


ವಾರಭವಿಷ್ಯ
(ದಿನಾಂಕ: 01-02-2026 ರಿಂದ 07-02-2026 ರವರೆಗೆ)
ವಿಶೇಷ ದಿನಗಳು
02-02-2026 : ಶುಕ್ರ ಮೌಡ್ಯ ಅಂತ್ಯ
03-02-2026 : ಬುಧನ ಕುಂಭ ರಾಶಿ ಪ್ರವೇಶ
05-02-2026 : ಶುಕ್ರನ ಕುಂಭ ರಾಶಿ ಪ್ರವೇಶ
ಮೇಷ
ಸಂತಸದಾಯಕ ಹಾಗೂ ಸಮಾಧಾನಕರ ದಿನಗಳು. ನಿಮ್ಮ ವ್ಯಕ್ತಿತ್ವದಿಂದ ಇತರರ ಮೆಚ್ಚುಗೆ ಪಡೆಯುವಿರಿ. ಕಾರ್ಯಸಿದ್ಧಿ ಕಂಡುಬರುವುದು. ಸಾಂಸಾರಿಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಕೆಲವೊಮ್ಮೆ ಉದ್ವಿಗ್ನತೆ ಕಾಡಬಹುದು. ಉದ್ಯೋಗದಲ್ಲಿ ತಾಳ್ಮೆ ಅಗತ್ಯ. ಸಾಡೇಸಾತಿ ಶನಿಯ ಪ್ರಭಾವದ ಬಗ್ಗೆ ಎಚ್ಚರ ಇರಲಿ.
ವೃಷಭ
ವಿದ್ಯಾರ್ಥಿಗಳಿಗೆ ದೈವಾನುಗ್ರಹವಿರುವ ಶುಭ ಕಾಲ. ಹಣದ ಹರಿವು ಉತ್ತಮ. ಸಮಾಜದಲ್ಲಿ ಮುಖಂಡರಾಗಿ ಮಿಂಚುವಿರಿ. ಉದ್ಯೋಗದಲ್ಲಿ ಚಂಚಲತೆ ಕಂಡುಬರುವುದು. ಅನಾವಶ್ಯಕ ವಾಗ್ವಾದ ತಪ್ಪಿಸಬೇಕು. ಕೌಟುಂಬಿಕ ಸಮಸ್ಯೆಗಳು ಕೋರ್ಟ್ ಮಟ್ಟಿಗೆ ಹೋಗುವ ಸಾಧ್ಯತೆ.
ಮಿಥುನ
ಸಾಂಸಾರಿಕ ವೆಚ್ಚಗಳಿಂದ ಕೈ ಬರಿದಾಗುವ ಸಂದರ್ಭ ಇದ್ದರೂ ಮುಂದಿನ ದಿನಗಳು ಅನುಕೂಲಕರ. ಬುಧ-ಶುಕ್ರ-ರವಿಗಳ ಕುಂಭ ಸಂಚಾರದಿಂದ ಆರೋಗ್ಯ ಸುಧಾರಣೆ. ಆಹಾರದಲ್ಲಿ ಎಚ್ಚರ ಅಗತ್ಯ; ಅಲರ್ಜಿ ಸಮಸ್ಯೆ ಸಾಧ್ಯ. ಕೃಷಿ, ಚಿಕಿತ್ಸಾ ಕ್ಷೇತ್ರಗಳಲ್ಲಿ ಚೇತರಿಕೆ.
ಕರ್ಕಾಟಕ
ಕುಂಭ ರಾಶಿಯಲ್ಲಿ ಪಂಚಗ್ರಹ ಸಂಚಾರದಿಂದ ಆರೋಗ್ಯ ಹಾಗೂ ದಾಂಪತ್ಯದಲ್ಲಿ ಎಚ್ಚರ ಅಗತ್ಯ. ಮಾನಸಿಕ ಒತ್ತಡ, ತಲೆಸುತ್ತು ಸಾಧ್ಯ. ವೈದ್ಯಕೀಯ ಸಲಹೆ ಅವಶ್ಯ. ಮೃತ್ಯುಂಜಯ ಜಪ, ವಿಷ್ಣು ಸಹಸ್ರನಾಮ ಪಾರಾಯಣ ಶುಭ.
ಸಿಂಹ
ನಿರುದ್ಯೋಗಿಗಳಿಗೆ ಉದ್ಯೋಗ ಯೋಗ. ದಾಂಪತ್ಯದಲ್ಲಿ ಮೌನ ಮತ್ತು ಸಹನೆ ಒಳಿತು. ಕೋಪ, ನಿಷ್ಟುರ ಮಾತುಗಳಿಂದ ದೂರವಿರಿ. ಹಣದ ಹರಿವು ಇದ್ದರೂ ವರ್ತನೆಯಿಂದ ಲಾಭ ಕುಗ್ಗುವ ಸಾಧ್ಯತೆ.
