ವಾರಭವಿಷ್ಯ
ದಿನಾಂಕ 21.12.2025 ರಿಂದ 27.12.2025ರ ತನಕ
ವಿಶೇಷ ದಿನಗಳು : 22.12.2025….ಉತ್ತರಾಯಣ ಆರಂಭ
ಮೇಷ : ನಿಮ್ಮ ಉದ್ಯೋಗ ಅಥವಾ ವ್ಯವಹಾರ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ಹಾಕಿಕೊಳ್ಳುವುದರಿಂದ ಅಭಿವೃದ್ಧಿಯನ್ನು ಕಾಣಲಿರುವಿರಿ, ಭಾಗ್ಯದಲ್ಲಿ ಕುಜ ಚಂದ್ರ ಶುಕ್ರ ರವಿ ಇರುವುದರಿಂದ ಶನಿ ವ್ಯಯದಲ್ಲಿ ಇರುವುದರಿಂದ ಹಿರಿಯರಲ್ಲಿ ವಾದ-ವಿವಾದ ನಡೆಯುವ ಸಾಧ್ಯತೆ ಇರುತ್ತದೆ. ಆರ್ಥಿಕ ಲೆಕ್ಕಾಚಾರಗಳು ಸರಿಯಾಗಿಲ್ಲವಾದರೆ ಸಾಲದ ಹೊರೆ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಸರಿಯಾದ ನಿರ್ಧಾರವಿರಲಿ,
ವೃಷಭ : ಜನ್ಮ ರಾಶಿಯಲ್ಲಿ ಮಾಂದಿ ಅಷ್ಟಮದಲ್ಲಿ ಕುಜ,ಚಂದ್ರ,ಶುಕ್ರರವಿ ಇರುವುದರಿಂದ ಸಂಸಾರವೆನ್ನುವುದು ‘ಸಸಾರ “ವಾಗಲಿದೆ. ಮೌನಕ್ಕೆ ಶರಣಾಗುವುದು ಒಳ್ಳೆಯದು, ಬರುವ ಆದಾಯ ಉತ್ತಮವಾಗಿರುತ್ತದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಕೆಲವೊಂದು ಅಡೆತಡೆಗಳು ಬರುವ ಸಾಧ್ಯತೆ ಇರಲಿದೆ. ನಿಶ್ಚಿತವಾದ ಗುರಿ ತಲುಪುವಲ್ಲಿ ಅಡಚಣೆಯನ್ನು ಅನುಭವಿಸಲಿದ್ದೀರಿ, ದೇವರೇ ಪ್ರತ್ಯಕ್ಷರಾಗಿ ನಿಮ್ಮೆದುರು ಬಂದರೂ ನೀವು ಏನನ್ನೂ ಕೇಳಲಾರಿರಿ. ಅಂದರೆ ನೀವು ಗೊಂದಲದಲ್ಲಿ ಇರುತ್ತೀರಿ.ú
ಮಿಥುನ : ಸಪ್ತಮದಲ್ಲಿ ಕುಜ,ಚಂದ್ರ, ಶುಕ್ರ ರವಿ ಇರುವುದರಿಂದ ದಾಂಪತ್ಯದಲ್ಲಿ ಅಸಮಾಧಾನವಿರಲಿದೆ. ದೇವೀ ಲಲಿತಾ ಸಹಸ್ರನಾಮ ಪರಾಯಣ ಅಗತ್ಯವಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯವಿದೆ. ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗಲಿದೆ,ಬರುವ ಆದಾಯಕ್ಕೆ ಯಾವುದೇ ಕೊರತೆ ಇರಲಾರದು. ಕ್ರಿಯಾಶೀಲ ವಿದ್ಯಾರ್ಥಿಗಳಿಗಳಿಗೆ ಉತ್ತಮ ಅವಕಾಶಗಳಿವೆ. ವಿವಾಹ ಸಂಬಂಧಿ ಮಾತುಕತೆಗಳಿಗೆ ಕೆಲವೊಂದು ಅಡಚನೆಗಳು ಬರಲಿವೆ. ಶುಕ್ರ ಮೌಡ್ಯವೂ ಇದಕ್ಕೆ ಕಾರಣವಾಗಿದೆ.
