ವಾರಭವಿಷ್ಯ ದಿನಾಂಕ : 06.07.2025 ರಿಂದ 12.07.2025 ರ ತನಕ
ವಿಶೇಷ ದಿನಗಳು :
ದಿನಾಂಕ 10.07.2025
ಗುರು ಪೂರ್ಣಿಮಾ, ವ್ಯಾಸ ಪೂಜಾ.
ಯತಿಚಾತುರ್ಮಾಸ್ಯಾರಂಭ:
ಮೇಷ : ಈ ವಾರ ನಿಮ್ಮ ಆರೋಗ್ಯ ಉತ್ತಮವಾಗಿರುವುದು, ಆದಷ್ಟು ಚಿಂತೆ ಮಾಡುವುದನ್ನು ಕಡಿಮೆ ಮಾಡಿರಿ, ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬಂದಿದೆ. ಎಲ್ಲಾ ಕಡೆಯಿಂದಲೂ ಕೀರ್ತಿ ಗೌರವ ಲಭಿಸಲಿದೆ. ದಾಂಪತ್ಯ ಜೀವನದಲ್ಲಿ ಎಚ್ಚರ ಅಗತ್ಯ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭಬರಲಿದೆ.ರಾಜಕೀಯ ವ್ಯಕ್ತಿಗಳಿಗೆ ಸರಕಾರಿ ನೌಕರರಿಗೆ ಉತ್ತಮ ಸಮಯವಾಗಿದೆ. “ಲಕ್ಷ್ಮೀ ಸಹಸ್ರನಾಮ ಪಾರಾಯಣ” ಮಾಡಿರಿ
ವೃಷಭ :ಈ ವಾರ ಉತ್ತಮ ದೈವಾನುಗ್ರವಿರುತ್ತದೆ. ಉತ್ತಮ ಉದ್ಯೋಗ ಲಭಿಸಲಿದೆ. ಸಹೋದರ ವರ್ಗದವರಿಂದ ಸಂತೋಷ ಲಭಿಸಲಿದೆ. ದಾಂಪತ್ಯ ಜೀವನ ಉತ್ತಮವಾಗಿರುತ್ತದೆ, ರಾಜಕೀಯ ವ್ಯಕ್ತಿಗಳು ಮಾತಿನಲ್ಲಿ ಹಿಡಿತವನ್ನುಸಾಧಿಸಬೇಕು, ಹಿತ ಶತ್ರುಗಳು ನಿಮ್ಮ ಅಭಿವೃದ್ಧಿಯ ಹಿಂದೆಯೇ ಇದ್ದಾರೆ. ಬರುವ ಆದಾಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಕುಟುಂಬದಲ್ಲಿ ಅನಾರೋಗ್ಯ ಸಮಸ್ಯೆ ಬರಬಹುದು. ವಾಹನದಲ್ಲಿ ಎಚ್ಚರ ಅಗತ್ಯವಾಗಿದೆ.
ಮಿಥುನ : ದ್ವಿತೀಯಾದಲ್ಲಿ ಇರುವ ಬುಧ ಸುಖ ಸಂತೋಷವನ್ನು ನೀಡಲಿದ್ದಾನೆ. ವಾಹನ, ಮನೆ ಖರೀಧಿ ಯೋಗವಿದೆ, ರವಿ ಗುರು ಜನ್ಮ ರಾಶಿಯಲ್ಲಿ ಇರುವುದರಿಂದ ದೇವರ ಅನುಗ್ರಹಕ್ಕಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಅಗತ್ಯವಾಗಿದೆ. ನೀವು ಪ್ರಸ್ತುತ ಮಾಡುತ್ತಿರುವ ವ್ಯವಹಾರ, ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಮನೆಯಲ್ಲಿಶುಭ ಸಮಾರಂಭಗಳು ನಡೆಯಲಿವೆ. ಆರಂಭದಲ್ಲಿ ಗಣಪತಿಯ ಆರಾಧನೆ ಮಾಡಲು ಮರೆಯಬೇಡಿರಿ.
