ವಾರಭವಿಷ್ಯ ತಾರೀಕು 29.06.2025 ರಿಂದ 05.07.2025ರ ವರೆಗೆ
ವಿಶೇಷ ದಿನಗಳು: 29.06.2025: ಶುಕ್ರ ವೃಷಭ ರಾಶಿ ಪ್ರವೇಶ
ಮೇಷ :ಇಂದಿನಿಂದ ಸಾಂಸಾರಿಕವಾಗಿ ಶುಭ ದಿನ ಆರಂಭವಾಗಲಿದೆ. ಶುಕ್ರ ತನ್ನ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಸಂತಾನದ ನಿರೀಕ್ಷೆಯಲ್ಲಿ ಇರುವವರು ವೈದ್ಯರ ಬಳಿ ತೆರಳುವುದು ಅನಿವಾರ್ಯವಾಗಲಿದೆ. ಮಕ್ಕಳ ಅನಾರೋಗ್ಯ ಸ್ಥಿತಿಯನ್ನು ಸರಿಪಡಿಸಿಕೊಳ್ಳಬೇಕಾಗಿದೆ. ವ್ಯರ್ಥ ಖರ್ಚು ಬರುವುದನ್ನುವಿಷ್ಣು ಸಹಸ್ರನಾಮ ಪಾರಾಯಣದ ಮೂಲಕ ಸರಿಪಡಿಸಿ ಕೊಳ್ಳಬಹುದಾಗಿದೆ. ನಾಗ ದೇವರ ಆರಾಧನೆಯಥಾ ಶಕ್ತಿ ಮಾಡುತ್ತಾ ಬನ್ನಿರಿ, ವಿದ್ಯಾರ್ಥಿಗಳಿಗೆ ಶುಭ ಸಮಯವಾಗಿದೆ. “ತಾಳಿದವನು ಬಾಳಿಯಾನು”
ವೃಷಭ :ಮನೆಯಲ್ಲಿ ಮಂಗಳಕಾರ್ಯ ನಡೆಯುವುದಕ್ಕೆ ಗುರುರವಿ ಅನುವು ಮಾಡಿಕೊಡುತ್ತಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಬಹಳ ಬೇಡಿಕೆಯ ವ್ಯಕ್ತಿಯಾಗುವಿರಿ. ಆಭರಣ ಖರೀದಿ,ಬೆಲೆ ಬಾಳುವ ವಸ್ತುಗಳ ಖರೀಧಿಗೆ ಶುಕ್ರ ಪ್ರಚೋದನೆಯನ್ನು ನೀಡುತ್ತಿದ್ದಾನೆ. ರಾಜಕೀಯದವರಿಗೆ ಸ್ಥಾನಮಾನ ಲಭಿಸಲಿದೆ. ತಮ್ಮ ಬೇಡಿಕೆಯ ಈಡೇರಿಕೆಯಾಗುವುದು ಕಷ್ಟವಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಿರಿ. ವಿದ್ಯಾರ್ಥಿಗಳಿಗೆ ಅತ್ಯಂತ ಶುಭ ಸಮಯ. ಅನೇಕ ಮೂಲಗಳಿಂದ ಧನಾಗಮವಾಗಲಿದೆ.
ಮಿಥುನ :ಇಂದು ಶುಕ್ರ ವ್ಯಯಕ್ಕೆ ಬಂದಿದ್ದಾನೆ. ಆದರೂ ಹೆಚ್ಚಿನ ಪ್ರತಿಕೂಲತೆಗಳು ಕಂಡು ಬರುವುದಿಲ್ಲ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಒಳ್ಳೆಯ ಅವಕಾಶವಿದೆ. ಕಬ್ಬಿಣದ ವ್ಯಾಪಾರಿಗಳಿಗೆ ಒಳ್ಳೆಯ ಅವಕಾಶ ಅಧಿಕ ಲಾಭ ಸಿಗಲಿದೆ. ಮೆಕಾನಿಕಲ್, ಸಿವಿಲ್, ಇಂಜಿನೀಯರ್ಸ್ತಳಿಗೆ ಒಳ್ಳೆಯ ಅವಕಾಶ ಸಿಗಲಿದೆ..ಅವಿವಾಹಿತರಿಗೆ ಕಂಕಣ ಬಲ ಕೆಲವು ಕಿರಿಕಿರಿಗಳ ಜೊತೆಗೆ ಕೂಡಿ ಬರಲಿದೆ. ರಾಜಕೀಯ ಗಣ್ಯರಿಗೆ ಒಳ್ಳೆಯ ಅವಕಾಶವಿದೆ. ಅವರು ಆದಿತ್ಯ ಹೃದಯ ಮಂತ್ರವನ್ನು ಪಾರಾಯಣಮಾಡಬೇಕು.
