ವಾರಭವಿಷ್ಯದಿನಾಂಕ 12.04.2026 ರಿಂದ 18.04.2026ರ ವರೆಗೆ

Picture of RB NEWS

RB NEWS

Bureau Report

.

.

.

ಮೇಷ : ಜನ್ಮ ರಾಶಿಗೆ ರವಿಯ ಪ್ರವೇಶ ಕೆಲವೊಂದು ಬದಲಾವಣೆಗಳನ್ನು ಗಮಣಿಸುವಿರಿ. ವಿವಿಧ ಮೂಲಗಳಿಂದ ಆದಾಯ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ವಿವಾದ ಬರುವ ಸಾಧ್ಯತೆ ಇರುತ್ತದೆ. ಮಾನಸಿಕ ಒತ್ತಡದಿಂದ ಹೊರ ಬರಬೇಕಿದೆ. ಶಿವ ಸ್ಮರಣೆ ಅಗತ್ಯವಿದೆ.

ವೃಷಭ : ಜೀವನದಲ್ಲಿ ಮುಂದೆಂದಿಗೂ ಬರಲಾರದ ಯೋಗ ನಿಮ್ಮ ಜೀವನದಲ್ಲಿ ಸಿಗುತ್ತಿದೆ. ಸಮಾಜದಲ್ಲಿ ಅತ್ಯುನ್ನತ ಗೌರವ ಪ್ರಾಪ್ತಿಯಾಗುತ್ತಿದೆ. ಭೂಮಿ ಖರೀಧಿ ಮಾಡಲು,ವ್ಯವಹಾರ ಮಾಡಲು ಉತ್ತಮ ಕಾಲವಾಗಿದೆ. ಪಿತ್ರಾರ್ಜಿತ ಆಸ್ತಿ ಪ್ರಾಪ್ತಿಯಾಗಲಿದೆ.

ಮಿಥುನ : ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಅನುಭವಿಸುವ ಸಮಯವಾಗಿದೆ. ತಾಳ್ಮೆ, ಸಹನೆ ಅತೀ ಅಗತ್ಯವಾಗಿದೆ. ಬದಲಾವಣೆಯ ಸಂಕೇತ ಇಲ್ಲಿದೆ. ಹೊಸ ಮನೆ,ವಾಹನ ಖರೀಧಿಗೆ ಒಳ್ಳೆಯ ಕಾಲವಾಗಿದೆ. ಅನ್ಯರ ಹಸ್ತ ಕ್ಷೇಪಕ್ಕೆ ಅವಕಾಶ ನೀಡುವುದು ಬೇಡ.

ಕರ್ಕಾಟಕ : ಉನ್ನತ ವಿದ್ಯಾಭ್ಯಾಸಕ್ಕೆ ರವಿ ಒಳ್ಳೆಯ ಅವಕಾಶವನ್ನು ನೀಡಲಿದ್ದಾನೆ. ಉಚ್ಚನಾದ ರವಿ ನಿಮ್ಮ ಆದಾಯವನ್ನು ಹೆಚ್ಚಿಸಲಿದ್ದಾನೆ. ಹೊಸ ಉದ್ಯೋಗ ಪ್ರಾಪ್ತಿ ಯೋಗವಿದೆ, ವಿದ್ಯಾರ್ಥಿಗಳು ತಮ್ಮ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಬೇಕಿದೆ. ದುರ್ವ್ಯಸನಕ್ಕೆ ಬಳಿ ಬೀಳದಂತೆ ಎಚ್ಚರವಹಿಸಬೇಕು.

ಸಿಂಹ : ರವಿ ಶುಕ್ರನೊಂದಿಗೆ ಮೇಷ ರಾಶಿಯಲ್ಲಿರುವುದು, ಕುಜ ಶನಿ ಬುಧ ಅಷ್ಟಮದಲ್ಲಿರುವುದು ನೀವು ಆರೋಗ್ಯದ ಕಡೆಗೆ ಗಮನ ಕೊಡಬೇಕಾದ ಅವಶ್ಯಕತೆಯನ್ನು ತಿಳಿಸುತ್ತಿದ್ದಾರೆ. ತಂದೆಯೊಂದಿಗೆ ಜಗಳ ಮಾಡುವ ಸಾಧ್ಯತೆ ಇರುತ್ತದೆ.