ಕರ್ಕಾಟಕ : ಅನಾವಶ್ಯಕ ವಿಳಂಬ ಮಾಡುವುದರಿಂದ ರಾಹು ಶನಿಯರ ಪ್ರಭಾವದಿಂದ ನೀವು ಮಾಡಬೇಕಾದ ಕೆಲಸದಲ್ಲಿ ಅಡಚಣೆ ಉಂಟಾಗಲಿದೆ ದಾಂಪತ್ಯ ವಿಷಯದ ಕಿರಿಕಿರಿಗೆ ಮೌನ ಮತ್ತು ತಾಳ್ಮೆಯೇ ಔಷಧಿಯಾಗಿದೆ.ನಾಗ ದೇವರ ಸನ್ನಿಧಾನಕ್ಕೆ ಪ್ರಾರ್ಥಿಸಿಕೊಳ್ಳಿರಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ಕೈಗೆತ್ತಿಗೊಳ್ಳಲು ಇದು ಸರಿಯಾದ ಸಮಯವಲ್ಲ, ಗುರು ವ್ಯಯದಲ್ಲಿ ಇದ್ದಾನೆ. ಬರುವ ಆದಾಯದಲ್ಲಿ ಗಣನೀಯವಾಗಿ ಬದಲಾವಣೆ ಆಗಲಿದೆ. ಮಕ್ಕಳ ವಿಷಯದಲ್ಲಿ ಎಚ್ಚರವಿರಲಿ.
ಸಿಂಹ : ಹೊಣೆಯರಿತು ಮುನ್ನೆಡೆದರೆ ಎಲ್ಲವೂ ಪ್ರಗತಿಯತ್ತ ಸಾಗಲಿದೆ. ಗುರು ಲಾಭ ಕ್ಷೇತ್ರದಲ್ಲಿ ಇರುವುದೇ ಇದಕ್ಕೆ ಕಾರಣವಾಗಿದೆ. ಕಳೆದು ಹೋದ ವಿಷಯಗಳಿಗೆ ಚಿಂತಿಸಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿರಿ, ಮಾನಸಿಕ ದೃಢತೆಗೆ ಆಧ್ಯಾತ್ಮದ ಮೊರೆಹೋಗುವುದು ಒಳ್ಳೆಯದು, ಬುಧ ನಿಮಗೆ ಹೊಸ ಭೂಮಿ,ವಾಹನ, ಮನೆ, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯೆ ಕೊಡುವವನಿದ್ದಾನೆ. ಮಕ್ಕಳ ಬಗ್ಗೆ ಜವಾಬ್ದಾರಿಯಿರಲಿ ಹೊಸ ಸಾಲದ ಪ್ರಯತ್ನ ಬೇಡ ಉದ್ಯೋಗದಲ್ಲಿ ವರ್ಗಾವಣೆಯ ಸಾಧ್ಯತೆ ಇರುತ್ತದೆ. ದಾಂಪತ್ಯದಲ್ಲಿ ಪರಸ್ಪರ ಗೌರವವಿರಲಿ.
ಕನ್ಯಾ : ಸುಖ ಸ್ಥಾನದಲ್ಲಿ ಕುಜ ಚಂದ್ರ ಶುಕ್ರ ರವಿ ಒಟ್ಟಾಗಿರುವುದು ನಿಮ್ಮ ಆರೋಗ್ಯದಲ್ಲಿ ಎಚ್ಚರವಾಗಿರುವಂತೆ ತಿಳಿಸುತ್ತಿದ್ದಾರೆ ಮನೆಯಲ್ಲಿ ಕಲಹಗಳು ಉಂಟಾಗದಂತೆ ಎಚ್ಚರವಹಿಸುವುದು ಅಗತ್ಯವಿದೆ, ಶನಿ ಸಪ್ತಮದಲ್ಲಿರುವುದು ದಾಂಪತ್ಯದಲ್ಲಿ ಉದ್ಯೋಗದಲ್ಲಿ ಕಿರಿಕಿರಿ ತರುವುದನ್ನು ಸೂಚಿಸುತ್ತಿದ್ದಾನೆ ಮನೆ ವಾಹನ ಬದಲಾವಣೆ ಮಾಡಲಿರುವುದನ್ನು ರವಿ ತಿಳಿಸುತ್ತಿದ್ದಾನೆ, ಬೆಂಕಿ ಸಿಡಿಲು ಬಿಸಿನೀರು ವಿಷಯವಾಗಿ ಎಚ್ಚರವಿರಲಿ, ಮೃತ್ಯುಂಜಯ ಜಪ ನಿತ್ಯವೂ ಹೇಳುತ್ತಾ ಬನ್ನಿರಿ,
