ವರ್ಣಧ್ಯಾನ (colour meditation) ಮಾಡಲು ಕುಳಿತೆ

ಇಂದು ಮಳೆ ಕಮ್ಮಿ ಬಂತು ಸ್ಪಲ್ಪ ಬಿಸಿಲು ಇದ್ದ ಕಾರಣ ಧ್ಯಾನ ಮಾಡಲು ಪರ್ಪಲೆ ಗುಡ್ಡೆ – ಏರಿದೆ.
ಧ್ಯಾನದಲ್ಲಿ ಹಲವಾರು ಪ್ರಕಾರಗಳಲ್ಲಿ ಅಭ್ಯಾಸ ಮಾಡಿದ ನಾನು ಇಂದು ವರ್ಣಧ್ಯಾನ (colour meditation) ಮಾಡಲು ಕುಳಿತೆ.
ಅತ್ತೂರು ಕಾರ್ಕಳ -ಪರ ಪಾಲೆ ಎಂದರೆ ತುಳು ಭಾಷೆಯಲ್ಲಿ ಭಾರೀ ಗಾತ್ರದ ಹಳೆಯ ಕಾಲದ ಹಾಳೆ ಮರಗಳು ಇದ್ದ ಪ್ರದೇಶ ಎಂದು ಅರ್ಥ. ಪರಪಾಲೆ ಗುಡ್ಡ ಕರೆಯಲ್ಪಡುವ ಕಾರ್ಕಳದ ಪಶ್ಚಿಮ ಭಾಗದಲ್ಲಿರುವ ಪರ್ಪಲೆ ಗುಡ್ಡೆಯು ನೋಡಲು ಸುಂದರವಾಗಿದೆಯಲ್ಲದೆ, ಚಾರಣಕ್ಕೂ ಹೇಳಿ ಮಾಡಿಸಿದ ಜಾಗ. ದೂರಕ್ಕೆ ನುಣುಪಾಗಿ ಕಾಣುವ ಇದರ ನಿರ್ಮಲ ಬೋಳು ಮೈ, ಗುಡ್ಡದ ಸುತ್ತ ಕಾಣುವ ಹಸಿರು ವನಸಿರಿ, ತುದಿಯಲ್ಲಿ ಹಿತವಾಗಿ ಬೀಸುವ ತಂಗಾಳಿ, ಎಲ್ಲವೂ ಮನಸ್ಸಿಗೆ ಮುದ ನೀಡುತ್ತದೆ. ಕಾರ್ಕಳದ ಗೋಮಟೇಶ್ವರ, ಚತುರ್ಮುಖ ಬಸದಿ, ರಾಮ ಸಮುದ್ರ, ಕರಿಯ ಕಲ್ಲು, ಆನೆಕೆರೆ, ಸಿಗಡೀ ಕೆರೆ, ಹಿರಿಯಂಗಡಿ ಮಾನಸ್ತಂಭ ಇವುಗಳೊಂದಿಗೆ ಪರ್ಪಲೆ ಗುಡ್ಡವು ಕಾರ್ಕಳದ ಮುಖ್ಯ ಹೆಗ್ಗುರುತುಗಳಲ್ಲಿ ಒಂದು. ಕಾರ್ಕಳ ಪೇಟೆಯ ಪಶ್ಚಿಮಕ್ಕೆ ಉತ್ತರದಿಂದ ದಕ್ಶಿಣಕ್ಕೆ ಚಾಚಿರುವ ಈ ಗುಡ್ಡ ಏರಲು ಹೊರಟರೆ, ನಮಗೆ ಮೊದಲು ಸಿಗುವುದು ಹಿರಿಯಂಗಡಿ. ಇಲ್ಲಿಯ ಮಾನಸ್ತಂಭ ಇತಿಹಾಸ ಪ್ರಸಿದ್ಧ. ಇದು ಒಂದು ಏಕಶಿಲಾ ಸ್ತಂಭ. ಇದರ ಎತ್ತರ ಸುಮಾರು ೫೭ ಅಡಿ. ಇಲ್ಲಿರುವ ಮುಖ್ಯ ಕುಡಿಯುವ ನೀರಿನ ಬಾವಿಯನ್ನು ಕಲ್ಲು ಚಪ್ಪಡಿಯಿಂದ ಮುಚ್ಚಿ ಬಾವಿ ಒಳಗೆ ಗಾಳಿ ಬೆಳಕನ್ನು ನಿಯಂತ್ರಿಸಿದಂತೆ ಕಾಣುತ್ತದೆ. ಇದನ್ನು ದಾಟಿ ಮುಂದೆ ಹೋದಾಗ ಗವಿ ಸಿಗುತ್ತದೆ. ಈ ಗವಿಯ ಒಳಗೆ ಯಾವಾಗಲೂ ನೀರಿನ ಹನಿಗಳು ತೊಟ್ಟಿಕ್ಕುತ್ತವೆ. ಇಲ್ಲಿಂದ ಮುಂದೆ ಗುಡ್ಡದ ತುದಿ ಇದೆ. ಇಲ್ಲಿ ಒಂದು ಕಟ್ಟೆ. ಅದರ ನಂತರ ವಿಶಾಲವಾದ ಸಮತಟ್ಟಾದ ಬೆಟ್ಟದ ಬೋಳು ಮೇಲ್ಭಾಗ. ಅಲ್ಲಿಂದ ಮುಂದೆ ಪಶ್ಚಿಮದಲ್ಲಿ ಇಳಿಯುವಾಗ, ಸಂತ ಲಾರೆನ್ಸರ ಇಗರ್ಜಿ ಇದೆ. ಈ ವಿಶಾಲವಾದ ಜಾಗದಲ್ಲಿ ಹಿಂದೆ ಅನೇಕ ಕಾಡು ಪ್ರಾಣಿಗಳೂ ಇದ್ದವು. ಈ ಜಾಗದಲ್ಲೇ ಜರ್ಮನ್ ಮಿಶನರಿಗಳ ಬಂಗ್ಲೆ ಇದೆ.ಈ ಗುಡ್ಡದ ಮೇಲೆ ತುಳುವರ ಅನೇಕ ದೈವ ಸ್ಥಾನಗಳು ಇದ್ದ ಬಗ್ಗೆ ಕಾರ್ಕಳದ ಏಳು ನಾಡು ಹೆಗ್ಗಡೆಯ ಇತಿಹಾಸದಲ್ಲಿ ಉಲ್ಲೇಖವಿದೆ. ಇಲ್ಲಿರುವ ಗುಹೆಯು ನಾಥ ಪರಂಪರೆಯ ಜೋಗಿಗಳಿಗೆ ಸಂಬಂಧಿಸಿದ್ದಾಗಿದ್ದು ಇವರು ಆರಾಧಿಸಿದ ಹಲವಾರು ಶಿವ ಕ್ಷೇತ್ರಗಳು ಈ ಬೆಟ್ಟದ ತಪ್ಪಲಿನಲ್ಲಿವೆ. ಇದರ ಪೂರ್ವಭಾಗದಲ್ಲಿ 1213 ಇಸವಿಯಲ್ಲಿ ಕಟ್ಟಲಾದ ಕೃಷ್ಣ ದೇಗುಲವಿದ್ದು ಅದು ಈಗ ಜೀರ್ಣವಸ್ಥೆಗೆ ಜಾರಿದೆ. ಈ ದೇವಾಲಯದಿಂದಾಗಿ ಈ ಪ್ರದೇಶಕ್ಕೆ ಕೃಷ್ಣಗಿರಿ ಎಂಬ ಹೆಸರು ಬಂದಿದೆ. ಈ ಬೆಟ್ಟದಲ್ಲಿ ವ್ಯಾಪಾಕವಾಗಿ ಮುಳಿ ಹುಲ್ಲು ಬೆಳೆಯುತ್ತಿದ್ದ ಹಿನ್ನೆಲೆಯಲ್ಲಿ ದೂರ ದೂರದ ಜನರು ಇಲ್ಲಿಗೆ ಬಂದು ಮುಳಿಹುಲ್ಲು ಕೊಂಡು ಹೋಗುತ್ತಿದ್ದರು.