ಕರ್ಕಾಟಕ : ಈ ವಾರ ಹಣದಲ್ಲಿ ಮಾತಿನಲ್ಲಿ ವ್ಯವಹಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿರಿ. ದೈವಾನುಗ್ರಹದ ಶೂನ್ಯತೆ ಇದೆ. ಶ್ರೀ ಸತ್ಯನಾರಾಯಣ ದೇವರ ಪ್ರಾರ್ಥನೆ ಅಗತ್ಯವಿದೆ, ವಾಹನ ಚಾಲಕರು ಎಚ್ಚರ ವಹಿಸಿರಿ. ಹಿರಿಯರ ಆರೋಗ್ಯದ ಬಗ್ಗೆ ಗಮನ ಕೊಡಿರಿ. ನೆರೆಕರೆಯವರಲ್ಲಿ ವೃಥಾ ಮನಸ್ತಾಪ ಬರಲಿದೆ, ಮಕ್ಕಳೊಂದಿಗೆ ಜಾಣೆಯಿಂದ ವ್ಯವಹರಿಸಿರಿ. ಸರಕಾರಿ ನೌಕರರಿಗೆ ಹಣದ ವಿಷಯದಲ್ಲಿ ಎಚ್ಚರದಿಂದ ಇರಲು ಸೂಚಿಸಲಾಗುತ್ತಿದೆ. “ಆದಿತ್ಯ ಹೃದಯ” ಮಂತ್ರದ ಪಾರಾಯಣ ಮಾಡಿರಿ.
ಸಿಂಹ :ಜನ್ಮ ರಾಶಿಯಲ್ಲಿ ಕುಜ ಕೇತು ಅಷ್ಟಮದಲ್ಲಿ ಶನಿ ಇದ್ದಾಗ ಸಿಂಹದ ರೀತಿಯಲ್ಲಿ ಗರ್ಜಿಸುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ, ನಿಮ್ಮ ಸಂಗಾತಿಯೊಂದಿಗೆ ವಿರಸ ಬೇಡ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬಂದಿದೆ, ಪ್ರೇಮಿಗಳು ಎಚ್ಚರದಿಂದ ಇರಬೇಕು. ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ’ ಸಂಗಾತಿಯಿಂದ ಅಧಿಕ ಲಾಭ ಸಿಗುವ ಸಾಧ್ಯತೆ ಇದೆ, ಹಣ ಪಡೆಯಲು ಹಿಂಜರಿಕೆ ಇರುತ್ತದೆ. ನಿಮ್ಮ ಸ್ವಾಭಿಮಾನ ಇದಕ್ಕೆ ಅಡ್ಡಿ ಮಾಡಲಿದೆ. ವಿದ್ಯಾರ್ಥಿಗಳು ಓದುವಿಕೆಯ ಕಡೆಗೆ ಗಮನ ಕೊಡಿರಿ.
ಕನ್ಯಾ : ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ. ಮೇಲಧಿಕಾರಿಗಳ ಕಿರಿಕಿರಿ ನಿರೀಕ್ಷಿತವಾಗಿದೆ. ಪ್ರೀತಿಸುವ ಮನಸ್ಸು ಯುವಕ ಯುವತಿಯರಿಗೆ ಶನಿ ನೀಡಲಿದ್ದಾನೆ. ಇದು ಉತ್ತಮ ಬೆಳವಣಿಗೆ ಅಲ್ಲ ದುರ್ಗಾ ಪ್ರಾರ್ಥನೆಯಿಂದ ಪರಿಹಾರ ಸಿಗಲಿದೆ. ಮನೆಯಲ್ಲಿ ಅಶಾಂತಿ ಉಂಟಾಗಲಿದೆ. ತಾಯಿಯವರ ಕಡೆಯಿಂದ ಧನದ ಮೂಲ ಸಿಗಲಿದೆ. ಹಿರಿಯರ ಅನುಗ್ರಹ ನಿಮಗಿರುತ್ತದೆ. ಚಿತ್ರ ರಂಗ ಹೋಟೆಲ್ ಮಾಲಕರಿಗೆ ಉತ್ತಮ ಆದಾಯ
ಬರಲಿದೆ.