ಕನ್ಯಾ : ನೀವು 60+ ಆಗಿದ್ದಲ್ಲಿ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಿದೆ. ಮಧ್ಯ ಸೇವನೆಯಿಂದ ಹೊರಗೆ ಬನ್ನಿರಿ. ಚಿನ್ನ ಬೆಳ್ಳಿಯನ್ನು ಕಳೆದು ಕೊಳ್ಳುವ ಸಾಧ್ಯತೆ ಇರುತ್ತದೆ. ಪತ್ನಿಯ ಆರೋಗ್ಯವನ್ನು ಗಮಣಿಸಿರಿ. ನಿಮ್ಮ ಕೋಪ ತಾಪಗಳಿಂದ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ತುಲಾ : ಸಪ್ತಮದಲ್ಲಿ ರವಿ ಶುಕ್ರ ಜೊತೆಯಲ್ಲಿರುವುದು ದಾಂಪತ್ಯದಲ್ಲಿ ಕಿರಿಕಿರಿ ಬರಲಿರುವುದನ್ನು ಸೂಚಿಸುತ್ತಿದೆ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಗುರುವಿನ ಅನುಗ್ರಹ ಉತ್ತಮವಾಗಿರುತ್ತದೆ. ಮಕ್ಕಳೊಂದಿಗೆ ನೇಯ ವಿನಯದಿಂದ ವರ್ತಿಸಿರಿ.

ವೃಶ್ಚಿಕ : ಆರನೆಯ ಭಾವದಲ್ಲಿ ರವಿ ಶುಕ್ರನೊಂದಿಗೆ ಇರುವುದು ಕೊಂಚ ಉತ್ತಮ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು. ರಾಜಕೀಯದ ಗಣ್ಯರು ಸಮಾಜದಲ್ಲಿ ಮಿಂಚಲಿದ್ದಾರೆ. ಹೋದಲ್ಲಿ ಬಂದಲ್ಲಿ ಹಾರ ತುರಾಯಿಗಳು ಶೋಭಿಸಲಿವೆ. ಹಿತೈಷಿಗಳೇ ನಿಮಗೆ ಕಿರಿಕಿರಿಯಾಗಬಹುದು.

ಧನು : ದುಡುಕು ಸ್ವಭಾವದಿಂದ ಪ್ರೀತಿ ಪಾತ್ರರು ದೂರವಾಗುವ ಸಾಧ್ಯತೆ ಇರುತ್ತದೆ. ಕುಜ ಶನಿಗೆ ಪರಿಹಾರ ಅಗತ್ಯವಿದೆ. ಆರೋಗ್ಯದ ಕಡೆಗೆ ಎಚ್ಚರವಿರಲಿ. ಶುಕ್ರ ಶನಿ ಪಂಚಮದಲ್ಲಿ ಇದ್ದು ಮಕ್ಕಳೊಂದಿಗೆ ಹೊಂದಿಕೊಂಡು ಹೋಗುವುದು ಅಗತ್ಯವಾಗಿದೆ.

ಮಕರ : ಶುಭ ಅಶುಭ ಮಿಶ್ರ ಫಲವನ್ನು ಅನುಭವಿಸಲಿದ್ದೀರಿ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ನಿಮ್ಮ ಆರೋಗ್ಯದ ಕಡೆಗೆ ಸದಾ ಗಮನ ಹರಿಸುವಂತೆ ರವಿ ಶುಕ್ರ ಸೂಚನೆ ಕೊಡುತ್ತಿದ್ದಾರೆ. ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಕುಂಭ : ವಾಹನ ಚಲಾವಣೆಯಲ್ಲಿ ಹಣದ ವ್ಯವಹಾರದಲ್ಲಿ ಎಚ್ಚರವಿರಬೇಕು. ನಿಮ್ಮ ವ್ಯವಹಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದೆ.ನಾಗ ದೇವರ ಪ್ರಾರ್ಥನೆ ಅತೀ ಅಗತ್ಯವಾಗಿದೆ. ದೈವಾನುಗ್ರಹ ಉತ್ತಮವಾಗಿದೆ. ದಾಂಪತ್ಯದಲ್ಲಿ ಎಚ್ಚರವಿರಲಿ.

ಮೀನ: ನಿಮ್ಮ ಗುರಿ ಪೂರೈಸಲು ಏಕಾಗ್ರತೆ ಅತೀ ಅಗತ್ಯವಾಗಿದೆ. ಸಾಡೇಸಾತ್ ಶನಿಯ ಜೊತೆಗೆ ಕುಜ ಬುಧ ಇರುವುದು ನಿಮ್ಮಲ್ಲಿ ನಕಾರಾತ್ಮಕ ಭಾವನೆಯನ್ನು ಮೂಡಿಸುತ್ತದೆ. ಮಾತು ನಯ ವಿನಯದೊಂದಿಗೆ ಕೂಡಿರಲಿ. ಅಧಿಕಾರ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top