ಕಲರ್ ಥೆರಪಿ ಎಂದರೆ ಬಣ್ಣಗಳನ್ನು ಬಳಸಿ ಚಿಕಿತ್ಸೆ ನೀಡುವ ಒಂದು ವಿಧಾನ. ಇದನ್ನು ಕ್ರೋಮೋಥೆರಪಿ ಎಂದೂ ಕರೆಯುತ್ತಾರೆ. ಇದು ಬಣ್ಣಗಳ ಶಕ್ತಿಯನ್ನು ಬಳಸಿಕೊಂಡು ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಬಣ್ಣಗಳು ವಿಭಿನ್ನ ಆವರ್ತನಗಳನ್ನು ಹೊಂದಿರುತ್ತವೆ ಮತ್ತು ಅವು ವ್ಯಕ್ತಿಯ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ ಎಂದು ಹೇಳಲಾಗುತ್ತದೆ.
ಕಲರ್ ಥೆರಪಿಯಲ್ಲಿ, ಬಣ್ಣಗಳನ್ನು ದೃಷ್ಟಿಯ ಮೂಲಕ ಅಥವಾ ಚರ್ಮದ ಮೇಲೆ ನೇರವಾಗಿ ಅನ್ವಯಿಸುವ ಮೂಲಕ ಬಳಸಲಾಗುತ್ತದೆ. ಬೆಚ್ಚಗಿನ ಬಣ್ಣಗಳನ್ನು ಉತ್ತೇಜಕ ಪರಿಣಾಮಗಳಿಗೆ ಮತ್ತು ತಂಪಾದ ಬಣ್ಣಗಳನ್ನು ಶಾಂತಗೊಳಿಸುವ ಪರಿಣಾಮಗಳಿಗೆ ಬಳಸಲಾಗುತ್ತದೆ ಎಂದು ನಂಬಲಾಗಿದೆ. ಉದಾಹರಣೆಗೆ, ಕೆಂಪು ಬಣ್ಣವು ಶಕ್ತಿಯನ್ನು ನೀಡುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ನೀಲಿ ಬಣ್ಣವು ಶಾಂತಗೊಳಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಕಲರ್ ಥೆರಪಿಯು ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಿರದೆ, ಪೂರಕ ಚಿಕಿತ್ಸೆಯಾಗಿ ಬಳಸಬಹುದು. ಇದನ್ನು ಮನಸ್ಥಿತಿ ಸುಧಾರಿಸಲು, ಒತ್ತಡ ಕಡಿಮೆ ಮಾಡಲು ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸಲು ಬಳಸಬಹುದು.
ಕಲರ್ ಥೆರಪಿಯ ಕೆಲವು ಉಪಯೋಗಗಳು:
ಮಾನಸಿಕ ಆರೋಗ್ಯ:
ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ದೈಹಿಕ ಆರೋಗ್ಯ:
ನೋವು ಕಡಿಮೆ ಮಾಡಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಗುಣಪಡಿಸುವಿಕೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
ಭಾವನಾತ್ಮಕ ಸಮತೋಲನ:
ಭಾವನೆಗಳನ್ನು ನಿಯಂತ್ರಿಸಲು ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಶಕ್ತಿಯ ಮಟ್ಟ:
ಶಕ್ತಿಯನ್ನು ಹೆಚ್ಚಿಸಲು ಮತ್ತು ದಣಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಣ್ಣಗಳನ್ನು ಬಳಸುವಾಗ, ಅವುಗಳ ಗುಣಲಕ್ಷಣಗಳು ಮತ್ತು ಅವುಗಳ ಮೇಲೆ ವ್ಯಕ್ತಿಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ತಿಳಿದಿರುವುದು ಮುಖ್ಯ. ಕಲರ್ ಥೆರಪಿಯು ವೈಯಕ್ತಿಕ ಅನುಭವವಾಗಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಬಣ್ಣಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸಬಹುದು.
ನೀವು ಕಲರ್ ಥೆರಪಿಯನ್ನು ಪ್ರಯತ್ನಿಸಲು ಬಯಸಿದರೆ, ನೀವು ವೃತ್ತಿಪರ ಕಲರ್ ಥೆರಪಿಸ್ಟ್ನಿಂದ ಮಾರ್ಗದರ್ಶನ ಪಡೆಯುವುದು ಒಳ್ಳೆಯದು.
ಸಂಪರ್ಕಿಸಿರಿ:ವಿನ್ಯಾಸ ಯೋಗ ಟ್ರಸ್ಟ ಮತ್ತು ಫಿಸಿಯೋಥೆರಪಿ ಸೆಂಟರ್
9741881680