ತುಲಾ : ಉತ್ತಮ ದೈವಾನುಗ್ರಹ ಇರುವ ವಾರವಾಗಿದೆ. ಅಗತ್ಯ ವಸ್ತುಗಳ ಖರೀಧಿಗೆ ವೆಚ್ಚ ಮಾಡುವ ಸಾಧ್ಯತೆ ಇರುತ್ತದೆ, ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ, ಪಂಚಮದ ರಾಹುವಿಗೆ ನಾಗ ದೇವರ ಯಥಾ ಶಕ್ತಿ ಸೇವೆಯನ್ನು ಸಲ್ಲಿಸುತ್ತಾ ಬನ್ನಿರಿ, ಸಂಶಯವೆಂಬ ಭಾವನೆಯನ್ನು ಬಿಟ್ಟಾಗ ಸಂಸಾರ ಉತ್ತಮವಾಗಿ ನಡೆಯಲಿದೆ. ಭೂಮಿ ಖರೀಧಿ/ಮಾರಾಟ ಮಾಡುವವರಿಗೆ ಉತ್ತಮವಾದ ಸಮಯವಾಗಿದೆ. ಆದಿತ್ಯ ಹೃದಯ ಮಂತ್ರ ಪಾರಾಯಣ ಅಗತ್ಯವಾಗಿದೆ.
ವೃಶ್ಚಿಕ : ಶ್ರೀ ಮಹಾ ಮೃತ್ಯುಂಜಯ ಮಹಾ ಭೈರವ ಮಂತ್ರವನ್ನು ಪ್ರತಿ ನಿತ್ಯ 108 ಬಾರಿ ಹೇಳುತ್ತಾ ಬಂದಾಗ ಸ್ಥಿರ ಆಸ್ತಿ ಸಿಗುವ ಅವಕಾಶ ಬರಲಿದೆ. ಶತ್ರುಗಳನ್ನು ಬಹಳ ಸುಲಭವಾಗಿ ಜಯಿಸುವಿರಿ, ಧನ ಆದಾಯದ ಅನೇಕ ಮೂಲಗಳು ನಿಮ್ಮ ಗೋಚರಕ್ಕೆ ಬರಲಿವೆ. ರಾಜಕೀಯ ವ್ಯಕ್ತಿಗಳಿಗೆ ಸರಕಾರಿ ನೌಕರರಿಗೆ ಈ ವಾರ ಲಾಭದಾಯಕವಾಗಿ ಪರಿವರ್ತನೆಯಾಗಲಿದೆ, ದಾಂಪತ್ಯ ಜೀವನ ಸುಖಮಯವಾಗಲಿದೆ. ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು.
ಧನು : ಪ್ರತಿ ನಿತ್ಯ ಬೆಳಿಗ್ಗೆ ಸುಖ ಸ್ಥಾನದಲ್ಲಿ ಇರುವ ಶನಿಗೆ ಅಷ್ಟಮದಲ್ಲಿ ಇರುವ ಬುಧನಿಗೆ ಉತ್ತಮ ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬಂದಾಗ, ಗಂಟು ನೋವು, ಮಾನಸಿಕ ಒತ್ತಡ ಪರಿಹಾರವಾಗಲಿದೆ. ಯಾವುದೇ ವ್ಯವಹಾರದಲ್ಲಿ ನೀವು ಮಾಡುತ್ತಿರುವ ಪ್ರಯತ್ನ ಸಫಲವಾಗಲಿದೆ ವಾಹನ ಅಥವಾ ಆಯುಧಗಳಿಂದ ಆಗಲಿರುವ ಅಪಘಾತದಿಂದ ತಪ್ಪಿಸಿಕೊಳ್ಳುವಿರಿ, ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿಯನ್ನು ಹೊಂದುವರು, ಶತ್ರುಗಳು ದೂರ ಸರಿಯುವರು.