ಕರ್ಕಾಟಕ :ಗುರು ಮತ್ತು ರವಿ ವ್ಯಯದಲ್ಲಿ ಮತ್ತು ಶುಕ್ರ ಭಾಧಕ ಕ್ಷೇತ್ರದಲ್ಲಿ ಹಾಗೂ ಇನ್ನುಳಿದ ಗ್ರಹರು ಕೂಡಾ ಪ್ರತಿಕೂಲ ಸ್ಥಿತಿಯಲ್ಲಿ ಇರುವುದರಿಂದ ಮನಸ್ಸಿಗೆ ಸಂತೋಷವನ್ನು ಕೊಡುವಂತಹ ಕೆಲಸಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಿರಿ.ಸಾಂಸಾರಿಕವಾಗಿ ಗುರು ರವಿ ಗೊಂದಲವನ್ನು ಸೃಷ್ಟಿ ಮಾಡಲಿದ್ದಾರೆ.ಇಲ್ಲಿ ತಾಳ್ಮೆ ಹೊಂದಾಣಿಕೆ ಅಗತ್ಯವಿದೆ. ರಾಹು ಶನಿ ಚಿಂತೆಯನ್ನು ಮಾನಸಿಕ ಒತ್ತಡವನ್ನು ತರಲಿದ್ದಾರೆ. ದುರ್ಗಾ ಪಾರಾಯಣ ಪರಿಹಾರವಾಗಿದೆ
ಸಿಂಹ : ಗುರು ರವಿಯ ಅನುಗ್ರಹ ಉತ್ತಮವಾಗಿ ದೊರೆತಿರುವುದರಿಂದ,ಮತ್ತು ಇಂದಿನಿಂದ ಶುಕ್ರನ ಅನುಗ್ರಹ ಕೂಡ ಸಿಗಲಿರುವುದರಿಂದ ನೀವು ಅದೃಷ್ಟಶಾಲಿಗಳು ಆಗಿರುವಿರಿ, ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬಂದಿದೆ. ಅಷ್ಟಮದಲ್ಲಿರುವ ಶನಿ ನಿಮ್ಮಲ್ಲಿ ದಮನ ಮಾಡುವ ಪ್ರವೃತ್ತಿಯನ್ನು ತರಲಿದ್ದಾನೆ ಇದು ಉತ್ತಮವಲ್ಲ.ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ, ಸಪ್ತಮದ ರಾಹು ದಾಂಪತ್ಯದಲ್ಲಿ ವಿರಸ, ವೈರಾಗ್ಯವನ್ನು ತರಲಿದ್ದಾನೆ.
ಕನ್ಯಾ : ಜನ್ಮ ರಾಶಿಯಿಂದ ಸಪ್ತಮದಲ್ಲಿ ಶನಿ ಇರುವುದರಿಂದ ಸಂಸಾರದಲ್ಲಿ ಒಡಕು ಮೂಡದಿರಲು ಲಲಿತಾ ಸಹಸ್ರನಾಮ ಪಾರಾಯಣವನ್ನು ಮಾಡುತ್ತಾ ಬರಬೇಕು, ಉದ್ಯೋಗದಲ್ಲಿ ಮೇಲಧಿಕಾರಿಗಳ ಕಿರಿಕಿರಿ ಮನಸ್ಸಿಗೆ ಬೇಸರವನ್ನು ತರಲಿದೆ. ವೃತ್ತಿರಂಗದಲ್ಲಿ ನಿಮ್ಮತನವನ್ನು ಉಳಿಸಿಕೊಳ್ಳಿರಿ. ಇಂದು ನಡೆಯುವ ಶುಕ್ರನ ಬದಲಾವಣೆ ನಿಮ್ಮ ಪಾಲಿಗೆ ವರದಾನವಾಗಲಿದೆ.ಕೃಷಿಕರಿಗೆ,ಹೊಟೇಲ್ ಉದ್ಯಮದವರಿಗೆ ಚಲನ ಚಿತ್ರದವರಿಗೆ ಉತ್ತಮ.
