರವಿರಲಿ.
ತುಲಾ : ಸುಖ ಸ್ಥಾನದಲ್ಲಿ ಬಂದಿರುವ ನಾಲ್ಕು ಗ್ರಹರು ಹೆಚ್ಚಿನ ಜವಾಬ್ದಾರಿಯನ್ನು ನಿಮ್ಮ ಹೆಗಲ ಮೇಲೆ ಹೊರಿಸಲಿದ್ದಾರೆ. ಸರಿಯಾಗಿ ನಿರ್ವಹಿಸಿಕೊಂಡು ಹೋಗುವುದು ನಿಮಗೆ ಕಷ್ಟವಾಗಲಿದೆ. ಆರೋಗ್ಯದ ಸಮಸ್ಯೆ ಕಾಡಲಿದೆ. ಸತಿ-ಪತಿಯರ ನಡುವೆ ವಿರಸ ಬರಲಿದೆ. ಸ್ವಂತ ಉದ್ದಿಮೆದಾರರಿಗೆ ಸೋಲಿನ ಭಯ ಕಾಡಲಿದೆ. ಸೌಹಾರ್ಧ ಸಂಬಂಧ ಉಳಿಸಿಕೊಂಡು ಹೋಗುವುದು ಕಷ್ಟವಾಗಲಿದೆ. ಪ್ರೀತಿ ಪಾತ್ರರ ಭಾವನೆಗಳನ್ನೂ ಗೌರವಿಸಿರಿ.
ವೃಶ್ಚಿಕ : ಬಹಳ ಒಳ್ಳೆಯ ಒಂದು ತಿಂಗಳ ಕಾಲ ನಿಮ್ಮದಾಗಿದೆ. ಬರುವ ಆದಾಯದಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ. ಸರಕಾರದಿಂದ ಸಿಗುವ ಸವಲತ್ತು ಸಿಗಲಿದೆ. ರಾಜಕೀಯ ಗಣ್ಯರಿಗೆ ಗೌರವ ಸಿಗಲಿದೆ, ಶತ್ರುಗಳೂ ಮಿತ್ರರಾಗುವ ಸಮಯವಾಗಿದೆ. ಸಹೋದರ ವರ್ಗದವರ ಜೊತೆಗೆ ವಿರಸವಾಗದಂತೆ ಎಚ್ಚರವಹಿಸಿರಿ. ಹೊಸ ವಾಹನ ಅಥವಾ ಮನೆ ಖರೀಧಿ ಮಾಡಲಿದ್ದೀರಿ, ದೇವೀ ಸಪ್ತಶತೀ ಪಾರಾಯಣ, ಪ್ರತ್ಯಂಗರೀ ಅಮ್ಮನವರ ಜಪ ಅಗತ್ಯವಿದೆ.
ಧನು : ಮಾತು ಹಿಡಿತದಲ್ಲಿ ಇರಲೇ ಬೇಕು, ಬರುವ ಆದಾಯಕ್ಕೆ ಯಾವುದೇ ಕೊರತೆ ಇರಲಾರದು, ಪತ್ನಿಯ ಮನಸ್ಸಿಗೆ ಬೇಸರ ಬರುವ ಸಾಧ್ಯತೆ ಇರುತ್ತದೆ, ಬರುವ ಆದಾಯವನ್ನು ನೋಡಿಕೊಂಡು ಖರ್ಚು ಮಾಡಬೇಕಾಗುತ್ತದೆ. ಪಿತ್ರಾರ್ಜಿತ ಆಸ್ತಿ ವಿವಾದವು ಸರಿಯಾಗುವ ಹಂತಕ್ಕೆ ಬಂದು ತಲುಪಲಿದೆ. ದುಶ್ಚಟಗಳಿಗೆ ಬಲಿಯಾಗಬೇಡಿರಿ. ವಾಹನ ಸಂಚಾರದಲ್ಲಿ ಎಚ್ಚರವಹಿಸಿರಿ, ಗುರು ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಿರಿ.