ಕನ್ಯಾ
ಚೇತರಿಕೆಯ ದಿನಗಳು. ಹಲವು ಮೂಲಗಳಿಂದ ಧನಾಗಮನ. ವಿದ್ಯಾರ್ಥಿಗಳಿಗೆ ಅಡಚಣೆ ಇದ್ದರೂ ಅಂತಿಮವಾಗಿ ಸಂತಸ. ಪ್ರೀತಿ-ಪ್ರೇಮದಲ್ಲಿ ಎಚ್ಚರ. ರಾಜಕೀಯ ಕ್ಷೇತ್ರದವರಿಗೆ ಉನ್ನತಿ. ಸಂಸಾರಿಕ ಸುಖ ಮನಸ್ಥಿತಿಯ ಮೇಲೆ ಅವಲಂಬಿತ.
ತುಲಾ
ಉದ್ಯೋಗಸ್ಥ ಮಹಿಳೆಯರಿಗೆ ಉತ್ತಮ ಅವಕಾಶ. ಸಂತಾನದ ವಿಷಯದಲ್ಲಿ ಸ್ವಲ್ಪ ಬೇಸರ. ಅವಿವಾಹಿತರಿಗೆ ವಿವಾಹ ಯೋಗ. ಕೋರ್ಟ್-ಕಚೇರಿ ವ್ಯವಹಾರದಲ್ಲಿ ಜಯ. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ. ರಾಜಕೀಯ ಮಾತುಗಳಲ್ಲಿ ಎಚ್ಚರ.
ವೃಶ್ಚಿಕ
ಪಂಚಗ್ರಹ ಸಂಚಾರದಿಂದ ಸತ್ವ ಪರೀಕ್ಷೆ. ಮಾತು, ಆರೋಗ್ಯ, ಹಣದ ವ್ಯವಹಾರದಲ್ಲಿ ನಿಯಂತ್ರಣ ಅಗತ್ಯ. ತಾಯಿಯ ಆರೋಗ್ಯದ ಕಡೆ ಗಮನ. ಮಕ್ಕಳ ಬಗ್ಗೆ ಚಿಂತನೆ. ವಿಷ್ಣು ಹಾಗೂ ಶಿವ ಸಹಸ್ರನಾಮ ಪಾರಾಯಣ ಶುಭ.
ಧನು
ಹಣದ ಆಗಮನ ಹೆಚ್ಚಾಗಲಿದೆ. ಮಕ್ಕಳಿಂದ ಸಂತಸ. ವೈರಿಗಳು ಮಿತ್ರರಾಗುವ ಸೂಚನೆ. ವೃತ್ತಿಯಲ್ಲಿ ಉನ್ನತಿ. ಮನೆ-ವಾಹನ ಖರೀದಿ ಯೋಗ. ಅವಿವಾಹಿತರಿಗೆ ವಿವಾಹ ಸಾಧ್ಯತೆ. ಕ್ರೀಡಾಪಟುಗಳಿಗೆ ಸಾಧನೆ.
ಮಕರ
ದ್ವಿತೀಯ ಭಾವದಲ್ಲಿ ಪಂಚಗ್ರಹ ಪ್ರಭಾವ — ಹೆಚ್ಚಿನ ಎಚ್ಚರ ಅಗತ್ಯ. ಖರ್ಚು ಅಧಿಕ. ಹಿತಶತ್ರುಗಳಿಂದ ಗೊಂದಲ. ತಾಳ್ಮೆಯಿಂದ ಮುನ್ನಡೆಯಿರಿ. ಶುಭಕಾರ್ಯಗಳಿಗೆ ಜೂನ್ 2 ನಂತರ ಸೂಕ್ತ.
ಕುಂಭ
ಜನ್ಮರಾಶಿಯಲ್ಲಿ ಪಂಚಗ್ರಹ ಸಂಚಾರದಿಂದ ಮಿಶ್ರ ಫಲ. ಶುಭಕಾರ್ಯಗಳಲ್ಲಿ ಅಡ್ಡಿ. ರಾಜಕೀಯದಿಂದ ದೂರವಿರುವುದು ಒಳಿತು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅಸಮಾಧಾನ. ಸಾಲ ವಸೂಲಿಗೆ ಅಲೆದಾಟ.
ಮೀನ
ಕುಟುಂಬದ ಬಿರುಕುಗಳು ಸರಿಹೊಂದುತ್ತವೆ. ಯುವಕರಿಗೆ ಇಷ್ಟದ ಸಂಗಾತಿ ದೊರೆಯುವ ಸೂಚನೆ. ಶನಿ ಪ್ರಭಾವದಿಂದ ಕೆಲ ತಿಂಗಳು ಎಚ್ಚರ ಅಗತ್ಯ. ವಾಹನ ಚಾಲನೆಯಲ್ಲಿ ಜಾಗ್ರತೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಅಗತ್ಯ.

ಸೂಚನೆ
ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕ,
ಜಾತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ಫಲ ವಿವರಣೆ, ಶುಭಕಾರ್ಯ ಮುಹೂರ್ತ, ವಾಸ್ತು ಸಲಹೆ, ವಿವಾಹ ಹೊಂದಾಣಿಕೆ ಮಾಡಿಕೊಡಲಾಗುವುದು.


