ತುಲಾ : ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಗುರು ಮತ್ತು ರವಿಯ ಅನುಗ್ರಹದಿಂದ ಅಪವಾದ ಬರುವುದು ತಪ್ಪಿಹೋಗಲಿದೆ. ರಾಶ್ಯಾಧಿಪತಿ ಶುಕ್ರ ವೃಷಭ ರಾಶಿಗೆ ಅಂದರೆ ತನ್ನ ಮನೆಗೆ ಬಂದಿರುವುದು ನಿಮಗೆ ಶುಭವಾಗಲಿದೆ. ಬೆಲೆಬಾಳುವ ವಸ್ತುಗಳು ಮನೆ ಸೇರಲಿವೆ. ಅನ್ಯ ಸ್ತ್ರೀಯರ ಬಗ್ಗೆ ಎಚ್ಚರವಾಗಿರಿ.ಷುಗರ್ ಸಮಸ್ಯೆ ಇರುವವರು ಎಚ್ಚರವಾಗಿರಿ. ಅನಿರೀಕ್ಷಿತವಾಗಿ ಧನ ಆದಾಯದ ಮೂಲವೊಂದು ಒದಗಿ ಬರಲಿದೆ. ಉದ್ಯೋಗ ಪ್ರಾಪ್ತಿ ಯೋಗವೊಂದು ಇಲ್ಲಿದೆ. ಅವಕಾಶವನ್ನು ಕಳೆದುಕೊಳ್ಳಬೇಡಿರಿ.
ವೃಶ್ಚಿಕ : ನೀವು ಮಾಡಲಿರುವ ವಿಷ್ಣು ಸಹಸ್ರ ನಾಮ ಪಾರಾಯಣದ ಫಲವಾಗಿ ಹಿನ್ನೆಡೆ ಸಾಧಿಸುತ್ತಾ ಇದ್ದ ನಿಮಗೆ ದೇವರ ಅನುಗ್ರಹದಿಂದ ಧನ ವೃದ್ಧಿ ಆಗಲಿದೆ. ರಾಜಕೀಯದಲ್ಲಿ ತೊಡಗಿಸಿಕೊಂಡವರಿಗೆ ಯಶಸ್ಸು, ಕೀರ್ತಿ, ಸ್ಥಾನ ಮಾನ ಒದಗಿ ಬರಲಿದೆ. ನಿಮ್ಮ ಮಾತುಮುಖದ ವರ್ಚಸ್ಸು ಈಗ ಪ್ರಯೋಜನಕ್ಕೆ ಬರುತ್ತಿದೆ. ಹೊಸ ಕಟ್ಟಡದ ಸೇರ್ಪಡೆ ನಿಮ್ಮದಾಗಲಿದೆ. ಉದ್ಯೋಗದಲ್ಲಿ ಇರುವವರು ಬದಲಾವಣೆಯನ್ನು ಮಾಡಿಕೊಳ್ಳುವವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಹಿರಿಯ ಮಗನಾಗಿ ಇದ್ದಾಗ ಇಡೀ ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಲಿದೆ
ಧನು : ನಿಮ್ಮ ಬಯಸಿದ ಕೆಲಸ ನೆರವೇರಲು ಶನಿಯ ತಡೆ ಇರುವುದರಿಂದ ಅವನ ದೋಷದ ಪರಿಹಾರಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿಕೊಂಡಾಗ ಕೌಟುಂಬಿಕವಾಗಿ ಬುಧನೂ ಸಂತುಷ್ಟನಾಗಿ ಮನೆಯಲ್ಲಿ ಮಂಗಳ ಕಾರ್ಯಗಳುನೆರವೇರಲಿವೆ. ನಿಮ್ಮ ಗಂಟು ನೋವಿಗೆ ಸರಿಯಾದ ಔಷಧಿ,ಒಳ್ಳೆಯ ವೈದ್ಯರ ಸಲಹೆ ದೊರಕಲಿದೆ. ವಿದ್ಯಾರ್ಥಿಗಳು ದಿನದಲ್ಲಿ ಒಮ್ಮೆ ಈ ಪಾರಾಯಣ ಮಾಡಿದಾಗ ಯಶಸ್ವಿಯ ದಾರಿಯಲ್ಲಿ ಸಾಗಬಹುದಾಗಿದೆ.
