



ವಾರಭವಿಷ್ಯ
ದಿನಾಂಕ: 22.02.2026 ರಿಂದ 28.02.2026 ರ ತನಕ
🐏 ಮೇಷ
ಕರ್ಮ ಕ್ಷೇತ್ರದಲ್ಲಿ ಕುಜ ಪ್ರಭಾವದಿಂದ ಭೂಮಿ-ಆಸ್ತಿ ವ್ಯವಹಾರಗಳಲ್ಲಿ ಲಾಭ ಸಾಧ್ಯ. ರವಿ, ಬುಧ, ಶುಕ್ರ, ರಾಹು ಲಾಭಸ್ಥಾನದಲ್ಲಿ ಇರುವುದರಿಂದ ಆದಾಯ ಉತ್ತಮವಾಗಿರಲಿದೆ. ಆದರೆ ಶನಿ ವ್ಯಯಸ್ಥಾನದಲ್ಲಿ ಇರುವುದರಿಂದ ಹಣ ಉಳಿಸಿಕೊಳ್ಳುವುದು ಕಷ್ಟವಾಗಬಹುದು. ತಾಯಿಯವರ ಮನಸ್ಸಿಗೆ ಬೇಸರ ಉಂಟುಮಾಡಬೇಡಿ. ವೈರಾಗ್ಯ ಭಾವನೆ ಹೆಚ್ಚಾಗುವ ಸಾಧ್ಯತೆ ಇದೆ.
🐂 ವೃಷಭ
ಗುರುವಿನ ಅನುಗ್ರಹದಿಂದ ಹೊಸ ಉದ್ಯೋಗ ಅವಕಾಶಗಳು ಎದುರಾಗಬಹುದು. ಧನಾಗಮನ ಉತ್ತಮ. ಆದರೆ ಬಂದ ಹಣವನ್ನು ಉಳಿಸುವ ಜವಾಬ್ದಾರಿ ನಿಮ್ಮದಾಗಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲಕರ ಕಾಲ. ದೂರ ಪ್ರಯಾಣ ಸಂತೋಷ ತರುತ್ತದೆ, ಆದರೆ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಸರ್ಕಾರಿ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿವೆ.
👬 ಮಿಥುನ
ನಿಮ್ಮ ಅಭಿವೃದ್ಧಿಗೆ ಕೆಲವರು ಅಸೂಯೆಪಡಬಹುದು. ಆರೋಗ್ಯ ಸುಧಾರಣೆ ಕಾಣಲಿದೆ. ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಮರುಪರಿಶೀಲನೆ ಮಾಡಬೇಕು. ಹಣಕಾಸಿನ ಒತ್ತಡ ಕಾಡಬಹುದು. ಮಾರ್ಚ್ 24 ರಂದು ಕುಜ ಸಂಚಾರದಿಂದ ಸಂತೋಷದ ಸುದ್ದಿ ಸಿಗಲಿದೆ. ಸಹೋದರರ ಸಹಕಾರ ದೊರೆಯಲಿದೆ.
🦀 ಕರ್ಕಾಟಕ
ವಿದ್ಯಾರ್ಥಿಗಳಿಗೆ ಜಯದ ನಿರೀಕ್ಷೆ. ಆದರೆ ಕುಜ ಪ್ರಭಾವದಿಂದ ಆರೋಗ್ಯದ ಸಮಸ್ಯೆ ಎದುರಾಗಬಹುದು. ವಾಹನ ಚಾಲನೆ ಮತ್ತು ಅಗ್ನಿ ಸಂಬಂಧಿತ ಕೆಲಸಗಳಲ್ಲಿ ಎಚ್ಚರಿಕೆ ಅಗತ್ಯ. ಮಾತು ಮಧುರವಾಗಿರಲಿ. ಸಿಟ್ಟು ನಿಯಂತ್ರಿಸಿರಿ. ನಾಗ ದೇವತೆ ಮತ್ತು ದುರ್ಗಾ ದೇವಿಯ ಆರಾಧನೆ ಶ್ರೇಯಸ್ಕರ.
🦁 ಸಿಂಹ
ದೈವಾನುಗ್ರಹ ಉತ್ತಮ. ಆದರೆ ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗುವ ಸಾಧ್ಯತೆ. ಕೋರ್ಟ್ ಅಥವಾ ಪೊಲೀಸ್ ವ್ಯವಹಾರಗಳು ಎದುರಾಗಬಹುದು. ಪ್ರೇಮ ಸಂಬಂಧಗಳಲ್ಲಿ ಗೊಂದಲ. ಲಲಿತಾ ಸಹಸ್ರನಾಮ ಪಾರಾಯಣ ಮಾಡುವುದು ಒಳಿತು. ಅಹಂಕಾರ ಮತ್ತು ಅವಿವೇಕದಿಂದ ದೂರವಿರಿ.
👩 ಕನ್ಯಾ
ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ. ಉದ್ಯೋಗ ನಿರೀಕ್ಷೆಯವರಿಗೆ ಉತ್ತಮ ಅವಕಾಶ. ಆರ್ಥಿಕ ಸಮಸ್ಯೆ ನಿವಾರಣೆಗೆ ಹೊಸ ಆದಾಯ ಮೂಲ ಹುಡುಕಬೇಕು. ತಾಳ್ಮೆ ಮತ್ತು ಸಮಾಧಾನ ಅಗತ್ಯ. ಮನಸ್ಸಿನ ನಿಯಂತ್ರಣ ಬಹಳ ಮುಖ್ಯ.
