




ವಾಮನ ಹೆಜ್ಜೆ
ಇಟ್ಟರೆ ಇಡಬೇಕು ವಾಮನನಂತೆ ಹೆಜ್ಜೆ
ತ್ರಿವಿಕ್ರಮನಂತೆ ಬೆಳೆಯಬೇಕು ವಜ್ಜೆ
ಖಾಲಿಯಾಗಬೇಕು ಭೂವೋಮ ಸಜ್ಜೆ
ನನ್ನದೆಂಬುವವರೆಲ್ಲರಿಗೂ ಆಗಬೇಕು ಲಜ್ಜೆ ||
ಎಂದಳಾ ತುಳಸಿಪ್ರಿಯೆ ಭಗವತಿ
ಬಲಿ ದಾನ
ನಾನೆಂಬ ಬಲಿಯ ಪಾತಾಳಕೆ ತುಳಿ ನಾವೆಂಬ
ಪಾಠವ ದಿನದಿನವೂ ಕಲಿ ಎಲ್ಲರೊಳಗೊಂದಾಗಿ
ಕಲೆತು ಬೆಳಿ ಬಲಿಯ ಬಲಿ ದಾನವ ಮೊದಲು ಕಲಿ ||
ಎಂದಳಾ ತುಳಸಿಪ್ರಿಯೆ ಭಗವತಿ

ಮಾಲತಿ, ಜಿ. ಪೈ









