ಕೆ.ಸುಬ್ರಹ್ಮಣ್ಯ ಆಚಾರ್ಯ
ತುಲಾ : ಗುರುವಿನ ಅನುಗ್ರಹ ಇರುವುದರಿಂದ ಹಿರಿಯರ ಅನುಗ್ರಹ ದೊರೆಯಲಿದೆ. ಪ್ರೀತಿಪಾತ್ರರೊಂದಿಗಿನ ಮದುವೆ ಪ್ರಸ್ತಾವವು ಸಫಲವಾಗಲಿದೆ. ಸರಕಾರಿ ಕೆಲಸಗಳಲ್ಲಿ ಉತ್ತಮ ಪ್ರಗತಿ ಕಂಡು ಬರಲಿದೆ, ಬಂಧು ಬಳಗದವರ ಸಹಕಾರ ದೊರೆಯಲಿದೆ. ನಕಾರಾತ್ಮಕ ಚಿಂತೆಯಿಂದ ಹೊರ ಬರಲು ಯೋಗ ಪ್ರಾಣಾಯಾಮವನ್ನು ಮಾಡಿರಿ,ಉಯೋಗದಲ್ಲಿರುವವರಿಗೆ ಭಡ್ತಿ ಯೋಗವಿದೆ.ಸಮಾಜದಲ್ಲಿ ಗೌರವ ದೊರೆಯಲಿದೆ. ಪಂಚಮದ ರಾಹು ಬಂಧು-ಬಳಗದ ಜೊತೆಗೆ ವಿರಸಗಳು ಬರುವಂತೆ ಮಾಡಲಿದ್ದಾನೆ.
ವೃಶ್ಚಿಕ : 2026., ಜೂನ್ ಎರಡರ ವರೆಗೆ ಗುರುವಿನ ಅನುಗ್ರಹ ಇರುವುದಿಲ್ಲ. ರಾಹು ಶನಿ ಕುಜ ರವಿ ಇವರ ಅನುಕೂಲ ಸ್ಥಿತಿ ಇರುವುದಿಲ್ಲ, ಕಠಿಣ ಪರಿಶ್ರಮದಿಂದ ಯಶಸ್ಸು ಪಡೆಯಲಿದ್ದೀರಿ. ಹೊಸ ಮನೆ ಅಥವಾ ಜಾಗ ಖರೀಧಿ ಮಾಡುವಾಗ ದಾಖಲೆ ಪರಿಶೀಲನೆ ನಡೆಸಿರಿ, ವ್ಯರ್ಥ ಖರ್ಚುಗಳು ಬರುವ ಸಾಧ್ಯತೆ ಇರುತ್ತದೆ. ಹಿತ ಶತ್ರುಗಳು ಜಗಳ ಮಾಡಲು ಕಾಯುತ್ತಿರುತ್ತಾರೆ. ಮಕ್ಕಳ ಜೊತೆಗೆ ವಿರಹ ಬರಲಿದೆ. ನಿಮ್ಮ ಆರೋಗ್ಯದ ಕಡೆಗೆ ಗಮನವಿರಲಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನವನ್ನು ಕೊಡುವುದು ಅಗತ್ಯವಿದೆ.
ಧನು : ನಿಮ್ಮ ಜನ್ಮ ರಾಶಿಯಲ್ಲಿ ಕುಜ ಚಂದ್ರ ಶುಕ್ರ ರವಿ,ವ್ಯಯದಲ್ಲಿ ಬುಧ ನಿರುವುದು ಸುಖ ಸ್ಥಾನದಲ್ಲಿ ಶನಿ ಇರುವುದು ಮನೆಯಲ್ಲಿ ಕೆಲವೊಂದು ವಿಷಯದಲ್ಲಿ ಕಲಹ ವಿರಸ ಬರುವ ಸಾಧ್ಯತೆ ಇರುತ್ತದೆ, ತಾಯಿಯವರ ವಿಷಯದಲ್ಲಿ ಬೇಸರವಾಗುವ ಸಾಧ್ಯತೆ ಇರುತ್ತದೆ. ಉದ್ಯೋಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ವರ್ತನೆಯಲ್ಲಿ ತಾಳೆ ಇರಲಿ, ಮಾನಸಿಕ, ಶಾರೀರಿಕ ನೋವುಗಳು ನಿಮ್ಮಲ್ಲಿ ಇರುತ್ತದೆ, ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ, ಕಾಲು ಅಥವಾ ಉದಾರ ಸಂಬಂಧಿ ಅನಾರೋಗ್ಯಗಳು ಬಾಧಿಸಲಿವೆ.
