ರೌಡಿಶೀಟರ್ ನೌಫಲ್ ಬಜಾಲ್ ಯಾನೆ ತುಕ್ಕ ನೌಫಲ್ ಮರ್ಡರ್

ಉಪ್ಪಳ: ಮಂಗಳೂರು ಮೂಲದ ರೌಡಿಶೀಟರ್ ಕೊಲೆ ಆರೋಪಿ ನೌಫಲ್ ಬಜಾಲ್ ಯಾನೆ ತುಕ್ಕ ನೌಫಲ್(45) ಎಂಬಾತನನ್ನು ಕಾಸರಗೋಡು ಉಪ್ಪಳದಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉಪ್ಪಳ ರೈಲು ಗೇಟಿನ ಬಳಿ ಶನಿವಾರ ಬೆಳಿಗ್ಗೆ ಮೃತದೇಹವೊಂದು ಪತ್ತೆಯಾಗಿದೆ. ಮೃತ ವ್ಯಕ್ತಿ ಮಂಗಳೂರು ಬಜಾಲ್ ನಿವಾಸಿ ನೌಫಲ್ ಆಗಿದ್ದು, ಮೂರು ಕೊಲೆ ಪ್ರಕರಣಗಳ ಆರೋಪಿಯಾಗಿದ್ದಾನೆ ಎಂದು ಪೊಲೀಸರು ದೃಢೀಕರಿಸಿದ್ದಾರೆ.
ಕೊಲೆ ಪ್ರಕರಣದ ಆರೋಪಿಯಾದುದರಿಂದ ಇದು ಕೊಲೆ ಅಲ್ಲ ಎನ್ನಲಾಗದೆಂದೂ ಪೊಲೀಸರು ಶಂಕಿಸಿದ್ದಾರೆ. ಮಂಜೇಶ್ವರ ಪೋಲೀಸ್ ಇನ್ಸ್ ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.









