ಲಾಭಾಂಶ 103 ಶೇಕಡಾ ಏರಿಕೆ, 55.70ಲಕ್ಷ ರೂಪಾಯಿ ಲಾಭಗಳಿಕೆ,
ಆಶಯ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಾಧನೆ

ಕಾರ್ಕಳ : ಆಶಯ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಾರ್ಪೋರೇಟ್ ಕಛೇರಿಯಲ್ಲಿ ಸಂಸ್ಥೆಯ ನಿರ್ದೇಶಕ ಮಂಡಳಿಯ ಸಭೆಯು ಸಹಕಾರಿಯ ಅಧ್ಯಕ್ಷ ನ್ಯಾಯವಾದಿ ಎಂ. ಕೆ. ಸುವೃತ್ ಕುಮಾರ್ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಇದೇ ಸಂದರ್ಭದಲ್ಲಿ 2024-2025ನೇ ಸಾಲಿನ ಸಂಸ್ಥೆಯ ಆರ್ಥಿಕ ಪ್ರಗತಿಯನ್ನು ಪರಿಶೀಲಿಸಿ ಸಂಸ್ಥೆಯ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.
ಸಾಧನೆಯ ಮುಖ್ಯಾಂಶಗಳನ್ನು ಪ್ರಸ್ತಾಪಿಸಿ ಆಶಯ ವಿ. ಸೌ. ಸಹಕಾರಿ ಸಂಘವು 2024-2025ನೇ ಆರ್ಥಿಕ ಸಾಲಿನಲ್ಲಿ ರೂ. 55,77,369 ಲಾಭವನ್ನು ಪಡೆದಿರುತ್ತದೆ. ಇದು ಕಳೆದ ಸಾಲಿನ ಲಾಭ ಗಳಿಕೆಯಿಂದ 103% ಏರಿಕೆಯಾಗಿರುತ್ತದೆ.
ಈ ಸಾಧನೆಗಾಗಿ ತಮ್ಮ ಸಂಸ್ಥೆಯ 1600ಕ್ಕೂ ಮಿಕ್ಕಿದ ಸದಸ್ಯರು, ಆಡಳಿತ ಮಂಡಳಿಯ ನಿರ್ದೇಶಕರು, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ, ಠೇವಣಿದಾರರಿಗೆ, ಸಾಲವನ್ನು ಪಡೆದು ಕ್ಲಪ್ತ ಸಮಯದಲ್ಲಿ ಮರುಪಾವತಿಸಿದ ಸಾಲಗಾರ ಸದಸ್ಯರಿಗೆ ಹಾಗೂ ಸಂಸ್ಥೆಯ ಅಭಿಮಾನಿ ಹಿತೈಷಿಗಳಿಗೆ ಈ ಸಂದರ್ಭದಲ್ಲಿ ಅಭಿನಂದಿಸಿದರು.
ಆಶಯ ವಿ. ಸೌ. ಸಹಕಾರಿಯು 2024-25ನೇ ಆರ್ಥಿಕ ಸಾಲಿನಲ್ಲಿ ತನ್ನ ದುಡಿಮೆ ಬಂಡವಾಳದಲ್ಲಿ 19% ಏರಿಕೆ, ಠೇವಣಿಯಲ್ಲಿ 18% ಏರಿಕೆ ಸಾಲ ವ್ಯವಹಾರದಲ್ಲಿ 23% ಏರಿಕೆಯನ್ನು ಸಾಧಿಸಿರುತ್ತದೆ.
ಸಹಕಾರಿಯ ಕಾರ್ಕಳ ಶಾಖೆಯು 100% ಸಾಲ ಮರುಪಾವತಿಯ ಸಾಧನೆಯನ್ನು ಮಾಡಿರುತ್ತದೆ. ಹಾಗೆಯೇ ಸಹಕಾರಿಯ ಅನುತ್ಪಾದನ ವೆಚ್ಚವು ದುಡಿಮೆ ಬಂಡವಾಳದ ಕೇವಲ ಶೇಕಡಾ 0.55% ಹಾಗೂ ಒಟ್ಟು ಸಾಲದ ಕೇವಲ 0.88% ಆಗಿರುತ್ತದೆ. ಮೇಲಿನ ಅಂಕಿ ಅಂಶಗಳು ಸಹಕಾರಿಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿರುವ ಅಪೂರ್ವ ಸಾಧನೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಸಹಕಾರಿಯ ಉತ್ತಮ ಆರ್ಥಿಕ ಶಿಸ್ತು ಹಾಗೂ ತನ್ನ ಕ್ಷೇತ್ರದಲ್ಲಿ ಉನ್ನತಿಯನ್ನು ಸಾಧಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅಧ್ಯಕ್ಷ ಎಂ.ಕೆ ಸುವೃತ್ ಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ತನ್ನ ಶಾಖೆಯನ್ನು ಮತ್ತು ಕೇಂದ್ರ ಕಛೇರಿಯನ್ನು ಹಾಗೂ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶಾಖೆ ಹಾಗೂ ತನ್ನ ಕಾರ್ಪೋರೇಟ್ ಕಛೇರಿಯನ್ನು ಹೊಂದಿರುವ ಆಶಯ ವಿ. ಸೌ. ಸಹಕಾರಿಯು ಕಳೆದ ಹತ್ತು ವರ್ಷಗಳಿಂದ ತನ್ನ ಸದಸ್ಯರಿಗೆ ಉತ್ತಮ ಬ್ಯಾಂಕಿAಗ್ ಸೇವೆಯನ್ನು ನೀಡುವುದರ ಜೊತೆಗೆ 2024-25ನೇ ಸಾಲಿನಲ್ಲಿ 6232 ಇ- ಸ್ಟಾಂಪಿAಗ್ ಸೇವೆಯನ್ನು ಹಾಗೂ ವಿಶಿಷ್ಟ ಆಕ್ಸಿಜನ್ ಬ್ಯಾಂಕ್ ಸೇವೆಯ ಮೂಲಕ ಸುಮಾರು 460ಕ್ಕೂ ಮಿಕ್ಕಿ ಸದಸ್ಯರಿಗೆ ನಾಮ ಮಾತ್ರ ಬಾಡಿಗೆ ದರದಲ್ಲಿ ಆಕ್ಸಿಜನ್ ಕಾನ್ಸನ್ಟೆಟರನ್ನು ಒದಗಿಸಿರುತ್ತದೆ.