ಮಕರ : ಸ್ವಯಂ ಬುದ್ಧಿವಂತಿಕೆ ಇದ್ದರೂ ಅನುಭವಿಗಳ ಮಾರ್ಗದರ್ಶನದಲ್ಲಿ ವ್ಯವಹಾರದಲ್ಲಿ ಲಾಭ ಪಡೆಯುತ್ತೀರಿ, ಗುರುವಿನ ಅನುಗ್ರಹದ ಕೊರತೆ ಇರುವುದರಿಂದ ಬಂಧುಗಳೊಂದಿಗೆ ಕಲಹವಾಗುವ ಸಾಧ್ಯತೆ ಇರುತ್ತದೆ, ವ್ಯಯದಲ್ಲಿ ಕುಜ,ಚಂದ್ರ,ಶುಕ್ರರವಿ ಇರುವುದರಿಂದ ಪ್ರತಿಕೂಲ ಸ್ಥಿತಿಯನ್ನು ಅನುಭವಿಸಲಿದ್ದೀರಿ, ದೇವೀ ಸ್ತೋತ್ರಗಳನ್ನು ಪಾರಾಯಣ ಮಾಡಿರಿ, ನಿಮ್ಮ ಭಾಗೋದಯಕ್ಕೆ ಮಹಿಳೆಯರ ಕೊಡುಗೆ ಇರುತ್ತದೆ, ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸದ ಕನಸು ನನಸಾಗಲಿದೆ.
ಕುಂಭ : ಕೌಟುಂಬಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಮಯ ಮೀಸಲಿಡಿರಿ, ವ್ಯರ್ಥ ಖರ್ಚುಗಳನ್ನು ರಾಹು ಮತ್ತು ಶನಿ ತರಲಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಬಹಳವಾಗಿ ತೊಡಗಿಸಿಕೊಳ್ಳುವಿರಿ, ಗಣಪತಿ ದೇವರ ಅನುಗ್ರಹ ನಿಮಗೆ ಸಿಗಲಿದೆ. ವಿದ್ಯಾರ್ಥಿಗಳು ಓದುವುದರಲ್ಲಿ ಹಿಂದೆ ಬೀಳುವಂತೆ ಶನಿ ನೋಡಿಕೊಳ್ಳಲಿದ್ದಾನೆ. ನಾಗ ದೇವರ ಆರಾಧನೆ ಅಗತ್ಯವಿದೆ. ಬರುವ ಆದಾಯಗಳಿಗೆ ಯಾವುದೇ ಕೊರತೆ ಇರುವುದಿಲ್ಲ. ರಾಜಕೀಯ ವ್ಯಕ್ತಿಗಳಿಂದ ನೆರವು ದೊರೆಯಲಿದೆ.
ಮೀನ : ಬಹು ಸಮಯದಿಂದ ಕಾಡುತ್ತಿರುವ ಅನಾರೋಗ್ಯ ಸಮಸ್ಯೆ ದೂರವಾಗಲಿದೆ. ನೀವು ಪ್ರಸ್ತುತ ಮಾಡುತ್ತಿರುವ ಉದ್ಯೋಗದಲ್ಲಿ ಮಾನಸಿಕ ಒತ್ತಡ ಹೆಚ್ಚಾಗಲಿದೆ, ಬಿಪಿ ಷುಗರ್ ಹೆಚ್ಚಾಗದಂತೆ ನೋಡಿಕೊಳ್ಳುವುದು ಅಗತ್ಯವಿದೆ, ಜವಾಬ್ದಾರಿ ಹೆಚ್ಚಾಗಲಿದ್ದು ಹಿತ ಶತ್ರುಗಳ ಕಾಟ ಹೆಚ್ಚಾಗಲಿದೆ. ತಂದೆಯವರ ಆರೋಗ್ಯದಲ್ಲಿಯೂ ಏರುಪೇರುಗಳಾಗುವ ಸಾಧ್ಯತೆ ಇರುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಅಗತ್ಯವಾಗಿದೆ.







