ಮಕರ : ಉತ್ತಮ ದೈವಾನುಗ್ರಹವನ್ನು ಹೊಂದಲು ಶ್ರೀ ಗಣಪತಿ ಅಷ್ಟೋತ್ತರವನ್ನು ಪ್ರತಿನಿತ್ಯ ಹೇಳುತ್ತಾ ಬಂದಾಗ ನಿಮ್ಮ ಮನಸ್ಸಿನಲ್ಲಿರುವ ಬಯಕೆಗಳು ಈಡೇರಲಿವೆ, ಗೌರವ, ಕೀರ್ತಿ ಲಭಿಸಲಿದೆ. ಸರಕಾರಿ ನೌಕರರಿಗೆ ಉನ್ನತ ಹುದ್ದೆಗೆ ಭಡ್ತಿ ಹೊಂದುವಿರಿ, ಕುಜ ಮತ್ತು ಕೇತು ಅಷ್ಟಮದಲ್ಲಿ ಇರುವುದರಿಂದ ಮೃತ್ಯುಂಜಯ ಜಪ ಪ್ರತಿನಿತ್ಯ 108 ಬಾರಿ ಹೇಳುವ ಅಗತ್ಯವಿದೆ. ನಾಗ ದೇವರ ಮತ್ತು ದುರ್ಗೆಯ ಯಥಾ ಶಕ್ತಿ ಸೇವೆಯನ್ನು ಮಾಡಿಕೊಂಡು ಬರುವುದು ಅಗತ್ಯವಿದೆ.
ಕುಂಭ :ಜನ್ಮ ರಾಶಿಯ ರಾಹು ದ್ವಿತೀಯಾದಲ್ಲಿ ಇರುವ ಶನಿ ಸಪ್ತಮದಲ್ಲಿ ಇರುವ ಕುಜ ಮತ್ತು ಕೇತುವಿಗೆ ಪರಿಹಾರ ಮಾಡಿಕೊಳ್ಳುವುದು ಅಗತ್ಯವಿದೆ. ತಾಳೆ ದುಡ್ಡಿನ ಮೇಲಿನ ಹಿಡಿತ,ಸಂಗಾತಿಯೊಂದಿಗೆ ಪ್ರೀತಿ ವಿಶ್ವಾಸ ಇವುಗಳು ನಿಮ್ಮ ನಿತ್ಯ ಹೇಳುವ ಮಂತ್ರವಾಗಬೇಕು, “ಓಂ ಶ್ರೀಂ ನಮ: ಶಿವಾಯ “ಈ ಒಂದು ಮಂತ್ರದಿಂದ ಈ ಎಲ್ಲವೂ ನಿಮಗೆ ಸುಲಭ ಪ್ರಾಪ್ತಿಯಾಗಲಿದೆ. [108 ಬಾರಿ ] ಕೋರ್ಟಿನಲ್ಲಿ ಜಯ ನಿಮ್ಮದಾಗಲಿದೆ. ವಿವಾಹ ಅಪೇಕ್ಷಿತರು ಸ್ವಲ್ಪ ಸಮಯ ಕಾಯಬೇಕು.
ಮೀನ : ವ್ಯಯದಲ್ಲಿ ರಾಹು ಜನ್ಮ ರಾಶಿಯಲ್ಲಿ ಶನಿ ಇವರಿಗೆ ಪರಿಹಾರ ಅಗತ್ಯವಿದೆ. ನೀವು ಮಾಡುತ್ತಿರುವ ಉದ್ಯೋಗದಲ್ಲಿ ಎಚ್ಚರವಿರಲಿ, ಸರಕಾರಿ ನೌಕರರು, ರಾಜಕೀಯ ಗಣ್ಯರು ಉನ್ನತ ಸ್ಥಾನಮಾನ ಪಡೆಯಲು ನಿತ್ಯವೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ. ಮೂಗಿನ ತುದಿಯಲ್ಲಿ ಬರುವ ಸಿಟ್ಟನ್ನು ಸ್ವಲ್ಪ ತಡೆಯಲು “ಓಂ ಶ್ರೀಂ ನಮ: ಶಿವಾಯ” ಮಂತ್ರವನ್ನು ಹೇಳುವ ಅಭ್ಯಾಸ ಇಟ್ಟುಕೊಳ್ಳಿರಿ, ವ್ಯರ್ಥ ಖರ್ಚು ಮಾಡುವುದನ್ನು ನಿಲ್ಲಿಸಿರಿ.



