ಮಕರ : ಜನ್ಮ ರಾಶಿಯಲ್ಲಿ ಒಂದೇ ಬಾರಿ 4-5 ಗ್ರಹರು ಸೇರಲಿದ್ದಾರೆ. ಪಂಚಗ್ರಹ ಯೋಗ ಸೇ ಬರಲಿದೆ. ಅಮಾವಾಸ್ಯೆ ಕೂಡ ಸೇರಿಕೊಳ್ಳಲಿದೆ.ದೈವಾನುಗ್ರಹ ಕೊರತೆ ಕೂಡಾ ಇರಲಿದೆ. ಬರುತ್ತಿರುವ ಕನಿಷ್ಠ ಆದಾಯದ ಇತಿಮಿತಿಯ ಒಳಗೆ ಯಾರೊಂದಿಗೂ ಕಲಹಕ್ಕೆ ಹೋಗದೆ ಮುಂದುವರಿಯುವುದು ಅಗತ್ಯವಿದೆ. ಮಿತ್ರರೇ ಶತ್ರುಗಳಾಗುವ ಸಮಯ. ಆತ್ಮ ವಿಶ್ವಾಸದಿಂದ ಕಠಿಣ ಕೆಲಸಗಳನ್ನು ಸಾಧಿಸಲಿದ್ದೀರಿ. ಮಕ್ಕಳ ವಿಷಯದಲ್ಲಿ ಬೇಸರ ಬರಲಿದೆ, ಓಂ ನಮ: ಶಿವಾಯ’ ಮಂತ್ರವನ್ನು ಪಾರಾಯಣ ಮಾಡಿರಿ,
ಕುಂಭ : ವ್ಯಯದಲ್ಲಿ ಪಂಚ ಗ್ರಹರು ದ್ವಿತೀಯಾದಲ್ಲಿ ಶನಿ ಇರುವ ಈ ವಾರ ಯಾವುದೇ ಹೊಸ ವ್ಯವಹಾರಕ್ಕೆ ಕೈ ಹಾಕಬೇಡಿರಿ, ತಾಯಿಯವರ ಕಡೆಯಿಂದ ಸಹಾಯ ಸಿಗಲಿದೆ ಕೃಷಿಕರಿಗೆ ಶುಭವಾಗಲಿದೆ ಕಷ್ಟಕರವಾದ ಕೆಲಸಗಳನ್ನು ಛಲದಿಂದ ಸಾಧಿಸಲಿದ್ದೀರಿ. ದೈವಾನುಗ್ರಹ ಇರುವ ಸಮಯವಾಗಿದೆ. ಆಯುಧ, ಬೆಂಕಿಯ ವಿಷಯದಲ್ಲಿ ಎಚ್ಚರವಿರಲಿ. ಸ್ತ್ರೀಯರ ಸಹಾಯದಿಂದ ಧನ ಲಾಭವಾಗಲಿದೆ.
ಮೀನ :ನಿಮ್ಮ ಅದೃಷ್ಟದ ಒಂದು ತಿಂಗಳು ನಿಮ್ಮೆದುರು ಬಂದಿದೆ. ಹಳೆಯ ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗಲಿದೆ. ಆತ್ಮೀಯರಿಂದಲೇ ಮೋಸಹೋಗುವ ಸಾಧ್ಯತೆ ಇರುತ್ತದೆ. ಅಧಿಕ ಮಾತುಗಾರಿಕೆ ಜಗಳಕ್ಕೆ ಕಾರಣವಾಗಬಹುದು, ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯವಿದೆ. ಹಣ ಹೂಡಿಕೆ ಮಾಡಲು ಸರಿಯಾದ ಸಮಯವಲ್ಲ.ಸಾಡೇ ಸಾತ್ ಶನಿಯ ಕಾಟ ನಿಮ್ಮೆದುರು ಇರುವುದನ್ನು ಗಮನಿಸಿರಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.




