ಆಶಯ ವಿ.ಸೌ. ಸಹಕಾರಿಯು ಶೇಕಡಾ 10ರ ಬಡ್ಡಿದರದಲ್ಲಿ 37 ತಿಂಗಳ ಠೇವಣಿಯ ವಿಶೇಷ ಯೋಜನೆಯನ್ನು ಹೊಂದಿದೆ.ಸAಘ ಸಂಸ್ಥೆಗಳಿಗೆ, ಹಿರಿಯ ನಾಗರಿಕರಿಗೆ, ವಿಧವೆಯರಿಗೆ ಹಾಗೂ ವಿಶೇಷ ಚೇತನರಿಗೆ 0.5% ಹೆಚ್ಚುವರಿ ಬಡ್ಡಿದರವನ್ನು ಕೆಲವುಠೇವಣಿ ಯೋಜನೆಗಳ ಮೇಲೆ ನೀಡುತ್ತದೆ ಎಂಬ ವಿವರಗಳನ್ನು ನೀಡಿದರು.
ಸಹಕಾರಿಯು 2024-25ನೇ ಸಾಲಿನಲ್ಲಿ ಕಾರ್ಕಳದ ಹೃದಯ ಭಾಗದಲ್ಲಿರುವ ‘ಪ್ರೈಮ್ ಸಿಟಿ ಸೆಂಟರ್’ ಎಂಬ ನೂತನ ಮಳಿಗೆಯಲ್ಲಿ ಖರೀದಿಸಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದು, ಅಲ್ಲಿನ ವಿಶಾಲವಾದ ಹವಾನಿಯಂತ್ರಿತ ನವೀನ ಒಳವಿನ್ಯಾಸವನ್ನು ಹೊಂದಿರುವ ಸುಸಜ್ಜಿತ ಸ್ಥಳದಲ್ಲಿ ತನ್ನ ಸದಸ್ಯರಿಗೆ ಇನ್ನಷ್ಟು ಉತ್ತಮ ಸೇವೆ ಹಾಗೂ ಆಧುನಿಕ ಬ್ಯಾಂಕಿಂಗ್ನ ಎಲ್ಲಾ ಸೇವೆಗಳನ್ನು ಒದಗಿಸಲಿದೆ ಎಂದು ತಿಳಿಸಿದರು.
ಆಡಳಿತ ಮಂಡಳಿ ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ರಾಬರ್ಟ್ ರೊನಾಲ್ಡ್ ಫೆರ್ನಾಂಡಿಸ್, ನಿರ್ದೇಶಕರಾದ ಎ. ಮೋಹನ್ ಪಡಿವಾಳ್, ಪ್ರಭಾತ್ ಎನ್, ಎಸ್. ಪಾರ್ಶ್ವನಾಥ್ ವರ್ಮ, ಲಾಜರಸ್ ಡಿ ಕೋಸ್ಟಾ, ಪ್ರಕಾಶ್ ರಾವ್, ಹೆನ್ಸಿಲ್ ರೀನಾ ಡಿಸೋಜ, ಚಂದ್ರರಾಜ್ ಹೆಗ್ಡೆ, ವಿಜಯಕುಮಾರ್ ಕಡ್ತಲ, ಕಾರ್ಕಳ ಶಾಖಾ ಮುಖ್ಯಸ್ಥ ರಾಜರಾಮ್ ಹೆಗ್ಡೆ ಮತ್ತು ಮೂಡುಬಿದ್ರೆ ಶಾಖಾ ಮುಖ್ಯಸ್ಥ ಅನಿಲ್ ಕುಮಾರ್,ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಶೇಖರ್ ರಾವ್ ಉಪಸ್ಥಿತರಿದ್ದರು.





