ಮಕರ : ಶುಕ್ರನ ಅನುಗ್ರಹ ಇಂದಿನಿಂದ ಪ್ರಾಪ್ತಿಯಾಯ್ತು ಕಾರ್ಯಕ್ಷೇತ್ರದಲ್ಲಿ ನಡೆಯ ಬೇಕಾಗಿದ್ದ ದೊಡ್ಡ ಸಂಘರ್ಷ ದೂರವಾಗಲಿದೆ. ಒಳ್ಳೆಯ ನಿರ್ಧಾರ ತೆಗೆದುಕೊಳ್ಳಿರಿ. ಎಲ್ಲ ಸಂಕಷ್ಟಗಳಿಂದ ಹೊರ ಬರುವಿರಿ, ರಾಜಕೀಯ ಮುತ್ಸದ್ದಿಗಳಿಗೆ ಹೇಳಿ ಮಾಡಿಸಿದ ಸಮಯ. ನಿಮ್ಮ ಸಹೋದರ ವರ್ಗದವರೇ ನಿಮಗೆ ತೊಂದರೆ ಮಾಡುವ ಸಾಧ್ಯತೆ ಇದೆ, “ಓಂ ನಮ: ಶಿವಾಯ * 108 ಬಾರಿ ಹೇಳುತ್ತಾ ಬನ್ನಿರಿ .ನಾನಾ ರೀತಿಯಲ್ಲಿ ಹಣ ಕಾಸಿನ ಆಗಮನ ನಿಮಗೆ ನೆರವಾಗಲಿದೆ .
ಕುಂಭ : ದುರ್ಗಾ ಪಾರಾಯಾಣ ದಿಂದ ಶನಿ ರಾಹುವಿನ ತೊಂದರೆಗಳು ದೂರವಾಗಿ ದೈವಾನುಗ್ರಹ ಪ್ರಾಪ್ತಿಯಾಗಲಿದೆ. ಸಕಾಲಿಕ ಮಿತ್ರರ ಸಹಕಾರ ದೊರೆತು ನಿಮ್ಮ ಕಾರ್ಯ ಸಾಧನೆಯಾಗಲಿದೆ. ದಾಂಪತ್ಯದಲ್ಲಿವಿರಸವನ್ನು ತರುತ್ತಿರುವ ಕುಜ ಮತ್ತು ಕೇತು ಕೂಡಾ ಸಂತುಷ್ಟರಾಗುವರು. ಮುತ್ತೈದೆಯರಿಗೆ ಒಂದು ತೆಂಗಿನ ಕಾಯಿ, ರವಕೆ ಕಣ ಅರಶಿನ, ಕುಂಕುಮ ನೀಡಿರಿ. ನೌಕರರಿಗೆ ಹರ ಸಾಹಸದಿಂದ ವರ್ಗಾವಣೆ ಸ್ಥಗಿತ ಗೊಳ್ಳಲಿದೆ. ಲಂಚದ ಆಮಿಷ ಇರಲು ಸಾಧ್ಯವಿದೆ.ಇದಕ್ಕೆ ದ್ವಿತೀಯಾದ ಶನಿಯೇ ಕಾರಣನಾಗಿದ್ದಾನೆ.
ಮೀನ : ಶನಿ ಜನ್ಮರಾಶಿಯಲ್ಲಿರಾಹು ವ್ಯಯದಲ್ಲಿ ಇರುವುದರಿಂದ ನವಗ್ರಹ ಜಪದಿಂದ ದಿನದ ಆರಂಭವನ್ನು ಮಾಡಿದಾಗ ವೃತ್ತಿರಂಗದ ಋಣ ಬಾಧೆಯಿಂದಹೊರ ಬರುವಿರಿ, ಹಿರಿಯರೊಡನೆ ಗೌರವದಿಂದ ವರ್ತಿಸಿರಿ. ನಿಮ್ಮಲ್ಲಿ” ಅಹಂ ” ಇರುತ್ತದೆ. ಅದನ್ನು ಹೊರಗಿಟ್ಟು ಎಲ್ಲರೊಡನೆ ಪ್ರೀತಿಯಿಂದ ಮುನ್ನೆಡಿಯಿರಿ. ಶುಕ್ರನ ಅನುಗ್ರಹ ನಿಮಗಿದೆ. ಭೂಮಿಯ ವ್ಯವಹಾರ ನಿಮಗೆ ಉತ್ತಮ ಲಾಭವನ್ನು ತರಲಿದೆ. ಆಕಸ್ಮಿಕ ಧನ ವಿನಿಯೋಗ ನಿಮಗೆ ನಷ್ಟವನ್ನು ತರಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರು ಆಗಲಿದೆ. ತುರಿಕೆ, ಅಲೆರ್ಜಿ ಬರಬಹುದಾಗಿದೆ.



