⚖ ತುಲಾ
ಗುರುವಿನ ಅನುಗ್ರಹದಿಂದ ಅವಿವಾಹಿತರಿಗೆ ವಿವಾಹ ಯೋಗ. ನಿರುದ್ಯೋಗಿಗಳಿಗೆ ಅವಕಾಶಗಳು. ಧನಾಗಮನ ಇದ್ದರೂ ಪ್ರತಿಷ್ಠೆಗಾಗಿ ಖರ್ಚು ಹೆಚ್ಚಾಗಬಹುದು. ಮಕ್ಕಳ ಜೊತೆ ಸಮಯ ಕಳೆಯಿರಿ. ಪತ್ನಿಯ ಸಹಕಾರ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ವಿಷ್ಣು ಸಹಸ್ರನಾಮ ಪಾರಾಯಣ ಶ್ರೇಯಸ್ಕರ.
🦂 ವೃಶ್ಚಿಕ
ಜೂನ್ 2ರಿಂದ ವಿವಾಹ ಯೋಗ ಪ್ರಬಲ. ಧನಬಲ ಮತ್ತು ಜನಬಲ ದೊರೆಯಲಿದೆ. ಆತ್ಮವಿಶ್ವಾಸ ಹೆಚ್ಚಿರಲಿ. ಪಂಚಗ್ರಹ ಪ್ರಭಾವದಿಂದ ಮಾನಸಿಕ ಒತ್ತಡ ಸಾಧ್ಯ. ನರಸಿಂಹ ದೇವರ ಮಂತ್ರ ಜಪ ಮಾಡುವುದು ಒಳಿತು.
🏹 ಧನು
ಹಿರಿಯರಿಗೆ ಗೌರವ-ಪ್ರತಿಷ್ಠೆ. ಮನೆಯ ಬದಲಾವಣೆ ಸಾಧ್ಯತೆ. ಸಹೋದರರೊಂದಿಗೆ ಸ್ವಲ್ಪ ಕಲಹ ಸಾಧ್ಯ. ಆದಾಯ ಉತ್ತಮ. ಹಿತೈಷಿಗಳ ಸಹಕಾರ ಲಭಿಸಲಿದೆ. ಅವಿವಾಹಿತರಿಗೆ ಜೂನ್ 2ರವರೆಗೆ ವಿವಾಹ ಭಾಗ್ಯ. ಧಾರ್ಮಿಕ ಕಾರ್ಯಗಳಿಗೆ ವೆಚ್ಚ.
🐐 ಮಕರ
ದೈವಬಲ ಕಡಿಮೆಯಾಗಿರುವಂತೆ ಅನುಭವ. ವೃತ್ತಿ ಅಥವಾ ವಾಸಸ್ಥಳ ಬದಲಾವಣೆ ಯೋಚನೆ. ಹಿತಶತ್ರುಗಳಿಂದ ಕಿರಿಕಿರಿ. ಆದಾಯ ಇದ್ದರೂ ಅನಿರೀಕ್ಷಿತ ಖರ್ಚು. ವಾಹನ ಮತ್ತು ಯಂತ್ರೋಪಕರಣಗಳಲ್ಲಿ ಎಚ್ಚರಿಕೆ. ವ್ಯಾಪಾರಿಗಳಿಗೆ ಸ್ಪರ್ಧೆ ಹೆಚ್ಚಾಗಲಿದೆ.
🏺 ಕುಂಭ
ಕುಟುಂಬ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ. ಉದ್ಯೋಗದಲ್ಲಿ ಇತರರೊಂದಿಗೆ ಹೋಲಿಕೆ ಬೇಡ. ಬೆನ್ನು, ಸೊಂಟ ನೋವು ಅಥವಾ ಅಪಘಾತದ ಸಾಧ್ಯತೆ. ದೈವಾನುಗ್ರಹದಿಂದ ನಿರೀಕ್ಷಿತ ಕೆಲಸಗಳು ಪೂರ್ಣಗೊಳ್ಳಲಿವೆ. ಧಾರ್ಮಿಕ ಕಾರ್ಯಗಳಿಂದ ಪುಣ್ಯ ಲಭಿಸಲಿದೆ.
🐟 ಮೀನ
ಗೃಹಕಾರ್ಯಗಳು ಮತ್ತು ಮಕ್ಕಳ ಸಂಬಂಧಿತ ಕಾರ್ಯಗಳು ಯಶಸ್ವಿ. ನೂತನ ಕಾರ್ಯಾರಂಭಕ್ಕೆ ಜೂನ್ 2ರವರೆಗೆ ಕಾಯುವುದು ಒಳಿತು. ಅಡ್ಡಿ-ಆತಂಕಗಳಿದ್ದರೂ ಮನಶಾಂತಿ. ಆರೋಗ್ಯದ ಕಡೆಗೆ ಗಮನ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಅನ್ಯರ ಮಾತಿನಿಂದ ತಪ್ಪು ಕಲ್ಪನೆಗಳು ಬರಬಹುದು. ವಿಷ್ಣು ಸಹಸ್ರನಾಮ ಪಾರಾಯಣ ಶ್ರೇಯಸ್ಕರ.
🔯 ವಿಶೇಷ ಸೂಚನೆ:
ಪೂರ್ಣ ಕಂಪ್ಯೂಟರ್ ಜಾತಕ, ಕವಡೆ ಮೂಲಕ ಪ್ರಶ್ನೆ ಪರಿಹಾರ, ಶುಭ ಮುಹೂರ್ತ ನಿರ್ಣಯ, ವಾಸ್ತು ಸಲಹೆ ಹಾಗೂ ವಿವಾಹ ಹೊಂದಾಣಿಕೆ ಸೇವೆಗಳು ಲಭ್ಯ



























